ಪರಾರಿಗೂ ಮುನ್ನ ತಿರುಪತಿಯಲ್ಲಿ ಮುಡಿ ಕೊಟ್ಟಿದ್ದ ವಿಪಿನ್
ಇಬ್ಬರು ಮಕ್ಕಳನ್ನು ಬಿಟ್ಟು ನಾಪತ್ತೆಯಾಗಿದ್ದ ಟೆಕ್ಕಿ ವಿಪಿನ್ ಗುಪ್ತಾ (34) ಅವರನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಉತ್ತರ ಪ್ರದೇಶದ ನೋಯ್ಡಾದಲ್ಲಿ ಪತ್ತೆ ಹಚ್ಚಿ ಬೆಂಗಳೂರಿಗೆ ಕರೆ ತಂದಿದ್ದಾರೆ.
ನಗರಕ್ಕೆ ಕರೆ ತಂದ ಪೊಲೀಸರು ವಿಪಿನ್ ನನ್ನು ಪತ್ನಿಯ ಜೊತೆ ಸೇರಿಸೋಣ ಅಂದ್ರೆ ಆತನ ಹೊಸ ವರಸೆ ಪ್ರಾರಂಭಿಸಿದ್ದಾನೆ, ಇದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ನನಗೆ ಪತ್ನಿ ಜೊತೆ ಸಂಸಾರ ಮಾಡಲು ಸಾಧ್ಯವಿಲ್ಲ. ನಾನು ಮನೆಗೆ ಹೋಗೋದಿಲ್ಲ. ಬೇಕಿದ್ರೆ ಜೈಲಿಗೆ ಕಳುಹಿಸಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾನೆ ಎಂದೆಲ್ಲಾ ಸುದ್ದಿಯಾಗಿತ್ತು.
ನಾನು ಸ್ವಇಚ್ಛೆಯಿಂದ ಮನೆ ಬಿಟ್ಟು ಹೋಗಿದ್ದೇನೆ. ಪತ್ನಿ ಶ್ರೀಪರ್ಣಾ 2ನೇ ಮದುವೆಯಾಗಿದ್ದು, ಮಾನಸಿಕ ಹಿಂಸೆ ನೀಡುತ್ತಿದ್ದಾಳೆ. ಮಾನಸಿಕವಾಗಿ ನಾನು ಸಾಕಷ್ಟು ನೊಂದಿದ್ದೇನೆ. ಆಕೆಯ ಜೊತೆ ಸಂಸಾರ ಮಾಡೋದಿಲ್ಲ, ದಯವಿಟ್ಟು ನನ್ನ ಜೈಲಿಗೆ ಕಳುಹಿಸಿ ಎಂದು ಪೊಲೀಸರ ಮುಂದೆ ವಿಪಿನ್ ಅಂಗಲಾಚಿದ್ದಾನೆ. “ಪತ್ನಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು, ನನ್ನನ್ನು ನಿಯಂತ್ರಿಸಲೆಂದೇ ಮನೆಗೆ ಸಿಸಿಟಿವಿ ಕ್ಯಾಮರಾ ಹಾಕಿಸಿದ್ದಾಳೆ. ಆಕೆಯ ಕಾಟದಿಂದ ನೊಂದು ಮನೆ ಬಿಟ್ಟು ಬಂದೆ” ಎಂದು ವಿಪಿನ್ ಹೇಳಿರುವುದಾಗಿ ಪೊಲೀಸರ ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿತ್ತು.
ಆದರೆ ಇದೀಗ ಅವೆಲ್ಲವೂ ಸುಳ್ಳು ಎಂದು ಗೊತ್ತಾಗಿದೆ. ಶ್ರೀಪರ್ಣಾ ಮತ್ತು ವಿಪಿನ್ ಸಂಸಾರದಲ್ಲಿ ಅಂತಹ ಯಾವುದೇ ಗಲಾಟೆಗಳಿಲ್ಲ. ಅವರದ್ದು ಸುಂದರ ಸಂಸಾರ. ಮಾಧ್ಯಮಗಳು ಸೃಷ್ಟಿಸಿದ ವರದಿಯಿಂದ ಅವರ ಸಂಸಾರದ ನೆಮ್ಮದಿ ಹಾಳಾಗಿದೆ ಅನ್ನೋದು ಸ್ಪಷ್ಟವಾಗಿದೆ. ಹಾಗೇ ನೋಡಿದ್ರೆ ಶ್ರೀಪರ್ಣಾ ನಿಜಕ್ಕೂ ಧೈರ್ಯವಂತ ಹೆಣ್ಣುಮಗಳು.
ಮಾಧ್ಯಮಗಳಲ್ಲಿ ಪ್ರಸಾರಗೊಂಡ ಪ್ರತಿಯೊಂದು ಉಹಾಪೋಹದ ವರದಿಗೂ ಶ್ರೀಪರ್ಣ ಸ್ಪಷ್ಟನೆ ಕೊಟ್ಟಿದ್ದಾರೆ. ಮಾಧ್ಯಮಗಳು ಪ್ರಸಾರ ಮಾಡಿದ ಒಂದೊಂದು ಸಾಲಿಗೂ ಉತ್ತರ ಕೊಟ್ಟಿದ್ದಾರೆ.
ವಿಪಿನ್ ಹೇಳಿದ್ದಾರೆ ಅನ್ನಲಾದ ಎಲ್ಲಾ ಹೇಳಿಕೆಗಳನ್ನು ಪತ್ನಿ ಶ್ರೀಪರ್ಣಾ ತಿರಸ್ಕರಿಸಿದ್ದು, ನಮ್ಮ ಸಂಸಾರದಲ್ಲಿ ಯಾವುದೇ ಗೊಂದಲಗಳಿಲ್ಲ, ನಮ್ಮಬ್ಬರ ನಡುವೆ ಯಾವುದೇ ಗಲಾಟೆಗಳೂ ನಡೆದಿಲ್ಲ. ನಾನು ಕೂಡಾ ವರ್ಕಿಂಗ್ ವುಮೆನ್ ಆಗಿದ್ದು, ಪ್ರಸ್ತುತ ಹೆರಿಗೆ ರಜೆಯಲ್ಲಿದ್ದೇನೆ. ಶೀಘ್ರದಲ್ಲೇ ಕಚೇರಿಗೂ ವರದಿ ಮಾಡಿಕೊಳ್ಳುವ ಕಾರಣ, ನನ್ನ ಮಕ್ಕಳನ್ನು ನೋಡಿಕೊಳ್ಳಲು ಸಹಾಯಕರನ್ನು ನೇಮಿಸಿಕೊಂಡಿದ್ದೇನೆ. ಹೀಗಾಗಿ ಸೇಫ್ಟಿಗೆ ಅಂತಾ ಕ್ಯಾಮಾರ ಹಾಕಿಸಿರೋದಾಗಿ ಶ್ರೀಪರ್ಣಾ ಹೇಳಿದ್ದಾರೆ.
ಜೊತೆಗೆ ಮನೆಗೆ ಹೋಗಲಾರೆ, ಪತ್ನಿಯೊಂದಿಗೆ ಇರಲಾರೆ ಎಂದು ವಿಪಿನ್ ಹೇಳಿಲ್ಲ, ಅವರು ತಮ್ಮ ಕುಟುಂಬ ಸದಸ್ಯರನ್ನು ಗುರುತಿಸಲಾಗದ ಸ್ಥಿತಿಯಲ್ಲಿದ್ದಾರೆ. ಮಾನಸಿಕವಾಗಿ ಆತಂಕದಲ್ಲಿದ್ದಾರೆ. ಅವರಗೆ ಭಯವೊಂದು ಕಾಡುತ್ತಿದೆ ಎಂದು ಶ್ರೀಪರ್ಣಾ ಫೇಸ್ ಬುಕ್ ಲೈವ್ ನಲ್ಲಿ ಹೇಳಿದ್ದಾರೆ.
ಹಿಂದೊಮ್ಮೆ ವಿಪಿನ್ ಅವರಿಗೆ ಬೈಕ್ ಅಪಘಾತವಾಗಿತ್ತು, ಈ ವೇಲೆ ಅವರಿಗೆ ಶಾರ್ಟ್ ಮೆಮೋರಿ ಲಾಸ್ ಕೂಡಾ ಆಗಿತ್ತು, ಬಳಿಕ ಅವರು ಅದರಿಂದ ಚೇತರಿಸಿಕೊಂಡಿದ್ದರು ಎಂದು ಶ್ರೀಪರ್ಣಾ ತಿಳಿಸಿದ್ದಾರೆ. ಜೊತೆಗೆ ಇದೇ ಲೈವ್ ನಲ್ಲಿ ಮಾತನಾಡಿರುವ ವಿಪಿನ್ ತನ್ನದು ಅನ್ನಲಾದ ಹೇಳಿಕೆ ಬಗ್ಗೆಯೂ ಸ್ಪಷ್ಟನೆ ಕೊಟ್ಟಿದ್ದಾರೆ.
ಇನ್ನು ವಿಪಿನ್ ಓಡಿ ಹೋಗೋದು ಇದು ಮೊದಲೇನಲ್ಲ, 8 ತಿಂಗಳ ಹಿಂದೆ ಹೀಗೆ ಫೋನ್ ಸ್ವಿಚ್ ಆಪ್ ಮಾಡಿ ಗೋವಾಗೆ ವಿಪಿನ್ ತೆರಳಿದ್ದರು. ಪತ್ನಿ ಕೊಟ್ಟ ದೂರಿನಂತೆ ಕೊಡಿಗೆಹಳ್ಳಿ ಪೊಲೀಸರು ವಿಪಿನ್ ನನ್ನು ಪತ್ತೆ ಮಾಡಿ ಕರೆ ತಂದಿದ್ದರು.
ಮಾನ್ಯತಾ ಟೆಕ್ ಪಾರ್ಕ್ನಲ್ಲಿರುವ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ವಿಪಿನ್ ಗುಪ್ತಾ, ಕೊಡಿಗೇಹಳ್ಳಿಯ ಟಾಟಾನಗರದಲ್ಲಿ ಪತ್ನಿಯೊಂದಿಗೆ ವಾಸವಿದ್ದರು. ಆಗಸ್ಟ್ 4ರಂದು ಮಧ್ಯಾಹ್ನ ಮನೆಯಿಂದ ಹೋಗಿದ್ದ ಅವರು ಮರಳಿರಲಿಲ್ಲ. ಏಕಾಂಗಿಯಾಗಿ ಆಗಾಗ ಬೈಕ್ ರೈಡ್ ಹೋಗುವ ಹವ್ಯಾಸ ಹೊಂದಿದ್ದರಿಂದ ಮನೆಗೆ ಬರಬಹುದು ಎಂದು ಪತ್ನಿ ಕಾದಿದ್ದರು. ಆದರೆ ಫೋನ್ ಸಹ ಸ್ವಿಚ್ ಆಫ್ ಆಗಿದ್ದರಿಂದ ಆತಂಕಗೊಂಡು ಕೊಡಿಗೇಹಳ್ಳಿ ಠಾಣೆಗೆ ದೂರು ನೀಡಿದ್ದರು. ಪತಿಯನ್ನು ಹುಡುಕಿಕೊಡಿ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲೂ ವಿಡಿಯೋ ಮೂಲಕ ಪೊಲೀಸರಿಗೆ ಮನವಿ ಮಾಡಿದ್ದರು.
FIND VIPIN, SAFE VIPIN – FIR 0302/2024 pic.twitter.com/8RhMuG1QFo
— Sreeparna Dutta (@SreeparnaD79278) August 13, 2024