ರುದ್ರ..ರುದ್ರ..ರುದ್ರ…ಉಗ್ರರು ಛಿದ್ರ : ವೀರ ಯೋಧರಿಗೆ ನಾಗೇಂದ್ರ ಪ್ರಸಾದ್ ಗೀತ ನಮನ

ಶಿವರಾತ್ರಿಯ ವಿಶೇಷ ಸಂದರ್ಭದಲ್ಲಿ  ಕವಿರತ್ನ ವಿ.ನಾಗೇಂದ್ರ ಪ್ರಸಾದ್‌ ಅವರು ಶಿವ ಯೋಧ ಎನ್ನುವ ಗೀತೆಯೊಂದನ್ನು ರಚಿಸಿ ವೀರ ಯೋಧರಿಗೆ ನುಡಿ ನಮನ ಸಲ್ಲಿಸಿದ್ದಾರೆ. ಗೀತೆಗೆ ಸಂಗೀತವನ್ನೂ ನಾಗೇಂದ್ರ ಪ್ರಸಾದ್‌ ಸಂಯೋಜಿಸಿದ್ದಾರೆ. ಅದ್ಭುತವಾಗಿರುವ ಗೀತೆ ಎಲ್ಲರಲ್ಲೂ ರಾಷ್ಟ್ರ ಪ್ರೇಮದ ಕಿಚ್ಚು  ಹೆಚ್ಚಿಸುವಂತಿದೆ. 

ಅದರಲ್ಲೂ ಉಗ್ರರನ್ನು ಗರ್ಭದಲ್ಲೇ ಸುಟ್ಟು ಹಾಕಬೇಕು… ಉಗ್ರನನ್ನು ಫ್ರೆಂಡ್ ಅಂದ್ರೆ ಮಟ್ಟ ಹಾಕಬೇಕು..ಯೋಧರೇ ಉಗ್ರ ರೂಪ ತಾಳ ಬೇಕು ನೀವೇ ಅನ್ನುವ ಸಾಲುಗಳು ಮೈ ರೋಮಾಂಚನಗೊಳ್ಳುವಂತಿದೆ.

ಬಂದೂಕೇ ತ್ರಿಶೂಲ..ಆಡು ರುದ್ರ ತಾಂಡವ..ಯೋಧ ನೀವೇ ಶಿವ ಮಾಡೋ ವಿಜಯೋತ್ಸವ ಅನ್ನುವ ಮೂಲಕ ಯೋಧರಿಗೆ ನಮನ ಸಲ್ಲಿಸಿದ್ದಾರೆ ಕವಿರತ್ನ.

Advertisements

ಮಂಡ್ಯದಲ್ಲಿ ಮನೆ ಮಾಡ್ತೀನಿ… ನಿಖಿಲ್ ಕುಮಾರಸ್ವಾಮಿ

ಈ ಬಾರಿ ಲೋಕಸಮರದಲ್ಲಿ ರಾಹುಲ್ ಗಾಂಧಿ, ನರೇಂದ್ರ ಮೋದಿ ಸ್ಪರ್ಧಿಸುವ ಕ್ಷೇತ್ರಗಳು ದೇಶದ ಗಮನ ಸೆಳೆಯುತ್ತದೆಯೋ ಇಲ್ಲವೋ, ಮಂಡ್ಯ ಕ್ಷೇತ್ರ ಮಾತ್ರ ದೇಶದ ಮಾಧ್ಯಮಗಳ ಗಮನ ಸೆಳೆಯುವುದರಲ್ಲಿ ಸಂಶಯವಿಲ್ಲ.

ದಿನಕ್ಕೊಂದು ನಾಟಕೀಯ ಬೆಳವಣಿಗೆ ಪ್ರಾರಂಭವಾಗಿತ್ತು, ಸುಮಲತಾ ಅವರು ಮಂಡ್ಯದಲ್ಲಿ ಮನೆ ಮಾಡುವ ನಿರ್ಧಾರ ಕೈಗೊಂಡ ಬೆನ್ನಲ್ಲೇ, ನಿಖಿಲ್ ಕುಮಾರಸ್ವಾಮಿ ಕೂಡಾ ಮುಂದಿನ ದಿನಗಳಲ್ಲಿ ಮಂಡ್ಯದಲ್ಲೇ ಮನೆ ಮಾಡುತ್ತೇನೆ ಅಂದಿದ್ದಾರೆ.

ರೆಬೆಲ್‌ ಸ್ಟಾರ್‌ ಅಂಬರೀಷ್‌ ಅವರ ಪತ್ನಿ ಸುಮಲತಾ ಅವರು ಕಾಂಗ್ರೆಸ್‌ ಟಿಕೆಟ್‌ ಪಡೆಯಲು ಯತ್ನಿಸುತ್ತಿರುವ ವೇಳೆಯಲ್ಲೇ  ಜೆಡಿಎಸ್‌ ನ ಈ ಘೋಷಣೆ ಮಹತ್ವ ಪಡೆದುಕೊಂಡಿದೆ. ಸುಮಲತಾ ಅವರು ಪಕ್ಷೇತರರಾಗಿ ಕಣಕ್ಕಿಳಿಯುವ ಎಲ್ಲಾ ಸಾಧ್ಯತೆಗಳಿದ್ದು, ಸುಮಲತಾ ಅವರನ್ನು ಬಿಜೆಪಿ ಬೆಂಬಲಿಸಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಅಲ್ಲಿಗೆ ಈ ಬಾರಿ ಸ್ಪರ್ಧೆ ಏನಿದ್ದರೂ ಜೆಡಿಎಸ್ ಮತ್ತು ಸುಮಲತಾ ನಡುವೆ ಅನ್ನುವುದು ಸ್ಪಷ್ಟ. ಕಾಂಗ್ರೆಸ್ ಕಾರ್ಯಕರ್ತರು ಮಂಡ್ಯದಲ್ಲಿ ಕೆಲಸ ಮಾಡುವ ಹುಮ್ಮಸ್ಸು ಹೊಂದಿಲ್ಲ. ಜೆಡಿಎಸ್ ಗೆ ದುಡಿಯಲು ಕಾಂಗ್ರೆಸ್ ಕಾರ್ಯಕರ್ತರಿಗೆ ಮನಸ್ಸಿಲ್ಲ. ಹೀಗಾಗಿ ಅವರು ಸುಮಲತಾ ಕಡೆಗೆ ವಾಲುವ ಸಾಧ್ಯತೆಗಳೇ ಹೆಚ್ಚು.

ಅಂಬರೀಶ್ ಮಂಡ್ಯದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ಅಂಬಿ ಅಭಿಮಾನಿಗಳು ಸುಮಲತಾ ಅವರನ್ನು ಬೆಂಬಲಿಸುವುದು ಖಚಿತ.

ಇನ್ನು ನಿಖಿಲ್ ಮನೆ ಮಾಡುವ ವಿಚಾರಕ್ಕೆ ಬಂದ್ರೆ, ಕುಮಾರಸ್ವಾಮಿ ಹುಬ್ಬಳ್ಳಿ ಮನೆ ಬಾಡಿಗೆಗೆ ಪಡೆದು, ಗೃಹ ಪ್ರವೇಶವನ್ನೂ ಮಾಡಿದ್ದರು. ಆದರೆ ಮುಂದೇನಾಯ್ತು ಅನ್ನುವುದು ರಾಜ್ಯಕ್ಕೆ ಗೊತ್ತಿದೆ. ಇದೀಗ ಮಗ ಮನೆ ಮಾಡುವುದಾಗಿ ಹೇಳಿದ್ದಾರೆ.

ಇನ್ನೂ ಸುಮಲತಾ ಅವರು ಸ್ಪರ್ಧಿಸುವ ವಿಚಾರ ಪ್ರಸ್ತಾಪವಾದ ವೇಳೆ, ಸುಮಲತಾ ಮಂಡ್ಯಕ್ಕೆ ಏನು ಮಾಡಿದ್ದಾರೆ, ಅವರು ಮಂಡ್ಯದ ಗೌಡ್ತಿ ಅಲ್ಲ ಎಂದು ಜೆಡಿಎಸ್ ನಾಯಕರೊಬ್ಬರು ಹೇಳಿದ್ದರು.

ಇದೀಗ ನಿಖಿಲ್ ಮಂಡ್ಯಕ್ಕೆ ಮಾಡಿದ್ದೇನು ಅನ್ನುವುದನ್ನು ಮತದಾರರೇ ನಿರ್ಧರಿಸಬೇಕು.

ಭಾರತಕ್ಕೆ ಮರಳಿದ ವೀರ ಪುತ್ರ : ಅಭಿನಂದನ್ ಗೆ ಸ್ವಾಗತ ಕೋರಿದ ರಾಜಕೀಯ ನಾಯಕರು

ಏರ್ ಸರ್ಜಿಕಲ್ ಸ್ಟ್ರೈಕ್ ವೇಳೆ ಪಾಕಿಸ್ತಾನಿ ಸೈನಿಕರರ ವಶದಲ್ಲಿ ಸಿಕ್ಕು ಹಿಂಸೆ ಅನುಭವಿಸಿ ಈಗ ಬಿಡುಗಡೆಯಾಗಿರುವ ಭಾರತದ ವೀರ ಪುತ್ರ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‌ಗೆ ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಸಹ ಸ್ವಾಗತ ಕೋರಿದ್ದು, ಅವರ ಧೈರ್ಯ, ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‌ಗೆ ಪ್ರಧಾನಿ ಮೋದಿ ಸ್ವಾಗತ ಕೋರಿದ್ದು, ಅವರ ಶೌರ್ಯಕ್ಕೆ ಇಡೀ ದೇಶವೇ ಹೆಮ್ಮೆ ಪಡುತ್ತದೆ ಎಂದು ಟ್ವೀಟ್‌ ಮೂಲಕ ಪ್ರಧಾನಿ ತಿಳಿಸಿದ್ದಾರೆ.

ಸಶಸ್ತ್ರ ಪಡೆಯಲ್ಲಿ ಅವರಿಗೆ ಉತ್ತಮ ಭವಿಷ್ಯವಿರಲಿ ಎಂದು ಟ್ವೀಟ್‌ ಮೂಲಕ ಅಮಿತ್ ಶಾ ಹಾರೈಸಿದ್ದಾರೆ.

ಅಭಿನಂದನ್‌ ಘನತೆ, ಸಮತೋಲನ ಮತ್ತು ಶೌರ್ಯವನ್ನು ಪ್ರದರ್ಶಿಸಿದ್ದು, ನಮಗೆಲ್ಲಾ ಹೆಮ್ಮೆ ತಂದಿದ್ದಾರೆ ಎಂದು ಟ್ವೀಟ್ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 

ಜೈ ಹಿಂದ್ ಎಂದು ಟ್ವೀಟ್‌ ಮಾಡುವ ಮೂಲಕ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಭಿನಂದನ್ ಅವರನ್ನು ಭಾರತಕ್ಕೆ ಸ್ವಾಗತಿಸಿದ್ದಾರೆ.


ಇನ್ನು ಕೆಲವರ ಟ್ವೀಟ್ ಗಳು ಇಲ್ಲಿವೆ.

ರಾಜ್ಯ ನಾಯಕರು ಕೂಡಾ ಅಭಿನಂದನ್ ಅವರನ್ನು ಅಭಿನಂದಿಸಿದ್ದು, ವೀರ ಯೋಧ ಸಾಹಸವನ್ನು ಕೊಂಡಾಡಿದ್ದಾರೆ.

ಅತ್ತೆ ಸೊಸೆ ಜಗಳ ಸುದ್ದಿಯನ್ನು ನಂಬಬೇಡಿ : ಪುಲ್ವಾಮದಲ್ಲಿ ಹುತಾತ್ಮರಾದ ಯೋಧ ಗುರು ತಾಯಿ ಕಣ್ಣೀರು

ಮನೆಯಲ್ಲಿ ಕಿತ್ತಾಟ ಏನೂ ಇಲ್ಲ. ಅತ್ತೆ ಸೊಸೆ ಜಗಳ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಅನ್ನುವ ಮಾತುಗಳು ಮಾಧ್ಯಮಗಳಲ್ಲಿ ಬಂದಿದೆ. ದಯವಿಟ್ಟು ಅದನ್ನು ನಂಬಬೇಡಿ ಎಂದು ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ತಾಯಿ ಚಿಕ್ತಾಯಮ್ಮ ಮನವಿ ಮಾಡಿದ್ದಾರೆ.

ನಾನು ಮತ್ತು ಸೊಸೆ ಅಮ್ಮ ಮಗಳ ರೀತಿ ಇದ್ದೇವೆ. ಹಲವಾರು ಮಂದಿ ಅಷ್ಟು ಕೋಟಿ ಇಷ್ಟು ಕೋಟಿ ಎಂದು ಹೇಳುತ್ತಿದ್ದಾರೆ. ಬಂದ ಚೆಕ್ ಗಳನ್ನು ಬ್ಯಾಂಕ್ ಖಾತೆಗೆ ಹಾಕಿದ್ದೇವೆ.ನಗದು ರೂಪದಲ್ಲಿ ಬಂದಿರುವ ಹಣವನ್ನ ಮನೆಯಲ್ಲಿ ಇಟ್ಟಿದ್ದೇವೆ.

ನಮ್ಮ ಮನೆಯಲ್ಲಿ ಯಾವುದೇ ಜಗಳವಿಲ್ಲ. ಮಗನನ್ನ ಕಳೆದುಕೊಂಡ ನೋವು ಇನ್ನೂ ಕಾಡುತ್ತಿದೆ. ಅತ್ತೆ ಸೊಸೆ ಜಗಳ ಅನ್ನುವ ಮಾತಿನಿಂದ ಮತ್ತೆ ನೋವಾಗುತ್ತಿದೆ.

ನಮಗೆ ನೆಮ್ಮದಿ ಬೇಕು. ದಯವಿಟ್ಟು ಇದನ್ನೆಲ್ಲಾ ಯಾರೂ ನಂಬಬೇಡಿ. 

ಯಾರ ತಲೆ ಮೇಲಾದರೂ ಬೇಕಾದರೆ ಪ್ರಮಾಣ ಮಾಡ್ತೀವಿ, ನನಗೆ ಹಣವೂ ಬೇಡ ಏನೂ ಬೇಡ ನಮ್ಮ ಗೌರವ ಉಳಿಸಿಕೊಳ್ತೀನಿ ಎಂದು ಚಿಕ್ತಾಯಮ್ಮನವರು ಕಣ್ಣೀರಿಟ್ಟರು.

Note : ಗುರು ಮನೆಯಲ್ಲಿ ಜಗಳವಾಗಿದೆ ಅನ್ನುವ ಸುದ್ದಿಯನ್ನು ರಾಜ್ಯದ ಅನೇಕ ಮಾಧ್ಯಮಗಳು ಪ್ರಕಟಿಸಿತ್ತು. ಅದ್ಯಾವ ಮಾಧ್ಯಮಗಳು ಕೂಡಾ ಆಗ ಗುರು ಪೋಷಕರ, ಅಥವಾ ಪತ್ನಿಯ ಪ್ರತ್ರಿಕ್ರಿಯೆ ಪಡೆದಿರಲಿಲ್ಲ. ಒಬ್ಬ ಯೋಧನಿಗೆ ಗೌರವ ಕೊಡಬೇಕು, ನೋವಿನಲ್ಲಿರುವ ಮನೆಯವರಿಗೆ ಮತ್ತೆ ನೋವು ಉಂಟು ಮಾಡಬಾರದು ಅನ್ನುವ ಕಾರಣದಿಂದ ನಾವು ಆ ಸುದ್ದಿಯನ್ನು ಕ್ಯಾರಿ ಮಾಡಿರಲಿಲ್ಲ.

ತವರಿಗೆ ಮಹಾವೀರ : ಎಂಟೆದೆ ಭಂಟ ವೀರ ಅಭಿನಂದನ್ ಗೆ ಅದ್ದೂರಿ ಸ್ವಾಗತ

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಇಂದು ರಾತ್ರಿ ಸರಿ ಸುಮಾರು 9.20 ಗಂಟೆಗೆ ವಾಘಾ ಗಡಿ ಮೂಲಕ ತಾಯ್ನಾಡಿಗೆ ವಾಪಸ್​ ಕಳುಹಿಸಿದೆ. ಏರ್​​ ವೈಸ್​​ ಮಾರ್ಷಲ್​​ಗಳಾದ ಆರ್​ಜಿಕೆ ಕಪೂರ್​​ ಮತ್ತು ಶ್ರೀಕುಮಾರ್​​ ಪ್ರಭಾಕರನ್​, ಪೈಲಟ್​​ ಅಭಿನಂದನ್ ಅವರನ್ನು ಸ್ವಾಗತಿಸಿದರು.

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಹಿಂದೂಸ್ತಾನಕ್ಕೆ  ವಾಪಸ್​​ ಕಳುಹಿಸುವುದಾಗಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ​​ ಸಂಸತ್ತಿನಲ್ಲಿ ನಿನ್ನೆಯೇ ಹೇಳಿದ್ದರು. ಇಂದು ಮಧ್ಯಾಹ್ನದ ವೇಳೆಗೆ ವಾಘಾ ಬಾರ್ಡರ್ ಮೂಲಕ ಅಭಿನಂದನ್ ಬರಬೇಕಾಗಿತ್ತು. ಆದರೆ ಸುಳ್ಳು ರಾಷ್ಟ್ರ ಸಾವಿರ ನೆಪವೊಡ್ಡಿ ಎರಡು ಬಾರಿ ಈ ಸಮಯವನ್ನು ಮುಂದೂಡಿ, ಕೊನೆಗೂ ರಾತ್ರಿ 9ರ ನಂತರ ಬಿಎಸ್ಎಫ್ ಅಧಿಕಾರಿಗಳಿಗೆ ವರ್ಧಮಾನ್ ಅವರನ್ನು ಹಸ್ತಾಂತರ ಮಾಡಿದ್ದಾರೆ.

ಬಳಿಕ ವಾಯುಪಡೆ ಅಧಿಕಾರಿಗಳು ವರ್ಧಮಾನ್ ಅವರನ್ನು ಅಮೃತಸರಕ್ಕೆ ರಸ್ತೆ ಮಾರ್ಗದಲ್ಲಿ ಕರೆದುಕೊಂಡು ಹೋಗಿದ್ದು, ವಾಯುಸೇನೆಯ ನಿಯಮಗಳ ಪ್ರಕಾರ ಎಲ್ಲಾ ಪ್ರಕ್ರಿಯೆ ಮುಗಿಸಿ,ವರ್ಧಮಾನ್ ದೆಹಲಿಗೆ ವಿಮಾನ ಮೂಲಕ ತೆರಳುತ್ತಾರೆ. ಆದರೆ ಅವರು ದೆಹಲಿಗೆ ಯಾವಾಗ ತೆರಳುತ್ತಾರೆ ಅನ್ನುವುದನ್ನು ಊಹಿಸುವುದು ಕಷ್ಟ.ಅದು 24 ಗಂಟೆಯೂ ಆಗಬಹುದು, 36 ಗಂಟೆಯೂ ಕಳೆಯಬಹುದು. ಅಥವಾ ಅದಕ್ಕಿಂತ ಮುಂಚೆಯೂ ತೆರಳಬಹುದು.

ಅಭಿನಂದನ್ ಬಿಡುಗಡೆ ವಿಳಂಭ : ನಾಟಕ ಪ್ರಾರಂಭಿಸಿದ ಪಾಪಿಸ್ತಾನ

ಕಂತ್ರಿ, ಕುತಂತ್ರಿ, ಪಾಪಿಸ್ತಾನ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಪಾಕಿಸ್ತಾನ ಎಂಬ ರಕ್ತ ಪಿಪಾಸು ರಾಷ್ಟ್ರ ಮತ್ತೆ ತನ್ನ ನರಿ ಬುದ್ದಿಯನ್ನು ತೋರಿಸಲಾರಂಭಿಸಿದ್ದಾರೆ.

ನಿನ್ನೆ ಪಾಕಿಸ್ತಾನದ ಸಂಸತ್ತಿನಲ್ಲಿ ಶಾಂತಿ ಹೆಜ್ಜೆಯಿಡುವ ನಿಟ್ಟಿನಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು.

ಆದರೆ ಸುಳ್ಳೇ ನನ್ನಪ್ಪ ಅನ್ನುವುದನ್ನು ರಕ್ತದಲ್ಲಿ ಬೆರೆಸಿರುವ ಪಾಕಿಸ್ತಾನ ನಿನ್ನೆ ಸಂಸತ್ತಿನಲ್ಲಿ ಹೇಳಿರುವುದು ಸುಳ್ಳು ಅನ್ನುವುದನ್ನು ಸಾಬೀತು ಮಾಡಿದೆ.

ನಿಗದಿಯಂತೆ ಇಂದು ಬೆಳಗ್ಗೆ 11 ಗಂಟೆಗೆ ಅಭಿನಂದನ್ ಭಾರತದ ಭೂಮಿಗೆ ಕಾಲಿಡಬೇಕಾಗಿತ್ತು. ಆದರೆ ನೆಪವೊಡ್ಡಿದ್ದ ಪಾಕ್ ಹಸ್ತಾಂತರ ಪ್ರಕ್ರಿಯೆಯನ್ನು ಸಂಜೆ ನಾಲ್ಕು ಗಂಟೆಗೆ ಮುಂದೂಡಿತು.

4 ಗಂಟೆ 5,6,7,8,9 ರ ಗಡಿ ದಾಟಿತು. ಆದರೆ ಅಭಿನಂದನ್ ಸ್ವಾಗತಕ್ಕೆ ವಾಘಾ ಗಡಿಯಲ್ಲಿ ಸಿದ್ದರಾಗಿದ್ದ ಭಾರತೀಯರ ಪಾಲಿಗೆ ನಿರಾಸೆ ತಂದಿಟ್ಟಿತು.

ಮತ್ತೆ ಮತ್ತೆ ನರಿ ಬುದ್ದಿ ತೋರಿಸಿದ ದುಷ್ಟ ಪಾಕಿಸ್ತಾನ, ಒಂದಲ್ಲ ಒಂದು ನೆಪವೊಡ್ಡಿ ಅಭಿನಂದನ್ ಹಸ್ತಾಂತರ ಪ್ರಕ್ರಿಯೆಯನ್ನು ವಿಳಂಭಗೊಳಿಸುತ್ತಿದೆ.

ದಾಖಲಾತಿ ಪ್ರಕ್ರಿಯೆಯ ನೆಪಕೊಟ್ಟಿರುವ ಪುಟಿಗೋಸಿ ಪಾಕ್ ಅಧಿಕಾರಿಗಳು, ಪಾಕಿಸ್ತಾನ ಪ್ರಧಾನಿಗೆ ನಮ್ಮ ದೇಶದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಅನ್ನುವುದನ್ನು ಸಾಬೀತು ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ಪ್ರಧಾನಿ ಅಂದ್ರೆ ಅದೊಂದು ತೊಗಲು ಗೊಂಬೆ, ಆಟ ಆಡಿಸುವುದು ಸೇನೆಯ ಕೆಲಸ ಅನ್ನುವುದನ್ನು ವಿಶ್ವಕ್ಕೆ ಪಾಕಿಸ್ತಾನಕ್ಕೆ ಸಾರಿದ್ದಾರೆ.

ಒಟ್ಟಿನಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪ್ರಜಾಪ್ರಭುತ್ವದ ದೇವಾಲಯ ಎಂದು ಕರೆಸಿಕೊಂಡಿರುವ ಸಂಸತ್ತಿನಲ್ಲಿ ಸುಳ್ಳು ಹೇಳಿದ್ದಾರೆ ಅಂದ ಮೇಲೆ ಪಾಪಿ ಪಾಕಿಸ್ತಾನ, ಶಾಂತಿ..ಶಾಂತಿ..ಶಾಂತಿ… ಮಾತುಕತೆ..ಮಾತುಕತೆ..ಮಾತುಕತೆ.. ಅನ್ನುತ್ತಿದೆ.

ನಿನ್ನೆ ಇಮ್ರಾನ್ ಖಾನ್ ಸಂಸತ್ತಿನಲ್ಲಿ ಮಾಡಿದ್ದ ಭಾಷಣವನ್ನು ಕನ್ನಡಕ್ಕೆ ತರ್ಜಮೆ ಮಾಡಿ ಸಿಕ್ಕಾಪಟ್ಟೆ ಹಂಚಿಕೆ ಮಾಡಲಾಗಿತ್ತು. ಇಮ್ರಾನ್ ಖಾನ್ ಒಬ್ಬ ಶಾಂತಿದೂತ, ಪಾಕಿಸ್ತಾನ ಶಾಂತಿ ಬಯಸುತ್ತಿದೆ ಅನ್ನುವುದನ್ನು ಪ್ರಚಾರ ಮಾಡಲು ಯತ್ನಿಸಿದ್ದರು.

ಆದರೆ ಹುಟ್ಟು ಗುಣ, ಸುಟ್ಟರೂ ಹೋಗಲ್ಲ ಅನ್ನುವಂತೆ ಪಾಕಿಸ್ತಾನ ವರ್ತಿಸಿದೆ. ಇಮ್ರಾನ್ ಖಾನ್ ಶಾಂತಿ ಪ್ರಿಯ ಅನ್ನುವುದನ್ನು ಬಿಂಬಿಸಲು ಹೊರಟ ಕರ್ನಾಟಕ ಕೆಲ ಬುದ್ದಿವಂತಿರು ಇದೀಗ ಸೈಲೆಂಟ್ ಆಗಿದ್ದಾರೆ.

ಅಭಿನಂದನ್ ಬಿಡುಗಡೆ ವಿಳಂಭವಾಗುತ್ತಿದೆಯಲ್ಲ, ಎಲ್ಲಿ ಹೋದರೂ ಕರ್ನಾಟಕದ ಇಮ್ರಾನ್ ಖಾನ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು.

ಮುಗಿಸುವುದಕ್ಕೂ ಮುನ್ನ ಮತ್ತೊಂದು ಮಾತು, ಪಾಕ್ ಸಂಸತ್ತಿನಲ್ಲಿ ಶಾಂತಿ ಮಂತ್ರವನ್ನು ನಾಟಕೀಯವಾಗಿ ಪ್ರೆಸೆಂಟ್ ಮಾಡಿದ್ದ ಇಮ್ರಾನ್ ಖಾನ್ ಮುಖ ಮತ್ತೊಮ್ಮೆ ಬಯಲಾಗಿದೆ.

ಅತ್ತ ಇಮ್ರಾನ್, ಶಾಂತಿ ಮಂತ್ರವನ್ನು ವಿಶ್ವದ ಕಣ್ಣಿಗೆ ಮಣ್ಣೆರೆಚುವ ರೀತಿಯಲ್ಲಿ ಪಠಿಸುತ್ತಿದ್ದರೆ.. ಗಡಿಯಲ್ಲಿ ಪಾಕ್ ಸೈನಿಕರು ಭಾರತದ ವಿರುದ್ಧ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಪಾಕ್ ಪ್ರೇರಿತ ಉಗ್ರರು ಅಟ್ಟಹಾಸಗೈಯಲು ಯತ್ನಿಸಿದ್ದಾರೆ.

ಈಗ ಹೇಳಿ ಇಮ್ರಾನ್ ಖಾನ್ ಅಭಿಮಾನಿಗಳೇ, ಇವನು ಯಾವ ಸೀಮೆಯ ಶಾಂತಿ ಪ್ರಿಯ.

ಬುದ್ಧಿಜೀವಿಗಳು ದುರ್ಬುದ್ಧಿ ಜೀವಿಗಳಾಗದಿರಲಿ : ಪೇಜಾವರ ಶ್ರೀ

ವಿಂಗ್ ಕಮಾಂಡರ್ ಅಭಿನಂದನ್ ತೋರಿದ್ದು ಮೆಚ್ಚುವ ಧೈರ್ಯ. ಶತ್ರುಗಳ ದೇಶದಲ್ಲಿ ಆವರು ವರ್ತಿಸಿದ ರೀತಿಯಿಂದ ದೇಶದ ಗೌರವ ಹೆಚ್ಚಿದೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು ಪಾಕಿಸ್ತಾನದ ಜೊತೆ ಯುದ್ಧ ಬೇಡ. ಯುದ್ಧದಿಂದ ಸಾವು ನೋವುಗಳು ಸಂಭವಿಸುತ್ತದೆ. ಯುದ್ಧದಿಂದ ನಮ್ಮ ಸೈನಿಕರಿಗೂ ಹಾನಿಯಾಗುತ್ತದೆ. ಹಾಗಾಗಿ ಆತ್ಮಾಭಿಮಾನಕ್ಕೆ ಚ್ಯುತಿಬಾರದ ರೀತಿಯಲ್ಲಿ ಶಾಂತಿ ಸ್ಥಾಪನೆಯಾಗಲಿ ಎಂದರು.

ಇದೇ ವೇಳೆ ಬುದ್ದಿಜೀವಿಗಳ ಬಗ್ಗೆ ಟೀಕಾ ಪ್ರಹಾರ ನಡೆಸಿದ ಪೇಜಾವರ ಶ್ರೀಗಳು ದೇಶದ ಬುದ್ಧಿಜೀವಿಗಳ ಬಗ್ಗೆ ತಿರಸ್ಕಾರ ಉಂಟಾಗಿದೆ. ಇಂತಹ ಸಂದರ್ಭದಲ್ಲೂ ಅವರಿಗೆ ದೇಶಾಭಿಮಾನ ಇಲ್ಲವಲ್ಲ ಎಂದು ನೋವಾಗುತ್ತಿದೆ.

ಬುದ್ಧಿಜೀವಿಗಳಿಗೆ ಒಳ್ಳೆಯ ಬುದ್ಧಿ ಬರಲಿ. ಬುದ್ಧಿಜೀವಿಗಳು ದುರ್ಬುದ್ಧಿ ಜೀವಿಗಳಾಗದಿರಲಿ. ಎಲ್ಲಾ ಬುದ್ಧಿಜೀವಿಗಳು ಸದ್ಬುದ್ಧಿ ಜೀವಿಗಳಾಗಲಿ. ಬುದ್ಧಿ ಜೀವಿಗಳ ದುರ್ಬುದ್ಧಿ ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.