ಬೆಂಗಳೂರು : ಎರಡು ದಿನಗಳ ವಿರಾಮ ನೀಡಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾನುವಾರ ಮತ್ತೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 102.84 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.72 ರೂಪಾಯಿ ಆಗಿದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 99.51 ಮತ್ತು ಡೀಸೆಲ್ ಬೆಲೆ 89.36 ರೂ. ಆಗಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಬೆಲೆ 105.58 ರೂ ಮತ್ತು ಡೀಸೆಲ್ ಬೆಲೆ 96.91 ರೂ. ಆಗಿದೆ.

ದೇಶದ ನಾಲ್ಕು ಮೆಟ್ರೋ ನಗರಗಳ ಪೈಕಿ ಮುಂಬಯಿ ಮತ್ತು ಚೆನ್ನೈ ಈಗಾಗಲೇ ಪೆಟ್ರೋಲ್ ದರದಲ್ಲಿ ಶತಕ ಬಾರಿಸಿದ್ದವು. ಈಗ ದಿಲ್ಲಿ ಮತ್ತು ಕೋಲ್ಕತಾ ಕೂಡ ಸೆಂಚುರಿಯ ಸಮೀಪ ಧಾವಿಸಿದ್ದು, ಇನ್ನು ಒಂದೆರಡು ದಿನ ದರ ಏರಿಕೆಯಾದರೆ ಈ ನಗರಗಳೂ ಕೂಡಾ ಶತಕ ಬಾರಿಸಲಿದೆ.
ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 99.45 ರೂಪಾಯಿಗೆ ಏರಿಕೆಯಾದರೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 100.44 ರೂಪಾಯಿಗೆ ಏರಿಕೆಯಾಗಿದೆ.

ಹೈದರಾಬಾದ್ನಲ್ಲಿ ಪೆಟ್ರೋಲ್ ದರ 97.40 ರೂಪಾಯಿ. ಪಾಟ್ನಾದಲ್ಲಿ ಲೀಟರ್ ಪೆಟ್ರೋಲ್ ದರ 101.62 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.76 ರೂಪಾಯಿಗೆ ಏರಿಕೆಯಾಗಿದೆ.
Discussion about this post