ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ನಡೆದಿದೆ
ಎನ್ನಲಾದ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐ ತೀವ್ರಗೊಳಿಸಿದೆ.
ಈಗಾಗಲೇ ಫೋನ್ ಕದ್ದಾಲಿಕೆಯಲ್ಲಿ ಪಾಲು ಪಡೆದಿರುವ ಇನ್ಸ್
ಪೆಕ್ಟರ್ ಗಳನ್ನು ವಿಚಾರಣೆಗೆ ಒಳಪಡಿಸಿರುವ ಸಿಬಿಐ ತಂಡ ಹಲವು ಮಹತ್ವದ ದಾಖಲೆಗಳನ್ನು
ವಶಪಡಿಸಿಕೊಂಡಿದೆ.
ಈ ನಡುವೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸ್
ಆಯುಕ್ತರಾಗಿದ್ದ ಅಲೋಕ್ ಕುಮಾರ್ ಪಾತ್ರದ ಬಗ್ಗೆ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ಅವರನ್ನು
ವಿಚಾರಣೆಗೆ ಒಳಪಡಿಸಲು ಸಿಬಿಐ ನಿರ್ಧರಿಸಿದೆ.
ಈ ಸಂಬಂಧ ಇಂದು ಮುಂಜಾನೆ ಅಲೋಕ್ ಕುಮರ್ ನಿವಾಸಕ್ಕೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
20ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ಈ ದಾಳಿಯಲ್ಲಿ
ಪಾಲ್ಗೊಂಡಿರುವುದನ್ನು ನೋಡಿದರೆ ಪ್ರಕರಣ ತುಂಬಾ ಗಂಭೀರವಾಗಿರುವಂತೆ ಕಾಣಿಸುತ್ತಿದೆ.
ಈ ನಡುವೆ ಅವೋಕ್ ಕುಮಾರ್ ನಿವಾಸದಲ್ಲೇ ಫೋನ್ ಟ್ಯಾಪಿಂಗ್ ನಡೆದಿತ್ತು ಅನ್ನುವ ಮಾತುಗಳು ಕೂಡಾ ಕೇಳಿ ಬಂದಿದೆ. ಆದರೆ ಈ ಬಗ್ಗೆ ಸಿಬಿಐ ಏನೂ ಹೇಳಿಲ್ಲ.
ಫೋನ್ ಕದ್ದಾಲಿಕೆ ಪ್ರಕರಣ : ಅಲೋಕ್ ಕುಮಾರ್ ನಿವಾಸಕ್ಕೆ ಸಿಬಿಐ ದಾಳಿ 1
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020190925180240″);
document.getElementById(“div_6020190925180240”).appendChild(scpt);
Discussion about this post