Advertisements

ಚಿತ್ರ ಫ್ಲಾಪ್ ಆದ ಬಳಿಕ ಕಳ್ಳತನಕ್ಕಿಳಿದಿದ್ದ ನಟ ಆರೆಸ್ಟ್

ತೆಲುಗು ಚಿತ್ರರಂಗದ ಹಿರೋ ಮಹೇಶ್ ಹಾಗೂ ಆತನ ಸಹಾಯಕ ಬಾಲಾಜಿ ಅನ್ನುವವರನ್ನು ಕಳ್ಳತನ ಆರೋಪದ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 15 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ 3 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ವಿಕ್ಕಿ ರಾಜ್ ಮತ್ತು ಮಹೇಶ್ ಎಂದು ಗುರುತಿಸಲಾಗಿದೆ.

ರಂಗಾರೆಡ್ಡಿ ಜಿಲ್ಲೆಯ ಇವರಿಬ್ಬರು ಬಾಲ್ಯ ಸ್ನೇಹಿತರಾಗಿದ್ದರು. ಈ ವೇಳೆಯೇ ಇವರಿಗೆ ಸಿನಿಮಾ ಹುಚ್ಚು ಹಿಡಿದಿತ್ತು. ಹೀಗಾಗಿ ಚಿತ್ರರಂಗದಲ್ಲಿ ಕೆಲಸವನ್ನೂ ಕೂಡಾ ಮಾಡುತ್ತಿದ್ದರು. ಬಳಿಕ ಇವರಿಬ್ಬರು ಸೇರಿ ನಿವಿರು ಅನ್ನುವ ಚಿತ್ರವನ್ನು ಕಳೆದ ವರ್ಷ ನಿರ್ಮಿಸಿದ್ದರು.

ಆದರೆ ಚಿತ್ರ ಕೈ ಹಿಡಿಯಲಿಲ್ಲ,ತೆಲುಗಿನ ನಿವಿರು ಚಿತ್ರ ಫ್ಲಾಪ್ ಆಗಿತ್ತು. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮಹೇಶ್ ಕಳ್ಳತನಕ್ಕೆ ಇಳಿದಿದ್ದರು.

ಮಹೇಶ್ ಹಗಲಿನಲ್ಲಿ ಕೇಬಲ್ ಆಪರೇಟರ್ ಸೋಗಿನಲ್ಲಿ ಮನೆಗಳನ್ನು ಸುತ್ತಾಡುತ್ತಿದ್ದ, ರಾತ್ರಿ ಬೀಗ ಹಾಕಿರಬಹುದಾಗಿದ್ದ ಮನೆಗಳನ್ನು ನೋಟ್ ಮಾಡಿಕೊಳ್ಳುತ್ತಿದ್ದ. ಬಳಿಕ ರಾತ್ರಿಯಾಗುವುದನ್ನೇ ಕಾಯುತ್ತಿದ್ದ ಇವರಿಬ್ಬರು ಕಳ್ಳತನ ಮಾಡುತ್ತಿದ್ದರು.
ಇನ್ನು ವಿಕ್ಕಿ ಇದಕ್ಕೂ ಮುನ್ನ 2016 ರಲ್ಲಿ ಕಳ್ಳತನ ಪ್ರಕರಣದಲ್ಲಿ ಸಿಲುಕಿ ಜೈಲು ಪಾಲಾಗಿದ್ದ. ಪೊಲೀಸರು ರೌಂಡ್ಸ್ ಹೊಡೆಯುವ ಸಂದರ್ಭದಲ್ಲಿ ಅವರಿಬ್ಬರು ಅನುಮಾನಸ್ಪದವಾಗಿ ತಿರುಗಾಡುತ್ತಿದ್ದರು. ಆಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು.

nivuru_

Advertisements

ಸ್ವಾತಂತ್ರ್ಯೋತ್ಸವದ ದಿನದಂದೇ ಕಣ್ಣೀರು ಹಾಕಿದ ವಿದ್ಯಾರ್ಥಿಗಳು….

ದೇಶದೆಲ್ಲೆಡೆ 72ನೇ ಸ್ವಾತಂತ್ರ್ಯ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಆದರೆ ಧಾರವಾಡದ ಪ್ರೆಸೆಂಟೆಷನ್ ಸ್ಕೂಲ್ ಮಕ್ಕಳಿಗೆ ಇದು ಎಂದಿಗೂ ಮರೆಯಲಾಗದ ಸ್ವಾತಂತ್ರ್ಯ ದಿನ. ಜೀವನಪೂರ್ತಿ ನೆನಪಿಟ್ಟುಕೊಳ್ಳುವಂತ ಕೊಡುಗೆಯೊಂದನ್ನು ಪಡೆದ ದಿನ.

ಧಾರವಾಡದ ಪ್ರೆಸೆಂಟೆಷನ್ ಸ್ಕೂಲ್ ಮಕ್ಕಳ ಬ್ಯಾಂಡ್ ತಂಡದ ಸಾಧನೆಯನ್ನು ಕಂಡ ಜಿಲ್ಲಾಧಿಕಾರಿ ಮಂಗಳವಾರ ಪಥ ಸಂಚಲನದಲ್ಲಿ ಬ್ಯಾಂಡ್ ಬಾರಿಸಲು ಅನುಮತಿ ನೀಡಿದ್ದರಂತೆ. ಆದರೆ RN ಶೆಟ್ಟಿ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಪಥ ಸಂಚಲನದಲ್ಲಿ ಬ್ಯಾಂಡ್ ಬಾರಿಸಲು ಪೊಲೀಸ್ ಬ್ಯಾಂಡ್ ತಂಡವು ಪ್ರೆಸೆಂಟೆಷನ್ ಸ್ಕೂಲ್ ಮಕ್ಕಳ ಬ್ಯಾಂಡ್ ತಂಡಕ್ಕೆ ಅನುಮತಿಯನ್ನೇ ಕೊಡಲಿಲ್ಲ.

ಇದರಿಂದ ತೀವ್ರಗೊಂಡ ಮಕ್ಕಳು ಕಣ್ಣೀರು ಹಾಕುತ್ತಾ ಹೊರ ಬಂದಿದ್ದಾರೆ. ಡಿಸಿ ಆಹ್ವಾನದ ಮೇರೆಗೆ ಎಲ್ಲಾ ತಯಾರಿ ಮಾಡಿಕೊಂಡು ಬಂದ ಮಕ್ಕಳು ಪೊಲೀಸರ ವರ್ತನೆಯಿಂದ ತೀವ್ರ ನೊಂದುಕೊಂಡಿದ್ದಾರೆ.

ಹಾಗಾದರೆ ಇಂತಹುದೊಂದು ಎಡವಟ್ಟು ನಡೆಯಲು ಕಾರಣವೇನು.. ಪೊಲೀಸ್ ಮುಖ್ಯಸ್ಥರು ಅಥವಾ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಬೇಕು. ಮೇಲ್ನೋಟಕ್ಕೆ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆ ಕಾರಣ ಅನ್ನಿಸುತ್ತಿದೆ. ತಪ್ಪಾಗಿದೆ ಅನ್ನುವುದಾದರೆ ಅಧಿಕಾರಿಗಳು ಯಾರೇ ಇರಲಿ, ಎಷ್ಟೇ ದೊಡ್ಡವರು ಇರಲಿ ಮಕ್ಕಳ ಕ್ಷಮೆ ಕೇಳಲೇಬೇಕು. ಇಲ್ಲವಾದರೆ ಇಂಥಹುದೊಂದು ಎಡವಟ್ಟು ಯಾಕೆ ನಡೆಯಿತು ಅನ್ನುವುದನ್ನು ವಿವರಿಸಬೇಕು.

ಅಪ್ಪನಾದ ರಘು – ಅನು ಪ್ರಭಾಕರ್ ಇನ್ಮುಂದೆ ಹೆಣ್ಣುಮಗಳ ತಾಯಿ

ನಟಿ ಅನುಪ್ರಭಾಕರ್​ ಇಂದು ಹೆಣ್ಣು ಮಗುವಿ ತಾಯಿಯಾಗಿದ್ದಾರೆ. ಈ ವಿಷಯವನ್ನು ಅನು ಪ್ರಭಾಕರ್ ಪತಿ ರಘುಮುಖರ್ಜಿ ಟ್ವೀಟ್​ ಮಾಡುವ ಮೂಲಕ ತಿಳಿಸಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದಾರೆಂದು ಕುಟುಂಬ ಮೂಲಗಳು ತಿಳಿಸಿವೆ.

ಅನುಪ್ರಭಾಕರ್​ ಗರ್ಭಿಣಿಯಾಗಿದ್ದಾಗಿನಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಸಿಕ್ಕಾಪಟ್ಟೆ ಫೋಟೋ ಶೇರ್ ಮಾಡುತ್ತಿದ್ದರು. ಇನ್ನು ರಘು ಮುಖರ್ಜಿ ಟ್ವೀಟ್ ಪ್ರತಿಕ್ರಿಯಿಸಿರುವ ಅನೇಕ ಮಂದಿ ಸಂತಸ ವ್ಯಕ್ತಪಡಿಸಿದ್ದಾರೆ.

 

ಮೂರನೇ ಮಗುವಿನ ನಿರೀಕ್ಷೆಯಲ್ಲಿ ರಂಭಾ – ಸೀಮಂತದಲ್ಲಿ ಸಖತ್ ಸೆಫ್ಟ್

ಸೌತ್​ ಇಂಡಿಯಾದ ಲಕ್ಕಿ ಹೀರೋಯಿನ್ ಎಂದೇ ಕರೆಯಲ್ಪಡುವ ರಂಭಾ ಈಗ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.  ಈಗಾಗಲೇ ಇಬ್ಬರು ಮುದ್ದಾದ ಹೆಣ್ಣು ಮಕ್ಕಳ ತಾಯಿಯಾಗಿರುವ ರಂಭಾ ಮೂರನೇ ಮಗುವಿಗೆ ಜನ್ಮ ನೀಡಲು ಸಿದ್ಧರಾಗಿದ್ದಾರೆ.

ಇದರ ಅಂಗವಾಗಿ ಸೀಮಂತ ಕಾರ್ಯಕ್ರಮ  ಕೆನಡಾದಲ್ಲಿ ನಡೆದಿದ್ದು, ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಆಂಧ್ರದ ಚೆಲುವೆ ಈಗ ಸಿನಿಮಾದಿಂದ ದೂರ ಉಳಿದಿದ್ದು, ಪತಿ ಇಂದ್ರಕುಮಾರ್​ ಜತೆ ಕೆನಡಾದಲ್ಲಿ ಸೆಟಲ್​ ಆಗಿದ್ದಾರೆ.

ನನಗೆ ಈಗಾಗಲೇ ವಿವಾಹವಾಗಿದೆ…ರಾಹುಲ್ ಗಾಂಧಿಯೇ ಬಹಿರಂಗಪಡಿಸಿದ ಸತ್ಯ..

ರಾಹುಲ್ ಗಾಂಧಿ ಮದುವೆಯ ಬಗ್ಗೆ ಚರ್ಚೆಯಾದಷ್ಟು ಭಾರತದ ಮತ್ಯಾವ ರಾಜಕಾರಣಿಯ ಮದುವೆಯ ಬಗ್ಗೆ ಚರ್ಚೆಯಾಗಿಲ್ಲ. ಕೆಲವರಿಗೆ ರಾಹುಲ್ ಮದುವೆ ಟೀಕೆಯ ವಿಷಯವಾದರೆ, ಮತ್ತೆ ಹಲವರಿಗೆ ಕಾಳಜಿಯ ವಿಷಯ.

ಆದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ವಿವಾಹದ ಬಗ್ಗೆ ಪ್ರಸ್ತಾಪವಾದ ವೇಳೆ ಅದರಿಂದ ಜಾಣ್ಮೆಯಿಂದ ಜಾರಿಕೊಳ್ಳುತ್ತಿದ್ದರು. ಆದರೆ ಹಿಂದೊಮ್ಮೆ ನಾನು ಹಣೆ ಬರಹದ ಮೇಲೆ ನಂಬಿಕೆ ಇಟ್ಟವನು ಎಂದು ತಮ್ಮ ಮದುವೆ ಬಗ್ಗೆ ಪ್ರಶ್ನೆ ಕೇಳಿದವರಿಗೆ ಉತ್ತರಿಸಿದ್ದರು.ಆದರೆ ಇದೀಗ ಈ ಬಗ್ಗೆ ಸ್ವತಃ ರಾಹುಲ್ ಗಾಂಧಿಯೇ ಸ್ಪಷ್ಟನೆ ನೀಡಿದ್ದಾರೆ.

ಆಗಸ್ಟ್ 14 ರಂದು ಹೈದರಾಬಾದ್ ನಲ್ಲಿ ಆಯೋಜಿಸಲಾಗಿದ್ದ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಮಾತನಾಡಿರುವ ರಾಹುಲ್ ಗಾಂಧಿಗೆ ಪತ್ರಕರ್ತರು “ನಿಮ್ಮ ವಿವಾಹದ ಯೋಜನೆಯೇನು?” ಎಂದು ಪ್ರಶ್ನಿಸಿದ್ದಾರೆ.

ಆಗ ಉತ್ತರಿಸಿರುವ ರಾಹುಲ್ ಗಾಂಧಿ, ನಾನು ಈಗಾಗಲೇ ವಿವಾಹವಾಗಿದ್ದೇನೆ, ನನ್ನ ಪಕ್ಷದೊಂದಿಗೆ ನನ್ನ ವಿವಾಹವಾಗಿದೆ (I am married to Congress) ಎಂದು ಹೇಳಿದ್ದಾರೆ.

ಅಂದರೆ ರಾಹುಲ್ ಗಾಂಧಿ ಮದುವೆಯಾಗುವುದಿಲ್ಲ, ಬ್ರಹ್ಮಚಾರಿಯಾಗಿ ಇರುತ್ತಾರೆ ಎಂದು ಅರ್ಥವೇ ಗೊತ್ತಿಲ್ಲ.
ಇಲ್ಲೊಂದು ವಿಡಿಯೋ ಇದೆ. ಯೂಟ್ಯೂಬ್ ಚಾನೆಲ್ ಮಂದಿ ರಾಹುಲ್ ಗಾಂಧಿ ಮದುವೆ ಬಗ್ಗೆ ಹುಡುಗಿಯರ ಮುಂದೆ ಮೈಕ್ ಹಿಡಿದಿದ್ದಾರೆ. ಉತ್ತರ ಕೇಳಿ ನಕ್ಕು ಹಗುರಾಗಿ.

ಮಗಳು ಜಾನಕಿ ಬಗ್ಗೆ ನಿಮಗೆಷ್ಟು ಗೊತ್ತು…?

ಟಿಎನ್ ಸೀತಾರಾಂ ನಿರ್ದೇಶನದ ಮಗಳು ಜಾನಕಿ ನಿರೀಕ್ಷಿತ ಟಿ ಆರ್ ಪಿಯನ್ನು ತಂದುಕೊಟ್ಟಿಲ್ಲ.ಆದರೆ ಬಲು ಜನಪ್ರಿಯತೆ ಪಡೆದಿದೆ. ಕಲರ್ಸ್ ಸೂಪರ್ ವಾಹಿನಿ ರಾಜ್ಯದ ಎಲ್ಲಾ ಭಾಗಗಳಲ್ಲಿ ಬರುತ್ತಿದ್ದರೆ ದಾಖಲೆಯ TRPಯನ್ನು ಧಾರಾವಾಹಿ ಪಡೆಯುತ್ತಿತ್ತು. ಅಥವಾ ಇದೇ ಧಾರಾವಾಹಿಯನ್ನು ಕಲರ್ಸ್ ವಾಹಿನಿಯಲ್ಲಿ ಹಾಕಿದ್ದರೆ ಚೆನ್ನಾಗಿತ್ತು.

ಆದರೂ ಪರವಾಗಿಲ್ಲ TRP ತಂದುಕೊಟ್ಟಿಲ್ಲವಾದರೂ ಧಾರಾವಾಹಿ ದೊಡ್ಡ ಮಟ್ಟದಲ್ಲಿ ಜನಪ್ರಿಯವಾಗಿದೆ. ಅತ್ತೆ ಸೊಸೆ ಜಗಳ, ಹಾವುಗಳ ಕಥೆ ನೋಡಿದ ಮಂದಿ ಮನಸ್ಸಿಗೆ ಮಗಳು ಜಾನಕಿ ಮುದ ನೀಡಿದೆ ಅನ್ನುವುದು ಸತ್ಯ.

ಇಲಿ ಬೇಕಾ ಇಲಿ – ಇಂದಿರಾ ಕ್ಯಾಂಟೀನ್ ನಲ್ಲಿ ಇಲಿ

ಇಂದಿರಾ ಕ್ಯಾಂಟೀನ್ ಪ್ರಾರಂಭವಾದಗಲೇ ಕ್ಯಾತೆ ಪ್ರಾರಂಭವಾಗಿತ್ತು.ಆದರೆ ಅದನ್ನು ಅದ್ಭುತವಾಗಿ ನಡೆಸುತ್ತೇವೆ ಎಂದು ಸಿದ್ದರಾಮಯ್ಯ ಬೀಗಿದ್ದರು.ಆದರೆ ಕ್ಯಾಂಟೀನ್ ಪ್ರಾರಂಭವಾದ ಕೆಲವೇ ದಿನಗಳಲ್ಲಿ ನಿಜ ಬಣ್ಣ ಬಯಲಾಗಿತ್ತು.

ಕ್ಯಾಂಟೀನ್ ಗಳಿಗೆ ಶುಚಿಯಾದ ಅಡುಗೆ ಮನೆ ತಯಾರಿಸುತ್ತೇವೆ ಅಂದವರು ಪ್ಯಾಲೇಸ್ ಗ್ರೌಂಡ್ ನಲ್ಲಿ ಆಹಾರ ತಯಾರಿಸಿ ಚಾನೆಲ್ ಒಂದರ ರಿಯಾಲಿಟಿ ಚೆಕ್ ನಲ್ಲಿ ಸಿಕ್ಕಿ ಬಿದ್ದಿದ್ದರು.

ಇದೇ ವೇಳೆ ಇಂದಿರಾ ಕ್ಯಾಂಟೀನ್ ನಲ್ಲಿ ಭಾರೀ ಪ್ರಮಾಣದ ಅವ್ಯವಹಾರ ಕೂಡಾ ಬಯಲಾಗಿದೆ. ಬೆಂಗಳೂರು ಬಂದ್ ಇದ್ದರೂ ಭರ್ಜರಿ ವ್ಯಾಪಾರ ಲೆಕ್ಕ ಕೊಟ್ಟು ಬೊಕ್ಕಸಕ್ಕೆ ದೋಖಾ ಮಾಡಲಾಗಿತ್ತು.

ಇನ್ನು ಚುನಾವಣೆ ಘೋಷಣೆಯಾಗುತ್ತಿದ್ದಂತೆ ಇಂದಿರಾ ಕ್ಯಾಂಟೀನ್ ಆಹಾರದ ಗುಣಮಟ್ಟವೂ ಕೆಟ್ಟು ಹೋಗಿತ್ತು.

ಇದೀಗ ಇಂದಿರಾ ಕ್ಯಾಂಟೀನ್ ಸಾಂಬಾರ್ ನಲ್ಲಿ ಇಲಿ ಪತ್ತೆಯಾಗಿತ್ತು. ಇಂದಿರಾ ಕ್ಯಾಂಟೀನ್ ಆಹಾರದ ಗುಣಮಟ್ಟಕ್ಕೆ ಸಾಕ್ಷಿ ಸಿಕ್ಕಿದೆ.
ಗಾಯತ್ರಿ ನಗರ ವಾರ್ಡ್ನ ಇಂದಿರಾ ಕ್ಯಾಂಟೀನ್ನಿಂದ ಪೌರ ಕಾರ್ಮಿಕರಿಗೆ ಪೂರೈಸುವ ಆಹಾರದಲ್ಲಿ ಇಲಿ ಸಿಕ್ಕಿದ್ದು ಈಗ ಆಹಾರದ ಗುಣಮಟ್ಟದ ಬಗ್ಗೆ ಅನುಮಾನ ಹುಟ್ಟಿದೆ.

ಸಾಂಬಾರ್ನಲ್ಲಿ ಇಲಿಯನ್ನು ಕಂಡ ಪೌರಕಾರ್ಮಿಕರು ಕೂಡಾ ಆತಂಕಿತರಾಗಿದ್ದು, ಹೀಗೆ ಅದೆಷ್ಟು ದಿನದಿಂದ ಆಹಾರ ಪೂರೈಸುತ್ತಿದ್ದರೋ ಎಂದು ಪ್ರಶ್ನಿಸಿದ್ದಾರೆ.

ಇನ್ನು ಘಟನೆ ಸಂಬಂಧ ಆಹಾರ ಪೂರೈಸುವ ಚೆಫ್ ಟಾಕ್ ಸಂಸ್ಥೆ ವಿರುದ್ಧ ಇಇ ಸುಷ್ಮಾ ಜಂಟಿ ಆಯುಕ್ತರಿಗೆ ದೂರು ನೀಡಿದ್ದಾರೆ.

ಲೋಕಾ ಅಖಾಡಕ್ಕೆ ಉಪೇಂದ್ರ – ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ರಿಯಲ್ ಸ್ಟಾರ್

ಉಪೇಂದ್ರ ರಾಜಕೀಯ ಪ್ರವೇಶ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ ನಂಬಿದವರೇ ಕೈ ಕೊಟ್ಟ ಕಾರಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕನಸು ನನಸಾಗಿರಲಿಲ್ಲ.

ಹೀಗೆ ಮತ್ತೊಮ್ಮೆ ರಾಜಕಾರಣದ ರಂಗ ಪ್ರವೇಶಕ್ಕೆ ರಿಯಲ್ ಸ್ಟಾರ್ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಕಳೆದ ಬಾರಿ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಮೂಲಕ ರಾಜಕಾರಣ ಪ್ರವೇಶಿಸಿದ್ದ ಉಪೇಂದ್ರ, ನಿಶ್ಚಿತಾರ್ಥಕ್ಕೂ ಮುನ್ನವೇ ಡಿವೋರ್ಸ್ ಅನ್ನುವಂತೆ ಆ ಪಕ್ಷದಿಂದ ಹೊರಬಂದಿದ್ದರು.

ಈಗ ಹೊಸ ಪಕ್ಷವೊಂದನ್ನು ಹುಟ್ಟು ಹಾಕಲು ಸಿದ್ದವಾಗಿರುವ ಉಪೇಂದ್ರ ‘ಉತ್ತಮ ಪ್ರಜಾಕೀಯ’ ಎಂಬ ಪಕ್ಷವನ್ನು ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಎಂಟ್ರಿ ಕೊಡಲಿರುವ ಉಪೇಂದ್ರ, ಸೆಪ್ಟಂಬರ್ 18ರ ತಮ್ಮ ಹುಟ್ಟುಹಬ್ಬದಂದು ಹೊಸ ಪಕ್ಷದ ಕುರಿತು ಮಾಹಿತಿ ನೀಡಲಿದ್ದಾರೆ. ಅಂದೇ ಪಕ್ಷದ ಚಿಹ್ನೆಯೂ ಬಿಡುಗಡೆಯಾಗಲಿದೆ.

ಈ ನಡುವೆ ಲೋಕಸಭೆ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಉಪೇಂದ್ರ ತಾವು ಲೋಕಸಭೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಬೆಂಗಳೂರಿನ ಕ್ಷೇತ್ರವೊಂದರ ಮೇಲೆ ಕಣ್ಣಿಟ್ಟಿರುವ ಅವರು ಗೆಲುವಿಗಾಗಿ ರಣತಂತ್ರ ಹೆಣೆಯುತ್ತಿದ್ದಾರೆ.

ಮೂಲಗಳ ಪ್ರಕಾರ ಉಪೇಂದ್ರ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಗಳಿವೆಯಂತೆ.

Uppi

Protocol ಸ್ವಾರಸ್ಯ – ಶಿಷ್ಟಾಚಾರದ ಬಂಧಿಯಾದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗುತ್ತಾರೆ ಅಂದಾಗ ಸಾಧನೆಗೆ ಸಂದ ಗೌರವ ಎಂದು ದೇಶ ಹೆಮ್ಮೆ ಪಟ್ಟಿತ್ತು. ಆದರೆ ವೆಂಕಯ್ಯ ನಾಯ್ಡು ಅವರಿಗೆ ಇದು ಸಂತೋಷ ಮತ್ತು ನೋವಿನ ದಿನಗಳಾಗಿತ್ತು. ಯಾಕೆ ಅನ್ನುವುದನ್ನು ಅವರೇ ಹೇಳಿದ್ದಾರೆ

“ ನಾನು ಉಪರಾಷ್ಟ್ರಪತಿಯಾಗುತ್ತಿದ್ದೇನೆ ಅನ್ನುವ ಸುದ್ದಿ ಸಿಕ್ಕಾಗ ನನ್ನ ಕಣ್ಣಲ್ಲಿ ನೀರು ಹರಿಯಿತು. ನನ್ನ ಜೊತೆಗಿದ್ದವರಿಗೆ ಹೇಳಿದೆ ನಾಳೆಯಿಂದ ನಾನು ಪಕ್ಷದ ಕಚೇರಿಗೆ ಹೋಗುವಂತಿಲ್ಲ. ಪಕ್ಷ ಅನ್ನುವುದು ನನಗೆ ತಾಯಿಯಂತೆ. ಹೀಗಾಗಿ ಪಕ್ಷ ಬಿಟ್ಟು ಬರಬೇಕಾದರೆ ನಾನು ನಿನ್ನ ಬಳಿ ಇನ್ನು ಮುಂದೆ ಬರುವುದಿಲ್ಲ. ನಿನ್ನ ಭೇಟಿಯಾಗುವುದಿಲ್ಲ. ನಿನ್ನ ಜೊತೆ ಮಾತನಾಡುವುದಿಲ್ಲ ಎಂದು ಹೇಳಿ ಬಂದೆ”

ದಿಲ್ಲಿಯ ಮೌಲಾನಾ ಆಜಾದ್ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ದಕ್ಷಿಣ ಭಾರತದ ಪತ್ರಕರ್ತರಿಗಾಗಿ ಆಯೋಜಿಸಲಾಗಿದ್ದ ಔತಣ ಕೂಟದ ನಂತರ ಮಾತನಾಡಿದ ಅವರು ಉಪರಾಷ್ಟ್ರಪತಿ ಹುದ್ದೆಗೆ ಏರಿದ ನಂತರದ ಅನುಭವಗಳನ್ನು ಹಂಚಿಕೊಂಡರು.

“ ನನಗೆ ಜನರೊಂದಿಗೆ ವಿಮಾನ ಪ್ರಯಾಣ ಮಾಡುವಾಸೆ. ಆದರೆ ಭದ್ರತೆ ದೃಷ್ಟಿಯಿಂದ ಮಿಲಿಟರಿ ವಿಮಾನದಲ್ಲೇ ಓಡಾಡಬೇಕು. ಒಂದು ವೇಳೆ ಕಮರ್ಷಿಯಲ್ ವಿಮಾನ ಹತ್ತಿದರೆ 24 ಮಂದಿ ವೈದ್ಯರು, ಭದ್ರತಾ ಸಿಬ್ಬಂದಿ ಬರುತ್ತಾರೆ.ಅವರ ಟಿಕೆಟ್ ಖರ್ಚನ್ನು ಸರ್ಕಾರ ಹೊರಬೇಕಾಗುತ್ತದೆ. ನಾನು ಪ್ರಯಾಣಿಸಬೇಕಾದರೆ ಮೂರು ಹೆಲಿಕಾಫ್ಟರ್ ಬರುತ್ತದೆ ಒಂದು ಎಲ್ಲವೂ ಸರಿ ಇದೆಯೇ ಎಂದು ಪರಿಶೀಲಿಸಲು, ಮತ್ತೊಂದು ನಾನು ಕೂರಲು ಇನ್ನೊಂದು ಹೆಚ್ಚು ಕಡಿಮೆಯಾದರೆ ನನ್ನ ಬಾಡಿ ಒಯ್ಯಲು”

ಇದೇ ವೇಳೆ ಮೋದಿಯೊಂದಿಗೆ ಕಣ್ಸನ್ನೆಯಲ್ಲೇ ಮಾತನಾಡಿದ ಸ್ವಾರಸ್ಯಕರ ಘಟನೆಯೊಂದನ್ನು ಉಪರಾಷ್ಟ್ರಪತಿಗಳು ಇದೇ ವೇಳೆ ವಿವರಿಸಿದ್ದಾರೆ.
“ ಸಂಸತ್ತಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ವೇಳೆ ಪ್ರಧಾನಿ ಮೋದಿ ನನ್ನ ಹಿಂದೆ ನಿಂತಿದ್ದರು. ಅವರು ನನ್ನನ್ನೇ ನೋಡುತ್ತಿರುವುದನ್ನು ನಾನು ಗಮನಿಸಿದೆ. ಏನೋ ಮಾತು ಹೇಳಲು ಬಯಸುತ್ತಿದ್ದಾರೆ ಎಂದು ಕಣ್ಸನ್ನೆಯಲ್ಲೇ ಕೇಳಿದೆ. ಆಗ ಅವರು ನೀವು ಹೋಗದೆ ನಾವು ಹೋಗುವಂತಿಲ್ಲ. ಹೀಗಾಗಿ ನೀವು ಹೊರಡುವುದನ್ನು ನಾವು ಕಾಯುತ್ತಿದ್ದೇವೆ” ಎಂದರಂತೆ

venkaiah naidu2

ವೆಂಕಯ್ಯ ನಾಯ್ಡು ಮಾತಿನುದ್ದಕ್ಕೂ ಗೊತ್ತಾಗಿದ್ದು, ಶಿಷ್ಟಚಾರದಿಂದ ಅವರು, ಅವರ ಕುಟುಂಬ ಸಿಕ್ಕಾಪಟ್ಟೆ ಕಿರಿಕಿರಿ ಅನುಭವಿಸಿತ್ತು. ಈಗಷ್ಟೇ ಹೊಸ ಜೀವನಶೈಲಿಗೆ ಅವರು ಹೊಂದಿಕೊಳ್ಳುತ್ತಿದ್ದಾರೆ. ಹೇಳಿ ಕೇಳಿ ವೆಂಕಯ್ಯ ನಾಯ್ಡು ಅವರು ಮಾತಿನ ಮಂಟಪ ಕಟ್ಟುವ ಕಲೆ ಕರಗತ ಮಾಡಿಕೊಂಡವರು, ಅವರು ಮಾತನಾಡಲು ನಿಂತರೆ ಬೋರ್ ಹೊಡೆಸುವುದೇ ಇಲ್ಲ.

ಉಪರಾಷ್ಟ್ರಪತಿಯಾಗುವ ತನಕವೂ ಅವರು ಮಾತನಾಡುತ್ತಲೇ ಇದ್ದರು. ಆದರೆ ದೇಶದ ಎರಡನೇ ಪ್ರಜೆ ಅನ್ನುವ ಗೌರವ ಅವರ ಮಾತುಗಳಿಗೆ ಕಡಿವಾಣ ಹಾಕಿಸಿದೆ.

ಉಪರಾಷ್ಟ್ರಪತಿಗಳು ಅದೆಷ್ಟರ ಮಟ್ಟಿಗೆ ಶಿಷ್ಟಚಾರದ ಬಂಧಿ ಅಂದರೆ, ವೆಂಕಯ್ಯ ನಾಯ್ಡು ಎಲ್ಲೆಲ್ಲಿ ಕೂರುತ್ತಾರೋ ( ಬೆಡ್ ರೂಂ, ಡ್ರಾಯಿಂಗ್ ರೂಂ, ರೀಡಿಂಗ್ ರೂಂ, ಕಿಚನ್, ವಾಶ್ ರೂಂ) ಹೀಗೆ ಎಲ್ಲಾ ಕಡೆ ಅವರಿಗೆ ಕೈಗೆಟುಕುವಂತೆ ಕೆಂಪು ಬಟನ್ ಇಟ್ಟಿರುತ್ತಾರೆ. ಅದನ್ನು ಒತ್ತಿದರೆ ಸಾಕು ಎರಡು ನಿಮಿಷದಲ್ಲಿ ಆಂಬ್ಯುಲೆನ್ಸ್ ಮನೆ ಬಾಗಿಲಿಗೆ ಬರುತ್ತದೆ. ಎಂಟು ನಿಮಿಷದಲ್ಲಿ ಏಮ್ಸ್ ಆಸ್ಪತ್ರೆಗೆ ತಲುಪಿಸುತ್ತಾರೆ. ನಾನು ಫಿಟ್ ಆಗಿದ್ದೇನೆ ಎಂದು ಹೇಳಿದರೂ ಜೊತೆಗಿರುವ ನಾಲ್ಕು ವೈದ್ಯರು ಕೇಳುವುದಿಲ್ಲ. ನಿತ್ಯ ಆರೋಗ್ಯ ಪರೀಕ್ಷೆ ಕಡ್ಡಾಯವಾಗಿ ನಡೆಯುತ್ತದೆ.

ಉಪರಾಷ್ಟ್ರಪತಿಗಳ ಮಾತು ಕೇಳುತ್ತಿದ್ದರೆ ಹುದ್ದೆಯೊಳಗಿನ ಸಂಕಷ್ಟ ಹೇಗಿರಬಹುದು ಊಹಿಸಿ.

venkaiah naidu1

ಬಸವಣ್ಣ ವಚನವೂ ಇಲ್ಲ… ಕನ್ನಡದ ಸಹವಾಸಕ್ಕೆ ಹೋಗದ ರಾಹುಲ್…

ಕರ್ನಾಟಕಕ್ಕೆ ಕಾಲಿಟ್ಟರೆ ಸಾಕು, ರಾಷ್ಟ್ರ ಮಟ್ಟದ ರಾಜಕಾರಣಿಗಳಿಗೆ ಕರ್ನಾಟಕದ ಸಾಧಕರು ನೆನಪಾಗಿ ಬಿಡುತ್ತಾರೆ. ಕನ್ನಡ ಮೇಲೆ ಪ್ರೀತಿ ಉಕ್ಕಿ ಹರಿಯುತ್ತದೆ. ಆದರೆ ಅವೆಲ್ಲವೂ ನಾಟಕ ಅನ್ನುವುದಕ್ಕೆ ಅವರ ಉಚ್ಛಾರಣೆಯೇ ಸಾಕ್ಷಿಯಾಗಿರುತ್ತದೆ.

ಈ ಹಿಂದೆ ಮೋದಿ, ರಾಹುಲ್ ಗಾಂಧಿ ಸಾಧಕರ ಹೆಸರು ಹೇಳಲು ಹೋಗಿ ಎಡವಟ್ಟು ಮಾಡಿಕೊಂಡಿದ್ದರು. ಹಿಂದೆ ಉಚ್ಛಾರಣೆಯಲ್ಲಿ ಕನ್ನಡ ಹೇಳಲು ಹೋಗಿ ಟ್ರೋಲ್ ಆಗಿದ್ದರು.

ಅದರಲ್ಲೂ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕಕ್ಕೆ ಬಂದಿದ್ದ ರಾಹುಲ್ ಗಾಂಧಿ, ವಿಶ್ವೇಶ್ವರಯ್ಯ ಹೆಸರು ಹೇಳಿ, ಬಸವಣ್ಣ ವಚನ ನುಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರು.

ಹೀಗಾಗಿ ಸೋಮವಾರ ಬೀದರ್ ಗೆ ಬಂದ ರಾಹುಲ್ ಕನ್ನಡದ ಸಹವಾಸಕ್ಕೆ ಹೋಗಲಿಲ್ಲ, ಬಸವಣ್ಣ ವಚನವನ್ನೂ ನೆನಪಿಸಲಿಲ್ಲ. ಜನರ ಮನ ಗೆಲ್ಲುವ ಪ್ರಯತ್ನಕ್ಕೆ ಕೈ ಹಾಕಿ, ಬಿಜೆಪಿಯವರ ಫೇಸ್ ಬುಕ್ ಪುಟಗಳಿಗೆ ನಾನ್ಯಾಕೆ ಕಟೆಂಟ್ ಕೊಡಲಿ ಎಂದು ರಾಹುಲ್ ಸುಮ್ಮನಾಗಿದ್ದು ಸುಳ್ಳಲ್ಲ.