Advertisements

ಭೂಗತಪಾತಕಿ ರವಿ ಪೂಜಾರಿ ಪೊಲೀಸ್ ವಶಕ್ಕೆ

ಮೋಸ್ಟ್ ವಾಂಟೆಡ್ ಭೂಗತ ಪಾತಕಿ ರವಿ ಪೂಜಾರಿ ಕೊನೆಗೂ ಸೆರೆ ಸಿಕ್ಕಿದಾನೆ.  ರವಿ ಪೂಜಾರಿಯನ್ನು ದಕ್ಷಿಣ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಬಂಧಿಸಲಾಗಿದೆ ಎನ್ನಲಾಗಿದೆ.

ಬೆದರಿಕೆ, ಹಫ್ತಾ ವಸೂಲಿ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾರುವ ರವಿ ಪೂಜಾರಿ ಪೊಲೀಸರ ಮೋಸ್ಟ್ ವಾಂಟೆಂಡ್ ಭೂಗತ ಪಾತಕಿಯಾಗಿದ್ದಾನೆ.

ಈತ ರಿಮೋಟ್ ರೌಡಿಸಂ ನಡೆಸಿದ ಮೊದಲ ಭೂಗತ ಪಾತಕಿ ಎಂಬ ಕುಖ್ಯಾತಿಯೂ ರವಿ ಪೂಜಾರಿಗಿದೆ.  60ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ ಗಳಲ್ಲಿ ಭಾಗಿಯಾಗಿರುವ ರವಿ ಪೂಜಾರಿ ಮೇಲೆ ಕರ್ನಾಟಕ, ಮಹಾರಾಷ್ಟ್ರ, ಕೇರಳ ಸೇರಿ ಹಲವೆಡೆ ಕೇಸ್ ದಾಖಲಾಗಿವೆ.

ಭೂಗತವಾಗಿದ್ದುಕೊಂಡೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ರವಿ ಪೂಜಾರಿಯನ್ನು ಅರೆಸ್ಟ್ ಮಾಡಲು ಭಾರತದ ತನಿಖಾ ಸಂಸ್ಥೆಗಳು ಸೆನೆಗಲ್ ದೇಶದೊಂದಿಗೆ ಸಂಪರ್ಕದಲ್ಲಿದ್ದವು ಎಂದು ತಿಳಿದುಬಂದಿದ್ದು, ಈ ಹಿನ್ನಲೆಯಲ್ಲಿ ಸೆನೆಗಲ್ ಪೊಲೀಸರು ರವಿ ಪೂಜಾರಿಯನ್ನು ವಶಕ್ಕೆ ಪಡೆದಿರಬಹುದು ಎಂದು ಹೇಳಲಾಗುತ್ತಿದೆ.

ಸೆನೆಗಲ್ ಪೊಲೀಸರು ರವಿ ಪೂಜಾರಿಯನ್ನು ವಶಕ್ಕೆ ಪಡೆದಿರುವುದು ಖಚಿತವಾಗಿದ್ದು, ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ರವಿ ಪೂಜಾರಿ ಬಂಧನಕ್ಕೆ ಭಾರತ ಸರ್ಕಾರ ಪಶ್ಚಿಮ ಆಫ್ರಿಕಾ ದೇಶದವಾದ ಸೆನೆಗಲ್ ನೊಂದಿಗೆ ಸಂಪರ್ಕದಲ್ಲಿತ್ತು. ಬಂಧನ ಕುರಿತು ಭಾರತದ ಸರ್ಕಾರಕ್ಕೆ ಸೆನೆಗಲ್ ಸರ್ಕಾರ ಮಾಹಿತಿ ನೀಡಿದೆ ಎನ್ನಲಾಗಿದೆ. ಆದರೆ ಅಧಿಕೃತ ಪ್ರಕಟಣೆ ಹೊರ ಬಿದ್ದಿಲ್ಲ. 

ಬೆದರಿಕೆ, ಹಫ್ತಾ ವಸೂಲಿ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾರುವ ರವಿ ಪೂಜಾರಿ ಸಿಸಿಬಿಯ ಹಿಟ್ ಲಿಸ್ಟ್​ನ ಅಗ್ರ ಸಾಲಿನಲ್ಲಿದ್ದನೆನ್ನಲಾಗಿದೆ. ರಿಮೋಟ್ ರೌಡಿಸಂ ನಡೆಸಿದ ಮೊದಲ ಭೂಗತ ಪಾತಕಿ ಎಂಬ ಕುಖ್ಯಾತಿಯೂ ರವಿ ಪೂಜಾರಿಗಿದೆ. ಇಂಟರ್​ಪೋಲ್​ನಿಂದಲೂ ಪೂಜಾರಿ ಬಂಧನಕ್ಕೆ ರೆಡ್ ಕಾರ್ನರ್ ನೋಟೀಸ್ ನೀಡಲಾಗಿತ್ತು.

ಕೆಲ ದಿನಗಳ ಹಿಂದಷ್ಟೇ ಮುಂಬೈ ಪೊಲೀಸರು ರವಿ ಪೂಜಾರಿ ಗ್ಯಾಂಗ್​ನ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದರು. ಈ ಬಂಧಿತರಲ್ಲಿ ಬೆಂಗಳೂರಿನ ಆಕಾಶ್ ಶೆಟ್ಟಿ ಕೂಡ ಒಬ್ಬ. ಭೂಗತ ಪಾತಕಿಯು ಬಿಲ್ಡರ್ ಒಬ್ಬರಿಗೆ ಫೋನ್​ನಲ್ಲಿ ಬೆದರಿಕೆ ಹಾಕಿದ್ದ. ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಆಕಾಶ್ ಶೆಟ್ಟಿಯನ್ನು ಬಂಧಿಸಿದ್ದರು.

ರವಿ ಪೂಜಾರಿಗೆ ನಗರದಲ್ಲಿರುವ ಬಿಲ್ಡರ್ ಗಳ ಬಗ್ಗೆ ಮಾಹಿತಿ ಕೊಡುತ್ತಿದ್ದುದು ಆಕಾಶ್ ಶೆಟ್ಟಿ ಮತ್ತು ವಿಲಿಯಮ್ ರಾಡ್ರಿಕ್ಸ್. ಇದೇ ಕಾರಣಕ್ಕೆ ಪೊಲೀಸರು ಇವರಿಬ್ಬರನ್ನು ಬಂಧಿಸಿದ್ದ ಪೊಲೀಸರು ಎಂಕೋಕಾ( ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಅಡಿ ಮೊಕದ್ದಮೆ ದಾಖಲಿಸಿ ಜೈಲಿಗಟ್ಟಿದ್ದರು.

ಇದೀಗ ಸ್ವತಃ ಅಂಡರ್​ವರ್ಲ್ಡ್ ಡಾನ್ ರವಿ ಪೂಜಾರಿಯೇ ಬಂಧಿತನಾಗಿದ್ಧಾನೆ. 90ರ ದಶಕದಲ್ಲಿ ಭೂಗತಲೋಕದಲ್ಲಿ ದೊಡ್ಡಮಟ್ಟದಲ್ಲಿ ಹೆಸರು ಮಾಡಿದ್ದ ರವಿ ಪೂಜಾರಿ ದುಬೈನಲ್ಲಿ ಕೂತೇ ಮುಂಬೈ, ಮಂಗಳೂರು ಮತ್ತು ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ.

ಈ ಹಿಂದೆ ಕರ್ನಾಟಕದ ಮಾಜಿ ಶಾಸಕ ಅನಿಲ್ ಲಾಡ್ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್, ಸಂಸದ ಡಿಕೆ ಸುರೇಶ್, ಶಿವಸೇನಾ ಸಂಸದರು ಸೇರಿದಂತೆ ಹಲವು ಉದ್ಯಮಿಗಳಿಗೆ ಹಾಗೂ ಚಿತ್ರತಾರೆಯರಿಗೆ ಬೆದರಿಕೆ ಹಾಕಿದ್ದ ಎಂಬ ಬಗ್ಗೆ ಪ್ರಕರಣ ದಾಖಲಾಗಿತ್ತು

ಬುಧವಾರ ಕೂಡಾ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ವಿಜಯನಗರ ಠಾಣೆಗೆ ರವಿ ಪೂಜಾರಿ ವಿರುದ್ಧ ದೂರು ಸಲ್ಲಿಸಿದ್ದರು.

Advertisements

ಯಕ್ಷಗಾನದಲ್ಲಿ ಮೋದಿ ಹೆಸರು ಬಂದ್ರೆ ಹುಷಾರ್ – ಕೈ ಪಡೆಯಿದ ಪೊಲೀಸರಿಗೆ ಫೋನ್

ಯಕ್ಷಗಾನದ ಸಂಭಾಷಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹೆಸರು ಉಲ್ಲೇಖಿಸಿ ಸಂಭಾಷಣೆ ನಡೆಸಿದ್ದು ವಿವಾದಕ್ಕೆ ಕಾರಣವಾಗಿದೆ.ಛತ್ರಪತಿ ಶಿವಾಜಿ ಮಹಾರಾಜನ ಕಥೆಯುಳ್ಳ ಪ್ರಸಂಗದ ಯಕ್ಷಗಾನ ನಡೀತಿದ್ದಾಗ ಶಿವಾಜಿಯ ಗುರು ಸಮರ್ಥ ರಾಮದಾಸನ ಪಾತ್ರ ಮಾಡಿದ್ದ ಕಲಾವಿದ ಗಣರಾಜ ಭಟ್ ಬಡೆಕ್ಕಿಲ.

ಭಾರತದ ಸ್ವಚ್ಛತೆಗಾಗಿ ನರೇಂದ್ರನಂತೆ ನೀನು ಕೇಸರಿಯ ತಂಡ ಕಟ್ಟಬೇಕು. ರಾತ್ರಿ ವೇಳೆ ಗೋವುಗಳನ್ನು ಕದ್ದೊಯ್ಯುವ ದುಷ್ಟರನ್ನು ಸದೆಬಡಿಯಲು ಜಾಗರಣ ನಿಲ್ಲುವಂತೆ ತರುಣ ಪಡೆಯನ್ನು ಜಾಗರಣ ವೇದಿಕೆಯ ರೂಪದಲ್ಲಿ ಕಟ್ಟಬೇಕಿದೆ ಅನ್ನುವ ಉಪದೇಶವನ್ನು ಶಿವಾಜಿಗೆ ಹೇಳುತ್ತಾರೆ.

ಕಥೆಯ ರೂಪವನ್ನು ಈಗಿನ ರಾಜಕೀಯ ಸನ್ನಿವೇಶಕ್ಕೆ ತಕ್ಕಂತೆ ಬದಲಿಸಿಕೊಂಡು ಪ್ರಧಾನಿ ಮತ್ತು ಹಿಂದು ಸಂಘಟನೆಯ ಹೆಸರು ಹೇಳಿದ್ದು ಬಿಜೆಪಿ ವಿರೋಧಿಗಳ ಕಣ್ಣು ಕೆಂಪಾಗಿಸಿದ್ದು ಕಾಂಗ್ರೆಸಿಗರಿಂದ ಆಕ್ಷೇಪ ಕೇಳಿಬಂದಿದೆ.

ಹೀಗಾಗಿ ಈ ವಿಡಿಯೋ ವೈರಲ್ ಆಗಿದ್ದು ಜಾಲತಾಣದಲ್ಲಿ ಪರ – ವಿರೋಧ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಮಾಜಿ ಸಚಿವ ರಮಾನಾಥ ರೈ ದಕ್ಷಿಣ ಕನ್ನಡ ಎಸ್ಪಿಗೆ ಫೋನ್ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಆದರೆ, ಲಿಖಿತವಾಗಿ ಯಾವುದೇ ದೂರು ಸಲ್ಲಿಸಿಲ್ಲ. ಇದನ್ನೇ ನೆಪ ಮಾಡಿಕೊಂಡ ಪುತ್ತೂರು ಠಾಣೆ ಪೊಲೀಸರು ಕಲಾವಿದ ಗಣರಾಜ ಭಟ್ಟರನ್ನು ಠಾಣೆಗೆ ಕರೆಸಿ, ಮುಚ್ಚಳಿಕೆ ಬರೆಸಿದ್ದಾರೆ.

ಈ ಯಕ್ಷಗಾನ ಕೆಲವು ದಿನಗಳ ಹಿಂದೆ ಪುತ್ತೂರು ತಾಲೂಕಿನ ದೇಂತಡ್ಕದಲ್ಲಿ ನಡೆದಿತ್ತು. ಇದೀಗ ರಮಾನಾಥ ರೈಯ ಫೋನ್ ಕರೆಯ ಮಾತ್ರಕ್ಕೆ ಪೊಲೀಸರು ಕಲಾವಿದನನ್ನು ಠಾಣೆಗೆ ಕರೆಸಿ, ವಿಚಾರಣೆ ನಡೆಸಿದ್ದು ಹಿಂದು ಸಂಘಟನೆ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ನಿಜಕ್ಕೂ ಇದನ್ನು ದುರಂತ ಅನ್ನದೆ ವಿಧಿಯಿಲ್ಲ. ಭಗವಾನ್ ರಂತಹ ಬುದ್ದಿ ಜೀವಿಗಳು ಧರ್ಮವನ್ನು ಲೇವಡಿ ಮಾಡುತ್ತಿದ್ದಾರೆ. ಆಸ್ತಿಕರ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಆದರೆ ಅದನ್ನು ನಿಯಂತ್ರಿಸಬೇಕಾದ ನಾಯಕರು ಮೌನವಾಗಿದ್ದಾರೆ. ಮೋದಿ ಹೆಸರು ಕೇಳಿ ಬಂದರೆ ಸಾಕು ಉರಿದು ಬೀಳುತ್ತಾರೆ.

ಹಾಗಂತ ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ಶೀಘ್ರದಲ್ಲೇ ಲೋಕಸಭೆ ಚುನಾವಣೆ ಹತ್ತಿರದಲ್ಲಿದೆ. ತಪ್ಪು ಮಾಡಿದವರಿಗೆ ಮತದಾರರೇ ಪಾಠ ಕಲಿಸುತ್ತಾರೆ.

ಕಳೆದ ವಿಧಾನಸಭೆಯಲ್ಲೂ ಹೀಗೆ ಆಗಿತ್ತು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಬಸವಣ್ಣನ ವಚನವನ್ನು ಉಲ್ಲೇಖಿಸುತ್ತಾ ನೀಡಿದ್ದ ‘ಇವನರ್ವ’ ಹೇಳಿಕೆಯನ್ನು ಯಕ್ಷಗಾನದಲ್ಲಿ ಬಳಕೆ ಮಾಡಿದ ಆರೋಪದಲ್ಲಿ ಯಕ್ಷಗಾನ ಕಲಾವಿದರೊಬ್ಬರಿಗೆ ನೀತಿ ಸಂಹಿತೆ ಉಲ್ಲಂಘನೆಯ ಆರೋಪದಡಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಚುನಾವಣಾ ಅಧಿಕಾರಿ ನೋಟಿಸ್ ಜಾರಿಗೊಳಿಸಿದ್ದರು.

ಆ ದೃಶ್ಯಾವಳಿಯ ಬಗ್ಗೆ ತನಿಖೆ ನಡೆಸದೆ ನೋಟಿಸ್ ಕೊಟ್ಟ ಕಾರಣ ಆಯೋಗ ಮುಜುಗರಕ್ಕೂ ಒಳಗಾಗಿತ್ತು.

ಕಟೀಲು ಮೇಳದ ಪೂರ್ಣೇಶ್ ಎಂಬ ಕಲಾವಿದರಿಗೆ ನೋಟೀಸ್ ಕೊಟ್ಟಿದ್ದ ಆಯೋಗ, ಎಂಬ  ಎಪ್ರಿಲ್ 1ರಂದು ಮೂಡುಬಿದಿರೆಯ ಪಡುಮಾರ್ನಾಡಿನ ಬನ್ನಡ್ಕ ಎಂಬಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ರಾಜಕೀಯ ಪ್ರೇರಿತ ಶಬ್ದ ಬಳಸಿದ್ದಾರೆ. ಆದ್ದರಿಂದ ಅವರನ್ನು ಮೇಳದಿಂದ ವಜಾಗೊಳಿಸುವಂತೆ ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಕಟೀಲು ಮೇಳಕ್ಕೂ ಸೂಚಿಸಿದ್ದರು.

ಆದರೆ ‘ಇವನರ್ವ’ ಪದದ ಸಂಭಾಷಣೆಯನ್ನು ಬಳಸಿದ್ದು ಮಾರ್ಚ್ 24 ರಂದು ಕೇರಳದ ಮಾನ್ಯ ಎಂಬಲ್ಲಿ ನಡೆದ ಯಕ್ಷಗಾನದಲ್ಲಿ. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದಕ್ಕಿಂತ ಮುಂಚೆ ಘಟನೆ ನಡೆದಿದೆ.

ಜೊತೆಗೆ ಅದು ಕೇರಳದಲ್ಲಿ ನಡೆದಿರುವ ಕಾರಣ, ಕರ್ನಾಟಕದ ಚುನಾವಣೆಗೆ ಸಂಬಂಧವೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದರು.

ಕವಿತಾಳಿಗೆ ಮಗುವಾಯ್ತು…. ನೀರಾನೆ ಮರಿಗೆ ನಿಮ್ಮ ಹೆಸರಿಡುವ ಆಸಕ್ತಿ ಉಂಟಾ..?

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಮಂಗಳೂರಿನ ಪಿಲಿಕುಳ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನಕ್ಕೆ ಕಳೆದ ವರ್ಷ ಒಂದು ಗಂಡು ಹಾಗೂ ಎರಡು ಹೆಣ್ಣು ನೀರಾನೆಗಳನ್ನು ತರಲಾಗಿತ್ತು.

ಪ್ರಥಮ ಬಾರಿಗೆ ಎಂಟು ವರ್ಷದ  ನೀರಾನೆ ಕವಿತಾ ಏಳು ದಿನಗಳ ಹಿಂದೆ ಮರಿ ಹಾಕಿದ್ದು, ತಾಯಿ ಹಾಗೂ ಮರಿ ನೀರಾನೆ ಆರೋಗ್ಯವಾಗಿವೆ.

ಪ್ರಥಮ ಬಾರಿಗೆ ನೀರಾನೆ ಕವಿತಾಳಿಗೆ ಹುಟ್ಟಿದ ಮರಿ ನೀರಾನೆಯನ್ನು ಯಾರು ದತ್ತು ಪಡೆದುಕೊಳ್ಳುತ್ತಾರೋ ಅವರ ಹೆಸರನ್ನು ಇಡಲು ಅಧಿಕಾರಿಗಳು ಇದೀಗ ನಿರ್ಧಾರ ಮಾಡಿದ್ದಾರೆ. 

ಮರಿ ನೀರಾನೆ ಹುಟ್ಟಿ ಬರೀ ಒಂದು ವಾರವಾಗಿದೆ ಅಷ್ಟೆ. ಇನ್ನೆರಡು ವಾರಗಳ ನಂತರ ಈ ಮರಿ ಹೆಣ್ಣೋ, ಗಂಡೋ ಅನ್ನುವ ನಿರ್ಧಾರಕ್ಕೆ ಬಂದು ಅದಕ್ಕೆ ಹೆಸರು ನೀಡುವ ಕೆಲಸ ನಡೆಯಲಿದೆ.

ಯಾರಾದರೂ ದಾನಿಗಳು ಬಂದು ಈ ಮರಿ ನೀರಾನೆಯನ್ನು ದತ್ತು ಸ್ವೀಕಾರ ಮಾಡಿದರೆ ಅವರ ಹೆಸರನ್ನು ಇಡಲಾಗುತ್ತದೆ. ಇದರ ಜತೆಗೆ ಅವರ ಹೆಸರನ್ನು ಕೂಡ ನೇಮ್‌ ಪ್ಲೇಟ್‌ನಲ್ಲಿ ನಮೂದಿಸಲಾಗುತ್ತದೆ. ಅವರು ಅಥವಾ ಕುಟುಂಬದವರು ಪಿಲಿಕುಳಕ್ಕೆ ಭೇಟಿ ನೀಡುವಾಗ ಉಚಿತ ವೀಕ್ಷಣೆ ವ್ಯವಸ್ಥೆ ಮಾಡಲಾಗುತ್ತದೆ.

ಈಗ ಪಿಲಿಕುಳದಲ್ಲಿ ಕಾವೇರಿ, ಕವಿತಾ ಹಾಗೂ ಅಶ್ವಿನ್‌ ಅನ್ನುವ ನೀರಾನೆ ಜತೆಗೆ ಮರಿ ನೀರಾನೆ ಕೂಡ ಬಂದಿದೆ.

ಗಡ್ಡ ಬಿಟ್ಟು ದೇವದಾಸನಾದ ಗಣೇಶ್ : ವಿರಹ ಪ್ರೇಮದಲ್ಲಿ ಗೋಲ್ಡನ್ ಸ್ಟಾರ್

ತಮಿಳು ಸೂಪರ್ ಹಿಟ್ ಸಿನಿಮಾ ’96’ ಕನ್ನಡದಲ್ಲಿ ’99’ ಹೆಸರಿನಲ್ಲಿ ರೀಮೇಕ್ ಆಗಿ ಮೂಡಿಬರಲಿದೆ ಅನ್ನುವುದು ಹಳೆಯ ಸುದ್ದಿ.

ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದಲ್ಲಿ ಹೊರ ಬರಲಿರುವ ಚಿತ್ರವನ್ನು ಪ್ರೀತಮ್ ಗುಬ್ಬಿ ನಿರ್ದೇಶಿಸಲಿದ್ದಾರೆ.

’99’ ಚಿತ್ರದಲ್ಲಿ ಗಣೇಶ್ ‘ಸಂಚಾರಿ ಫೋಟೋಗ್ರಾಫರ್’ ಪಾತ್ರ ಮಾಡಲಿದ್ದಾರೆ. ತನ್ನದೇ ಲೋಕದಲ್ಲಿ ವಿಹರಿಸುವ ಫೋಟೋಗ್ರಾಫರ್ ಪಾತ್ರಕ್ಕೆ ಗಣೇಶ್ ಜೀವ ತುಂಬಲಿದ್ದಾರೆ.

ಇದೀಗ ಈ ಚಿತ್ರದ ಗಣೇಶ್ ಪಾತ್ರದ ಲುಕ್ ರಿವೀಲ್ ಆಗಿದೆ. ರೊಮ್ಯಾಂಟಿಕ್ ಹೀರೋ ಗಣೇಶ್ ಮುಖಕ್ಕೆ ಈ ಲುಕ್ ತುಂಬಾ ರಗಡ್ ಅನ್ನಿಸುವಂತಿದೆ.

ಈ ಬಗ್ಗೆ ಮಾತನಾಡಿರುವ ಗಣೇಶ್ “99 ಚಿತ್ರಕಥೆಯು ನೈಜತೆಗೆ ಬಹಳಷ್ಟು ಹತ್ತಿರವಾಗಿದ್ದು ನನಗೆ ತುಂಬಾ ಇಷ್ಟವಾಗಿದೆ. ಈ ಮೊದಲಿನ ಎಲ್ಲ ಚಿತ್ರಗಳಲ್ಲಿ ನನ್ನನ್ನು ವಿಭಿನ್ನ ಪಾತ್ರಗಳಲ್ಲಿ ನೋಡಿರುವ ಪ್ರೇಕ್ಷಕರಿಗೆ ಈ ಪಾತ್ರ ಎಲ್ಲಕ್ಕಿಂತ ತೀರಾ ಭಿನ್ನ ಎನಿಸಲಿದೆ. ಈ ಪಾತ್ರದ ಫೋಟೋಗ್ರಾಫರ್ ತನ್ನ ಲುಕ್ ಬಗ್ಗೆ ಸ್ವಲ್ಪವೂ ತಲೆ ಕೆಡಿಸಿಕೊಳ್ಳದ, ಎಲ್ಲವನ್ನೂ ಲೈಟಾಗಿ ತೆಗೆದುಕೊಳ್ಳುವ ಜಾಯಮಾನದವನು. ಹೀಗಾಗಿ ಪ್ರೇಕ್ಷಕರು ನನ್ನ ಹೊಸ ಲುಕ್ ಹಾಗೂ ಪಾತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಬಗ್ಗೆ ನನಗೂ ತೀವ್ರ ಕುತೂಹಲವಿದೆ” ಎಂದಿದ್ದಾರೆ. 

ಹೀಗಾಗಿಯೇ ಪಾತ್ರಕ್ಕೆ ಅಗತ್ಯ ಇರುವ ಕಾರಣಕ್ಕೆ ಗಣೇಶ್ ಗಡ್ಡ ಬಿಟ್ಟು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಗಣೇಶ್ ನಟನೆಯ ಉಳಿದ ಚಿತ್ರಗಳಿಗಿಂತ ’99’ ಚಿತ್ರ ತುಂಬಾ ವಿಭಿನ್ನ ಅನ್ನುವುದನ್ನು ಫಸ್ಟ್ ಲುಕ್ ಸಾರಿದೆ.

ಈ ಪಾತ್ರಕ್ಕಾಗಿ 4 ಕೆಜಿ ತೂಕ ಹೆಚ್ಚಿಸಿಕೊಂಡಿರುವ ಗಣೇಶ್ , ತೂಕ ಹೆಚ್ಚಿಸಲೆಂದು ಕರಿದ ಪದಾರ್ಥಗಳು, ಸ್ವೀಟ್ಸ್ ಎಲ್ಲವನ್ನೂ ಹೊಟ್ಟೆಗಿಳಿಸಿಕೊಂಡಿದ್ದಾರೆ. ಈ ಹಿಂದೆ ಗಣೇಶ್ ಕರಿದ ಪದಾರ್ಥಗಳಿಂದ ತುಂಬಾ ದೂರವುಳಿದಿದ್ದರು.

ಈ ಚಿತ್ರಕ್ಕಾಗಿ ಗಣೇಶ್ ದಪ್ಪವಾಗಿದ್ದಾರೆ ನಿಜ. ಆದರೆ ಮುಂದಿನ ಚಿತ್ರಕ್ಕಾಗಿ ಮತ್ತೆ ತೂಕ ಇಳಿಸಬೇಕಾಗಿದೆ. ಇದೇ ಅವರಿಗೆ ದೊಡ್ಡ ತಲೆನೋವಾಗಿದೆ.

ಸಿದ್ದಗಂಗಾಶ್ರೀಗಳಿಗೆ ಭಾರತ ರತ್ನ ಕೊಡುವ ಅವಕಾಶ ಜೆಡಿಎಸ್ ಗೆ ಸಿಗಲಿದೆ…!

ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡುವ ಅವಕಾಶ ಮುಂದಿನ ಆರೇಳು ತಿಂಗಳಲ್ಲಿ ನಮಗೆ ದೊರೆಯಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 

ಸಿದ್ಧಗಂಗಾ ಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಗುರುವಾರ ನಡೆದ ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು  ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಟ್ಟಿದ್ದರೆ ಆ ಪ್ರಶಸ್ತಿಗೆ ಗೌರವ ಬರುತ್ತಿತ್ತು. ಶ್ರೀಗಳಿಗೆ ಭಾರತ ರತ್ನ ಕೊಡುವ ಅವಕಾಶವನ್ನು ಮುಂದಿನ ದಿನಗಳಲ್ಲಿ ನಾವೇ ಸೃಷ್ಟಿಸಿಕೊಳ್ಳುವ ಸಂದರ್ಭವಿದೆ ಎಂದರು. 

ಮುಂದಿನ ಆರೇಳು ತಿಂಗಳಲ್ಲಿ ಶ್ರೀಗಳಿಗೆ ಭಾರತ ರತ್ನ ಕೊಡುವ ಅವಕಾಶ ನಮಗೆ ಸಿಗುತ್ತದೆ. ನಿಮ್ಮ ಆಶೀರ್ವಾದದಿಂದಲೇ ಅದು ಸಾಧ್ಯವಾಗುತ್ತದೆ. ನಾನು ಈ ಮಾತನ್ನು ಸೂಕ್ಷ್ಮವಾಗಿ ಹೇಳುತ್ತಿದ್ದೇನೆ ಎಂದರು. 

ಈ‌ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಸೋಲಲಿದ್ದಾರೆ. ಬಿಜೆಪಿ ನೇತೃತ್ವದ ಎನ್.ಡಿ.ಎ ಅಧಿಕಾರ ಕಳೆದುಕೊಳ್ಳಲಿದ್ದು, ಬದಲಾಗಿ ಮಹಾಘಟಬಂಧನ್ ಅಧಿಕಾರ ಹಿಡಿಯಲಿದೆ ಅನ್ನುವ ವಿಶ್ವಾಸವನ್ನು ಕುಮಾರಸ್ವಾಮಿ ಈ ಮೂಲಕ ವ್ಯಕ್ತಪಡಿಸಿದರು.

ಶಶಿ ಗೆಲುವಿನ ಹಿಂದಿನ ಮಹಾರಹಸ್ಯ ಬಯಲು…!

ಬಿಗ್ ಬಾಸ್ ಗೆಲ್ಲಬೇಕು ಅಂದರೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಪ್ರಚಾರ ಮಾಡಬೇಕು ಅನ್ನುವ RJ ರಶ್ಮಿ ಮಾತಿನಲ್ಲಿ ಸತ್ಯಾಂಶವಿದೆ.

ಈ ಹಿಂದೆ ಸಾಮಾಜಿಕ ಜಾಲ ತಾಣ ಅಷ್ಟೊಂದು ಪ್ರಭಾವಶಾಲಿಯಾಗಿರಲಿಲ್ಲ. 2014ರ ಚುನಾವಣೆಯಲ್ಲಿ ಮೋದಿ ಸಾಮಾಜಿಕ ಜಾಲತಾಣವನ್ನು ಚೆನ್ನಾಗಿ ಬಳಸಿಕೊಂಡರೋ ಅಂದಿನಿಂದ ಸಾಮಾಜಿಕ ಜಾಲತಾಣ ಸಿಕ್ಕಾಪಟ್ಟೆ ಪ್ರಭಾವ ಬೀರಲಾರಂಭಿಸಿದೆ. ಅವಕಾಶ ಕೊಟ್ಟರೆ ಸಂವಿಧಾನವನ್ನೇ ಬದಲಾಯಿಸುವ ಮಟ್ಟಿಗೆ ಅಪಾಯಕಾರಿಯಾಗಿ ಸಾಮಾಜಿಕ ಜಾಲತಾಣ ಬೆಳೆದು ನಿಂತಿದೆ.

ಶಶಿ ಗೆಲುವಿನಲ್ಲೂ ಆಗಿದ್ದು ಹೀಗೆ. ಸಾಮಾನ್ಯ ರೈತನಾಗಿ ಮನೆಯೊಳಗಡೆ ಹೋದ ಶಶಿ ಹಿಂದೆ ಅದ್ಭುತ Social media team ಇತ್ತು.

ಅತ್ತ ಮನೆಯೊಳಗಡೆ ಹೋಗುತ್ತಿದ್ದಂತೆ ಫೇಸ್ ಬುಕ್, ಟ್ವೀಟರ್, ಇನ್ಸ್ಟಾ ಹೀಗೆ ಇರೋ ಬರೋ ಕಡೆ ಸಿಕ್ಕಾಪಟ್ಟೆ ಕೆಲಸ ಪ್ರಾರಂಭಿಸಿತ್ತು. ಬರೋ ನೆಗೆಟಿವ್ ಕಮೆಂಟ್ ಗಳಿಗೆ ಉತ್ತರಿಸುವ ಕೆಲಸಗಳು ನಡೆಯಿತು.

ಸಾವಿರ ನೂರರ ಲೆಕ್ಕದಲ್ಲಿ ಫಾಲೋವರ್ ಗಳನ್ನು ಹೊಂದಿದ್ದ ಖಾತೆಗೆ ಲಕ್ಷಾಂತರ ಮಂದಿ ಅಭಿಮಾನಿಗಳು ಹುಟ್ಟಿಕೊಂಡರು. ಶಶಿ ಗೆಲುವಿಗಾಗಿ ಪೂಜೆ ಸೇರಿದಂತೆ ಅನೇಕ ಕೆಲಸಗಳು ನಡೆಯಿತು. ಗಿಮಿಕ್ ಗಳನ್ನು ನಂಬಿದ ಮಂದಿ ಶಶಿ ಅದ್ಭುತ ಆಟಗಾರ ಅನ್ನುವ ಸೀಲ್ ಒತ್ತಿದರು.

ಶಶಿ ನಾಮಿನೇಟ್ ಆಗಿದ್ದಾರೆ ಅಂದರೆ ಸಾಕು, ಅವರ ಪರವಾಗಿ ಮಾತನಾಡುವ ಸಾವಿರ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುತ್ತಿದ್ದರು. ಅವೆಲ್ಲವೂ ಕೂಡಾ ಶಶಿ ಪರವಾಗಿದ್ದ Social media war room ನ ತಂತ್ರವಾಗಿತ್ತು.

ಬಿಗ್ ಬಾಸ್ ಮನೆಯಲ್ಲಿ ಶಶಿ ವಿರುದ್ಧ ಯಾರಾದ್ರೂ ಬೆಂಕಿ ಕಾರಿದರೆ ಸಾಕು, ಅವರ ವಿರುದ್ಧ ಜನಾಭಿಪ್ರಾಯ ಸಂಗ್ರಹ ಸದ್ದಿಲದೆ ನಡೆಯುತ್ತಿತ್ತು.

ಶಶಿ, ಕವಿತಾ ಸಲುವಾಗಿ ಕೈ ಮುರಿದುಕೊಂಡ ವೇಳೆ ಅದೊಂದು ದೊಡ್ಡ ವಿಷಯವನ್ನಾಗಿ ವೀಕ್ಷಕರು ಪರಿಗಣಿಸಿದರು. ಆದರೆ ಅದನ್ನು ಮರೆ ಮಾಚುವ ಕೆಲಸವೂ ಜೋರಾಗಿ ನಡೆದಿತ್ತು.

ಇನ್ನ ಶಶಿ ಪೈನಲ್ ಗೆ ಬರುತ್ತಿದ್ದಂತೆ ಆಯಾ ಕಟ್ಟಿನ ಜಾಗಗಳಲ್ಲಿ ಫ್ಲೆಕ್ಸ್ ಬ್ಯಾನರ್ ಗಳು ಎದ್ದು ನಿಂತಿತ್ತು.

ಹಾಗೆಲ್ಲಾ ಅಭಿಮಾನಿಗಳು ಶಶಿ ಪರವಾಗಿ ಬ್ಯಾನರ್ ಹಾಕುತ್ತಿದ್ದರೆ, ಪ್ರಥಮ್ ಪರವಾಗಿ ಹೈವೇಗಳಲ್ಲಿ ಹೋಲ್ಡಿಂಗ್ ಎದ್ದು ನಿಲ್ಲಬೇಕಾಗಿತ್ತು. ಆ ಮಟ್ಟಿನ ಹವಾ ಸೃಷ್ಟಿಸಿದ ಹಿರಿಮೆ ಅವರದ್ದು.

ನವೀನ್ ಅವರಿಗೂ ಅಭಿಮಾನಿಗಳ ಸಂಖ್ಯೆ ಕಡಿಮೆ ಇರಲಿಲ್ಲ. ಶಶಿಯೊಬ್ಬರನ್ನು ಬಿಟ್ಟರೆ ಮತ್ಯಾರ ಪರವಾಗಿಯೂ ಫ್ಲೆಕ್ಸ್ ಬರಲೇ ಇಲ್ಲ.ಅಲ್ಲಿಗೆ ಶಶಿಯ ಗೆಲುವಿನ ಗುಟ್ಟೇನು ಅನ್ನುವುದು ಗೊತ್ತಾಗಿದೆ.

ಆದರೆ ರಶ್ಮಿ ತನ್ನದೇ ಸಾಮಾಜಿಕ ಜಾಲತಾಣದ ಹಿಂಬಾಲಕರನ್ನು ನಂಬಿಕೊಂಡರು. ನನಗೆ ಅಭಿಮಾನಿಗಳ ಹಾರೈಕೆ ಇದೆ, ಆರ್.ಜೆ. ಆಗಿದ್ದ ಕಾರಣಕ್ಕೆ ಜನ ಬೆಂಬಲಿಸುತ್ತಾರೆ ಎಂದು ನಂಬಿದರು.

ರಶ್ಮಿ ಪರವಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಷ್ಟು ಗ್ರೂಪ್, ಪೇಜ್ ಗಳು ಕ್ರಿಯೇಟ್ ಆಗಿತ್ತು, ಆದರೆ ಅದು ಶಶಿ ಹೆಸರಿನ ವಿರುದ್ಧ ಸೆಣಸುವಲ್ಲಿ ವಿಫಲವಾಯ್ತು.

ಇನ್ನು ನವೀನ್ ಸಜ್ಜು ಕಥೆಯೂ ಹೀಗೆ ಆಯ್ತು. ಹಾಡುಗಾರ, ಕರ್ನಾಟಕಕ್ಕೆ ಪರಿಚಯವುಳ್ಳವ ಅನ್ನುವ ಗುಂಗಿತ್ತು. ಅವರ ಸ್ನೇಹಿತರು, ಅಭಿಮಾನಿಗಳು ತಮ್ಮ ತಮ್ಮ ಪಾಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದರೆ ಹೊರತು, ಸಂಘಟಿತ ಪ್ರಯತ್ನ ಆಗಲಿಲ್ಲ. ನಿಜವಾಗಿಯೂ ಫೈನಲ್ ನಲ್ಲಿ ಗೆಲ್ಲುವ ತಾಕತ್ತು ಸಜ್ಜುವಿಗಿತ್ತು. ಆದರೆ Social media war room ನ ತಂತ್ರದ ಮುಂದೆ ಪ್ರತಿಭೆ ಸೋಲಬೇಕಾಯ್ತು.

ಧನ್ ರಾಜ್ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ.

ಇದೀಗ ಬಿಗ್ ಬಾಸ್ ಕಾರ್ಯಕ್ರಮ ಆಯೋಜಕರು ತಲೆ ಕೆಡಿಸಿಕೊಂಡಿದ್ದಾರೆ. ಮುಂದಿನ ಸೀಸನ್ ಹಣೆ ಬರಹವನ್ನು ಸಾಮಾಜಿಕ ಜಾಲತಾಣವೇ ಬರೆಯುತ್ತದೆ ಅನ್ನುವುದಾದರೆ ಕಷ್ಟ, ಇದಕ್ಕಾಗಿ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು ಎಂದು.

ಚುನಾವಣೆ ಬಂತು ಅಂದರೆ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣದ ನಿರ್ವಹಣೆ ಸಲುವಾಗಿ ಕೋಟಿ ಕೋಟಿ ರೂಪಾಯಿ ಸುರಿಯುತ್ತದೆ. ಸಾಮಾಜಿಕ ಜಾಲತಾಣ ನಿರ್ವಹಣೆಯಲ್ಲಿ ಗೆದ್ದವರೇ ಗದ್ದುಗೆ ಏರುವ ಕಾಲ ಇದಾಗಿರುವಾಗ ಬಿಗ್ ಬಾಸ್ ಅದ್ಯಾವ ಲೆಕ್ಕ.

ಏನಿವೇ ಶಶಿ ಗೆದ್ದಿದ್ದಾರೆ, ಕೊಟ್ಟ ಭರವಸೆಯನ್ನು ಈಡೇರಿಸುವ ಕಾಲ ಯಾವಾಗ ಬರುತ್ತದೆಯೋ ಕಾಯೋಣ. ಯಾಕೆಂದರೆ ಅವರು ಗೆದ್ದಿರುವ ಕರ್ನಾಟಕದ ಜನತೆಯ ಮೊಬೈಲ್ ಕಾಸಿನಿಂದ.

ರಶ್ಮಿTIPS :ಬಿಗ್ ಬಾಸ್ ಗೆಲ್ಲಲು ಮಾಡಬೇಕಾಗಿರುವುದೇನು..?

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಗ್ 6ನೇ ಆವೃತ್ತಿಗೆ ಮಂಗಳ ಹಾಡಲಾಗಿದೆ.

ಫೈನಲ್ ತನಕ ಮಹಾಮನೆಯೊಳಗಿದ್ದ ಸ್ಪರ್ಧಿಗಳು ಇದೀಗ ನಿಧಾನವಾಗಿ ತಮ್ಮ ನಿತ್ಯದ ಬದುಕಿಗೆ ಒಗ್ಗಿಕೊಳ್ಳಲಾರಂಭಿಸಿದ್ದಾರೆ.

ಮತ್ತೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಾವು ಮನೆಯೊಳಗಡೆ ಇದ್ದ ವೇಳೆ ಬಂದ ಅಭಿಪ್ರಾಯಗಳ ಕುರಿತಂತೆ ಸಂಶೋಧನೆ ಪ್ರಾರಂಭಿಸಿದ್ದಾರೆ.

ವಿನ್ನರ್, ಮಾಡರ್ನ್ ರೈತ ಶಶಿಕುಮಾರ್ ಊರು ಸುತ್ತುವ ಕೆಲಸ ಮಾಡುತ್ತಿದ್ದಾರೆ. ರನ್ನರ್ ಆಗಿರುವ ಗಾಯಕ ನವೀನ್ ಸಜ್ಜು ಅಭಿಮಾನಿಗಳ ಅಭಿನಂದನೆ ಸ್ವೀಕರಿಸುವಲ್ಲಿ ಬ್ಯುಸಿಯಾಗಿದ್ದಾರೆ.

ಈ ನಡುವೆ ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಆರ್.ಜೆ. ರಶ್ಮಿ ಮನೆಯಿಂದ ಹೊರ ಬಂದ ಬಳಿಕ ಮೊದಲ ಬಾರಿಗೆ ಮಂಗಳವಾರ ಫೇಸ್ ಬುಕ್ ಲೈವ್ ಬಂದಿದ್ದರು.

ತಮ್ಮ ಅಭಿಮಾನಿಗಳೊಂದಿಗೆ ಸಾಕಷ್ಟು ಸಮಯ ಕಳೆದ ರಶ್ಮಿ ಬಂದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ನೀವು ಗೆಲ್ಲಬೇಕಿತ್ತು ಅಂದವರಿಗೆ ಸಾಂತ್ವಾನ ಹೇಳಿದ್ದಾರೆ.

ಈ ನಡುವೆ ಶಶಿ ಗೆಲುವಿನ ರಹಸ್ಯವನ್ನು ಕೂಡಾ ಪರೋಕ್ಷವಾಗಿ ರಶ್ಮಿ ಬಿಚ್ಚಿಟ್ಟಿದ್ದಾರೆ.

ಪ್ರಶ್ನೆಯೊಂದಿಗೆ ಉತ್ತರಿಸಿದ ಅವರು ಬಿಗ್ ಬಾಸ್ ಗೆಲ್ಲಬೇಕು ಅಂದರೆ ಹೊರಗಡೆ ತುಂಬಾ ಪ್ರಚಾರ ಮಾಡಬೇಕು. ನಾನು ಅದನ್ನು ಮಾಡಿಲ್ಲ. ಪ್ರಾಮಾಣಿಕವಾಗಿ ಆಟವಾಡಿದ್ದೇನೆ. ಇದನ್ನು ನೋಡಿ ನೀವು ವೋಟ್ ಮಾಡಿದ್ದರ ಫಲವಾಗಿ ಅಷ್ಟು ದೂರ ಬಿಗ್ ಬಾಸ್ ಮನೆಯಲ್ಲಿದ್ದೆ ಎಂದಿದ್ದಾರೆ.

ಹೊರಗಡೆ ಸಿಕ್ಕಾಪಟ್ಟೆ ಪ್ರಚಾರ ಮಾಡಿಲ್ಲ ಅನ್ನುವ ಮಾತಿನಲ್ಲಿ ಸತ್ಯಾಂಶವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿ ಪರವಾಗಿ ಸಾಕಷ್ಟು ಕೆಲಸಗಳು ನಡೆದಿದೆ.

ಸೆಲೆಬ್ರೆಟಿಗಳ ಸಂದರ್ಶನ ನಡೆಸಿ ಅವರಿಂದ ರಶ್ಮಿ ಪರ ಅಭಿಪ್ರಾಯ ಹೇಳಿಸಿ, ವೀಕ್ಷಕರ ಮೇಲೆ ಪ್ರಭಾವ ಬೀರುವ ಕೆಲಸ ಖಂಡಿತಾ ನಡೆದಿತ್ತು. ಆದರೆ ಬ್ಯಾನರ್, ಪೋಸ್ಟರ್ ಗಳನ್ನು ಬೀದಿ ಬೀದಿಯಲ್ಲಿ ಹಾಕಿಸಿರಲಿಲ್ಲ. ಅದೊಂದು ಅವರಿಗೆ ಹಿನ್ನಡೆಯಾಗಿದ್ದು ಸತ್ಯ.

ಇದೇ ವೇಳೆ ಆ್ಯಂಡಿ ಕುರಿತು ಮಾತನಾಡಿದ ಅವರು ಆ್ಯಂಡಿದು ಖಂಡಿತವಾಗಿಯೂ ಮಗುವಿನಂತ ಮನಸ್ಸಲ್ಲ. ಅದು ಕ್ಯಾಮರಾ ಮುಂದೆ ಮಾಡಿರುವ ಕಪಿಚೇಷ್ಟೆಯಷ್ಟೇ ಎಂದಿದ್ದಾರೆ.

BMTC 1410 ರೂಟ್ ನಲ್ಲಿ ಮತ್ತೆ ಶುರುವಾಯ್ತು ಟಿಕೆಟ್.. ಟಿಕೆಟ್.. ರೈಟ್.. ರೈಟ್

ಬಿಗ್ ​ಬಾಸ್​​ ಸೀಜನ್​​ 6 ಮುಕ್ತಾಯಗೊಂಡಿದೆ. ಕಾಮನ್ ಮ್ಯಾನ್ ಕೆಟಗರಿಯಲ್ಲಿ ಮನೆ ಪ್ರವೇಶಿಸಿದ್ದ ಮಾರ್ಡನ್ ರೈತ ಶಶಿಕುಮಾರ್ ವಿಜೇತರಾಗಿ ಹೊರ ಹೊಮ್ಮಿದ್ದಾರೆ.

ಬಿಗ್ ಬಾಸ್ ಮನೆಗೆ ಹೋದವರ ಭವಿಷ್ಯ ಬದಲಾಗುತ್ತದೆ ಅನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತದೆ. ಅದು ಸತ್ಯವಾಗಿದೆ ಕೂಡಾ.

ಆದರೆ ಹೊಸ ನಿರೀಕ್ಷೆ ಇಟ್ಟುಕೊಂಡು ಬಿಗ್ ​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದ ಆನಂದ್​ ಮಾಲಗತ್ತಿ ಬದುಕು, ಬದಲಾಗಿಲ್ಲ ಭವಿಷ್ಯವೂ ಬದಲಾಗಿಲ್ಲ. ಒಂದಿಷ್ಟು ದನ ಗುರುತಿಸುವಂತಾಗಿದೆ.

ಬಿಎಂಟಿಸಿ ಕಂಡಕ್ಟರ್​ ಆಗಿರೋ ಮಾಲಗತ್ತಿ ಬಿಗ್​ಬಾಸ್​ ಮನೆಗೆ ಸ್ಪರ್ಧಿಯಾಗಿ ಹೋಗಲು 110 ದಿನಗಳ ರಜೆ ಪಡೆದಿದ್ದರು. ಇದೀಗ ರಜೆ ಮುಗಿಸಿ ಕೆಲಸಕ್ಕೆ ಇಂದಿನಿಂದ ಹಾಜರಾಗಿದ್ದಾರೆ. 1410 ನಂಬರ್​ನ ಅತ್ತಿಬೆಲೆ ಟು ಮೆಜೆಸ್ಟಿಕ್ ಪರಿಸರ ವಾಹಿನಿ​​ ಬಸ್​​ನಲ್ಲಿ ಡ್ಯೂಟಿ ಮುಂದುವರೆಸಿದ್ದಾರೆ.

‘ಜ್ಞಾನ ಇಲ್ಲ’ ಅಂತ ಅನಿಸಿಕೊಂಡ ಆನಂದ್​ಗೆ ಕ್ವಿಝ್ ಮಾಸ್ಟರ್ ಆಗುವ ಅವಕಾಶ ಸಿಕ್ತು. ‘ವಿಷ ಸರ್ಪ’ ಚಟುವಟಿಕೆಯಲ್ಲೂ ಕ್ಯಾಪ್ಟನ್ ಆಗುವ ಚಾನ್ಸ್ ಆನಂದ್​ಗೆ ಲಭಿಸಿತ್ತು. ಒಮ್ಮೆ ಕ್ಯಾಪ್ಟನ್ ಪ್ರತಿಸ್ಪರ್ಧಿಯಾಗಿ ಆನಂದ್​​ ಕಣಕ್ಕೆ ಇಳಿದಿದ್ದೂ ಇದೆ.

 ಬಿಗ್ ಬಾಸ್ ಮನೆಯಲ್ಲ ಇದು… ಬಿಎಂಟಿಸಿ ಬಸ್ ಇದು ಮುಂದೆ ಬನ್ನಿ ಸ್ವಾಮಿ….ಟಿಕೆಟ್ ಪಡೆಯಿರಿ..

ಕೇಬಲ್ ಟಿವಿ ಆಪರೇಟರ್ ಗೆ ನಡುಕ :ವರ್ಷಾಂತ್ಯಕ್ಕೆ ಬರಲಿದೆ ಸೆಟ್ ಟಾಪ್ ಬಾಕ್ಸ್ ಪೋರ್ಟಬಿಲಿಟಿ ವ್ಯವಸ್ಥೆ

ಮೊಬೈಲ್ ಸಂಖ್ಯೆಯ ಪೋರ್ಟಬಿಲಿಟಿಗೆ ಅವಕಾಶ ಕೊಟ್ಟ ಟ್ರಾಯ್, ಮೊಬೈಲ್ ಅಪರೇಟ್ ಗಳಲ್ಲಿ ನಡುಕ ಹುಟ್ಟಿಸಿತ್ತು. ಮಾತ್ರವಲ್ಲದೆ ಗ್ರಾಹಕರನ್ನು ದೋಚುತ್ತಿದ್ದ ಕಂಪನಿಗಳಿಗೆ ಪಾಠ ಕಲಿಸಿತ್ತು.

ಆ ನಂತರ, ಕೇಬಲ್ ಆಪರೇಟರ್ ಮತ್ತು ಡಿಟಿಎಚ್ ಕಂಪನಿಗಳ ವ್ಯವಹಾರ ನಿಯಂತ್ರಿಸಲು ಮುಂದಾದ ಟ್ರಾಯ್, ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟಿತ್ತು. ಬೇಕಾಬಿಟ್ಟಿ ವಿಧಿಸುತ್ತಿದ್ದ ಬಿಲ್ ಗೆ ಕಡಿವಾಣ ಹಾಕುವ ಸಲುವಾಗಿ ಇದೀಗ ಅನೇಕ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.

ಇದರ ಬೆನ್ನಲ್ಲೇ  ಟಿ.ವಿಯ ಸೆಟ್‌ ಟಾಪ್‌ ಬಾಕ್ಸ್‌ಗೂ ವರ್ಷಾಂತ್ಯದ ವೇಳೆಗೆ ಪೋರ್ಟಬಿಲಿಟಿ ಸೌಲಭ್ಯ ಜಾರಿಗೆ ಬರುವ ಸಾಧ್ಯತೆಗಳಿದೆ. 

ಈ ವ್ಯವಸ್ಥೆ ಜಾರಿಗೆ ಬಂದರೆ ಕೇಬಲ್‌ ಟಿ.ವಿ ಅಥವಾ ಡಿಟಿಎಚ್‌ ಕಂಪನಿ ಸಮರ್ಪಕವಾಗಿ ಸೇವೆ ಒದಗಿಸದಿದ್ದರೆ, ಸೆಟ್‌ ಟಾಪ್‌ ಬಾಕ್ಸ್‌ ಬಗ್ಗೆ ಯೋಚನೆಯೇ ಇಲ್ಲದೆ ಬೇರೆ ಡಿಟಿಎಚ್‌ ಅಥವಾ ಕೇಬಲ್‌ ಆಪರೇಟರ್‌ ಸೇವೆಗೆ ಯಾವುದೇ ವೆಚ್ಚ ಇಲ್ಲದೆಯೇ ಬದಲಾಗಬಹುದು. 

ಈ ಬದಲಾವಣೆಗೆ ಡಿಟಿಎಚ್‌ ಹಾಗೂ ಕೇಬಲ್‌ ನಿರ್ವಾಹಕರು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ. ಆದರೆ ಕೋಟ್ಯಂತರ ಗ್ರಾಹಕರಿಗೆ ಅನುಕೂಲವಾಗಲಿದೆ. ಪ್ರತಿಯೊಂದು ನಿರ್ವಾಹಕರ ಸೆಟ್‌ ಟಾಪ್‌ ಬಾಕ್ಸ್‌ನಲ್ಲಿರುವ ಸಾಫ್ಟ್‌ವೇರ್‌ ವಿನ್ಯಾಸಗಳು ಭಿನ್ನವಾಗಿವೆ. ಇದನ್ನು ಭೇದಿಸುವುದರಿಂದ ಪೈರಸಿಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಂಥ ಸವಾಲುಗಳ ಬಗ್ಗೆ ಟ್ರಾಯ್‌ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ.

ಹೀಗಿದ್ದರೂ, ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ ಇದೆ ಎಂದು ಟ್ರಾಯ್ ಮೂಲಗಳು ಹೇಳಿದ್ದು, ಸಾಫ್ಟ್‌ವೇರ್‌ ಅನ್ನು ಬಳಕೆದಾರರೇ ಡೌನ್‌ಲೋಡ್‌ ಮಾಡಬಹುದಾದ ಪದ್ಧತಿಯನ್ನು ಪರಿಚಯಿಸುವುದರಿಂದ ಸಮಸ್ಯೆ ಬಗೆಹರಿಸಬಹುದು ಎಂದು ಅನ್ನುವುದು ತಂತ್ರಜ್ಞರ ಅಭಿಪ್ರಾಯ.

ಪ್ರಸ್ತುತ ಟಿ.ವಿ ಬಳಕೆದಾರರು ನಿರ್ದಿಷ್ಟ ಕಂಪನಿಯ ಸೆಟ್‌ ಟಾಪ್‌ ಬಾಕ್ಸ್‌ (ಎಸ್‌ಟಿಬಿ) ಅಳವಡಿಸಿದ ನಂತರ, ಒಂದು ವೇಳೆ ಸೇವೆಯ ಗುಣಮಟ್ಟ ಹಿಡಿಸದಿದ್ದರೆ ಬೇರೆ ಕಂಪನಿಯ ಸೇವೆಗೆ ಬದಲಾಯಿಸುವಾಗ ಹೊಸ ಎಸ್‌ಟಿಬಿಯನ್ನು ಕೊಂಡುಕೊಳ್ಳಬೇಕಾಗುತ್ತದೆ. ಹಳೆ ಕಂಪನಿಯದ್ದು ವ್ಯರ್ಥವಾಗುತ್ತದೆ. ಪೋರ್ಟಬಿಲಿಟಿಯಿಂದ ಇದನ್ನು ತಪ್ಪಿಸಬಹುದು. ವೆಚ್ಚ ಉಳಿಸಬಹುದು. 

ಒಂದು ಸೆಟ್‌ ಟಾಪ್‌ ಬಾಕ್ಸ್‌ ಗೆ 1,400 ರೂ.-1,600 ರೂ. ವೆಚ್ಚವಾಗುತ್ತದೆ. ಇದಕ್ಕೆ ತಗಲುವ ವೆಚ್ಚ ರಿಫಂಡ್‌ ಆಗುವುದಿಲ್ಲ. ಪೋರ್ಟಬಿಲಿಟಿ ಸಾಧ್ಯವಾದರೆ ಗ್ರಾಹಕರಿಗೆ ಈ ವೆಚ್ಚ ಉಳಿತಾಯವಾಗಲಿದೆ. 

ಸೀತಾ ವಲ್ಲಭನಿಗೆ ಕೂಡಿ ಬಂದ ಕಂಕಣ ಬಲ – ರಕ್ಷಿತಾ ಜೊತೆ ಸಪ್ತಪದಿ ತುಳಿಯಲು ಮುಂದಾದ ಜಗನ್

ಬಿಗ್ ಬಾಸ್ ಸೀಸನ್ 5ನೇ ಆವೃತ್ತಿಯ ಸ್ಪರ್ಧಿ ಹಾಗೂ ಕಿರುತೆರೆ ನಟ ಜಗನ್ನಾಥ್ ಚಂದ್ರಶೇಖರ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಜಗನ್ ಮೂರು ವರ್ಷದಿಂದ ಪ್ರೀತಿ ಮಾಡುತ್ತಿದ್ದ ಆತ್ಮೀಯ ಗೆಳತಿ ರಕ್ಷಿತಾ ಮುನಿಯಪ್ಪ ಅವರ ಜೊತೆ ಇತ್ತೀಚೆಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರೇ ತಮ್ಮ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.

ದುಬೈನಲ್ಲಿ ಫ್ಯಾಷನ್​ ಡಿಸೈನಿಂಗ್ ಕೋರ್ಸ್​ ಮುಗಿಸಿರುವ ರಕ್ಷಿತಾ ಮುನಿಯಪ್ಪ ಕೆಲ ವರ್ಷಗಳ ಹಿಂದೆಯೇ ಜಗನ್​ರೊಂದಿಗೆ ಕಾಣಿಸಿಕೊಂಡಿದ್ದರು. ಆದರೆ ಈಗ ಅಧಿಕೃತವಾಗಿ ಜಗನ್​ ತನ್ನ ಬಾಳಸಂಗಾತಿಯನ್ನು ಪರಿಚಯಿಸಿದ್ದು, ಶೀಘ್ರದಲ್ಲೇ ಹಸೆಮಣೆ ಏರುವುದಾಗಿ ತಿಳಿಸಿದ್ದಾರೆ.

ಗಾಂಧಾರಿ ಧಾರವಾಹಿ ಮೂಲಕ ಮನೆಮಾತಾಗಿರುವ ಜಗನ್ ಕನ್ನಡದ ಬಿಗ್​ಬಾಸ್​-5 ನಲ್ಲಿ ಸ್ಫರ್ಧಿಸಿದ್ದರು. ಅಲ್ಲದೆ ಡ್ಯಾನಿಂಗ್​ ರಿಯಾಲಿಟಿ ಶೋ ಡ್ಯಾನ್ಸಿಂಗ್ ಸ್ಟಾರ್​-3 ನಲ್ಲೂ ಜಗನ್​ ಹೆಜ್ಜೆ ಹಾಕಿದ್ದರು.

ಇದೀಗ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾ ವಲ್ಲಭ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಜಗನ್ ಅವರು ತಾವು ಪ್ರೀತಿಸುತ್ತಿದ್ದ ಹುಡುಗಿ ರಕ್ಷಿತಾ ಮುನಿಯಪ್ಪ ಅವರಿಗೆ ಕುಟುಂಬದವರ ಸಮ್ಮುಖದಲ್ಲಿ ಉಂಗುರ ತೊಡಿಸುವ ಮೂಲಕ ಸಂಪ್ರದಾಯಬದ್ಧವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮ ಗೆಳತಿಯ ಫೋಟೋ, ರಿಂಗ್ ಮತ್ತು ಹೃದಯದ ಎಮೋಜಿ ಹಾಕಿ ಈ ಬಗ್ಗೆ ತಿಳಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಮತ್ತೊಬ್ಬ ಕಿರು ತೆರೆ ನಟಿಯೊಂದಿಗೆ ಜಗನ್ ಪ್ರೀತಿ ಹೊಂದಿದ್ದರು ಅನ್ನುವ ಗುಸು ಗುಸು ಹರಡಿತ್ತು. ಜೊತೆಗೆ ಆ ನಟಿ ಪ್ರೀತಿಯ ದ್ಯೋತಕವಾಗಿ ಕೈಯಲ್ಲಿ ಉಂಗುರದ ಟ್ಯಾಟೋ ಹಾಕಿದ್ದಳು ಎನ್ನಲಾಗಿತ್ತು.

ಆದರೆ ಅವೆಲ್ಲವನ್ನು ಬಿಗ್ ಬಾಸ್ ಮನೆಯಲ್ಲೇ ನಿರಾಕರಿಸಿದ್ದ ಜಗನ್, ನಾನು ಪ್ರೀತಿಸುತ್ತಿರುವ ಹುಡುಗಿ ವಿದೇಶದಲ್ಲಿದ್ದಾಳೆ ಅಂದಿದ್ದರು.