ಕುಮಾರಸ್ವಾಮಿ ಶ್ರೀರಾಮಚಂದ್ರ..ಅನಿತಾ ಸೀತಾ ದೇವಿ…. ರೇವಣ್ಣ ಅಂಜನೇಯ… ಲಕ್ಷ್ಮಣ ಯಾರು..?

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶ್ರೀರಾಮನಿದ್ದಂತೆ.ಅನಿತಾ ಕುಮಾರಸ್ವಾಮಿ ಸೀತಾ ಮಾತೆ,ಇನ್ನು ಲೋಕೋಪಯೋಗಿ ಸಚಿವ ರೇವಣ್ಣ ಆಂಜನೇಯನಿದ್ದಂತೆ.

ಇದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ವ್ಯಾಖ್ಯಾನ. ರಾಮನಗರದಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕು ಸ್ಥಾಪನೆಗೂ ಮುನ್ನ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಜಿಟಿಡಿ ಕುಮಾರಸ್ವಾಮಿಯವರನ್ನು ರಾಮನಿಗೆ ಹೋಲಿಸಿದರು. ಬಳಿಕ ರೇವಣ್ಣ ಅವರನ್ನು ಹನುಮಂತನಿಗೆ ಹೋಲಿಸಿ, ಅಂದು ರಾಮಾಯಣದಲ್ಲಿ ಹನುಮಂತ ಸಂಜೀವಿನಿ ಪರ್ವತ ಹೊತ್ತು. ಈಗ ರೇವಣ್ಣ ಹಲವು ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೊಗಳಿದರು.

GTD
ಕುಮಾರಸ್ವಾಮಿ ಅವರಿಗೆ ಮತ್ತಷ್ಟು ಬಲ ಬರಲು ಸೀತಾ ದೇವಿಯನ್ನು ಕರೆ ತರಬೇಕಾಗಿದೆ ಅನ್ನುವ ಮೂಲಕ ಮುಂಬರುವ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಕುಮಾರಸ್ವಾಮಿ ಹೊಗಳಿಕೆಗೆ ಅರ್ಹರಾದ ವ್ಯಕ್ತಿ ಅನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಂತ ಮರ್ಯಾದ ಪುರುಷೋತ್ತಮ ಎಂದು ಕರೆಸಿಕೊಂಡ ಶ್ರೀರಾಮನಿಗೆ ಹೋಲಿಕೆ ಮಾಡುವ ಉನ್ನತ ಶಿಕ್ಷಣ ಸಚಿವರಿಗೆ ಏನು ಹೇಳೋಣ. ಅದೇ 8ನೇ ತರಗತಿ ಕಲಿತವರು ಉನ್ನತ ಶಿಕ್ಷಣ ಸಚಿವರಾದರೆ ಹೀಗಾಗುತ್ತದೆ.

HDD-Family

Advertisements

ಗೊತ್ತಿಲ್ಲದಂತೆ ಉಪ್ಪಿನೊಂದಿಗೆ ಪ್ಲಾಸ್ಟಿಕ್ ನಮ್ಮ ದೇಹ ಸೇರುತ್ತಿದೆ

ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಮೊಟ್ಟೆ, ಪ್ಲಾಸ್ಟಿಕ್ ಸಕ್ಕರೆ ಹೀಗೆ ಆಹಾರ ಪದಾರ್ಥದಲ್ಲಿ ಪ್ಲಾಸ್ಟಿಕ್ ಅಬ್ಬರಿಸಿದ ರೀತಿಗೆ ಮಿತಿಯೆಲ್ಲಿದೆ. ಇದೀಗ ಪ್ಲಾಸ್ಟಿಕ್ ಉಪ್ಪಿನ ಸರದಿ. ಹಾಗಂತ ಅದು ಪ್ಲಾಸ್ಟಿಕ್ ಉಪ್ಪಲ್ಲ, ಬದಲಾಗಿ ಅದು ಉಪ್ಪಿನಲ್ಲಿ ಪ್ಲಾಸ್ಟಿಕ್ ಸೇರಿಕೊಳ್ಳುತ್ತಿದೆ.

ದೇಶದಲ್ಲಿ ಮಾರಾಟವಾಗುವ ಹಲವು ಪ್ರಮುಖ ಕಂಪೆನಿಗಳ ಟೇಬಲ್ ಸಾಲ್ಟ್ ಬ್ರ್ಯಾಂಡುಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಅಂಶಗಳು ಪತ್ತೆಯಾಗಿವೆ ಎಂದು Indian Institute of Technology-Bombay ಯ ಎರಡು ಸದಸ್ಯರ ತಂಡ ನಡೆಸಿದ ಅಧ್ಯಯನ ತಿಳಿಸಿದೆ.

ಮುಖ್ಯವಾಗಿ ಸಮುದ್ರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಕೊಳೆತು ಸೇರಿಕೊಂಡಿರುವ ಪರಿಣಾಮವೇ ಅವುಗಳ ಅಂಶ ಉಪ್ಪಿನಲ್ಲಿ ಕಂಡು ಬರುತ್ತಿದೆ ಎಂದು ಸಂಶೋಧನೆ ತಿಳಿಸಿದೆ.

ಸಂಶೋಧನ ತಂಡವು ಪರೀಕ್ಷಿಸಿದ ಉಪ್ಪಿನ ಮಾದರಿಗಳಲ್ಲಿ 626 ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಪತ್ತೆ ಹಚ್ಚಲಾಗಿದ್ದು, ಪತ್ತೆ ಹಚ್ಚಲಾದ ಮೈಕ್ರೋಪ್ಲಾಸ್ಟಿಕ್ ಕಣಗಳ ಪೈಕಿ ಶೇ 63ರಷ್ಟು ಅಂಶ ಚೂರು ಚೂರು ರೂಪದಲ್ಲಿ ಪತ್ತೆಯಾಗಿದ್ದರೆ ಶೇ 37ರಷ್ಟು ನಾರಿನ ರೂಪದಲ್ಲಿದೆ.

ಪರೀಕ್ಷೆಗೊಳಪಡಿಸಲಾದ ಪ್ರತಿ 1 ಕೆಜಿ ಉಪ್ಪಿನಲ್ಲಿ 63.76 ಮೈಕ್ರೋಗ್ರಾಂ ಅಥವಾ 0.063 ಮಿಲಿಗ್ರಾಂ ಮೈಕ್ರೋಪ್ಲಾಸ್ಟಿಕ್ ಪತ್ತೆಯಾಗಿದೆ.

ಪ್ರತಿ ದಿನ ವ್ಯಕ್ತಿಯೊಬ್ಬ 5 ಗ್ರಾಂ ಉಪ್ಪು ಸೇವಿಸುತ್ತಾರೆಂದು ಅಂದುಕೊಂಡರೆ ಸುಮಾರು 117 ಮೈಕ್ರೋಗ್ರಾಂ (0.117 ಮಿಲಿ ಗ್ರಾಂ) ಮೈಕ್ರೋಪ್ಲಾಸ್ಟಿಕ್ ಕೂಡ ಸೇವಿಸುತ್ತಾರೆಂದು ಈ ಆಧಯ್ಯನದಿಂದ ಕಂಡುಕೊಳ್ಳಲಾಗಿದೆ.

ಉಪ್ಪಿನಲ್ಲಿನ ಈ ಮೈಕ್ರೋಪ್ಲಾಸ್ಟಿಕ್ ಅಂಶಗಳು ಆರೋಗ್ಯಕ್ಕೆ ಹಾಗೂ ದೇಹಕ್ಕೆ ಹೇಗೆ ಹಾನಿಕಾರಕ ಅನ್ನುವ ಕುರಿತಂತೆ ಇನ್ನಷ್ಟೇ ಅಧ್ಯಯನ ನಡೆಯಬೇಕಿದೆ.

ಸನಾತನ ಸಂಸ್ಥೆ ಭಯೋತ್ಪಾದನ ಸಂಸ್ಥೆ – ನಾನೂ ನಗರ ನಕ್ಸಲ್ ಅಂದ ಕಾರ್ನಾಡ್

ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷ ಪೂರ್ಣ ಹಿನ್ನೆಲೆಯಲ್ಲಿ ಇಂದು ಗೌರಿ ಬಳಗ, ಗೌರಿ ಮೆಮೋರಿಯಲ್ ಟ್ರಸ್ಟ್ನಿಂದ ‘ಗೌರಿ ಅಮರ್ ರಹೇ’ ಶೀರ್ಷಿಕೆಯಡಿ ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರೈ, ಸಾಹಿತಿ ಬಿ.ಟಿ. ಲಲಿತಾ ನಾಯಕ್, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ, ಸ್ವಾಮಿ ಅಗ್ನಿವೇಶ್, ಕವಿತಾ ಲಂಕೇಶ್, ಟ್ರಸ್ಟ್ ಸದಸ್ಯರು ಗೌರಿ ಲಂಕೇಶ್ ಗೌರಿ ಸಮಾಧಿಗೆ ಹೂವಿಟ್ಟು ‘ಪ್ರೀತಿಯ ಗಂಗೆ ಹರಿಯುತಿರಲಿ’ ಹಾಡಿನ ಮೂಲಕ ಗೀತ ನಮನ ಸಲ್ಲಿಸಿದರು.

ಬಳಿಕ, ಮೌರ್ಯ ಸರ್ಕಲ್ನಿಂದ ರಾಜಭವನದವರೆಗೆ ನಡೆದ ಕಾಲ್ನಡಿಗೆ ಜಾಥಾದಲ್ಲಿ ಚಿಂತಕರ ಹಂತಕರ ಜೊತೆ ಹುನ್ನಾರ ನಡೆಸಿದವರನ್ನೂ ಬಂಧಿಸಬೇಕು, ಕೊಲೆಗಡುಕ ಸಂಘಟನೆಗಳನ್ನು ನಿರ್ಬಂಧಿಸಲು ಆಗ್ರಹ ಪಡಿಸಲಾಯಿತು. ಕೊಲೆಗಡುಕ ಸನಾತನ‌ ಸಂಸ್ಥೆ ಮತ್ತು ಹಿಂದು ಜನಜಾಗೃತಿ ಸಮಿತಿಯನ್ನು ಭಯೋತ್ಪಾದಕ ಸಂಸ್ಥೆ ಎಂದು ಘೋಷಿಸಬೇಕು, ಸನಾತನ ಸಂಸ್ಥೆಯ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ರಾಜ್ಯಪಾಲರಿಗೆ ಗೌರಿ ಟ್ರಸ್ಟ್ನಿಂದ ಮನವಿ ಸಲ್ಲಿಸಲಾಯಿತು.

ಇದೇ ವೇಳೆ ಮಾತನಾಡಿದ ಅಗ್ನಿವೇಶ್ ಸನಾತನ ಸಂಸ್ಥೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅದು ಸಾಮಾನ್ಯ ಧರ್ಮ ಪ್ರಚಾರ ಸಂಸ್ಥೆ ಅಲ್ಲ. ಅದೊಂದು ಭಯೋತ್ಪಾದನ ಸಂಸ್ಥೆ. ಅದರ ಮೇಲೆ ಸರ್ಕಾರ ತೀವ್ರ ನಿಗಾ ವಹಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಮಾಡುವವರನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.

ಆರ್ ಎಸ್ಎಸ್ ಎಂದರೆ ಬಹುಮುಖಿ ರಾಕ್ಷಸ. ಬೇರೆ ಬೇರೆ ಹೆಸರುಗಳಲ್ಲಿ ಅದರ ಅಸ್ತಿತ್ವ ಇದೆ. ಅದರ ನಾಯಕ ಇಟ್ಲರ್ ಎಂದು ಆರೋಪಿಸಿದರು. ಅಲ್ಲದೆ ಆರ್ ಎಸ್ಎಸ್ ಬಹುಮುಖಿ ಸಂಸ್ಥೆಗಳಲ್ಲಿ ಸನಾತನ ಸಂಸ್ಥೆಯೂ ಒಂದು ಎಂದು ದೂರಿದರು.

ಇದೇ ವೇಳೆ ನಾನೂ ನಗರ ನಕ್ಸಲ ಎಂದು ಫಲಕ ಹಾಕಿಕೊಂಡ ಗಿರೀಶ್ ಕಾರ್ನಾಡ್ ತಾನೊಬ್ಬ ನಕ್ಸಲ್ ಎಂದು ಘೋಷಿಸಿಕೊಂಡರು.

ದ್ರಾವಿಡ್ ಪಾಲಿಗೆ ರವಿಶಾಸ್ತ್ರಿ ವಿಲನ್ – ದಾದಾ ಸಿಡಿಸಿದ ಬಾಂಬ್

ಕ್ರಿಕೆಟ್ ಅಭಿಮಾನಿಗಳಲ್ಲಿ  ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಬಗ್ಗೆ ಒಂದು ಅಸಹನೆ ಎಂದಿಗೂ ಇದೆ. ಆದರೆ ಇದೀಗ ರವಿಶಾಸ್ತ್ರೀಯವರ ಅಸಲಿ ಮುಖವನ್ನು ಸೌರವ್ ಗಂಗೂಲಿ ಬಹಿರಂಗಪಡಿಸಿದ್ದಾರೆ. ಅದು ಕನ್ನಡಿಗರ ರಾಹುಲ್ ದ್ರಾವಿಡ್  ಕುರಿತ ವಿಷಯ.

ಭಾರತ ಕ್ರಿಕೆಟ್ ತಂಡ ಮಹಾಗೋಡೆ ಎಂದೇ ಪ್ರಸಿದ್ಧರಾಗಿದ್ದ ತಾಳ್ಮೆಯ ಮೂರ್ತಿಗೆ ಸಿಗಬೇಕಾಗಿದ್ದ ಗೌರವ ಮತ್ತು ಅದ್ಭುತ ಅವಕಾಶವನ್ನು ರವಿಶಾಸ್ತ್ರಿ ತಪ್ಪಿಸಿದ್ದಾರೆ ಎಂದು ಗಂಗೂಲಿ ನೇರ ಆರೋಪ ಮಾಡಿದ್ದಾರೆ.

ರಾಹುಲ್ ದ್ರಾವಿಡ್ ಅವರನ್ನು ಟೀಂ ಇಂಡಿಯಾ ಕನ್ಸಲ್ಟೆಂಟ್ ಬ್ಯಾಟಿಂಗ್ ಕೋಚ್ ಹಾಗೂ ಕನ್ಲಲ್ಟೆಂಟ್ ಬೌಲಿಂಗ್ ಕೋಚ್ ಆಗಿ ಜಹೀರ್ ಖಾನ್ ರನ್ನು ನಾವು ಆಯ್ಕೆ ಮಾಡುವಂತೆ ನಾವು ನಿರ್ಧಾರ ಮಾಡಿದ್ದೆವು. ಇದಕ್ಕೆ ದ್ರಾವಿಡ್ ಹಾಗೂ ಜಹೀರ್ ಖಾನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದರು.

ಇದೇ ವೇಳೆ ಟೀಂ ಇಂಡಿಯಾದ ಕೋಚ್ ಆಗಿ ಆಯ್ಕೆಗೊಂಡಿದ್ದ ರವಿಶಾಸ್ತ್ರಿ ಜತೆ ರಾಹುಲ್ ದ್ರಾವಿಡ್ ಮಾತುಕತೆ ನಡೆಸಿದರು. ನಂತರ ತಾವು ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸಲು ಆಗುವುದಿಲ್ಲ ಎಂದು ದ್ರಾವಿಡ್ ಹೇಳಿಕೆ ಕೊಟ್ಟರು. ರವಿಶಾಸ್ತ್ರಿ ಜೊತೆಗಿನ ಭೇಟಿ ವೇಳೆ ಅವರ ನಡುವೆ ಏನು ನಡೆಯಿತು ಎಂಬುದು ನಮಗೆ ಗೊತ್ತಾಗಲಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.

ಕನ್ನಡಿಗ ಅನಿಲ್ ಕುಂಬ್ಳೆ ಎರಡನೇ ಬಾರಿಗೆ ಕೋಚ್ ಆಗುವುದನ್ನು ತಡೆದು ತಾವೇ ತಂಡದ ಕೋಚ್ ಆಗಿದ್ದ ರವಿಶಾಸ್ತ್ರಿ ವಿರುದ್ಧ ಸೌರವ್ ಗಂಗೂಲಿ ಈ ಹಿಂದೆ ಬಹಿರಂಗವಾಗಿ ವಾಕ್ಸಮರ ನಡೆಸಿರುವುದನ್ನು ಈ ವೇಳೆ ಸ್ಮರಿಸಿಕೊಳ್ಳಬಹುದು.

ನಿಖಿಲ್ ಆಯ್ತು..ಇದೀಗ ಅಂಬಿ ಪುತ್ರನ ಜೊತೆ ರಚಿತಾ…..

ಚಂದನವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ನಟಿ ಎಂದು ಕರೆಸಿಕೊಂಡಿರುವ ರಚಿತಾ ರಾಮ್ ಕೈಯಲ್ಲಿ ಇರುವ ಅವಕಾಶಗಳಿಗೆ ಲೆಕ್ಕವಿಲ್ಲ. ಮುಟ್ಟಿದೆಲ್ಲಾ ಚಿನ್ನ ಅನ್ನುವ ಸ್ಥಿತಿ ರಚಿತಾ ರಾಮ್ ಅವರದ್ದು.

ಈಗಾಗಲೇ ನಿಖಿಲ್ ಜೊತೆ ಸೀತಾರಾಮ ಕಲ್ಯಾಣ ಮುಗಿಸಿದ ರಚಿತಾ ಇದೀಗ ರೆಬೆಲ್ ಸ್ಟಾರ್ ಪುತ್ರನ ಸಿನಿಮಾದತ್ತ ಹೆಜ್ಜೆ ಹಾಕುವುದು ಪಕ್ಕಾ ಆಗಿದೆ.

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಯಕನಾಗಿ ಎಂಟ್ರಿ ಕೊಡುತ್ತಿರೋ ಅಮರ್ ಚಿತ್ರದ ಅತಿಥಿ ಪಾತ್ರವೊಂದರಲ್ಲಿ ನಿರೂಪ್ ಭಂಡಾರಿ ನಟಿಸಲಿದ್ದಾರೆ ಅನ್ನುವ ಸುದ್ದಿಯ ಬೆನ್ನಲ್ಲೇ ರಚಿತಾ ರಾಮ್ ಹಾಡೊಂದರಲ್ಲಿ ಅಮರ್ ಜೊತೆ ಹೆಜ್ಜೆ ಹಾಕಲಿದ್ದಾರಂತೆ.

ರಚಿತಾ ರಾಮ್ ಅವರ ಭಾಗದ ವಿಶೇಷವಾದ ಹಾಡಿನ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ.

This slideshow requires JavaScript.

 

ಕುಮಾರಸ್ವಾಮಿ ತಾಂತ್ರಿಕ ಸಲಹೆಗಾರನಿಗೆ ವೇತನ ಕೇವಲ 101 ರೂಪಾಯಿ

ರಾಜ್ಯ ಸರ್ಕಾರದ ಯಾವುದಾದರೊಂದು ಹುದ್ದೆ ಸಿಕ್ಕರೆ ಸಾಕು, ನಿಗಮ ಮಂಡಳಿಯೋ, ಯಾವುದಾದರೊಂದು ಸಮಿತಿಯಾದರೂ ಪರವಾಗಿಲ್ಲ. ಸರ್ಕಾರ ನೀಡುವ ಒಂದು ರೂಪಾಯಿಯನ್ನು ಬಿಡುವುದಿಲ್ಲ. ಸಿಕ್ಕಷ್ಟು ಸಿಗಲಿ, ಬರುವಷ್ಟು ಬರಲಿ ಎಂದು ಬಾಚಿಕೊಳ್ಳುತ್ತಾರೆ.

ಕಾರು ಸಿಕ್ಕರೆ ಸಾಲದು ಅದಕ್ಕೆ ಇಂಧನ ಬೇಕು, ಡ್ರೈವರ್ ಬೇಕು, ಮನೆ ಸಿಕ್ಕರೆ ಸಾಲದು ಪಿಠೋಪಕರಣ, ಸಿಬ್ಬಂದಿ ಬೇಕು.

ಆದರೆ ಇದಕ್ಕೆಲ್ಲ ಅಪವಾದ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರು.ಈ ವರ್ಷದ ಜೂನ್ 21 ರಂದು ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರನ್ನಾಗಿ ಎಂ.ಕೆ. ವೆಂಕಟರಾಮು ಅವರನ್ನು ನೇಮಿಸಿ ಅದೇಶ ಹೊರಡಿಸಲಾಗಿದೆ.

80 ವರ್ಷದ ವೆಂಕಟರಾಮು ಅವರಿಗೆ ರಾಜ್ಯ ಸಚಿವರ ಸ್ಥಾನ ಮಾನ ನೀಡಲಾಗಿದ್ದು, ವೇತನ ಸೇರಿದಂತೆ ಇತರೆ ಭತ್ಯೆಗಳ ಮೊತ್ತ ತಿಂಗಳಿಗೆ 3 ಲಕ್ಷ ದಾಟುತ್ತದೆ.

ಆದರೆ ವೆಂಕಟ ರಾಮು ತಮಗೆ ನೀಡಿದ ಸೌಲಭ್ಯಗಳಲ್ಲಿ ಯಾವುದನ್ನೂ ಪಡೆಯುತ್ತಿಲ್ಲ. ಬದಲಾಗಿ ತಾವು ಸರ್ಕಾರಕ್ಕೆ ಮಾಡುವ ಸೇವೆಗಾಗಿ 101 ರೂಪಾಯಿ ವೇತನ ಪಡೆಯಲು ನಿರ್ಧರಿಸಿದ್ದಾರೆ.

ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಅವರು ತಮಗೆ ಸರ್ಕಾರದಿಂದ ನೀಡಿರುವ ಮನೆ ಭತ್ಯೆ, ವೇತನಗಳನ್ನು ಹಿಂತೆಗೆದುಕೊಂಡು ಅದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಠೇವಣಿಯಿಡುವಂತೆ ವಿನಂತಿಸಿದ್ದಾರೆ. ಪ್ರವಾಸ ಮಾಡಿದ ಸಂದರ್ಭಗಳಲ್ಲಿ ಪ್ರವಾಸ ಭತ್ಯೆ ಮತ್ತು ದಿನ ಭತ್ಯೆ ಸ್ವೀಕಾರ ಮಾಡುವುದಾಗಿ ಅವರು ಪತ್ರದಲ್ಲಿ ಹೇಳಿದ್ದಾರೆ.

1962ರಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಆರಂಭಿಸಿದ ವೆಂಕಟರಾಮು  ನಂತರ ನೀರಾವರಿ, ಜಲಸಂಪನ್ಮೂಲ ಇಲಾಖೆಗಳಲ್ಲಿ ಕೆಲಸ ಮಾಡಿ 1993ರಲ್ಲಿ ನಿವೃತ್ತಿ ಪಡೆದರು.

ಹಾಗಾದರೆ ವೆಂಕಟರಾಮು ತ್ಯಾಗ ಮಾಡಿದ್ದು ಯಾಕೆ ಅನ್ನುವುದು ಕುರಿತಂತೆ THE STATE  ವೆಬ್ ಸೈಟ್ ಜೊತೆ ಮಾತನಾಡಿ  “ ಸರ್ಕಾರ ಪಿಂಚಣಿ ನೀಡುತ್ತಿದೆ. ಇಷ್ಟು ವರ್ಷ ಸರ್ಕಾರದ ಅನ್ನ ತಿಂದಿದ್ದೇನೆ. ಅದನ್ನು ತೀರಿಸಲು ಒಳ್ಳೆ ಅವಕಾಶವಿದು” ಎಂದಿದ್ದಾರೆ.

ಅಂದ ಹಾಗೇ ಇಂತಹುದೊಂದು ಅದ್ಭುತ ಸುದ್ದಿಯನ್ನು ಮೊದಲು ಪ್ರಕಟಿಸಿದ್ದು THE STATE  ವೆಬ್ ಸೈಟ್. ಬಳಿಕ ರಾಜ್ಯದ ಪತ್ರಿಕೆಗಳು ಸುದ್ದಿಯನ್ನು ಪ್ರಕಟಿಸಿದೆ.

ಯಶ್ ಗೆ ಮುಖಭಂಗ- ಬಾಡಿಗೆ ಕಟ್ಟಿ,ಇಲ್ಲವೇ ಮನೆ ಖಾಲಿ ಮಾಡಿ ತಾಯಿಗೆ ಹೈಕೋರ್ಟ್ ಆದೇಶ

ಬಾಡಿಗೆ ಮನೆ ವಿಚಾರವಾಗಿ ಸ್ಯಾಂಡಲ್​ವುಡ್​ ನಟ ಯಶ್ ಈ ಹಿಂದೆ ಸಾಕಷ್ಟು ಮಾತನಾಡಿದ್ದರು. ಕೆಳ ನ್ಯಾಯಾಲಯದ ಆದೇಶದಲ್ಲಿ ಹಿನ್ನಡೆ ಅನುಭವಿಸಿದ್ದರೂ ಮನೆ ಮಾಲೀಕರ ವಿರುದ್ಧವೇ ಮಾತನಾಡಿದ್ದರು. ಬಳಿಕ ವಿಷಯ ಹೈಕೋರ್ಟ್ ಮೆಟ್ಟಿಲೇರಿತ್ತು.

ಇದೀಗ ಯಶ್ ಅವರ​ ತಾಯಿಗೆ ಹೈಕೋರ್ಟ್​ನಲ್ಲಿಯೂ ಭಾರಿ ಹಿನ್ನೆಡೆಯಾಗಿದೆ.

ಕೆಳ ನ್ಯಾಯಾಲಯದ ಆದೇಶ ಎತ್ತಿಹಿಡಿದ ಹೈಕೋರ್ಟ್​, ಬಾಡಿಗೆ ಪಾವತಿಸಿ, ಇಲ್ಲವೇ ಮನೆ ಖಾಲಿ ಮಾಡಿ ಎಂದು ಆದೇಶಿಸಿದೆ.

23.27 ಲಕ್ಷ ರೂ. ಬಾಡಿಗೆ ಪಾವತಿಸುವಂತೆ ಸೂಚನೆ ನೀಡಿರುವ ನ್ಯಾಯಾಲಯ​​ ತಕ್ಷಣ ಪಾವತಿಸಿದರೆ ಮುಂದಿನ ಮಾರ್ಚ್​ 31ರ ವರೆಗೆ ಇರಬಹುದು.ಇಲ್ಲವಾದಲ್ಲಿ ಡಿಸೆಂಬರ್​​ಗೆ ಮನೆ ಖಾಲಿ ಮಾಡಿ ಎಂದಿದೆ.

ಮುನಿ ಪ್ರಸಾದ್​ ಹಾಗೂ ಡಾ.ವನಜಾ ಅವರಿಗೆ ಸೇರಿದ ಕತ್ರಿಗುಪ್ಪೆಯಲ್ಲಿ ಮನೆಯಲ್ಲಿ ಬಾಡಿಗೆಗೆ ಇದ್ದ, ಯಶ್ ಹಾಗೂ ಕುಟುಂಬ ಇದನ್ನು ಅದೃಷ್ಟದ ಮನೆ ಎಂದು ನಂಬಿತ್ತು. ಬಳಿಕ ಮನೆ ಮನೆ ಖಾಲಿ ಮಾಡಲು ನಿರಾಕರಿಸಿದ್ದರು. ಬಾಡಿಗೆಯನ್ನು ಪಾವತಿಸಿ ಇರಲಿಲ್ಲ. ಆದರೆ ಯಶ್ ಬಾಡಿಗೆ ಪಾವತಿಸಿರುವುದಾಗಿ ಹೇಳಿದ್ದರು.

ನ್ಯಾಯಮೂರ್ತಿಗಳಾದ ಬೋಪಣ್ಣ, ಶ್ರೀನಿವಾಸ್ ಹರೀಶ್‌ಕುಮಾರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ.