ಒಂದಲ್ಲ ಒಂದು ಕಾರಣಕ್ಕೆ
ಭಾರತದೊಂದಿಗೆ ಕಾಲು ಕೆರೆದು ಜಗಳಕ್ಕೆ ಬರುತ್ತಿರುವ ಪಾಕಿಸ್ತಾನ ಇದೀಗ ಲೆದರ್ ಟ್ಯಾನರಿಗಳ ಕಲುಷಿತ
ನೀರನ್ನು ಹರಿಬಿಟ್ಟಿದೆ.
ಸಟ್ಲೇಜ್ ನದಿಯಿಂದ ಭಾರಿ ಪ್ರಮಾಣದಲ್ಲಿ ಹರಿಬಿಟ್ಟ ಕಾರಣ ಪಂಜಾಬ್ ಗಡಿ ಪ್ರದೇಶದ ಹಲವು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.
ಭಾರತಕ್ಕೆ ಕ್ಯಾನ್ಸರ್ ಕಾರಕ ನೀರು ಹರಿಸಿದ ಪಾಪಿ ಪಾಕಿಸ್ತಾನ....! 1
ಈ ನೀರಿಗೆ ಪಾಕಿಸ್ತಾನದ ಕೌಸರ್
ಜಿಲ್ಲೆಯ ಚರ್ಮೋದ್ಯಮ ಘಟಕಗಳಿಂದ ಕಲುಷಿತ ನೀರು ಸೇರಿಕೊಳ್ಳುತ್ತದೆ. ಹೀಗಾಗಿ ಈ ನೀರಿನಲ್ಲಿ
ಕ್ಯಾನ್ಸರ್ ಕಾರಕ ರೋಗಾಣುಗಳಿರುತ್ತದೆ ಎಂದು ಫಿರೋಜ್ ಫುರದ ಜಿಲ್ಲಾಧಿಕಾರಿ ಚಂದರ್ ಗೈರ್ ಹೇಳಿದ್ದಾರೆ.
ಪಂಜಾಬ್ ಮತ್ತು ಚಂಡೀಗಢದ ವಿವಿಧ ಡ್ಯಾಮ್ ಗಳಿಂದ ಭಾರತ 2 ಲಕ್ಷ ಕ್ಯೂಸೆಕ್ಸ್ ನೀರನ್ನು ಹೊರಬಿಟ್ಟಿತ್ತು. ಇದಾದ ಬಳಿಕ ಪಾಕಿಸ್ತಾನ ಕೌಸರ್ ನಗರ ಸಮೀಪದಲ್ಲಿರುವ ಸಟ್ಲೇಜ್ ನದಿಯಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಬಿಟ್ಟಿದೆ.
ಭಾರತಕ್ಕೆ ಕ್ಯಾನ್ಸರ್ ಕಾರಕ ನೀರು ಹರಿಸಿದ ಪಾಪಿ ಪಾಕಿಸ್ತಾನ....! 2
ಹೀಗಾಗಿ ಪಂಜಾಬ್ ನ ಫಿರೋಜ್ ಪುರ
ಜಿಲ್ಲೆಯ 17 ಗ್ರಾಮಗಳಲ್ಲಿ ನೆರೆ ಪರಿಸ್ಥಿತಿ ತಲೆದೋರಿದ್ದು, ಸೇನೆ, NDRF ರಕ್ಷಣಾ ಕಾರ್ಯದಲ್ಲಿ ತೊಡಗಿದೆ.
370ನೇ ವಿಧಿಯನ್ನು ರದ್ದುಗೊಳಿಸಿರುವ ಮೋದಿ ಸರ್ಕಾರದ ನಿರ್ಧಾರದಿಂದ ಹತಾಶೆಗೊಂಡಿರುವ ಪಾಕಿಸ್ತಾನ ಉದ್ದೇಶಪೂರ್ವಕವಾಗಿಯೇ ಕೌಸರ್ ಜಿಲ್ಲೆಯಲ್ಲಿರುವ ಚರ್ಮೋದ್ಯಮ ಘಟಕಗಳ ಕಲುಷಿತ ನೀರನ್ನು ಸಟ್ಲೇಜ್ ನದಿಗೆ ಬಿಟ್ಟು ಬಳಿಕ ಭಾರತದತ್ತ ನೀರ ಹರಿಸಿದೆ ಅನ್ನುವ ಆರೋಪ ಕೇಳಿ ಬಂದಿದೆ.
ಈಗಾಗಲೇ ಭಾರತ ಗಡಿ ಭಾಗದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದು, ತಾನು ಸಾಕಿದ ಉಗ್ರರನ್ನು ಒಳನುಸುಳಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕುತಂತ್ರಿ ಪಾಕ್ ಜಲ ಅಸ್ತ್ರ ಪ್ರಯೋಗಿಸಿದೆ. ಕಲುಷಿತ ನೀರನ್ನು ಭಾರತಕ್ಕೆ ಹರಿಬಿಟ್ಟು ತೊಂದರೆ ಕೊಡಲಾರಂಭಿಸಿದೆ.
Discussion about this post