ನವದೆಹಲಿ : ದೇಶದಲ್ಲಿ ದಿನೇ ದಿನೇ ಏರುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಕೊರೋನಾ ಸೋಮಕಿನ ಎರಡನೇ ಅಲೆಯನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ದೇಶದ ಎಲ್ಲಾ ಸಿಎಂಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿವಿಧ ರಾಜ್ಯಗಳ ಪರಿಸ್ಥಿತಿಯನ್ನುಅವಲೋಕಿಸಿದರು. ಬಳಿದ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಹಲವು ವಿಷಯಗಳ ಕುರಿತಂತೆ ಬೆಳಕು ಚೆಲ್ಲಿದ್ದರೆ.
ಕೊರೋನಾ ಸೋಂಕಿನ ಎರಡನೆ ಅಲೆಯ ಕಾರಣದಿಂದ ಹಲವು ರಾಜ್ಯಗಳ ಸ್ಥಿತಿ ಚಿಂತಾಜನಕವಾಗಿದೆ. ದೇಶ ಕೊರೋನಾ ಸೋಂಕಿನ ಒಂದನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಿತು. ಆದರೆ ಎರಡನೇ ಅಲೆ ಮೊದಲ ಅಲೆಗಿಂತ ವೇಗವಾಗಿದೆ. ಕೆಲವು ರಾಜ್ಯಗಳಲ್ಲಿ ಎರಡನೆ ಅಲೆ ಭೀಕರವಾಗಿದೆ.

ಪೂರ್ತಿ ಒಂದು ವರ್ಷ ಕೊರೋನಾ ವಿರುದ್ಧ ಹೋರಾಡಿದ್ದೇವೆ. ಈಗ ಮತ್ತೆ ಬಿಗಿ ಕ್ರಮ ಕೈಗೊಳ್ಳುವುದು ತುಂಬಾ ಕಷ್ಟ ಎಂದು ಪ್ರಸ್ತುತ ಪರಿಸ್ಥಿತಿಯನ್ನು ದೇಶದ ಜನತೆಗೆ ಮೋದಿ ವಿವರಿಸಿದ್ದಾರೆ.
ಕೊರೋನಾ ಮುನ್ನೆಚ್ಚರಿಕೆ ನಿಟ್ಟಿನಲ್ಲಿ ಜನ ಕಾಳಜಿ ವಹಿಸುವುದನ್ನು ಕಡಿಮೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಪ್ರಧಾನಿ, ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸಬೇಕಾಗಿದೆ ಎಂದು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.

ಇದೇ ವೇಳೆ ರಾತ್ರಿ ಕರ್ಫ್ಯೂ ಅನ್ನು ಕೊರೋನಾ ಕರ್ಫ್ಯೂ ಎಂದು ಕರೆಯೋಣ, ಹೀಗೆ ಕರೆದಾಗ ಜನರಿಗೆ ಹೆಚ್ಚು ಜಾಗೃತಿ ಬರುತ್ತದೆ. ಆಗ ಪದೇ ಪದೇ ನಾವು ಯಾವ ಕಾರಣಕ್ಕಾಗಿ ಕರ್ಫ್ಯೂ ಪರಿಸ್ಥಿತಿ ಎದುರಿಸಬೇಕಾಯ್ತು ಅನ್ನುವುದು ಮನವರಿಕೆಯಾಗುತ್ತದೆ. ಕೆಲವರು ಕೊರೋನಾ ರಾತ್ರಿ ಬರುತ್ತಾ ಎಂದು ವ್ಯಂಗ್ಯ ಮಾಡುತ್ತಾರೆ ಆ ಬಗ್ಗೆ ನಾನೇನು ಹೇಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.