Advertisements

ಅನುಷ್ಕಾ ಸಿಹಿ ಮುತ್ತಿಗೆ ನಾಚಿ ನೀರಾದ ವಿರಾಟ್ ಕೊಹ್ಲಿ

ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿಗೆ ಕಿಸ್ ನೀಡಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಕೊಹ್ಲಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.

Advertisements

ಟ್ರಾಫಿಕ್ ದಂಡದ ಮೊತ್ತ ಇಳಿಸಲು ಹೊರಟ ಬಿಎಸ್ವೈಗೆ ಶಾಕ್ ಕೊಟ್ಟ ನರೇಂದ್ರ ಮೋದಿ…

ಕೆಲ ವಾಹನ ಸವಾರರ ನಿರ್ಲಕ್ಷ್ಯದಿಂದ ಅಮಾಯಕರ ಜೀವ ಬಲಿಯಾಗುತ್ತಿರುವುದನ್ನು ಮನಗಂಡ ಕೇಂದ್ರ ಸರ್ಕಾರ ಇತ್ತೀಚೆಗೆ ಟ್ರಾಫಿಕ್ ನಿಯಮ ಉಲ್ಲಂಘನೆಯ ದಂಡದ ಮೊತ್ತವನ್ನು ಹೆಚ್ಚಿಸಿತ್ತು.

Get upto 50% off on 3 Doors Wardrobe

ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ನಯಾಪೈಸೆ ದಂಡ ಕಟ್ಟುವ ಅಗತ್ಯವಿರುವುದಿಲ್ಲ, ಆದರೂ ರಾಜಕೀಯ ಕಾರಣಗಳಿಗಾಗಿ ಇದನ್ನು ಅನೇಕರು ವಿರೋಧಿಸುತ್ತಿದ್ದಾರೆ. ನಿಯಮ ಪಾಲಿಸಿದರೆ ತಮಗೆ ಒಳ್ಳೆಯದು ಅನ್ನುವುದು ಗೊತ್ತಿದ್ದರೂ, ದುಬಾರಿ ದಂಡದ ಅರಿವಿದ್ದರೂ ಕೆಲವರು ಕಾನೂನು ಗಾಳಿಗೆ ತೂರುವುದನ್ನು ಇನ್ನೂ ನಿಲ್ಲಿಸಿಲ್ಲ.

ಈ ನಡುವೆ ಜನತೆಯ ಆಕ್ರೋಶದಿಂದ ಎಲ್ಲಿ ಆಡಳಿತ ವಿರೋಧಿ ಅಲೆಗೆ ಸಿಲುಕಿ ಹಾಕಿಕೊಳ್ಳಬೇಕಾಗುತ್ತದೋ ಅನ್ನುವ ಆತಂಕದಿಂದ ಕೆಲ ರಾಜ್ಯ ಸರ್ಕಾರಗಳು ದಂಡ ಮೊತ್ತವನ್ನು ಕಡಿತಗೊಳಿಸಲು ಮುಂದಾಗಿದೆ.

ಈಗಾಗಲೇ ಗುಜರಾತ್ ಸರ್ಕಾರ ದಂಡದ ಮೊತ್ತವನ್ನು ಶೇ50ರಷ್ಟು ಇಳಿಸಿದೆ. ಇದರ ಬೆನ್ನಲ್ಲೇ ಉತ್ತರಾಖಂಡ್ ಸರ್ಕಾರ ಕೂಡಾ ಇಳಿಕೆ ಮಾಡಿತ್ತು. ಇದಾದ ನಂತರ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ಬಿಜೆಪಿ ರಾಜ್ಯಗಳು ಸಹ ದರವನ್ನು ಇಳಿಕೆ ಮಾಡಲು ಚಿಂತಿಸಿವೆ.

ವಿಪರೀತವಾಗಿ ಏರಿರುವ ಟ್ರಾಫಿಕ್ ದಂಡ ಮುಂಬರುವ ಉಪಚುನಾವಣೆಯಲ್ಲಿ ಪರಿಣಾಮ ಬೀರಬಹುದು ಎಂದು ಭಯಗೊಂಡಿರುವ ಸಿಎಂ ಯಡಿಯೂರಪ್ಪ ಕೂಡಾ ದಂಡದಲ್ಲಿ ಕಡಿತಗೊಳಿಸಲು ಮುಂದಾಗಿದ್ದರು. ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ಕೂಡಾ ಕೊಟ್ಟಿದ್ದರು.

ಆದರೆ ಈಗ ಕೇಂದ್ರ ಸರ್ಕಾರ ಇದಕ್ಕೆ ತಣ್ಣೀರು ಎರಚಿದ್ದು, ಸಾಲು ಸಾಲು ರಾಜ್ಯಗಳು ಕೇಂದ್ರದ ಕಾನೂನಿಗೆ ಸೆಡ್ಡು ಹೊಡೆಯುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಹಾಗೇ ನೋಡಿದರೆ  ದಂಡವನ್ನು ಕಡಿತಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಸಂಗ್ರಹವಾದ ದಂಡದ ಮೊತ್ತದ ಕೂಡಾ ರಾಜ್ಯದ ಬೊಕ್ಕಸಕ್ಕೆ ಸೇರುತ್ತದೆ.

ಆದರೆ ಒಂದೊಂದು ರಾಜ್ಯ ಸರ್ಕಾರಗಳು ಒಂದೊಂದು ದರವನ್ನು ನಿಗದಿ ಪಡಿಸಿದರೆ ಕಾಯ್ದೆಯ ಮೂಲ ಸ್ವರೂಪವೇ ಬದಲಾಗುತ್ತದೆ. ಹೀಗಾಗಿ ಕೇಂದ್ರ ಸಾರಿಗೆ ಇಲಾಖೆ ಕಾನೂನು ಸಚಿವಾಲಯದ ಮೊರೆ ಹೋಗಿದೆ. ರಾಜ್ಯ ಸರ್ಕಾರದ ನಿರ್ಧಾರಕ್ಕೆ  ಬ್ರೇಕ್ ಹಾಕುವ ಕುರಿತಂತೆ ಸಲಹೆ ಕೇಳಲಾಗಿದೆ.

ಹೀಗಾಗಿ ಕರ್ನಾಟಕದಲ್ಲಿ ದಂಡ ಮೊತ್ತದಲ್ಲಿ ದೊಡ್ಡ ಮೊತ್ತದ ಕಡಿತ ನಿರೀಕ್ಷಿಸಿದವರಿಗೆ ದೊಡ್ಡ ಶಾಕ್ ಕಾದಿದೆ.

ಹೀಗಾಗಿ ರಾಜ್ಯಗಳ ದಂಡ ಕಡಿತ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಆದೇಶ ಹೊರಡಿಸುವ ಸಾಧ್ಯತೆಗಳಿದ್ದು, ಅಂತಿಮವಾಗಿ ಕೇಂದ್ರ ಸರ್ಕಾರದ ಆದೇಶವನ್ನೇ ಪಾಲಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ.

ಟ್ರಾಫಿಕ್ ದಂಡ ಏರಿಕೆ ಉದ್ದೇಶ ಜನರ ಜೀವ ರಕ್ಷಣೆಗಾಗಿಯೇ ಹೊರತು ಸರ್ಕಾರಕ್ಕೆ ಆದಾಯ ತರುವುದಲ್ಲ ಅನ್ನುವುದನ್ನು ಈಗಾಗಲೇ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಜನರನ್ನು ಪ್ರಾಣಾಪಾಯದಿಂದ ಪಾರು ಮಾಡುವ ಸಲುವಾಗಿ ಜಾರಿಗೆ ಬಂದಿರುವ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರ್ಕಾರ ಅಡ್ಡಿ ಮಾಡುತ್ತಿರುವುದು ದುರಂತವೇ ಸರಿ.

ನರೇಂದ್ರ ಮೋದಿ ಸ್ವೀಕರಿಸಿದ ಉಡುಗೊರೆ ನಿಮ್ಮ ಮನೆ ಬಾಗಿಲಿಗೆ….!

ನರೇಂದ್ರ ಮೋದಿ ಸ್ವೀಕರಿಸಿದ ಉಡುಗೊರೆ ನಿಮ್ಮ ಮನೆ ಬಾಗಿಲಿಗೆ….! ನರೇಂದ್ರ ಮೋದಿ ಸ್ವೀಕರಿಸಿದ ಉಡುಗೊರೆ ನಿಮ್ಮ ಮನೆ ಬಾಗಿಲಿಗೆ….! ನರೇಂದ್ರ ಮೋದಿ ಸ್ವೀಕರಿಸಿದ ಉಡುಗೊರೆ ನಿಮ್ಮ ಮನೆ ಬಾಗಿಲಿಗೆ….!

ಮೆಡಿಸಿನ್ ಗಾಗಿ ಇನ್ಮುಂದೆ ಮೆಡಿಕಲ್ ಗೆ ಹೋಗಬೇಕಾಗಿಲ್ಲ…

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಆರು ತಿಂಗಳಲ್ಲಿ ಪಡೆದಿರುವ 2,772 ಉಡುಗೊರೆಗಳನ್ನು ಸೆಪ್ಟೆಂಬರ್ 14ರಿಂದ ಹರಾಜು ಹಾಕುವುದಾಗಿ ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ಸ್ವೀಕರಿಸಿದ ಉಡುಗೊರೆಗಳನ್ನು www.pmmementos.gov.in ಎಂಬ ಅಂತರ್ಜಾಲ ತಾಣದಲ್ಲಿ ಹರಾಜು ಹಾಕಲಾಗುವುದು. ಈ ಹರಾಜು ಪ್ರಕ್ರಿಯೆ ಅಕ್ಟೋಬರ್ 3ರಂದು ಅಂತ್ಯಗೊಳ್ಳಲಿದೆ.

ಹರಾಜಿನಲ್ಲಿ ಸಂಗ್ರಹವಾದ ಹಣವನ್ನು ನಮಾಮಿ ಗಂಗೆ ಯೋಜನೆಗೆ ಬಳಸಿಕೊಳ್ಳಲಾಗುವುದು ಎಂದು ಪಟೇಲ್ ತಿಳಿಸಿದ್ದಾರೆ.

ಬಿಗ್​ಬಾಸ್​ ಸ್ಪರ್ಧಿ ಜಯಶ್ರೀಗೆ ಲೈಂಗಿಕ ಕಿರುಕುಳ : ನಡುರಾತ್ರಿಯಲ್ಲಿ ಬೀದಿಗೆ ತಳ್ಳಿದ ಸೋದರ ಮಾವ…?

ಬಿಗ್ ಬಾಸ್ ಕನ್ನಡ ಸೀಸನ್ 3ರ ಸ್ಪರ್ಧಿ, ನಟಿ ಜಯಶ್ರೀ ಮತ್ತು ಅವರ ತಾಯಿಯನ್ನು ಸೋದರ ಮಾವ ಮನೆಯಿಂದ ಹೊರ ಹಾಕಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈವೆಂಟ್ ಆರ್ಗನೈಸರ್ ಆಗಿರುವ ಜಯಶ್ರೀ ಮೇಲೆ ಸೋದರ ಮಾವ ಗಿರೀಶ್ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿರುವುದಾಗಿ ದೂರು ನೀಡಲಾಗಿದೆ. ನಡುರಾತ್ರಿ ಅನ್ನೋದನ್ನೂ ಲೆಕ್ಕಿಸದೆ ಮನೆಯಿಂದ ಹೊರ ಹಾಕಿದ್ದಾನೆ ಎಂದು ಆರೋಪಿಸಿರುವ ಜಯಶ್ರೀ ಲೈಂಗಿಕ ಕಿರುಕುಳ ಸೇರಿ ದೂರು ದಾಖಲಿಸಿದ್ದಾರೆ.

ಸದ್ಯ ಅಶೋಕನಗರದಲ್ಲಿರುವ ಅಜ್ಜಿಯ ಮನೆಯಲ್ಲಿ ಜಯಶ್ರೀ ಆಶ್ರಯ ಪಡೆದಿದ್ದು, ಮಾವ ಗಿರೀಶ್ ವಿರುದ್ದ ದೂರು ದಾಖಲಿಸಿಕೊಂಡಿರುವ ಚನ್ನಮ್ಮನಕೆರೆ ಅಚ್ಚುಕಟ್ಟು ಠಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಗಿರೀಶ್ ಹಾಗೂ ಜಯಶ್ರೀಗೆ ಠಾಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಇಬ್ಬರ ವಿಚಾರಣೆ ಬಳಿಕ ಎಫ್ ಐ ಆರ್ ದಾಖಲಿಸಲು ಪೊಲೀಸರು ನಿರ್ಧಾರ ಮಾಡಿದ್ದಾರೆ.

ಆಸ್ತಿ ವಿವಾದ ಮತ್ತು ಖಾಸಗಿ ಕಾರಣಗಳೇ ಈ ಜಗಳಕ್ಕೆ ಕಾರಣ ಎನ್ನಲಾಗಿದ್ದು, ಸೆಪ್ಟೆಂಬರ್ 10ರ ನಡುರಾತ್ರಿ ಈ ಘಟನೆ ನಡೆದಿದೆ.

ಬಿಗ್ ಬಾಸ್​ ಸ್ಪರ್ಧಿಯಾಗಿದ್ದ ಜಯಶ್ರೀ ನಟನೆ ಕಡೆಗೆ ಗಮನಹರಿಸಿದ್ದರು. ಖಾಸಗಿ ಕಂಪೆನಿಯಲ್ಲಿ ಹೆಚ್​ಆರ್ ಆಗಿದ್ದ ಅವರು ಕೊನೆಗೆ ಮಾಡೆಲಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ತಮ್ಮ ಮೇಲಾದ ಕಿರುಕುಳದ ಬಗ್ಗೆ ಹೇಳಿಕೊಂಡಿರುವ ಅವರು, ನನ್ನ ಮಾವ ನನ್ನ ಬಟ್ಟೆಯ ಬಗ್ಗೆಯೆಲ್ಲ ಮಾತನಾಡುತ್ತಿದ್ದರು. ನನ್ನ ಜೊತೆ ಸೈಕೋ ರೀತಿ ವರ್ತಿಸುತ್ತಿದ್ದರು. ನಾನು ಚಿಕ್ಕವಳಿದ್ದಾಗ ಲೈಂಗಿಕ ಕಿರುಕುಳ ನೀಡಿದ್ದರು. ಆತನ ಶೂ ತೆಗೆದು ಅನೇಕ ಬಾರಿ ನನ್ನ ಬಾಯಿಗೆ ಹಾಕಿದ್ದಾನೆ. ಆತನೊಬ್ಬ ದೊಡ್ಡ ಹುಚ್ಚ ಎಂದು ಹೇಳಿದ್ದಾರೆ.

ಈ ನಡುವೆ ನಟಿ ಜಯಶ್ರೀಗೆ ಕಿರುಕುಳ ನೀಡಿರುವ ಆರೋಪವನ್ನು ತಳ್ಳಿಹಾಕಿರುವ ಮಾವ ಗಿರೀಶ್, ಆಕೆಗೆ ಸ್ವಾತಂತ್ರ ನೀಡುತ್ತಿಲ್ಲ ಎಂದು ಆಕೆ ಈ ಆರೋಪ ಮಾಡಿದ್ದಾಳೆ. ಸುಮಾರು ದಿನಗಳಿಂದ ನಮ್ಮ ಮನೆಯಲ್ಲೇ ಇದ್ದ ಜಯಶ್ರೀ ಯಾವಾಗ ಅಂದ್ರೆ ಅವಾಗ ಹೊರಗಡೆ ಹೋಗುತ್ತಿದ್ದಳು. ಅದನ್ನು ಪ್ರಶ್ನೆ ಮಾಡಿದ್ದಕ್ಕೆ ಸುಳ್ಳು ಕೇಸ್ ದಾಖಲಿಸಿದ್ದಾಳೆ.

ಜಯಶ್ರೀಗೆ ಕೊಡಬೇಕಾದ ಆಸ್ತಿ ಎಲ್ಲವನ್ನೂ ಕೊಟ್ಟಿದ್ದೇವೆ. ಆಕೆ ಬಿಗ್​ಬಾಸ್​ಗೆ ಹೋಗುವಾಗಲೂ ನಾನೇ ಸಹಾಯ ಮಾಡಿದ್ದೆ. ನಮ್ಮ ನಡುವೆ ಆಸ್ತಿ ವಿಚಾರಕ್ಕೆ ಯಾವುದೇ ಜಗಳ-ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಓಂ,ಗೋವು ಪದ ಕೇಳಿದರೆ ಕೆಲವರಿಗೆ ಆಲರ್ಜಿ : ನರೇಂದ್ರ ಮೋದಿ

ಕೆಲವರು ಓಂ ಮತ್ತು ಗೋವು ಎಂಬ ಶಬ್ದ ಕೇಳಿದ ತಕ್ಷಣ ದೇಶ 16ನೇ ಶತಮಾನಕ್ಕೆ ಮರಳಿದೆ ಎಂದು ಕಿರುಚುತ್ತಾರೆ. ಇದು ದುರಾದೃಷ್ಟಕರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ.

ಉತ್ತರ ಪ್ರದೇಶದ ಮಥುರಾದಲ್ಲಿ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಕೃತಕ ಗರ್ಭಧಾರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು ನಮ್ಮ ದೇಶದಲ್ಲಿ ಗೋವು ಮತ್ತು ಓಂ ಪದಗಳನ್ನು ಕೇಳಿದರೆ ಕೆಲವರಿಗೆ ಆಗುವುದಿಲ್ಲ. ಈ ಪದಗಳನ್ನು ಕೇಳಿದರೆ ಅವರು ನಮ್ಮ ದೇಶ 16ನೇ ಶತಮಾನಕ್ಕೆ ಹೋಗಿದೆ ಎಂದು ಭಾವಿಸುತ್ತಾರೆ. ಇಂಥ ಸಂಕುಚಿತ ಮನೋಭಾವದಿಂದ ದೇಶದ ಪ್ರಗತಿ ಸಾಧ್ಯವಿಲ್ಲ ಎಂದರು.

ಗೋವು ಈ ದೇಶದ ಅಮೂಲ್ಯ ಸಂಪತ್ತಾಗಿದ್ದು, ಗ್ರಾಮೀಣ ಭಾಗದ ಆರ್ಥಿಕ ಪರಿಸ್ಥಿತಿ ಸುಧಾರಣೆಯಲ್ಲಿ ಗೋವುಗಳದ್ದು ಪ್ರಮುಖ ಪಾತ್ರವಹಿಸುತ್ತದೆ. ಗೋಸಂಪತ್ತು ಇಲ್ಲದೆ ಹೋದರೆ ಈ ದೇಶದ ಆರ್ಥಿಕ ವ್ಯವಸ್ಥೆ, ಗ್ರಾಮೀಣ ಜನ ಜೀವನ ಮುನ್ನಡೆಯಲು ಸಾಧ್ಯವಿಲ್ಲ ಎಂದರು.

ಹೀಗಾಗಿಯೇ ಗೋ ಸಂಪತ್ತಿನ ಕುರಿತಂತೆ ಕೇಂದ್ರ ಸರ್ಕಾರ ಗಂಭೀರವಾಗಿದ್ದು, ಈ ಸಂಬಂಧ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.

ಇದೇ ವೇಳೆ ಆಫ್ರಿಕಾದಲ್ಲಿ ರವಾಂಡಾ ದೇಶದ ಕಥೆಯನ್ನು ಉಲ್ಲೇಖಿಸಿದ ಪ್ರದಾನಿ ನರೇಂದ್ರ ಮೋದಿ “ ನಾನು ಅಲ್ಲಿಗೆ ಹೋಗಿದ್ದೆ. ಒಂದು ಪ್ರಮುಖ ಕಾರ್ಯಕ್ರಮವಿದೆ. ಅದು ಏನೆಂದರೆ ಸರ್ಕಾರವೇ ಜನರಿಗೆ ಹಸುಗಳನ್ನು ನೀಡುತ್ತದೆ. ಆ ಹಸುಗೆ ಜನಿಸುವ ಹೆಣ್ಣು ಕರವನ್ನು ವಾಪಸ್ ಸರ್ಕಾರಕ್ಕೆ ನೀಡುಬೇಕು ಎಂಬ ಷರತ್ತು ವಿಧಿಸಲಾಗುತ್ತದೆ. ಜನರಿಂದ ವಾಪಸ್ ಪಡೆಯುವ ಹೆಣ್ಣು ಕರುವನ್ನು ಹಸು ಇಲ್ಲದವರಿಗೆ ಸರ್ಕಾರ ನೀಡುತ್ತೆ. ಈ ರೀತಿ ಮಾಡುವುದರಿಂದ ರವಾಂಡಾದ ಪ್ರತಿ ಮನೆಯಲ್ಲೂ ಹಸುಗಳು ಇವೆ. ಪ್ರತಿ ಮನೆಯಲ್ಲೂ ಹಾಲು ಉತ್ಪಾದನೆ ಮತ್ತು ಪ್ರಾಣಿಗಳ ಪಾಲನೆ ಇದ್ದು, ಅವರ ಆರ್ಥಿಕತೆಯನ್ನು ಸದೃಢಗೊಳಿಸಿದೆ ಎಂದು ಪ್ರಧಾನಿ ಹೇಳಿದರು.

ಪಾಕಿಸ್ತಾನದಲ್ಲಿ ಪೆಟ್ರೋಲ್ ಗಿಂತ ಹಾಲಿನ ದರವೇ ಜಾಸ್ತಿ….!

ಭಾರತದ ವಿರುದ್ಧ ಸದಾ ಕಾಲು ಕೆರೆದು ಜಗಳ ಬರುವ ಪಾಕಿಸ್ತಾನ ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಉಗ್ರರನ್ನು ಘೋಷಿಸಿ ಬೆಳೆಸಿದ ಕರ್ಮಕ್ಕೆ ಆ ರಾಷ್ಟ್ರದಲ್ಲಿ ಇದೀಗ ಅರಾಜಕತೆ ಸೃಷ್ಟಿಯಾಗುವ ಪರಿಸ್ಥಿತಿ ತಲೆದೋರಿದೆ.

ಅದೆಷ್ಟರ ಮಟ್ಟಿಗೆ ಅಂದರೆ ಪಾಕಿಸ್ತಾನದಲ್ಲಿ ಇದೀಗ ಪೆಟ್ರೋಲ್ ಡಿಸೇಲ್ ಗಿಂತ ಹಾಲು ದುಬಾರಿಯಾಗಿದೆ. ಕಳೆದ ಎರಡು ದಿನಗಳಿಂದ ಪಾಕಿಸ್ತಾನದ ಸಿಂಧ್ ಮತ್ತು ಕರಾಚಿ ಭಾಗಗಳಲ್ಲಿ ಲೀಟರ್ ಹಾಲು 120 ರಿಂದ 140 ರೂ.ಗೆ ಮಾರಾಟವಾಗಿದೆ.

ಇದೇ ಭಾಗದಲ್ಲಿ ಪೆಟ್ರೋಲ್ 113 ರೂ. ಪ್ರತಿ ಲೀಟರ್ ಮತ್ತು ಡೀಸೆಲ್ 91 ರೂ. ಪ್ರತಿ ಲೀಟರ್ ಗೆ ಮಾರಾಟಗೊಂಡಿದೆ.

ಮಂಗಳವಾರ ಮೊಹರಂ ಹಬ್ಬವಿದ್ದ ಕಾರಣ ಹಾಲಿನ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ. ಮೊಹರಂ ಸಂದರ್ಭದಲ್ಲಿ ಮೆರವಣಿಗೆ ಸಾಗುವ ವೇಳೆ ಜನರಿಗಾಗಿ ತಂಪಾದ ಪಾನೀಯ, ಹಾಲು, ಹಾಲಿನ ಇತರೆ ಉತ್ಪನ್ನಗಳನ್ನು ನೀಡಲಾಗುತ್ತದೆ. ಹೀಗಾಗಿ ಕಳೆದ ಎರಡು ದಿನಗಳಲ್ಲಿ ಹಾಲಿಗೆ ವಿಪರೀತ ಬೇಡಿಕೆ ಹೆಚ್ಚಾಗಿತ್ತು. ಈ ಕಾರಣದಿಂದ ಪೆಟ್ರೋಲ್ ಡಿಸೇಲ್ ದರವನ್ನು ಹಿಂದಿಕ್ಕಿ ಹಾಲಿನ ದರ ಮುನ್ನುಗಿತ್ತು ಎನ್ನಲಾಗಿದೆ.

ಇಂದು ಬಿಡುಗಡೆಯಾದ ಐಫೋನ್ 11 ವಿಶೇಷತೆಯೇನು..ದರವೆಷ್ಟು ಗೊತ್ತಾ..?

ಖ್ಯಾತ ಐಫೋನ್ ತಯಾರಿಕಾ ಸಂಸ್ಥೆ ಆ್ಯಪಲ್ ಕೊನೆಗೂ ತನ್ನ ಬಹು ನಿರೀಕ್ಷಿತ ಐಫೋನ್ 11 ಸರಣಿಯ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿನ ಕುಪರ್ಟಿನೊದ ಆ್ಯಪಲ್ ಕ್ಯಾಂಪಸ್‌ನ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ ನಡೆದ ಆ್ಯಪಲ್ ವಿಶೇಷ ಕಾರ್ಯಕ್ರಮದಲ್ಲಿ ಆ್ಯಪಲ್ ಸಿಇಒ ಟಿಮ್ ಕುಕ್ ನೂತನ ಆ್ಯಪಲ್ ಐಫೋನ್ ಮಾದರಿಗಳನ್ನು ಘೋಷಿಸಿದರು. ಆ್ಯಪಲ್ ಐಫೋನ್ 11, ಆ್ಯಪಲ್ ಐಫೋನ್ 11 ಪ್ರೋ, ಆ್ಯಪಲ್ ಐಫೋನ್ 11 ಪ್ರೋ ಮ್ಯಾಕ್ಸ್ ಫೋನ್ ಗಳನ್ನು ಬಿಡುಗಡೆ ಮಾಡಲಾಯಿತು.

ನಿರೀಕ್ಷೆಯಂತೆ ಆ್ಯಪಲ್ ಹೊಸ ಐಫೋನ್ 11 ಸರಣಿಯಲ್ಲಿ ಮೂರು ಹೊಸ ಐಫೋನ್ ಅನ್ನು ಘೋಷಿಸಿದ್ದು, 699 ಡಾಲರ್ ಆರಂಭಿಕ ಬೆಲೆ ಹೊಂದಿದೆ. ಅಮೆರಿಕದಲ್ಲಿ ಸೆ. 20 ರಿಂದ ಹೊಸ ಐಫೋನ್ ಆ್ಯಪಲ್ ಸ್ಟೋರ್ ಮೂಲಕ ದೊರೆಯಲಿದೆ. ಜತೆಗೆ ಪ್ರಮುಖ ಆನ್‌ಲೈನ್ ಸ್ಟೋರ್‌ಗಳ ಮೂಲಕವೂ ಲಭ್ಯವಾಗಲಿದೆ.

ಐಫೋನ್ 11 ಸರಣಿ ಫೋನ್ ಗಳ ವಿಶೇಷತೆ ಏನು?

ಆ್ಯಪಲ್ ಈ ಬಾರಿಯ ಕಾರ್ಯಕ್ರಮದಲ್ಲಿ 7ನೇ ತಲೆಮಾರಿನ ನೂತನ ಐಪ್ಯಾಡ್, ಆ್ಯಪಲ್ ಐವಾಚ್ ಸಿರೀಸ್ 5 ಮತ್ತು ಬಹುನಿರೀಕ್ಷಿತ ಐಫೋನ್ 11 ಮತ್ತು ಐಫೋನ್ 11 ಪ್ರೊ ಹಾಗೂ ಐಫೋನ್ 11 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.

ಇದರ ಜೊತೆಗೆ ಆ್ಯಪಲ್ ಟಿವಿ+, ಆ್ಯಪಲ್ ಆರ್ಕೇಡ್ ಗೇಮ್ ಅನ್ನು ಕೂಡ ಪರಿಚಯಿಸಲಾಗಿದೆ. ಹಿಂಬದಿಯಲ್ಲಿ ಎರಡು ಕ್ಯಾಮರಾ ಹೊಂದಿರುವ ಐಪೋನ್ 11, 699 ಅಮೆರಿಕನ್ ಡಾಲರ್ ಬೆಲೆ ಹೊಂದಿದೆ.  ಆ್ಯಪಲ್ A13 ಬಯೋನಿಕ್ ಚಿಪ್‌ ಅನ್ನು ಹೊಸ ಐಫೋನ್ 11 ಸರಣಿಯಲ್ಲಿ ಬಳಸಿಕೊಂಡಿದೆ. ಈವರೆಗೆ ಬಿಡುಗಡೆಯಾಗಿರುವ ಯಾವುದೇ ಐಫೋನ್‌ಗಿಂತ ಅಥವಾ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಿಂತ ಆ್ಯಪಲ್ ಐಪೋನ್ 11 ಪ್ರೊ ಫೋನ್ ಅತ್ಯಂತ ಗರಿಷ್ಠ ವೇಗದ ಕಾರ್ಯಾಚರಣೆ ಹೊಂದಿದೆ. ಜತೆಗೆ ಹಿಂಬದಿಯಲ್ಲಿ ಅತ್ಯುತ್ತಮ ತ್ರಿವಳಿ ಕ್ಯಾಮರಾ, ಐಫೋನ್ 11 ಪ್ರೊ ವಿಶೇಷತೆಯಾಗಿದೆ.

ಐಫೋನ್ 11ರ ಸಿರೀಸ್ ನಲ್ಲಿ ಉತ್ತಮ ಸಾಮರ್ಥ್ಯದ ಕ್ಯಾಮಾರ ಅಳವಡಿಸಲಾಗಿದ್ದು, ಐಫೋನ್ ಪ್ರೊ ಮತ್ತು ಐಫೋನ್ 11 ಮ್ಯಾಕ್ಸ್ ಗಳಲ್ಲಿ ಅಲ್ಟ್ರಾವೈಡ್, ವೈಡ್ ಮತ್ತು ಟೆಲಿಫೋಟೋ ಕ್ಯಾಮಾರಗಳು ಇರಲಿವೆ.

ಐಫೋನ್ 11 ಫ್ರೋ 5.8 ಇಂಚಿನ ಡಿಸ್ ಪ್ಲೇ ಹೊಂದಿದ್ದರೆ, ಮ್ಯಾಕ್ಸ್ 6.5 ಇಂಚಿನ ಡಿಸ್ ಪ್ಲೇ ಹೊಂದಿರುತ್ತದೆ.

ಐಫೋನ್ 11 ಫ್ರೋ ಬೆಲೆ 71,860 ರೂಪಾಯಿ ಎಂದು ಅಂದಾಜಿಸಲಾಗಿದ್ದು, ಮ್ಯಾಕ್ಸ್ 79,050 ರೂಪಾಯಿಗೆ ಗ್ರಾಹಕರಿಗೆ ತಲುಪಲಿದೆ.

ಸಿದ್ದರಾಮಯ್ಯ ಟೀಕಿಸಿದ ಮನ್ ಕಿ ಬಾತ್ ಗೆ ಮನ ಸೋತ ಛತ್ತೀಸ್’ಗಢದ ಕಾಂಗ್ರೆಸ್ ಸಿಎಂ

ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ವಿಪರೀತ ಅನ್ನಿಸುವಷ್ಟು ಮಟ್ಟಿಗೆ ಟೀಕಿಸಿದವರು ಯಾರಾದ್ರು ಇದ್ರೆ ಅದು ಸಿದ್ದರಾಮಯ್ಯ ಮಾತ್ರ. ಸಿದ್ದರಾಮಯ್ಯ ತನ್ನದೇ ಶೈಲಿಯಲ್ಲಿ ಅವರದ್ದು ಮನ್ ಕಿ ಬಾತ್, ನಮ್ದು ಕಾಮ್ ಕಿ ಬಾತ್ ಎಂದು ಹೋದ ಕಡೆ ಬಂದ ಕಡೆ ಹೇಳುತ್ತಿದ್ದರು.

ಆದರೆ ಇದೀಗ ಇದೇ ಮನ್ ಕಿ ಬಾತ್ ಕಾರ್ಯಕ್ರಮದಿಂದ ಛತೀಸ್ ಗಢದ ಕಾಂಗ್ರೆಸ್ ಸಿಎಂ ಭೂಪೇಶ್ ಬಘೇಲ್ ಮನಸೋತಿದ್ದಾರೆ.

ಹೀಗಾಗಿ ಕಳೆದ ತಿಂಗಳಿನಿಂದ ಬಘೇಲ್ ರೇಡಿಯೋ ಕಾರ್ಯಕ್ರಮವನ್ನು ಲೋಕವಾಣಿ ಹೆಸರಿನಲ್ಲಿ ಪ್ರಾರಂಭಿಸಿದ್ದು, ಈಗಾಗಲೇ ಎರಡು ಕಂತು ಪ್ರಸಾರವಾಗಿದೆ.

ಛತೀಸ್ ಗಢದ ಆಕಾಶವಾಣಿ ಕೇಂದ್ರ, ಎಫ್ ಎಂ ರೇಡಿಯೋ ಮತ್ತು ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಆಗಸ್ಟ್ 11 ರಂದು ಮೊದಲ ಕಾರ್ಯಕ್ರಮ ಪ್ರಸಾರವಾದರೆ, ಸೆಪ್ಟಂಬರ್ 8 ರಂದು 2ನೇ ಕಂತು ಪ್ರಸಾರವಾಗಿತ್ತು.

ಪ್ರತೀ ತಿಂಗಲ ಎರಡನೇ ಭಾನುವಾರ ಕಾರ್ಯಕ್ರಮಕ್ಕೆ ಮುಹೂರ್ತ ನಿಗದಿಪಡಿಸಲಾಗಿದ್ದು, ಬೆಳಗ್ಗೆ 10.30ರಿಂದ 10.55ರ ತನಕ ಕಾರ್ಯಕ್ರಮ ಪ್ರಸಾರವಾಗಲಿದೆ.

ಹಿಂದಿ ಹೇರಿಕೆ ಕೂಗಿನ ನಡುವೆ ಹಿಂದಿ ಕಲಿಯಲಾರಂಭಿಸಿದ್ದಾರಂತೆ ಡಿಕೆ ಶಿವಕುಮಾರ್….!

ಕರ್ನಾಟಕದಲ್ಲಿ ಹಿಂದಿ ಹೇರಿಕೆ ಕುರಿತಂತೆ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದು ಇದೀಗ ಇತಿಹಾಸ. ಆದರೆ ಈಗ್ಲೂ ಕೂಡಾ ಹಿಂದಿ ಹೇರಿಕೆ ಕುರಿತಂತೆ ಕನ್ನಡಿಗರಲ್ಲಿ ಆಕ್ರೋಶವೊಂದು ಖಂಡಿತಾವಾಗಿಯೂ ಇದೆ. ಹಿಂದಿಯನ್ನು ಬಳಸಲು ಅಡ್ಡಿಯಿಲ್ಲ, ಹಾಗಂತ ಕನ್ನಡವನ್ನು ತುಳಿಯಬೇಡಿ ಅನ್ನುವುದು ಕರ್ನಾಟಕದ ಮನವಿ.

ಈ ನಡುವೆ ಇಡಿ ವಶದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಹಿಂದಿ ಕಲಿಯಿರಿ ಪುಸ್ತಕದ ಮೊರೆ ಹೋಗಿದ್ದಾರೆ.

ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಡಿಕೆ ಶಿವಕುಮಾರ್ ಅವರಿಗೆ ದಕ್ಷಿಣ ಭಾರತದ ಎಲ್ಲಾ ರಾಜಕಾರಣಿಗಳಂತೆ ಹಿಂದಿ ಸ್ವಲ್ಪ ದೂರ.

ಆದರೆ ಇದೀಗ ಇಡಿ ವಶದಲ್ಲಿರುವ ಡಿಕೆಶಿಯವರಿಗೆ ಹಿಂದಿಯ ಅನಿವಾರ್ಯತೆ ಎದುರಾಗಿದೆ. ಇಡಿ ಅಧಿಕಾರಿಗಳು ಇಂಗ್ಲೀಷ್ ನಲ್ಲಿ ಮಾತನಾಡುತ್ತಾರೆ. ಆದರೆ ರಾತ್ರಿ ಹೊತ್ತು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿರುವ ತುಘಲಕ್ ಠಾಣೆಯ ಪೊಲೀಸರಿಗೆ ಹಿಂದಿ ಬಿಟ್ಟರೆ ಮತ್ಯಾವ ಭಾಷೆಯೂ ಬರುವುದಿಲ್ಲ.  ಹೀಗಾಗಿ ಯಾವುದೇ ಕೆಲಸಕ್ಕಾದರೂ ಪೊಲೀಸರ ಜೊತೆ ಮಾತನಾಡೋಣ ಅಂದುಕೊಂಡರೆ ಭಾಷಾ ಸಮಸ್ಯೆ ಹೀಗಾಗಿ ಸಂವಹನಕ್ಕಾಗುವಷ್ಟಾದರೂ ಹಿಂದಿ ಕಲಿಯೋಣ ಎಂದು ನಿರ್ಧರಿಸಿರುವ ಡಿಕೆಶಿ ಇಂಗ್ಲೀಷ್ ಟು ಹಿಂದಿ ಪುಸ್ತಕದ ಮೊರೆ ಹೋಗಿದ್ದಾರೆ.

ಹಾಗಂತ ಮುಂದಿನ ದಿನಗಳಲ್ಲಿ ಡಿಕೆಶಿಯವರಿಗೆ ಹಿಂದಿಯ ಜ್ಞಾನ ಖಂಡಿತಾವಾಗಿಯೂ ಬೇಕಾಗುತ್ತದೆ. ಶುಕ್ರವಾರದ ಹೊತ್ತಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದರೆ ಜೈಲು ಸೇರಬೇಕಾಗುತ್ತದೆ. ಜೈಲಿನಲ್ಲಿ ಹಿಂದಿ ಇಲ್ಲದೆ ಬದುಕುವುದೇ ಕಷ್ಟವಾಗಬಹುದು.

ಕೂಪನ್ ಕೋಡ್ Fisher35  ಎಂದು ಬಳಸಿ ಬಂಪರ್ ಡಿಸ್ಕೌಂಟ್ ಪಡೆಯಿರಿ

ಮಾತು ತಪ್ಪಿದ ಬಿಬಿಎಂಪಿ : ಪಿಒಪಿ ಗಣಪನ ವಿಸರ್ಜನೆಗೆ ಅವಕಾಶ ಕೊಟ್ಟ ಅಧಿಕಾರಿಗಳು

ವಿಘ್ನ ನಿವಾರಕನನ್ನು ಪೂಜಿಸುವ ಸುಸಂದರ್ಭದಲ್ಲಿ ಮಣ್ಣಿನ ವಿಗ್ರಹಗಳನ್ನು ಬಳಸಿ, ಪಿಒಪಿ ಮೂರ್ತಿಗಳನ್ನು ಬಳಸಬೇಡಿ ಎಂದು ಪರಿಸರ ಪ್ರಿಯರು, ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಸಾರ್ವಜನಿಕರಲ್ಲಿ ಮನವಿ ಮಾಡಿತ್ತು.

ಇದಕ್ಕಿಂತ ಕಡಿಮೆ ಬೆಲೆಯಲ್ಲಿ ಶೂ ಸಿಕ್ರೆ ಹೇಳಿ….!

ಒಂದು ಹೆಜ್ಜೆ ಮುಂದೆ ಹೋಗಿದ್ದ ಬಿಬಿಎಂಪಿ ,ಪಿಒಪಿ ಮೂರ್ತಿಗಳ ವಿಸರ್ಜನೆಗೆ ಅವಕಾಶ ನೀಡೋದಿಲ್ಲ. ಒಂದು ವೇಳೆ ವಿಸರ್ಜನಾ ಸ್ಥಳಕ್ಕೆ ಪಿಒಪಿ ಮೂರ್ತಿ ಬಂದ್ರೆ ಕೇಸು ಜಡಿಯುವುದಾಗಿ ಎಚ್ಚರಿಸಿತ್ತು.

ಆದರೆ ಇದು ಕೇವಲ ಉತ್ತರನ ಪೌರುಷ ಹಾಗೂ ಆರಂಭ ಶೂರತ್ವವಾಗಿ ಹೋಗಿದೆ.

ಕೇವಲ 360 ರೂಪಾಯಿಗೆ ಶೂ ಪಡೆಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

POP ಗಣೇಶನ ಮೂರ್ತಿಗಳ ಮಾರಾಟಕ್ಕೆ ಅವಕಾಶವೇ ಇಲ್ಲ ಅಂದಿದ್ದ ಪಾಲಿಕೆ, ಬೀದಿ ಬೀದಿಗಳಲ್ಲಿ POP ಮೂರ್ತಿಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿತ್ತು. ಇನ್ನು ವಿಸರ್ಜನಾ ಸ್ಥಳಕ್ಕೆ POP ಮೂರ್ತಿಗಳ ಬಂದಾಗ ಈ ಹಿಂದೆ ಕೊಟ್ಟ ಎಚ್ಚರಿಕೆಯನ್ನು ಮರೆತು ಪ್ರತೀ ವರ್ಷದಂತೆ ವಿಸರ್ಜನೆ ಮಾಡಲಾಗಿದೆ.

ಆದರೆ ಅದೃಷ್ಟ ಅಂದರೆ ಆರ್ ಆರ್ ನಗರ ಮತ್ತು ಮಹದೇವಪುರ ವಲಯದಲ್ಲಿ ಒಂದೇ ಒಂದು POP ಮೂರ್ತಿ ವಿಸರ್ಜನೆಗೆ ಬಂದಿಲ್ಲ.

ಒಂದು ವೇಳೆ ಪಾಲಿಕೆ ಕಟ್ಟು ನಿಟ್ಟಾಗಿ ಕ್ರಮ ಕೈಗೊಂಡಿದ್ದರೆ, ಬೆಂಗಳೂರಿನ ಪರಿಸರ ಉಳಿಸುವ ಕಾರ್ಯ ಪ್ರಾರಂಭವಾಗಿರುತ್ತಿತ್ತು. ಆದರೆ ಪರಿಸರ ಕೆಡಿಸಲೆಂದೇ ಟೊಂಕ ಕಟ್ಟಿ ನಿಂತಿರುವ ಅಧಿಕಾರಿಗಳೇ ಪಾಲಿಕೆಯಲ್ಲಿ ಟೆಂಟ್ ಹೂಡಿರುವಾಗ ಇನ್ನೇನು ನಿರೀಕ್ಷಿಸಲು ಸಾಧ್ಯ.

ಒಟ್ಟಿನಲ್ಲಿ ಕಾನೂನು ರಚಿಸದವರೇ ಕಾನೂನು ಮುರಿಯುತ್ತಾರೆ ಅಂದ ಮೇಲೆ ಇನ್ನೇನು ಹೇಳಲು ಸಾಧ್ಯ.