Advertisements

ಹುಟ್ಟುವ ಮಗುವಿಗೆ ಟೆನ್ನಿಸ್ ಮತ್ತು ಕ್ರಿಕೆಟ್ ಆಡೋ ಭಾಗ್ಯವೇ ಇಲ್ಲ -ಪಾಕಿಸ್ತಾನದ ಸೊಸೆಯ ನಿರ್ಧಾರವೇನು..?

ಹುಟ್ಟುವ ಮಗುವನ್ನು ಯಾವುದೇ ಕಾರಣಕ್ಕೂ ನಾವು ಟೆನ್ನಿಸ್ ಅಥವಾ ಕ್ರಿಕೆಟ್ ಅಂಗಳಕ್ಕೆ ಇಳಿಸುವುದಿಲ್ಲ ಎಂದು ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹೇಳಿದ್ದಾರೆ.

ಖಾಸಗಿ ನಿಯತಕಾಲಿಕೆಯೊಂದಕ್ಕೆ ಸಂದರ್ಶನ ಕೊಟ್ಟಿರುವ ಅವರು ನೀವೂ ಮತ್ತು ಶೊಯೆಬ್ ಆಟಗಾರರಾಗಿದ್ದು, ನಿಮ್ಮ ಮಗು ಯಾವ ಕ್ರೀಡೆಯಾಡಲು ಇಚ್ಚಿಸುತ್ತಿರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಾನಿಯಾ ಅಚ್ಚರಿಯ ಉತ್ತರ ನೀಡಿದ್ದಾರೆ. ನನ್ನ ಮಗು ನಾನು ವೈದ್ಯ ವೃತ್ತಿ ಮಾಡಲು ಬಯಸುತ್ತೇನೆ ಎಂದಿದ್ದಾರೆ.

ಇದೇ ವೇಳೆ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿರುವ ಸಾನಿಯಾ ಎರಡೂ ರಾಷ್ಟ್ರಗಳನ್ನು ಬೆಸೆಯಲು ನಾವಿಬ್ಬರು ಮದುವೆಯಾಗಿದ್ದೇವೆ ಎಂದು ಹಲವಾರು ಮಂದಿ ಭಾವಿಸಿದ್ದಾರೆ. ಆದರೆ ನಮ್ಮ ಉದ್ದೇಶ ಅದಲ್ಲ.

ನಾನು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗಲೆಲ್ಲ ಅಲ್ಲಿನ ಜನ ನನ್ನನ್ನು ಪ್ರೀತಿಯಿಂದ ಕಾಣುತ್ತಿದ್ದರು. ಆ ಪ್ರೀತಿ ನನಗೆ ಅಪಾರವಾಗಿ ಹಿಡಿಸಿತ್ತು. ಅಲ್ಲಿನ ಜನ ನನ್ನನ್ನು ಅತ್ತಿಗೆ ಎಂದು ಕರೆಯುತ್ತಾರೆ. ನನ್ನ ಪತಿ, ಕ್ರಿಕೆಟರ್ ಶೋಯಬ್ ಮಲ್ಲೀಕ್ ಅವರ ಮೇಲಿನ ಗೌರವದಿಂದ ನನಗೆ ಆ ಪ್ರೀತಿ ಸಿಗುತ್ತಿದೆ.

ಹಾಗೇ ಶೋಯಬ್ ಭಾರತಕ್ಕೆ ಬಂದಾಗ ಅವರಿಗೂ ಇಲ್ಲಿ ಪ್ರೀತಿ, ಗೌರವ ಸಿಗುತ್ತಿತ್ತು ಎಂದಿದ್ದಾರೆ.

ಇನ್ನು ಭಾರತದ ಟೆನಿಸ್ ತಾರೆ ಸಾನಿಯಾ ಮತ್ತು ಪಾಕಿಸ್ತಾನದ ಕ್ರಿಕೆಟರ್ ಶೋಯಬ್ ಮಲೀಕ್ ಮಗು ಭಾರತ ಮತ್ತು ಪಾಕಿಸ್ತಾನದ ಪ್ರೇಮದ ಕೂಸು ಎಂದು ಜನ ಕರೆಯುತ್ತಿದ್ದಾರೆ ಈ ಬಗ್ಗೆ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ ಈ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.

 

Advertisements

ಮಾವನ ಆದೇಶದಂತೆ ಟೆಂಪಲ್ ರನ್  – ರೇವಣ್ಣ ಆರ್ಡರ್ ನಂತೆ ಅರ್ಚಕರ ಪೂಜೆ

ಶ್ರಾವಣ ಮಾಸ ಕಾಲಿಟ್ಟ ಬೆನ್ನಲ್ಲೇ ದೇವೇಗೌಡರ ಕುಟುಂಬ ದೇವಸ್ಥಾನದ ಕಡೆಗೆ ಮುಖ ಮಾಡಿದೆ.

ಶ್ರಾವಣ ಮಾಸ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಮನೆ ದೇವರು ಹೊಳೆನರಸೀಪುರದ ಹರದನಹಳ್ಳಿ ದೇವೇಶ್ವರ ದೇವಾಲಯ, ಅವರ ತಂದೆಯ ಮೆಚ್ಚಿನ ದೈವ ಮಾವಿನ ಕೆರೆ ಬೆಟ್ಟದ ರಂಗನಾಥಸ್ವಾಮಿ ಸೇರಿದಂತೆ ಅವರ ಕುಲದೈವದ ಪೂಜೆಯಲ್ಲಿ ಭಾಗಿಯಾದರು.

ಇಡೀ ಟೆಂಪಲ್ ರನ್ ನಲ್ಲಿ ಗಮನ ಸೆಳೆದದ್ದು ಸೂಪರ್ ಸಿಎಂ ಎಂದು ಕರೆಸಿಕೊಂಡಿರುವ ಸಚಿವ, ಕುಮಾರಣ್ಣ ಸಹೋದರ ರೇವಣ್ಣ.
ಕುಮಾರಸ್ವಾಮಿ ಭೇಟಿ ಸಂದರ್ಭದಲ್ಲಿ ರೇವಣ್ಣ ಅವರ ನಿರ್ದೇಶನದಂತೆ ಟೆಂಪಲ್ ಕಾರ್ಯಕ್ರಮ ನಡೆದಿದೆ. ಹೊಳೆನರಸೀಪುರದ ಶಿವನ ದೇವಸ್ಥಾನಕ್ಕೆ ಇಷ್ಟು ಹೊತ್ತಿಗೆ ಬನ್ನಿ, ಹೀಗೆಯೇ ದೇವಸ್ಥಾನಕ್ಕೆ ಸುತ್ತು ಬನ್ನಿ  ಎಂದು ರೇವಣ್ಣ ಅವರೇ ತಮ್ಮ ಸೋದರ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಮಾರ್ಗದರ್ಶನ ಮಾಡಿದರು. ಮಾತ್ರವಲ್ಲದೆ ಪೂಜೆ ಹೇಗೆ ಮಾಡಬೇಕು ಎಂದು ಆರ್ಡರ್ ಬೇರೆ ಕೊಡುತ್ತಿದ್ದರು.

ಮುಂದೆ ಕುಮಾರಸ್ವಾಮಿ ಕುಟುಂಬ ಹೊಳೆನರಸೀಪುರದ ಹರದನಹಳ್ಳಿಯಲ್ಲಿರುವ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿತು.ಅಲ್ಲಿ ಗರ್ಭಗುಡಿ ಕೆಳಗೆ ನಿಂತು ಸಚಿವ ರೇವಣ್ಣ ಅರ್ಚಕರಿಗೆ ಪೂಜೆಯ ಪಾಠ ಮಾಡಿದರು. ಇಂತಿಷ್ಟು ಹೊತ್ತಿಗೆ ಹೀಗೆಯೇ ಪೂಜೆ ಮಾಡಬೇಕೆಂದು ನಿರ್ದೇಶನ ನೀಡಿದರು. ಅರ್ಚಕರು ವಿಧಿಯಿಲ್ಲದೆ ರೇವಣ್ಣ ಆದೇಶದಂತೆ ಗಂಟೆ ಬಾರಿಸಿದರು, ಆರತಿ ಎತ್ತಿದ್ದರು.

ಈ ಹಿಂದೆ ಹಾಸನ ಜಿಲ್ಲೆಯಲ್ಲಿ ಸರ್ಕಾರಿ ಕಟ್ಟಡವೊಂದರ ಶಂಕುಸ್ಥಾಪನೆ ಸಂದರ್ಭದಲ್ಲಿ ಕೂಡ ರೇವಣ್ಣ ಅರ್ಚಕರು ಪೂಜೆ ಮಾಡುತ್ತಿದ್ದುದನ್ನು ಪ್ರಶ್ನಿಸಿದ್ದು ಮತ್ತು ಪೂಜೆ ಹೇಗೆ ಮಾಡಬೇಕೆಂದು ಹೇಳಿದ್ದು ಸುದ್ದಿಯಾಗಿತ್ತು.

ಇನ್ನು ಪೂಜೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅನಿತಾ ಕುಮಾರಸ್ವಾಮಿ, ತಮ್ಮ ಪತಿಗೆ  ಮುಖ್ಯಮಂತ್ರಿ ಅಧಿಕಾರ ಸಿಕ್ಕಿದ ಹಿನ್ನಲೆಯಲ್ಲಿ ರಾಜ್ಯದ ಜನತೆಗೆ ಒಳ್ಳೆಯದಾಗಲಿ ಎಂದು ಮಾವ ಹೆಚ್ ಡಿ ದೇವೇಗೌಡರ ಆದೇಶದ ಪ್ರಕಾರ ಪೂಜೆ ಸಲ್ಲಿಸಿದ್ದೇವೆ ಎಂದರು. ಬಳಿಕ ಕುಮಾರಸ್ವಾಮಿ ಕುಟುಂಬ ಧರ್ಮಸ್ಥಳ ಮಂಜುನಾಥ ದೇಗುಲ ಭೇಟಿಗೆ ಹೊರಟಿತು. ಮಂಗಳವಾರ  ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಸ್ವಾಮಿ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ.

ಶ್ರಾವಣ ಮಾಸವಾಗಿರುವುದರಿಂದ ನಾಳೆ ದೇವಸ್ಥಾನಗಳಲ್ಲಿ ರಶ್ ಇರುತ್ತದೆ. ಮುಖ್ಯಮಂತ್ರಿಗಳ ಭೇಟಿಯಿಂದ ಭಕ್ತರಿಗೆ ತೊಂದರೆಯಾಗುವುದನ್ನು ದೇವರು ಬಂದರೂ ತಪ್ಪಿಸಲು ಸಾಧ್ಯವಿಲ್ಲ.ಯಾಕೆಂದರೆ ಅವರು ಮುಖ್ಯಮಂತ್ರಿಗಳು. ದೇಶವೇ ಹೀಗೆ ವಿಐಪಿ ಸಂಸ್ಕೃತಿಯ ಕರ್ಮವನ್ನು ಜನ ಸಾಮಾನ್ಯರು ಅನುಭವಿಸಲೇಬೇಕು.

ವಿಚ್ಛೇದನದ ಹಾದಿಯಲ್ಲಿದ್ದ ಹುಬ್ಬಳಿ ದಂಪತಿಯನ್ನು ಹುಬ್ಬಳ್ಳಿಯಲ್ಲೇ ಒಂದುಗೂಡಿಸಿದ SC – CJ ದೀಪಕ್ ಮಿಶ್ರಾ

ಹೆಡ್ ಲೈನ್ಸ್ ನೋಡಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುಬ್ಬಳ್ಳಿಯಲ್ಲಿ ಬಂದು ತೀರ್ಪು ಕೊಟ್ಟರೇ ಎಂದು ಪ್ರಶ್ನಿಸಬೇಡಿ. ಹೌದು ತೀರ್ಪು ಕೊಟ್ಟಿದ್ದಾರೆ. ಅದು ಹೇಗೆ ಸಾಧ್ಯ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೆಹಲಿಯಲ್ಲಿ ತೀರ್ಪು ಕೊಡುವುದು ಗೊತ್ತು. ಆದರೆ ಹುಬ್ಬಳ್ಳಿಯಲ್ಲಿ…

ಇದೇ ಈ ಸುದ್ದಿಯ ವಿಶೇಷ. ದೆಹಲಿಯಲ್ಲಿ ತೀರ್ಪು ಕೊಡುವ ಮತ್ತು ಕೊಡಬೇಕಾಗಿರುವ ಮುಖ್ಯಮಂತ್ರಿಗಳು ಹುಬ್ಬಳ್ಳಿಯಲ್ಲಿ ತೀರ್ಪು ಪ್ರಕಟಿಸಿದರೆ. ಅದು ಕೂಡಾ ಪಾಸಿಟಿವ್ ತೀರ್ಪು. ಈ ಮೂಲಕ ನೂತನ ನ್ಯಾಯಾಲಯಗಳ ಸಂಕೀರ್ಣಗಳ ಉದ್ಘಾಟನೆಗಾಗಿ ಆಗಮಿಸಿದ್ದ ದೀಪಕ್ ಮಿಶ್ರಾ ಎಂದಿಗೂ ಎಂದೆಂದಿಗೂ ಮರೆಯಲಾಗದಂತಹ ಘಟನೆಗೆ ಸಾಕ್ಷಿಯಾದರು.

ಕೋರ್ಟ್ ಉದ್ಘಾಟನೆ ನಂತರ ವಿಶೇಷ ಲೋಕ ಅದಾಲತ್ ನಡೆಯುತ್ತಿದ್ದ ಹಾಲ್ ಗೆ ಭೇಟಿ ನೀಡಿದರು. ಈ ವೇಳೆ ನ್ಯಾಯಿಕ ಸಂಧಾನಕಾರರಾದ ಮಹೇಶ್ ಪಾಟೀಲ್ ಹಾಗೂ ವಕೀಲ ಸಂಧಾನಕಾರರಾದ ಶೋಭಾ ಪವಾರ್ ಅವರು ಪ್ರಕರಣ ನಿರ್ವಹಿಸುತ್ತಿದ್ದರು.

ದೀಪಕ್ ಮಿಶ್ರಾ ಅವರು ಬಂದಾಗ ಗಂಡ-ಹೆಂಡಿರ ನಡುವಿನ ವಿಚ್ಛೇದನ ಪ್ರಕರಣವೊಂದು ನಡೆಯುತ್ತಿತ್ತು.
ಕೇಶ್ವಾಪುರದ ನಿವಾಸಿ ಜಗದೀಶ್ ಶೆಳಗಿ ಹಾಗೂ ಪಾರ್ವತಿ 2000 ದಲ್ಲಿ ಮದುವೆಯಾಗಿದ್ದರು. 2015 ರಲ್ಲಿ ವಿಚ್ಛೇದನ ಪ್ರಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಕುರಿತಂತೆ ಮುತುವರ್ಜಿ ವಹಿಸಿದ ಮುಖ್ಯ ನ್ಯಾಯಮೂರ್ತಿಗಳು, ವಿಶೇಷ ಲೋಕ ಅದಾಲತ್ ನಲ್ಲಿ ತಾವೇ ಆಸೀನರಾದರು. ಹೀಗಾಗಿ ಪ್ರಕರಣ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮುಂದೆ ವಿಚಾರಣೆಗೆ ಬಂದಿತು.

ವಿಚ್ಛೇದನ ಕೋರಿದ ದಂಪತಿ ಹಾಗೂ ಮಕ್ಕಳಾದ ರೋಹಿತ್, ನಂದಿನಿ, ರಕ್ಷಿತಾ ಹಾಗೂ ಸಿದ್ಧಾರ್ಥರೊಂದಿಗೆ ಕೂತ ಮುಖ್ಯ ನ್ಯಾಯಮೂರ್ತಿಗಳು, ಕಾನೂನಿನ ಪುಸ್ತಕ ಪಕ್ಕಕ್ಕಿಟ್ಟು ಸಂಸಾರದ ಸುಖ, ನೋವು ನಲಿವು ಕುರಿತಂತೆ ಪಾಠ ಪ್ರಾರಂಭಿಸಿದರು.
ಗಂಡ-ಹೆಂಡತಿಗೆ ಕೌಂಟುಬಿಕ ಮೌಲ್ಯಗಳನ್ನು ತಿಳಿಸಿದರು.

“ಈಗ ನೀವಿಬ್ಬರೂ ಹಠಕ್ಕೆ ಬಿದ್ದು ವಿಚ್ಛೇದನ ಪಡೆಯುತ್ತೀರಿ. ಆದರೆ ನಾಳೆ ನಿಮ್ಮ ಮಕ್ಕಳಿಗೆ ಯಾವ ರೀತಿಯಾಗಿ ಮದುವೆ ಹಾಗೂ ಕೌಟುಂಬಿಕ ಜೀವನವನ್ನು ಕಟ್ಟಿಕೊಳ್ಳಲು ಹೇಳುತ್ತೀರಿ? ನಿಮ್ಮ ನಡುವಿನ ಜಗಳಗಳನ್ನು ನೋಡಿ ಬೆಳೆದ ಮಕ್ಕಳು ಭವಿಷ್ಯದಲ್ಲಿ ಕುಟುಂ ವ್ಯವಸ್ಥೆಯ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಾರೆ. ಮಾತ್ರವಲ್ಲದೆ ಅಪ್ಪ ಅಮ್ಮನ ಜಗಳ ನೋಡಿ ಸಾಕಾಗಿದೆ. ನಮಗೆ ಮದುವೆಯೇ ಬೇಡ ಎಂದು ನಿರ್ಧರಿಸಲೂಬಹುದು. ಹೀಗಾಗಿ ಮಕ್ಕಳಿಗೆ ಹಾಗೂ ಮುಂದಿನ ಪೀಳಿಗೆಗೆ ಮಾದರಿಯಾಗಿದ್ದು ಜೀವಿಸುವುದು ಉತ್ತಮವಲ್ಲವೇ “ಎಂದು ಪ್ರಶ್ನಿಸಿದರು.

ಅದೇನಾಯ್ತೋ ಡಿವೋರ್ಸ್ ಬೇಕೇ ಬೇಕು ಎಂದು ಪಟ್ಟು ಹಿಡಿದು ಕೂತಿದ್ದವರು,ನ್ಯಾಯಮೂರ್ತಿಗಳ ಮಾತು ಕೇಳಿ ವಿಚ್ಛೇದನ ಪ್ರಕರಣದಿಂದ ಹಿಂದಕ್ಕೆ ಸರಿದರು. ಪರಸ್ಪರ ಒಟ್ಟಿಗೆ ಬಾಳುವುದಾಗಿ ಹೇಳಿದ ದಂಪತಿ ಮಕ್ಕಳೊಂದಿಗೆ ಸಿಹಿ ಹಂಚಿಕೊಂಡರು.

ತಾತ…ಅಪ್ಪ ಈಗ ನಿಖಿಲ್ ಸರದಿ…!

ನಿಖಿಲ್ ಕುಮಾರಸ್ವಾಮಿ..ದೇವೇಗೌಡರ ಮೊಮ್ಮಗ, ಮುಖ್ಯಮಂತ್ರಿಯ ಮಗ ಅನ್ನುವ ಗತ್ತಿನಿಂದ ತಿರುಗಾಡಿದವರು. ಆದರೆ ಅದ್ಯಾಕೋ ಗೊತ್ತಿಲ್ಲ. ಇತ್ತೀಚೆಗೆ ನಿಖಿಲ್ ಬದಲಾಗಿದ್ದಾರೆ. ಬಾಡಿ ಲ್ಯಾಗ್ವೇಜ್, ನಡೆ ನುಡಿಯಲ್ಲಿ ಸಾಕಷ್ಟು ಬದಲಾಗಿದೆ. ಮೊದಲು ಸೀಮಿತ ಮಂದಿಯ ಜೊತೆಗೆ ಓಡಾಡುತ್ತಿದ್ದ ನಿಖಿಲ್ ಇದೀಗ ಎಲ್ಲರ ಜೊತೆ ಬೆರೆಯುತ್ತಿದ್ದಾರೆ. ನಾನೊಬ್ಬ ಜನ ಸಾಮಾನ್ಯ ಅನ್ನುವುದನ್ನು ತೋರಿಸಲು ಯತ್ನಿಸುತ್ತಿದ್ದಾರೆ. ಏನಿವೇ ಇದೊಂದು ಒಳ್ಳೆಯ ಬೆಳವಣಿಗೆ.

ಈ ನಡುವೆ ನಿಕಿಲ್ ಕುರುಕ್ಷೇತ್ರ ಸೆಟ್ ನಲ್ಲಿ ಕಣ್ಣೀರು ಹಾಕಿದ ಸುದ್ದಿ ಬಂದಿದೆ. ಯಾಕೆ ಅನ್ನುವುದಕ್ಕೆ ಈ ವಿಡಿಯೋ ನೋಡಿ

ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡ್ತಾರಂತೆ ಸಿದ್ದರಾಮಯ್ಯ..

ಪ್ರಧಾನಿ ಮೋದಿ ಚೌಕೀದಾರ ಅಲ್ಲ ಬದಲಾಗಿ ಭ್ರಷ್ಟಾಚಾರದ ಭಾಗೀದಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. ಬೀದರ್ ನಲ್ಲಿ ನಡೆಯುತ್ತಿರುವ ಜನಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು ನಾಲ್ಕು ವರ್ಷಗಳ ಬಳಿಕ ಕೇಂದ್ರದ ಬಿಜೆಪಿ ಸರ್ಕಾರದ ಬಂಡವಾಳ ಬಯಲಾಗಿದೆ. ಎಲ್ಲಾ ರಂಗಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಸುಳ್ಳು ಭರವಸೆ ಮತ್ತು ಅಪಪ್ರಚಾರದ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಬಗ್ಗೆ ಜನ ಭ್ರಮನಿರಸನಗೊಂಡಿದ್ದಾರೆ.ಹೀಗಾಗಿ ಜನ ಬದಲಾವಣೆ ಬಯಸುತ್ತಿದ್ದಾರೆ.ಮೋದಿಯವರ ಕುಮ್ಮಕ್ಕಿನಿಂದಲೇ ದೇಶದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಸುಳ್ಳು ಭರವಸೆಗಳ ಮೂಲಕ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಲು ಹೋದ ಮೋದಿಯವರಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಪ್ರಧಾನಿಯವರ ಮನ್ ಕೀ ಬಾತ್ ನಿಂದ ಬಡವರ ಹೊಟ್ಟೆ ತುಂಬದು. ಅವರಿಗೆ ಬೇಕಿರುವುದು ಕಾಮ್ ಕೀ ಬಾತ್. ಇನ್ನು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅನ್ನುವುದು ಕೇವಲ ಮಾತಾಗಿದೆ. ವಿಕಾಸ ಅನ್ನುವುದು ಎಲ್ಲಿದೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ರಾಹುಲ್ ಗಾಂಧಿಯವರು ಪ್ರಧಾನಿಯಾಗಲಿದ್ದಾರೆ. ಬಳಿಕ ಅವರು ರೈತರ ಸಾಲ ಮನ್ನಾ ಮಾಡಲಿದ್ದಾರೆ ಎಂದು ಘೋಷಿಸಿದರು.

ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯದ ಕಳಕಳಿಗೆ ಬಲ ಬರಬೇಕಾದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು ಎಂದು ಇದೇ ವೇಳೆ ಸಿದ್ದರಾಮಯ್ಯ ಮನವಿ ಮಾಡಿದರು.

torrentspree
ಬೀದರ್ ನ ಜನಧ್ವನಿ ಸಮಾರಂಭದಲ್ಲಿ ರಾಹುಲ್ ಗಾಂಧಿ

ಎಲ್ಲಾ ಸರಿ, ತಮ್ಮ ಪರಮೋಚ್ಛ ನಾಯಕನನ್ನು ಪ್ರಧಾನಿಯನ್ನಾಗಿ ನೋಡಬೇಕು ಎಂದು ಬಯಸುವುದರಲ್ಲಿ ತಪ್ಪಿಲ್ಲ. ಆದರೆ ರಾಹುಲ್ ಗಾಂಧಿಯೇ ಪ್ರಧಾನಿ ಹುದ್ದೆಯನ್ನು ತ್ಯಜಿಸಿದ್ದಾರೆ. ತೃತೀಯ ರಂಗದಲ್ಲಿ ಯಾರು ಬೇಕಾದರೂ ಪ್ರಧಾನಿಯಾಗಬಹುದೆಂದು ಹೇಳಿದ್ದಾರೆ ಅಂತಾ ಮಾಧ್ಯಮಗಳು ವರದಿ ಮಾಡಿದೆ. ಹೀಗಾಗಿಯೇ ಮಮತಾ ಬ್ಯಾನರ್ಜಿ, ಮಾಯವತಿ ಸೇರಿದಂತೆ ಅನೇಕ ನಾಯಕರು ಪ್ರಧಾನಿ ಹುದ್ದೆಯ ರೇಸ್ ಟ್ರ್ಯಾಕ್ ನಲ್ಲಿ ನಿಂತಿದ್ದಾರೆ. ಹಾಗಿದ್ದ ಮೇಲೆ ರಾಹುಲ್ ಗಾಂಧಿ ಪ್ರಧಾನಿಯಾಗ್ತಾರೆ ಅನ್ನುವುದು ಎಷ್ಟರ ಮಟ್ಟಿಗೆ ಸರಿ.

ಜನರಲ್ಲಿ ಗೊಂದಲ ಮೂಡಿಸಬೇಡಿ. ಕಾಂಗ್ರೆಸ್ ಅಥವಾ ತೃತೀಯ ರಂಗದ ಪ್ರಧಾನಿ ಅಭ್ಯರ್ಥಿ ಯಾರು ಅನ್ನುವುದನ್ನು ಮೊದಲು ಘೋಷಿಸಿ. ದೇಶವನ್ನು ಮುನ್ನಡೆಸಬಲ್ಲ ಬೆಸ್ಟ್ ಲೀಡರ್ ಯಾರು ಅನ್ನುವುದನ್ನು ಜನ ಆಯ್ಕೆ ಮಾಡುತ್ತಾರೆ. ಅದು ಬಿಟ್ಟು ಕನ್ ಫ್ಯೂಸ್ ಮಾಡುವುದು ಸರಿಯಲ್ಲ.

ಕಿಸ್ಸಿಂಗ್ ವಿಡಿಯೋ ಲೀಕ್…… ಗೀತಾ ಗೋವಿಂದಂ ನಲ್ಲಿ ರಶ್ಮಿಕಾ ಲಿಪ್ ಲಾಕ್ ..?

ಕಿರಿಕ್ ಪಾರ್ಟಿಯಿಂದ ಚಿತ್ರರಸಿಕರ ಮನಗೆದ್ದ, ರಕ್ಷಿತ್ ಶೆಟ್ಟಿ ಮನದನ್ನೆ ಇದೀಗ ಸದಾ ಸುದ್ದಿಯಲ್ಲಿದ್ದಾರೆ. ಅದರಲ್ಲೂ ತೆಲುಗಿನಲ್ಲಿ `ಗೀತಾ ಗೋವಿಂದಂ’ ಚಿತ್ರ ಒಪ್ಪಿಕೊಂಡ ನಂತರ ಅವರ ಸುತ್ತ ಹರಿದಾಡುತ್ತಿರುವ ಸುದ್ದಿಗಳಿಗೆ ಲೆಕ್ಕವಿಲ್ಲ.

ಒಂದು ಹಂತದಲ್ಲಿ ರಕ್ಷಿತ್ ಮತ್ತು ರಶ್ಮಿಕಾ ಅವರಿಗೆ ಡೈವೋರ್ಸ್ ಕೊಡಿಸಿತ್ತು ಸಾಮಾಜಿಕ ಜಾಲತಾಣ. ಕೊನೆಗೆ ಅವರಿಬ್ಬರು ಬಂದು ನಾವಿಬ್ಬರು ಜೊತೆಗಿದ್ದೇವೆ ಅನ್ನಬೇಕಾಯ್ತು.

ಈ ನಡುವೆ `ಗೀತಾ ಗೋವಿಂದಂ’ ಸಿನಿಮಾದ ಟೀಸರ್ ಬಿಡುಗಡೆಗೊಂಡು ಸಿಕ್ಕಾಪಟ್ಟೆ ಫೇಮಸ್ ಆಯ್ತು. ಇದರ ಬೆನ್ನಲ್ಲೇ ಗೀತಾ ಗೋವಿಂದಂನ ಕಿಸ್ಸಿಂಗ್ ದೃಶ್ಯವೊಂದು ಲೀಕ್ ಆಗಿದೆ.

ಡಾರ್ಕ್ ಎಂಬ ಹೆಸರಿನ ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿತ್ತು. ಆದರೆ ಪೊಲೀಸ್ ದೂರು ದೂರು ದಾಖಲಾದ ಬೆನ್ನಲ್ಲೇ ವಿಡಿಯೋ ಡಿಲೀಟ್ ಮಾಡಲಾಗಿದೆ. ಜೊತೆಗೆ ಯೂ ಟ್ಯೂಬ್ ನಲ್ಲಿದ್ದ ವಿಡಿಯೋವನ್ನು ಕೂಡಾ ತೆಗೆದು ಹಾಕಲಾಗಿದ.

ವಿಡಿಯೋದಲ್ಲಿ ರಶ್ಮಿಕಾ ಮತ್ತು ವಿಜಯ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದು, ಈ ವೇಳೆ ರಶ್ಮಿಕಾ ವಿಜಯ್ ಅವರ ತೊಡೆ ಮೇಲೆ ಕುಳಿತು ಅವರಿಗೆ ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ. ಈ ದೃಶ್ಯ ಕೇವಲ 26 ಸೆಕೆಂಡ್ ಗಳಿದ್ದು, ಸಖತ್ ವೈರಲ್ ಆಗಿತ್ತು.

ಜುಲೈ 19ರಂದು ಗೀತಾ ಗೋವಿಂದಂ ಚಿತ್ರದ ಪೋಸ್ಟರ್ ನೋಡಿಯೇ ಅಭಿಮಾನಿಗಳು ಗರಂ ಆಗಿದ್ದರು. ನಟ ವಿಜಯ್ ದೇವರಕೊಂಡ ರಶ್ಮಿಕಾರನ್ನು ತನ್ನ ಬೆನ್ನ ಮೇಲೆ ಎತ್ತಿಕೊಂಡಿರುವ ಪೋಸ್ಟರ್ ನೋಡಿ ಅಭಿಮಾನಿಗಳು ಟ್ರೋಲ್ ಮಾಡಲು ಶುರು ಮಾಡಿದ್ದರು. ರಶ್ಮಿಕಾ ನಿಮಗೆ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಆಗಿದೆ. ನೀವು ಈ ರೀತಿಯ ಸಿನಿಮಾ ಮಾಡಿ ರಕ್ಷಿತ್ ಅವರ ಹೆಸರನ್ನು ಹಾಳು ಮಾಡಬಾರದು ಎಂದು ಸಲಹೆ ಬೇರೆ ಕೊಟ್ಟಿದ್ದರು. ಇದೀಗ ಈ ವಿಡಿಯೋ ನೋಡಿ ಏನು ಅಂತಾರೋ ಗೊತ್ತಿಲ್ಲ.

ಇನ್ನು ವಿಡಿಯೋ ಲೀಕ್ ಸಂಬಂಧಿಸಿದಂತೆ ಹೈದರಬಾದ್ ನಲ್ಲಿ ಕೆಲ ಎಂಜಿನಿಯರ್ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಸ್ಟುಡಿಯೋದಿಂದ ಈ ವಿಡಿಯೋ ಕದ್ದಿದ್ದಾರೆ ಅನ್ನುವ ಪ್ರಾಥಮಿಕ ಮಾಹಿತಿ ಸಿಕ್ಕಿದ್ದು, ವಿಚಾರಣೆ ಮುಂದುವರಿದಿದೆ. ವಿಡಿಯೋ ಹೇಗೆ ಲೀಕ್ ಆಯ್ತ ಅನ್ನುವುದು ತನಿಖೆಯಿಂದ ಬಯಲಾಗಬೇಕಾಗಿದೆ.

 

ಗರ್ಭಿಣಿ ರಾಧಿಕಾ ಫೋಟೋ ವೈರಲ್

ಪ್ರೆಗ್ನೆಂಟ್​ ಆದ ಬಳಿಕ ಇದೇ ಮೊದಲ ಬಾರಿ ರಾಧಿಕಾ ತಮ್ಮ ಉಬ್ಬಿದ ಹೊಟ್ಟೆಯೊಂದಿಗೆ ಸಾಮಾಜಿಕ ಜಾಲ ತಾಣದಲ್ಲಿ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಹೇಗಿದ್ದಾರೆ ಗರ್ಭಿಣಿ ರಾಧಿಕಾ ಎಂದು ನೋಡಲು ಕಾಯುತ್ತಿದ್ದ ಅಭಿಮಾನಿಗಳ ಸಂತಸ ಹೆಚ್ಚಿಸುವಂತೆ ಮಾಡಿದೆ ಈ ಫೋಟೋ.

ತಾಯಿಯಾಗುವ ಖುಷಿಯಲ್ಲಿರುವ ರಾಧಿಕಾ ತಮ್ಮ ಈ ಪೋಸ್ಟ್​ನಲ್ಲಿ ‘ಬೇಬಿ ಬಂಪ್’ ಬಗ್ಗೆಯೂ ಬರೆದುಕೊಂಡಿದ್ದಾರೆ. ಫೋಟೋ ಶೇರ್​ ಆಗುತ್ತಿದ್ದಂತೆ ಶುಭಾಶಯಗಳ ಸುರಿಮಳೆ ಹರಿದು ಬರುತ್ತಿದೆ. ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಿ, ಸೇರಿದಂತೆ ಅನೇಕ ಕಾಳಜಿಯ ಮನವಿಗಳೂ ಬರುತ್ತಿದೆ.

 

ಖಾಕಿ ತೊಟ್ಟ ಖಡಕ್ ಆಫೀಸರ್ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದ್ರ…?

ರೂಪಾ ಡಿ.IPS, ಹೆಸರು ಕೇಳಿದರೆ ಸಾಕು ಒಂದು ಗೌರವ. ಅದಕ್ಕೆ ಕಾರಣ ಮಹಿಳಾ ಅಧಿಕಾರಿ ಮಾಡಿದ ಕೆಲಸ. ಅವರು ಕೆಲಸ ಮಾಡಿದ ಪ್ರತೀ ಸ್ಥಳದಲ್ಲೂ ಮೈಲಿಗಲ್ಲನ್ನು ಸ್ಥಾಪಿಸಿದ ದಿಟ್ಟ ಅಧಿಕಾರಿ. ಅದರಲ್ಲೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಸಾಕ್ಷಿ ಸಮೇತ ಬಯಲಿಗೆಳೆದ ಕಾರಣಕ್ಕೆ ಇಡೀ ಕರ್ನಾಟಕ ಭೇಷ್ ಅನ್ನಿಸಿಕೊಂಡ ಹಿರಿಮೆ ಇವರದ್ದು.

ಆದರೆ ಖಾಕಿ ಸಮವಸ್ತ್ರದೊಂದಿಗೆ ಮಿಂಚುತ್ತಿದ್ದ ಅಧಿಕಾರಿ ರೂಪ ಅವರು ಗೌನ್ ಧರಿಸಿದ ಫೋಟೋ ಒಂದು ಕಾಣಿಕೊಂಡಿದೆ. ಒಂದು ಕ್ಷಣಕ್ಕೆ ನಿಜಕ್ಕೂ ಇವರೇನಾ ಅನ್ನಿಸುವಂತಿದೆ ಫೋಟೋ. ಆದರೆ ಫೋಟೋ ಆಪ್ ಲೋಡ್ ಮಾಡಿದ ಖ್ಯಾತ ಡಿಸೈನರ್​ ಮೀನು ಸರವಣನ್ ರೂಪಾ ಮೇಡಂ ಅವರನ್ನು ಟ್ಯಾಗ್ ಮಾಡಿದ್ದಾರೆ.

ಖ್ಯಾತ ಡಿಸೈನರ್​ ಮೀನು ಸರವಣನ್​ ರೂಪಾ ಅವರ ಕಡು ನೀಲಿ ಬಣ್ಣದ ಗೌನ್  ಅನ್ನು ಡಿಸೈನ್ ಮಾಡಿದ್ದಾರೆ. ರೂಪಾ ಅವರಿಗಾಗಿಯೇ ಈ ಹೊಸ ವಿನ್ಯಾಸವನ್ನು ತಯಾರಿಸಲಾಗಿದೆ ಎನ್ನಲಾಗಿದೆ.

ಹಾಗಾದರೆ ಈ ಫೋಟೋ ಶೂಟ್ ಯಾಕೆ ನಡೆಯಿತು. ರೂಪಾ ಮೇಡಂ ವಾಹಿನಿಯೊಂದಕ್ಕೆ ಏನು ಹೇಳಿದ್ದಾರೆ ನೋಡಿ.

“ ಈ ಫೋಟೋ ಶೂಟ್​ ನೋಡಿ ಪೋಲೀಸ್​ ಕೆಲಸ ತೊರೆಯುತ್ತೇನೆ ಎಂಬ ಅನುಮಾನ ಎಲ್ಲರಿಗೂ ಮೂಡಿದೆ. ಆದರೆ ನನ್ನ ವೃತ್ತಿ ಬಿಟ್ಟು ಮಾಡೆಲಿಂಗ್​ಗೆ ಹೋಗುವುದಿಲ್ಲ. ಆದರೆ ಈ ಮೂಲಕ ಕೇವಲ ಮಾಡೆಲ್ಸ್​ ಹಾಗೂ ನಟಿಯರು ಮಾತ್ರ ಸ್ಟೈಲಿಶ್ ಆಗಿರುವುದಲ್ಲ. ಬದಲಾಗಿ ಓರ್ವ ಸಬಲೀಕೃತ ಮಹಿಳೆಯೂ ಫ್ಯಾಷನೇಬಲ್​ ಆಗಿ ಇರಬಲ್ಲಳು. ಸಾಮಾನ್ಯ ಮಹಿಳೆಯರೂ ಸ್ಟೈಲಿಷ್ ಐಕಾನ್​ ಆಗಬಲ್ಲರು ಎಂಬ ಸಂದೇಶ ನೀಡಬೇಕೆಂದು ನಾನು ಸೇರಿದಂತೆ ಇನ್ನೂ ಮೂರು ನಾಲ್ಕು ಮಂದಿಯಿಂದ ಹೀಗೆ ಫೋಟೋ ಶೂಟ್​ ಮಾಡಿಸಿಕೊಳ್ಳಲಾಗಿದೆ”.  ಡಿ. ರೂಪಾ, ಐಪಿಎಸ್​ ಅಧಿಕಾರಿ

ಮರಣ ಮಳೆ – ನಾಯಿಯೊಂದು ಎಚ್ಚರಿಸದಿದ್ದರೆ ಇಡೀ ಕುಟುಂಬ ಮಣ್ಣಿನಡಿಯಲ್ಲಿ ಸಮಾಧಿಯಾಗುತ್ತಿತ್ತು…

ದೇವರನಾಡಿನಲ್ಲಿ ಸುರಿಯುತ್ತಿರುವ ಮಳೆ ನೋಡಿದರೆ ದೇವರೇ ಮುನಿದುಕೊಂಡನೇ ಅನ್ನುವಂತಿದೆ. ಆಣೆ ಕಟ್ಟುಗಳು ತುಂಬಿ ಹೋಗಿದೆ. ಕೆರೆ ಹಳ್ಳ ಕೊಳ್ಳಗಳಲ್ಲಿ ನೀರು ತುಂಬಲು ಜಾಗವೇ ಇಲ್ಲದಂತಾಗಿದೆ. ನೀರಿನ ಹೊಡೆತ ತಾಳಲಾರದೇ ಗುಡ್ಡಗಳು ಕುಸಿದು ಬೀಳುತ್ತಿದೆ.

ವರುಣನ ಅಬ್ಬರಕ್ಕೆ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೇ ಏರುತ್ತಿದೆ. ಇದೀಗ 37ರ ಗಡಿ ದಾಟಿದೆ. ಈ ನಡುವೆ ನಾಯಿಯೊಂದು ಅನ್ನ ಹಾಕಿದ ಮನೆ ಮಂದಿಯನ್ನು ರಕ್ಷಿಸಿದ ಸುದ್ದಿಯೊಂದು ಬಂದಿದೆ.

ಅದು ಅಗಸ್ಟ್ ತಿಂಗಳ 9. ಇಡುಕ್ಕಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಏನಾಗುತ್ತಿದೆ, ಏನಾಗಲಿದೆ ಅನ್ನುವುದನ್ನು ಊಹಿಸಲು ಸಾಧ್ಯವಿರಲಿಲ್ಲ.ರಕ್ಷಣಾ ಸಿಬ್ಬಂದಿ, ಜಿಲ್ಲಾಡಳಿತ ಅಪಾಯದಲ್ಲಿದ್ದ ಜನರ ಸಹಾಯಕ್ಕೆ ಧಾವಿಸಲು ಸನ್ನದ್ಧರಾಗಿ ನಿಂತಿದ್ದರು.

ಮುಂಜಾನೆ 3 ಗಂಟೆಯ ಸಮಯಕ್ಕೆ ಇಡುಕ್ಕಿಯ ಕಂಜಿಕುಝಿ ಗ್ರಾಮದ ಮೋಹನನ್ ಅವರ ಮನೆಯ ನಾಯಿ ಜೋರಾಗಿ ಬೊಗಳಲು ಪ್ರಾರಂಭಿಸಿದೆ. ಎಚ್ಚರಗೊಂಡ ಮನೆ ಮಾಲೀಕ  ಮಳೆ ಬರುತ್ತಿದೆ ಹೀಗಾಗಿ ಬೊಗಳುತ್ತಿದೆ ಎಂದು ಮತ್ತೆ ಮಲಗಿದ್ದಾರೆ. ಆದರೆ ರಾಕಿ ಬೊಗಳುವುದನ್ನು ನಿಲ್ಲಿಸಲಿಲ್ಲ. ಮತ್ತಷ್ಟು ಜೋರಾಗಿ ಬೊಗಳತೊಡಗಿತು. ಮಾತ್ರವಲ್ಲದೆ ಉಳಿಡಲು ಪ್ರಾರಂಭಿಸಿದ್ದಾರೆ.

ರಾಕಿ ಯಾವತ್ತೂ ಹೀಗೆ ಉಳಿಟ್ಟವನಲ್ಲ, ಏನೋ ಅಪಾಯ ಎಂದು ಮೋಹನನ್ ಹೊರಗೆ ಬಂದಿದ್ದಾರೆ. ನೋಡಿದರೆ ಮನೆ ಪಕ್ಕದ ಗುಡ್ಡದ ಕಡೆ ನೋಡಿ ನಾಯಿ ಬೊಗಳುತ್ತಿತ್ತು. ಜೊತೆಗೆ ಗುಡ್ಡ ನಿಧಾನವಾಗಿ ಸರಿಯುತ್ತಿರುವುದು ಗಮನಕ್ಕೆ ಬಂತು. ಮನೆಯೊಳಗಿನ ಸಾಮಾಗ್ರಿ ತರುವಷ್ಟು ಸಮಯವಿರಲಿಲ್ಲ. ಜೀವ ಉಳಿದರೆ ಸಾಕು ಎಂದು ದೂರ ಸರಿದು ನಿಂತರು. ಕಷ್ಟ ಪಟ್ಟು ಕಟ್ಟಿದ ಮನೆ ಮೇಲೆ ಕಣ್ಣ ಮುಂದೆ ಗುಡ್ಡ ಕುಸಿದು ಬಿತ್ತು.

ಇದೀಗ ಜೀವವುಳಿಸಿದ ರಾಕಿ ಜೊತೆ ಮೋಹನನ್ ಕುಟುಂಬ ನಿರಾಶ್ರಿತರ ಕೇಂದ್ರ ಸೇರಿದೆ. ಮಳೆ ನಿಲ್ಲುವ ತನಕ ಏನೂ ಮಾಡಲು ಸಾಧ್ಯವಿಲ್ಲ. ಸರ್ಕಾರದಿಂದ ಸಿಗುವ ಪರಿಹಾರದ ಮೇಲೆ ಎಲ್ಲವೂ ನಿಂತಿದೆ.

ದೇವರ ಮುಂದೆ ಕನ್ನಡಕ್ಕೆ ಕಿತ್ತಾಟ – ವಿಡಿಯೋ ಅಸಲಿಯೇ ಆದರೆ ಕಥೆ ಬೇರೊಂದಿದೆ…

ಇಂದು ಮುಂಜಾನೆಯಿಂದ ಫೇಸ್ ಬುಕ್ ನಲ್ಲಿ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ನಮ್ಮ ಫೇಸ್ ಬುಕ್ ಪೇಜ್ ನಲ್ಲೂ ಬೆಳ್ಳಂದೂರು ಎಕೋ ಸ್ಪೇಸ್ ಬಳಿ ವೆಂಕಟೇಶ್ವರ ದೇವಾಲಯದಲ್ಲಿ ನಡೆದ ಕನ್ನಡಕ್ಕಾಗಿ ಹೋರಾಟದ ವಿಡಿಯೋ ಹಾಕಿದ್ದೇವೆ. ಆದರೆ ವಿಷಯವನ್ನು ಹೀಗೆ ಬಿಡುವುದು ಸರಿಯಲ್ಲ, ಅಬ್ಬರಿಸುವ ಬದಲು ವಿಷಯ ಏನು ಎಂದು ತಿಳಿದುಕೊಳ್ಳೋಣ ಎಂದು ನಾವು ಹೊರಟಾಗ ಮತ್ತೊಂದು ಕಥೆ ಅನಾವರಣಗೊಂಡಿದೆ.

ಬೆಳ್ಳಂದೂರು ಎಕೋ ಸ್ಪೇಸ್ ಬಳಿ ವೆಂಕಟೇಶ್ವರ ದೇವಾಲಯಕ್ಕೆ ಹೋದ ಕರುನಾಡ ಸೇವಕರು ತಂಡದ ಕನ್ನಡತಿ ಅನು ಅನ್ನುವವರು ತೆಲುಗು ಪೂಜೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆದರೆ ಅಲ್ಲೇ ಇದ್ದ ಕನ್ನಡಿಗರು ಜಾಗೃತಿಯಾಗಿರಲಿಲ್ಲ. ಬದಲಾಗಿ ಕನ್ನಡತಿ ಮೇಲೆ ತಿರುಗಿ ಬಿದ್ದಿದ್ದರು. ಜೊತೆಗೆ ದೇವಸ್ಥಾನದ ಮಂದಿ ಕೂಡಾ ರಂಪಾಟ ಮಾಡಿದ್ದರು. ಇದು ಖಾಸಗಿ ದೇವಸ್ಥಾನ ಅನ್ನುವ ಸಮಜಾಯಿಷಿ ಬೇರೆ ಕೊಟ್ಟಿದ್ದರು.

ಹೀಗಾಗಿ ದೇವಸ್ಥಾನದ ಆಡಳಿತ ಮಂಡಳಿಯನ್ನು ನಾವು ಸಂಪರ್ಕಿಸಿದಾಗ ಅವರು ಮೊದಲು ಹುಡುಗಿಯೇ ಮೇಲೆ ದೂರುಗಳ ಸುರಿಮಳೆಗೈದರು. ದೇವಸ್ಥಾನ ಮುಚ್ಚುವ ಸಮಯವಾಗಿತ್ತು. ಹೀಗಾಗಿ ಅವರು ರಂಪಾಟ ಮಾಡಿದರು ಎಂದರು. ಅವೆಲ್ಲಾ ಬೇರೆ ಕಥೆ. ವಿಡಿಯೋದಲ್ಲಿ ಕನ್ನಡಕ್ಕಾಗಿ ಆಕೆ ದನಿ ಎತ್ತಿದ್ದಾರೆ ಅದರ ಬಗ್ಗೆ ಪ್ರತಿಕ್ರಿಯಿಸಿ ಎಂದಾಗ ನಮ್ಮೊಂದಿಗೆ ಮಾತನಾಡಿದ ಪುರುಷೋತ್ತಮ್ ಅನ್ನುವವರು ( ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ)

“ ಸರ್ ನಮಗೂ ಕನ್ನಡದ ಬಗ್ಗೆ ಪ್ರೀತಿಯಿದೆ, ನಾವು ಕನ್ನಡಿಗರೇ..ಆದರೆ ನಮಗೆ ಕನ್ನಡ ಬರುವು ಆಗಮ ಶಾಸ್ತ್ರ ಪಾಂಡಿತ್ಯ ಪಡೆದ ಅರ್ಚಕರು ಸಿಗುತ್ತಿಲ್ಲ. ಈ ಹಿಂದೆ ಕನ್ನಡದ ಅರ್ಚಕರು ನಮ್ಮಲ್ಲಿದ್ದರು. ಆದರೆ ಅವರು ಬೇರೆ ಕಡೆ ಹೋದರು. ಬಳಿಕ ಕನ್ನಡ ಅರ್ಚಕರಿಗಾಗಿ ನೂರಾರು ದೇವಸ್ಥಾನ ಸುತ್ತಿದ್ದೇನೆ. ಹತ್ತಾರು ಮಂದಿಗೆ ಮನವಿ ಮಾಡಿದ್ದೇನೆ. ಆದರೆ ಯಾರೊಬ್ಬರೂ ಬರಲು ಸಿದ್ದರಿಲ್ಲ. ಸಿದ್ದರಿಲ್ಲ ಅನ್ನುವುದಕ್ಕಿಂತ ಅರ್ಚಕರೇ ಸಿಕ್ಕಿಲ್ಲ ನನಗೆ”

ಅರ್ಚಕರು ಸಿಕ್ಕಿಲ್ಲ ಎಂದು ದೇವಸ್ಥಾನಕ್ಕೆ ಬಾಗಿಲು ಹಾಕುವುದು ಸಾಧ್ಯವಿಲ್ಲ. ಹೀಗಾಗಿ ಅನಿವಾರ್ಯವಾಗಿ ತೆಲುಗು, ತಮಿಳು ಅರ್ಚಕರನ್ನು ನೇಮಿಸಿಕೊಳ್ಳುವ ಅನಿವಾರ್ಯತೆ ನಮಗಿದೆ. ಯಾರಾದರೂ ಕನ್ನಡ ಬರೋ, ಅಗಮಶಾಸ್ತ್ರದಲ್ಲಿ ಪಾಂಡಿತ್ಯ ಪಡೆದ ಅರ್ಚಕರಿದ್ದಾರೆ ತಿಳಿಸಿ. 15 ಸಾವಿರ ಸಂಬಳ, ಉಳಿದುಕೊಳ್ಳಲು ವ್ಯವಸ್ಥೆ, ತಟ್ಟೆ ಹಣದಲ್ಲಿ ಕಮಿಷನ್, ವಿಶೇಷ ಪೂಜೆ, ಅಭಿಷೇಕ,ಹೋಮ ಹವನಗಳು ಬುಕ್ಕಿಂಗ್ ಆದರೆ ಅದರಲ್ಲಿ ಒಂದಿಷ್ಟು ದುಡ್ಡು ಅರ್ಚಕರಿಗೆ ಸೇರುತ್ತದೆ.

ಹೀಗಾಗಿ ನಿಮಗೆ ಗೊತ್ತಿದ್ದರೆ ಕನ್ನಡ ಅರ್ಚಕರನ್ನು ನಮಗೆ ರೆಫರ್ ಮಾಡಿ ಎಂದು ಅವರು ತಮ್ಮ ನಂಬರ್ ಅನ್ನು ಕೂಡಾ ಕೊಟ್ಟಿದ್ದಾರೆ. ಅವರ ಸಂಖ್ಯೆ 8884133226.

ನಿಮಗೇನಾದರೂ ಸೂಕ್ತ ಕನ್ನಡ ಅರ್ಚಕರು ಸಿಕ್ಕರೆ ದಯವಿಟ್ಟು ತಿಳಿಸಿ.

ಹಾಗಂತ ಯುವತಿಯ ಜೊತೆಗೆ ದೇವಸ್ಥಾನದ ಮಂದಿ ವರ್ತಿಸಿದ ರೀತಿ ಸರಿ ಇಲ್ಲ. ಅದಕ್ಕೆ ಅವರು ಕ್ಷಮೆ ಕೇಳಲೇಬೇಕು. ಕನಿಷ್ಠ ಪಕ್ಷ ನಮ್ಮಲ್ಲಿ ಹೇಳಿದ ಸಮಸ್ಯೆಯನ್ನು ಇದೇ ಕನ್ನಡ ಹೋರಾಟಗಾರ್ತಿಗೆ ಮನವರಿಕೆ ಮಾಡಬಹುದಿತ್ತು. ಅದನ್ನು ಮಾಡದೆ ಹಾರಾಡಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅನು ನೇತ್ರಾ ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ.

ದೇವಸ್ಥಾನದಲ್ಲಿ ಏನಾಯ್ತು ಅನ್ನುವುದರ ವಿಡಿಯೋ ಇಲ್ಲಿದೆ