ಶನಿವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತ್ತಿದ್ದ ವೇಳೆ ನಡೆದ ಕಿಡ್ನಾಪ್, ಹಲ್ಲೆ ಪ್ರಕರಣ ಕುರಿತಂತೆ ದುನಿಯಾ ವಿಜಿ ಅಂಡ್ ಗ್ಯಾಂಗ್ ಜೈಲು ಸೇರಿದೆ.
ವಿಜಿಗೆ ಸಂಕಷ್ಟ – ಎರಡನೇ ಹೆಂಡತಿಯ ಮೇಲೆ ಕೇಸು ಜಡಿದ ಮೊದಲ ಹೆಂಡ್ತಿ
ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ದುನಿಯಾ ವಿಜಯ್ ಗ್ಯಾಂಗ್, ಮಾರುತಿಗೌಡನ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಹಾಕಿಕೊಂಡು ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಯಾರಿವನು ಪಾನಿಪೂರಿ ಕಿಟ್ಟಿ – ಬಾಡಿ ಬಿಲ್ಡರ್ ಗ್ಯಾಕೆ ಈ ಹೆಸರು…..
ಈ ನಡುವೆ ಶನಿವಾರ ಇಡೀ ದಿನ ವಿಚಾರಣೆ ನಡೆಸಿದ ಎಸಿಪಿ ರವಿಶಂಕರ್ ದುನಿಯಾ ವಿಜಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿನಗೂ,ರೌಡಿಗಳಿಗೂ ಏನು ವ್ಯತ್ಯಾಸ. ನಿನ್ನ ಮೇಲೆ ಪದೇ ಪದೇ ಪ್ರಕರಣಗಳು ದಾಖಲಾಗುತ್ತಿವೆ.ನಿನ್ನ ಈ ವರ್ತನೆಯಿಂದಾಗಿ ಪ್ರಕರಣಗಳು ದಾಖಲಾಗುತ್ತಿವೆ. ಹಳೇ ಪ್ರಕರಣಗಳು ಇನ್ನೂ ಇತ್ಯರ್ಥವಾಗಿಲ್ಲ, ಆಗಲೇ ನಿನ್ನ ವರಸೆ ಶುರು ಮಾಡಿದ್ದೀಯಾ ಎಂದು ಪ್ರಶ್ನಿಸಿದ್ದಾರಂತೆ.
ಒಂದು ಕಾಲದ ದುಷ್ಮನ್…ಮತ್ತೆ ಗೆಳೆಯ..ಈಗ ಮತ್ತೆ ದುಷ್ಮನ್ ಇದು ವಿಜಿ – ಪಾನಿಪೂರಿ ಕಿಟ್ಟಿ ನಡುವಿನ ಸ್ಟೋರಿ
Discussion about this post