ಲಾಹೋರ್: ಪಾಕಿಸ್ತಾನದೊಳಗೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ 8 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಭಾರತೀಯರನ್ನು ಪಾಕಿಸ್ತಾನ ಬಿಡುಗಡೆ ಮಾಡಿದ್ದು, ,ಸೋಮವಾರ ಭಾರತದ ಗಡಿ ಭದ್ರತಾ ಪಡೆಗೆ ಇಬ್ಬರನ್ನೂ ಹಸ್ತಾಂತರಿಸಲಾಗಿದೆ. ಅಠಾರಿ-ವಾಘಾಗಡಿಯಲ್ಲಿ ಈ ಹಸ್ತಾಂತರ ಪ್ರಕ್ರಿಯೆ ನಡೆದಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
2013ರಲ್ಲಿ ಶರ್ಮಾ ರಜಪೂತ್ ಹಾಗೂ ರಾಮ್ ಬುಹದಾರ್ ಎಂಬುವವರು ಕಾಶ್ಮೀರದ ಮೂಲಕ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿದ್ದರು. ಈ ವೇಳೆ ಪಾಕಿಸ್ತಾನದ ಭದ್ರತಾ ಪಡೆಗಳು ಇಬ್ಬರನ್ನೂ ಬಂಧಿಸಿತ್ತು. ಈ ವೇಳೆ ಇಬ್ಬರೂ ಮಾನಸಿಕ ಅಸ್ವಸ್ಥರೆಂದು ಗೊತ್ತಾಗಿದ್ದರೂ, ಪ್ರಕರಣವನ್ನು ನ್ಯಾಯಾಲಯಕ್ಕೆ ಒಯ್ದು ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ನಡುವೆ ಬಂಧಿತ ವ್ಯಕ್ತಿಗಳ ಭಾವಚಿತ್ರ ಹಾಗೂ ಇತರೆ ಮಾಹಿತಿಗಳನ್ನು ಪಾಕಿಸ್ತಾನ ಭಾರತದೊಂದಿಗೆ ಹಂಚಿಕೊಂಡಿತ್ತು. ಪರಿಶೀಲನೆ ನಡೆಸಿದ ಭಾರತೀಯ ಅಧಿಕಾರಿಗಳು ಇಬ್ಬರೂ ಭಾರತೀಯ ಪ್ರಜೆಗಳೆಂದು ಹೇಳಿದ್ದರು.
ಇನ್ನು ಕಳೆದ ವರ್ಷ ಗೂಢಚಾರ್ಯೆ ಮತ್ತು ಅಕ್ರಮ ಗಡಿ ಪ್ರವೇಶ ಆರೋಪದಡಿ 19 ಭಾರತೀಯರನ್ನು ಪಾಕಿಸ್ತಾನ ಅಧಿಕಾರಿಗಳು ಬಂಧಿಸಿದ್ದು, ಇನ್ನೂ ಜೈಲಿನಲ್ಲಿದ್ದಾರೆ.
Two Indian nationals, who were languishing in a Pakistani jail for eight years for “illegal border crossing”, have been handed over to the Border Security Force personnel at the Wagah Border, a government official said on Tuesday. The official said that in 2013, the Indian nationals – Sharma Rajput and Ram Buhadar – entered Pakistan’s territory at the Line of Control (LoC) from Kashmir and were arrested by the Pakistan Rangers.
Discussion about this post