ಪಾಕಿಸ್ತಾನದ ಅಧಿಕಾರಿಯೊಬ್ಬರು ಕುವೈತ್ ಪ್ರತಿನಿಧಿಯ ಪರ್ಸ್ ಕದ್ದು ಸಿಕ್ಕಿ ಬಿದ್ದ ಘಟನೆ ನಡೆದಿದೆ. ಜಂಟಿ ಸಚಿವರ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಕುವೈತ್ ಅಧಿಕಾರಿಗಳ ತಂಡ ಎರಡು ದಿನಗಳ ಪ್ರವಾಸಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿತ್ತು.
ಶನಿವಾರ ನಡೆದ ಆರ್ಥಿಕ ವ್ಯವಹಾರಗಳ ವಿಭಾಗದ ಸಭೆಯಲ್ಲಿ ಆಕಸ್ಮಿಕವಾಗಿ ಕುವೈತ್ ಅಧಿಕಾರಿ ಟೇಬಲ್ ಮೇಲೆ ಪರ್ಸ್ ಮರೆತು ಹೋಗಿದ್ದಾರೆ.
ತಮ್ಮ ಪರ್ಸ್ ಕಳೆದು ಹೋಗಿರುವುದಾಗಿ ಕುವೈತ್ ಅಧಿಕಾರಿ ದೂರು ನೀಡಿದ ಹಿನ್ನೆಲೆಯಲ್ಲಿ ಹಾಲ್ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಪಾಕ್ ಅಧಿಕಾರಿಯೇ ಪರ್ಸ್ ಎಗರಿಸಿರುವುದು ಬೆಳಕಿಗೆ ಬಂದಿದೆ.
ಅದನ್ನು ಪಾಕ್ ತಂಡದಲ್ಲಿದ್ದ ಅಧಿಕಾರಿಯೊಬ್ಬರು ಎಗರಿಸಿರುವುದು ಸಿಸಿ ಕ್ಯಾಮೆರಾದಿಂದ ಗೊತ್ತಾಗುತ್ತಿದ್ದಂತೆ ಅಧಿಕಾರಿಯನ್ನು ಬಂಧಿಸಲಾಗಿದೆ. ಪರ್ಸ್ ಕದ್ದ ಅಧಿಕಾರಿಯನ್ನು ಪಾಕಿಸ್ತಾನದ ಹೂಡಿಕೆ ಮತ್ತು ಸೌಕರ್ಯಗಳ ಜಂಟಿ ಕಾರ್ಯದರ್ಶಿ ಜರ್ದಾರ್ ಹೈದರ್ ಖಾನ್ ಎಂದು ಗುರುತಿಸಲಾಗಿದೆ.
ಇದೀಗ ಅಧಿಕಾರಿ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ. ಈ ನಡುವೆ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪಾಕ್ ಹಣಕಾಸು ಸಚಿವಾಲಯದ ಅಧಿಕಾರಿ, ಇದೊಂದು ತಲೆ ತಗ್ಗಿಸುವ ಘಟನೆ. ಇದರಿಂದ ದೇಶಕ್ಕೆ ಕೆಟ್ಟ ಹೆಸರು. ಹೈದರ್ ಖಾನ್ ಅವರು ಕುವೈತ್ ಅಧಿಕಾರಿಯ ಕ್ಷಮೆ ಕೋರಿ, ಪರ್ಸ್ ಹಿಂತಿರುಗಿಸಿದ್ದಾರೆ ಎಂದಿದ್ದಾರೆ.
Grade 20 GoP officer stealing a Kuwaiti official’s wallet – the official was part of a visiting delegation which had come to meet the PM pic.twitter.com/axODYL3SaZ
— omar r quraishi (@omar_quraishi) September 28, 2018
Discussion about this post