ಅಸ್ಸಾಂನಲ್ಲಿ ಇತ್ತೀಚೆಗೆ ಶಿಕ್ಷಕರ ಆಯ್ಕೆ ಸಲುವಾಗಿ ಪರೀಕ್ಷೆ ನಡೆದಿತ್ತು. ಈ ಸಂದರ್ಭದಲ್ಲಿ ಕೆಲ ತಾಯಂದಿರು ತಮ್ಮ ಪುಟ್ಟ ಪುಟ್ಟ ಮಕ್ಕಳೊಂದಿಗೆ ಹಾಜರಾಗಿದ್ದರು. ಈ ವೇಳೆ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ ಪರೀಕ್ಷಾ ಕೇಂದ್ರದಲ್ಲಿ ಇರಲಿಲ್ಲ.
ಆ ಸಂದರ್ಭದಲ್ಲಿ ಸಹಾಯಕ್ಕೆ ಬಂದಿತ್ತು ಪರೀಕ್ಷಾ ಕೇಂದ್ರದ ಭದ್ರತೆ ಸಲುವಾಗಿ ಬಂದಿದ್ದ ಮಹಿಳಾ ಪೊಲೀಸ್ ಪೇದೆಗಳು. ಮಹಿಳಾ ಪೊಲೀಸರ ಕೈಗೆ ಮಕ್ಕಳನ್ನು ಕೊಟ್ಟ ತಾಯಂದಿರು ಪರೀಕ್ಷಾ ಕೇಂದ್ರದ ಒಳಗೆ ಹೋಗಿದ್ದರು.
ಇತ್ತ ಮಕ್ಕಳು ಪೊಲೀಸರ ಕೈಯಲ್ಲಿ ಆಟವಾಡಿಕೊಂಡಿತ್ತು. ಇದೀಗ ಈ ಪೋಟೋಗಳು ವೈರಲ್ ಆಗಿದ್ದು, ಪೊಲೀಸರ ಕಾರ್ಯಕ್ಕೆ ಭೇಷ್ ಅನ್ನುತ್ತಿದ್ದಾರೆ ನೆಟ್ಟಿಗರು.
Discussion about this post