ರವಿಚಂದ್ರನ್ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದ ನಟಿಯನ್ನು ದೋಚಿದ ತಕ್ ತಕ್ ಗ್ಯಾಂಗ್!

ಹಳ್ಳಿ ಮೇಷ್ಟ್ರು” ಖ್ಯಾತಿಯ ಮನೋಜ್ ಪ್ರಭಾಕರ್ ಪತ್ನಿ ಫರೀನ್ ಪ್ರಭಾಕರ್( ಬಿಂದಿಯಾ) ಅವರನ್ನು ದೆಹಲಿಯ ಕುಖ್ಯಾತ ದರೋಡೆಕೋರರ ಗ್ಯಾಂಗ್ ದೋಚಿ ಪರಾರಿಯಾಗಿದೆ.

ಸಾಕೇತ್ ಪ್ರದೇಶದಲ್ಲಿರುವ ಸೆಲೆಕ್ಟ್ ಸಿಟಿ ವಾಕ್ ಮಾಲ್‍ ಗೆ ನಟಿ ತೆರಳಿದ್ದ ವೇಳೆ ದರೋಡೆಕೋರರು ದಾಳಿ ನಡೆಸಿದ್ದು ಘಟನೆ ವೇಳೆ ಕಾರನ್ನು ನಟಿ ಬಿಂದಿಯಾ ಅವರೇ ಚಾಲನೆ ಮಾಡುತ್ತಿದ್ದರು.

ಕಾರು ಸಿಗ್ನಲ್ ಬಳಿ ನಿಂತಿದ್ದ ವೇಳೆ ನಾಲ್ವರು ದರೋಡೆಕೋರರು ಕಾರನ್ನು ಸುತ್ತುವರಿದು ಕಾರು ಜಖಂ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಬಿಂದಿಯಾ ಪ್ರಶ್ನಿಸಿದಾಗ ಆಕೆಯ ವ್ಯಾಲೆಟ್ ನಲ್ಲಿದ್ದ 6,000 ರು.ಹಾಗೂ ದುಬಾರಿ ಬೆಲೆಯ ಮೊಬೈಲ್ ಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ.

ನಟಿ ಪ್ರತಿಭಟಿಸುತ್ತಿದ್ದಂತೆ ಹಲ್ಲೆ ಮಾಡಿದ ಖದೀಮರು ಪರಾರಿಯಾಗಿದ್ದಾರೆ.

ಈ ವೇಳೆ ಗಾಬರಿಯಾದ ನಟಿ ಫರೀನ್ ಅಲ್ಲೇ ಅಸ್ಪಸ್ಥರಾಗಿ ಕುಸಿದು ಬಿದ್ದಿದ್ದಾರೆ. ಅಸ್ತಮಾದಿಂದ ಬಳಲುತ್ತಿದ್ದ ಕಾರಣ ಅವರಿಗೆ ಅಘಾತಕ್ಕೂ ಒಳಗಾಗಿದ್ದರು.

ಈ ವೇಳೆ ಸ್ಥಳದಲ್ಲಿದ್ದ ಸೇನಾಧಿಕಾರಿಯೊಬ್ಬರು ದರೋಡೆಕೋರರ ಕಾರ್ ನಂಬರ್ ಬರೆದುಕೊಂಡಿದ್ದು ಪೋಲೀಸರಿಗೆ ಮಾಹಿತಿ ನೀಡಿ ನಟಿಗೆ ಸಹಾಯ ಮಾಡಿದ್ದಾರೆ.

ದೆಹಲಿ ಸುತ್ತಲಿನ ಪ್ರದೇಶದಲ್ಲಿ ದರೋಡೆ, ಸುಲಿಗೆಗಳಿಗೆ ಕುಖ್ಯಾತಿ ಪಡೆದ ತಕ್ ತಕ್ ಗ್ಯಾಂಗ್ ನ ಕೃತ್ಯವಿದು ಎನ್ನುವುದು ಸಾಬೀತಾಗಿದ್ದು ದರೋಡೆಕೋರರ ಪತ್ತೆಗೆ ಪೋಲೀಸರು ಬಲೆ ಬೀಸಿದ್ದಾರೆ.

ನಟಿ ಫರೀನ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಿಟ್ ಚಿತ್ರ “ಹಳ್ಳಿ ಮೇಷ್ಟ್ರು“, ಡಾ ವಿಷ್ಣುವರ್ಧನ್ ನಟನೆಯ ರಾಯರು ಬಂದರು ಮಾವನ ಮನೆಗೆ ಚಿತ್ರ ಸೇರಿ ಹಲವು ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದರು.

ಮಾತ್ರವಲ್ಲದೆ ಇದೇ ಬಿಂದಿಯಾ ಮೈಸೂರು ಹೋಟೆಲ್ ವೊಂದರಲ್ಲಿ ರಾತ್ರಿ 12 ಗಂಟೆ ವೇಳೆ ತಮ್ಮ ಮೇಲೆ ರವಿಚಂದ್ರನ್ ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದು ಮುಂಬೈ ಮ್ಯಾಗಜಿನ್ ಒಂದಕ್ಕೆ ಸಂದರ್ಶನದಲ್ಲಿ ಹೇಳಿದ್ದರು. ಇದರಿಂದ ಮನನೊಂದ ರವಿಚಂದ್ರನ್ ಅವರು ಅತ್ಯಾಚಾರ ಸಾಬೀತು ಪಡಿಸುವಂತೆ ನಟಿ ಸೇರಿ ಐವರ ವಿರುದ್ಧ ಮಾನಹಾನಿ ದೂರು ದಾಖಸಿಸಿದ್ದರು.

ಈ ಪ್ರಕರಣ ಸಂಬಂಧ ಬೆಂಗಳೂರಿಗೆ ಬಂದಿದ್ದ ನಟಿ ನಾನು ಈ ರೀತಿಯ ಹೇಳಿಕೆ ನೀಡಿಯೇ ಇಲ್ಲ ಎಂದು ಕ್ಷಮೆಯಾಚಿಸಿ ಹೋಗಿದ್ದರು. ಆಗ ಮಾಧ್ಯಮಗಳು ಬ್ರೇಕಿಂಗ್ ಸುದ್ದಿ ಹಿಂದೆ ಬೀಳುತ್ತಿರಲಿಲ್ಲ. ಹೀಗಾಗಿ ಅದು ಸುದ್ದಿಯಾಗಿರಲಿಲ್ಲ.

ಕಳೆದ ವರ್ಷ ಕಲರ್ಸ್ ಸೂಪರ್ ವಾಹಿನಿಯಲ್ಲಿ ಅಕುಲ್ ಬಾಲಾಜಿ ನಡೆಸಿಕೊಡುತ್ತಿದ್ದ ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ಈ ಬಗ್ಗೆ ರವಿಚಂದ್ರನ್ ತಮ್ಮ ಹಿಂದಿನ ಕಹಿ ನೆನಪೊಂದನ್ನು ಮಾಡಿಕೊಂಡಿದ್ದರು.

ಕನ್ನಡದಲ್ಲಿ ಮೂಡಿಬಂದಿದ್ದ ಹಳ್ಳಿಮೇಷ್ಟು ಚಿತ್ರ ಮೆಗಾ ಹಿಟ್ ಆಗಿತ್ತು. ಆ ಚಿತ್ರದಲ್ಲಿ ನಟಿಸಿದ್ದ ನಟಿ ಬಿಂದಿಯಾ ಚಿತ್ರೀಕರಣ ಸಂದರ್ಭ ಸಿಬ್ಬಂದಿ ಜತೆ ಜಗಳ ಮಾಡಿಕೊಂಡಿದ್ದರು. ಅದು ಸಾಲದು ಎಂಬಂತೆ ಮುಂಬೈಗೆ ತೆರಳಿ ನನ್ನ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದರು ಎಂದು ಬಳಿಕದ ಘಟನೆ ನೆನಪು ಮಾಡಿಕೊಂಡಿದ್ದರು.

ಜೊತೆಗೆ ವಿನಾಕಾರಣ ಆರೋಪ ಮಾಡಿದ್ದಕ್ಕಾಗಿ ಆಕೆಯನ್ನು ಒಂದು ದಿನವಾದರೂ ಜೈಲಿನಲ್ಲಿರಿಸಬೇಕು ಎಂದು ಆಕೆಯನ್ನು ಜೈಲಿಗಟ್ಟಿದ್ದೆ ಎಂದು ರವಿಚಂದ್ರನ್ ಹೇಳಿಕೊಂಡಿದ್ದರು.

Advertisements

ದೇವರಿಗೆ ಬೇಸರ :25 ವರ್ಷಗಳ ಕಾಲ ಹುಟ್ಟೂರಿಗೆ ಕಾಲಿಡದ ನಡೆದಾಡುವ ದೇವರು

ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ತಮ್ಮ ಜೀವನದಿಂದಲೇ ಎಲ್ಲರಿಗೂ ಆದರ್ಶವಾಗಿದ್ದವರು. ಶ್ರೀಗಳಿಗೆ ಕೋಪ ಅಂದರೇನು ಗೊತ್ತಿರಲಿಲ್ಲ. ಶ್ರೀಗಳನ್ನು ಹತ್ತಿರದಿಂದ ಕಂಡವರು ದೇವರು ಕೋಪಿಸಿಕೊಂಡಿದ್ದನ್ನು ನೋಡಿಯೇ ಇರಲಿಲ್ಲ.

ಇಂತಹ ಸ್ವಾಮೀಜಿಗಳೂ ತಮ್ಮ ಪೋಷಕರ ಮೇಲಿನ ಬೇಸರದಿಂದ 25 ವರ್ಷ ಹುಟ್ಟೂರಿಗೆ ಕಾಲಿಡಲಿಲ್ಲ ಅಂದರೆ ನಂಬಲು ಸಾಧ್ಯವೇ. ಆದರೆ ಅಂತಹುದೊಂದು ಘಟನೆ ನಡೆದಿದೆಯಂತೆ.

ಶಿವಕುಮಾರ ಸ್ವಾಮಿಗಳು ತಾವು ಹುಟ್ಟಿ ಬೆಳೆದ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರಕ್ಕೆ 25 ವರ್ಷ ಬಂದಿರಲಿಲ್ಲ.ತಮ್ಮ ಗುರುವಾಗಿದ್ದ ಉದ್ದಾನ ಶಿವಯೋಗಿಗಳ ಮೇಲಿನ ಅಪಾರ ಭಕ್ತಿಯೇ ಈ ನಿರ್ಧಾರದ ಹಿಂದಿತ್ತು.

ಬಿಎ ಓದಿದ್ದ ಮಗ ಶಿವಣ್ಣ ಉನ್ನತ ಸರ್ಕಾರಿ ಅಧಿಕಾರಿಯಾಗಬೇಕು ಅನ್ನುವುದು ಅವರ ತಂದೆ ಪಟೇಲ್ ಹೊನ್ನೇಗೌಡ-ಗಂಗಮ್ಮ ಅವರ ಆಸೆಯಾಗಿತ್ತು.

ಆದರೆ ಉದ್ಧಾನ ಶಿವಯೋಗಿಗಳು ಶಿವಣ್ಣ ಸನ್ಯಾಸ ಸ್ವೀಕರಿಸಬೇಕು.ಜಗತ್ತಿಗೆ ಬೆಳಕಾಗಬೇಕೆಂದು ಸಂಕಲ್ಪಿಸಿದ್ದರು. ಮಗ ಸನ್ಯಾಸಿಯಾಗಲಿದ್ದಾನೆ ಅನ್ನುವುದನ್ನು ತಿಳಿದ ದಂಪತಿಗಳು ನೋವಿನಲ್ಲಿ ಮುಳುಗಿದರು.

ಇದನ್ನು ತಿಳಿದ ಶ್ರೀಗಳ ಗುರು ಶಿವಯೋಗಿಗಳು ತಾವೇ ಸ್ವತಃ ವೀರಾಪುರಕ್ಕೆ ತೆರಳಿ ದಂಪತಿಗಳಿಗೆ ಸಾಂತ್ವನ ಹೇಳಲು ಪ್ರಯತ್ನಿಸಿದ್ದರು. ಶಿವಯೋಗಿಗಳಿಗೆ ತಾವು ಸಿಕ್ಕಬಾರದು ಎಂಬ ಉದ್ದೇಶದಿಂಡ ಹೊನ್ನೇಗೌಡ ದಂಪತಿಗಳು ಮನೆಯಿಂದ ದೂರ ತೆರಳಿದ್ದರು. ಇದರಿಂದ ನೊಂದ ಗುರು ಶಿವಯೋಗಿಗಳು ಅಲ್ಲಿಂದ ಸಿದ್ದಗಂಗೆಗೆ ಕಾಲ್ನಡಿಗೆಯಲ್ಲೇ ಬಂದಿದ್ದರು.

ಮಠಕ್ಕೆ ಆಗಮಿಸಿ ತನ್ನ ಶಿಷ್ಯ ಶಿವಣ್ಣನಿಗೆ ನಡೆದದ್ದನ್ನು ಶಿವಯೋಗಿಗಳು ವಿವರಿಸಿದ್ದಾರೆ. ಇದನ್ನು ಕೇಳಿದಾಗ ಗುರುಗಳ ಮೇಲೆ ಅಪಾರ ಭಕ್ತಿ ಇದ್ದ ಸ್ವಾಮೀಜಿಗೆ ಬಹಳ ಬೇಸರವಾಗಿತ್ತು. ತಮ್ಮ ಪೋಷಕರ ವರ್ತನೆ, ಶ್ರೀಗಳಿಗೆ ತೋರಿಸಿದ ಉದಾಸೀನ ಅವರಿಗೆ ಬಹಳ ನೋವು ಕೊಟ್ಟಿತು. ಇದರಿಂದಾಗಿ ಅವರು ವೀರಾಪುರಕ್ಕೆ ತೆರಳುವುದನ್ನೇ ಬಿಟ್ಟರು.

ಸಿದ್ದಗಂಗೆ ಮಠದ ಪೀಠವೇರಿದ ಬಳಿಕ ಸಹ ಶಿವಕುಮಾರ ಶ್ರೀಗಳು ತಮ್ಮ ಜನ್ಮಸ್ಥಳಕ್ಕೆ ತೆರಳಲಿಲ್ಲ.
ಆದರೆ ವೀರಾಪುರ ಗ್ರಾಮಸ್ಥರು 1930ರಿಂದ 1955ರ ವರೆಗೂ ತಮ್ಮ ಗ್ರಾಮಕ್ಕೆ ಸ್ವಾಮೀಜಿ ಭೇಟಿ ನೀಡಬೇಕೆಂದು ಆಗ್ರಹಿಸುತ್ತಲೇ ಇದ್ದರು.ಆದರೆ ಸ್ವಾಮಿಗಳು ನಯವಾಗಿಯೇ ತಪ್ಪಿಸಿಕೊಳ್ಳುತ್ತಿದ್ದರು.

ಕಡೆಗೊಮ್ಮೆ ಶ್ರೀಗಳ ಪೂರ್ವಾಶ್ರಮದ ಅಣ್ಣನ ಮಗ ವೀರಾಪುರದಲ್ಲಿ ಮನೆ ಕಟ್ಟಿದ್ದರು. ಆ ಮನೆ ಗೃಹ ಪ್ರವೇಶಕ್ಕೆ ಆತ ಶ್ರೀಗಳನ್ನು ಆಹ್ವಾನಿಸಿದ್ದರು. ಆದರೆ ಶ್ರೀಗಳು ಒಪ್ಪಲಿಲ್ಲ. ಆಗ ಆತ “ಶಿವಯೋಗಿಗಳ ಅನುಗ್ರಹ ಸಿಕ್ಕದ ಆ ಮನೆಗೆ ನಾನೆಂದಿಗೂ ಪ್ರವೇಶಿಸಲಾರೆ. ಆ ಮನೆ ಪಾಳು ಬಿದ್ದರೂ ಸರಿ” ಎಂದು ಖಡಾಖಂಡಿತವಾಗಿ ನುಡಿದರು.
“ಭಕ್ತನ ಭಕ್ತಿಗೆ ಸಹ ಅದ್ಭುತ ಶಕ್ತಿ ಇದೆ” ಎಂದು ನಂಬಿದ್ದ ಶಿವಕುಮಾರ ಶ್ರೀಗಳು ತಾವು ಗೃಹಪ್ರವೇಶಕ್ಕೆ ಆಗಮಿಸಲು ಒಪ್ಪಿಕೊಂಡಿದ್ದರು.ಹೀಗೆ ತಾವು 25 ವರ್ಷ ಕಾಲದ ನಂತರ ತಮ್ಮ ಹುಟ್ಟೂರಿಗೆ ಶ್ರೀಗಳು ಆಗಮಿಸಿದ್ದರು.

ಪುತ್ತೂರಿನಲ್ಲಿ ವಿಸ್ಮಯ : ದೈವಗಳು ಗುರುತಿಸಿದ ಜಾಗದಲ್ಲಿ ಉಕ್ಕಿ ಹರಿದ ಗಂಗೆ

ತುಳುನಾಡು ಎಂದು ಕರೆಯಲ್ಪಡುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹಲವಾರು ದೈವ ದೇವರುಗಳ ನೆಲೆಬೀಡು. ತುಳು ನಾಡಿನಲ್ಲಿ ಹೆಜ್ಜೆಗೊಂದರಂತೆ ದೈವಸ್ಥಾನ ದೇವಸ್ಥಾನಗಳು ಕಾಣ ಸಿಗುತ್ತದೆ. ಇಂಥಹ ಪುಣ್ಯಭೂಮಿಯಲ್ಲಿ ದೈವಿ ಪವಾಡಗಳು ಕೂಡಾ ಆಗಾಗ ನಡೆಯುತ್ತಿರುತ್ತದೆ. ಈ ಕಾರಣಕ್ಕಾಗಿಯೇ ಕರಾವಳಿಯಲ್ಲಿ ದೈವಗಳ ಮೇಲೆ ನಂಬಿಕೆ ಒಂದಿಷ್ಟು ಹೆಚ್ಚು.

ಇಂತಹ ಒಂದು ಪವಾಡ ಪುತ್ತೂರು ತಾಲೂಕಿನ ಪಾಪೆಮಜಲು ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಪುರಾತನ ಕೋಟಿ ಚೆನ್ನಯ್ಯ ಗರಡಿಯಲ್ಲಿ ನಡೆದಿದೆ.

ತುಳುನಾಡಿನ ಐತಿಹಾಸಿಕ ವೀರ ಪುರುಷರಾದ ಕೋಟಿ-ಚೆನ್ನಯ ಗರಡಿ ಇರುವ ಸ್ಥಳದಲ್ಲಿ ನೀರಿನ ಕೊರತೆ ಎದುರಾದ ಸಂದರ್ಭದಲ್ಲಿ ಕೈಲಾದ ಪ್ರಯತ್ನ ಮಾಡಿ ಫಲ ಕಾಣದೇ ಇದ್ದಾಗ ಗರಡಿಯ ಉಸ್ತುವಾರಿಗಳು ಕಳೆದ ಬಾರಿ ನಡೆದ ಭೂತಗಳ ನರ್ತನದ ಸಮಯದಲ್ಲಿ ಕೋಟಿ ಚೆನ್ನಯ್ಯರ ಮುಂದೆ ನೀರಿನ ಸಮಸ್ಯೆಯನ್ನು ತೋಡಿಕೊಂಡಿದ್ದರು.

ಈ ಸಂದರ್ಭದಲ್ಲಿ ಅವಳಿ ದೈವಗಳು ಅಭಯ ನೀಡಿ ತಮ್ಮ ಬಿರು ಸುರ್ಯೆ (ಆಯುಧ) ವನ್ನು ನಿಗದಿತ ಜಾಗವೊಂದರಲ್ಲಿ ಚುಚ್ಚಿ   ಸತ್ಯೋಡ್ ಬತ್ತುಂಡ ತಿಗಲೆಡ್ ಸಾದಿ, ಅನ್ಯಾಯಡ್ ಬತ್ತುಂಡ ಸುರ್ಯೋಡ್ ಸಾದಿ ( ಸತ್ಯದಿಂದ ಬಂದವರಿಗೆ ಎದೆಯಲ್ಲೇ ದಾರಿ ಕೊಡುತ್ತೇವೆ. ಅನ್ಯಾಯದಿಂದ ಬಂದವರಿಗೆ ಆಯುಧದಿಂದಲೇ ಶಿಕ್ಷೆ  ಎಂದು ನೆಲಕ್ಕೆ ಸುರ್ಯೆ ಚುಚ್ಚಿ ಗುರುತು ಮಾಡಿ ಅದೇ ಸ್ಥಳದಲ್ಲಿ ಕೊಳವೆ ಬಾವಿ ಕೊರೆಯುವಂತೆ ಸೂಚಿಸಿತ್ತು.

ದೈವದ ಆದೇಶದಂತೆ ಕೆಲ ದಿನಗಳ ಹಿಂದೆ ದೈವಗಳು ಸೂಚಿಸಿದ ಸ್ಥಳದಲ್ಲೇ ಕೊಳವೆ ಬಾವಿ ಕೊರೆಯುವ ಕಾಮಗಾರಿ ಆರಂಭಿಸಲಾಗಿತ್ತು. ಇದೀಗ ಬಾವಿ ಕೊರೆಯುತ್ತಿದ್ದ ಸ್ಥಳದಲ್ಲಿ ಭೂಮಿಯಡಿಯಿಂದ ರಭಸದಿಂದ ನೀರು ಹೊರ ಚಿಮ್ಮಿದ್ದು, ಸ್ಥಳೀಯರ ವಿಸ್ಮಯಕ್ಕೆ ಕಾರಣವಾಗಿದೆ.

ಕೊಳವೆ ಬಾವಿಯಲ್ಲಿ ಏನಿಲ್ಲ ಅಂದರೂ 4 ಇಂಚಿಗೂ ಅಧಿಕ ನೀರು ಲಬಿಸಿದೆ. ಒತ್ತಡಕ್ಕೆ ನೀರು ಬಲು ಎತ್ತರಕ್ಕೆ ಚಿಮ್ಮಿದೆ. ವೈಜ್ಞಾನಿಕ ಕಾಲದಲ್ಲಿ ಜಲ ತಜ್ಞರೇ ಹೇಳಿದ ಬೋರ್ ವೆಲ್ ಪಾಯಿಂಟ್ ಗಳು ವಿಫಲವಾಗುತ್ತದೆ. ಅಂತಹುದರಲ್ಲಿ ಕೇವಲ ಆಯುಧವನ್ನು ಚುಚ್ಚಿ ನೀರು ಶೋಧಿಸಿ ವೈಜ್ಞಾನಿಕ ತಂತ್ರಜ್ಞಾನಕ್ಕೆ ಸವಾಲು ಹಾಕಿದ್ದು ವಿಸ್ಮಯವೇ ಸರಿ.

ಬಾವಿ ಕೊರೆಯುತ್ತಿದ್ದ ಸ್ಥಳದಲ್ಲಿ ಭೂಮಿಯಡಿಯಿಂದ ರಭಸದಿಂದ ನೀರು ಹೊರ ಚಿಮ್ಮಿದ್ದು, ಸ್ಥಳೀಯರ ವಿಸ್ಮಯಕ್ಕೆ ಕಾರಣವಾಗಿದೆ. ಕೊಳವೆ ಬಾವಿ ಕೊರೆಯುವ ಸಂದರ್ಭ ವಿವಿಧ ವೈಜ್ಞಾನಿಕ ವಿಧಾನ ಅನುಸರಿಸಬೇಕಾದ ಈ ಕಾಲಘಟ್ಟದಲ್ಲಿ ದೈವಗಳು ಕೇವಲ ತನ್ನ ಆಯುಧಗಳಿಂದ ಸೂಚಿಸಿದ ಸ್ಥಳದಲ್ಲಿ ಅಗಾಧ ಪ್ರಮಾಣದ ನೀರು ಸಿಕ್ಕಿರುವುದು ದೈವದ ಇರುವಿಕೆಗೆ ಸಾಕ್ಷಿ ಅನ್ನುವುದು ಆಸ್ತಿಕರ ಅಭಿಪ್ರಾಯ

ಧನುಷ್ ಮೇಲೆ ಉಕ್ಕಿ ಹರಿದ ಪ್ರೀತಿ : ಯಜಮಾನ, ಪೈಲ್ವಾನ್, KGF ಬಗ್ಗೆ ನಿರ್ಲಕ್ಷ್ಯ ಬೇಕಾ ರಮ್ಯ

ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಳಿಗೆ ತಮಿಳು ನಟ ಧನುಷ್ ನಟನೆ ಮೇಲೆ ಪ್ರೀತಿ ಉಕ್ಕಿ ಹರಿದಿದೆ.

ತಮಿಳು ನಟ ಧನುಷ್ ಅವರ ಅಭಿಮಾನದ ಹಾಡಿಗೆ ಟ್ವೀಟ್ ಮಾಡಿ ಶುಭ ಕೋರಿರುವ ರಮ್ಯ ಇದೀಗ ಕನ್ನಡಿಗರು ರಮ್ಯಾ ವಿರುದ್ಧ ರೊಚ್ಚಿಗೆದಿದ್ದಾರೆ.

ತಮಿಳು ನಟ ಧನುಷ್ ಅಭಿನಯದ ‘ಮಾರಿ 2’ ಸಿನಿಮಾದ ‘ರೌಡಿ ಬೇಬಿ..’ ಹಾಡು ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಈ ಹಾಡಿಗೆ ಫಿದಾ ಆಗಿರುವ ರಮ್ಯ”ಎಂತ ಹಾಡು ಡಿ!, ಹಾಡು 100 ಮಿಲಿಯನ್ ಆಗಿದೆ. ಯುವನ್ ಶಂಕರ್ ರಾಜ್ ನಿಮ್ಮ ಬಗ್ಗೆ ಬಹಳ ಖುಷಿ ಆಗುತ್ತಿದೆ.” ಎಂದು ಟ್ವಿಟ್ಟರ್ ನಲ್ಲಿ ಶುಭ ಕೋರಿದ್ದರು.

ಆದರೆ ಇತ್ತೀಚೆಗೆ ನಟ ದರ್ಶನ್ ಅವರ ‘ಯಜಮಾನ’ ಸಿನಿಮಾದ ಹಾಡು ಹಾಗೂ ಸುದೀಪ್ ನಟನೆಯ ‘ಪೈಲ್ವಾನ್’ ಸಿನಿಮಾದ ಟೀಸರ್ ಕೂಡ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿ ಹಿಟ್ ಆಗಿತ್ತು.ಆಗ ರಮ್ಯ ಈ ಬಗ್ಗೆ ಚಕಾರವೆತ್ತಿರಲಿಲ್ಲ. ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದರೂ ರಮ್ಯಾ ಸೈಲೆಂಟ್ ಆಗಿದ್ದರು.

ಇದೀಗ ತಮಿಳು ಸಿನಿಮಾ ಬಗ್ಗೆ ರಮ್ಯ ಹೊಗಳಿಕೆ ಕಂಡ ಮಂದಿ ಕೆಂಡವಾಗಿದ್ದಾರೆ.

“ಅಂಬಿ ಅಣ್ಣನ ಅಗಲಿಕೆಗೆ ಬಾರದೆ ದೊಂಬರಾಟ ಆಡಿ, ಮಾತೃಭಾಷೆಯಲ್ಲಿ ಯಶ್ ಅಭಿನಯದ ‘ಕೆಜಿಎಫ್’ ಸುದೀಪ್ ಅವರ ‘ಪೈಲ್ವಾನ್’ ಮತ್ತು ದರ್ಶನ್ ಅಭಿನಯದ ‘ಯಜಮಾನ’ ಇವಳ ಕಣ್ಣಿಗೆ ಕಂಡಿಲ್ಲ. ಪರಭಾಷೆಯ ಧನುಷ್ ನೆನಪಾದ ಅಲ್ಲವೆ?” ಎಂದು ಪ್ರಶ್ನೆ ಮಾಡಿದ್ದಾರೆ.

ಶಬರಿಮಲೆ ಆದಾಯದಲ್ಲಿ ₹95.65 ಕೋಟಿ ಖೋತಾ…

ಹರಿಹರಸುತನ ಸನ್ನಿಧಿಯ ದೊಡ್ಡ ಹಬ್ಬ ಎಂದೇ ಪ್ರಸಿದ್ಧವಾಗಿರುವ ಅಯ್ಯಪ್ಪನ ಸನ್ನಿಧಿಯ ಮಕರ ಸಂಕ್ರಾತಿ ಸಂಭ್ರಮಕ್ಕೆ ತೆರೆ ಬಿದ್ದಿದೆ.

ಎಲ್ಲಾ ವಯಸ್ಸಿನ ಮಹಿಳೆಯರು ಶಬರಿಮಲೆ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಹಿನ್ನಲೆಯಲ್ಲಿ ಶಾಂತಿದೂತನ ಕ್ಷೇತ್ರ ಈ ಬಾರಿ ರಣಾಂಗಣವಾಗಿ ಮಾರ್ಪಾಟ್ಟಿತ್ತು.

ಪರ ವಿರೋಧದ ಪ್ರತಿಭಟನೆಗಳಿಂದಾಗಿ ಭಕ್ತಾದಿಗಳು ಹೈರಣಾಗಿ ಹೋಗಿದ್ದರು.

ಅಯ್ಯಪ್ಪನ ದರ್ಶನಕ್ಕೆ ಬಂದ ಭಕ್ತಾದಿಗಳ ಸಂಖ್ಯೆ ಇಳಿಮುಖವಾದ್ದರಿಂದ ದೇವಸ್ಥಾನದ ಆದಾಯದ ಮೇಲೆ ಭಾರೀ ಪರಿಣಾಮ ಬೀರಿದೆ.

ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿಯ ಆದಾಯ ₹95.65 ಕೋಟಿಯಷ್ಟು ಕಡಿಮೆಯಾಗಿದೆ ಎಂದು Times of India ವರದಿ ಮಾಡಿದೆ.

2018ರ ನವೆಂಬರ್​ 16ರಂದು ಆರಂಭವಾಗಿದ್ದ ಮಂಡಲ ಉತ್ಸವ ಡಿಸೆಂಬರ್​ 27ರಂದು ಅಂತ್ಯಗೊಂಡಿತ್ತು. ಅದಾಗಿ 3 ದಿನಗಳ ನಂತರ ಮಕರವಿಳಕ್ಕು ಉತ್ಸವ ಆರಂಭಗೊಂಡಿತ್ತು. ಸುಪ್ರೀಂಕೋರ್ಟ್​ ತೀರ್ಪಿನ ಬಳಿಕ ನಡೆದ ಮೊದಲ ಮಂಡಲ- ಮಕರವಿಳಕ್ಕು ಉತ್ಸವ ಇದಾಗಿದ್ದು, ಪ್ರತಿಭಟನೆಗಳ ಕಾರಣ ಈ ಬಾರಿ ದೇವಸ್ಥಾನದ ಆದಾಯ ಸಿಕ್ಕಾಪಟ್ಟೆ ಕುಸಿತವಾಗಿದೆ.

ತೆಲಂಗಾಣದ ರಸ್ತೆಗಳು ಇನ್ಮುಂದೆ ಕನ್ನಡಿಯಂತೆ ಹೊಳೆಯಲಿದೆ…!

ತೆಲಂಗಾಣದ ರಸ್ತೆಗಳು ಕನ್ನಡಿಯ ರೀತಿ ಹೊಳೆಯುಂತೆ ಮಾಡ್ತೀನಿ ಎಂದು ರಾಜ್ಯದ ಸಿಎಂ ಕೆ. ಚಂದ್ರಶೇಖರರಾವ್ ಹೇಳಿದ್ದಾರೆ.

ಹೈದ್ರಾಬಾದ್ ​ನ ಪ್ರಗತಿಭವನದಲ್ಲಿ ರಾಜ್ಯದ ರಸ್ತೆಗಳ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವೇಳೆ ಅಧಿಕಾರಿಗಳ ಈ ಬಗ್ಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ರಸ್ತೆ ಕಾಮಗಾರಿಗಳನ್ನು ಮುಂದಿನ ಎರಡು ವರ್ಷಗಳ ಒಳಗೆ ಮುಗಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಭೆಯಲ್ಲಿ ಸಿಎಂ ಚಂದ್ರಶೇಖರ್​ ರಾವ್​ ಸೂಚಿಸಿದ್ದಾರೆ.

ಇದೇ ವೇಳೆ ನೀರಾವರಿ ಯೋಜನೆಗಳ ನಂತರ ನಮ್ಮ ಪ್ರಮುಖ ಆದ್ಯತೆ ರಸ್ತೆ ಹಾಗೂ ಹೆದ್ದಾರಿಗಳು ಎಂದು ಕೆಸಿಆರ್​ ಸ್ಪಷ್ಟಪಡಿಸಿದ್ದು, ಹೊಸದಾಗಿ ರಚನೆಯಾಗಿರುವ ಗ್ರಾಮ ಪಂಚಾಯ್ತಿಗಳು ಸೇರಿದಂತೆ ಎಲ್ಲಾ 12,751 ಪಂಚಾಯ್ತಿಗಳಿಗೂ ಡಾಂಬರು ರಸ್ತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ.

ನಮ್ಮ ರಾಜ್ಯದ ಸಿಎಂ ಕುಮಾರಸ್ವಾಮಿಯವರು ಕೂಡಾ ಈ ಸುದ್ದಿಯನ್ನು ಓದುವುದು ಒಳಿತು. ಯಾಕೆಂದರೆ ರಾಜ್ಯದ ರಸ್ತೆಗಳು ಒಡೆದ ಕನ್ನಡಿಯಂತಾಗಿದೆ.

ಇನ್ನೆರಡು ತಿಂಗಳು ಕಳೆಯಲಿ ಮೋದಿ ಕೇವಲ ಸಂಸದರಷ್ಟೇ – ಪ್ರಕಾಶ್ ರೈ

ಮೋದಿಯವರನ್ನು ಮೊದಲು ವಾರಣಾಸಿಯಲ್ಲಿ ಗೆಲ್ಲಲು ಹೇಳಿ. ಇನ್ನೆರೆಡು ತಿಂಗಳು ಕಳೆದರೆ ಮೋದಿಯೂ ಒಬ್ಬ ಸಂಸದರಷ್ಟೇ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ನನಗೆ ಮೋದಿ ವಿರೋಧಿಯಲ್ಲ. ಅವರ ಸರ್ಕಾರ ಮಾಡಿರುವ ಕೆಲಸದ ಮೇಲೆ ನನಗೆ ಕೋಪ ಇದೆ ಎಂದರು.

ಇದೇ ವೇಳೆ ಸಕ್ರಿಯ ರಾಜಕೀಯ ಪ್ರವೇಶ ಕುರಿತಂತೆ ಮಾತನಾಡಿರುವ ಪ್ರಕಾಶ್ ರೈ ಒಬ್ಬ ಡಾಕ್ಟರ್ ರಾಜಕೀಯಕ್ಕೆ ಬಂದಂತೆ, ಒಬ್ಬ ಇಂಜಿನಿಯರ್ ರಾಜಕೀಯಕ್ಕೆ ಬಂದಂತೆ ಒಬ್ಬ ಪ್ರಜೆಯಾಗಿ ನಾನು ರಾಜಕೀಯ ಪ್ರವೇಶಿಸುತ್ತಿದ್ದೇನೆ.

ರಾಜಕೀಯ ಯಾರ ಸೊತ್ತಲ್ಲ, ಅದು ಪ್ರಜೆಗಳ ಸೊತ್ತು. ಜನರ 10 ವರ್ಷದ ಹಿಂದಿನ ಸಮಸ್ಯೆಗಳು ಇನ್ನೂ ಹಾಗೇ ಇವೆ. ನನ್ನಲ್ಲಿ ಯಾವುದೇ ಸಿದ್ಧಾಂತಗಳಿಲ್ಲ, ಐಡಿಯಾಲಜಿಗಳಿಲ್ಲ. ಜನರಿಗೆ ಏನು ಬೇಕೋ ಅದನ್ನು ಮಾತ್ರ ಮಾಡುತ್ತೇನೆ. ಸಮಾನ ಶಿಕ್ಷಣ, ಉದ್ಯೋಗ, ಉತ್ತಮ ಆರೋಗ್ಯ ವ್ಯವಸ್ಥೆ ಕೊಟ್ಟರೆ ಸಾಕು ಎಂದರು.

ಪ್ರಕಾಶ್ ರೈ ಮಾತು ಕೇಳಿದ ಜನ ಕಿಚ್ಚ ಸುದೀಪ್ ಸ್ಟೈಲ್ ನಲ್ಲಿ “ ಭ್ರಮೆ“ ಅಂದಿದ್ದಾರೆ.