ಮಗಳ ಮಾತು ಕೇಳಿ ಚಿತ್ರವೊಂದನ್ನು ಒಪ್ಪಿಕೊಂಡ ಗೋಲ್ಡನ್ ಸ್ಟಾರ್

ಗೋಲ್ಡನ್ ಸ್ಟಾರ್ ಗಣೇಶ್, ನಮಸ್ಕಾರ..ನಮಸ್ಕಾರ..ನಮಸ್ಕಾರ ಎಂದೇ ಕನ್ನಡಿಗರಿಗೆ ಹತ್ತಿರವಾದ ನಟ.

2002ರ ಹೊತ್ತಿಗೆ ಚಂದನವನಕ್ಕೆ ಕಾಲಿಟ್ಟರೂ ಅದೃಷ್ಟದ ಬಾಗಿಲು ತೆರೆದದ್ದು 2006ರಲ್ಲಿ ಚೆಲ್ಲಾಟ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಗಣೇಶ್ ಮುಂಗಾರು ಮಳೆ ಮೂಲಕ ಬಿರುಗಾಳಿ ಎಬ್ಬಿಸಿದರು.

ಬಳಿಕ ಅವರು ಹಿಂತಿರುಗಿ ನೋಡಲಿಲ್ಲ. ವರ್ಷ ಮೂರು ಚಿತ್ರಗಳಂತೆ ನಟಿಸುತ್ತಾ ಬಂದರು. ಆದರೆ ಕಳೆದ ವರ್ಷ ಚಮಕ್ ಬಿಡುಗಡೆಯಾದ ನಂತರ ಗಣೇಶ್ ಯಾವುದೇ ಚಿತ್ರಗಳಲ್ಲಿ ನಟಿಸಲಿಲ್ಲ. ಹಾಗಂತ ಅವಕಾಶಗಳು ಇರಲಿಲ್ಲ ಅಂತಾ ಅಲ್ಲ, ಅವರದ್ದೇ ಆದ ಕಮಿಟ್ ಮೆಂಟ್ ಗಳ ಕಾರಣದಿಂದ ಅವರಿಗೆ ನಟಿಸಲಾಗಲಿಲ್ಲ.

ಈಗ ಆರೆಂಜ್ ಅನ್ನುವ ಚಿತ್ರವನ್ನು ಮುಗಿಸಿರುವ ಗಣೇಶ್ ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ತೆರೆಗೆ ಬರಲಿದ್ದಾರೆ. ಅಲ್ಲಿದೆ ಈ ವರ್ಷ ಒಂದೇ ಚಿತ್ರದಲ್ಲಿ ಅಭಿನಯಿಸಿದ್ದಾರೆ ಅನ್ನುವ ಸಾಲೊಂದು ಸೇರಿಕೊಳ್ಳಲಿದೆ.

ರಕ್ಷಿತ್ – ರಶ್ಮಿಕಾ ಕಿರಿಕ್ – ಕಿಚ್ಚ ಸುದೀಪ್ ರಿಯಾಕ್ಷನ್ ಏನು ಗೊತ್ತಾ..?

ಇದರೊಂದಿಗೆ ನಾಗಣ್ಣ ನಿರ್ದೇಶನದ ಗಿಮಿಕ್ ಅನ್ನುವ ಚಿತ್ರವೊಂದಕ್ಕೆ ಗಣೇಶ್ ಸಹಿ ಹಾಕಿದ್ದು, ಶ್ರೀಲಂಕಾದಲ್ಲಿ ಚಿತ್ರೀಕರಣ ಕೂಡಾ ಸಾಗಿದೆ.

ಆದರೆ ಇಂಟ್ರರೆಸ್ಟಿಂಗ್ ಇರೋದು ಈ ಗಿಮಿಕ್ ನಲ್ಲಿ. ಇದು ಗಣೇಶ್ ಅಭಿನಯದ ಮೊದಲ ಹಾರರ್ ಚಿತ್ರ. ಗಣೇಶ್ ಎಂದಿಗೂ ಹಾರರ್ ಚಿತ್ರಗಳನ್ನು ಒಪ್ಪಿಕೊಂಡವರಲ್ಲ. ಎಲ್ಲಿ ಪಾತ್ರಕ್ಕೆ ನ್ಯಾಯ ಒದಗಿಸಲು ಕಷ್ಟವಾಗಬಹುದೋ ಎಂದು ಹಾರರ್ ಚಿತ್ರದಿಂದ ದೂರವುಳಿದವರು ಗಣೇಶ್.

This slideshow requires JavaScript.

ಆದರೆ ಅದೊಂದು ದಿನ ಮಗಳು ಚಾರಿತ್ರ್ಯ ಮನೆಯ ಹೋಮ್ ಥಿಯೇಟರ್ ನಲ್ಲಿ ಹಾರರ್ ಚಿತ್ರ ನೋಡುವ ಸಂದರ್ಭದಲ್ಲಿ, ಅಪ್ಪ ನೀನೊಂದು ಹಾರರ್ ಚಿತ್ರದಲ್ಲಿ ನಟಿಸಬೇಕು ಅಂದಳಂತೆ.

ರಶ್ಮಿಕಾ – ರಕ್ಷಿತ್ ಬೇರೆಯಾಗಲು ಕಾರಣವೇನು – ಟ್ರೋಲ್ ಪೇಜ್ ಗಳ ಸಂಶೋಧನಾ ವರದಿ

ಕಾಕತಾಳೀಯ ಅನ್ನುವಂತೆ ನಾಗಣ್ಣ ಒಂದು ಹಾರರ್ ಕಥೆಯನ್ನು ಗಣೇಶ್ ಮುಂದೆ ಬಿಚ್ಚಿಟ್ಟರು. ಹಿಂದೆ ಮುಂದೆ ನೋಡದೆ ಹಾರರ್ ಚಿತ್ರ ಅನ್ನುವ ಒಂದೇ ಕಾರಣಕ್ಕೆ ಮಗಳ ಆಸೆಯನ್ನು ಪೂರೈಸಬೇಕು ಅನ್ನುವ ಕಾರಣದಿಂದ ಗಣೇಶ್ ಗಿಮಿಕ್ ಗೆ ಸಹಿ ಹಾಕಿದ್ದಾರೆ.

ಈ ವರ್ಷ ಒಂದು ಸಿನಿಮಾ ಮುಂದಿನ ವರ್ಷ ನಾಲ್ಕು ಸಿನಿಮಾ

2018ರಲ್ಲಿ ಗಣೇಶ್ ಅಭಿನಯದ ಮೂರು ಸಿನಿಮಾ ಬಿಡುಗಡೆಯಾಗಬೇಕಿತ್ತು. 2017ರಲ್ಲಿ ಪ್ರಾರಂಭವಾಗಬೇಕಾಗಿದ್ದ ಆರೆಂಜ್ 2018 ರ ಫೆಬ್ರವರಿ ಪ್ರಾರಂಭವಾಯ್ತು. ಈ ನಡುವೆ ಮಗ ವಿಹಾನ್ ಶಾಲೆಗೆ ಸೇರಿದ. ಅಪ್ಪನೇ ತನ್ನ ಶಾಲೆಗೆ ಬಿಟ್ಟು, ಕರೆದುಕೊಂಡು ಬರಬೇಕು ಎಂದು ಪಟ್ಟು ಹಿಡಿದ ಕಾರಣ ಕೆಲ ಪ್ರಾಜೆಕ್ಟ್ ಮುಂದೂಡಿಕೆಯಾಯ್ತು.

ಆಗ ಎಲ್ಲವೂ ಒಂದು ಹಂತಕ್ಕೆ ಬಂದಿದೆ. ‘ಆರೆಂಜ್’ ಮುಗಿಯುತ್ತಾ ಬಂದಿದೆ, ‘ಗಿಮಿಕ್’ ಶುರುವಾಗಿದೆ. ಅಕ್ಟೋಬರ್ ನಲ್ಲಿ ಗೀತಾ ಪ್ರಾರಂಭವಾಗಲಿದೆ. ಪ್ರೀತಮ್ ಹೇಳಿದ ಕಥೆಯೊಂದು ಒಕೆ ಆಗಿದೆ. ಸಿಂಪಲ್ ಸುನಿ ಕೂಡಾ ಗಣೇಶ್ ಜೊತೆ ಕೆಲಸ ಮಾಡಲು ಸಿದ್ಧವಾಗಿದ್ದಾರೆ. ಒಂದಿಷ್ಟು ಹೊಸಬರು ಕೂಡಾ ಕಥೆ ಹೇಳಿ ಹೋಗಿದ್ದಾರೆ. ಹೀಗಾಗಿ 2019ರಲ್ಲಿ ಗಣೇಶ್ ಫುಲ್ ಬ್ಯುಸಿ.

ಮಲ್ಟಿ ಸ್ಟಾರ್ ಹಿಂದೆ ಬಿದ್ದ ಓಂ ಪ್ರಕಾಶ್ ರಾವ್ ಈ ಬಾರಿ ಮಾತು ಉಳಿಸಿಕೊಳ್ತಾರ..?

ಚಂದನ ವನದ ಚೆಂದದ ನಿರ್ದೇಶಕ ಓಂ ಪ್ರಕಾಶ್ ರಾವ್ ಮೇಲೆ ಇರುವ ಆರೋಪಗಳಿಗೆ ಲೆಕ್ಕವಿಲ್ಲ. ಆದರೆ ಕೆಲಸದ ಕಮಿಂಟ್ ಮೆಂಟ್ ಲೆಕ್ಕದಲ್ಲಿ ಅವರನ್ನು ಮೀರಿಸುವ ನಿರ್ದೇಶಕರು ಕೆಲವೇ ಕೆಲವರು ಮಾತ್ರ.

ಲಾಕಪ್ ಡೆತ್, ಸಿಂಹದ ಮರಿ, ಹುಚ್ಚ, AK47, ಹೀಗೆ ಸಾಲು ಸಾಲು ಚಿತ್ರಗಳನ್ನು ನಿರ್ದೇಶಿಸಿದ ಹಿರಿಮೆ ಇವರದ್ದು. ಆದರೆ ಅದ್ಯಾವ ಚಿತ್ರಗಳನ್ನು ಪ್ರಾರಂಭಿಸಿದರೂ ನಿಗದಿತ ಅವಧಿಗೆಯಲ್ಲಿ ಮುಗಿಸಿದ ಇತಿಹಾಸ ಮಾತ್ರ ಇಲ್ಲ. ಓಂ ಪ್ರಕಾಶ್ ಕೈಗೆತ್ತಿಕೊಂಡ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಅನ್ನುವುದು ಅವರಿಗೆ ಗೊತ್ತಿರುವುದಿಲ್ಲ.

ಆದರೆ ಇದೀಗ  ಮಲ್ಟಿ ಸ್ಟಾರ್ ಹಿಂದೆ ಬಿದ್ದಿರುವ ಓಂ ಪ್ರಕಾಶ್  ರವಿ ಚಂದ್ರ ಅನ್ನುವ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರವಿಚಂದ್ರನ್ ಮತ್ತು ಉಪೇಂದ್ರ ಇಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಅಂದ ಹಾಗೇ ತನ್ನ ಮೇಲಿರುವ ಹಳೆಯ ಆರೋಪ ಹಾಗೂ ಕಳಂಕವನ್ನು ತೊಡೆದು ಹಾಕುವ ನಿಟ್ಟಿನಲ್ಲಿ  ಚಿತ್ರದ ಚಿತ್ರೀಕರಣ ಪ್ರಾರಂಭಕ್ಕೂ ಮುನ್ನ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಮುಂದಿನ ಸಂಕ್ರಾತಿ ಹೊತ್ತಿಗೆ ರವಿ ಚಂದ್ರನನ್ನು ತೆರೆಗೆ ತರುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ.

ಈ ಸಲುವಾಗಿ ಪಕ್ಕಾ ಪ್ಲಾನ್ ಮಾಡಿಕೊಂಡಿರುವ ಅವರು ಉಪೇಂದ್ರ ಅವರ ಹುಟ್ಟಿದ ಹಬ್ಬದ ದಿನವಾದ ಸಪ್ಟಂಬರ್ 18 ರಂದು ಒಂದು ಟೀಸರ್ ಹಾಗೂ ರವಿಚಂದ್ರನ್ ಬರ್ತ್ ಡೇ ನವೆಂಬರ್ 1 ರಂದು ಮತ್ತೊಂದು ಟೀಸರ್ ಬಿಡುಗಡೆಯಾಗಲಿದೆ.

ಇನ್ನು ಈ ಚಿತ್ರಕ್ಕೆ ಕನಕಪುರ ಶ್ರೀನಿವಾಸ್ ದುಡ್ಡು ಹಾಕಿದ್ದು,  ಅರ್ಜುನ್ ಜನ್ಯಾ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. KGF ಚಿತ್ರಕ್ಕೆ ಸಂಭಾಷಣೆ ಬರೆದಿರುವ ಚಂದ್ರಮೌಳಿ ಇಲ್ಲೂ ಸಂಭಾಷಣೆ ಬರೆಯುತ್ತಿದ್ದಾರೆ.

ಸಾನ್ವಿ ಶ್ರೀವಾತ್ಸವ್, ನಿಮಿಕಾ ರತ್ನಾಕರ್, ಅವಿನಾಶ್ ,ಸಾಧು ಸೇರಿದಂತೆ ಅನೇಕರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Ravi-chandra

ಅಯ್ಯೋ ಅನುಶ್ರೀಗಿಲ್ಲದ ಮದುವೆ ಚಿಂತೆ ಪಬ್ಲಿಕ್ ಟಿವಿಗ್ಯಾಕೆ…?

ಇವತ್ತು ಗಣೇಶ ಹಬ್ಬದ ಸಂಭ್ರಮ, ಸುದ್ದಿ ವಾಹಿನಿಗಳು ಮನೋರಂಜನಾ ವಾಹಿನಿಗಳಾಗಿ ಬದಲಾಗಿತ್ತು. ಒಂದೆಡೆ ಕರ್ನಾಟಕ ರಾಜಕೀಯ ಭರ್ಜರಿ ಮನೋರಂಜನೆ ಕೊಟ್ಟರೆ ಮತ್ತೊಂದು ಕಡೆ ಎಂದಿನಂತೆ ಹಬ್ಬದ ಸ್ಪೆಷಲ್ ಎಂದು ವಿಶೇಷ ಕಾರ್ಯಕ್ರಮಗಳು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿತ್ತು.

ಅದರಲ್ಲಿ ಮಗನ ಸೆಳೆದದ್ದು ರಂಗನಾಥ್ ಒಡೆತನದ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಅನುಶ್ರೀ ಸಂದರ್ಶನ. ಸಂದರ್ಶನ ಮಾಡುತ್ತಿದ್ದ ನಿರೂಪಕಿಗೆ ಅನುಶ್ರೀ ಮದುವೆ ಮೇಲೆ ಅದೆಷ್ಟು ಕ್ಯೂರಿಯಸಿಟಿ ಅಂದರೆ ಪದೇ ಪದೇ ಅದೇ ಪ್ರಶ್ನೆ ಕೇಳುತ್ತಿದ್ದರು. ಇನ್ನೊಂದು ವಿಚಿತ್ರ ಅಂದರೆ ಕಳೆದ ವರ್ಷದ ಗಣೇಶನ ಹಬ್ಬದ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿಯಲ್ಲೇ ಪಾಲ್ಗೊಂಡಿದ್ದ ಅನುಶ್ರೀ ಮದುವೆ ಬಗ್ಗೆ ಖಚಿತ ಉತ್ತರ ಕೊಟ್ಟಿದ್ದರು.

ವಿಲನ್ ಆಡಿಯೋ ಲಾಂಚ್ – ಅನುಶ್ರೀ Anchoring ನೋಡಿ ಕೆಂಡಾಮಂಡಲರಾದ ರೆಬೆಲ್ ಸ್ಟಾರ್

ಮತ್ತೆ ಅದೇ ವಿಷಯವನ್ನು ಕೆದಕುತ್ತಿರುವುದು ನೋಡಿ ಅಸಹ್ಯ ಅನ್ನಿಸಿದ್ದು ಸುಳ್ಳಲ್ಲ. ಅರೇ ಅನುಶ್ರೀಯೇ ಮದುವೆ ಬೇಡ ಎಂದು ಹೇಳಿದ್ದಾರೆ. ಮತ್ಯಾಕೆ ಪಬ್ಲಿಕ್ ಟಿವಿ ಮಂದಿಗೆ ಅನುಶ್ರೀ ಮದುವೆ ಬಗ್ಗೆ ಚಿಂತೆ ಅನ್ನುವುದೇ ಅರ್ಥವಾಗುತ್ತಿಲ್ಲ.

ತೆಂಡೂಲ್ಕರ್ ವಿರುದ್ಧ ಕೆಟ್ಟ ಪೋಸ್ಟ್ – ಶ್ರೀರೆಡ್ಡಿ ವಿರುದ್ಧ ಕ್ರಿಕೆಟ್ ದೇವರ ಅಭಿಮಾನಿಗಳು ಗರಂ

ಕಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಇದೆ, ಪಾತ್ರಕ್ಕಾಗಿ ಮಂಚ ಏರಬೇಕು ಎಂದು ಪ್ರತಿಭಟನೆ ಮಾಡಿದ್ದ ನಟಿ ಶ್ರೀ ರೆಡ್ಡಿ ಪವರ್ ಸ್ಟಾರ್ ಪವನ್ ಕಲ್ಯಾಣ್, ನಟ ನಾನಿ ವಿರುದ್ಧ ಕ್ಯಾತೆ ತೆಗೆದಿದ್ದರು.

ಇದೀಗ ಶ್ರೀರೆಡ್ಡಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬಗ್ಗೆ ಅಶ್ಲೀಲ ಪೋಸ್ಟ್ ಮಾಡಿದ್ದು, ವಿವಾದದ ಬೆಂಕಿ ಹತ್ತಿ ಉರಿಯುತ್ತಿದೆ.
‘ಸಚಿನ್ ತೆಂಡೂಲ್ಕರ್ ಓರ್ವ ರೋಮ್ಯಾಂಟಿಕ್ ವ್ಯಕ್ತಿ. ಅವರು ಹೈದರಾಬಾದ್ ಗೆ ಬಂದಾಗ ಚಾರ್ಮಿಂಗ್ ಗರ್ಲ್(ಚಾರ್ಮಿ ಕೌರ್) ಜತೆ ಚಕ್ಕಂದವಾಡಿದ್ರೂ, ಹೈ ಪ್ರೊಫೈಲ್ ಹೊಂದಿರುವ ಚಾಮುಂಡೇಶ್ವರ್ ಸ್ವಾಮಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದರು. ಮೈದಾನದಲ್ಲಿ ಚೆನ್ನಾಗಿ ಡುಟುವಾ ವ್ಯಕ್ತಿ ಚೆನ್ನಾಗಿ ರೋಮ್ಯಾನ್ಸ್ ಮಾಡಬಹುದು??? ಎಂದು ಫೇಸ್ ಬುಕ್ ನಲ್ಲಿ ಅವರು ಬರೆದುಕೊಂಡಿದ್ದಾರೆ.
https://www.facebook.com/plugins/post.php?href=https%3A%2F%2Fwww.facebook.com%2Fiamsrireddy%2Fposts%2F2214135308833389&width=500

Sri reddy-fb

ಶ್ರೀರೆಡ್ಡಿ ಪೋಸ್ಟ್ ಇದೀಗ ಸಚಿನ್ ತೆಂಡೂಲ್ಕರ್ ಹಾಗೂ ಚಾರ್ಮಿ ಕೌರ್ ಅಭಿಮಾನಿಗಳು ಕೆರಳುವಂತೆ ಮಾಡಿದ್ದು ಶ್ರೀರೆಡ್ಡಿಯನ್ನು ಅಶ್ಲೀಲವಾಗಿ ನಿಂದಿಸಿ ಟ್ರೋಲ್ ಮಾಡುತ್ತಿದ್ದಾರೆ

pic

ಸರ್ಜಿಕಲ್ ಸ್ಟ್ರೈಕ್ ಗೆ ಹೊರಟ ಯೋಧರ ಕೈಯಲ್ಲಿತ್ತು ಚಿರತೆಯ ಮಲ ಮೂತ್ರ….!

2016 ಸಪ್ಟಂಬರ್ 19 ರಂದು ಇಡೀ ವಿಶ್ವ ಭಾರತದತ್ತ ಮತ್ತೊಮ್ಮೆ ಹಿಂತಿರುಗಿ ನೋಡಿತ್ತು. ಭಾರತೀಯರು ಹೆಮ್ಮೆ ಪಡುವ ವಿಚಾರವೊಂದನ್ನು ಸೇನೆ ಹೊರಗೆ ಹಾಕಿದ್ದರೆ, ಅತ್ತ ಪಾಕಿಸ್ತಾನ ನಡೆದಿರುವುದೇ ಕನಸೇ ನಿಜವೇ ಎಂದು ಅರಿತುಕೊಳ್ಳುವ ಯತ್ನದಲ್ಲಿತ್ತು.

ಇಂದಿಗೂ ಅಂದು ನಡೆದ ಸರ್ಜಿಕಲ್ ಸ್ಟ್ರೈಕ್ ನ ರೋಮಾಂಚನಕಾರಿ ವಿಷಯಗಳು ಹೊರಗೆ ಬರುತ್ತಲೇ ಇದೆ. ಭಾರತೀಯ ಸೇನೆಯ ಯೋಧರ ಸಾಹಸಗಾಥೆಯನ್ನು ಕೇಳುತ್ತಿದ್ದರೆ, ಹೆಮ್ಮೆ ಅನ್ನಿಸುತ್ತದೆ.

ಅಂತಹುದೇ ಮತ್ತೊಂದು ವಿಚಾರ ಇದೀಗ ಹೊರ ಬಿದ್ದಿದೆ.

ಇದನ್ನು ಮಾಜಿ ನಗ್ರೋಟಾ ಕಾಪ್ರ್ಸ್ ಕಮಾಂಡರ್ ಲೆ.ಜನರಲ್ ರಾಜೇಂದ್ರ ನಿಂಬೋರ್ಕರ್ ಹೇಳಿದ್ದಾರೆ.

L-G-Rajendra-Nimborkar

ಪುಣೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಸರ್ಜಿಕಲ್ ಸ್ಟ್ರೈಕ್ ಅನುಭವ ಹಾಗೂ ತಯಾರಿಯ ಮಾಹಿತಿಗಳನ್ನು ಹೊರ ಹಾಕಿದ್ದಾರೆ.

ಭಾರತದ ಗಡಿ ಪ್ರವೇಶಿಸುತ್ತಿದ್ದ ಪಾಕಿಸ್ತಾನ ಪ್ರಾಯೋಜಿತ ಉಗ್ರರನ್ನು ಮಟ್ಟಹಾಕಲೇ ಬೇಕು ಎಂದು ಸೇನೆಯ ಹಿರಿಯ ಅಧಿಕಾರಿಗಳು ನಿರ್ಧರಿಸಿದ್ದರು. ಅದಕ್ಕೆ ಬೇಕಾದ ಮಾಸ್ಟರ್ ಪ್ಲಾನ್ ಕೂಡಾ ರೆಡಿಯಾಗಿತ್ತು. ಬೇಕಾಗಿದದ್ದು, ಪ್ರಧಾನಿ ಹಾಗೂ ರಕ್ಷಣಾ ಸಚಿವರ ಅನುಮತಿ.

ಆಗ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಸೇನೆಯ ಸಾಧನೆಯನ್ನು ಕಂಡು ಹೆಮ್ಮೆ ಪಟ್ಟಿದ್ದರು. ಹೀಗಾಗಿ ಸರ್ಜಿಕಲ್ ಸ್ಟ್ರೈಕ್ ಅನ್ನುವ ಸಾಧನೆಗೆ ಹಸಿರು ನಿಶಾನೆ ತೋರಿದ್ದರು. ಮಾತ್ರವಲ್ಲದೆ ಈ ಕಾರ್ಯಾಚರಣೆ ನಡೆಸಲು ಸೇನೆ ಕಾಪಾಡಿಗೊಂಡಿದ್ದ ಗೌಪ್ಯತೆಯನ್ನು ಅವರು ಉಳಿಸಿಕೊಟ್ಟಿದ್ದರು.

ದಾಳಿಗೆ ಸಿದ್ದತೆ ಸಾಕಷ್ಟು ದಿನಗಳ ಹಿಂದೆ ನಡೆದಿದ್ದರು, ಅದರ ಅರಿವಿದ್ದದ್ದು ಕೆಲವೇ ಮಂದಿಗೆ. ದಾಳಿ ನಡೆಸುವ ಒಂದು ವಾರದ ಮುಂಚೆಯಶ್ಟೇ ಉನ್ನತ ಅಧಿಕಾರಿಗಳಿಗೆ ರಕ್ಷಣಾ ಸತಿವರು ಮಾಹಿತಿ ನೀಡಿದ್ದರು. ಮಾತ್ರವಲ್ಲದೆ ಒಂದು ವಾರದಲ್ಲಿ ಯೋಜನೆ ಜಾರಿ ಮಾಡುವಂತೆ ನಿರ್ದೇಶಿಸಿದ್ದರು.

ಎಲ್ಲಿಯವರೆಗೆ ಗೌಪ್ಯತೆ ಇತ್ತು ಅಂದರೆ ದಾಳಿ ನಡೆಸಬೇಕಾದ ಯೋಧರಿಗೆ ದಾಳಿ ಕುರಿತು ಮಾಹಿತಿ ನೀಡಿರಲಿಲ್ಲ. ಕೇವಲ ಸಲಹೆ ನೀಡಲಾಗಿತ್ತು. ದಾಳಿಯ ದಿನವೇ ಖಚಿತ ಮಾಹಿತಿ ನೀಡಲಾಗಿತ್ತು.

ಇನ್ನೇನು ದಾಳಿಗೆ ಸಿದ್ದವಾಗಬೇಕು, ಉಳಿದಿರುವುದು ಕೆಲವೇ ಗಂಟೆಗಳು ಅಂದಾಗ ಸಮಸ್ಯೆಯೊಂದು ಸೃಷ್ಟಿಯಾಯ್ತು. ಪಾಕಿಸ್ತಾನದ ಗಡಿ ತಲುಪುವ ಹೊತ್ತಿಗೆ ಕೆಲ ಗ್ರಾಮಗಳನ್ನು ದಾಟಿ ಹೋಗಬೇಕು. ಅಲ್ಲಿ ನಾಯಿಗಳ ಕಾಟವಿದೆ. ರಾತ್ರಿಯ ಹೊತ್ತಿನಲ್ಲಿ ಹೋಗುವಾಗ ಅವರು ಬೊಗಳಲು ಪ್ರಾರಂಭಿಸಿದರೆ ಅನ್ನುವ ಚಿಂತೆ ಶುರುವಾಯ್ತು.

ಹಾಗಂತ ದಾಳಿಯಿಂದ ಹಿಂದೆ ಸರಿಯುವ ಪ್ರಶ್ನಯೇ ಇರಲಿಲ್ಲ. ನಾಯಿಗಳು ಬಂಧಿಸಿ ತಂದರೆ ಅದ್ಯಾಕೆ ಅನ್ನುವ ಪ್ರಶ್ನೆ ಉದ್ಭವಿಸುತ್ತದೆ. ಯೋಧರು ಸಾಗುವ ವೇಳೆ ನಾಯಿಗಳು ಬೊಗಳಲು ಪ್ರಾರಂಭಿಸಿದರೆ ಕೆಲಸ ಕೆಡುತ್ತದೆ. ಮಾತ್ರವಲ್ಲದೆ ನಾಯಿಗಳು ಯೋಧರ ಮೇಲೆ ದಾಳಿ ನಡೆಸುವ ಸಾಧ್ಯತೆಯೂ ಇತ್ತು. ಹೀಗಾಗಿ ಚಿರತೆ ಮಲ ಹಾಗೂ ಮೂತ್ರವನ್ನು ಜೊತೆಗೆ ಒಯ್ಯಲು ನಿರ್ಧರಿಸಲಾಯ್ತು.

ನಾಯಿಗಳ ಕಾಟವನ್ನು ನಿಯಂತ್ರಿಸುವ ಸಲುವಾಗಿ ಚಿರತೆಯ ಮೂತ್ರವನ್ನು ಹಳ್ಳಿಯ ಸುತ್ತಲು ಅಂದರೆ ಯೋಧರು ಹಾದು ಹೋಗುವ ದಾರಿ ಹಾಗೂ ಸುತ್ತ ಮುತ್ತ ಚೆಲ್ಲಲಾಯ್ತು,

ಚಿರತೆ ಮೂತ್ರದ ವಾಸನೆ ಕಂಡ ನಾಯಿಗಳು ಹೆದರಿ ಸೈಲೆಂಟ್ ಆಗಿವೆ. ಯೋಧರು ಸದ್ದಿಲ್ಲದೆ ಪಾಕಿಸ್ತಾನ ಗಡಿ ದಾಟಿದ್ದಾರೆ.
ನಸುಕಿನ 3.30ರ ವೇಳೆ ದಾಳಿ ನಡೆಸಿದ ಭಾರತೀಯ ಯೋಧರು 29 ಭಯೋತ್ಪಾದಕರು ಹಾಗೂ ಉಗ್ರರರಿಗೆ ತರಬೇತಿ ನೀಡಲು ತೆರೆಯಲಾಗಿದ್ದ ಮೂರು ಲಾಂಚಿಂಗ್ ಪ್ಯಾಡ್ ಗಳನ್ನು ಧ್ವಂಸ ಮಾಡಿ ಪಾಕ್ ಮಿಲಿಟರಿಗೆ ಶಾಕ್ ಕೊಟ್ಟು ಹಿಂತಿರುಗಿದ್ದರು.

ಕೊನೆಗೂ Reveal ಆಯ್ತು ಕುರುಕ್ಷೇತ್ರ Releaseಗೆ ಅಡ್ಡಿಯೇನು ಅನ್ನೋದು..

ಚಂದನವನದಲ್ಲಿ ದಿ ವಿಲನ್ ಮತ್ತು ಕುರುಕ್ಷೇತ್ರ ಎಂಬ ಎರಡು ಚಿತ್ರಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪಾಸಿಟಿವ್ ಕಾರಣಗಳಿಂದ ಒಂದೆಡೆ ಎರಡೂ ಚಿತ್ರ ತಂಡಗಳು ಸುದ್ದಿಯಲ್ಲಿದ್ದರೆ, ಮತ್ತೊಂದು ಕಡೆ ನೆಗಿಟಿವ್ ಕಾರಣಕ್ಕೂ ಸುದ್ದಿಯಲ್ಲಿದೆ.

ಯಾಕೆಂದರೆ ಎರಡೂ ಚಿತ್ರಗಳ ಬಿಡುಗಡೆ ಅನ್ನೋದು ಆನೆ ಹೆರಿಗೆಯಾಗಿ ಬಿಟ್ಟಿದೆ.

ಕುರುಕ್ಷೇತ್ರ ಚಿತ್ರ ಸಂಕ್ರಾಂತಿಗೆ ಬರುತ್ತದೆ ಅಂದರು. ಬಳಿಕ ಯುಗಾದಿಯೂ ಬಂತು, ವರ ಮರ ಮಹಾಲಕ್ಷ್ಮಿಯೂ ಮುಗಿಯಿತು. ಈಗ ಗೌರಿ ಗಣೇಶ ಹಬ್ಬವೂ ಕಳೆದು ಹೋಗುತ್ತದೆ.

ನಂತರ ದೀಪಾವಳಿ, ನವರಾತ್ರಿ ಆದರೆ ಕುರುಕ್ಷೇತ್ರ ಮಾತ್ರ ಹೊರ ಬರುವ ಲಕ್ಷಣ ಕಾಣಿಸುತ್ತಿಲ್ಲ.

ಹಾಗಾದರೆ ಕುರುಕ್ಷೇತ್ರ ಬಿಡುಗಡೆಗೆ ಅಡ್ಡಿಯೇನು ಅಂದರೆ, ನಿರ್ಮಾಪಕ ಮುನಿರತ್ನ ಹಾಗೂ ದರ್ಶನ್ ನಡುವೆ ಸಂಬಂಧ ಹಳಸಿದೆಯಂತೆ. ನಿಖಿಲ್ ಡಬ್ಬಿಂಗ್ ಗೆ ಬರ್ತಾ ಇಲ್ವಂತೆ. ನಿಖಿಲ್ ಅವರ ಸೀತಾರಾಮ ಕಲ್ಯಾಣ ಬಿಡುಗಡೆಯಾದ ನಂತರವಂತೆ ಕುರುಕ್ಷೇತ್ರ ಅನ್ನುವ ಮಾತುಗಳು ಹರಿದಾಡಿತ್ತು.

ಆದರೆ ಇದೀಗ ಶೂಟಿಂಗ್, ಡಬ್ಬಿಂಗ್ ಮುಗಿಸಿರುವ ಸಿನಿಮಾ, ನಿಧಾನವಾಗುತ್ತಿರೋದಕ್ಕೆ ಕಾರಣ ಸಿಕ್ಕಿದೆ.

ಎಲ್ಲಾ ಊಹಾಪೋಹಗಳಿಗೆ,ಪ್ರಶ್ನೆಗಳಿಗೆ, ಅನುಮಾನಗಳಿಗೆ, ಸಂದೇಹಗಳಿಗೆ,ವದಂತಿಗಳಿಗೆ ನಿರ್ಮಾಪಕ ಮುನಿರತ್ನ ಉತ್ತರ ಕೊಟ್ಟಿದ್ದಾರೆ.

ದರ್ಶನ್ ಜೊತೆ ಯಾವುದೇ ಮನಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿರುವ ನಿರ್ಮಾಪಕರು, ನಿಖಿಲ್ ಪಾತ್ರ ಎಷ್ಟಿರಬೇಕು ಅನ್ನೋದನ್ನು ಕಥೆ ನಿರ್ಧರಿಸಿದೆ. ಹೊರತು ಯಾರೋ ಒಬ್ಬರನ್ನು ಕಡೆಗಣಿಸಿ, ಮತ್ತೊಬ್ಬರಿಗೆ ಪ್ರಾಮುಖ್ಯತೆ ಕೊಡಲು ನಾವು ಹೋಗಿಲ್ಲ.

ಮಾತ್ರವಲ್ಲದೆ ನಿಖಿಲ್ ಡಬ್ಬಿಂಗ್‍ಗೆ ಬರುತ್ತಿಲ್ಲ ಅನ್ನುವ ಮಾತಿನಲ್ಲಿ ಹುರುಳಿಲ್ಲ. ಅವರು ಡಬ್ಬಿಂಗ್‍ಗೆ ಸಿದ್ಧರಿದ್ದಾರೆ. ಆದರೆ ನಾವೇ ಡಬ್ಬಿಂಗ್ ಮಾಡಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಅಂದಿದ್ದಾರೆ.

ಜೊತೆಗೆ ನಿರ್ದೇಶಕ ನಾಗಣ್ಣ ಜೊತೆ ಭಿನ್ನಾಭಿಪ್ರಾಯ ಅನ್ನುವ ಗಾಳಿ ಸುದ್ದಿಗೆ ಉತ್ತರಿಸಿರುವ ಮುನಿರತ್ನ, ನಾಗಣ್ಣ ಅವರೇ ಸಿನಿಮಾದ ನಿರ್ದೇಶಕರು. ಅವರ ಕೆಲಸವನ್ನು ಅವರು ಮುಗಿಸಿಕೊಟ್ಟಿದ್ದಾರೆ. ಆದರೆ ಇದೀಗ ತಂತ್ರಜ್ಞರ ಕೆಲಸ ಉಳಿದುಕೊಂಡಿದೆ.

ಚೆನ್ನೈ ಹಾಗೂ ಹೈದರಾಬಾದ್‍ನಲ್ಲಿ ನಡೆದ ಸಿಜಿ ವರ್ಕ್ ನನಗೆ ಇಷ್ಟವಾಗಲಿಲ್ಲ ಹೀಗಾಗಿ ರೀವರ್ಕ್ ನಡೆಯುತ್ತಿದೆ.ಇದೇ ಕಾರಣಕ್ಕೆ ಸಿನಿಮಾ ವಿಳಂಬವಾಗುತ್ತಿದೆ. ನಿರ್ಮಾಪಕನಾಗಿ ನನಗೆ ಸಮಾಧಾನವಾಗದೆ ಚಿತ್ರವನ್ನು ತೆರೆಗೆ ತರಲು ಸಾಧ್ಯವಿಲ್ಲ.

ಒಳ್ಳೆಯ ಕ್ವಾಲಿಟಿಯಲ್ಲಿ ಸಿನಿಮಾ ತೋರಿಸಬೇಕು ಅನ್ನೋದು ನನ್ನ ಕನಸು. ಹೀಗಾಗಿ ವಿಳಂಬವಾಗಿದೆ ಎಂದು ಮುನಿರತ್ನ ಸತ್ಯ ಹೊರಗೆ ಹಾಕಿದ್ದಾರೆ

ಮುನಿರತ್ನ ಮಾತುಗಳನ್ನು ಕೇಳಿದರೆ ಕುರುಕ್ಷೇತ್ರ ದರ್ಶನ್ ಅವರ 50 ಸಿನಿಮಾವಾಗುವುದು ಅನುಮಾನ. 51ನೇ ಸಿನಿಮಾವಾಗಬೇಕಾಗಿದ್ದ ಯಜಮಾನ 50ನೇ ಸಿನಿಮಾವಾಗುವ ಸಾಧ್ಯತೆಗಳಿದೆ. ಕುರುಕ್ಷೇತ್ರ 51ನೇ ಸಿನಿಮಾವಾಗಬಹುದು.

ಎಣ್ಣೆ ಏಟಿನಲ್ಲಿ ಹಾವು ನುಂಗಿದ ಭೂಪ….!

ಎಣ್ಣೆ ಹೊಟ್ಟೆ ಸೇರಿತು ಅಂದರೆ ನಾವೇನು ಮಾಡುತ್ತಿದ್ದೇವೆ ಅನ್ನುವ ಅರಿವು ವ್ಯಕ್ತಿಗಳಿಗೆ ಇರುವುದಿಲ್ಲ.

ಹೀಗೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಜೀವಂತ ಹಾವನ್ನು ನುಂಗಿ ಪ್ರಾಣ ಕಳೆದುಕೊಂಡ ಘಟನೆ ಘಟನೆ ಉತ್ತರಪ್ರದೇಶದ ಅಮ್‌ರೋಹ ಜಿಲ್ಲೆಯಲ್ಲಿ ನಡೆದಿದೆ.

40 ವರ್ಷದ ಮಹಿಪಾಲ್‌ ಸಿಂಗ್‌ ಸಿಕ್ಕಾಪಟ್ಟೆ ಕುಡಿದು ಮನೆ ಕಡೆ ಹೊರಟಿದ್ದ. ಈ ವೇಳೆ ರಸ್ತೆಯಲ್ಲಿ ಹಾವೊಂದು ಕಂಡಿದೆ. ಬುದ್ದಿ ಎಣ್ಣೆ ಕೈಯಲ್ಲಿದ್ದ ಕಾರಣ ಹಾವನ್ನು ಕೈಗೆ ತೆಗೆದುಕೊಂಡಿದ್ದಾನೆ. ಈ ವೇಳೆ ಎದುರು ಸಿಕ್ಕ ಯುವಕರ ಗುಂಪೊಂದು ಸಿಂಗ್ ನನ್ನು ಮತ್ತಷ್ಟು ರೊಚ್ಚಿಗೆ ಎಬ್ಬಿಸಿದೆ.

ನಿನ್ನ ಫೋಟೋ ತೆಗೆಯುತ್ತೇವೆ ಎಂದೆಲ್ಲಾ ಕಾಗೆ ಹಾರಿಸಿದ್ದಾರೆ.ಯುವಕರ ಪ್ರಚೋದನೆಯಿಂದ ಸಿಂಗ್ ಅದರೊಂದಿಗೆ ಆಟವಾಡಿದ್ದಾನೆ.ಅಲ್ಲೇ ನೆರೆದಿದ್ದವರು ಈ ದೃಶ್ಯವನ್ನೆಲ್ಲ ರೆಕಾರ್ಡ್‌ ಮಾಡಿದ್ದಾರೆ.ನಂತರ ಅದನ್ನು ತನ್ನ ಮುಷ್ಟಿಯಲ್ಲಿಟ್ಟುಕೊಂಡು ತಲೆಯ ಮೇಲೂ ಇಟ್ಟುಕೊಂಡಿದ್ದಾನೆ. ನಂತರ ಕೆಲವರು ಹಾವನ್ನು ಬಾಯಲ್ಲಿ ಇಟ್ಟುಕೊಳ್ಳುವಂತೆ ಸಲಹೆ ಕೊಟ್ಟಿದ್ದಾರೆ.

ಆದರೆ ಅಷ್ಟು ಹೊತ್ತಿಗೆ ಆತನ ಅದೃಷ್ಟ ಕೈ ಕೊಟ್ಟಿತ್ತು. ಬಾಯಿ ಸಮೀಪ ಹಾವು ತರುತ್ತಿದ್ದಂತೆ ಆತನ ಕೈ ಜಾರಿದ ಹಾವು ಬಾಯಿ ಒಳಹೋಗಿದೆ.ನಂತರ ಶ್ವಾಸನಾಳಕ್ಕೆ ತಲುಪಿದೆ. ಬಳಿಕ ಅಸ್ವಸ್ಥಗೊಂಡ ಮಹಿಪಾಲ್‌ ಸಿಂಗ್‌ ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಇದರ ವಿಡಿಯೋ ಇದೀಗ ವೈರಲ್ ಆಗಿದೆ.

ರಕ್ಷಿತ್ – ರಶ್ಮಿಕಾ ಕಿರಿಕ್ : ಕಿಚ್ಚ ಸುದೀಪ್ ರಿಯಾಕ್ಷನ್ ಏನು ಗೊತ್ತಾ..?

ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ಕಿರಿಕ್ ಪಾರ್ಟಿ ಚಿತ್ರದ ಬಳಿಕ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಬೇರೆ ಬೇರೆಯಾಗುತ್ತಿದ್ದಾರೆ.

ಇದು ದೊಡ್ಡ ಮಟ್ಟದಲ್ಲಿ ಸುದ್ದಿಯೂ ಆಗಿದೆ. ಈ ಸಂಬಂಧ ರಕ್ಷಿತ್ ಕೊಟ್ಟ ಸ್ಪಷ್ಟನೆಯನ್ನು ಚಲನಚಿತ್ರ ಪತ್ರಿಕೆಯೊಂದು ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿತ್ತು.

ಇದಕ್ಕೆ ರೀ ಟ್ವೀಟ್ ಮಾಡಿರುವ ಸುದೀಪ್ ಹೀಗೆ ಅಂದಿದ್ದಾರೆ.

2018-09-12_14-49-31

 

ರಶ್ಮಿಕಾ – ರಕ್ಷಿತ್ ಬೇರೆಯಾಗಲು ಕಾರಣವೇನು :ಟ್ರೋಲ್ ಪೇಜ್ ಗಳ ಸಂಶೋಧನಾ ವರದಿ

ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಕ್ಷಿತ್ ಹಾಗೂ ರಶ್ಮಿಕಾ ಬೇರೆ ಬೇರೆಯಾಗುತ್ತಿದ್ದಾರೆ ಅನ್ನುವುದು ಹಳೆಯ ಸುದ್ದಿ. ಮಳೆ ನಿಂತರೂ ಹನಿ ನಿಂತಿಲ್ಲ ಅನ್ನುವಂತೆ ಅವರಿಬ್ಬರ ಸುತ್ತ ಸುದ್ದಿಗಳು ಸುತ್ತುತ್ತಿವೆ.

ಅದರಲ್ಲೂ ಟ್ರೋಲ್ ಪೇಜ್ ಗಳು ಹಬ್ಬ ಮಾಡಿವೆ. ಕೆಲವೊಂದು ಟ್ರೋಲ್ ಪೇಜ್ ಗಳು ಜೋಡಿಯ ಬ್ರೇಕ್ ಅಪ್ ಗೆ ಸಂಭಾವ್ಯ ಕಾರಣಗಳನ್ನು ಕೊಟ್ಟಿದೆ. ದಯವಿಟ್ಟು ಗಂಭೀರವಾಗಿ ತೆಗೆದುಕೊಳ್ಳಬೇಡಿ

  1. ಕಿರಿಕ್ ಪಾರ್ಟಿ ಚಿತ್ರದ ಬಳಿಕ ರಶ್ಮಿಕಾ ಮಂದಣ್ಣ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಅಂಜನಿಪುತ್ರ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಪುನೀತ್ ಜೊತೆ ಬೈಕ್ ಸೀನ್ ನಲ್ಲಿ ರಶ್ಮಿಕಾ ಅಪ್ಪುವನ್ನು ಬಿಗಿಯಾಗಿ ತಬ್ಬಿಕೊಂಡು ಹೋಗಿದ್ದರು. ಇದು ರಕ್ಷಿತ್ ಕೋಪಕ್ಕೆ ಕಾರಣವಾಗಿತ್ತಂತೆ.
  2. ಬಳಿಕ ರಶ್ಮಿಕಾ ಗಣೇಶ್ ಜೊತೆ ಚಮಕ್ ಮಾಡಿದ್ದರು. ಈ ಚಿತ್ರದಲ್ಲಿ ಮದ್ಯ ಕುಡಿದ ರೀತಿಯಲ್ಲಿ ಮಾಡಿದ ಓವರ್ ಆಕ್ಟಿಂಗ್ ರಕ್ಷಿತ್ ಗೆ ಬೇಸರ ತರಿಸಿತ್ತಂತೆ.
  3. ತೆಲುಗಿನ ಗೀತಾ ಗೋವಿಂದಂ ಚಿತ್ರದಲ್ಲಿ ರಶ್ಮಿಕಾ ಬೋಲ್ಡ್ ಆಗಿ ನಟಿಸಿದ್ದರು. ಕಿಸ್ಸಿಂಗ್ ಸೀನ್ ಕಂಡು ಕಸಿವಿಸಿಗೊಂಡಿದ್ದ ರಕ್ಷಿತ್ ಅದರ ಪ್ರಿಮಿಯರ್ ಶೋದಿಂದ ಎದ್ದು ಹೊರನಡೆದಿದ್ದರಂತೆ.
  4. ಮಾತ್ರವಲ್ಲದೆ ಚಿತ್ರದಲ್ಲಿನ ವಿಜಯ್ ದೇವರಕೊಂಡ ಜತೆಗಿನ ಕೆಲ ದೃಶ್ಯಗಳ ಬಗ್ಗೆ ರಕ್ಷಿತ್ ಅಸಮಾಧಾನ ಉಂಟಾಗಿತ್ತಂತೆ.
  5.  ಗೀತಾ ಗೋವಿಂದಂ ಬ್ಲಾಕ್ ಬಸ್ಟರ್ ಹಿಟ್ ನಿಂದಾಗಿ ರಕ್ಷಿತ್ ಇಮೇಜ್ ಗಿಂತ ರಶ್ಮಿಕಾ ಇಮೇಜ್ ದೊಡ್ಡದಾಗಿ ಬೆಳೆಯಿತು ಎಂಬ ಕೀಳರಿಮೆ?
  6.  ಇನ್ನು ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ನಡುವಿನ ವಯಸ್ಸಿನ ಅಂತರ ಹೆಚ್ಚಿದೆ. 35ರ ಹರೆಯದ ರಕ್ಷಿತ್ 22ರ ಹರೆಯದ ರಶ್ಮಿಕಾರನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವರಿಬ್ಬರ ನಡುವೆ 13 ವರ್ಷದ ಅಂತರವಿದ್ದು ಇದು ಬ್ರೇಕ್ ಅಪ್ ಗೆ ಕಾರಣವಿರಬಹುದೇ ಎಂದು ಟ್ರೋಲ್ ಪೇಜ್ ಗಳು ಪ್ರಶ್ನೆಗಳನ್ನು ಹಾಕಿದೆ.

ಬೆನ್ನನ್ನೇ ಮೆಟ್ಟಿಲಾಗಿಸಿದವನಿಗೆ ಸಿಕ್ತು ಬಂಪರ್ ಬಹುಮಾನ

ಕೇರಳ ಭೀಕರ ಪ್ರವಾಹದ ವೇಳೆ ಕಾಣಿಸಿಕೊಂಡ ರಿಯಲ್ ಹಿರೋಗಳಿಗೆ ಲೆಕ್ಕವಿಲ್ಲ. ಇದರಲ್ಲಿ ಬೆಸ್ಟ್ ಹಿರೋ ಯಾರು ಎಂದು ಹೇಳುವಂತಿಲ್ಲ.ಯಾಕೆಂದರೆ ಎಲ್ಲರೂ ಮಾಡಿದ್ದು ಅದ್ಭುತ ಕಾರ್ಯಗಳನ್ನು.

ಅದರಲ್ಲಿ ಒಂದಿಷ್ಟು ಹೆಚ್ಚು ಸುದ್ದಿಯಾಗಿದ್ದು, ಜೈಸಲ್ ಎಂಬ ಮೀನುಗಾರ.

ಭೀಕರ ಪ್ರವಾಹದ ರಕ್ಷಣಾ ಕಾರ್ಯಾಚರಣೆ ವೇಳೆ ತನ್ನ ಬೆನ್ನನ್ನೇ ಮೆಟ್ಟಿಲಾಗಿಸಿ ಮಹಿಳೆಯರ ಬೋಟ್ ಹತ್ತಿಸಿಕೊಂಡಿದ್ದ ಜೈಸಲ್ ದಿನ ಬೆಳಗಾಗುವ ಹೊತ್ತಿಗೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ.

ಜೈಸೆಲ್ ಎಂಬ ಮೀನುಗಾರ ಅಪಾಯದಲ್ಲಿದ್ದ ಮಹಿಳೆಯರನ್ನು ರಕ್ಷಿಸುವ ಸಲುವಾಗಿ ತನ್ನ ಬೋಟ್ ಚಲಾಯಿಸಿದ್ದ. ಅಲ್ಲದೆ ಮಹಿಳೆಯರು ಬೋಟ್ ಹತ್ತಲು ಕಷ್ಟವಾದಾಗ ತನ್ನ ಬೆನ್ನನ್ನೇ ಮೆಟ್ಟಿಲಾಗಿಸಿ ಮಹಿಳೆಯರಿಗೆ ನೆರವಾಗಿದ್ದ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿತ್ತು. ಅಲ್ಲದೆ ಕೇರಳ ಪ್ರವಾಹ ಸಂಬಂಧ ವಿಶ್ವದ ಗಮನ ಸೆಳೆಯಲು ಈ ವಿಡಿಯೋ ಕೂಡ ನೆರವಾಗಿತ್ತು.

ಇದೀಗ ಜೈಸೆಲ್ ಅಪರೂಪದ ಕಾರ್ಯಕ್ಕೆ ಮಹಿಂದ್ರಾ ಸಂಸ್ಥೆ ಫಿದಾ ಆಗಿದ್ದು, ಜೈಸೆಲ್ ಕಾರ್ಯವನ್ನು ಮೆಚ್ಚಿ ಅವರಿಗೆ ಮಹಿಂದ್ರಾ ಸಂಸ್ಥೆ ಹೊಚ್ಚ ಹೊಸ ಮಹೀಂದ್ರಾ ಮರಾಝೊ ಎಂಬ ಐಶಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದೆ.

ಇನ್ನು ತನಗೆ ಸಿಕ್ಕಿರುವ ಉಡುಗೊರೆ ಬಗ್ಗೆ ಮಾತನಾಡಿರುವ ಜೈಸೆಲ್ ಇದನ್ನು ನಾನು ನನ್ನ ಜನರ ಅನುಕೂಲಕ್ಕೆ ತಕ್ಕಂತೆ ಬಳಸುತ್ತೇನೆ. ಅವರ ಸೇವೆಗಾಗಿ ಉಪಯೋಗಿಸುತ್ತೇನೆ ಅಂದಿದ್ದಾರೆ .ಇದಪ್ಪ ಮಾತು ಅಂದರೆ.