ನವದೆಹಲಿ : ಒಂದಿಷ್ಟು ದಿನಗಳ ಕಾಲ ಸ್ಥಿರವಾಗಿದ್ದ ತೈಲ ದರ ಶನಿವಾರ ಮತ್ತೆ ಏರಿಕೆಯಾಗಿದೆ. ಶನಿವಾರ ದೆಹಲಿಯಲ್ಲಿ ಪೆಟ್ರೋಲ್ ದರ 25 ಪೈಸೆ ಹಾಗೂ ಡೀಸೆಲ್ ದರ 30 ಪೈಸೆ ಏರಿಕೆಯಾಗಿದೆ.
ದರ ಏರಿಕೆಯಿಂದ ಬೆಂಗಳೂರಿನಲ್ಲಿ 25 ಪೈಸೆ ಏರಿಕೆಯಾಗಿ ಪೆಟ್ರೋಲ್ ದರ 105.69 ರೂಪಾಯಿಗೆ ತಲುಪಿದೆ. ಡೀಸೆಲ್ ದರ 32 ಪೈಸೆ ಏರಿದ್ದು 96.02 ರೂಪಾಯಿಗೆ ತಟ್ಟಿದೆ.
ಕಳೆದ ಕೆಲವು ದಿನಗಳಿಂದ ಕಚ್ಚಾ ತೈಲವನ್ನು ಪ್ರತಿ ಬ್ಯಾರೆಲ್ ಗೆ 78 ಡಾಲರ್ ನಂತೆ ಭಾರತ ಆಮದು ಮಾಡಿಕೊಂಡಿದೆ. ಒಟ್ಟಾರೆ ಸಪ್ಟಂಬರ್ ತಿಂಗಳಿನಿಂದ ಡೀಸೆಲ್ ದರ 1.85 ರೂಪಾಯಿ ಏರಿದ್ದು, ಪೆಟ್ರೋಲ್ 1 ರೂಪಾಯಿ ಏರಿಕೆಯಾಗಿದೆ.
Discussion about this post