ಸಂಚಿತ್ ಹೆಗ್ಡೆ… ಕನ್ನಡ ಸಂಗೀತ ಲೋಕವನ್ನು ಮೋಡಿ ಮಾಡಿದ ಹೆಸರು. ಸರಿಗಮಪ ರಿಯಾಲಿಟಿ ಶೋ ಮೂಲಕ ಕನ್ನಡಿಗರಿಗೆ ಪರಿಚಯವಾದ ಸಂಚಿತ್ ಹೆಗ್ಡೆ ಸರಿಗಮಪ ವೇದಿಕೆಯಿಂದ ಹೊರ ಬಂದ ಬೆನ್ನಲ್ಲೇ ಚಂದನವನವನ್ನು ಸೂಜಿಗಲ್ಲಿನಂತೆ ಸೆಳೆದಿದ್ದರು.
ಇದೀಗ ಸಂಚಿತ್ ಹೆಗ್ದೆ ಹಾಡುಗಾರನ ಸ್ಥಾನದಿಂದ ನಟನ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ತೆಲುಗು ಸಿನಿಮಾವೊಂದರಲ್ಲಿ ಸಂಚಿತ್ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದು ನಟಿ ಶೃತಿ ಹಾಸನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.
ಇದೀಗ ಪಿಟ್ಟ ಕಥಲು ಟೈಟಲ್ ಹೊಂದಿರುವ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಶೃತಿ ಜೊತೆ ಸಂಚಿತ್ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. ಜೊತೆಗೆ ಶೃತಿ ಜೊತೆ ಸಂಚಿತ್ ಲಿಪ್ ಮಾಡಿರುವುದಕ್ಕೆ ಸಾಕ್ಷಿ ಅನ್ನುವಂತೆ ಟೀಸರ್ ನಲ್ಲಿ ಸಣ್ಣದೊಂದು ದೃಶ್ಯವನ್ನು ಸೇರಿಸಲಾಗಿದೆ.

ಹೆಸರಾಂತ ನಟ-ನಟಿಯರನ್ನ ಒಳಗೊಂಡ ಸಿನಿಮಾ ಇದಾಗಿರಲಿದ್ದು, ನಾಲ್ಕು ಕಥೆಗಳಲ್ಲಿ ಸಂಚಿತ್ ಜೊತೆ ಜಗಪತಿ ಬಾಬು, ಶೃತಿ ಹಾಸನ್, ಅಮಲಾ ಪೌಲ್, ಲಕ್ಷ್ಮಿ ಮಂಚು ಅಭಿನಯಿಸಿದ್ದಾರೆ. ಇದೇ ಫೆಬ್ರವರಿ 19ರಂದು ‘ಪಿಟ್ಟ ಕತಲು’ ಸಿನಿಮಾ OTT ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗಲಿದೆ.
Discussion about this post