Advertisements

ಕಿಕಿ ಚಾಲೆಂಜ್ ಸ್ವೀಕರಿಸಿ ಕನ್ನಡಿಗರಿಂದ ಉಗಿಸಿಕೊಂಡ ನಿವೇದಿತಾ ಗೌಡ – ಚಂದನ್ Answer please

ವಯಸ್ಸಾದರೆ ಸಾಲದು ತಲೆಯಲ್ಲಿ ಬುದ್ದಿಯೂ ಬೆಳೆಯಬೇಕು. ಅದಕ್ಕೊಂದು ಸಾಕ್ಷಿ ಉರಿಗೊಬ್ನೆ ಪದ್ಮಾವತಿ ಅನ್ನುವಂತೆ ಮೆರೆಯುತ್ತಿರುವ ನಿವೇದಿತಾ ಗೌಡ. ಐಶ್ವರ್ಯಾ ರೈ ನಾನೇ ವಿಶ್ವ ಸುಂದರಿ ಅನ್ನುವಂತೆ ನಡೆದಾಡುತ್ತಿದ್ದ ನಿವೇದಿತಾ ಗೌಡ ಕನ್ನಡಿಗರಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾಳೆ.

ಮಾಡಬಾರದ್ದನ್ನು ಮಾಡಲು ಹೋಗಿ ಜನ್ಮ ಜಾಲಾಡಿಸಿಕೊಂಡಿದ್ದಾಳೆ.

ಎಲ್ಲೆಡೆ ಇದೀಗ ಕಿಕಿ ಚಾಲೆಂಜ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದೀಗ ಬಿಗ್‌ಬಾಸ್ ಸ್ಪರ್ಧಿ ನಿವೇದಿತಾ ಗೌಡ ಕಿಕಿ ಡ್ಯಾನ್ಸ್ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.

ಇತ್ತೀಚೆಗಷ್ಟೆ ಬಾಲಿವುಡ್ ನಟಿಯರಾದ ಅದಾ ಶರ್ಮಾ ಹಾಗೂ ನೋರಾ ಫತೇಹಿ ಕಿಕಿ ಡ್ಯಾನ್ಸ್ ಮಾಡಿ ವಿಡಿಯೋವನ್ನು ಶೇರ್ ಮಾಡಿದ್ದರು. ಇದೀಗ ಕಿಕಿ ಚಾಲೆಂಜ್ ಸ್ವೀಕರಿಸಿದ್ದ ನಿವೇದಿತಾ ಗೌಡ ಓಡುವ ಕಾರಿನಿಂದ ಇಳಿದು ಹೆಜ್ಜೆ ಹಾಕಿದ್ದಾರೆ.

ನಿವೇದಿತಾ ಕಿಕಿ ಚಾಲೆಂಜ್ ಗಾಗಿ ಇಂಗ್ಲಿಷ್ ಹಾಡಿಗೆ ಹೆಜ್ಜೆ ಹಾಕಿದ್ದು ಬೇಬಿ ಡಾಲ್ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಇದು ಅಪಾಯಕಾರಿ ಎಂದು ಗೊತ್ತಿದ್ದರೂ ಚಾಲೆಂಜ್ ಸ್ವೀಕರಿಸಿದ್ದಕ್ಕೆ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಯಾವಾಗ ಅಭಿಮಾನಿಗಳು ತಿರುಗಿ ಬಿದ್ದರೋ, ನಾನು ಖಾಲಿ ರಸ್ತೆಯಲ್ಲಿ ಕಿಕಿ ಡ್ಯಾನ್ಸ್ ಮಾಡಿದ್ದು ಏನು ತೊಂದರೆಯಾಗಿಲ್ಲ. ಆದರೆ ಕಿಕಿ ಡ್ಯಾನ್ಸ್ ಚಾಲೆಂಜ್ ಅನ್ನು ಸ್ವೀಕರಿಸಬೇಡಿ ಎಂದು ಮನವಿ ಮಾಡಿದರು. ಅಷ್ಟು ಹೊತ್ತಿಗೆ ಪೊಲೀಸರು ಕೇಸು ಜಡಿಯುತ್ತಾರೆ ಅನ್ನುವ ಸುದ್ದಿ ಸಿಕ್ಕಿತ್ತು. ತಾವು ಅಪ್ ಲೋಡ್ ಮಾಡಿದ್ದ ವಿಡಿಯೋ ಅನ್ನು ಡಿಲೀಟ್ ಮಾಡಿದ್ರು.

ಸೆಲೆಬ್ರೆಟಿಯಾದರೆ ಸಾಲದು, ಹೇಗೆ ಇರಬೇಕು ಅನ್ನುವುದನ್ನು ಕಲಿಯಬೇಕು ಅನ್ನುವುದು ನಿವೇದಿತಾ ಸಾಕ್ಷಿ.

ಏನೇ ಇರ್ಲಿ ಪೊಲೀಸರು ಕಿಕಿ ಚಾಲೆಂಜ್ ಗೆ ಬೆಂಬಲ ನೀಡಿದ ನಿವೇದಿತಾ ಮೇಲೆ ಕೇಸು ಜಡಿಯಲೇಬೇಕು. ಇಲ್ಲ ಅಂದ್ರೆ ಜನ ಸಾಮಾನ್ಯರಿಗೆ ಬುದ್ದಿ ಬರುವುದಿಲ್ಲ.

Advertisements

ಟೀಸರ್ ನಲ್ಲಿ ಮುಗ್ಗರಿಸಿದ ನಿಖಿಲ್ – ಸೀತಾರಾಮ ಕಲ್ಯಾಣ ಗೆಲುವಿನ ಕ್ರೆಡಿಟ್ ಚಿಕ್ಕಣ್ಣ ಮತ್ತು ರಚಿತಾಗೆ

ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯವಾಗಿ ತಾವು ಅಭಿವೃದ್ಧಿ ಹೊಂದಬೇಕು ಅನ್ನುವ ಕನಸು ಕಟ್ಟಿಕೊಂಡು ಹೊರಟಿದ್ದಾರೆ. ಮತ್ತೊಂದು ಕಡೆ ಮಗ ನಿಖಿಲ್ ನನ್ನು ದಡ ಸೇರಿಸಬೇಕು ಅನ್ನುವುದು ಅವರ ಗುರಿ. ತಂದೆಯಾದ ಪ್ರತಿಯೊಬ್ಬನಿಗೂ ಇದು ಇರುವುದು ಸಹಜವೇ. ಆದರೆ ನಿಖಿಲ್ ಕುಮಾರ ಸ್ವಾಮಿ ಸೆಲೆಬ್ರೆಟಿ ಕಿಡ್ ಆಗಿ ಬೆಳೆದ ಹುಡುಗ, ಹೀಗಾಗಿ ಕುಮಾರಸ್ವಾಮಿಯಂತೆ ಸಾಮಾನ್ಯರೊಡನೆ ಬೆರೆಯುವುದು ಕಷ್ಟವಾಗುವುದಿದೆ. ಹೀಗಾಗಿ ನಿಖಿಲ್ ಭವಿಷ್ಯ ಕಟ್ಟುವುದು ಕುಮಾರಸ್ವಾಮಿಯವರಿಗೆ ತಲೆ ನೋವಾಗಿದೆ.

ನಿರೀಕ್ಷೆಯಂತೆ ಉನ್ನತ ವ್ಯಾಸಂಗ ಮಾಡಲಿಲ್ಲ. ಹಾಕಿಕೊಟ್ಟ ವ್ಯವಹಾರಗಳನ್ನು ಸರಿಯಾಗಿ ನಿಭಾಯಿಸಲಿಲ್ಲ. ಕಸ್ತೂರಿ ವಾಹಿನಿ ಗುಚ್ಛವನ್ನಾದರೂ ನೋಡಿಕೊಂಡಿರು ಎಂದು ಜವಾಬ್ದಾರಿ ಕೊಟ್ಟರೆ ಅದನ್ನೂ ದಡ ಸೇರಿಸಲಿಲ್ಲ.

ಹೀಗಾಗಿ ಕೊನೆಯ ಪ್ರಯತ್ನ ಅನ್ನುವಂತೆ ನಿಖಿಲ್ ನನ್ನು ಸಿನಿಮಾ ರಂಗಕ್ಕೆ ತಂದು ನಿಲ್ಲಿಸಿದ್ದಾರೆ ತಂದೆ ಕುಮಾರಸ್ವಾಮಿ. ದೊಡ್ಡ ಮೊತ್ತದಲ್ಲಿ ಕಾಸು ಸುರಿದು ಜಾಗ್ವಾರ್ ಅನ್ನುವ ಸಿನಿಮಾ ನಿರ್ಮಿಸಿದರು. ಆದರೆ ನಟನೆಯ ಕೊರತೆಯ ಕಾರಣದಿಂದ ಚಿತ್ರ ಸೋತಿತು. ಮೇಕಿಂಗ್ ಅದ್ಭುತವಾಗಿತ್ತು, ಆದರೆ ನಿಖಿಲ್ ನಟನೆಯನ್ನು ನೋಡುವುದೇ ದೊಡ್ಡ ಹಿಂಸೆಯಾಗಿತ್ತು.

ಹೀಗಾಗಿ ತೆಲುಗಿನಲ್ಲಿ ಮಗನನ್ನು ನೆಲೆಯೂರಿಸಬೇಕು ಎಂದು ಕಂಡಿದ್ದ ಕನಸು ನುಚ್ಚು ನೂರಾಯ್ತು.

ಇದೀಗ ಸೀತಾರಾಮ ಕಲ್ಯಾಣ ಅನ್ನುವ ಸಿನಿಮಾವನ್ನು ನಿಖಿಲ್ ಗಾಗಿಯೇ ನಿರ್ಮಿಸಲಾಗುತ್ತದೆ. ಬಹುತೇಕ ಚಿತ್ರೀಕರಣ ಮುಗಿದಿದ್ದು ಫೈನಲ್ ಟಚ್ ಅಪ್ ಕಾರ್ಯ ನಡೆಯುತ್ತಿದೆ. ಈ ಸಿನಿಮಾದ ಬಗ್ಗೆ ಒಂದಿಷ್ಟು ನಿರೀಕ್ಷೆಗಳಿತ್ತು, ಹರ್ಷ ಅನ್ನುವ ಪ್ರತಿಭಾನ್ವಿತ ನಿರ್ದೇಶಕನ ಗರಡಿಯಾಗಿರುವುದರಿಂದ ಸಿನಿಮಾ ಚೆನ್ನಾಗಿ ಬರುತ್ತದೆ ಅನ್ನುವ ಕಲ್ಪನೆ ಇತ್ತು.

ಆದರೆ ರಾಮನಗರದಲ್ಲಿ ಬಿಡುಗಡೆಯಾಗಿರುವ ಟೀಸರ್ ಎಲ್ಲಾ ನಿರೀಕ್ಷೆಗಳಿಗೆ ಬೆಂಕಿ ಹಚ್ಚಿದೆ. ನಿಖಿಲ್ ನನ್ನು ಚುನಾವಣೆಗೆ ನಿಲ್ಲಿಸುವ ಸಿದ್ದತೆಯೊಂದು ನಡೆಯುತ್ತಿದೆ ಅನ್ನುವ ಹಿಂಟ್ ಅನ್ನು ಟೀಸರ್ ಕೊಟ್ಟಿದೆ. ಟೀಸರ್ ನಲ್ಲಿ ಒಂದೇ ಒಂದು ಡೈಲಾಗ್ ಇಲ್ಲ, ನಾಯಕಿ ರಚಿತಾ ರಾಮ್ ನೆರಳೇ ಇಲ್ಲ, ಹೋಗ್ಲಿ ಚಿಕ್ಕಣ ಚಮಕ್ ಅದೂ ಇಲ್ಲ.

ಹೇಗಿದೆ ನೋಡಿ ಸೀತಾರಾಮ ಕಲ್ಯಾಣ ಟೀಸರ್

ಇನ್ನು ಇದು ಸರೈನೋಡು ಚಿತ್ರದ ರಿಮೇಕ್ ನಂತಿದೆ. ರಿಮೇಕ್ ಮಾಡಿದ್ದರೋ ಇಲ್ಲವೋ ಕಾಪಿಯಂತು ಮಾಡಿದ್ದಾರೆ ಅನ್ನುವ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ.

ಹಾಗಾದರೆ ಸರೈನೋಡು ಟೀಸರ್ ಇಲ್ಲಿದೆ.

ಟೀಸರ್ ಅಂದ್ರೆ ಅದು ವಾವ್ ಅನ್ನುವಂತಿರಬೇಕು, ಇತ್ತೀಚಿನ ದಿನಗಳಲ್ಲಿ ಟೀಸರ್ ಗಳೇ ಚಿತ್ರದ ಹಣೆ ಬರಹವನ್ನು ಬರೆಯುತ್ತಿದೆ. ಹೀಗಾಗಿ ಸೀತಾರಾಮ ಕಲ್ಯಾಣದ ಟೀಸರ್ ನೋಡಿದರೆ ನಿಖಿಲ್ ಚಂದನವನದಲ್ಲಿ ನೆಲೆಯೂರುವ ಯಾವ ಲಕ್ಷಣಗಳು ಗೋಚರಿಸುತ್ತಿಲ್ಲ. ಹಾಗಂತ ಅಸಾಧ್ಯವೆಂದಲ್ಲ, ಒಂದಿಷ್ಟು ಬಾಡಿ ಲ್ಯಾಂಗ್ವೇಜ್, ಜನರೊಂದಿಗೆ ಬೆರೆಯುವ ಶೈಲಿ, ಹಾಗೂ ಜನರನ್ನು ನೋಡುವ ರೀತಿ ಬದಲಾಗಬೇಕು. ಆಗ ನಿಖಿಲ್ ಹಿರೋ ಆದರೂ ಆಗಬಹುದು.

ಹಾಗಾದರೆ ಸೀತಾರಾಮ ಕಲ್ಯಾಣ ಸೋಲು ಕಾಣುತ್ತದೆಯೇ,ಖಂಡಿತಾ ಇಲ್ಲ ಚಿಕ್ಕಣ್ಣ ಮತ್ತು ರಚಿತಾ ರಾಮ್ ದಡ ಸೇರಿಸುತ್ತಾರೆ ಬಿಡಿ. ಅವರಿಬ್ಬರಿಗೆ ದೊಡ್ಡ ಫ್ಯಾನ್ ಬಳಗವಿದೆ. ಹೀಗಾಗಿ ನಿಖಿಲ್ ಚಿತ್ರ ಯಶಸ್ವಿಯಾದರೆ ಅದರ ಕ್ರೆಡಿಟ್ ರಚಿತಾ ಮತ್ತು ಚಿಕ್ಕಣ್ಣ ಅವರಿಗೆ ಸಲ್ಲಬೇಕು.

Sarrainodu Teaser Allu Arjun

Nikhil Gowda

ಅಂದ ಹಾಗೇ ನಿಖಿಲ್ ಕುಮಾರಸ್ವಾಮಿಗೆ ಯುವರಾಜ ಎಂದು ಬಿರುದು ಕೊಟ್ಟವರು ಯಾರು.?

ಶೀರೂರು ಮಠಕ್ಕೆ ಸನ್ಯಾಸಿ ಆಯ್ಕೆ ಹೇಗೆ ನಡೆಯಲಿದೆ..?

ಉಡುಪಿ ಶೀರೂರು ಶ್ರೀಗಳ ಸಾವಿನ ಬಳಿಕ ನಡೆದ ಬೆಳವಣಿಗೆಗಳಿಗೆ ಲೆಕ್ಕವಿಲ್ಲ. ಹೈಕೋರ್ಟ್ ಹೇಳಿರುವಂತೆ ಪೊಲೀಸರ ತನಿಖೆಗಿಂತ ಮಾಧ್ಯಮಗಳ ತನಿಖೆಯೇ ವೇಗವಾಗಿದೆ.

ಆದರೆ ಈ ನಡುವೆ ಕೇಳಿ ಬಂದ ಸುದ್ದಿ  ನೂತನ ಪೀಠಾಧಿಪತಿಯ ಆಯ್ಕೆ. ಶೀರೂರು ಶ್ರೀಗಳ ಇದ್ದಾಗಲೇ ಉತ್ತರಾಧಿಕಾರಿಯ ಅಥವಾ ಕಿರಿಯ ಶ್ರೀಗಳ ನೇಮಕವಾಗಿದ್ದರೆ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಈಗ ಹೊಸದಾಗಿ ಪೀಠಾಧಿಪತಿಯ ಆಯ್ಕೆ ನಡೆಯಬೇಕಾಗಿದೆ.

ಹಾಗಂತ ಅಷ್ಟಮಠಗಳಿಗೆ ಸನ್ಯಾಸಿಯನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ. ಅದಕ್ಕೆಂದು ಪ್ರತ್ಯೇಕವಾದ ನಿಯಮಗಳಿದೆ. ಹಿಂದೆಲ್ಲಾ ಮಗು ಒಪ್ಪುತ್ತದೆಯೋ ಇಲ್ಲವೋ, ಪೋಷಕರು ಒಪ್ಪಿದರೆ ಮುಗಿಯಿತು ಎಂದು ಬಾಲಸನ್ಯಾಸ ಕ್ರಮ ಜಾರಿಯಲ್ಲಿತ್ತು. ಆದರೆ ಕಾನೂನು ಅದಕ್ಕೆ ಈಗ ಸಮ್ಮತಿಸುವುದಿಲ್ಲ. ಹೀಗಾಗಿ 18 ದಾಟಿದವರನ್ನೇ ಸ್ವೀಕರಿಸಬೇಕು.

ಸನ್ಯಾಸಿ ಯಾರು ಬೇಕಾದರೂ ಆಗುವ ಹಾಗಿಲ್ಲ. ಮುಖ್ಯವಾಗಿ ಸನ್ಯಾಸ ಸ್ವೀಕರಿಸುವವನ ಜಾತಕದಲ್ಲಿ ಸನ್ಯಾಸ ಯೋಗವಿರಬೇಕು.ಹೀಗಾಗಿಯೇ ಮಠದ ಸಂಪರ್ಕದಲ್ಲಿರುವ ಜ್ಯೋತಿಷಿಗಳು ತಮ್ಮ ಬಳಿ ಬರುವ ಜಾತಕಗಳಲ್ಲಿ ಸನ್ಯಾಸ ಯೋಗವಿದ್ದರೆ ಮಠಕ್ಕೆ ಮಾಹಿತಿ ರವಾನಿಸುತ್ತಾರೆ.

ಮಠದ ಹಿರಿಯ ಆಣತಿಯಂತೆ ಅಂತಹ ಬಾಲಕರ ಚಲನವಲನ ನಡೆ ನುಡಿಗಳ ಬಗ್ಗೆ ನಿಗಾವಹಿಸಲಾಗುತ್ತದೆ. ಮನೆತನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಕುಟುಂಬದ ವೃಕ್ಷ ನಕ್ಷೆಯನ್ನು ಜಾಲಾಡುತ್ತಾರೆ. ಕೊನೆಗೆ ಉತ್ತರಾಧಿಕಾರಿ ಬೇಕು ಅಂದಾಗ ಸನ್ಯಾಸಿಯಾಗಲು ಯೋಗ್ಯ ಅನ್ನಿಸುವ ಹುಡುಗನ ಕುಟುಂಬವನ್ನು ಸಂಪರ್ಕಿಸಲಾಗುತ್ತದೆ.

ಪಂಚಾಗ ತಿರುವಿ ಹಾಕಿ ದೀಕ್ಷೆ ಕೊಡಲಾಗುತ್ತದೆ. ನಂತರ ಸಂಸ್ಕೃತ ಪಾಠ, ಧಾರ್ಮಿಕ ಶಿಕ್ಷಣ ಶುರುವಾಗುತ್ತದೆ. ಸ್ನಾನ ಹೇಗಿರಬೇಕು, ಆಹಾರ ಕ್ರಮ ಹೇಗಿರಬೇಕು ಅನ್ನುವ ಚಿಕ್ಕ ಪುಟ್ಟ ವಿಷಯಗಳನ್ನು ಬೋಧಿಸಲಾಗುತ್ತದೆ.

ಮುಂದೆ ಇಡೀ ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಇರುವ ಕಾರಣ ದೊಡ್ಡ ದೊಡ್ಡ ಗ್ರಂಥಗಳ ಅಧ್ಯಯನ, ವೇದಾಂತ ಅಧ್ಯಯನ ಮಾಡಿಸಲಾಗುತ್ತದೆ. ಇಂದ್ರಿಯ ನಿಗ್ರಹದ ಕುರಿತು ತಿಳಿ ಹೇಳಲಾಗುತ್ತದೆ

ಇದಕ್ಕೂ ಮುನ್ನ ಸನ್ಯಾಸಿಗಳಿಗೆ ಪಿಂಡ ಪ್ರದಾನ ಭಾಗ್ಯವಿಲ್ಲದಿರುವ ಕಾರಣ ತಮಗೆ ತಾವೇ ಪಿಂಡ ಪ್ರದಾನ ಮಾಡಿಕೊಂಡು, ಹಿಂದಿನ ತಪ್ಪುಗಳಿಗೆ ಪ್ರಾಯಶ್ಚಿತ ಮಾಡಿಕೊಳ್ಳುತ್ತಾರೆ.

ಹರಿಯುವ ನಡು ನೀರಿನಲ್ಲಿ ತುಂಡು ಕೌಪೀನವನ್ನೂ ಉಟ್ಟು ನಿಂತು ಪ್ರಾರ್ಥನೆಯ ನಂತರ ಕೌಪೀನವನ್ನೂ ಹರಿಯುವ ನೀರಿನಲ್ಲಿ ಬಿಡಲಾಗುತ್ತದೆ. ಬಳಿಕ ಗುರು ನೀಡಿದ ಮತ್ತೊಂದು ಕೌಪೀನ ಉಟ್ಟು ದಡಕ್ಕೆ ಬರುತ್ತಾರೆ. ಅದುವರೆಗಿನ ಕಾಮಕ್ರೋಧಾದಿ, ಆರಿಷಡ್ವರ್ಗಗಳನ್ನು ಬಿಟ್ಟು ಬಿಡುವುದರ ಸೂಚಕವಿದು.

ಹಾಗಾದರೆ ಈ ಎಲ್ಲವನ್ನೂ ಪಾಲಿಸಿದ ಮಂದಿ ವಯಸ್ಸಿಗೆ ಬಂದಾಗ ಸನ್ಯಾಸಿಯಂತೆ ನಡೆದುಕೊಂಡರೆ ಅಂದರೆ ಉತ್ತರಿಸುವುದು ಕಷ್ಟ. ಅನೇಕ ಮಂದಿ ಪೀಠದಲ್ಲಿದ್ದುಕೊಂಡು ದಾರಿ ತಪ್ಪಿರುವುದಕ್ಕೆ ರಾಜ್ಯದ ಅನೇಕ ಘಟನೆಗಳು ಸಾಕ್ಷಿಯಾಗಿವೆ. ಇನ್ನು ಕೆಲವರು ಗುರು ಕೊಟ್ಟ ದೀಕ್ಷೆಯನ್ನು ಹಾಗೇ ಕಾಪಾಡಿಕೊಂಡು ಬಂದು ಸಮಾಜದಲ್ಲಿ ಗೌರವ ಉಳಿಸಿಕೊಂಡವರೂ ಇದ್ದಾರೆ.

ಏನೇ ಆದರೂ ಇಂದ್ರಿಯಗಳು ಅರಳುವ ಹೊತ್ತಿಗೆ ಮಠದ ಅಧಿಕಾರ, ಆಸ್ತಿಪಾಸ್ತಿಗಳ ಒಡೆತನ, ಬಹುಪರಾಕ್ ಹೇಳುವ ಬಳಗ, ದೃಷ್ಟಿಗೂ ನಿಲುಕದಂತೆ ಎದುರು ನಿಂತಿರುವ ಭಕ್ತರ ಸಾಲು ಕೆಲವೊಮ್ಮೆ ಹಾದಿ ತಪ್ಪಿಸುತ್ತದೆ. ಮತ್ತೆ ಕೆಲವೊಮ್ಮೆ ಜವಾಬ್ದಾರಿ ಹೆಚ್ಚಿಸುತ್ತದೆ. ಹೀಗಾಗಿ ಹಾದಿ ತಪ್ಪದೇ, ಸಮಾಜವನ್ನು ಮುನ್ನಡೆಸುವ ವ್ಯಕ್ತಿಗಳು ರಾಜ್ಯದ ಮಠದ ಅಂಗಳಕ್ಕೆ ಬರಬೇಕು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಕೇವಲ ಮೋದಿ ಘೋಷಣೆಯಾಗದೇ, ಮಠದ ಘೋಷಣೆಯೂ ಆದರೆ ಎಷ್ಟು ಚೆಂದ ಅಲ್ವ.

ಏನಿದು ರಚಿತಾ ಹೊಸ ಅವತಾರ…?

ಚಂದನವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ರಚಿತಾ ರಾಮ್ ಅವರಿಗೆ ಮುಟ್ಟಿದೆಲ್ಲಾ ಚಿನ್ನವಾಗುತ್ತಿದೆ. ಒಂದೆಡೆ ಕೈ ತುಂಬಾ ಚಿತ್ರಗಳ ಆಫರ್. ಮತ್ತೊಂದು ಕಡೆ ರಿಯಾಲಿಟಿ ಶೋ ನಲ್ಲೂ ಬ್ಯುಸಿಯಾಗಿದ್ದಾರೆ.

ಆಯೋಗ್ಯ, ಸೀತಾರಾಮ ಕಲ್ಯಾಣದ ಬೆನ್ನಲ್ಲೇ ಏಪ್ರಿಲ್ ಅನ್ನುವ ಹೊಸ ಪ್ರಾಜೆಕ್ಟ್ ಗೆ ರಚಿತಾ ಸಹಿ ಹಾಕಿದ್ದಾರೆ. ಈಗಾಗಲೇ ಫೋಟೋ ಶೂಟ್ ಮುಗಿಸಿರುವ ಚಿತ್ರ ತಂಡ ‘ಏಪ್ರಿಲ್ ‘ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದೆ.

ಮೊದಲ ಬಾರಿಗೆ ರಚಿತಾ ಹಿರೋಯಿನ್ ಸುತ್ತ ಹೆಣೆದಿರುವ ಕಥೆಯೊಂದರಲ್ಲಿ ನಟಿಸುತ್ತಿದ್ದಾರೆ. ಏಪ್ರಿಲ್​ ಡಿಸೋಜಾ ಅನ್ನೋ ಪಾತ್ರದಲ್ಲಿ ರಚಿತಾರಾಮ್​​ ಕಾಣಿಸಿಕೊಳ್ತಾ ಇದ್ದಾರೆ. ಈ ಮೂಲಕ ಇಲ್ಲಿಯವರೆಗೂ ಮಾಡಿರದ ಪಾತ್ರವೊಂದರಲ್ಲಿಲ್ಲಿ ನಟಿಸ್ತಾ ಇದ್ದಾರೆ. ನೈಜ ಘಟನೆಗಳನ್ನ ಆಧರಿಸಿ ಏಪ್ರಿಲ್​ ಚಿತ್ರದ ಕಥೆಯನ್ನ ಹೆಣೆಯಲಾಗಿದೆ.

ನವ ನಿರ್ದೇಶಕ ಸತ್ಯ ರಾಯಲ ಡಿಂಪಲ್​​ ಕ್ವೀನ್ ಗೆ ಡಿಫರೆಂಟ್ ಲುಕ್ ಕೊಟ್ಟಿದ್ದು, ಕಥೆಯನ್ನು ಅವರೇ ಬರೆದಿದ್ದಾರೆ. ನವರಸ ನಾಯಕ ಜಗ್ಗೇಶ್​ ಅಭಿನಯದ 8 ಎಂಎಂ ಸಿನಿಮಾ ನಿರ್ಮಿಸುತ್ತಿ ನಾರಾಯಣ ಬಾಬು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಏಪ್ರಿಲ್​ ಚಿತ್ರಕ್ಕೆ ಉದಿತ್​ ಹರಿದಾಸ್ ಸಂಗೀತ ನಿರ್ದೇಶಕರಾಗಿದ್ದು. ಅರ್ಜುನ್​ ಶೆಟ್ಟಿ ಕ್ಯಾಮರಾ ಹಿಡಿಯಲಿದ್ದಾರೆ. ಪ್ರತೀಕ್​ ಶೆಟ್ಟಿ ಎಡಿಟರ್ ಜವಾಬ್ದಾರಿ ಹೊತ್ತಿದ್ದಾರೆ.

38025502_1923713504353881_6974508048064708608_n

ಶೀರೂರು ಮಠದ ಭಕ್ತರಿಗೆ ಹೈಕೋರ್ಟ್ ನಲ್ಲಿ ಮುಖಭಂಗ

ಶೀರೂರು ಶ್ರೀಗಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ಪ್ರಸಾರಕ್ಕೆ ತಡೆ ನೀಡಬೇಕೆಂದು ಮಠದ ಭಕ್ತರು ಸಲ್ಲಿಸಿದ ಅರ್ಜಿಗೆ ಹಿನ್ನಡೆಯಾಗಿದೆ.

ಭಕ್ತರ ಕೋರಿಕೆಯಂತೆ ಮಧ್ಯಂತರ ತಡೆ ನೀಡಲು ಹೈಕೋರ್ಟ್‌ ನಿರಾಕರಿಸಿದೆ.

ಮಾಧ್ಯಮಗಳಲ್ಲಿ ಶೀರೂರು ಶ್ರೀಗಳ ಕುರಿತಂತೆ ಸುದ್ದಿ ಪ್ರಸಾರಕ್ಕೆ ತಡೆ ನೀಡಬೇಕು, ತನಿಖಾಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಬಾರದು ಎಂದು ಸೂಚಿಸಿ ಎಂದು ಶೀರೂರು ಮಠದ ಭಕ್ತರು ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌, ಸುದ್ದಿ ಪ್ರಸಾರಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ಈ ಕುರಿತ ವಿಚಾರಣೆಯನ್ನು ಆಗಸ್ಟ್2ಕ್ಕೆ ಮುಂದೂಡಿದೆ.

ಇದೇ ವೇಳೆ ಕೋರ್ಟ್ ಮಾಧ್ಯಮದವರು ಪೊಲೀಸರಿಗಿಂತ ವೇಗವಾಗಿದ್ದಾರೆ. ಅಂದೇ ತನಿಖೆ ನಡೆಸಿ ಶಿಕ್ಷೆಯನ್ನೂ ನೀಡುತ್ತಿದ್ದಾರೆ.ಪ್ರಕರಣ ಸಂಬಂಧ ಒಂದು ಕಡೆ ಪೊಲೀಸರಿಂದ ತನಿಖೆ ನಡೆಯುತ್ತಿದ್ದರೆ, ಮತ್ತೊಂದೆಡೆ ಮಾಧ್ಯಮಗಳಿಂದ ಪರ್ಯಾಯ ತನಿಖೆ ನಡೆಯುತ್ತಿದೆ ಎಂದಿದೆ.

ಶೀರೂರು ಭಕ್ತರಿಗೆ ಅದ್ಯಾಕೆ ಮಾಧ್ಯಮಗಳ ಮೇಲೆ ಕೋಪವೋ ಗೊತ್ತಿಲ್ಲ. ಗುರುಗಳ ಬಗ್ಗೆ ಕಪೋಕಲ್ಪಿತ ವರದಿಗಳು ಬರುತ್ತಿದೆ ಅನ್ನುವುದಾಗಿದ್ದರೆ ಮಾಧ್ಯಮ ಗೋಷ್ಟಿಯೊಂದನ್ನು ಕರೆದು ಸ್ಪಷ್ಟನೆ ಕೊಡಬಹುದಿತ್ತು. ಆದರೆ ನಾವೇ ಆ ಮಠದ ಭಕ್ತರು ಎಂದು ಕ್ಯಾಮಾರ ಮುಂದೆ ಬರುವ ತಾಕತ್ತು ಯಾರಿಗಿದೆ.

ನಿರೂಪಕ ಸ್ಥಾನಕ್ಕ ಭಡ್ತಿ ಪಡೆದ ಕಾಮಿಡಿ ಕಿಲಾಡಿ ಸೀಸನ್ 2ನ ಅಪ್ಪಣ್ಣ ಹಾಗೂ ಸೂರಜ್

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ  ಕಾಮಿಡಿ ಕಿಲಾಡಿ ಸೀಸನ್ 2 ನಲ್ಲಿ ಅಪ್ಪಣ್ಣ ಹಾಗೂ ಸೂರಜ್ ಧೂಳೆಬ್ಬಿಸಿದ್ದರು. ತಮ್ಮ ನಟನೆಯ ಮೂಲಕ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದರು. ತಮ್ಮ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದರು.

ಇದೀಗ ಇವರ ಸಾಧನೆ ತಕ್ಕ ಪ್ರತಿಫಲ ಸಂದಿದೆ. ಝೀ ಕನ್ನಡ ವಾಹಿನಿ ಇವರಿಬ್ಬರ ಫೇಸ್ ವ್ಯಾಲೂ ಬಳಸಿಕೊಳ್ಳಲು ನಿರ್ಧರಿಸಿದ್ದು, 10 ವರ್ಷಗಳ ಬಳಿಕ ಮತ್ತೆ ಪ್ರಸಾರವಾಗುತ್ತಿರುವ ಯಾರಿಗುಂಟು ಯಾರಿಗಿಲ್ಲ ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿ ಕೊಟ್ಟಿದೆ.

ತಮ್ಮ ನೈಜವಾದ ನಿರೂಪಣೆ ಹಾಗೂ ಚುರುಕಾದ ಚಟಾಕಿ ಮಾತುಗಳ ಮೂಲಕ ಕಾರ್ಯಕ್ರಮಕ್ಕೆ ಹೊಸ ಸ್ಪರ್ಶವನ್ನು ಇವರಿಬ್ಬರೂ ನೀಡಲಿದ್ದಾರೆ.

ಆಗಸ್ಟ್ 4 ರಿಂದ ಶನಿವಾರ ಮತ್ತು ಭಾನುವಾರ ಪ್ರಸಾರ ಆರಂಭಿಸಲಿರುವ ಕಾರ್ಯಕ್ರಮದ ಮೊದಲ ಎಪಿಸೋಡ್ ಗಳಲ್ಲಿ ಜೀ ಕನ್ನಡ ಪರಿವಾರದ ನಾಗಿಣಿ, ಕಮಲಿ, ಬ್ರಹ್ಮಗಂಟು, ಯಾರೇ ನೀ ಮೋಹಿನಿ, ಗಂಗಾ, ಜೋಡಿ ಹಕ್ಕಿ, ಮಹಾದೇವಿ, ಕಾಮಿಡಿ ಕಿಲಾಡಿಗಳು, ಸರಿಗಮಪ ಶೋಗಳ ಕಲಾವಿದರು ಪ್ರತ್ಯೇಕ ತಂಡಗಳಾಗಿ ಪಾಲು ಪಡೆಯಲಿದ್ದಾರೆ.

ಪ್ರತಿ ಸಂಚಿಕೆಯಲ್ಲಿ ಒಟ್ಟು 6 ಜನ ತಾರೆಯರಿರುತ್ತಾರೆ, 4 ಸುತ್ತುಗಳಿರುತ್ತವೆ.

ಕಳೆದ 2007ರಲ್ಲಿ ತನ್ನ ಮೊದಲ ಸರಣಿಯನ್ನು ಶುರುಮಾಡಿದ್ದ ಯಾರಿಗುಂಟು ಯಾರಿಗಿಲ್ಲ ಕಾರ್ಯಕ್ರಮ ಜನ ಮೆಚ್ಚುಗೆ ಪಡೆದಿತ್ತು.

ಈ ಹಿಂದೆ ಶ್ವೇತಾ ಚೆಂಗಪ್ಪ, ಗೌತಮಿ ಗೌಡ ಈ ಕಾರ್ಯಕ್ರಮವನ್ನು ಈ ಹಿಂದೆ ನಿರೂಪಿಸಿದ್ದರು. ತೆಲುಗಿನಲ್ಲೂ ಪ್ರಸಾರವಾದ ಇದೇ ಕಾರ್ಯಕ್ರಮವನ್ನು ಗೌತಮಿ ನಡೆಸಿಕೊಡುತ್ತಿದ್ದರು.ಈ ಹಿಂದಿನ ಸೀಸನ್ ಗಳಲ್ಲಿ ಮಹಿಳಾ ಸ್ಪರ್ಧಿಗಳಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶವಿತ್ತು. ಆದರೆ ಈ ಬಾರಿ ಪುರುಷರಿಗೂ ಯಾರಿಗುಂಟು ಯಾರಿಗಿಲ್ಲ ವೇದಿಕೆ ಅವಕಾಶ ಮಾಡಿಕೊಡಲಿದೆ.

ಮಂಚದಾಟ ಮುಗಿಸಿ ಪ್ರೇಮಿಯನ್ನೇ ಮಂಚಕ್ಕೆ ಕಟ್ಟಿ ಬೆಂಕಿ ಹಚ್ಚುವಂತದ್ದು ಏನಾಯ್ತು?

ತನ್ನ ಪ್ರಿಯಕರನನ್ನು ಮಂಚಕ್ಕೆ ಕಟ್ಟಿ ಬೆಂಕಿ ಹಚ್ಚಿ ಪ್ರಿಯತಮಯೇ ಸಾಯಿಸಿದ ಘಟನೆ  ಆಂಧ್ರ ವಿಜಯವಾಡದ ಪ್ರಕಾಶಂ ಜಿಲ್ಲೆಯ ಚೌಟಾಪಲ್ಲಿ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ಪೊಡಿಲಿ ನಿವಾಸಿ ಶೇಕ್ ಶಬ್ಬೀರ್ (32) ಎಂದು ಗುರುತಿಸಲಾಗಿದ್ದು, ಹತ್ಯೆಗೈದ ಬಳಿಕ ಆರೋಪಿ ಶಕೀರಾ (28) ಪೊಲೀಸ್ ಠಾಣೆಗೆ ಶರಣಾಗಿದ್ದಾಳೆ.

ಮರಿಪುಡಿ ಪೊಲೀಸ್ ಠಾಣೆಯಲ್ಲಿ ಶೇಕ್ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ, ಜೊತೆಗೆ ಶಕೀರಾ ಸಹಭಾಗಿತ್ವದಲ್ಲಿ ಕೋಳಿ ಫಾರಂ ವ್ಯವಹಾರ ನಡೆಸುತ್ತಿದ್ದ. ಕೋಳಿ ಫಾರಂ ಉದ್ಯೋಗದೊಂದಿಗೆ ಶಕೀರಾ ಮತ್ತು ಶೇರ್ ಶಬ್ಬೀರ್ ಅಕ್ರಮ ಸಂಬಂಧ ಹೊಂದಿದ್ದರು.

ಕೋಳಿ ಫಾರಂನಲ್ಲಿ ಇವರಿಬ್ಬರ ಬೇಟೆಯೂ ನಡೆಯುತ್ತಿತ್ತು.ಆದರೆ ಸಂಬಂಧದಲ್ಲಿ ಕಾಸಿನ ವ್ಯವಹಾರ ಸಮಸ್ಯೆ ತಂದೊಡ್ಡಿದ ಕಾರಣ 8 ತಿಂಗಳಿಂದ ಇಬ್ಬರಿಬ್ಬರ ನಡುವೆ ಕಲಹ ಪ್ರಾರಂಭಗೊಂಡಿತ್ತು. ಆದರೂ ದೈಹಿಕ ಸಂಬಂಧ ನಿಂತಿರಲಿಲ್ಲ.

ಹೀಗಾಗಿ ಶನಿವಾರ ಕೂಡಾ ಕೋಳಿ ಫಾರಂನಲ್ಲಿ ಭೇಟಿಯಾಗಲು ನಿರ್ಧರಿಸಿದ್ದರು. ಆದರೆ ಶಕೀರಾ ಐಡಿಯಾ ಹೂಡಿಯೇ ಬಂದಿದ್ದಳು. ಬರುವಾಗ ಶೇರ್ ಶಬ್ಬೀರ್ ನನ್ನು ಮುಗಿಸಲೇಬೇಕು ನಿರ್ಧರಿಸಿದ್ದಳು. ಹೀಗಾಗಿ ಶಕೀರಾ ಪೆಟ್ರೋಲ್ ಸಮೇತ ಅಲ್ಲಿಗೆ ಬಂದಿದ್ದಾಳೆ. ಶಬ್ಬೀರ್ ಜೊತಗೆ ದೈಹಿಕ ಸಂಪರ್ಕ ಬೆಳೆಸಿದ ನಂತರ ಅದೇ ಮಂಚಕ್ಕೆ ಆತನನ್ನು ಕಟ್ಟಿ,ಬೆಂಕಿ ಹಚ್ಚಿದ್ದಾಳೆ.

ಮುಂಜಾನೆ ಕೋಳಿ ಫಾರಂ ಕೆಲಸಕ್ಕೆ ಬಂದ ವೇಳೆ ಕಾರ್ಮಿಕರಿಗೆ ಹೆಣ ಕಂಡಿದೆ. ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಶಕೀರಾ ಪೊಲೀಸ್ ಠಾಣೆಗೆ ಬಂದು ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ.

ತುಂಡು ಬಟ್ಟೆಯಲ್ಲೇ ಬೆಲ್ಜಿಯಂನಲ್ಲಿ ಬಿಂದಾಸ್ ಹರ್ಷಿಕಾ

ಟುಮಾರೋ ಲ್ಯಾಂಡ್‌ ಜಗತ್ತಿನ ಜನಪ್ರಿಯ ಪಾರ್ಟಿ ತಾಣ ಇಲ್ಲಿಗೆ ಈಗ ನಟಿ ಹರ್ಷಿಕಾ ಪೂಣಚ್ಚ ಹೋಗಿದ್ದು  ಹೊಸ ಹೊಸ ಫೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಮನಸೋಯಿಚ್ಛೆ ಮೋಜು ಮಸ್ತಿ ಮಾಡೋ ತಾಣದಲ್ಲಿ ಪ್ರತಿ ವರ್ಷ ಜುಲೈ ಅಥವಾ ಆಗಸ್ಟ್‌ನಲ್ಲಿ ಇಲ್ಲೊಂದು ಸಂಗೀತ ಜಾತ್ರೆ ನಡೆಯುತ್ತದೆ.

ದೇಶ ವಿದೇಶದಿಂದ ಶ್ರೀಮಂತರೇ ಬರುವ ಈ ಮ್ಯೂಸಿಕ್ ಫೆಸ್ಟ್ ನಲ್ಲಿ ಭಾಗವಹಿಸಬೇಕಾದರೆ ಜನ ಬರುತ್ತಾರೆ, ಇಲ್ಲಿಗೆ ಹೋಗಬೇಕು ಎಂದರೆ ವರ್ಷದ ಮೊದ್ಲೇ ಟಿಕೆಟ್‌ ಬುಕ್‌ ಮಾಡ್ಬೇಕಾಗುತ್ತೆ.

ಇದೀಗ ಈ ಜಾಗಕ್ಕೆ ನಟಿ ಹರ್ಷಿಕಾ ಪೊಣಚ್ಚ ತಮ್ಮ ಸ್ನೇಹಿತರೊಂದಿಗೆ ಭೇಟಿ ನೀಡಿದ್ದು ವಿಶೇಷವಾಗಿ ಡ್ರೆಸ್‌ ಮಾಡಿಕೊಂಡು ಎಂಜಾಯ್‌ ಮಾಡುತ್ತಿರುವ ಫೋಟೋ ವೈರಲ್ ಆಗಿದೆ.

ಬಿಂದಾಸ್ ವಿಡಿಯೋ ನೋಡಲು ಲಿಂಕ್ ಕ್ಲಿಕ್ ಮಾಡಿ

ನೆದರ್‌ಲ್ಯಾಂಡ್‌ನ ಆಮ್​​ಸ್ಟರ್​​​ಡ್ಯಾಮ್‌ನಲ್ಲಿ ಇಳಿದು ರೈಲಿನ ಮುಖಾಂತರ ಟುಮಾರೋ ಲ್ಯಾಂಡ್‌ಗೆ ತಲುಪಬೇಕು.

ಮಸಾಜ್ ಪಾರ್ಲರ್ ಗೆ ಹೋಗ್ತಿರಾ….. ಈ ಸುದ್ದಿ ಓದಿ…. ಮೈಸೂರು ಮಾಂಸ ದಂಧೆಗೆ ಟ್ವಿಸ್ಟ್

ಖಚಿತ ಮಾಹಿತಿ ಮೇರೆಗೆ ಮೈಸೂರಿನ ವಿಜಯನಗರ ಪೊಲೀಸರು ಹಾಗೂ ಒಡನಾಡಿ ಸಂಸ್ಥೆಯವರು ಜಂಟಿಯಾಗಿ ಶನಿವಾರ ಸಂಜೆ ಎರಡು ಬ್ಯೂಟಿ ಪಾರ್ಲರ್ ಗಳ ಮೇಲೆ ದಾಳಿ ನಡೆಸಿದ್ದರು.

ಈ ವೇಳೆ 7 ಯುವತಿಯ ರಕ್ಷಣೆ ಮಾಡಿ, 5 ಮಂದಿ ಪುರುಷರನ್ನು ಬಂಧಿಸಲಾಗಿತ್ತು. ಜೊತೆಗೆ ಒಂದು ಕಾರು, ಮೊಬೈಲ್ ಹಾಗೂ ಮೂರು ಬೈಕ್ ವಶಪಡಿಸಿಕೊಳ್ಳಲಾಗಿತ್ತು.

ಈ ವೇಳೆ ಬ್ಯೂಟಿ ಪಾರ್ಲರ್ ಗಳಲ್ಲಿ ಬ್ಲೂಫಿಲ್ಮ್ ಚಿತ್ರೀಕರಿಸುತ್ತಿದ್ದರು ಎಂಬ ವಿಚಾರವೂ ಬೆಳಕಿಗೆ ಬಂದಿತ್ತು.

ಇದೀಗ ಇದೇ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಚಂದನ್ ಬ್ಯೂಟಿ ಪಾರ್ಲರ್ ಹಾಗೂ ಹೂಟಗಳ್ಳಿಯಲ್ಲಿರುವ ಐಶ್ವರ್ಯ ಬ್ಯೂಟಿ ಪಾರ್ಲರ್ ಮೇಲೆ ದಾಳಿ ನಡೆದಾಗ ಡೈರಿಯೊಂದು ಸಿಕ್ಕಿತ್ತು. ಆ ಡೈರಿಯಲ್ಲಿ ಹೈಟೆಕ್ ವೇಶ್ಯಾವಟಿಕೆ ದಂಧೆಗೆ ಪೊಲೀಸರ ಕುಮ್ಮಕ್ಕು ಇರುವ ಶಂಕೆ ವ್ಯಕ್ತವಾಗಿದೆ. ಡೈರಿಯಲ್ಲಿ ಸಿಸಿಬಿಗೆ 7 ಸಾವಿರ, ಪೇದೆಯೊಬ್ಬರಿಗೆ 10 ಸಾವಿರ ಹಣ ಕೊಟ್ಟಿರುವ ಬಗ್ಗೆ ಉಲ್ಲೇಖವಿದೆಯಂತೆ.

ಈ ನಡುವೆ ಬೆಂಗಳೂರಿನಲ್ಲಿ ಮತ್ತೊಂದು ಮಸಾಜ್ ದಂಧೆ ವ್ಯವಹಾರ ಬೆಳಕಿಗೆ ಬಂದಿದೆ. ಬೆಂಗಳೂರಿನ ಬಾಣಸವಾಡಿಯಲ್ಲಿ 15 ದಿನಗಳ ಹಿಂದೆ ಆಯುರ್ವೆದಿಕ್ ಮಸಾಜ್ ಮಾಡಿಸಿಕೊಳ್ಳಲು ಹೋಗಿದ್ದ ಓಲಾ ಕ್ಯಾಬ್ ಚಾಲಕ ಲೈಂಗಿಕ ಕ್ರಿಯೆ ನಡೆಸಲಿಲ್ಲ ಅನ್ನುವ ಕಾರಣಕ್ಕೆ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಈ ಸಂಬಂಧ ಕ್ಯಾಬ್ ಚಾಲಕ ನಂದಗುಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಸಾಜ್ ಗೆ ಹೋದ ಚಾಲಕ ಅದೊಂದು ಅಕ್ರಮ ವೇಶ್ಯಾವಾಟಿಕೆ ಕೇಂದ್ರ ಎಂದು ತಿಳಿಯುತ್ತಿದ್ದಂತೆ ವಾಪಾಸ್ ಬಂದೆ. ಆಗ ಅವರು ನನ್ನ ಮೊಬೈಲ್ ಕಿತ್ತುಕೊಂಡು ಹಣ ಕೊಡುವಂತೆ ಒತ್ತಾಯ ಮಾಡಿದರು. ಬಳಿಕ ಇಬ್ಬರು ಹುಡುಗರು ನನ್ನನ್ನು ಎಳೆದುಕೊಂಡು ಹೋಗಿ ಬಟ್ಟೆ ಬಿಚ್ಚಿಸಿ ಅಪರಿಚಿತ ಹುಡುಗಿಯ ಜೊತೆ ಮಲಗಿಸಿ ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡು ಇದನ್ನು ಯಾರಿಗಾದರೂ ತಿಳಿಸಿದರೆ ಟಿವಿ ಚಾನೆಲ್ ಗೆ ಕೊಡುತ್ತೇವೆ ಎಂದು ಬೆದರಿಸಿದರು ಅಂತಾ ಚಾಲಕ ದೂರಿನಲ್ಲಿ ತಿಳಿಸಿದ್ದಾರೆ.

ಯಾವ ಅಕ್ರಮ ಮಸಾಜ್ ಪಾರ್ಲರ್, ಮಾಂಸದಂಧೆಗಳು ಪೊಲೀಸರಿಗೆ ಗೊತ್ತಿಲ್ಲದೆ ನಡೆಯುವುದಿಲ್ಲ. ಆದರೆ ಬೇಲಿಯೇ ಎದ್ದು ಹೋಲ ಮೇಯ್ದರೆ ಏನು ಮಾಡೋದು. ಮುಖ್ಯಮಂತ್ರಿಗಳು ಈ ಬಗ್ಗೆ ಖಡಕ್ಕ್ ಸಂದೇಶ ರವಾನಿಸದಿದ್ದರೆ ಕಷ್ಟ. ಇನ್ನು ಮಸಾಜ್ ಗೆಂದು ಹೋಗುವ ಮಂದಿಯೂ ಎಚ್ಚರ ವಹಿಸುವುದು ಅಗತ್ಯ.

ರಾಷ್ಟ್ರವನ್ನು ಮುನ್ನಡೆಸುವುದು ಕ್ರಿಕೆಟ್​ ತಂಡವನ್ನು ಮುನ್ನಡೆಸಿದಷ್ಟು ಸುಲಭವಲ್ಲ

ಪಾಕಿಸ್ತಾನದ ಸಂಭಾವ್ಯ ಪ್ರಧಾನಿಯಾಗಿ ಹೊಮ್ಮಿರುವ ಇಮ್ರಾನ್ ಖಾನ್ ಗೆ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಕಾಂಗ್ರೆಸ್​ ಮುಖಂಡ ಮೊಹಮ್ಮದ್ ಅಜರುದ್ದೀನ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ಖಾನ್​ ಚುನಾವಣೆಯಲ್ಲೇ ಗೆಲುವು ಸಾಧಿಸುತ್ತಿದ್ದಂತೆಯೇ ಕ್ರಿಕೆಟ್​ ಲೋಕದ ಅನೇಕ ದಿಗ್ಗಜರು ಅಭಿನಂದನೆ ಸಲ್ಲಿಸಿ ಸಲಹೆ ನೀಡುತ್ತಿದ್ದಾರೆ. ಇದೀಗ ಖಾನ್​ ಸಮಕಾಲೀನರಾದ ಅಜರುದ್ದೀನ್ ರಾಷ್ಟ್ರ ಮತ್ತು ಕ್ರಿಕೆಟ್​ ತಂಡವನ್ನು ಮುನ್ನಡೆಸುವುದರಲ್ಲಿ ಬಹುದೊಡ್ಡ ವ್ಯತ್ಯಾಸವಿದೆ ಎಂದು ಸಲಹೆ ನೀಡಿದ್ದಾರೆ.

ಪಾಕ್​ ಕ್ರಿಕೆಟ್​ ತಂಡದ ನಾಯಕರಾಗಿ ಖಾನ್​ ಮೈದಾನದಲ್ಲಿ ವೈಯುಕ್ತಿಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಪಾಕ್​ ಪ್ರಧಾನಿಯಾದ ನಂತರ ಅಂತಹ ನಿರ್ಧಾರಗಳನ್ನು ಮಾತ್ರ ಖಾನ್​ ತೆಗೆದುಕೊಳ್ಳಬೇಕು ಎಂದು ಅಜರ್ ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರ ಮುನ್ನಡೆ ಹಾಗೂ ಕ್ರಿಕೆಟ್​ ತಂಡ ಮುನ್ನಡೆ ಎಂಬುದು ಎರಡು ವಿಭಿನ್ನ ವಿಷಯಗಳು. ಖಾನ್​ ಏನು ಮಾಡುತ್ತಾರೆ ಎಂಬುದನ್ನು ನಾವು ನೋಡಬೇಕಾಗಿದೆ ಎಂದು ಹೇಳಿರುವ ಅಜರ್ ಖಾನ್​ ಪ್ರಧಾನಿಯಾಗಿ ಇಂಡೋ-ಪಾಕ್​ ಸಂಬಂಧದ ಬಗ್ಗೆ ಮಾತನಾಡಲು ಅವಕಾಶ ಸಿಕ್ಕರೆ ಎದು ಕೇಳಲಾದ ಪ್ರಶ್ನೆಗೆ ಉತ್ತರಿಸಿ “ಪಾಕ್​ನೊಳಗೆ ಅನೇಕ ಸಮಸ್ಯೆಗಳಿವೆ. ಮೊದಲು ಅದನ್ನು ತಿಳಿದುಕೊಂಡು ಬಗೆಹರಿಸಲಿ. ಆನಂತರ ಇತರೆ ಸಮಸ್ಯೆಗಳ ಕಡೆ ನೋಡಲಿ” ಎಂದರು