Advertisements

ನೆರೆಗಿಲ್ಲ ಪರಿಹಾರ : ಕುಮಾರಸ್ವಾಮಿ ಮೋದಿಯನ್ನು ಹೊಗಳಿದ ರಹಸ್ಯವೇನು….?

ನೆರೆ ಪರಿಹಾರ ವಿಚಾರದಲ್ಲಿ ಮಾಜಿ ಸಚಿವ ಕುಮಾರಸ್ವಾಮಿ ಆಡಿರುವ ಮಾತುಗಳು ಗಂಭೀರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಅವರು ಇಂದು ಹೇಳಿರುವ ಎಲ್ಲಾ ಮಾತುಗಳು ಸತ್ಯಕ್ಕೆ ಹತ್ತಿರವಾಗಿದ್ದು, ಯಡಿಯೂರಪ್ಪ ಸಿಎಂ ಆಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರ ವರ್ತನೆಯಲ್ಲಿ ಆಗಿರುವ ಬದಲಾವಣೆ ಯಕ್ಷ ಪ್ರಶ್ನೆಯಾಗಿ ಬಿಟ್ಟಿದೆ.

ಇಂದು ಮಂಡ್ಯದಲ್ಲಿ ಮಾತನಾಡಿರುವ ಕುಮಾರಸ್ವಾಮಿ, ನಾನು ಖಜಾನೆ ಖಾಲಿ ಮಾಡಿಲ್ಲ. ಎಷ್ಟು ಕೋಟಿ ಇಟ್ಟು ಬಂದಿದ್ದೇನೆ ಅನ್ನುವುದನ್ನು ಯಡಿಯೂರಪ್ಪ ಅವರೇ ಹೇಳಲಿ ಎಂದು ಸವಾಲು ಹಾಕಿದ್ದಾರೆ.

ಕರ್ನಾಟಕದ ಖಜಾನೆಗೆ ಎಂದಿಗೂ ದರಿದ್ರ ಬರೋದಿಲ್ಲ ಎಂದು ಇದೇ ವೇಳೆ ಹೇಳಿದ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಪರ ಬ್ಯಾಟಿಂಗ್ ಮಾಡುತ್ತಲೇ ಯಡಿಯೂರಪ್ಪ ಅವರನ್ನು ಟೀಕಿಸಿದ್ದಾರೆ.

ನನ್ನ ಅವಧಿಯಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವವಾದ ವೇಳೆ, ಪ್ರಧಾನಿಯವರೇ ಕರೆ ಮಾಡಿ ಕಾಳಜಿ ತೋರಿದ್ದರು. ರಾಜ್ಯದ ಪರಿಸ್ಥಿತಿ ಏನು ಅನ್ನುವ ಕುರಿತಂತೆ ವಿವರಣೆ ಬಯಸಿದ್ದರು. ಮಾತ್ರವಲ್ಲದೆ ಏನೇ ಸಹಾಯ ಬೇಕಿದ್ದರೂ ಕರೆ ಮಾಡಿ ಎಂದು ಹೇಳಿದ್ದರು.

ಪ್ರತೀ ಸಲ ದೆಹಲಿಗೆ ಹೋದ ವೇಳೆ ಕೇಳಿದಾಗಲೆಲ್ಲಾ ಸಮಯ ಕೊಟ್ಟಿದ್ದಾರೆ.  ಆ ವೇಳೆ ಮುಕ್ತವಾಗಿ ಚರ್ಚೆ ನಡೆಸುತ್ತಿದ್ದ ಪ್ರಧಾನಿಗಳು ನನಗೆ ಸಂಪೂರ್ಣ ಸಹಕಾರ  ಕೊಟ್ಟಿದ್ದಾರೆ. ಒಟ್ಟು 7 ಸವ ಮೋದಿಯವರನ್ನು ಭೇಟಿಯಾಗಿದ್ದೇನೆ ಎಂದು ಮೋದಿಯವರನ್ನು ಕುಮಾರಸ್ವಾಮಿ ಹೊಗಳಿದ್ದಾರೆ.

ಇದೇ ವೇಳೆ ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಇವರ ನಡವಳಿಕೆ ಕುರಿತಂತೆ ಪ್ರಧಾನಿಗಳು ನಿತ್ಯ ವರದಿ ತರಿಸಿಕೊಳ್ಳುತ್ತಿದ್ದಾರೆ. ಈಗಲಾದ್ರು, ಮೋದಿಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ, ತಪ್ಪಾಗಿದೆ ಎಂದು ಅವರ ಕೈಕಾಲು ಹಿಡಿಯಿರಿ ಎಂದು ಯಡಿಯೂರಪ್ಪ ಅವರಿಗೆ ಕುಮಾರಸ್ವಾಮಿ ಸಲಹೆ ಕೊಟ್ಟಿದ್ದಾರೆ.

ನನಗೆ ಕೊಟ್ಟಿರುವ ಸಹಕಾರವನ್ನು ಇವರಿಗೆ ಕೊಡುತ್ತಿಲ್ಲ ಅಂದ್ರೆ ಇವರಲ್ಲೆ ಸಮಸ್ಯೆ ಇದೆ ಅನ್ನುವ ಮೂಲಕ ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಳಂಭ ಮಾಡುತ್ತಿರುವುದ್ಯಾಕೆ ಅನ್ನುವುದಕ್ಕೆ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ.

Advertisements

ಪಲಾಯನವಾದಿ ತೇಜಸ್ವಿ ಸೂರ್ಯ : ನೆರೆ ಪರಿಹಾರ ಬಗ್ಗೆ ಮಾತನಾಡೋದಿಲ್ವಂತೆ ಯುವ ಸಂಸದ

ನೆರೆ ಪರಿಹಾರ ವಿಳಂಭ ಇದೀಗ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈಗಾಗಲೇ ಆಗಿರುವ ಅನ್ಯಾಯ ಕುರಿತಂತೆ ಮಾತನಾಡುವವರಿಗೆ ದೇಶ ದ್ರೋಹಿ ಅನ್ನುವ ಪಟ್ಟ ಕಟ್ಟಲಾಗುತ್ತಿದೆ. ಇನ್ನು ಪರಿಹಾರ ಕೊಡಿಸಿ ಸ್ವಾಮಿ ಅಂದ ನಾಯಕರಿಗೆ ಬಿಜೆಪಿ ಶೋಕಾಸ್ ನೋಟಿಸ್ ಕೊಡುತ್ತಿದೆ.

ಈ ನಡುವೆ ಬೆಂಗಳೂರಿನಲ್ಲಿ ಮಾಧ್ಯಮದವರು ನೆರೆ ಪರಿಹಾರ ಕುರಿತಂತೆ ಸಂಸದ ತೇಜಸ್ವಿ ಸೂರ್ಯ ಅವರನ್ನು ಪ್ರಶ್ನಿಸಿದರೆ, ನೆರೆ ಪರಿಹಾರದ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಅಂದಿದ್ದಾರೆ.

ಜಯನಗರದಲ್ಲಿ ನಡೆದ ಪ್ಲಾಸ್ಟಿಕ್ ಮುಕ್ತ ಅಭಿಯಾನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಮುಂದಾದ ಅವರು, ನಾನು ನೆರೆ ಪರಿಹಾರದ ಬಗ್ಗೆ ಮಾತನಾಡುವುದಿಲ್ಲ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಜೊತೆ ಫೋನಿನಲ್ಲಿ ಮಾತಾಡಿದ್ದೇವೆ. ಮತ್ತೆ ಅ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು  ಪಲಾಯನವಾದದ ಮೊರೆ ಹೋಗಿದ್ದಾರೆ.

ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ಕೇಳಿದ್ರೆ ಅವರು ನಮ್ಮ ಹಿರಿಯರು. ಅವರ ಅಭಿಪ್ರಾಯ ಹೇಳಿದ್ದಾರೆ. ಒಟ್ಟಾಗಿ ಕೆಲಸ ಮಾಡುತ್ತೇವೆ ಆಂದಿದ್ದಾರೆ ತೇಜಸ್ವಿ ಸೂರ್ಯ.

ಪರಿಸ್ಥಿತಿ ನೋಡಿದರೆ ನೆರೆ ಪರಿಹಾರ ಕುರಿತಂತೆ ಮಾತನಾಡಬೇಡಿ ಎಂದು ಬಿಜೆಪಿ ಅಪ್ಪಣೆ ಹೊರಡಿಸಿರುವಂತಿದೆ.

ಸಂತ್ರಸ್ಥರ ಪರ ಮಾತನಾಡಿದ್ದೇ ತಪ್ಪಾಯ್ತು…. ಬಿಜೆಪಿ ಶಾಸಕ ಯತ್ನಾಳ್ ಗೆ ಶೋಕಾಸ್ ನೋಟಿಸ್

ಕೇಳಿದ್ದು ಪರಿಹಾರ….ಕೊಟ್ಟಿದ್ದು ನೋಟಿಸ್

ಅದ್ಯಾಕೋ ರಾಜ್ಯದಲ್ಲಿ ಬಿಜೆಪಿ ಗ್ರಹಚಾರ ಕೆಟ್ಟಿರುವಂತೆ ಕಾಣುತ್ತಿದೆ. ಬಲಿಷ್ಟ ಭಾರತಕ್ಕಾಗಿ ಎಂದು ಬಿಜೆಪಿ ಮತ ಕೊಟ್ಟವರೇ ಇದೀಗ ಪಕ್ಷ ವಿರುದ್ಧ ತಿರುಗಿ ಬೀಳುವ ದಿನ ದೂರವಿಲ್ಲ.

ಕೇಂದ್ರ ಸರ್ಕಾರ ಕರ್ನಾಟಕದ ಪಕ್ಕ ತೋರುತ್ತಿರುವ ಅಸಡ್ಡೆ ಕಾರಣದಿಂದ ಬಿಜೆಪಿ ಕಾರ್ಯಕರ್ತರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷದ ನಾಯಕರು ಮೋದಿ ಮತ್ತು ಅಮಿತ್ ಶಾ ವಿರುದ್ಧ ಮಾತನಾಡಿದರೆ ಎಲ್ಲಿ ನಾಳೆ ತೊಂದರೆಯಾಗುತ್ತದೆಯೋ ಎಂದು ಒಳಗೊಳಗೆ ಕುದಿಯುತ್ತಿದ್ದಾರೆ.

ಆದರೂ ಧೈರ್ಯ ಮಾಡಿ ಮಾತನಾಡಿದ ಶಾಸಕ ಬಸನಗೌಡ ಯತ್ನಾಳ್ ಅವರಿಗೆ ಇದೀಗ ರಾಜ್ಯ ಬಿಜೆಪಿ ಶೋಕಾಸ್ ನೋಟಿಸ್ ರವಾನಿಸಿದೆ.

ಬಿಜೆಪಿ ವಿರುದ್ಧ ಜನರನ್ನು ಪ್ರಚೋದಿಸುತ್ತಿದ್ದೀರಿ, ಸುಳ್ಳು ಸುದ್ದಿ ಹಬ್ಬಿಸುತ್ತಿದ್ದೀರಿ, ಹೀಗಾಗಿ  10 ದಿನದಲ್ಲಿ ಉತ್ತರಿಸುವಂತೆ ಶೋಕಾಸ್ ನೋಟಿಸ್ ನಲ್ಲಿ ತಾಕೀತು ಮಾಡಲಾಗಿದೆ. ಒಂದು ವೇಳೆ ಉತ್ತರಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಇನ್ನು ಶೋಕಾಸ್ ನೋಟಿಸ್ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಯತ್ನಾಳ್, ಕೇಂದ್ರದ ಬಳಿ ನೆರವು ಕೇಳುವುದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.

ಜನರ ಪರ ಮಾತನಾಡಿದ್ದೇನೆ ಹೊರತು ಸ್ವಾರ್ಥಕ್ಕಾಗಿ ಮಾತನಾಡಿಲ್ಲ. ನಾನು ಪಕ್ಷ ವಿರೋಧಿ ಚಟುವಟಿಯಕೆನ್ನೂ ಮಾಡಿಲ್ಲ. ಜನರ ಸಲುವಾಗಿ ನಾನು ದನಿ ಎತ್ತಿದ್ದೇನೆ. ರಾಷ್ಟ್ರೀಯ ನಾಯಕರ ಗಮನ ಸೆಳೆಯುವುದು ನನ್ನ ಉದ್ದೇಶವಾಗಿತ್ತು ಅಂದಿದ್ದಾರೆ.

ಬಂದಿರುವ ನೋಟಿಸ್ ಗೆ ತಕ್ಕ ಉತ್ತರ ಕೊಡುವುದಾಗಿ ಹೇಳಿರುವ ಯತ್ನಾಳ್. ಹಿಂದೆ ನಾನು ವಾಜಪೇಯಿ ಸರ್ಕಾರದ ಅವಧಿಯಲ್ಲೂ ಜನರಿಗೆ ಅನ್ಯಾಯವಾದ ವೇಳೆ ದನಿ ಎತ್ತಿದ್ದೇನೆ. ಆಗ್ಲೂ ವಾಜಪೇಯಿ ಮುಂದೆ ನನ್ನ ನಿಲ್ಲಿಸಲಾಗಿತ್ತು. ಆಗ ಅವರಿಗೆ ನನ್ನ ಕಾಳಜಿ ಅರ್ಥವಾಗಿತ್ತು. ಇದೀಗ  ನಾನು ಜನರ ಪರವಾಗಿ ಮಾತನಾಡಿದ್ದೇನೆ. ಇದಕ್ಕೂ ಪ್ರಧಾನಿ ಮೋದಿಯವರು ಭೇಷ್ ಅನ್ನುತ್ತಾರೆ ಎಂದು ಬಾವುಕರಾಗಿಯೇ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.

ಯತ್ನಾಳ್ ಹೇಳಿದ್ದೇನು…?

ಒಬ್ಬರು ಹುಬ್ಬಳ್ಳಿಯಲ್ಲಿ ಮತ್ತೊಬ್ಬರು ಬೆಂಗಳೂರಿನಲ್ಲಿ ಕುಳಿತಿದ್ದೀರಿ? ದೆಹಲಿಗೆ ಹೋಗಿ ಪ್ರಧಾನಿ ಭೇಟಿಗೆ ಸಮಯ ನಿಗದಿ ಮಾಡಿ.ಸಂಸದರು ತಮ್ಮ ತಾಕತ್ತು ಪ್ರದರ್ಶಿಸಲಿ.ಕೇಂದ್ರದಿಂದ 10,000 ಕೋಟಿ ಪರಿಹಾರ ತರಲಿ.

ನೆರೆ ಸಂತ್ರಸ್ಥರ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಟ್ಟಾ ಅಭಿಮಾನಿಗಳೂ ಸಹ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಚಕ್ರವರ್ತಿ ಸೂಲಿಬೆಲೆ ಹೇಳಿರುವುದಲ್ಲಿ ತಪ್ಪೇನಿಲ್ಲ? ನಮ್ಮ 25 ಜನ ಸಂಸದರು ಮೊದಲು ಮತದಾರರಿಗೆ ನಿಷ್ಠರಾಗಿರಲಿ. ಇದು ಪ್ರಜಾತಂತ್ರ ದೇಶ. ಕೇಂದ್ರ ಸಚಿವರು ಕೇವಲ ತಮ್ಮ ಕ್ಷೇತ್ರಗಳಿಗೆ ಸೀಮಿತರಾಗದೇ ಪ್ರವಾಹ ಪೀಡಿತರ ಸಮಸ್ಯೆಗೆ ಸ್ಪಂದಿಸಲಿ ಎಂದು ಅವರು ಸಂಸದರಿಗೆ ಮನವಿ ಮಾಡಿದ್ದರು.

ಸಚಿವರಾದ ಪ್ರಹ್ಲಾದ ಜೋಶಿ,ಸದಾನಂದಗೌಡ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಪ್ರಧಾನಿ ಅವರ ಭೇಟಿಗೆ ಸಮಯಾವಕಾ ಶ ಕೊಡಿಸಿ ಪರಿಹಾರ ಒದಗಿಸಲು ಸಹಾಯ ಮಾಡಬೇಕೆಂದು ಅವರು ಕೇಂದ್ರ ಸಚಿವರನ್ನು ಆಗ್ರಹಿಸಿದರು.

ನನ್ನ ಮಾತಿಗೆ ಈಗ್ಲೂ ಬದ್ಧ..ಯಾರಿಗಾದರೂ ನೋವಾಗಿದ್ರೆ ಮಾತ್ರ ಕ್ಷಮೆ ಕೇಳುತ್ತೇನೆ – ಡಿವಿಎಸ್

ಚಕ್ರವರ್ತಿ ಸೂಲಿಬೆಲೆಯ ಕ್ಷಮೆಯಾಚಿಯಿಸಿದ ಸದಾನಂದಗೌಡ ಇದು ಕನ್ನಡದ ವಾಹಿನಿಯೊಂದರಲ್ಲಿ ಪ್ರಸಾರವಾದ ಸುದ್ದಿ. ಆದರೆ ಸದಾನಂದಗೌಡ ಅವರು ಸೂಲಿಬೆಲೆಯವರ ಕ್ಷಮೆಯಾಚಿಸಿಲ್ಲ.

ಬದಲಾಗಿ ತಾವು ಹೇಳಿದ ಮಾತಿಗೆ ತಾವು ಈಗ್ಲೂ ಬದ್ಧ. ತಾವು ಆಡಿರುವ ಮಾತನ್ನು ಹಿಂದಕ್ಕೆ ಪಡೆಯುವುದಿಲ್ಲ.  ಯಾರಿಗಾದರೂ ಮನಸ್ಸಿಗೆ ನೋವಾಗಿದ್ರೆ ದಯವಿಟ್ಟು ಕ್ಷಮಿಸಿ ಅನ್ನುತ್ತೇನೆ. ನನ್ನ ಮನಸ್ಸಿನ ಭಾವನೆಯನ್ನು ನಾನು ವ್ಯಕ್ತಪಡಿಸಿದ್ದೇನೆ. ನಾನು ತಪ್ಪು ಮಾಡಿಲ್ಲ ಅನ್ನುವುದು ನನಗೆ ಗೊತ್ತಿದೆ ಅನ್ನುವ ಮೂಲಕ  ದೇಶದ್ರೋಹದ ಹೇಳಿಕೆಯನ್ನು ಸದಾನಂದಗೌಡರು ಸಮರ್ಥಿಸಿಕೊಂಡಿದ್ದಾರೆ.

ಅವರು ನನ್ನ ಅಮ್ಮನನ್ನು ಕಂಡ ಕೂಡಲೇ ತಬ್ಬಿಕೊಳ್ಳುತ್ತಾರೆ : ಗಂಡನ ರಹಸ್ಯ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕ ಚೋಪ್ರಾ ಗಂಡ ನಿಕ್ ಜೋನ್ಸ್  ಅವರ ಅತ್ತೆಯ ಕಾಲಿಗೆರಗಿ ನಮಸ್ಕರಿಸುವುದಿಲ್ಲವಂತೆ, ಈ ವಿಷಯವನ್ನು ಪ್ರಿಯಾಂಕ ಚೋಪ್ರಾ ಅವರೇ ಬಹಿರಂಗಪಡಿಸಿದ್ದಾರೆ.

ಕಪಿಲ್​ ಶರ್ಮಾ ನಡೆಸಿಕೊಡುವ ಪ್ರಸಿದ್ಧ ಟಾಕ್​ ಶೋ ಕಪಿಲ್​ ಶರ್ಮಾ ಶೋನಲ್ಲಿ ಭಾಗವಹಿಸಿದ ನಟಿ ಪ್ರಿಯಾಂಕಾ ಛೋಪ್ರಾ ತಮ್ಮ ಮದುವೆ, ಮದುವೆ ನಂತರದ ಜೀವನ, ಅತ್ತೆ  ಹೀಗೆ ಹಲವು ಖಾಸಗಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಶೋದಲ್ಲಿ ಶರ್ಮಾ ಕೇಳಿದ ಕಾಲೆಳೆಯುವ ಪ್ರಶ್ನೆಗಳಿಗೆ ಹಾಸ್ಯಮಯವಾಗಿಯೇ ಉತ್ತರಿಸಿದ ಚೋಪ್ರಾ ಶೋವನ್ನು ಎಂಜಾಯ್ ಮಾಡಿದ್ದಾರೆ.

ಈ ಪೈಕಿ ನಿಮ್ಮ ಪತಿ ನಿಕ್​ ಜೋನಾಸ್ ನಿಮ್ಮ ತಾಯಿಯನ್ನು ಕಂಡಕೂಡಲೇ ಹೇಗೆ ವಿಶ್​ ಮಾಡುತ್ತಾರೆ? ಕಾಲು ಮುಟ್ಟಿ ನಮಸ್ಕರಿಸುತ್ತಾರೋ, ಅಥವಾ ಫ್ಲೈಯಿಂಗ್​ ಕಿಸ್​ ಕೊಡುತ್ತಾರೋ ಎಂದು ಕಪಿಲ್ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಚೋಪ್ರಾ ಎರಡೂ ಅಲ್ಲ. ಅವರು ನನ್ನ ಅಮ್ಮನನ್ನು ಕಂಡ ಕೂಡಲೇ ಅವರು  ತಬ್ಬಿಕೊಳ್ಳುತ್ತಾರೆ ಎಂದು ಉತ್ತರಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ತಮ್ಮ ಮುಂದಿನ ದಿ ಸ್ಕೈ ಈಸ್​ ಪಿಂಕ್​ ಸಿನಿಮಾದ ಪ್ರಮೋಶನ್​ಗಾಗಿ ಕಪಿಲ್​ ಶರ್ಮಾ ಶೋನಲ್ಲಿ ಭಾಗವಹಿಸಿದ್ದರು.

ಜೆಡಿಎಸ್ ಗೆ ಒಕ್ಕಲಿಗ ಸಮುದಾಯವೊಂದೇ ಓಟ್ ಬ್ಯಾಂಕ್ : ವಿಜಯೇಂದ್ರ

ಜೆಡಿಎಸ್ ಪಕ್ಷ ಒಕ್ಕಲಿಗ ಸಮುದಾಯವನ್ನು ಕೇವಲ ವೋಟ್​ ಬ್ಯಾಂಕಾಗಿ ಬಳಸಿಕೊಂಡು ರಾಜಕೀಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್​​. ಯಡಿಯೂರಪ್ಪ ಪುತ್ರ ಬಿ. ವೈ ವಿಜಯೇಂದ್ರ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೆ.ಆರ್​ ಪೇಟೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ಒಕ್ಕಲಿಗ ನಾಯಕರೆನಿಸಿರುವ ಕುಮಾರಸ್ವಾಮಿ, ಒಕ್ಕಲಿಗ ಸಮಾಜವನ್ನು ಕೇವಲ ಓಟ್ ಬ್ಯಾಂಕ್ ಆಗಷ್ಟೇ ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಜಾತ್ಯಾತೀತ ಜನತಾದಳ ನಿರ್ನಾಮವಾಗಿದೆ. ಬೆರಳೆಣಿಕೆಯಷ್ಟು ಶಾಸಕರು ಮಾತ್ರ ಜೆಡಿಎಸ್​​ನಲ್ಲಿ ಉಳಿದುಕೊಂಡಿದ್ದಾರೆ. ಅವರು ಯಾವಾಗ ಜೆಡಿಎಸ್ ಹಾಗೂ ಕುಮಾರಸ್ವಾಮಿಗೆ ಗುಡ್​​ ಬೈ ಹೇಳುತ್ತಾರೋ ಗೊತ್ತಿಲ್ಲ. ರಾಜ್ಯ ಮುಖ್ಯಮಂತ್ರಿಯಾಗಿ ಓರ್ವ ಹೆಣ್ಣು ಮಗಳ ಮುಂದೆ ತನ್ನ ಪುತ್ರನನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ. ಅಧಿಕಾರದ‌ ಮದದಿಂದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಗೆಲ್ಲುತ್ತೆವೆ ಎಂದು ಬೀಗುತ್ತಿದ್ದರು.

ಇನ್ನು ಯಡಿಯೂರಪ್ಪ ಅವರನ್ನು ಒಕ್ಕಲಿಗ ವಿರೋಧಿ ಎಂದು ಬಿಂಬಿಸಲಾಗುತ್ತದೆ. ಅದೆಲ್ಲ ಶುದ್ಧ ಸುಳ್ಳು. ಒಕ್ಕಲಿಗ ಸಮುದಾಯಕ್ಕೆ ಸೇರಿದ ಸದಾನಂದ ಗೌಡರನ್ನು ರಾಜ್ಯದ ಮುಖ್ಯಮಂತ್ರಿ ಪಟ್ಟದ ಮೇಲೆ ಕೂರಿಸಿದ್ದು, ಅದೇ ಬಿಎಸ್​ ಯಡಿಯೂರಪ್ಪ. ಎಲ್ಲ ಸಮುದಾಯದವರೂ ಯಡಿಯೂರಪ್ಪ ಅವರನ್ನು ಒಪ್ಪಿದ್ದಾರೆ ಎಂದು ಬಿಎಸ್​​ವೈಗೆ ಒಕ್ಕಲಿಗ ವಿರೋಧಿ ಹಣೆಪಟ್ಟಿ ಕಟ್ಟುತ್ತಿರುವವರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ವಿಜಯದಶಮಿಯಂದು ಭಾರತದ ಸೇನೆ ಸೇರಲಿದೆ ರಫೇಲ್

ಫ್ರಾನ್ಸ್ ನಿಂದ ಭಾರತಕ್ಕೆ ಪೂರೈಕೆಯಾಗಬೇಕಾದ 36 ಯುದ್ಧ ವಿಮಾನಗಳ ಪೈಕಿ ಮೊದಲ ರಫೇಲ್ ಯುದ್ಧ ವಿಮಾನವು ವಿಜಯ ದಶಮಿ ದಿನವಾದ ಅ.8 ರಂದು ಭಾರತಕ್ಕೆ ಹಸ್ತಾಂತರವಾಗಲಿದೆ.

ಅ.8ರಂದು ಫ್ರಾನ್ಸ್ ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೊದಲ ಬಾರಿಗೆ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಲಿದ್ದಾರೆಂದು ಹೇಳಲಾಗುತ್ತಿದೆ.

ಡಸಾಲ್ಟ್ ಏವಿಯೇಷನ್ ನಿಂದ ಭಾರತಕ್ಕೆ ಪೂರೈಕೆಯಾಗಬೇಕಿರುವ 36 ಯುದ್ಧ ವಿಮಾನಗಳ ಪೈಕಿ, ಮೊದಲ ಯುದ್ಧ ವಿಮಾನವನ್ನು ಸ್ವೀಕರಿಸುವ ನಿಟ್ಟಿನಲ್ಲಿ ರಾಜನಾಥ್ ಸಿಂದ್ ಅವರು, 7 ರಿಂದ 3 ದಿನಗಳ ಕಾಲ ಪ್ಯಾರಿಸ್ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲದೆ, ಭಾರತೀಯ ವಾಯುಸೇನೆಯ ಸಂಸ್ಥಾಪನಾ ದಿನವಾದ ಅ.8 ರಂದು ಯುದ್ಧ ವಿಮಾನ ಹಸ್ತಾಂತರ ನಡೆಯಲಿದೆ.

ನಾನು ಉಗುದೆ…ಒರಸ್ಕೊಂಡ್ರೀ…ಈಗ ಜನ ಕ್ಯಾಕರ್ಸ್ಕೊಂಡ್ ಉಗೀತಾ ಇದಾರೆ…ಎಷ್ಟೂಂತ ಒರಸ್ಕೊತೀರಪ್ಪ

ಉತ್ತರ ಕರ್ನಾಟಕದ ನೆರ ಸಂತ್ರಸ್ತರಿಗೆ ಪರಹಾರ ಒದಗಿಸುವಲ್ಲಿ ವಿಫಲವಾಗಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಜನ ಸಿಡಿದೆದ್ದಿದ್ದಾರೆ.

ಪ್ರತಿಪಕ್ಷಗಳು ಈ ಬಗ್ಗೆ ಟೀಕೆ ಮಾಡುತ್ತಿದ್ದ ವೇಳೆ ಬಿಜೆಪಿ ನಾಯಕರು ತಲೆ ಕೆಡಿಸಿಕೊಂಡಿರಲಿಲ್ಲ, ಆದರೆ ಯಾವಾಗ ಚಕ್ರವರ್ತಿ ಸೂಲಿಬೆಲೆ ಈ ಬಗ್ಗೆ ದನಿ ಎತ್ತಿದರೋ, ಬಿಜೆಪಿ ಸಂಸದರು ಕಿರಿ ಕಿರಿ ಅನುಭವಿಸಲಾರಂಭಿಸಿದ್ದಾರೆ. ಈ ಕಾರಣಕ್ಕಾಗಿ ಸಂಸದರಾದ ಸದಾನಂದಗೌಡ ಮತ್ತು ಪ್ರತಾಪ್ ಸಿಂಹ ಸೂಲಿಬೆಲೆ ವಿರುದ್ಧ ತಿರುಗಿ ಬಿದ್ದರು.

ಯಾವಾಗ ಸೂಲಿಬೆಲೆ ವಿರುದ್ಧ ಆಕ್ರೋಶ ಕೇಳಿ ಬಂತೋ ಜನರೇ ಬಿಜೆಪಿ ಸಂಸದರನ್ನು ,ಸಾಮಾಜಿಕ ಜಾಲತಾಣಗಳಲ್ಲಿ ಜಾಡಿಸಲಾರಂಭಿಸಿದರು.  

ಇದೀಗ ರಾಜ್ಯಾದ್ಯಂತ ಟೀಕೆಗಳ ಸುರಿಮಳೆಯಾಗುತ್ತಿರುವಂತೆ. ಇದೀಗ ನಟ ಪ್ರಕಾಶ್‌ ರಾಜ್‌ ಕೂಡ ರಾಜ್ಯಾದ್ಯಂತ ವ್ಯಕ್ತವಾಗಿರುವ ಜನರ ಟೀಕೆಗಳಿಗೆ ಸ್ಪಂದಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪುಟ್ಟ ಗೌರಿಯನ್ನು ಬಿಗ್ ಬಾಸ್ ಮನೆಯಲ್ಲಿ ಸ್ವಾಗತಿಸುತ್ತಾರೆಯೇ ಕಿಚ್ಚ ಸುದೀಪ್

ಬಿಗ್ ಬಾಸ್ ಸೀಸನ್ 7 ಪ್ರಾರಂಭವಾಗುವುದಕ್ಕೆ ಇನ್ನೇನು ಕೆಲವು ದಿನಗಳು ಬಾಕಿ. ಈಗಾಗಲೇ ಸ್ಪರ್ಧಿಗಳ ಆಯ್ಕೆ ಅಂತಿಮಗೊಂಡಿದೆ. ಈ ನಡುವೆ ಬಿಗ್ ಬಾಸ್ ಮನೆಗೆ ಅವರು ಹೋಗ್ತಾರೆ ಇವರು ಹೋಗ್ತಾರೆ ಅನ್ನುವ ಗಾಳಿ ಸುದ್ದಿಗಳು ಹರಡಿದೆ.

ಆದರೆ ಅಭ್ಯರ್ಥಿಗಳು ಯಾರು ಅನ್ನುವುದು ಬಹಿರಂಗವಾಗಬೇಕಾದರೆ ಬಿಗ್ ಬಾಸ್ ಮನೆಯ ಪರದೆಯನ್ನು ಕಿಚ್ಚ ಸುದೀಪ್ ಸರಿಸಬೇಕು.

ಈ ನಡುವೆ ಪುಟ್ಟಗೌರಿ ಖ್ಯಾತಿಯ ರಂಜಿನಿ ರಾಘವನ್ ಬಿಗ್ ಬಾಸ್ ಮನೆಗೆ ಹೋಗ್ತಾರೆ ಅನ್ನುವ ಸುದ್ದಿ ಹರಡಿದೆ.

ರಾಜ್ಯದ ಬೊಕ್ಕಸ ಖಾಲಿಯಾಗಲು ಯಾರು ಕಾರಣ ಮಾನ್ಯ ಸಿದ್ದರಾಮಯ್ಯನವರೇ…?

ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾವನೆಯನ್ನು ತಿರಸ್ಕರಿಸುತ್ತಿದ್ದಂತೆ ಬಿಜೆಪಿ ಹಾಗೂ ಸಿದ್ದರಾಮಯ್ಯ ನಡುವೆ ಟ್ವೀಟ್ ವಾರ್ ಪ್ರಾರಂಭಗೊಂಡಿದೆ.

ಸಿದ್ದರಾಮಯ್ಯ ಅವರು ಯಡಿಯೂರಪ್ಪ ರಾಜೀನಾಮೆ ಕೇಳಿರುವುದಕ್ಕೆ ಕಿಡಿ ಕಾರಿರುವ ಬಿಜೆಪಿ ಬೊಕ್ಕಸ ಖಾಲಿಯಾಗಲು ಕಾರಣ ಯಾರು ಎಂದು ಪ್ರಶ್ನಿಸಿದೆ.