ಶುಕ್ರವಾರ ಯಥಾಸ್ಥಿತಿ ಕಾಪಾಡಿಕೊಂಡಿದ್ದ ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ಜುಲೈ 10ರಂದು ಇಂಧನ ದರವನ್ನು ಪರಿಷ್ಕರಿಸಿದೆ. ಪೆಟ್ರೋಲ್ ದರ ಪ್ರತಿ ಲೀಟರ್ಗೆ 34 ರಿಂದ 43 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ಗೆ 28 ರಿಂದ 36 ಪೈಸೆ ಹೆಚ್ಚಳವಾಗಿದೆ.
ಹೀಗಾಗಿ ಕರ್ನಾಟದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 100ರೂ ದಾಟಿದ್ದು. ಹಲವು ಜಿಲ್ಲಾ ಕೇಂದ್ರಗಳಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಬೆಲೆ 103 ರಿಂದ 105 ರೂ ಆಗಿದೆ.
ಈಗಾಗಲೇ ಜೂನ್ ತಿಂಗಳಲ್ಲೇ 19 ಬಾರಿ ಪೆಟ್ರೋಲ್ ಬೆಲೆ ಏರಿಕೆ ಮಾಡಲಾಗಿದ್ದು. ಜುಲೈ ತಿಂಗಳಿನಲ್ಲೂ ಏರಿಕೆಯಾಗುವ ಲಕ್ಷಣ ಗೋಚರಿಸುತ್ತಿದೆ. ಇನ್ನು ದೇಶದ ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಇಂಧನ ದರ ದುಬಾರಿಯಾಗಿದೆ.ಇಲ್ಲಿ ಲೀಟರ್ ಪೆಟ್ರೋಲ್ಗೆ 106.93 ರೂಪಾಯಿ, ಡೀಸೆಲ್ 97.46 ರೂ ಪ್ರತಿ ಲೀಟರ್ ದರ ದಾಖಲಾಗಿದೆ.
ಇನ್ನು ಬೆಂಗಳೂರಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 104.29 ರೂಪಾಯಿ, ಡೀಸೆಲ್ ದರವು ಪ್ರತಿ ಲೀಟರ್ಗೆ 95.26 ರೂಪಾಯಿಗೆ ಏರಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 106.31ರು ಆಗಿದೆ. ರಾಜ್ಯದಲ್ಲೇ ದುಬಾರಿ ಜಿಲ್ಲೆ ಅಂದ್ರೆ ಉತ್ತರ ಕನ್ನಡವಾಗಿದೆ.
Discussion about this post