ಸಾವಿಗೆ ಕಾರಣ…? ಪಟ್ಟದ ದೇವರ ಕೋಪವೇ…ಪಟ್ಟದರಸಿಯ ಶಾಪವೇ …!

ಪಂಚೆಯೊಂದು ಗಟ್ಟಿ ಇಲ್ಲದೆ ಹೋದರೆ ಸಮಾಜದಲ್ಲಿ ಮಾನ ಮರ್ಯಾದೆ ಹೊರಟು ಹೋಗುತ್ತದೆ ಅನ್ನುವುದಕ್ಕೆ ಸಾವಿರ ಸಾಕ್ಷಿಗಳು ನಮ್ಮಲ್ಲಿವೆ. ಅದರಲ್ಲೂ ಖಾವಿಧಾರಿಗಳು ಜಾರಿದರೆ ಸಮಾಜ ಅವರನ್ನು ಕೆಟ್ಟದಾಗಿ ಟೀಕಿಸುತ್ತದೆ.

ಇದಕ್ಕೆ ಸಾಕ್ಷಿ ಶಿರೂರು ಶ್ರೀಗಳ ಸಾವು. ಹಾಗೇ ನೋಡಿದರೆ ಶಿರೂರು ಶ್ರೀಗಳ ಸಾವು ಸುದ್ದಿಯಾಗಬೇಕಿತ್ತು. ಅವರ ಕೆಲಸಗಳು ಸದ್ದು ಮಾಡಬೇಕಿತ್ತು. ಆದರೆ ಶ್ರೀಗಳ ಸಾವಿನ ಸುದ್ದಿಗಿಂತ ಸಾವಿನ ಕಾರಣವೇ ದೊಡ್ಡ ಸುದ್ದಿಯಾಗಿದೆ.

ಸ್ವಾಮೀಜಿ ಸಾವಿಗೆ ಕಾರಣವೇನು, ವಿಷ ಕನ್ಯೆ ಕಾರಣವೇ.. ರಿಯಲ್ ಎಸ್ಟೇಟ್ ಉದ್ಯಮ ಕುತ್ತಿಗೆ ಬಿಗಿಯಿತೇ ಅನ್ನುವುದು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.

ಆದರೆ ಶಿರೂರು ಶ್ರೀಗಳ ಹಲವು ರಹಸ್ಯಗಳು ಇದೀಗ ಬಯಲಾಗತೊಡಗಿದೆ. ಶಿರೂರು ಶ್ರೀಗಳು ಹೊರ ಪ್ರಪಂಚಕ್ಕೆ ತೋರಿದ ಮುಖವೇ ಬೇರೆ. ಮಠದೊಳಗೆ ಆಡಿದ ಆಟವೇ ಬೇರೆ ಅನ್ನುವ ಮಾತುಗಳು ಉಡುಪಿಯಲ್ಲಿ ಓಡಾಡುತ್ತಿದೆ.

ಸ್ವಯಂ ಕೃತ್ಯ ಅಪರಾಧ, ಖಾವಿ ತೊಟ್ಟು ಕಂಡವರ ಕಣ್ಣಿಗೆ ಮಣ್ಣು ಎರಚಿದ್ದು ಶಾಪವಾಗಿ ಪರಿಣಮಿಸಿದೆ. ಅತ್ತ ಕೃಷ್ಣ ಕೂಡಾ ಸ್ವಾಮೀಜಿಯ ಪಾಪದ ಕೊಡ ತುಂಬುವುದನ್ನೇ ಕಾಯುತ್ತಿದ್ದ.

ಖಾವಿ ತೊಟ್ಟ ಸ್ವಾಮಿಗೆ, ವಿಠ್ಠಲ ಪೂಜೆಗಿಂತ, ಪಲ್ಲಂಗ ಧ್ಯಾನ ಹೆಚ್ಚಾಗಿತ್ತು. ಹಾಗಂತ ಅದು ಅವರ ತಪ್ಪು ಅನ್ನುವ ಹಾಗಿಲ್ಲ. ತಾನು ಎಡವಿದ್ದೇವೆ ಎಂದು ಗೊತ್ತಾದ ತಕ್ಷಣ ಖಾವಿ ತೊರೆದು ಸಂಸಾರಿಯಾಗಬಹುದಿತ್ತು. ಸಮಾಜ ಅವರನ್ನು ಮೆಚ್ಚಿಕೊಳ್ಳುತ್ತಿತ್ತು. ಆದರೆ ಹಾಗೇ ಮಾಡಲಿಲ್ಲ.

ಆಸೆಗೆ ಬೇಲಿ ಹಾಕಿಕೊಂಡು ಸನ್ಯಾಸ ಸ್ವೀಕರಿಸಿದವರಿಗೆ ಹರೆಯ ಬಂದಾಗ ಖಾವಿಯೊಳಗಿನ ಮನಸ್ಸು ಕೇಳಲಿಲ್ಲ. ಇಂದ್ರಿಯ ನಿಗ್ರಹಿಸುವ ತಾಕತ್ತನ್ನು ರೂಢಿಸಿಕೊಳ್ಳುವುದು ಅಸಾಧ್ಯವಾಯ್ತು. ಆ ವೇಳೆ ಸಂಪರ್ಕಕ್ಕೆ ಸಿಕ್ಕ ಮಂದಿ ಕಾಸಿನ ರುಚಿ ತೋರಿಸಿದ್ದರು.

ಶಿರೂರು ಶ್ರೀಗಳಿಗೆ ಯಾವಾಗ ಪಟ್ಟದ ದೇವರಿಗಿಂತ, ಪಟ್ಟದರಿಸಿಯರ ಕಾಟ ಶುರುವಾಯ್ತೋ ಸ್ವಾಮೀಜಿ ಕುಗ್ಗಿ ಹೋಗಿದ್ದರು. ಕೈ ಹಾಕಿದ ವ್ಯವಹಾರಗಳು ಸುಡ ತೊಡಗಿತ್ತು. ಹೀಗಾಗಿ ಮರ್ಯಾದೆ ಉಳಿಸಿಕೊಳ್ಳಲು ಉಳಿದವರ ಮೇಲೆ ಆರೋಪ ಹೊರೆ ಹೊರಿಸಿದರು. ಅವರಿಗೆ ಗೊತ್ತಿಲ್ಲದಂತೆ ತಮ್ಮ ಕಾವಿಯ ಮೇಲೆ ಕೆಸರು ಅಂಟಿಸಿತೊಡಗಿದ್ದರು. ತನ್ನ ಮೈ ಮೇಲೆ ಸತ್ತರೂ ಮಾಯವಾಗದ ಕಲೆ ಉಂಟಾಗುತ್ತಿದೆ ಅನ್ನುವುದು ಅವರ ಅರಿವಿಗೆ ಬರಲೇ ಇಲ್ಲ. ಅರಿವಿಗೆ ಬರುವಷ್ಟು ಹೊತ್ತಿಗೆ ಯಮ ಧರ್ಮನ ದೂತರ ಆಗಮನವಾಗಿತ್ತು.

ಮಾಧ್ಯಮವೊಂದರ ವರದಿ ಪ್ರಕಾರ ಶಿರೂರು ಶ್ರೀಗಳಿಗೆ 25 ವರ್ಷಗಳ ಹಿಂದೆ ಮಹಿಳೆಯೊಂದಿಗೆ ಸಂಬಂಧ ಇತ್ತು ಎನ್ನಲಾಗಿದೆ. ಲೌಕಿಕ ಲೋಕದತ್ತ ಒಲವು ತೋರಿದ್ದ ಸ್ವಾಮಿ ಸಿಕ್ಕಾಪಟ್ಟೆ ಸೋಷಿಯಲ್ ಆಗಿದ್ದರು. ಇತರ ಸ್ವಾಮೀಜಿಗಳಂತೆ ಮಡಿವಂತಿಕೆ ಕಡಿಮೆ ಇದ್ದ ಕಾರಣ ಜನ ಸಾಮಾನ್ಯರಿಗೆ ಇಷ್ಟವಾಗಿ ಹೋದರು.

ಆದರೆ 25 ವರ್ಷಗ ಹಿಂದೆ ಬೆಳೆಸಿ ಸಂಬಂಧವನ್ನು ಏನೂ ಮಾಡುವಂತಿರಲಿಲ್ಲ. ಸೆರಗಿನಲ್ಲಿ ಕಟ್ಟಿಕೊಂಡ ಕೆಂಡವಾಗಿತ್ತು.ಸಂಬಂಧಕ್ಕೆ ಸಾಕ್ಷಿಯಾಗಿ ಪುತ್ರ ಸಂತಾನ ಬೇರೆ ಇತ್ತು. ಜೊತೆಗೆ ಜೊತೆಗಿದ್ದವಳ ಪ್ರೀತಿ, ಅಕ್ಕರೆ, ಆರೈಕೆ ಎಲ್ಲವೂ ಸ್ವಾಮೀಜಿಯನ್ನು ಮೈ ಮರೆಯುವಂತೆ ಮಾಡಿತ್ತು.

ಶ್ರೀಗೆ ಸ್ತ್ರೀ ಸಂಬಂಧ ಇದೆ ಇಡೀ ಉಡುಪಿಗೆ ಗೊತ್ತಿತ್ತು. ಆದರೆ ಬಹಿರಂಗವಾಗಿ ಮಾತನಾಡುವ ಸ್ಥಿತಿ ಇರಲಿಲ್ಲ. ಜೊತೆಗೆ ಪಟ್ಟದರಿಸಿಯಂತೆ ಬಂದವಳು ಸ್ವಾಮೀಜಿಯನ್ನು ಮೀರಾ ಕೃಷ್ಣನನ್ನು ಪ್ರೀತಿಸಿದಂತೆ ಪ್ರೀತಿಸಿದ್ದಳು. ಮಠದ ಮೇಲು ಅಂತಸ್ತಿನಲ್ಲಿ ವಾಸವಾಗಿದ್ದ ಆಕೆ ಶ್ರೀಗಳ ಸೇವೆಗಾಗಿ ಬದುಕು ಮುಡಿಪಾಗಿಟ್ಟಿದ್ದಳು. ಕೃಷ್ಣನ ಮೇಲೆ ಭಕ್ತಿ ಇತ್ತೋ ಇಲ್ಲವೋ, ಸ್ವಾಮೀಜಿ ಅಂದರೆ ಆಕೆಗೆ ಪಂಚಪ್ರಾಣ. ಸ್ವಾಮೀಜಿ ಗೌರವಕ್ಕೆ ಕುತ್ತು ಬರಬಾರದು ಎಂದು ಪುತ್ರನನ್ನು ಹಾಗೇ ಬೆಳೆಸಿದ್ದಳು.

ಆದರೆ ಯಾವಾಗ ಎರಡು ವರ್ಷದ ಹಿಂದೆ ಸ್ವಾಮೀಜಿ ಬದುಕಿನಲ್ಲಿ ಮತ್ತೊಬ್ಬ ಮಹಿಳೆಯ ಎಂಟ್ರಿ ಹೊಡೆಯಿತೋ, ಮೊದಲಾಕೆ ಕಾದ ಕೆಂಡವಾದಳು. ತನ್ನ ಸ್ಥಾನಕ್ಕೆ ಮತ್ತೊಬ್ಬಳನ್ನು ಸ್ವಾಮೀಜಿ ಕರೆದುಕೊಂಡು ಬಂದಿರುವುದನ್ನು ಆಕೆ ಸಹಿಸಲಿಲ್ಲ.

ಇಡೀ ಮಠದಲ್ಲಿ ಅಧಿಕಾರಕ್ಕಾಗಿ ಹೋರಾಟ ಪ್ರಾರಂಭವಾಯ್ತು. ಪಟ್ಟದರಿಸಿಯ ಸ್ಥಾನಕ್ಕಾಗಿ ಹಳೆ ಮತ್ತು ಹೊಸ ಸಂಬಂಧದ ನಡುವೆ ಕಿತ್ತಾಟ ಪ್ರಾರಂಭವಾಯ್ತು.

ಕಿರಿಯವಳು ಮಠದಲ್ಲಿ ಅಧಿಕಾರ ಚಲಾವಣೆ ಶುರು ಮಾಡುತ್ತಿದ್ದಂತೆ,ಸಂತೆ ಕಟ್ಟೆಯ ಶಾಖಾ ಮಠಕ್ಕೆ ಸ್ವಾಮೀಜಿ ಮತ್ತು ಹಿರಿಯವಳು ಶಿಫ್ಟ್ ಆದರು. ಆದರೆ ಅಲ್ಲೂ ಕಿರಿಯವಳ ಕಾಟ ಶುರುವಾಯ್ತು. ಹೀಗಾಗಿ ಮತ್ತೆ ಮೂಲ ಮಠಕ್ಕೆ ಸ್ವಾಮೀಜಿ ಹಿಂತಿರುಗಿದರು
ಆರಾಧ್ಯ ದೈವ ಎಂದೇ ಪೂಜಿಸಿದ್ದ ತನಗೆ ಸ್ವಾಮೀಜಿ ಮಾಡಿದ ದ್ರೋಹವನ್ನು ಹಿರಿಯವಳಿಗೆ ಸಹಿಸಲು ಸಾಧ್ಯವಾಗಲಿಲ್ಲ.ಕಿರಿಯವಳು ಹಿರಿಯವಳನ್ನು ಬೈದ್ರೆ ಸ್ವಾಮೀಜಿ ಮೌನವಾಗಿರುತ್ತಿದ್ದರು. ಅದು ಮತ್ತಷ್ಟು ನೋವಿಗೆ ಕಾರಣವಾಯ್ತು.

ಹೀಗಾಗಿ ನೊಂದ ಹೆಂಗರುಳು,ಮಗನಿದ್ದಾನೆ ಎಂದು ಮರೆತು ಬಿಟ್ಟ ನಿಮನ್ನು ಕೃಷ್ಣ ಕ್ಷಮಿಸುವುದಿಲ್ಲ ಎಂದು ಶಾಪವಿಟ್ಟು ಹೊರಟು ಹೋದ ಹಿರಿಯವಳು ಮತ್ತೆ ಬರಲಿಲ್ಲ. ಆದರೆ ತೆರೆ ಮರೆಯಲ್ಲಿ ಆಟ ಮುಂದುವರಿದಿತ್ತು.

ಹಿರಿಯವಳು ಹೋಗುತ್ತಿದ್ದಂತೆ ಕಿರಿಯವಳ ಆಟ ಶುರುವಾಯ್ತು. ರಮ್ಯ ಮನೋಹರವಾಗಿ ಕಾವಿ ಸಂಸಾರ ಪ್ರಾರಂಭವಾಯ್ತು. ಮಠದ ಉಸ್ತುವಾರಿಯಾಗಿ ರಮ್ಯ ಪಟ್ಟಾಭಿಷೇಕ ಮಾಡಿಸಿಕೊಂಡಳು. ಆಮೇಲೆ ಏನು ನಡೆಯಿತು ಅನ್ನುವುದು ಎಲ್ಲರಿಗೂ ಗೊತ್ತಿದೆ.
S-BG

ಇಲ್ಲಿ ಫಿಲ್ಮಂ ನೋಡಿ ಬಾಯಾರಿಕೆಯಾದರೆ ಎಳನೀರು ಮಾತ್ರ ಕುಡಿಯಬೇಕು…?

ಚಿತ್ರಮಂದಿರಗಳು ಅದರಲ್ಲೂ ಮಾಲ್ ನಲ್ಲಿರುವ ಚಿತ್ರ ಮಂದಿರಗಳು ಗ್ರಾಹಕರಿಂದ ಹಣ ಸುಲಿಗೆ ಮಾಡಲು ಹಸಿದ ಹೆಬ್ಬುಲಿಯಂತೆ ನಿಂತಿರುತ್ತದೆ. 20 ರೂಪಾಯಿ ನೀರಿನ ಬಾಟಲ್ 60 ರೂಪಾಯಿ. ಮುಷ್ಠಿಯಷ್ಟೇ ಸಿಗುವ ಚಿಪ್ಸ್ ಬೆಲೆ ನೂರು ರೂಪಾಯಿ. ಹೀಗೆ ಒಂದೊಂದು ಮಾಲ್ ನಲ್ಲಿ ಒಂದೊಂದು ದರ.

ಆದರೆ ತಮಿಳುನಾಡಿನ ಥಿಯೇಟರ್ವೊಂದು ಸುದ್ದಿಯಾಗಿರುವುದು ತನ್ನ ಅಪ್ಪಟ ದೇಸಿತನದಿಂದ. ‘ಕತ್ತಿ’ ಚಿತ್ರದ ಬಳಿಕ ಕೋಕ್ ಸೇರಿದಂತೆ ವಿದೇಶಿ ಪಾನೀಯಗಳಿಗೆ ಪ್ರವೇಶವಿಲ್ಲ. ಬದಲಾಗಿ ತಂಪು ಪಾನೀಯಗಳನ್ನು ಬಹಿಷ್ಕರಿಸುವ ಅಭಿಯಾನ ಆರಂಭಿಸಿರುವ ಕೆಲ ಯುವಕರು ಎಳನೀರು ಮಾರಾಟಕ್ಕೆ ಮುಂದಾಗಿದ್ದಾರೆ.

ಥಿಯೇಟರ್ ಮಾಲೀಕರೊಬ್ಬರು ಕೃಷಿಕರಿಗೆ ಸಾಥ್ ನೀಡಲು ಮುಂದಾಗಿದ್ದಾರೆ. ತಿರುನೆಲ್ವೇಲಿಯ ‘ರಾಮ್ ಮುತ್ತುರಾಮ್’ ಚಿತ್ರಮಂದಿರದಲ್ಲಿ ತಂಪು ಪಾನೀಯಗಳ ಬದಲಾಗಿ ಎಳನೀರನ್ನು ಮಾರಲಾಗುತ್ತಿದೆ.

ಸಿನಿಮಾದ ವಿರಾಮದ ವೇಳೆ ಬಾಯಾರಿಕೆ ನೀಗಿಸಲು ಈ ಚಿತ್ರಮಂದಿರದ ಸ್ಟಾಲ್ಗ್ ಳಲ್ಲಿ ಸಿಗುವುದು ಅಪ್ಪಟ ದೇಸಿ ಎಳನೀರು ಮಾತ್ರ.
ಕರ್ನಾಟಕದಲ್ಲೂ ಹೀಗೆ ಆದ್ರೆ ಚೆನ್ನಾಗಿರುತ್ವಲ್ಲ. ಹೊರಗಿನ ಆಹಾರವನ್ನೇ ಒಳಗೆ ತೆಗೆದುಕೊಂಡು ಹೋಗಲು ಬಿಡದ ಮಾಲ್ ಗಳು ನಮ್ಮಲ್ಲಿವೆ. ಅಂತಹುದರಲ್ಲಿ ಅನ್ನೂ ಏಳ ನೀರು ಮಾರುವುದೇ. ಸರ್ಕಾರ ಮನಸ್ಸು ಮಾಡಿದರೆ ದೊಡ್ಡ ವಿಷಯವಲ್ಲ.

Magalu Janaki Kannada serial Actor Ganavi Laxman Rare pic

ಎಣ್ಣೆ ಹೊಡೆದೈತೆ ಹಕ್ಕಿ ಎಣ್ಣೆ ಹೊಡೆದೈತೆ – ಇಂಗ್ಲೆಂಡ್ ನಲ್ಲಿ ಕಿಕ್ಕೇರಿಸಿಕೊಂಡ ಪಕ್ಷಿಗಳು

ಮನುಷ್ಯ ಅನ್ನುವ ಪ್ರಾಣಿಗೆ ಉಳಿದವರ ಜೀವನದಲ್ಲಿ, ಜೀವದೊಂದಿಗೆ ಆಟವಾಡುವುದು ಎಂದರೆ ಬಲು ಪ್ರಿಯ. ಅದರಲ್ಲೂ ಮನುಷ್ಯ ಪ್ರಾಣಿ, ಪಕ್ಷಿಯನ್ನು ಹಿಂಸಿಸುವುದರಲ್ಲಿ ಎತ್ತಿದ ಕೈ.

ಆದರೆ ಸೌತರ್ನ್ ಇಂಗ್ಲೆಂಡ್ನಲ್ಲಿ ಜನ ಮಾಡುತ್ತಿರುವ ಎಡವಟ್ಟುಗಳು ಮಾತ್ರ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು. ಇಲ್ಲಿನ ಅಪರೂಪದ ಪಕ್ಷಿಗಳು ಮದ್ಯದ ಅಮಲಿನಲ್ಲಿ ತೇಲಾಡುತ್ತಿರುವುದನ್ನು ಕಂಡು ಜನ ಸಂಭ್ರಮಿಸುತ್ತಿದ್ದಾರೆ.

ನೈರುತ್ಯ ಇಂಗ್ಲೆಂಡ್ ಭಾಗಗಳಲ್ಲಿ ಆಲ್ಕೋಹಾಲ್ ಕುಡಿದಿರುವ ಸೀಗುಲ್ ಪಕ್ಷಿಗಳು ಹಾರಾಲಾಗದೆ, ನಿಲ್ಲಲಾಗದೇ ಒದ್ದಾಡುತ್ತಿದೆ.

ಸ್ಥಳೀಯರು ಎಸೆಯುವ ಬಿಯರ್ ಬಾಟಲಿ ಮತ್ತು ಆಲ್ಕೋಹಾಲ್ನ ತಾಜ್ಯಗಳನ್ನು ತಿಂದ ಪಕ್ಷಿಗಳು ಎಣ್ಣೆ ಏಟಿನಲ್ಲಿ ತೇಲುತ್ತಿವೆ. ಎಣ್ಣೆ ಏಟು ಜಾಸ್ತಿಯಾಗಿ ಕೆಲ ಪಕ್ಷಿಗಳು ಪ್ರಾಣವನ್ನೂ ಕೂಡಾ ಕಳೆದುಕೊಂಡಿದೆ.

RSPCA ಎಂಬ ಸಂಸ್ಥೆಯು ಇಂತಹ ಪಕ್ಷಿಗಳ ಆರೈಕೆಯಲ್ಲಿ ತೊಡಗಿದ್ದು, ಈಗಾಗಲೇ ಅಮಲಿನಿಂದ ತತ್ತರಿಸುತ್ತಿರುವ 12 ಕ್ಕೂ ಹೆಚ್ಚಿನ ಸೀಗುಲ್ ಪಕ್ಷಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಆಹಾರವೆಂದು ಪಕ್ಷಿಗಳು ತಿನ್ನುವ ಪದಾರ್ಥಗಳಲ್ಲಿ ಮದ್ಯಸಾರ ಮಿಶ್ರಿತವಾಗಿರುವುದರಿಂದ ವಾಂತಿ ಮಾಡಿಕೊಳ್ಳುತ್ತದೆ. ಹಾಗೆಯೇ ಕೊಳೆತ ಆಹಾರದಲ್ಲಿರುವ ಬ್ಯಾಕ್ಟೀರಿಯಾಗಳಿಂದ ಪಕ್ಷಿಗಳು ಅನಾರೋಗ್ಯಕ್ಕೀಡಾಗುತ್ತಿದ್ದು, ಇದೇ ವೇಳೆ ಆಲ್ಕೋಹಾಲ್ ಕೂಡ ದೇಹ ಸೇರುವುದರಿಂದ ಪಕ್ಷಿಗಳಲ್ಲಿ ಅಸ್ವಸ್ಥತೆ ಕಾಣಿಸುತ್ತಿದೆ ಎಂದು RSPCA ಅಧಿಕಾರಿಗಳು ತಿಳಿಸಿದ್ದಾರೆ.
Drunk’ gull stumbles in footage released by RSPCA
ಜನ ಜಾಗೃತಿಯಾಗದ ಹೊರತು ಈ ಪಕ್ಷಿಗಳನ್ನು ಕಾಪಾಡಲು ಸಾಧ್ಯವಿಲ್ಲ. ದೇವರೇ ಮೂಕ ಪಕ್ಷಿಗಳನ್ನು ಹಿಂಸಿಸುವ ಮನುಷ್ಯರಿಗೆ ಒಳ್ಳೆ ಬುದ್ದಿ ಕೊಡಪ್ಪ.

ಶಿರೂರು ಸ್ವಾಮೀಜಿಯ ಮೇಲೆ ಪೇಜಾವರ ಮಾಡಿದ ಆರೋಪಗಳು ನಿಜವಾಗುತ್ತ…?

ಸನ್ಯಾಸಿಯಾದವರು ಹೇಗಿರಬೇಕು ಅನ್ನುವುದಕ್ಕೆ ನಿದರ್ಶನ ಅನ್ನಿಸುವ ಖಾವಿದಾರಿಗಳು ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಹೇಗಿರಬಾರದು ಅನ್ನುವುದಕ್ಕೂ ಅಷ್ಟೇ ಮಂದಿದ್ದಾರೆ. ಹಳೆಯ ನ್ಯೂಸ್ ಪೇಪರ್ ಗಳನ್ನು ತಿರುವಿ ಹಾಕಿದ್ದಾರೆ ಸೆಕ್ಸ್ ಅನ್ನುವ ಆರೋಪ ಹೊತ್ತು ಕೋರ್ಟ್ ಮೆಟ್ಟಿಲೇರಿದವರು, ಪಲ್ಲಂಗದಾಟ ನಡೆಸಿ ಧರ್ಮದೇಟು ತಿಂದವರ ಪಟ್ಟಿಯೇ ನಮಗೆ ಸಿಗುತ್ತದೆ.
ಆದರೆ ಶಿರೂರು ಸ್ವಾಮೀಜಿ ಸತ್ತ ಮೇಲೂ ಕೇಳಿ ಬರುತ್ತಿರುವ ಆರೋಪಗಳು, ಅದಕ್ಕೆ ಮಾಧ್ಯಮಗಳಲ್ಲಿ ಸಿಗುತ್ತಿರುವ ಸಾಕ್ಷಿಗಳನ್ನು ನೋಡಿದರೆ ಶಿರೂರು ಶ್ರೀಗಳು ಹೀಗೆ ಮಾಡಬಾರದಿತ್ತು ಅನ್ನುವ ಉದ್ಗಾರ ಬಂದೇ ಬರುತ್ತದೆ.
ಅಷ್ಟ ಮಠಗಳ ನಂಬಿಕೆಗೆ ಪೆಟ್ಟು ಕೊಟ್ಟರಲ್ಲ ಶ್ರೀಗಳು ಅನ್ನುವ ಖೇದ ನಮ್ಮನ್ನು ಕಾಡುತ್ತಿದೆ. ಪಟ್ಟದ ದೇವರಿಗಾಗಿ ಕಿತ್ತಾಡಿದಾಗ ಪೇಜಾವರ ಹಿರಿಯ ಶ್ರೀಗಳು ಸೇರಿದಂತೆ ಅನೇಕ ಸನ್ಯಾಸಿಗಳ ಮೇಲೆ ಸುಮ್ಮನೆ ಗೂಬೆ ಕೂರಿಸಿ ಬಿಟ್ಟವು ಅನ್ನುವ ಬೇಸರ ಕಾಡುತ್ತಿದೆ.
ಆದರೂ ಶಿರೂರು ಶ್ರೀಗಳಿಗೆ ರಮ್ಯ ಶೆಟ್ಟಿ ಅನ್ನುವ ಮಹಿಳೆ ಆತ್ಮೀಯಳಾಗಿದ್ದಳು, ಮಠದ ಉಸ್ತುವಾರಿ ಆಕೆಯ ಕೈಯಲ್ಲಿತ್ತು ಅನ್ನುವ ಅಂಶ ಸುಳಿಗಾಳಿಯಂತೆ ತೇಲಿ ಹೋಯ್ತು ಬಿಟ್ಟರೆ, ಅದು ಬಿರುಗಾಳಿ ಯಾಕೆ ಆಗಲಿಲ್ಲ. ಅಷ್ಟ ಮಠಗಳ ಅನೇಕರಿಗೆ ಈ ವಿಷಯ ಗೊತ್ತಿದ್ದರೂ ಅದನ್ನು ಯಾರೊಬ್ಬರೂ ಯಾಕೆ ಬಹಿರಂಗಪಡಿಸಲಿಲ್ಲ ಅನ್ನುವ ಪ್ರಶ್ನೆಯೊಂದು ನಮ್ಮನ್ನು ಕಾಡುತ್ತಿದೆ.
ಮಠದ ಸಿಬ್ಬಂದಿ, ಶಿರೂರು ಶ್ರೀಗಳ ಶಿಷ್ಯರು, ಆತ್ಮೀಯರು, ಸ್ನೇಹಿತರು ಗಂಭೀರ ವಿಷಯವೊಂದನ್ನು ಅದು ಹೇಗೆ ಮುಚ್ಚಿಟ್ಟರು. ಅವರಿಗೆ ಗೊತ್ತಿಲ್ಲದೆ ಶ್ರೀಗಳು ಸಂಸಾರ ಸಾಗಿಸಿದ್ದು ಹೇಗೆ ಅನ್ನುವುದೇ ದೊಡ್ಡ ಪ್ರಶ್ನೆ.
ಇಂದು ಅವರಿಗೆ ಮಹಿಳೆಯರ ಸಹವಾಸವಿತ್ತು, ಅವರು ಮದ್ಯ ಸೇವಿಸುತ್ತಿದ್ದರು, ಅವರೊಬ್ಬ ಭ್ರಷ್ಟ ಸನ್ಯಾಸಿ ಎಂದು ಹೇಳುವ ಪೇಜಾವರ ಶ್ರೀಗಳು ಈ ಸತ್ಯವನ್ನು ಎಂದೋ ಹೇಳಬಹುದಿತ್ತು. ಆದರೆ ಅದ್ಯಾಕೆ ಮುಚ್ಚಿಟ್ಟರು. ಅಷ್ಟ ಮಠಗಳ ಮರ್ಯಾದೆ ಉಳಿಸಿಕೊಳ್ಳುವ ಸಲುವಾಗಿ ಎಲ್ಲಾ ನೋವುಗಳನ್ನು ಹಿರಿಯ ಯತಿಗಳು ನುಂಗಿ ಕೂತರೆ..?
ಸಾಮಾಜಿಕ ಜಾಲ ತಾಣಗಳಲ್ಲಿ ಶ್ರೀಗಳ ಅಂತಪುರದ ರಹಸ್ಯವನ್ನು ಇಂದು ಬರೆಯುತ್ತಿರುವ ಮಂದಿ ಅಂದು ಯಾಕೆ ಬರೆಯಲಿಲ್ಲ. ಶ್ರೀಗಳಿಂದ ಅವರಿಗೆ ಬೆದರಿಕೆಯ ಭಯವಿತ್ತಾ.
ಪದೇ ಪದೇ ಶಿರೂರು ಶ್ರೀಗಳ ವಿರುದ್ಧ ಅಷ್ಟ ಯತಿಗಳ ಪೈಕಿ ಕೆಲವರು ಸಭೆ ನಡೆಸಿದರೆ, ಶಿರೂರು ಶ್ರೀಗಳು, ಆ ಶ್ರೀಗೆ ಮಕ್ಕಳಿವೆ, ಈ ಶ್ರೀಗೆ ಪತ್ನಿ ಇದೆ ಎಂದು ಹೇಳುವುದು ಬೆದರಿಕೆಯ ತಂತ್ರವೇ, ಅಥವಾ ಅದರಲ್ಲೂ ಸತ್ಯ ಅಡಗಿದೆಯೇ..
ಈಗ ಬಯಲಾಗುತ್ತಿರುವ ಆಡಿಯೋ ಕ್ಲಿಪ್ ಗಳು ಶಿರೂರು ಶ್ರೀ ತನ್ನನ್ನು ತಾನು ರಕ್ಷಿಸಿಕೊಳ್ಳಲು ರಚಿಸಿದ ವ್ಯೂಹದ ಭಾಗವೇ.
ಅಷ್ಟ ಮಠಗಳ ಪೈಕಿ ಆರು ಮಠಗಳು ಶಿರೂರು ಶ್ರೀ ಅಕ್ರಮವನ್ನು ಬಯಲಿಗೆಳೆಯಲು ಪದೇ ಪದೇ ಸಭೆ ನಡೆಸಿ, ಒತ್ತಡ ತಂತ್ರ ಹೇರಲು ಸಜ್ಜಾಗುತ್ತಿದ್ದಂತೆ ಶ್ರೀಗಳು ಇನ್ಮುಂದೆ ಬದುಕು ಕಷ್ಟವೆಂದು ನಿರ್ಧರಿಸಿದರೆ.
ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಕಾಡುತ್ತಿದೆ. ಪೊಲೀಸರ ತನಿಖೆ ಅವರ ಸಾವಿನ ಕುರಿತಂತೆ ನಡೆಯುತ್ತಿದೆ. ಆದರೆ ಉಳಿದೆಲ್ಲಾ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದು ಹೋಗಲಿದೆ.
ಎಲ್ಲಾ ಸತ್ಯ ಗೊತ್ತಿರುವುದು ಪೊಡವಿಗೊಡೆಯ ಶ್ರೀಕೃಷ್ಣನಿಗೆ ಮಾತ್ರ. ಶ್ರೀಕೃಷ್ಣನ ಆಟದ ಮುಂದೆ ಮಕಾಡೆ ಮಲಗಿದ ಘಟಾನುಘಟಿಗಳಿಗೆ ಲೆಕ್ಕವಿಲ್ಲ. ಇನ್ನು ಇದ್ಯಾವ ಲೆಕ್ಕ.
ಒಟ್ಟಿನಲ್ಲಿ ಶಿರೂರು ಶ್ರೀಗಳು ಮಾಡಿಕೊಂಡ ಎಡವಟ್ಟಿನಿಂದ ಉಳಿದ ಸ್ವಾಮೀಜಿಗಳನ್ನೂ ಸಂಶಯದಿಂದ ನೋಡುವಂತಾಗಿದೆ.

shiroor swamiji ಸಾವಿಗೆ ದೈವವನ್ನು ಆರೋಪಿ ಮಾಡಬೇಡಿ

ಸೀರೆ ಹೆಸರಿನಲ್ಲಿ ಮಹಿಳೆಯರಿಗೆ ಟೋಪಿ ಹಾಕಿದ ಕುಮಾರಸ್ವಾಮಿ

1

ಜನರಿಗೆ ಟೋಪಿ ಹಾಕುವುದರಲ್ಲಿ ನಮ್ಮ ಜನಪ್ರತಿನಿಧಿಗಳದ್ದು ಎತ್ತಿದ್ದ ಕೈ. ಮತ ಕೊಟ್ಟ ಪ್ರಭುವಿಗೆ ಟೋಪಿ ಹಾಕುವುದೆಂದರೆ ಇವರಿಗೆ ಪಂಚಪ್ರಾಣ. ಈ ಹಿಂದಿನ ಸರ್ಕಾರಗಳು ಹಾಕಿದ ಟೋಪಿಗಳಿಗೆ ಲೆಕ್ಕವಿಲ್ಲ.

ಇದೀಗ ಕುಮಾರಸ್ವಾಮಿ ಸರ್ಕಾರದ ಸರದಿ. ಹಾಗೋ ಹೀಗೋ ಸಾಲ ಮನ್ನಾ ವಿಚಾರದಲ್ಲಿ ಯು ಟರ್ನ್ ತೆಗೆದುಕೊಳ್ಳಲು ಹೋಗಿದ್ದ ಸರ್ಕಾರ ರೈತರ ಒತ್ತಡಕ್ಕೆ ಮಣಿದು ಸಾಲಮನ್ನಾ ಮಾಡಲು ತೀರ್ಮಾನಿಸಿದೆ.

ಆದರೆ ಇದೀಗ ಟೋಪಿ ಹಾಕಿದ ಸರದಿ ರೇಷ್ಮೆ ಸಚಿವ ಸಾ.ರಾ. ಮಹೇಶ್ ಅವರದ್ದು. ವರ ಮಹಾಲಕ್ಷ್ಮೀ ಹಬ್ಬಕ್ಕೆ ಕಡಿಮೆ ದರದಲ್ಲಿ ರೇಷ್ಮೆ ಸೀರೆ ಕೊಡ್ತೀನಿ ಎಂದ ಸಚಿವರು ಕೊಟ್ಟ ಸೀರೆ ಹೇಗಿತ್ತು ಗೊತ್ತಾ. ಪಬ್ಲಿಕ್ ಟಿವಿ ಮಾಡಿದ ವರದಿ ನೋಡಿ.

ರೇಷ್ಮೆ ಸೀರೆ ಕೊಡ್ತೀವಿ ಎಂದು ಸಿಲ್ಕ್ ಸೀರೆ ಕೊಟ್ಟ ಸಾರಾ ಮಹೇಶ್

ಗಂಡಸರ ಕಿಚನ್ – ನಿಮ್ಮ ಹೆಂಡತಿಗೆ ರೆಸ್ಟ್ ಕೊಡಿ

ಅಡುಗೆ ಮನೆ ಸಹವಾಸ ಸಾಕಾಯ್ತು.ಇದು ಪ್ರತಿಯೊಂದು ಮನೆಯ ಗೃಹಿಣಿ ಹೇಳುವ ಮಾತು. ನಿಮ್ಮ ಅಜ್ಜಿಯಿಂದ ಹಿಡಿದು ತಾಯಿ, ಅಕ್ಕ,ತಂಗಿ ಹೀಗೆ ಯಾರನ್ನಾದ್ರೂ ಕೇಳಿ ಅಡುಗೆ ಕೆಲಸವಂದ್ರೆ ಇಷ್ಟ ಅನ್ನುವ ಅವರು ಗಂಡ ಅಡುಗೆ ಕೆಲಸದಲ್ಲಿ ಸಹಾಯ ಮಾಡುವುದಿಲ್ಲ ಅನ್ನುವ ಆರೋಪವೊಂದನ್ನು ಮುಂದಿಡುತ್ತಾರೆ.ಹಳ್ಳಿಯೋ ಸಿಟಿಯೋ ಪ್ರತೀ ಮನೆಯ ಗೃಹಿಣಿಗೆ ಗಂಡನ ಮೇಲೆ ಬೆಟ್ಟದಷ್ಚು ಪ್ರೀತಿಯಿದ್ರು ಅಡುಗೆ ವಿಚಾರದಲ್ಲಿ ಮಾತ್ರ ಕೋಪ ಖಂಡಿತಾ.

ಅದರಲ್ಲೂ ಕೆಲಸ ಮಾಡುವ ಮಹಿಳೆಯರು ಗಂಡ ಅಡುಗೆ ವಿಚಾರದಲ್ಲಿ ಸಹಾಯ ಮಾಡಬೇಕು ಎಂದು ಬಯಸುತ್ತಾರೆ.ಕಾಲೇಜು ಹುಡುಗಿಯರನ್ನ ಕೇಳಿ ನೋಡಿ ನಿಮ್ಮ ಗಂಡನಿಂದ ಎನ್ ಬಯಸುತ್ತೀರಿ ಎಂದು, ಚಿನ್ನ ಒಡವೆ, ಕೇರ್, ಪ್ರೀತಿ ಎಂದೆಲ್ಲಾ ಹೇಳಿ ಅಡುಗೆ ಕೆಲಸಕ್ಕೆ ಒಂದಿಷ್ಟು ಸಹಾಯ ಮಾಡುವಂತೆ ಇರಬೇಕು ಎಂದು ಮಾತು ನಿಲ್ಲಿಸುತ್ತಾರೆ.

ಗಂಡಸರೇ ನಿಮಗೊಂದು ಸವಾಲ್

ಈ ಪ್ರಶ್ನೆಯನ್ನು ಗಂಡಂದಿರಿಗೆ ಕೇಳ ಬಯಸುತ್ತೇನೆ. ನಿಮ್ಮ ಹೆಂಡತಿಯ ಅಡುಗೆ ಚೆನ್ನಾಗಿಲ್ಲ ಎಂದು ಒಂದಲ್ಲ ಒಂದು ದಿನ ಹೇಳಿರುತ್ತೀರಿ ತಾನೇ? ಖಂಡಿತಾ ಹೇಳಿರುತ್ತೀರಿ. ಉಪ್ಪು,ಖಾರ, ಹುಳಿ ಬಗ್ಗೆ ದೂರಿರುತ್ತೀರಿ. ಹಾಗಂತ ಅವರೇನಾದ್ರೂ ನಿಮ್ಮ ಮೇಲಿನ ಕೋಪದಿಂದ ಅಡುಗೆಯನ್ನು ಟೇಸ್ಟ್ ಲೆಸ್ ಮಾಡಿರುತ್ತಾರೆಯೇ ಖಂಡಿತಾ ಇಲ್ಲ. ಪಾಪ ಎನೋ ಸುಸ್ತು. ಒಂದಿಷ್ಟು ಎಡವಟ್ಟು ಆಗಿರುತ್ತದೆ.

ಹೆಂಡತಿಯ ಅಡುಗೆಯನ್ನು ಟೀಕಿಸುವ ನೀವು ಒಂದ್ಸಲ ಕಿಚನ್ ಗೆ ಹೋಗಿ. ನಿಮ್ಮ ಉತ್ತರ ಏನು ಇರುತ್ತೆ ಗೊತ್ತಾ? ಅಯ್ಯೋ ಈಗೇನು ಅಡುಗೆ ಸುಲಭ. ಗ್ಯಾಸ್ ಇದೆ, ಕುಕ್ಕರಿದೆ, ಕಟ್ಟರ್ ಇದೆ. ನಮ್ಮ ಅಮ್ಮ, ಅಜ್ಜಿ ಹೊಗೆ ಒಲೆ ಮುಂದೆ ಕೂತಿರುತ್ತಿದ್ದರು. ಬೀಸೋ ಕಲ್ಲು ಮುಂದೆ ಸುಸ್ತಾಗುತ್ತಿದ್ದರು ಅನ್ನುತ್ತೀರಿ.  ಹೌದು ಕಾಲ ಬದಲಾಗಿದೆ. ಆದ್ರೆ ಈರುಳ್ಳಿ ಕಣ್ಣೀರು ತರಿಸುತ್ತದೆ. ಹಸಿ ಮೆಣಸು ಖಾರವಾಗಿಯೇ ಇರುತ್ತದೆ. ಹಾಗಾಗಿ ಅಡುಗೆ ಮನೆಯೊಳಗಿನ ಮಹಿಳೆಯ ಸಂಕಷ್ಟ ಕಡಿಮೆಯಾಗಿಲ್ಲ.

ನೀವ್ಯಾಕೆ ಅಡುಗೆ ಭಟ್ಟರಾಗಬಾರದು?

kitchn2

ಸ್ಟಾರ್ ಹೋಟೇಲ್ ಗೆ ಹೋಗಿ,ಯಾವುದೋ ಪುಟ್ಟ ಹೊಟೇಲ್ ಗೆ ಹೋಗಿ ಅಲ್ಲಿ ಅಡುಗೆ ಮಾಡುವವರು ಗಂಡಸರು.ಆದ್ರೆ ಮನೆಗೆ ಬಂದ್ರೆ ಗಂಡಸರು ಅಡುಗೆ ಮಾಡುವುದಿಲ್ಲ. ಹೀಗಾಗಿ ನಿಮ್ಮದು ಕೆಲಸ ಮಾಡುವ ಕುಟುಂಬವಾಗಿದ್ದರೆ ಕಚೇರಿಯಿಂದ ಬೇಗ ಬಂದ ದಿನ ಅಡುಗೆ ಮಾಡಿ ತೋರಿಸಿ.ಉಪ್ಪು,ಖಾರ ಹುಳಿ ಯಾವುದರ ಬಗ್ಗೆಯೂ ವರಿ ಮಾಡ್ಕೋಬೇಡಿ. ಹೆಂಡತಿ ಕಚೇರಿಯಿಂದ ಬರುವಷ್ಟು ಹೊತ್ತಿಗೆ ಅಡುಗೆ ರೆಡಿ ಇದ್ರೆ ನಿಮಗೆ ಸಿಗುವ ರೆಸ್ಪಾನ್ ನೋಡಿ.ನಿಮಗೆ ಗಿಲ್ಟಿ ಫಿಲಿಂಗ್ ಬಾರದಿದ್ರೆ ಹೇಳಿ.

ಹಾಗಂತ ಪ್ರತೀ ನಿತ್ಯ ಕೆಟ್ಟ ಅಡುಗೆ ಮಾಡಿಡಲು ಹೋಗಬೇಡಿ.ದಿನದಿಂದ ದಿನಕ್ಕೆ ಅಡುಗೆಯ ಕ್ವಾಲಿಟಿಯನ್ನು IMPROVE ಮಾಡಿ.ಇದು ಕಷ್ಟವಾದ್ರೆ ವಾರಕ್ಕೊಂದು ರಜೆ ಇರುತ್ತೆ ತಾನೇ ನಿಮಗೆ.ಆ ದಿನ ಅಡುಗೆ ಮನೆ ಉಸ್ತುವಾರಿಯನ್ನು ನೀವು ವಹಿಸಿಕೊಳ್ಳಿ.ಈ ಗಂಡಸರಿಗೊಂದು ಕೆಟ್ಟ ಚಾಳಿ ಇದೆ.ಹೆಂಡತಿ ಅಡುಗೆ ಮಾಡಿಲ್ಲ ಅಂದ್ರೆ ಹೊಟೇಲ್ ನಿಂದ ಪಾರ್ಸೆಲ್ ತಂದು ಬಿಡೋದು.

ನಿಮ್ಮಿಬ್ಬರ ವಾರದ ರಜೆಯ ದಿನ ಒಂದಿಷ್ಟು ಬೇಗ ಎದ್ದು ಬೆಳಗಿನ ತಿಂಡಿಯನ್ನು ತಯಾರಿಸಿ. ಸುಲಭವಾಗಿ ತಯಾರಿಸಬಹುದಾದ ರೆಸಿಪಿಗಳು ಇಂಟರ್ ನೆಟ್ ನಲ್ಲಿ ಬೇಜಾನ್ ಸಿಗುತ್ತದೆ. ಮಧ್ಯಾಹ್ನ ಊಟ ತಯಾರಿಸಬೇಕು ಅನ್ನುವಷ್ಟು ಹೊತ್ತಿಗೆ ನಿಮ್ಮ ಪತ್ನಿಯೇ ನಿಮ್ಮ ಕೆಲಸಕ್ಕೆ ಕೈ ಜೋಡಿಸುತ್ತಾಳೆ.ಈ ಅಡುಗೆ ರುಚಿಯನ್ನು ಸವಿದು ನೋಡಿ.ಕೆಟ್ಟದಾಗಿರಲು ಸಾಧ್ಯವೇ ಇಲ್ಲ ಬಿಡಿ.

ಖಂಡಿತಾ ಹೌದು ಅಯ್ಯೋ ಇದನ್ನು ಮಾಡಲು ಸಾಧ್ಯವೇ ಇಲ್ಲ ಎಂದು ನೀವು ನಿರಾಕರಿಸುತ್ತೀರಿ. ವಾರಕ್ಕೊಂದು ರಜೆ.ಪುಲ್ ರೆಸ್ಟ್ ಮಾಡದಿದ್ರೆ ಹೇಗೆ ಎಂದು ನೀವು ಪ್ರಶ್ನೆ ಮಾಡುತ್ತೀರಿ. ಅರೇ ಹಾಗಂತ ನಿಮ್ಮ ಹೆಂಡತಿಗೆ ನೀವು ಹೆಲ್ಪ್ ಮಾಡದಿದ್ರೆ ಹೇಗೆ ಸ್ವಾಮಿ. ಇವೆರೆಡೂ ಸಾಧ್ಯವಿಲ್ಲ ಅನ್ನುವುದಾದ್ರೆ. ನಿತ್ಯ ನಿಮ್ಮ ಹೆಂಡತಿಗೆ ನೀವು ಕಿಚನ್ ನಲ್ಲಿ ಸಹಾಯ ಮಾಡಬಹುದು. ಒಂದು ದಿನ ಸಹಾಯ ಮಾಡಿ ನೋಡಿ. ಬೆಡ್ ರೂಂ ನಲ್ಲಿ What a romantic day ಎಂದು ನಿಮ್ಮ ಪತ್ನಿ ಹೇಳದಿದ್ರೆ ಆಮೇಲೆ ಹೇಳಿ.

ನಿತ್ಯ ನೀವೇನೂ ಕಿಚನ್ ನಲ್ಲಿ ಬೆಟ್ಟ ಅಗೆಯಬೇಕಾಗಿಲ್ಲ. ಚಿಕ್ಕ ಪುಟ್ಟ ಪಾತ್ರೆ ತೊಳೆಯಿರಿ, ತರ್ಕಾರಿಗಳನ್ನು ಕಟ್ ಮಾಡಿ ಕೊಡಿ. ಅಡುಗೆಯ ಟೇಸ್ಟ್ ನೋಡಿ ಏನು ಮಾಡಿದ್ರೆ ಚೆನ್ನಾಗಿರುತ್ತೆ ಅಂತಾ ಹೇಳಿ. ತಟ್ಟೆಗೆ ಬಡಿಸಿದ ಮೇಲೆ ನೀವು ಅಪ್ ಸೆಟ್ ಆಗುವುದು ತಪ್ಪುತ್ತದೆ. ನಿಮ್ಮ ಪತ್ನಿಯ ಇಷ್ಟದ ಸೀರಿಯಲ್ ಮಿಸ್ಸ್ ಆಗುವುದು ತಪ್ಪುತ್ತದೆ.

ಹೋಗ್ಲಿ ಇವ್ಯಾವುದನ್ನು ಮಾಡಲು ಸಾಧ್ಯವಿಲ್ಲ ಅನ್ನುವುದಾದ್ರೆ ಕನಿಷ್ಟ ಪಕ್ಷ ಬೇಯಿಸಿದ ಅಡುಗೆಯನ್ನು ತಟ್ಟೆಗೆ ಬಳಸಿಕೊಂಡು ಜೊತೆಗೆ ತಿನ್ನಿ. ನಿಮ್ಮ ಕೈಯಾರೆ ನಿಮ್ಮ ಪತ್ನಿ ತಟ್ಟೆಗೆ ಬಡಿಸಿ.

ನೀವು ಅಡುಗೆ ಮನೆಗೆ ಹೋಗುವುದನ್ನು ರೂಢಿಸಿಕೊಂಡ್ರೆ ಎನೆಲ್ಲಾ ಅನುಕೂಲಗಳಿದೆ ಗೊತ್ತಾ?

kitchn1

  • ನಿಮ್ಮ ಸಂಸಾರದ ಸರಿಗಮ ಸರಿಯಾಗಿರುತ್ತದೆ. ಸಂಸಾರದಲ್ಲಿ ಸಾರವಿರುತ್ತದೆ
  • ನಿಮ್ಮ ಹೆಂಡತಿ ಮುನಿಸಿಕೊಂಡ್ರೆ ಆಕೆಯನ್ನು ಸಮಾಧಾನಗೊಳಿಸಲು ಅಡುಗೆ ಐಡಿಯಾ ಸೂಪರ್
  • ಇನ್ನು ನಿಮಗೆ ಶಾಲೆಗೆ ಹೋಗುವ ಪುಟಾಣಿ ಇದ್ರೆ ಅಂತು ಕಷ್ಟ ಹೇಳುವುದು ಬೇಡ. ಅಂತಹ ಸಂದರ್ಭದಲ್ಲಿ ಮನೆ ಕೆಲಸದಾಕೆ ಬಾರದೇ ಹೋದ್ರೂ ನೀವು ಚಿಂತಿಸಬೇಕಾಗಿರುವುದಿಲ್ಲ.

ಇವೆಲ್ಲಾ ಗಂಡಸರಿಗಾಯ್ತು. ಇದನ್ನು ಓದಿದ ಗೃಹಿಣಿಯರು ಅಯ್ಯೋ ನಮ್ಮ ಮನೆಯವರು ಕಿಚನ್ ಕಡೆ ಮುಖ ಮಾಡಿ ಮಲಗಲ್ಲ ಅಂತೀರಿ. ಅರೇ ಅದಕ್ಕೆ ವರಿ ಯಾಕೆ. ಈ ಲೇಖನ ಓದಿದ ಮೇಲೆ ಅದ್ಯಾವ ಗಡಸು ಗಂಡಸು ಅಡುಗೆ ಮನೆ ಕಡೆ ಬರಲ್ಲ ಹೇಳಿ. ಹಾಗೂ ಬಂದಿಲ್ಲವೇ. ಪ್ರೀತಿಯಿಂದ ಗೆಲ್ಲುವ ಶಕ್ತಿಯನ್ನು ಗೃಹಿಣಿಯಾಗಿ ನೀವು ಹೊಂದಿರಬೇಕು.ನೀವು ಟಾರ್ಚರ್ ಕೊಟ್ಟು, ಕಾಟ ಕೊಟ್ರೆ ಖಂಡಿತಾ ನಿಮ್ಮ ಮನೆಯವರು ಅಡುಗೆ ಮನೆಗೆ ಬರುವುದಿಲ್ಲ. ಅವರಿಗೆ ತಿಳಿ ಹೇಳಿ.ನಿಮ್ಮ ಕಷ್ಟವನ್ನು ವಿವರಿಸಿ. ನಿಮ್ಮ ಅಡುಗೆ ಚೆನ್ನಾಗಿಲ್ಲ ಅಂದ್ರೆ ತಟ್ಟೆ, ಪಾತ್ರೆ ಕುಕ್ಕಬೇಡಿ. ನಯವಾಗಿ ಸರ್ ಒಂದ್ಸಲ ಅಡುಗೆ ಮಾಡಿ ನೋಡಿ ಎಂದು ಹೇಳಿ.

First blog post

This is your very first post. Click the Edit link to modify or delete it, or start a new post. If you like, use this post to tell readers why you started this blog and what you plan to do with it.