ಮಂಚದಾಟ ಮುಗಿಸಿ ಪ್ರೇಮಿಯನ್ನೇ ಮಂಚಕ್ಕೆ ಕಟ್ಟಿ ಬೆಂಕಿ ಹಚ್ಚುವಂತದ್ದು ಏನಾಯ್ತು?

ತನ್ನ ಪ್ರಿಯಕರನನ್ನು ಮಂಚಕ್ಕೆ ಕಟ್ಟಿ ಬೆಂಕಿ ಹಚ್ಚಿ ಪ್ರಿಯತಮಯೇ ಸಾಯಿಸಿದ ಘಟನೆ  ಆಂಧ್ರ ವಿಜಯವಾಡದ ಪ್ರಕಾಶಂ ಜಿಲ್ಲೆಯ ಚೌಟಾಪಲ್ಲಿ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ಪೊಡಿಲಿ ನಿವಾಸಿ ಶೇಕ್ ಶಬ್ಬೀರ್ (32) ಎಂದು ಗುರುತಿಸಲಾಗಿದ್ದು, ಹತ್ಯೆಗೈದ ಬಳಿಕ ಆರೋಪಿ ಶಕೀರಾ (28) ಪೊಲೀಸ್ ಠಾಣೆಗೆ ಶರಣಾಗಿದ್ದಾಳೆ.

ಮರಿಪುಡಿ ಪೊಲೀಸ್ ಠಾಣೆಯಲ್ಲಿ ಶೇಕ್ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ, ಜೊತೆಗೆ ಶಕೀರಾ ಸಹಭಾಗಿತ್ವದಲ್ಲಿ ಕೋಳಿ ಫಾರಂ ವ್ಯವಹಾರ ನಡೆಸುತ್ತಿದ್ದ. ಕೋಳಿ ಫಾರಂ ಉದ್ಯೋಗದೊಂದಿಗೆ ಶಕೀರಾ ಮತ್ತು ಶೇರ್ ಶಬ್ಬೀರ್ ಅಕ್ರಮ ಸಂಬಂಧ ಹೊಂದಿದ್ದರು.

ಕೋಳಿ ಫಾರಂನಲ್ಲಿ ಇವರಿಬ್ಬರ ಬೇಟೆಯೂ ನಡೆಯುತ್ತಿತ್ತು.ಆದರೆ ಸಂಬಂಧದಲ್ಲಿ ಕಾಸಿನ ವ್ಯವಹಾರ ಸಮಸ್ಯೆ ತಂದೊಡ್ಡಿದ ಕಾರಣ 8 ತಿಂಗಳಿಂದ ಇಬ್ಬರಿಬ್ಬರ ನಡುವೆ ಕಲಹ ಪ್ರಾರಂಭಗೊಂಡಿತ್ತು. ಆದರೂ ದೈಹಿಕ ಸಂಬಂಧ ನಿಂತಿರಲಿಲ್ಲ.

ಹೀಗಾಗಿ ಶನಿವಾರ ಕೂಡಾ ಕೋಳಿ ಫಾರಂನಲ್ಲಿ ಭೇಟಿಯಾಗಲು ನಿರ್ಧರಿಸಿದ್ದರು. ಆದರೆ ಶಕೀರಾ ಐಡಿಯಾ ಹೂಡಿಯೇ ಬಂದಿದ್ದಳು. ಬರುವಾಗ ಶೇರ್ ಶಬ್ಬೀರ್ ನನ್ನು ಮುಗಿಸಲೇಬೇಕು ನಿರ್ಧರಿಸಿದ್ದಳು. ಹೀಗಾಗಿ ಶಕೀರಾ ಪೆಟ್ರೋಲ್ ಸಮೇತ ಅಲ್ಲಿಗೆ ಬಂದಿದ್ದಾಳೆ. ಶಬ್ಬೀರ್ ಜೊತಗೆ ದೈಹಿಕ ಸಂಪರ್ಕ ಬೆಳೆಸಿದ ನಂತರ ಅದೇ ಮಂಚಕ್ಕೆ ಆತನನ್ನು ಕಟ್ಟಿ,ಬೆಂಕಿ ಹಚ್ಚಿದ್ದಾಳೆ.

ಮುಂಜಾನೆ ಕೋಳಿ ಫಾರಂ ಕೆಲಸಕ್ಕೆ ಬಂದ ವೇಳೆ ಕಾರ್ಮಿಕರಿಗೆ ಹೆಣ ಕಂಡಿದೆ. ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಶಕೀರಾ ಪೊಲೀಸ್ ಠಾಣೆಗೆ ಬಂದು ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ.

Advertisements

ತುಂಡು ಬಟ್ಟೆಯಲ್ಲೇ ಬೆಲ್ಜಿಯಂನಲ್ಲಿ ಬಿಂದಾಸ್ ಹರ್ಷಿಕಾ

ಟುಮಾರೋ ಲ್ಯಾಂಡ್‌ ಜಗತ್ತಿನ ಜನಪ್ರಿಯ ಪಾರ್ಟಿ ತಾಣ ಇಲ್ಲಿಗೆ ಈಗ ನಟಿ ಹರ್ಷಿಕಾ ಪೂಣಚ್ಚ ಹೋಗಿದ್ದು  ಹೊಸ ಹೊಸ ಫೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಮನಸೋಯಿಚ್ಛೆ ಮೋಜು ಮಸ್ತಿ ಮಾಡೋ ತಾಣದಲ್ಲಿ ಪ್ರತಿ ವರ್ಷ ಜುಲೈ ಅಥವಾ ಆಗಸ್ಟ್‌ನಲ್ಲಿ ಇಲ್ಲೊಂದು ಸಂಗೀತ ಜಾತ್ರೆ ನಡೆಯುತ್ತದೆ.

ದೇಶ ವಿದೇಶದಿಂದ ಶ್ರೀಮಂತರೇ ಬರುವ ಈ ಮ್ಯೂಸಿಕ್ ಫೆಸ್ಟ್ ನಲ್ಲಿ ಭಾಗವಹಿಸಬೇಕಾದರೆ ಜನ ಬರುತ್ತಾರೆ, ಇಲ್ಲಿಗೆ ಹೋಗಬೇಕು ಎಂದರೆ ವರ್ಷದ ಮೊದ್ಲೇ ಟಿಕೆಟ್‌ ಬುಕ್‌ ಮಾಡ್ಬೇಕಾಗುತ್ತೆ.

ಇದೀಗ ಈ ಜಾಗಕ್ಕೆ ನಟಿ ಹರ್ಷಿಕಾ ಪೊಣಚ್ಚ ತಮ್ಮ ಸ್ನೇಹಿತರೊಂದಿಗೆ ಭೇಟಿ ನೀಡಿದ್ದು ವಿಶೇಷವಾಗಿ ಡ್ರೆಸ್‌ ಮಾಡಿಕೊಂಡು ಎಂಜಾಯ್‌ ಮಾಡುತ್ತಿರುವ ಫೋಟೋ ವೈರಲ್ ಆಗಿದೆ.

ಬಿಂದಾಸ್ ವಿಡಿಯೋ ನೋಡಲು ಲಿಂಕ್ ಕ್ಲಿಕ್ ಮಾಡಿ

ನೆದರ್‌ಲ್ಯಾಂಡ್‌ನ ಆಮ್​​ಸ್ಟರ್​​​ಡ್ಯಾಮ್‌ನಲ್ಲಿ ಇಳಿದು ರೈಲಿನ ಮುಖಾಂತರ ಟುಮಾರೋ ಲ್ಯಾಂಡ್‌ಗೆ ತಲುಪಬೇಕು.

ಮಸಾಜ್ ಪಾರ್ಲರ್ ಗೆ ಹೋಗ್ತಿರಾ….. ಈ ಸುದ್ದಿ ಓದಿ…. ಮೈಸೂರು ಮಾಂಸ ದಂಧೆಗೆ ಟ್ವಿಸ್ಟ್

ಖಚಿತ ಮಾಹಿತಿ ಮೇರೆಗೆ ಮೈಸೂರಿನ ವಿಜಯನಗರ ಪೊಲೀಸರು ಹಾಗೂ ಒಡನಾಡಿ ಸಂಸ್ಥೆಯವರು ಜಂಟಿಯಾಗಿ ಶನಿವಾರ ಸಂಜೆ ಎರಡು ಬ್ಯೂಟಿ ಪಾರ್ಲರ್ ಗಳ ಮೇಲೆ ದಾಳಿ ನಡೆಸಿದ್ದರು.

ಈ ವೇಳೆ 7 ಯುವತಿಯ ರಕ್ಷಣೆ ಮಾಡಿ, 5 ಮಂದಿ ಪುರುಷರನ್ನು ಬಂಧಿಸಲಾಗಿತ್ತು. ಜೊತೆಗೆ ಒಂದು ಕಾರು, ಮೊಬೈಲ್ ಹಾಗೂ ಮೂರು ಬೈಕ್ ವಶಪಡಿಸಿಕೊಳ್ಳಲಾಗಿತ್ತು.

ಈ ವೇಳೆ ಬ್ಯೂಟಿ ಪಾರ್ಲರ್ ಗಳಲ್ಲಿ ಬ್ಲೂಫಿಲ್ಮ್ ಚಿತ್ರೀಕರಿಸುತ್ತಿದ್ದರು ಎಂಬ ವಿಚಾರವೂ ಬೆಳಕಿಗೆ ಬಂದಿತ್ತು.

ಇದೀಗ ಇದೇ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಚಂದನ್ ಬ್ಯೂಟಿ ಪಾರ್ಲರ್ ಹಾಗೂ ಹೂಟಗಳ್ಳಿಯಲ್ಲಿರುವ ಐಶ್ವರ್ಯ ಬ್ಯೂಟಿ ಪಾರ್ಲರ್ ಮೇಲೆ ದಾಳಿ ನಡೆದಾಗ ಡೈರಿಯೊಂದು ಸಿಕ್ಕಿತ್ತು. ಆ ಡೈರಿಯಲ್ಲಿ ಹೈಟೆಕ್ ವೇಶ್ಯಾವಟಿಕೆ ದಂಧೆಗೆ ಪೊಲೀಸರ ಕುಮ್ಮಕ್ಕು ಇರುವ ಶಂಕೆ ವ್ಯಕ್ತವಾಗಿದೆ. ಡೈರಿಯಲ್ಲಿ ಸಿಸಿಬಿಗೆ 7 ಸಾವಿರ, ಪೇದೆಯೊಬ್ಬರಿಗೆ 10 ಸಾವಿರ ಹಣ ಕೊಟ್ಟಿರುವ ಬಗ್ಗೆ ಉಲ್ಲೇಖವಿದೆಯಂತೆ.

ಈ ನಡುವೆ ಬೆಂಗಳೂರಿನಲ್ಲಿ ಮತ್ತೊಂದು ಮಸಾಜ್ ದಂಧೆ ವ್ಯವಹಾರ ಬೆಳಕಿಗೆ ಬಂದಿದೆ. ಬೆಂಗಳೂರಿನ ಬಾಣಸವಾಡಿಯಲ್ಲಿ 15 ದಿನಗಳ ಹಿಂದೆ ಆಯುರ್ವೆದಿಕ್ ಮಸಾಜ್ ಮಾಡಿಸಿಕೊಳ್ಳಲು ಹೋಗಿದ್ದ ಓಲಾ ಕ್ಯಾಬ್ ಚಾಲಕ ಲೈಂಗಿಕ ಕ್ರಿಯೆ ನಡೆಸಲಿಲ್ಲ ಅನ್ನುವ ಕಾರಣಕ್ಕೆ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಈ ಸಂಬಂಧ ಕ್ಯಾಬ್ ಚಾಲಕ ನಂದಗುಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಸಾಜ್ ಗೆ ಹೋದ ಚಾಲಕ ಅದೊಂದು ಅಕ್ರಮ ವೇಶ್ಯಾವಾಟಿಕೆ ಕೇಂದ್ರ ಎಂದು ತಿಳಿಯುತ್ತಿದ್ದಂತೆ ವಾಪಾಸ್ ಬಂದೆ. ಆಗ ಅವರು ನನ್ನ ಮೊಬೈಲ್ ಕಿತ್ತುಕೊಂಡು ಹಣ ಕೊಡುವಂತೆ ಒತ್ತಾಯ ಮಾಡಿದರು. ಬಳಿಕ ಇಬ್ಬರು ಹುಡುಗರು ನನ್ನನ್ನು ಎಳೆದುಕೊಂಡು ಹೋಗಿ ಬಟ್ಟೆ ಬಿಚ್ಚಿಸಿ ಅಪರಿಚಿತ ಹುಡುಗಿಯ ಜೊತೆ ಮಲಗಿಸಿ ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡು ಇದನ್ನು ಯಾರಿಗಾದರೂ ತಿಳಿಸಿದರೆ ಟಿವಿ ಚಾನೆಲ್ ಗೆ ಕೊಡುತ್ತೇವೆ ಎಂದು ಬೆದರಿಸಿದರು ಅಂತಾ ಚಾಲಕ ದೂರಿನಲ್ಲಿ ತಿಳಿಸಿದ್ದಾರೆ.

ಯಾವ ಅಕ್ರಮ ಮಸಾಜ್ ಪಾರ್ಲರ್, ಮಾಂಸದಂಧೆಗಳು ಪೊಲೀಸರಿಗೆ ಗೊತ್ತಿಲ್ಲದೆ ನಡೆಯುವುದಿಲ್ಲ. ಆದರೆ ಬೇಲಿಯೇ ಎದ್ದು ಹೋಲ ಮೇಯ್ದರೆ ಏನು ಮಾಡೋದು. ಮುಖ್ಯಮಂತ್ರಿಗಳು ಈ ಬಗ್ಗೆ ಖಡಕ್ಕ್ ಸಂದೇಶ ರವಾನಿಸದಿದ್ದರೆ ಕಷ್ಟ. ಇನ್ನು ಮಸಾಜ್ ಗೆಂದು ಹೋಗುವ ಮಂದಿಯೂ ಎಚ್ಚರ ವಹಿಸುವುದು ಅಗತ್ಯ.

ರಾಷ್ಟ್ರವನ್ನು ಮುನ್ನಡೆಸುವುದು ಕ್ರಿಕೆಟ್​ ತಂಡವನ್ನು ಮುನ್ನಡೆಸಿದಷ್ಟು ಸುಲಭವಲ್ಲ

ಪಾಕಿಸ್ತಾನದ ಸಂಭಾವ್ಯ ಪ್ರಧಾನಿಯಾಗಿ ಹೊಮ್ಮಿರುವ ಇಮ್ರಾನ್ ಖಾನ್ ಗೆ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಕಾಂಗ್ರೆಸ್​ ಮುಖಂಡ ಮೊಹಮ್ಮದ್ ಅಜರುದ್ದೀನ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ಖಾನ್​ ಚುನಾವಣೆಯಲ್ಲೇ ಗೆಲುವು ಸಾಧಿಸುತ್ತಿದ್ದಂತೆಯೇ ಕ್ರಿಕೆಟ್​ ಲೋಕದ ಅನೇಕ ದಿಗ್ಗಜರು ಅಭಿನಂದನೆ ಸಲ್ಲಿಸಿ ಸಲಹೆ ನೀಡುತ್ತಿದ್ದಾರೆ. ಇದೀಗ ಖಾನ್​ ಸಮಕಾಲೀನರಾದ ಅಜರುದ್ದೀನ್ ರಾಷ್ಟ್ರ ಮತ್ತು ಕ್ರಿಕೆಟ್​ ತಂಡವನ್ನು ಮುನ್ನಡೆಸುವುದರಲ್ಲಿ ಬಹುದೊಡ್ಡ ವ್ಯತ್ಯಾಸವಿದೆ ಎಂದು ಸಲಹೆ ನೀಡಿದ್ದಾರೆ.

ಪಾಕ್​ ಕ್ರಿಕೆಟ್​ ತಂಡದ ನಾಯಕರಾಗಿ ಖಾನ್​ ಮೈದಾನದಲ್ಲಿ ವೈಯುಕ್ತಿಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಪಾಕ್​ ಪ್ರಧಾನಿಯಾದ ನಂತರ ಅಂತಹ ನಿರ್ಧಾರಗಳನ್ನು ಮಾತ್ರ ಖಾನ್​ ತೆಗೆದುಕೊಳ್ಳಬೇಕು ಎಂದು ಅಜರ್ ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರ ಮುನ್ನಡೆ ಹಾಗೂ ಕ್ರಿಕೆಟ್​ ತಂಡ ಮುನ್ನಡೆ ಎಂಬುದು ಎರಡು ವಿಭಿನ್ನ ವಿಷಯಗಳು. ಖಾನ್​ ಏನು ಮಾಡುತ್ತಾರೆ ಎಂಬುದನ್ನು ನಾವು ನೋಡಬೇಕಾಗಿದೆ ಎಂದು ಹೇಳಿರುವ ಅಜರ್ ಖಾನ್​ ಪ್ರಧಾನಿಯಾಗಿ ಇಂಡೋ-ಪಾಕ್​ ಸಂಬಂಧದ ಬಗ್ಗೆ ಮಾತನಾಡಲು ಅವಕಾಶ ಸಿಕ್ಕರೆ ಎದು ಕೇಳಲಾದ ಪ್ರಶ್ನೆಗೆ ಉತ್ತರಿಸಿ “ಪಾಕ್​ನೊಳಗೆ ಅನೇಕ ಸಮಸ್ಯೆಗಳಿವೆ. ಮೊದಲು ಅದನ್ನು ತಿಳಿದುಕೊಂಡು ಬಗೆಹರಿಸಲಿ. ಆನಂತರ ಇತರೆ ಸಮಸ್ಯೆಗಳ ಕಡೆ ನೋಡಲಿ” ಎಂದರು

ನೆಹರೂ ಹಾಗೂ ಇಂದಿರಾ ಅವರನ್ನು ಕಾಂಗ್ರೆಸ್ ಮರೆಯುವ ದಿನ ಬಂತಾ..?

ಕಾಂಗ್ರೆಸ್ ಅಂದರೆ ಇಂದಿರಾ,ಇಂದಿರಾ ಅಂದರೆ ಕಾಂಗ್ರೆಸ್ ಅನ್ನುವ ದಿನವಿತ್ತು. ಈ ಕಾರಣಕ್ಕಾಗಿ ಕಾಂಗ್ರೆಸ್ ಆಡಳಿತ ಕಾಲದಲ್ಲಿ ಇಂದಿರಾ ಹೆಸರನ್ನು ಶಾಶ್ವತವಾಗಿಸಲು ಇರೋ ಬರೋ ಯೋಜನೆಗಳಿಗೆ ಇಂದಿರಾ ಹೆಸರು ಇಡಲಾಗಿತ್ತು ಇದಕ್ಕೆ ನೆಹರೂ ಹೆಸರೂ ಹೊರತಲ್ಲ.

ಆದರೆ ಇದೀಗ ಇಂದಿರಾ ಹಾಗೂ ನೆಹರೂ ಅವರನ್ನು ಕಾಂಗ್ರೆಸ್ ಮರೆಯುತ್ತಿದೆಯೇ ಅನ್ನುವ ಸಂಶಯ ಬರಲಾರಂಭಿಸಿದೆ.

ಇದಕ್ಕೆ ಸಾಕ್ಷಿ ಅನ್ನುವಂತೆ ಸಿಕ್ಕಿದ್ದು, ಶನಿವಾರ ಬೆಂಗಳೂರಿನಲ್ಲಿ ಚಿದಂಬರಂ ನೀಡಿದ ಹೇಳಿಕೆ.

ಕಾಂಗ್ರೆಸ್ ಸಂಘಟನೆ ಹಾಗೂ ಕಾರ್ಯಕರ್ತರ ಜೊತೆ ನೇರ ಸಂಪರ್ಕ ಕಲ್ಪಿಸುವ ‘ಶಕ್ತಿ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು “ಒಂದು ಕಾಲವಿತ್ತು ಅಂದು ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಹಾಗೂ ಇಂದಿರಾಗಾಂಧಿ ಹೆಸರನ್ನು ಹೇಳಿದರೆ ಸಾಕು ಲಕ್ಷಾಂತರ ಮತದಾರರು ಮತಗಟ್ಟೆಗೆ ಬಂದು ಕಾಂಗ್ರೆಸ್ ಪರವಾಗಿ ಮತ ಚಲಾಯಿಸುತ್ತಿದ್ದರು. ಅದೇ ರೀತಿ ಇಂದಿನ ಚುನಾವಣೆ ಬೂತ್ ಮಟ್ಟದ್ದಾಗಿದ್ದು ಅದಕ್ಕಾಗಿಯೇ ಪ್ರತಿ ಬೂತ್ ನಲ್ಲೂ ನಾವು ಇರಬೇಕು. ಪ್ರತಿ ಬೂತ್ ನಲ್ಲೂ ಸಾಕಷ್ಟು ಜನರನ್ನು ಹೊಂದಿರಬೇಕು” ಎಂದಿದ್ದಾರೆ.

 ಬೂತ್ ಮಟ್ಟದಲ್ಲಿ ಪಕ್ಷ ಬಲಿಷ್ಟವಾಗದಿದ್ದರೆ, 2019 ರ ಚುನಾವಣೆ ಎದುರಿಸುವುದು ಕಷ್ಟ ಅನ್ನುವ ಮಾತನ್ನು ಅವರು ಹೇಳಿದ್ದು,ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತ ಯೋಜನೆ ಕಾಂಗ್ರೆಸ್ ಬುಡವನ್ನು ಅಲುಗಾಡಿಸುತ್ತಿದೆ ಅನ್ನುವುದನ್ನು ಪರೋಕ್ಷವಾಗಿ ಹೇಳಿದರು.

 ಜೊತೆಗೆ ಕರಾವಳಿ ಬಗ್ಗೆಯೂ ಪ್ರಸ್ತಾಪಿಸಿರುವ ಅವರು “ಕರ್ನಾಟಕದಲ್ಲಿ ಕರಾವಳಿ ಬಿಟ್ಟರೆ, ಬೇರೆ ಎಲ್ಲೂ ಬಿಜೆ‌ಪಿ ಹೆಚ್ಚು ಮತಗಳಿಸಿಲ್ಲ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಶೇಕಡಾ 38 ರಷ್ಟು ಮತ ಪಡೆದಿದ್ದೇವೆ. ಇಂದು ಬೂತ್ ಮಟ್ಟದಲ್ಲಿ ಹೆಚ್ಚು ಪೈಪೋಟಿ ಇದೆ.ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಮತ ಗಳಿಕೆ ಶಕ್ತಿ ಇಲ್ಲ. ಕರಾವಳಿಯಲ್ಲಿ ಶೇಕಡಾ 50 ರಷ್ಟು ಮತ ಪಡೆದಿರುವ ಬಿಜೆಪಿ. ಉಳಿದ ಕಡೆ ೩೦% ಕಡಿಮೆ ಮತ ಪಡೆದಿದೆ. ಹೀಗಾಗಿ ನಾವು ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ. ಕರಾವಳಿ ಯಲ್ಲಿ ಬೂತ್ ಮಟ್ಟದಲ್ಲಿ ವೀಕ್ ಆಗಿದ್ದೇ ನಮ್ಮ ಚುನಾವಣಾ ಸೋಲಿಗೆ ಕಾರಣವಾಯಿತು. ಹೀಗಾಗಿಯೇ ಅಧ್ಯಕ್ಷರಿಗೆ ಇದರ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ ಯೇ ಪಕ್ಷಕ್ಕೆ ಬೂತ್ ಮಟ್ಟದಲ್ಲಿ ಶಕ್ತಿ ತುಂಬಲು ಶಕ್ತಿ ಈ ಕಾರ್ಯಕ್ರಮ ಅನುಕೂಲವಾಗಲಿದೆ” ಎಂದಿದ್ದಾರೆ.

 ಇಂದಿರಾ ಗಾಂಧಿಯನ್ನು ಅದೆಷ್ಟು ಟೀಕಿಸಿದರೂ,ಅವರು ಮಾಡಿದ ಒಳ್ಳೆಯ ಕೆಲಸಗಳನ್ನು ಜನ ಇಂದಿಗೂ ನೆನಪಿಟ್ಟುಕೊಂಡಿದ್ದಾರೆ. ಕಾಂಗ್ರೆಸ್ ಇಂದಿರಾ ಹೆಸರಿನಲ್ಲಿ ಯೋಜನೆಗಳಿಗೆ ಇಡುವ ಬದಲು ಅವರ ಉತ್ತಮ ಯೋಜನೆಗಳಿಗೆ ಹೊಸ ರೂಪ ಕೊಟ್ಟಿದ್ದರೆ. ಇಂದು ಇಂದಿರಾ  ಹೆಸರಿನಲ್ಲಿ ಮತ ಗಳಿಸುವುದು ಕಷ್ಟ ಅನ್ನುವ ಹೇಳಿಕೆಯನ್ನು ಕಾಂಗ್ರೆಸ್ ನಾಯಕರೇ ಕೊಡುವ ಪರಿಸ್ಥಿತಿ ಬರುತ್ತಿರಲಿಲ್ಲ.

42 ಗಂಟೆಯ ದಾರಿಗೆ ಅದೊಂದು ರೈಲು ತೆಗೆದುಕೊಂಡಿದ್ದು 4 ವರ್ಷ

42 ಗಂಟೆಗಳಲ್ಲಿ ಗೊಬ್ಬರ ತಲುಪಿಸಬೇಕಾಗಿದ್ದ ಗೂಡ್ಸ್ ರೈಲು 4 ವರ್ಷ ಕಳೆದು ನಿಲ್ದಾಣ ತಲುಪಿದೆ. 1,326 ಕಿಲೋ ಮೀಟರ್ ತಲುಪಲು 3.5 ವರ್ಷ ತೆಗೆದುಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದೆ.

2014 ರ ನವೆಂಬರ್ 10 ರಂದು ಡಿಪಿಎ ತುಂಬಿದ 1,316 ಬ್ಯಾಗುಗಳನ್ನು ಉತ್ತರ ಪ್ರದೇಶಕ್ಕೆ ಸಾಗಿಸಲು ರೈಲ್ವೆ ವ್ಯಾಗನ್ ಒಂದನ್ನು Indian Potash Limited (IPL) ಆಂಧ್ರದ ವಿಶಾಖಪಟ್ಟಣಂನಿಂದ ಬುಕ್ ಮಾಡಿತ್ತು.

ರೈಲ್ವೆ ಇಲಾಖೆಯ ಸೂಚನೆಯಂತೆ ಸಂಸ್ಥೆ ಕಟ್ಟಬೇಕಾದ ಹಣ ತುಂಬಿ ಗೂಡ್ಸ್ ಗಳನ್ನು ತುಂಬಿಸಿತ್ತು. ಅತ್ತ ಉತ್ತರ ಪ್ರದೇಶದ ಗೊಬ್ಬರ ವ್ಯಾಪಾರಿ ರಾಮಚಂದ್ರ ಗುಪ್ತಾ ಗೂಡ್ಸ್ ಇಂದು ಬರುತ್ತದೆ ನಾಳೆ ಬರುತ್ತದೆ ಎಂದು ಕಾಯುತ್ತಿದ್ದರು. ಆದರೆ ರೈಲು ಬರಲೇ ಇಲ್ಲ. ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ವರ್ಷದ ಕಾದರೂ ಗೊಬ್ಬರ ತುಂಬಿದ ವ್ಯಾಗನ್ ನಾಪತ್ತೆ.

ಈ ನಡುವೆ ರಾಮಚಂದ್ರ ಗುಪ್ತಾ ರೈಲ್ವೆ ಇಲಾಖೆ ಮತ್ತು ಇಂಡಿಯನ್ ಪೊಟಾಶ್ ಸಂಸ್ಥೆಗೆ ಪತ್ರ ಬರೆದರು.ಗೊಬ್ಬರ ಕಂಪನಿ ರೈಲ್ವೆ ಇಲಾಖೆಯ ಬೆನ್ನು ಹತ್ತಿತ್ತು. ಆದರೆ ಗೊಬ್ಬರ ತುಂಬಿದ ವ್ಯಾಗನ್ ಮಾತ್ರ ಪತ್ತೆಯಾಗಲೇ ಇಲ್ಲ.

ಈ ನಡುವೆ ದಿಢೀರ್ ಎಂದು ಕಳೆದ ಬುಧವಾರ (25/07/18) ರಂದು ಗೂಡ್ಸ್ ಹೊತ್ತ ರೈಲು 3.30ರ ಸುಮಾರಿಗೆ ಬಸ್ತಿ ರೈಲ್ವೆ ನಿಲ್ದಾಣ ತಲುಪಿದೆ.ದಾಖಲೆ ತೆಗೆದು ನೋಡಿದ ಅಧಿಕಾರಿಗಳು, ಸಿಬ್ಬಂದಿ ಶಾಕ್ ಆಗಿದ್ದಾರೆ.

ಈ ನಡುವೆ ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಗೊಬ್ಬರ ವ್ಯಾಪಾರಿ ರಾಮಚಂದ್ರ ಗುಪ್ತಾ “ 2014 ರಲ್ಲಿ ಕಂಪನಿ ನನ್ನ ಹೆಸರಿಗೆ ಗೂಡ್ಸ್ ಬುಕ್ ಮಾಡಿ ಕಳುಹಿಸಿತ್ತು. ಆದರೆ ಗೂಡ್ಸ್ ಬಂದಿರಲಿಲ್ಲ. ಈ ಬಗ್ಗೆ ರೈಲ್ವೆ ಇಲಾಖೆ ಮತ್ತು IPL ಗೆ ಮಾಹಿತಿ ನೀಡಿದ್ದೆ. ನಾನು ಗೂಡ್ಸ್ ಗೆ ಗಣ ಪಾವತಿಸಿಲ್ಲ. ಹೀಗಾಗಿ ಇದು IPL ಗೆ ಸೇರಿದ ಸೊತ್ತಾಗಿರುತ್ತದೆ. ಹೀಗಾಗಿ ವಿಚಾರ ರೈಲ್ವೆ ಇಲಾಖೆ ಮತ್ತು IPL ನೋಡಿಕೊಳ್ಳಲಿದೆ” ಎಂದಿದ್ದಾರೆ.

ಗೂಡ್ಸ್ ತಡವಾಗಿರುವ ಕುರಿತಂತೆ Indian Potash Limited Assistant Marketing Manager ಡಿಕೆ ಸಕ್ಸೇನಾ ಪ್ರತಿಕ್ರಿಯೆ ನೀಡಿದ್ದು, ” ಹೌದು ನಾವು ನವೆಂಬರ್ 2014 ರಂದು ವ್ಯಾಗನ್ ಅನ್ನು ಬುಕ್ ಮಾಡಿದ್ದೇವು. 14 ಲಕ್ಷ ಮೊತ್ತದ ಗೊಬ್ಬರ ಅವರಿಗೆ ಎಂದೋ ತಲುಪಬೇಕಾಗಿತ್ತು. ತಡವಾಗಿರುವ ಕುರಿತಂತೆ ನಾವು ರೈಲ್ವೆ ಇಲಾಖೆ ದೂರು ನೀಡಿದ್ದು, ಹೀಗಾಗಿ ಗೂಡ್ಸ್ ನ ಮೌಲ್ಯಮಾಪನವಾದ ನಂತರ ನಮಗಾದ ನಷ್ಟವನ್ನು ರೈಲ್ವೆ ಇಲಾಖೆ ಭರಿಸಿಬೇಕಿದೆ ” ಅಂದಿದ್ದಾರೆ.

ಹಾಗಾದರೆ ಮೂರು ವರ್ಷಗಳ ಕಾಲ ರೈಲ್ವೆ ಇಲಾಖೆ ಏನು ಮಾಡುತ್ತಿತ್ತು. ಈ ವ್ಯಾಗನ್ ಎಲ್ಲಿತ್ತು ಅನ್ನುವುದೇ ಯಕ್ಷ ಪ್ರಶ್ನೆ. ರೈಲ್ವೆ ಇಲಾಖೆ ಪ್ರಕಾರ ಗೂಡ್ಸ್ ಬೋಗಿಯಲ್ಲಿ ತೊಂದರೆ ಕಾಣಿಸಿಕೊಂಡರೆ ಅದನ್ನು ರಿಪೇರಿಗೆ ಕಳುಹಿಸುವ ಸಲುವಾಗಿ ಸಮೀಪದ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲಾಗುತ್ತದೆ. ಹೀಗೆ ಇದನ್ನು ನಿಲ್ಲಿಸಿರಬೇಕು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೊಬ್ಬರ ಕೊಳೆತು ಹೋಗುವಂತಾಗಿದೆ.

ಕತ್ತೆಗಳಿಗೆ ಝೀಬ್ರಾ ಬಣ್ಣ ಬಳಿದು ಕಾಸು ಮಾಡಿದ ಮೃಗಾಲಯ ಸಿಬ್ಬಂದಿ

ಜನ ನಾಲ್ಕು ಕಾಸು ಮಾಡಿಕೊಳ್ಳಬೇಕು ಅಂತಾ ಏನೆಲ್ಲಾ ಮಾರ್ಗ ಹುಡುಕುತ್ತಾರೆ ಅನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಒಂದು ಹೆಜ್ಜೆ ಮುಂದೆ ಹೋಗಿರುವ ಈಜಿಪ್ಟ್ ಕೈರೋದ ಮೃಗಾಲಯ ಸಿಬ್ಬಂದಿ ಝೀಬ್ರಾ ಡ್ಯೂಪ್ ಸೃಷ್ಟಿಸಿದ್ದಾರೆ.

ಕೈರೋದಾ International Garden municipal park ಆಡಳಿತ ಮಂಡಳಿ ಬರೋ ಪ್ರವಾಸಿಗರಿಗೆ ಝೀಬ್ರಾ ದರ್ಶನ ನೀಡಲು ನಿರ್ಧರಿಸಿದೆ. ಆದರೆ ಎಲ್ಲೂ ಝೀಬ್ರಾ ಸಿಗಲಿಲ್ಲ. ಹಾಗಂತ ಅವರು ತಲೆ ಕೆಡಿಸಿಕೊಳ್ಳಲಿಲ್ಲ. ತಲೆ ಓಡಿಸಿದರು. ಎರಡು ಕತ್ತೆಗಳನ್ನು ಹಿಡಿದು ತಂದು ಅದಕ್ಕೆ ಝೀಬ್ರಾದಂತೆ ಬಣ್ಣ ಬಳಿದರು. ಬಂದ ಪ್ರವಾಸಿಗರಿ ಇದೇ ನೋಡಿ ಝೀಬ್ರಾ ಎಂದರು. ಬಂದವರು ಕೂಡಾ ತಲೆಯಾಡಿಸಿ ಹೋದರು.

ಆದರೆ ಇತ್ತೀಚೆಗೆ ಮೃಗಾಯಲಕ್ಕೆ ಭೇಟಿ ಕೊಟ್ಟ ಮಹಮ್ಮದ್ ಸರ್ಹಾನ್ ಎಂಬ ವಿದ್ಯಾರ್ಥಿಗೆ ಅನುಮಾನ ಬಂದಿದೆ. ಸಾಕಷ್ಟು ಝೀಬ್ರಾ ನೋಡಿದವನಿಗೆ ಇವು ಅವಲ್ಲ ಎಂದು ಅನ್ನಿಸಿದೆ. ಕಿವಿ, ಕುತ್ತಿಗೆ ಮೇಲಿಲ್ಲದ ರೋಮ ಅನುಮಾನಕ್ಕೆ ಪುಷ್ಟಿ ನೀಡಿದೆ. ಸೂಕ್ಷ್ಮವಾಗಿ ನೋಡಿದರೆ ಬಿಳಿ ಕತ್ತೆಗೆ ಹೊಡೆದ ಕಪ್ಪು ಬಣ್ಣ ಅಲ್ಲಲ್ಲಿ ಕಳಚಿಕೊಂಡಿತ್ತು. ವಿಡಿಯೋ ಮಾಡಿ ನೋಡಿದ್ರೆ ಇದು ಪಕ್ಕಾ ಕತ್ತೆಗಳು ಎಂದು ಸಾಬೀತಾಗಿದೆ.

ತಕ್ಷಣ ವಿಡಿಯೋವನ್ನು ಫೇಸ್ ಬುಕ್ ಪೇಜ್ ಗೆ ಹಾಕಿದ್ದಾನೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಅಂತರ್ ರಾಷ್ಟ್ರೀಯ ಮಾಧ್ಯಮಗಳು ಮೃಗಾಲಯದ ನಿರ್ದೇಶಕರನ್ನು ಸಂಪರ್ಕಿಸಿತು. ಆಗ ಉತ್ತರಿಸಿದ ಮೊಹಮ್ಮದ್ ಸುಲ್ತಾನ್, “ಅವನು ಹಾಕಿರುವುದು ಫೇಕ್ ನ್ಯೂಸ್ ನಮ್ಮಲ್ಲಿರುವುದು ಝೀಬ್ರಾಗಳೇ ಎಂದು ವಾದಿಸಿದ್ದಾರೆ.

ಹಾಗಂತ ಡ್ಯೂಪ್ ಗಳನ್ನು ಸೃಷ್ಟಿಸುವುದು ಮೊದಲೇನಲ್ಲ. 2009ರಲ್ಲಿ ಗಾಝಾದಲ್ಲಿ, ಕತ್ತೆಗಳಿಗೆ ಬಣ್ಣ ಬಳಿದು ಝೀಬ್ರಾ ಎಂದು ತೋರಿಸಲಾಗಿತ್ತು.

2012ರಲ್ಲೂ ಗಾಝಾದಲ್ಲಿ ಬೇರೆ ಬೇರೆ ಪ್ರಾಣಿಗಳಿಗೆ ಬೇರೆ ಬೇರೆ ಪ್ರಾಣಿಗಳ ಬಣ್ಣ ಬಳಿಯಲಾಗಿತ್ತು. ಇವು ಅಲ್ಲಿ ನಿರ್ಬಂಧ ಪರಿಸ್ಥಿತಿ ಇದ್ದ ಕಾರಣಕ್ಕೆ ಮಾಡಲಾಗಿತ್ತು.

2103 ರಲ್ಲಿ ಚೀನಾದ ಮೃಗಾಲಯವೊಂದು Tibetan mastiff ನಾಯಿಯನ್ನು ಇಟ್ಟು ಆಫ್ರಿಕಾ ಸಿಂಹ ಎಂದು ನಂಬಿಸಿತ್ತು. ಮತ್ತೊಂದು ಚೀನಾ ಮೃಗಾಲಯ ಪ್ಲಾಸ್ಟಿಕ್  ಪೆಂಗ್ವಿನ್ ಗೆ ಗಾಳಿ ತುಂಬಿ ನೀರಲ್ಲಿ ತೇಲಿ ಬಿಟ್ಟಿತ್ತು. ನೀರು ಖಾಲಿಯಾದ ವೇಳೆ ಎಡವಟ್ಟು ಬಹಿರಂಗಗೊಂಡಿತ್ತು. ಇತ್ತೀಚೆಗೆ ಚೀನಾದಲ್ಲಿ ಪ್ಲಾಸ್ಟಿಕ್ ಚಿಟ್ಟೆಗಳನ್ನು ಇಟ್ಟು ಜೀವಂತ ಚಿಟ್ಟೆಗಳೆಂದು ನಂಬಿಸಲಾಗಿತ್ತು.

ಸೂಕ್ತ ವ್ಯಕ್ತಿಯೇ ಸಿಕ್ಕಿಲ್ಲ… ಇನ್ನೇಲ್ಲಿ ಉತ್ತರಾಧಿಕಾರಿ

ಶೀರೂರು ಮಠಕ್ಕೆ ಇನ್ನೊಂದಿಷ್ಟು ದಿನ ಉತ್ತರಾಧಿಕಾರಿ ನೇಮಕವಾಗುವ ಸಾಧ್ಯತೆಗಳಿಲ್ಲ. ಬದಲಾಗಿ ಕಾದು ನೋಡುವ ತಂತ್ರಕ್ಕೆ ಉತ್ತರಾಧಿಕಾರಿ ನೇಮಕದ ಜವಾಬ್ದಾರಿ ಹೊತ್ತಿರುವ ದ್ವಂದ ಮಠದ ವಿಶ್ವವಲ್ಲಭ ತೀರ್ಥರು ನಿರ್ಧರಿಸಿದ್ದಾರೆ.

ಈ ಮೊದಲು ಚಾತುರ್ಮಾಸ ಪ್ರಾರಂಭವಾಗುವುದರೊಳಗೆ ಉತ್ತರಾಧಿಕಾರಿ ನೇಮಕವಾಗುವ ನಿರೀಕ್ಷೆ ಇತ್ತು. ಆದರೆ ಶ್ರೀಗಳ ಸಾವಿನ ಬಗ್ಗೆ ಪೊಲೀಸರು ನಡೆಸುತ್ತಿರುವ ತನಿಖೆಗೆ ಅಡ್ಡಿಯಾಗಬಾರದು ಎಂದು ಉತ್ತರಾಧಿಕಾರಿ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.ಶೀರೂರು ಮೂಲ ಮಠ ಪೊಲೀಸರ ಸುಪರ್ದಿಯಲ್ಲಿರುವುದೇ ಇದಕ್ಕೆ ಕಾರಣ.

ಇನ್ನು ಪೊಲೀಸ್ ತನಿಖೆ ಮುಕ್ತಾಯವಾದ ನಂತರ ಹಾದಿ ತಪ್ಪಿರುವ ಶೀರೂರು ಮಠದ ಆಡಳಿತ ವ್ಯವಸ್ಥೆ ಮತ್ತು ಪೂಜೆಯನ್ನು ಸರಿ ದಾರಿಗೆ ತರಬೇಕಾಗಿದೆ. ಉತ್ತರಾಧಿಕಾರಿ ನೇಮಕವಾದರೆ ಇದು ಕಷ್ಟ. ಇದು ಕೂಡಾ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ವಿಳಂಭಕ್ಕೆ ಕಾರಣ ಎನ್ನಲಾಗಿದೆ.

ಇನ್ನು ಉತ್ತರಾಧಿಕಾರಿಯಾಗುವವರಿಗೆ 18 ವರ್ಷ ತುಂಬಿರಬೇಕು, ಜಾತಕ ಕೂಡಿಬರಬೇಕು. ಶಾಸ್ತ್ರಾಭ್ಯಾಸ ಮಾಡಿರಬೇಕು. ಅಂಥವರು ಸಿಕ್ಕ ಬಳಿಕ ಅವರ ಪೂರ್ವಾಪರಗಳನ್ನು ತಿಳಿಯಬೇಕು. ಅಂತಹ ಯಾವ ವ್ಯಕ್ತಿಗಳು ಸೋದೆ ಶ್ರೀಗಳ ಗಮನಕ್ಕೆ ಬಂದಿಲ್ಲ.

ಚಾರ್ತುಮಾಸ ಸಂದರ್ಭದಲ್ಲಿ ಉತ್ತರಾಧಿಕಾರಿಯನ್ನು ಹುಡುಕಿಕೊಂಡು ಕೂರಲು ಅಷ್ಟ ಮಠಕ್ಕೆ ಸಮಯವಿಲ್ಲ. ಹೀಗಾಗಿ ಚಾರ್ತುಮಾಸ ಮುಗಿಯುವ ತನಕ ಉತ್ತರಾಧಿಕಾರಿ ನೇಮಕ ಪ್ರಸ್ತಾಪವಾಗುವುದಿಲ್ಲ.

ಚಾರ್ತುಮಾಸ ಮುಗಿದ ಮೇಲೂ ಸಾಕಷ್ಟು ಸಮಯ ತೆಗೆದುಕೊಳ್ಳುವ ಸಾಧ್ಯತೆಗಳಿದೆ. ಅಷ್ಟು ಹೊತ್ತಿಗೆ ಪೊಲೀಸ್ ತನಿಖೆ ಒಂದು ಹಂತಕ್ಕೆ ಬಂದಿರುತ್ತದೆ. ಮಠದೊಳಗಿನ ರಹಸ್ಯ, ಪಟ್ಟದರಸಿಯ ಕಾಟ, ಆಸ್ತಿ ಪಾಸ್ತಿಯಲ್ಲಿ ಕೈಯಾಡಿಸಿದವರ ವಿವರ ಬಹಿರಂಗವಾಗಿರುತ್ತದೆ.

ಇನ್ನು ಆ ತನಕ ಶಿರೂರು ಮಠ ಮತ್ತು ಮೂಲ ಮಠದ ಉಸ್ತುವಾರಿ ನೋಡಿಕೊಳ್ಳಲು 5 ಮಂದಿಯ ಸಮಿತಿ ನೇಮಕವಾಗಲಿದೆ. ಸಮಿತಿ ಶೀರೂರು ಮಠದಲ್ಲಿ ಇದ್ದ ಆಸ್ತಿ, ಕರಗಿದ ಆಸ್ತಿ, ಯಾರು ಏನೇನೂ ಮಾಡಿದರೂ ಅನ್ನುವ ಮಾಹಿತಿ ಕಲೆ ಹಾಕಲಿದೆ.

ದೇವೇಗೌಡರಿಗೆ ನಿರಾಶೆ – ಭಾರತದ ಮುಂದಿನ ಪ್ರಧಾನಿ ಮಮತಾ ಬ್ಯಾನರ್ಜಿ..!

ಬಿಜೆಪಿಯನ್ನು ಸೋಲಿಸಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ತ್ಯಾಗಮಯಿಯಾಗಲು ನಿರ್ಧರಿಸಿದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್ ಗೆ ನೀಡಿದಂತೆ, ಪ್ರಧಾನಿ ಹುದ್ದೆಯನ್ನು ಮಿತ್ರಪಕ್ಷಗಳಿಗೆ ನೀಡಲು ನಿರ್ಧರಿಸಿದೆ.

ರಾಹುಲ್ ಗಾಂಧಿ ಮೇಲೆ ಸಾಕಷ್ಟು ಆರೋಪಗಳಿರುವುದರಿಂದ ಮುಂದೆ ಇದು ಸಮಸ್ಯೆಯಾಗಬಹುದು ಅನ್ನುವ ಕಾರಣದಿಂದ ರಾಹುಲ್ ಗಾಂಧಿ ಮಿತ್ರ ಪಕ್ಷಗಳ ಪೈಕಿ ಯಾರಾದರೂ ಪ್ರಧಾನಿಯಾಗಲಿ, ಮೋದಿ ಮತ್ತೊಂದು ಅವಧಿ ಪ್ರಧಾನಿಯಾಗಬಾರದು ಅನ್ನುವ ಸಂದೇಶ ಕೊಟ್ಟಿದ್ದರು.

ಇದರ ಬೆನ್ನಲ್ಲೇ ಪದ್ಮನಾಭನಗರದಲ್ಲಿ ಕೂತಿದ್ದ ಮಾಜಿ ಪ್ರಧಾನಿಗಳ ಕಣ್ಣ ಮುಂದೆ ಕೆಂಪು ಕೋಟೆಯ ಚಿತ್ರ ಹಾದು ಹೋಗಿದ್ದು ಸುಳ್ಳಲ್ಲ.

ಈಗ ರಾಹುಲ್ ಸ್ಥಾನಕ್ಕೆ ಮಮತಾ ಬ್ಯಾನರ್ಜಿ ಬರುವ ಲಕ್ಷಣ ಕಾಣಿಸುತ್ತಿದೆ. ಈ ಬಗ್ಗೆ ಜಮ್ಮು-ಕಾಶ್ಮೀರ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಸುಳಿವು ಕೊಟ್ಟಿದ್ದಾರೆ.

ಪಶ್ಚಿಮ ಬಂಗಾಳದ ಸಚಿವಾಲಯದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿರುವ ಓಮರ್ ಅಬ್ದುಲ್ಲಾ, “ನಾವು ಮಮತಾ ಬ್ಯಾನರ್ಜಿಯವರನ್ನು ರಾಷ್ಟ್ರ ರಾಜಧಾನಿಗೆ ಕರೆದುಕೊಂಡು ಹೋಗುತ್ತೇವೆ, ಆ ಮೂಲಕ ಮಮತಾ ಬ್ಯಾನರ್ಜಿಯವರು ಕೋಲ್ಕತ್ತಾದಲ್ಲಿ ಮಾಡಿರುವ ಕೆಲಸಗಳನ್ನು ಇಡೀ ದೇಶಕ್ಕೂ ಅಳವಡಿಸಬಹುದು ಎಂದು ಹೇಳಿದ್ದಾರೆ.

ಅಬ್ದುಲ್ಲಾ ಹೇಳಿಕೆ ಮಮತಾ ಪ್ರಧಾನಿ ಎಂಬ ಅರ್ಥ ಕೊಡ್ತೋ, ಓಮರ್ ಅಬ್ದುಲ್ಲಾ, 2019 ರ ಲೋಕಸಭಾ ಚುನಾವಣೆ ಇನ್ನೂ ಘೋಷಣೆಯಾಗಿಲ್ಲ. ಆದ್ದರಿಂದ ಪ್ರಧಾನಿ ಅಭ್ಯರ್ಥಿ ಬಗ್ಗೆ ಈಗಲೇ ಚರ್ಚೆ ಬೇಡ ಎಂದರು.

ಯುಪಿಎ ಮೈತ್ರಿ ಕೂಟದಲ್ಲಿ ಇನ್ನಷ್ಟು ಮಂದಿ ಮುಖಂಡರು ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಓಮರ್ ಅಬ್ದುಲ್ಲಾ ಕೇಳಿ ಮಾಯಾವತಿ ಕೆಲವೇ ದಿನಗಳಲ್ಲಿ ಕೆಮ್ಮುವ ಸಾಧ್ಯತೆಗಳಿದೆ ಕಾದು ನೋಡಿ.

ಸಹೋದರ ಸಾವಿಗೆ ನ್ಯಾಯ ಕೊಡಿ – ಸಾವಿರ ದಿನಕ್ಕೆ ಕಾಲಿಟ್ಟ ಕೇರಳ ಯುವಕನ ಹೋರಾಟ

ಗುರುವಾರ ಬೆಳಗ್ಗೆ ದಿನ ಪತ್ರಿಕೆ ನೋಡಿದವರಿಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿತ್ತು. ನೋವಿನಲ್ಲೂ ನಿಟ್ಟುಸಿರು ಬಿಟ್ಟ ಸುದ್ದಿಯದು. ಮಗನ ಸಾವಿಗೆ ನ್ಯಾಯ ಕೊಡಿ ಎಂದು ಪದ್ಮಾವತಿ ಅಮ್ಮ ಹೋರಾಡಿದ ಸುದ್ದಿಯದು.

13 ವರ್ಷಗಳ ಕಾಲ ಹೋರಾಡಿದ 67ರ ಹರೆಯದ ಹಿರಿಯ ಜೀವವೊಂದು ಮಗನನ್ನು ಕೊಂದ ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿತ್ತು.

ಈ ನಡುವೆ ಸಹೋದರ ಸಾವಿಗೆ ನ್ಯಾಯ ಬೇಕು,ಅಣ್ಣನನ್ನು ಕೊಂದ ಪೊಲೀಸರಿಗೆ ಶಿಕ್ಷೆಯಾಗಬೇಕು ಎಂದು ಯುವಕನೊಬ್ಬ ಕೇರಳ Secretariat ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಶ್ರೀಜಿತ್  ತನ್ನ ಸಹೋದರ ಶ್ರೀಜೀವ್ ಸಾವಿಗೆ ನ್ಯಾಯ ಕೇಳುತ್ತಿದ್ದು, ಪ್ರತಿಭಟನೆ 957ನೇ ದಿನಕ್ಕೆ ಕಾಲಿಟ್ಟಿದೆ.

ಶ್ರೀಜೀವ್ ಸಾವು ಹೇಗಾಯ್ತು..?

ಶ್ರೀಜಿತ್ ಸಹೋದರ ಶ್ರೀಜೀವ್ ನನ್ನು ಪರಶಾಲಾ ಪೊಲೀಸರು ಕಳ್ಳತನ ಪ್ರಕರಣವೊಂದರಲ್ಲಿ ಬಂಧಿಸಿದ್ದರು. ಮಾರ್ಚ್ 2014 ರಂದು ಬಂಧಿಸಿದ ಕೆಲವೇ ದಿನಗಳಲ್ಲಿ ಶ್ರೀಜೀವ್ ಮೃತಪಟ್ಟಿದ್ದ. ಪೊಲೀಸರ ಪ್ರಕಾರ ವಿಷ ಸೇವಿಸಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಕುಟುಂಬಸ್ಥರ ಪ್ರಕಾರ ಇದೊಂದು ಲಾಕಪ್ ಡೆತ್. ಪೊಲೀಸರೇ ಕೊಲೆಗಾರರು ಎಂದು ಆರೋಪಿಸಿರುವ ಕುಟುಂಬ ನ್ಯಾಯದ ನಿರೀಕ್ಷೆಯಲ್ಲಿದೆ.

ಇದಕ್ಕೆ ಪೂರಕ ಅನ್ನುವಂತೆ 2016 ರಲ್ಲಿ Police Complaint Authority ನಡೆಸಿದ ತನಿಖೆಯಲ್ಲಿ ಶ್ರೀಜೀವ್ ನದ್ದು ಲಾಕಪ್ ಡೆತ್ ಎಂದು ಬಯಲಾಗಿತ್ತು. ಜೊತೆಗೆ ಪೊಲೀಸರು ಹೇಳಿದ್ದು ಕಟ್ಟು ಕಥೆ ಎಂದು ಸಾರಿತ್ತು.

ಬಳಿಕ ನ್ಯಾಯಕ್ಕಾಗಿ ಮತ್ತೊಂದು ಸುತ್ತಿನ ಹೋರಾಟ ಪ್ರಾರಂಭವಾಯ್ತು. ಕೇರಳದ ಅನೇಕ ಮಂದಿ ಶ್ರೀಜಿತ್ ಹೋರಾಟಕ್ಕೆ ಕೈ ಜೋಡಿಸಿದರು. ಇದರಿಂದ ಒತ್ತಡಕ್ಕೆ ಮಣಿದ ಕೇರಳ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆ ಒಪ್ಪಿಸಿದೆ. ಇದೇ ವೇಳೆ ಕೇರಳ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರವನ್ನೂ ಘೋಷಿಸಿತ್ತು.

ಸಿಬಿಐ ಶ್ರೀಜೀವ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಜಿತ್ ನ ಹೇಳಿಕೆಯನ್ನು ಇದೇ ಜನವರಿಯಲ್ಲಿ ಪಡೆದುಕೊಂಡ ನಂತರ ಪ್ರತಿಭಟನೆ ನಿಲ್ಲಿಸಿದ್ದಾರೆ. ಅಷ್ಟು ಹೊತ್ತಿಗೆ ಪ್ರತಿಭಟನೆ 767 ದಿನಗಳನ್ನು ತಲಪಿತ್ತು. ಆದರೆ ಹೋರಾಟ ಮುಂದುವರಿದಿದೆ. ಉದಯ್ ಕುಮಾರ್ ಸಾವಿಗೆ ನ್ಯಾಯ ಸಿಕ್ಕಂತೆ ನನ್ನ ಸಹೋದರ ಸಾವಿಗೂ ಸಿಬಿಐ ತನಿಖೆಯಿಂದ ನ್ಯಾಯ ಸಿಗಲಿದೆ ಅನ್ನುವುದು ಇವರ ವಿಶ್ವಾಸ.

ಮದ್ಯ ಮಾನಿನಿಯ ಪ್ರೇಮಿ ಸ್ವಾಮೀಜಿಗೆ ವೃಂದಾವನ ಬೇಕಾ…?

ಶಿರೂರು ಮಠದ ಶ್ರೀಲಕ್ಷ್ಮಿವರ ತೀರ್ಥ ಸ್ವಾಮೀಜಿ ಒಬ್ಬ ಭ್ರಷ್ಟ ಸನ್ಯಾಸಿ ಅವರು ಮಠಾಧೀಶರೇ ಅಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದರು.

ಜೊತೆಗೆ ಶೀರೂರು ಶ್ರೀಗಳ ಸಾವಿನ ಸಂದರ್ಭದಲ್ಲಿ ಅಂತಿಮ ದರ್ಶನ ಪಡೆಯಲು ಹೋಗಿರಲಿಲ್ಲ.ಮಠಾಧೀಶರಿಗೆ ಬೇರೆ ಮಠಾಧೀಶರು ನಿಧನರಾದ ವೇಳೆ ಮುಖ ದರ್ಶನ ಮಾಡಲು ಅವಕಾಶವಿದೆ. ಆದರೆ ಮಠಾಧೀಶರಲ್ಲದವರು ನಿಧನ ಹೊಂದಿದ್ದರೆ ಮುಖ ದರ್ಶನಕ್ಕೆ ಅವಕಾಶವಿಲ್ಲ.

ಪೇಜಾವರ ಶ್ರೀಗಳು ಶೀರೂರು ಸ್ವಾಮೀಗಳನ್ನು ಮಠಾಧೀಶರೇ ಅಲ್ಲ ಎಂದಿದ್ದರು. ಆದರೂ ಸಮಾಧಿ ಬಳಿಕ ಅಂತಿಮ ಗೌರವ ಸಲ್ಲಿಸಿದ್ದರು.

ಇದೀಗ ಶೀರೂರು ಶ್ರೀಗಳ ಬಂಗಾರದ ವ್ಯಾಮೋಹ, ರಿಯಲ್ ಎಸ್ಟೇಟ್ ಉದ್ಯಮ ಪ್ರೇಮ ಬಹಿರಂಗವಾಗಿದೆ. ಮಾತ್ರವಲ್ಲದೆ ಹೆಣ್ಣು, ಹೆಂಡದ ಸಹವಾಸ, ಮಾನಿನಿ, ಮದಿರೆಯೇ ಸಾವಿಗೆ ಕಾರಣ ಅನ್ನುವುದು ಬಹಿರಂಗವಾಗಿದೆ.

ಈ ನಡುವೆ ಶೀರೂರು ಶ್ರೀಗಳಿಗೆ ವೃಂದಾವನ ನಿರ್ಮಿಸಬೇಕಾ ಅನ್ನುವ ಪ್ರಶ್ನೆ ಎದ್ದಿದೆ.ಸಂಪ್ರದಾಯದಂತೆ ಸಮಾಧಿ ಮಾಡಿದ ಜಾಗದಲ್ಲಿ 12 ನೇ ದಿನ ಆರಾಧನೆ ನೆರವೇರಿಸಿ ಕಲ್ಲಿನ ವೃಂದಾವನ ನಿರ್ಮಿಸುವುದು ಸಂಪ್ರದಾಯ.

ಆದರೆ ಬ್ರಹ್ಮಚರ್ಯ ಕಳೆದುಕೊಂಡ, ಸನ್ಯಾಸಿಯೇ ಆಗಿರದ ಶೀರೂರು ಶ್ರೀಗಳಿಗೆ ಬೃಂದಾವನದ ಅಗತ್ಯವೇನಿದೆ ಅನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಹೌದು ಶೀರೂರು ಶ್ರೀಗಳಿಗೆ ಮಠಾಧೀಶ, ಸ್ವಾಮೀಜಿ, ಸನ್ಯಾಸಿ ಅನ್ನುವ ಕಾರಣಕ್ಕೆ ಬೃಂದಾವನದ ಅಗತ್ಯವಿಲ್ಲ. ಬದಲಾಗಿ ಸಮಾಧಿಯೊಂದನ್ನು ನಿರ್ಮಿಸಿದರೆ ಸಾಕು. ಶ್ರೀಗಳು ಮಾಡಿದ ಒಳ್ಳೆಯ ಕಾರ್ಯಕ್ಕೆ ಸಮಾಧಿ ನಿರ್ಮಿಸಿ ಗೌರವ ಸಲ್ಲಿಸುವುದು ಉತ್ತಮ.

ಬೃಂದಾವನ ನಿರ್ಮಿಸಿ ಉಡುಪಿ ಅಷ್ಟ ಮಠಗಳ ಚರಿತ್ರೆಯಲ್ಲಿ ಕಪ್ಪು ಚುಕ್ಕೆಯಾಗಿ ಕಾಣಿಸಿಕೊಂಡ ಘಟನೆಯನ್ನು ಶಾಶ್ವತವಾಗಿಸುವುದರಲ್ಲಿ ಅರ್ಥವಿಲ್ಲ. ಬದಲಾಗಿ ಎಲ್ಲಾ ಶ್ರೀಗಳಿಗೆ ಬೃಂದಾವನ ಭಾಗ್ಯ ಸಿಕ್ಕರೆ, ಇವರಿಗೆ ಸಮಾಧಿ ಭಾಗ್ಯ ಸಿಕ್ತು ಇದಕ್ಕೆ ಕಾರಣ ಮದಿರೆ, ಮಾನಿನಿಯ ಸಹವಾಸ ಅನ್ನುವ ಸಂದೇಶವೊಂದು ಮುಂದಿನ ಪೀಳಿಗೆಗೆ ಹೋದರೆ ಸಾಕು, ಕನಿಷ್ಠ ಮುಂದಿನ ಪೀಳಿಗೆ ಶ್ರೀಗಳೆಂದರೆ ಹೀಗಿರಬೇಕು ಅಂದುಕೊಳ್ಳುತ್ತಾರೆ.

ಶೀರೂರು ಶ್ರೀಗಳು ಸನ್ಯಾಸತ್ವಕ್ಕೆ ಮಾತ್ರವಲ್ಲ, ಮಾನವೀಯತೆಗೂ ಅವಮಾನ ಮಾಡಿದ ವ್ಯಕ್ತಿ. ತಮಗೊಂದು ಮಗುವಿದೆ ಎಂದು ಹೇಳಿದವರು, ಆ ಮಗುವನ್ನು ಸಮಾಜದಿಂದ ದೂರವಿಟ್ಟಿದ್ದಾರೆ ಅಂದ ಮೇಲೆ ಇದು ಅಮಾನವೀಯತೆ ತಾನೇ. ಅಂತಹ ವ್ಯಕ್ತಿಗೆ ಬೃಂದಾವನ ಕಟ್ಟಿ ಆರಾಧಿಸುವುದರಲ್ಲಿ ಅರ್ಥವೇನಿದೆ.

ಶೀರೂರು ಗೆಳತಿಗೆ ದುಬೈ ಲಿಂಕ್ – ಸ್ವಾಮೀಜಿ ಸಾವಿನ ಸಿಕ್ರೇಟ್ ನೊಳಗೆ ಹೊಸ ಕ್ಯಾರೆಕ್ಟರ್ ಎಂಟ್ರಿ

ಶೀರೂರು ಶ್ರೀಗಳ ಖಾಸಗಿ ಕೋಣೆಗೆ ಎಂಟ್ರಿ ಹೊಡೆದಿದ್ದ ರಮ್ಯಾ ಶೆಟ್ಟಿ ಆಡಿದ ಖತರ್ ನಾಕ್ ವಿಷಯಗಳು ಈಗ ಬಯಲಾಗತೊಡಗಿದೆ. ಈ ನಡುವೆ ಶೀರೂರು ಶ್ರೀಗಳ ಸಾವಿನ ವಿಚಾರದಲ್ಲಿ ಹೊಸದೊಂದು ಕ್ಯಾರೆಕ್ಟರ್ ಎಂಟ್ರಿಯಾಗಿದೆ.

ಭಾನುವಾರ ಪರಾರಿಯಾಗಲು ಯತ್ನಿಸಿದ್ದ ರಮ್ಯಾಳನ್ನು ಕರೆದುಕೊಂಡು ಬಂದ ಉಡುಪಿ ಪೊಲೀಸರು ಕಾರಿನಲ್ಲಿದ್ದ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ರಮ್ಯಾ ಶೆಟ್ಟಿ ಜೊತೆಗಿದ್ದ ಮೂರು ಮಂದಿ ಮುಸ್ಲಿಂ ಮಹಿಳೆಯರಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಗೊತ್ತಾಗಿದ್ದು ಅವರನ್ನು ಬಿಟ್ಟು ಕಳುಹಿಸಿದ್ದಾರೆ.

ಆದರೆ ಕಾರು ಚಾಲಕನಾಗಿದ್ದ ಇಕ್ಭಾಲ್ ಪರಾರಿ ಯೋಚನೆಯ ರೂವಾರಿ ಅನ್ನುವುದು ಪೊಲೀಸರಿಗೆ ಗೊತ್ತಾಗಿದೆ. ಈ ಮೂಲಕ ಶೀರೂರು ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಹೊಸದೊಂದು ವ್ಯಕ್ತಿಯನ್ನು ವಿಚಾರಣೆಗೆ ಕರೆಸಿದ್ದಾರೆ. ಹಾಗಂತ ಪೊಲೀಸರ ಬಲೆಗೆ ಬಿದ್ದಿರುವ ಇಕ್ಭಾಲ್ ಪೊಲೀಸರಿಗೆ ಹೊಸ ಪರಿಚಯವಲ್ಲ.ಶೀರೂರು ಸಾವಿನ ಕುರಿತು ತನಿಖೆ ನಡೆಸಿ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ದಿನವೇ

ಇಕ್ಭಾಲ್ ಕಾಪು ಮೂಲದ ವ್ಯಕ್ತಿಯಾಗಿದ್ದು, ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಈತ 6 ತಿಂಗಳ ಹಿಂದೆ ಊರಿಗೆ ಬಂದು ಸರ್ವೀಸ್ ಸೆಂಟರ್ ಒಂದನ್ನು ನಡೆಸುತ್ತಿದ್ದ. ರಮ್ಯಾ ಶೆಟ್ಟಿಗೂ ಈತನಿಗೂ ಹಲವು ವರ್ಷದಿಂದ ಆತ್ಮೀಯತೆ ಇತ್ತು.

ಶೀರೂರು ಶ್ರೀಗಳು ಆಸ್ಪತ್ರೆ ಸೇರಿದ ದಿನ ಇಕ್ಭಾಲ್ ಸಹಾಯ ಯಾಚಿಸಿದ್ದಳು. ಹೀಗಾಗಿ ಹಳೆಯ ಗೆಳತಿಗೆ ಸಹಾಯ ಮಾಡಲು ಮುಂದಾಗಿದ್ದ ಇಕ್ಭಾಲ್ ಕಾಪು ಬಳಿಯ ಕೊಂಬಗುಡ್ಡೆಯ ತನ್ನ ಮನೆಯಲ್ಲಿ ಆಶ್ರಯವನ್ನೂ ಕೊಟ್ಟಿದ್ದ.

ಪೊಲೀಸರು ಯಾವಾಗ ವಿಚಾರಣೆ ಮುಗಿಸಿ ರಮ್ಯಾಳನ್ನು ಕಳುಹಿಸಿಕೊಟ್ಟರೋ,ಪರಾರಿ ಪ್ಲಾನ್ ನೊಂದಿಗೆ ಫೀಲ್ಡಿಗಿಳಿದ ಇಕ್ಭಾಲ್ ತಮ್ಮ ಸಂಬಂಧಿಕರನ್ನು ಕಾರು ಹತ್ತಿಸಿ ಚಿಕ್ಕಮಗಳೂರಿಗೆ ಹೋಗುವ ಪ್ಲಾನ್ ಮಾಡಿದ್ದಾನೆ. ಜೊತೆಗೆ ರಮ್ಯಾಳಿಗೆ ಬುರ್ಖಾ ತೊಡಿಸಿ ಇವರು ನನ್ನ ಸಂಬಂಧಿಕರು ಎಂದು ಕಥೆ ಕಟ್ಟಿದ್ದ. ಹೀಗಾಗಿ ನಾನು ಕಾರು ತೆಗೆದುಕೊಂಡು ಹೋಗಿ ಬಿಟ್ಟು ಬರುತ್ತೇನೆ ಎಂದಿದ್ದ. ಆದರೆ ಕಾಲನ ಆಟ ಬೇರೆಯಾಗಿತ್ತು.

ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಲು ಮುಂದಾದವರಿಗೆ ಕೃಷ್ಣನ ಕಣ್ಣು ತಪ್ಪಿಸಲಾಗಲಿಲ್ಲ. ಸತ್ಯದೇವತೆ ಗುಡಿ ಮುಂದೇಯ ಟಯರ್ ಪಂಕ್ಚರ್ ಆಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದರು.

ಈ ಎಲ್ಲದರ ನಡುವೆ ಶೀರೂರು ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರು ರಮ್ಯಾ ಮತ್ತು ಇಕ್ಭಾಲ್ ಮೇಲೆ ಅವರಿಗೆ ಅರಿವಿಲ್ಲದೆ ಕಣ್ಣಿಟ್ಟಿದ್ದರು. ಇಕ್ಬಾಲ್ ಓಡಾಡುತ್ತಿದ್ದ ಕಾರು ಹಾಗೂ ಆತ ಬಳಸುತ್ತಿದ್ದ ಮೊಬೈಲ್ ಮೇಲೆ ನಿಗಾ ಇಟ್ಟಿದ್ದರು. ಯಾವಾಗ ಇಕ್ಭಾಲ್ ತನ್ನ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ಗೊತ್ತಾಯೋ, ದಕ್ಷಿಣ ಕನ್ನಡ ಪೊಲೀಸರ ಸಹಾಯ ಪಡೆದ ಉಡುಪಿ ಪೊಲೀಸರು ರಮ್ಯಾ ಶೆಟ್ಟಿಯನ್ನು ಹಿಂಬಾಲಿಸಿದ್ದರು.

ಇದಕ್ಕೂ ಮುನ್ನ ರಮ್ಯಾ ಶೆಟ್ಟಿ ಚಲನವನನ್ನು ಪೊಲೀಸರಿಗೆ ತಿಳಿದುಕೊಳ್ಳಬೇಕಿದ್ದು, ಹೀಗಾಗಿ ರಮ್ಯಾ ಶೆಟ್ಟಿಗೆ ಸಂಶಯ ಬಾರದಂತೆ ವಿಚಾರಣೆ ಮುಗಿಸಿ ಬಿಟ್ಟು ಕಳುಹಿಸಿದ್ದರು.ಸ್ವಾಮೀಜಿ ಹಾಗೂ ಶೆಟ್ಟಿ ನಡುವಿನ ಸಂಬಂಧವನ್ನು ಮತ್ತಷ್ಟು ಬಗೆಯಲು ಬಯಸಿದ ಪೊಲೀಸರು ರಮ್ಯಾಳನ್ನು ಬಂಧಿಸಿರಲಿಲ್ಲ. ಪೊಲೀಸರು ಯಾವಾಗ ಬಿಟ್ಟು ಕಳುಹಿಸಿದರೋ ನಾನು ಇನ್ನು ಎಸ್ಕೇಪ್ ಆಗಬಹುದು ಅನ್ನುವುದು ಆಕೆಯ ಲೆಕ್ಕಚಾರವಾಗಿತ್ತು. ಆದರೆ ಪೊಲೀಸರು ಸದ್ದಿಲ್ಲದೆ ರಮ್ಯ ಬೆನ್ನ ಹಿಂದೆ ಬಿದ್ದಿದ್ದರು.

ಇದೀಗ ಶೀರೂರು ಸಾವಿಗೆ ಇಕ್ಭಾಲ್ ಗೂ ಸಂಬಂಧ ಇದೆಯೇ ಎಂದು ತನಿಖೆ ನಡೆಯುತ್ತಿದೆ. ಸಂಬಂಧ ಇದೆಯೋ ಇಲ್ಲವೋ, ಶೀರೂರು ಶ್ರೀಗಳ ಪಟ್ಟದರಸಿಯಾಗಿ ಮೆರೆದವಳಿಗೆ ಇಕ್ಭಾಲ್ ಜೊತೆಗೆ ಅದೇನು ನಂಟು ಅನ್ನುವುದು ಕೆಲವೇ ದಿನಗಳಲ್ಲಿ ಬಯಲಾಗಲಿದೆ.