ಯಾರಿವನು ಪಾನಿಪೂರಿ ಕಿಟ್ಟಿ – ಬಾಡಿ ಬಿಲ್ಡರ್ ಗ್ಯಾಕೆ ಈ ಹೆಸರು…..

ದುನಿಯಾ ವಿಜಿ ಅಟ್ಟಹಾಸಗಳು ಬೆಳಕಿಗೆ ಬರತೊಡಗಿದೆ. ಹೊರಗಡೆ ಹಿರೋ ಆಗಿ ಕಾಣಿಸಿಕೊಂಡಿರುವ ವಿಜಿ ತನ್ನೊಳಗಡೆ ಅಡಗಿಸಿಕೊಂಡಿರುವುದು ಬೇರೆ ಅನ್ನುವುದನ್ನು ಬಹಿರಂಗಪಡಿಸತೊಡಗಿದ್ದಾರೆ.

ಇನ್ನು ದುನಿಯಾ ಅಟ್ಟಹಾಸದ ನಡುವೆ ಪ್ರಸ್ತಾಪವಾಗುತ್ತಿರುವುದು ಪಾನಿಪೂರಿ ಕಿಟ್ಟಿ ಅನ್ನುವ ಹೆಸರು.ಬಾಡಿ ಬಿಲ್ಡರ್ ಅನ್ನಿಸಿಕೊಂಡಿರುವ ಕಿಟ್ಟಿ ಅಲಿಯಾಸ್ ಕೃಷ್ಣಮೂರ್ತಿ ಮುಂದೆ ಅದ್ಯಾಕೆ ಪಾನಿಪೂರಿ ಹೆಸರು ಸೇರಿಕೊಂಡಿದೆ ಅನ್ನುವುದೇ ಕುತೂಹಲ.

ಜೊತೆಗೆ ಪಾನಿಪೂರಿ ಕಿಟ್ಟಿ ಅನ್ನುವ ಹೆಸರನ್ನು ಜಾಲಾಡಿದಾರೆ ಎಲ್ಲೂ ಅಪರಾಧ ಹಿನ್ನಲೆ ಕಾಣಿಸಿಕೊಳ್ಳುತ್ತಿಲ್ಲ. ಅಂದ ಮೇಲೆ ಪಾನಿಪೂರಿ ಕಿಟ್ಟಿ ಹೆಸರು ಸದ್ದು ಮಾಡುತ್ತಿರುವುದ್ಯಾಕೆ ಎಂದು ನೋಡಿದರೆ, ಅವರು ಸೆಲೆಬ್ರೆಟಿ ಫಿಟ್ನೆಸ್ ಗುರು.

1

ಎಷ್ಟು ಮಂದಿಗೆ ಗೊತ್ತೋ, ಇಲ್ವೋ…ಸ್ಯಾಂಡಲ್ ವುಡ್ ನ ಸದ್ಯದ ಬಹು ಬೇಡಿಕೆಯ ಫಿಟ್ನೆಸ್ ಗುರು ಅಂದ್ರೆ ಪಾನಿ ಪೂರಿ ಕಿಟ್ಟಿ.

ರಾಜ್ಯ ಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾನಿ ಪೂರಿ ಕಿಟ್ಟಿ ಸಾಧನೆ ಮಾಡಿದ್ದು, ಬರೋಬ್ಬರಿ 24 ಬಾರಿ ಮಿಸ್ಟರ್ ಕರ್ನಾಟಕ, 11 ಬಾರಿ ಮಿಸ್ಟರ್ ಇಂಡಿಯಾ ಗೋಲ್ಡ್, 3 ಬಾರಿ ಚಾಂಪಿಯನ್ ಆಫ್ ಚಾಂಪಿಯನ್ ಮತ್ತು ಮಿಸ್ಟರ್ ವರ್ಲ್ಡ್ ಸ್ಪರ್ಧೆಯಲ್ಲಿ 3ನೇ ಹಾಗೂ 4ನೇ ಸ್ಥಾನ ಪಡೆದಿರುವ ಹೆಮ್ಮೆ ಇವರದ್ದು.

17760233_631327607053171_7589385101881197978_n

ದುನಿಯಾ ವಿಜಯ್, ಪ್ರೇಮ್, ಯಶ್, ಚೇತನ್ ಚಂದ್ರ ಸೇರಿದಂತೆ ಸ್ಯಾಂಡಲ್ ವುಡ್ ನ ಬಹುತೇಕ ಟಾಪ್ ನಟರಿಗೆ ಇದೇ ಪಾನಿ ಪೂರಿ ಕಿಟ್ಟಿ ಫಿಟ್ನೆಸ್ ಗುರುವಾಗಿರುವ ಕಾರಣ ಇವರ ಹೆಸರು ಇದೀಗ ಸದ್ದು ಮಾಡುತ್ತಿದೆ.

ಅದ್ಯಾಕೆ ಪಾನಿಪೂರಿ…?

ಕಿಟ್ಟಿ ಕುಟುಂಬದ ಮೂಲ ಕಸುಬು ಪಾನಿ ಪೂರಿ. ಕಿಟ್ಟಿ ತಂದೆ ಹಾಗೂ ತಾತ ಪಾನಿ ಪೂರಿ ವ್ಯಾಪಾರದಲ್ಲೇ ಜೀವನ ಸಾಗಿಸಿದವರು. ಚಿಕ್ಕವಯಸ್ಸಿನಿಂದಲೂ ಕಿಟ್ಟಿ, ಪಾನಿ ಪೂರಿ ಮಾಡುವುದರಲ್ಲಿ ಎಕ್ಸ್ ಪರ್ಟ್ . ಈಗ್ಲೂ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ಕಿಟ್ಟಿ ಅವರ ಪಾನಿ ಪೂರಿ ಅಂಗಡಿ ಇದೆ.

2

ಬಡತನದಲ್ಲೇ ಹುಟ್ಟಿ ಬೆಳೆದ ಪಾನಿ ಪೂರಿ ಕಿಟ್ಟಿಗೆ ಇದ್ದ ಏಕೈಕ ಆಸೆ ಅಂದ್ರೆ ಬಾಡಿ ಬಿಲ್ಡಿಂಗ್. ತಮ್ಮ ಪಾನಿ ಪೂರಿ ಅಂಗಡಿಗೆ ಬರುತ್ತಿದ್ದ ಪೊಲೀಸ್ ಆಫೀಸರ್ ಒಬ್ಬರ ಕಟ್ಟುಮಸ್ತಾದ ದೇಹ ಇವರಿಗೆ ಸ್ಫೂರ್ತಿ. ಮಲ್ಲೇಶ್ ಮಾಸ್ಟರ್ ಎಂಬುವರ ಮಾರ್ಗದರ್ಶನದಿಂದ ಬಾಡಿ ಬಿಲ್ಡ್ ಮಾಡಲು ಕಿಟ್ಟಿ ಶುರು ಮಾಡಿದರು. ಬಳಿಕ ಹಿಂತಿರುಗಿ ನೋಡಲಿಲ್ಲ.

17795697_631328317053100_7724666463184676202_n

ಒಂದು ಕಾಲದ ದುಷ್ಮನ್…ಮತ್ತೆ ಗೆಳೆಯ..ಈಗ ಮತ್ತೆ ದುಷ್ಮನ್ ಇದು ವಿಜಿ – ಪಾನಿಪೂರಿ ಕಿಟ್ಟಿ ನಡುವಿನ ಸ್ಟೋರಿ

ಸದಾ ನೆಗೆಟಿವ್ ಕಾರಣದಿಂದ ಸುದ್ದಿಯಲ್ಲಿರುವ ದುನಿಯಾ ವಿಜಿ ಇಂದು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಲ್ಲಿರುವುದು ಮತ್ತೆ ಹೊಡೆದಾಟ,ಬಡಿದಾಟದ ಕಾರಣಕ್ಕೆ. ದುನಿಯಾ ವಿಜಿ ಸುದ್ದಿಯಾಗಿರುವ ಮತ್ತೊಂದು ಹೆಸರು ಪಾನಿ ಪೂರಿ ಕಿಟ್ಟಿ.

ಗಾಂಧಿನಗರದ ಎಲ್ಲಾ ಸ್ಟಾರ್ ನಟರಿಗೆ ಬೇಕಾಗಿರುವ ಪಾನಿ ಪೂರಿ ಕಿಟ್ಟಿ ಒಂದು ಕಾಲದಲ್ಲಿ ದುನಿಯಾ ವಿಜಯ್ ಗೆ ದುಷ್ಮನ್ ಆಗಿದ್ದವರು ಅಂದ್ರೆ ನೀವು ನಂಬಲೇಬೇಕು.

ಯಾಕೆಂದರೆ ಇದನ್ನು ದುನಿಯಾ ವಿಜಿ 2016ರಲ್ಲೇ ಇದನ್ನು ಹೇಳಿದ್ದರು. ಕಿಟ್ಟಿ ವಿದ್ಯಾರಣ್ಯಪುರದಲ್ಲಿ ‘ಮಸಲ್ ಪ್ಲಾನೆಟ್’ ಜಿಮ್
ತೆರೆಯುವ ಸಂದರ್ಭದಲ್ಲಿ ವಿಜಿಯವರನ್ನು ಉದ್ಘಾಟನೆಗೆ ಆಹ್ವಾನಿಸಿದ್ದರು. ಆ ವೇಳೆ ಪಾನಿಪೂರಿ ಕಿಟ್ಟಿ ಬಗ್ಗೆ ಬರೆದಿಟ್ಟುಕೊಂಡಿದ್ದ ವಿಜಿ, ಕಿಟ್ಟಿಯ ಸಾಧನೆಯನ್ನು ಹೊಗಳಿದ್ದರು.

V1

ಆದರೆ ಅದ್ಯಾಕೆ ಅವರ ನಡುವೆ ದ್ವೇಷ ಇತ್ತು, ಅದು ಹೇಗೆ ಮರೆಯಾಯ್ತು ಅನ್ನುವುದನ್ನು ಹೇಳಲಿಲ್ಲ. ಇಬ್ಬರು ಗೆಳೆಯರಾದ ನಂತರ ದುನಿಯಾ ವಿಜಯ್ ಅಭಿನಯದ ‘ಶಂಕರ್ ಐ.ಪಿ.ಎಸ್’ ಸಿನಿಮಾದಿಂದ ಹಿಡಿದು ಮಾಸ್ತಿ ಗುಡಿ ಚಿತ್ರದವರೆಗೂ ದುನಿಯಾ ವಿಜಯ್ ಗೆ ಪರ್ಸನಲ್ ಟ್ರೇನರ್ ಆಗಿ ಪಾನಿ ಪೂರಿ ಕಿಟ್ಟಿ ಜೊತೆಗಿದ್ದರು.

ಬಳಿಕ ಅದ್ಯಾಕೋ ಬಳಿಕ ಸಂಬಂಧ ಹಳಸಿತು. ನಿನ್ನೆ ಹೈಗ್ರೌಂಡ್ ಸ್ಟೇಷನ್ ತನಕ ಬಂದು ನಿಲ್ಲಿಸಿತು.

1

ನಟ ವಿಜಿ ಮೇಲೆ ರೌಡಿಶೀಟರ್ ತೆರೆಯಲು ಪೊಲೀಸರಿಂದ ಸಿದ್ದತೆ

ನಟ ದುನಿಯಾ ವಿಜಿ ಒಳ್ಳೆಯ ಕೆಲಸಗಳಿಂದ ಸುದ್ದಿಯಾಗಿದ್ದು ಕಡಿಮೆ, ನೆಗೆಟಿವ್ ಕಾರಣದಿಂದ ಸುದ್ದಿಯಾಗಿದ್ದೇ ಹೆಚ್ಚು. ತನ್ನ ವೈಯುಕ್ತಿಕ ಜೀವನವಿರಬಹುದು, ಸಿನಿಮಾ ರಂಗವಿರಬಹುದು.

ಅದರಲ್ಲೂ ಕಾನೂನು ಹಾಗೂ ಪೊಲೀಸರೊಂದಿಗೆ ದುನಿಯಾ ವಿಜಿ ನಿಯತ್ತಿನಿಂದ ವರ್ತಿಸಿದ್ದು ಕಡಿಮೆ.

ಈ ಎಲ್ಲಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡಿರುವ ಪೊಲೀಸರು, ಜಿಮ್ ಟ್ರೈನರ್ ಮಾರುತಿಗೌಡ ಅವರ ಅಪಹರಣ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾದ ಬೆನ್ನಲ್ಲೇ ನಟ ದುನಿಯಾ ವಿಜಯ್ ವಿರುದ್ಧ ರೌಡಿ ಶೀಟರ್ ತೆರೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಪದೇ ಪದೇ ಒಂದಿಲ್ಲೊಂದು ಕಾನೂನು ಬಾಹಿರ ಕೃತ್ಯ ನಡೆಸುತ್ತಿರುವ ನಟ ದುನಿಯಾ ವಿಜಯ್, ಸದಾ ಸುದ್ದಿಯಲ್ಲಿದ್ದಾರೆ. ತಾನೊಬ್ಬ ಸೆಲೆಬ್ರೆಟಿ ಸಮಾಜಕ್ಕೆ ಮಾದರಿಯಾಗಿರಬೇಕು ಅನ್ನುವ ಕನಿಷ್ಠ ಜ್ಞಾನವಿಲ್ಲದ ವಿಜಿ ಇತ್ತೀಚೆಗೆ ದುಂಡಾವರ್ತನೆ ತೋರುತ್ತಿದ್ದಾರೆ.

ಹೊಡೆದಾಟ, ಗಲಾಟೆ, ಬೆದರಿಕೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಮಾಜಿ ಯೋಧರ ಮೇಲೆ ಹಲ್ಲೆ, ಆರೋಪಿ ತಪ್ಪಿಸಿಕೊಳ್ಳಲು ನೆರವು ಹೀಗೆ ದುನಿಯಾ ವಿಜಿ ಹೆಸರು ಕೇಳಿ ಬಂದಿರುವುದು ಸಮಾಜ ಹಾಗೂ ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಹೀಗಾಗಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ವಿಜಯ್ ವಿರುದ್ಧ ರೌಡಿ ಶೀಟರ್ ಓಪನ್ ಮಾಡುವುದಕ್ಕೆ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇನ್ನು ವಿಜಿ ಹಲ್ಲೆ ಮತ್ತು ಬೆದರಿಕೆ ಹಾಕಿರುವ ಪ್ರಕರಣಗಳ ಕುರಿತಂತೆ ಜನ ದೂರು ಕೊಡಲು ಧೈರ್ಯ ಮಾಡಿದರೆ ಸಾಕು ಮುಂದೆ ಇತಿಹಾಸ ನಿರ್ಮಾಣವಾಗಬಹುದು.

ಈ ನಡುವೆ ಜಿಮ್ ತರಬೇತುದಾರ ಮಾರುತಿಗೌಡ ಎಂಬುವವರ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದುನಿಯಾ ವಿಜಯ್ ಅವರನ್ನು ಹೈಗ್ರೌಂಡ್ಸ್ ಠಾಣೆಯಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಪೊಲೀಸ್ ಠಾಣೆ ಎದುರು ಜನರು ಸೇರುವ ಸಾಧ್ಯತೆ ಇರುವುದರಿಂದ ಯಾರಿಗೂ ತಿಳಿಯದಂತೆ ಹಿಂಬಾಗಿಲ ಮೂಲಕ ವಿಜಯ್ ಅವರನ್ನು ಅನ್ಯ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಮಾಜಿ ಯೋಧನಿಗೆ ಅವಾಜ್ ಹಾಕಿದ್ದ ಕರಿ ಚಿರತೆ ವಿಜಿ

ಪೊಲೀಸ್ ಅಧಿಕಾರಿಗಳ ಮುಂದೆ ತಾನೊಬ್ಬ ನಟ, ಸೆಲೆಬ್ರೆಟಿ ಅನ್ನುವುದನ್ನು ಮರೆತ ದುನಿಯಾ ವಿಜಿ ಅಟ್ಟಹಾಸ ಮೆರೆದಿದ್ದಾರೆ. ಘಟ್ಟ ಹತ್ತಿದ್ದರೂ ಹುಟ್ಟು ಗುಣ ಸುಟ್ಟು ಹೋಗುವುದಿಲ್ಲ ಅನ್ನುವ ಗಾದೆ ಮಾತಿಗೆ ಸರಿಯಾಗಿ ವರ್ತಿಸಿದ್ದಾರೆ.

ಹೈಗ್ರೌಂಡ್ ಪೊಲೀಸ್ ಠಾಣೆ ಮುಂದೆ ಅಟ್ಟಹಾಸ ಮೆರೆದ ಕರಿ ಚಿರತೆ ಇಂದು ಕಂಬಿ ಎಣಿಸಲೇಬೇಕು.ಭಾನುವಾರವಾಗಿರುವ ಕಾರಣ ಬೇಲ್ ಸಿಗುವುದಿಲ್ಲ.

ಈ ನಡುವೆ ಮಾಜಿ ಯೋಧರೊಬ್ಬರನ್ನು ಬೆದರಿಸಿರುವ ಆರೋಪ ದುನಿಯಾ ವಿಜಿ ಮೇಲೆ ಕೇಳಿ ಬಂದಿದೆ.
ಮಾಜಿ ಯೋಧ ವೆಂಕಟೇಶ್ ಅನ್ನುವವರು ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಇದೇ ದುನಿಯಾ ವಿಜಿ ಭಾಮೈದ ಕಿರಣ್ ವೆಂಕಟೇಶ್ ಕಡೆಯಿಂದ ಒಂದಿಷ್ಟು ಲಕ್ಷ ಹಣವನ್ನು ಸಾಲ ಎಂದು ಪಡೆದುಕೊಂಡು ಹೋಗಿದ್ದ.

ಆದರೆ ಹಲವು ತಿಂಗಳು ಕಳೆದರೂ ಕಾಸು ವಾಪಾಸ್ ಬರಲಿಲ್ಲ. ಕೇಳಲು ಹೋದ್ರೆ ಇನ್ಯಾರೋ ಮಧ್ಯ ಪ್ರವೇಶ ಮಾಡಿದರು.ದುನಿಯಾ ವಿಜಿ ಮಾತನಾಡುತ್ತಾರೆ ಎಂದು ಭರವಸೆ ಕೊಟ್ಟರು.

ಬಳಿಕ ದುನಿಯಾ ವಿಜಿ ಭೇಟಿ ಮಾಡಲು ಹೋದರೆ, ಮಾಜಿ ಯೋಧನ ಮೇಲೆಯೇ ದುನಿಯಾ ವಿಜಿ ಅಬ್ಬರಿಸಿದ್ದಾರೆ. ಇರೋ ಒಬ್ಬ ಮಗನ ಚರ್ಮ ಸುಳಿಯುವುದಾಗಿ ಬೆದರಿಕೆ ಹಾಕಿದ್ದಾರೆ.

ಸಮಾಜದಲ್ಲಿ ಸಿಕ್ಕಾಪಟ್ಟೆ ಗುರುತಿಸಿಕೊಂಡಿರುವ ದುನಿಯಾ ವಿಜಿಯನ್ನು ಎದುರು ಹಾಕಿಕೊಳ್ಳುವುದು ಹೇಗೆ ಎಂದು ವೆಂಕಟೇಶ್ ಪೊಲೀಸ್ ಠಾಣೆಗೂ ದೂರು ಕೊಟ್ಟಿರಲಿಲ್ಲ.

ಯಾವಾಗ ಬಾಡಿ ಬಿಲ್ಡರ್ ಗಳ ಮೇಲೂ ವಿಜಿ ಅಟ್ಟಹಾಸ ಮೆರೆದರೋ, ಮಾಜಿ ಯೋಧ ವೆಂಕಟೇಶ್ ವಿಜಿ ಮೇಲೆ ದೂರು ಕೊಡಲು ನಿರ್ಧರಿಸಿದ್ದಾರೆ.

ಮಾಸ್ತಿಗುಡಿ ಸಿನಿಮಾದಲ್ಲಿ ಆಗಿರುವ ಅನಾಹುತಕ್ಕೆ ಹೊಣೆ ಯಾರು ಅನ್ನುವುದನ್ನು ಜನ ಅನ್ನು ಮರೆತಿಲ್ಲ ಅನ್ನುವುದನ್ನು ಈ ವೇಳೆ ನೆನಪಿಸುವ ಅವಶ್ಯಕತೆ ಖಂಡಿತಾ ಇದೆ.

ಮೋದಿ ಭೇಟಿ ಹಿಂದಿನ ರಹಸ್ಯ ಅನಾವರಣ ಮಾಡಿದ ಮೋಹನ್ ಲಾಲ್

ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ ಚಿತ್ರ ನಟ ಮೋಹನ್ ಲಾಲ್ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು.

ಅವತ್ತೇ ಅವರು ಭೇಟಿಯ ಬಗ್ಗೆ ಹೇಳಿದ್ದರೂ ಕೂಡಾ, ಅದು ರಾಜಕೀಯ ಬಣ್ಣ ಪಡೆದುಕೊಂಡಿತ್ತು. ತಿರುವನಂತಪುರಂ ಲೋಕಸಭಾ ಕ್ಷೇತ್ರದಿಂದ ಶಶಿ ತರೂರ್ ವಿರುದ್ಧ ಸ್ಪರ್ಧಿಸುತ್ತಾರೆ ಅನ್ನುವ ಮಾತುಗಳು ಕೇಳಿ ಬಂದಿತ್ತು.

ಬರುವಷ್ಟು ಸುದ್ದಿಗಳು ಬರಲಿ ಎಂದು ಕಾದಿದ್ದ ಮೋಹನ್ ಲಾಲ್ ಇದೀಗ ಮೋದಿ – ಮೋಹನ್ ಲಾಲ್ ಭೇಟಿಯ ಸುದ್ದಿ ತಣ್ಣಗಾಗುತ್ತಿದ್ದಂತೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಈ ತಮ್ಮ ಫೇಸ್‍ಬುಕ್ ಖಾತೆಯಲ್ಲಿ 8 ಪುಟಗಳ ವಿವರಣೆ ಕೊಟ್ಟಿರುವ ಅವರು ಒಬ್ಬ ಭಾರತೀಯನಾಗಿ ನಾನು ಪ್ರಧಾನಿಯನ್ನ ಯಾವಾಗ ಬೇಕಾದರು ಭೇಟಿ ಮಾಡುವುದಕ್ಕೆ ಅವಕಾಶವಿದೆ. ಮೋದಿ ಹಾಗೂ ನನ್ನ ಭೇಟಿಯ ವೇಳೆ ಯಾವುದೇ ರಾಜಕೀಯ ಅಂಶಗಳ ಕುರಿತು ಚರ್ಚೆ ನಡೆದಿಲ್ಲ.

ವಿಶ್ವಶಾಂತಿ ಫೌಂಡೇಶನ್ ಹಾಗೂ ನಮ್ಮ ಸಾಮಾಜಿಕ ಕಾರ್ಯಗಳ ಬಗ್ಗೆ ಭೇಟಿ ವಿವರಿಸಲಾಗಿದ್ದು, ಪ್ರಧಾನಿ ಮೋದಿ ಅವರಿಗೆ ಗ್ಲೋಬಲ್ ಮಲಯಾಳಿ ರೌಂಡ್ ಟೇಬಲ್ ಕಾರ್ಯಕ್ರಮದಲ್ಲಿ ಭಾವಹಿಸಲು ಆಹ್ವಾನ ನೀಡಿದ್ದೇನೆ. ಪ್ರಧಾನಿ ಮೋದಿ ಕೇರಳಕ್ಕೆ ಬೇಕಾದ ಎಲ್ಲಾ ಬೆಂಬಲವನ್ನು ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ ಎಂದು ಮೋಹನ್ ಲಾಲ್ ವಿವರಿಸಿದ್ದಾರೆ.

ಆದರೂ ಗಾಳಿ ಇಲ್ಲದೆ ಎಲೆ ಅಲ್ಲಾಡಲು ಸಾಧ್ಯವೇ…

https://www.facebook.com/plugins/post.php?href=https%3A%2F%2Fwww.facebook.com%2FActorMohanlal%2Fposts%2F1900878909967796%3A0&width=500

Dislike ಹಬ್ಬ – ಕಣ್ಸನ್ನೆ ಹುಡುಗಿಯ ಎರಡನೇ ಹಾಡಿಗೆ ನೆಟ್ಟಿಗರಿಂದ ಫುಲ್ ಗುಮ್ಮಿಂಗ್

ಒರು ಅಡಾರ್ ಲವ್ ಸ್ಟೋರಿ ಚಿತ್ರದ ಮೊದಲ ಹಾಡಿನ ಮೂಲಕ ಬೆಳಕಿಗೆ ಬಂದ ಪ್ರಿಯಾ ವಾರಿಯರ್ ಒಂದೇ ಒಂದು ಕಣ್ಸನೆಯಿಂದ ರಾತ್ರೋ ರಾತ್ರಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದರು.

ನ್ಯಾಷನಲ್ ಕ್ರಷ್ ಆಗಿ ಹೋಗಿದ್ದ ಪ್ರಿಯಾ ವಾರಿಯರ್ ಗೆ ಬಂದ ಅವಕಾಶಗಳಿಗೆ ಲೆಕ್ಕವಿರಲಿಲ್ಲ.

ಕಣ್ಣು ಹೊಡೆಯುವ ತುಣುಕು ಸುಪ್ರೀಂ ಕೋರ್ಟ್‌,ಲೋಕಸಭೆ ಸದ್ದು ಮಾಡಿತ್ತು ಅಂದರೆ ಕಣ್ಣೇಟು ಹೇಗಿರಬಹುದು ಲೆಕ್ಕ ಹಾಕಿ.

ಪ್ರಿಯಾ ವಾರಿಯರ್ ಫೇಮಸ್ ಆಗುತ್ತಿದ್ದಂತೆ, ಒರು ಅಡಾರ್ ಲವ್ ಸ್ಟೋರಿ ಚಿತ್ರದಲ್ಲೂ ಸಾಕಷ್ಟು ಬದಲಾವಣೆಯಾಯ್ತು. ಕೆಲವೇ ಸೆಕೆಂಡುಗಳ ಕಾಲ ಕಾಣಿಸಿಕೊಂಡಿದ್ದ ಯುವ ನಟಿ ಪ್ರಿಯಾ ವಾರಿಯರ್‌ ಅದ್ಭುತ ಕಣ್ಸನ್ನೆಯ ಮೂಲಕ ನ್ಯಾಷನಲ್‌ ಕ್ರಷ್‌ ಎಂಬ ಪಟ್ಟಕ್ಕೆ ಏರುತ್ತಿದ್ದಂತೆ ಸೈಡ್‌ ರೋಲ್‌ನಲ್ಲಿದ್ದ ಪ್ರಿಯಾ ವಾರಿಯರ್‌ಗೆ ಪ್ರಮುಖ ಪಾತ್ರ ಬಡ್ತಿ ಪಡೆದರು.

Priya Varrier1

ಮಾಣಿಕ್ಯ ಮಲರಾಯಿ ಪೋವೆ ಬಿಡುಗಡೆಗೊಂಡು ಬರೋಬ್ಬರಿ 7 ತಿಂಗಳ ನಂತರ ‘ಫ್ರೀಕ್‌ ಪೆಣ್ಣೆ’ ಹಾಡನ್ನು ಬಿಡುಗಡೆ ಮಾಡಲಾಗಿದೆ. ಆದರೆ ಅಭಿಮಾನಿಗಳ ನಿರೀಕ್ಷೆಯನ್ನು ತಲುಪುವಲ್ಲಿ ಕಣ್ಸನೆ ಹುಡುಗಿ ಸೋತಿದ್ದಾಳೆ.

ಒರು ಅಡಾರ್‌ ಲವ್‌ನ ಎರಡನೇ ಹಾಡು ಯೂ ಟ್ಯೂಬ್ ನಲ್ಲಿ Trending ನಲ್ಲಿ ನಂಬರ್ 1 ಸ್ಥಾನ ಗಿಟ್ಟಿಸಿಕೊಂಡಿದೆ. ಆದರೆ ಹಾಡಿನ ಬಗ್ಗೆ ನೆಗೆಟಿವ್ ಕಮೆಂಟ್ ಗಳು ರಾಶಿ ರಾಶಿಯಾಗಿ ಬರುತ್ತಿದೆ. ಮಾತ್ರವಲ್ಲದೆ, ಲೈಕ್ ಗಿಂತ ಹೆಚ್ಚಾಗಿ ಡಿಸ್ ಲೈಕ್ ಬಂದಿದೆ.

 

2018-09-22_22-53-15

ರಶ್ಮಿಕಾ ಬೆನ್ನಲ್ಲೇ…ತಮಿಳಿನತ್ತ ವಲಸೆ ಹೊರಟ ಸಂಯುಕ್ತಾ ಹೆಗಡೆ

ಬಿಗ್ ಬಾಸ್ ಮನೆಯಲ್ಲಿ ಕಿತ್ತಾಡಿಕೊಳ್ಳದಿರುತ್ತಿದ್ದರೆ ಸಂಯುಕ್ತಾ ಹೆಗಡೆ, ಚಂದನವನದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದರು. ಜೊತೆಗೆ ಕಿರಿಕ್ ಪಾರ್ಟಿ ನಂತರ ಸಿಕ್ಕ ಕಾಲೇಜು ಕುಮಾರ ಚಿತ್ರ ತಂಡದ ಜೊತೆ ಕಿರಿಕ್ ಮಾಡಿಕೊಳ್ಳದಿರುತ್ತಿದ್ದರೆ ಸಂಯುಕ್ತಾ ಹೆಗಡೆ ಕನ್ನಡದಲ್ಲಿ ಬೇಡಿಕೆಯ ನಟಿಯಾಗಿರುತ್ತಿದ್ದರು.

ಯಾಕೆಂದರೆ ಆಕೆಗೆ ಪ್ರತಿಭೆ ಇದೆ.ನಟನೆಯ ತಾಕತ್ತು ಕೂಡಾ ಚೆನ್ನಾಗಿದೆ.ಆದರೆ ವರ್ತನೆ ಅನ್ನುವುದು ಕನ್ನಡಿಗರಿಗೆ ಹಿಡಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಂಯುಕ್ತಾ ವಿರುದ್ಧ ಬರುತ್ತಿರುವ ನೆಗೆಟಿವ್ ಕಮೆಂಟ್ ಗಳನ್ನು ನೋಡಿ ಯಾವ ನಿರ್ದೇಶಕರು, ನಿರ್ಮಾಪಕರು ಸಂಯುಕ್ತಾ ಹೆಗಡೆಯನ್ನು ಹಾಕಿಕೊಂಡು ಸಿನಿಮಾ ಮಾಡಲು ಧೈರ್ಯ ಮಾಡುತ್ತಿಲ್ಲ.

ಹೀಗಾಗಿ ನಟಿ ಸಂಯುಕ್ತಾ ಹೆಗಡೆ ಇತ್ತೀಚೆಗೆ ತಮಿಳಿನ ‘ಪಪ್ಪಿ’ ಚಿತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು. ಈಗ ಅವರು ಸದ್ದಿಲ್ಲದೆ ಕಾಲಿವುಡ್​ನ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ.

37241414_1847942918632079_5788025669006917632_n

ಈ ಬಾರಿ ಅವರು ನಟ ‘ಜಯಂ’ ರವಿ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಪ್ರದೀಪ್ ರಂಗನಾಥಮ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ, ಇನ್ನೂ ಹೆಸರಿಡದ ಸಿನಿಮಾದಲ್ಲಿ ರವಿ ಹಾಗೂ ಕಾಜಲ್ ಅಗರ್​ವಾಲ್ ಮುಖ್ಯಭೂಮಿಕೆಯಲ್ಲಿದ್ದಾರೆ. ಈಗ ಸಂಯುಕ್ತಾ ಕೂಡ ಈ ತಂಡ ಸೇರಿಕೊಂಡಿದ್ದಾರಂತೆ.

29386275_1780372005358610_4367242921559096328_n

ರಕ್ಷಿತ್ ಶೆಟ್ಟಿ ನಟನೆಯ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ್ದ ಸಂಯುಕ್ತಾ, ಬಳಿಕ ಕಾಲೇಜ್​ಕುಮಾರ್ ಸಿನಿಮಾದಲ್ಲಿ ನಟಿಸಿದ್ದರು. ‘ಕಿರಿಕ್ ಪಾರ್ಟಿ’ ತೆಲುಗಿಗೆ ಕಿರಿಕ್ ಪಾರ್ಟಿ ಶೀರ್ಷಿಕೆಯಲ್ಲಿ ರಿಮೇಕ್ ಆದಾಗ ಟಾಲಿವುಡ್​ಗೂ ಕಾಲಿಡುವಂತಾಯಿತು.

ಬಾಯಿಯಿಂದ ಬೆಂಕಿ ಹತ್ತಿಸಲು ಹೋಗಿ ವಿದ್ಯಾರ್ಥಿ ಸಾವು

ಬಾಯಿಯಿಂದ ಬೆಂಕಿ ಹೊತ್ತಿಸುವ ವಿದ್ಯೆ ಕಲಿಯಲು ಹೋದ 15 ವರ್ಷದ ಯುವಕನೊಬ್ಬನನ್ನು ಅದೇ ಅಗ್ನಿಯ ಕೆನ್ನಾಲಿಗೆ ಬಲಿ ತೆಗೆದುಕೊಂಡ ಘಟನೆ ತಮಿಳುನಾಡಿನ ಕಾಂಚಿಪುರಂನಲ್ಲಿ ನಡೆದಿದೆ.

ಶುಕ್ರವಾರ ಮೊಹರಂ ಕಾರಣದಿಂದ ರಜೆ ಇದ್ದ ಕಾರಣ ಮನೆಯ ತಾರಸಿಯಲ್ಲಿ ಈ ತಂತ್ರ ಕಲಿಯುವ ಪ್ರಯತ್ನ ಮಾಡಿದ್ದಾನೆ. ಬಾಯಿಗೆ ಸೀಮೆ ಎಣ್ಣೆ ತುಂಬಿಸಿ ಬಳಿಕ ಬೆಂಕಿ ಕಡ್ಡಿ ಹಚ್ಚಿ ಬಾಯಿಯ ಮುಖಾಂತರ ಸೀಮೆಎಣ್ಣೆ ಊದಲು ಯತ್ನಿಸಿದ್ದಾನೆ. ಈ ವೇಳೆ ಊದುವಾಗ, ಸೀಮೆಎಣ್ಣೆ ಆತನ ಮೈಮೇಲೆ ಚೆಲ್ಲಿದೆ.ಹೀಗಾಗಿ ಬೆಂಕಿ ಮೈಗೆ ಹತ್ತಿಕೊಂಡಿದೆ.

ಬಾಲಕನ ಕಿರುಚಾಟ ಕೇಳಿದ ತಕ್ಷಣ ಆತನ ತಂದೆ ಮತ್ತು ನೆರೆಮನೆಯವರು ತಾರಸಿಗೆ ಓಡಿ ಬಂದಿದ್ದಾರೆ. ಅಷ್ಟು ಹೊತ್ತಿಗೆ ಆತ ತೀವ್ರ ಸುಟ್ಟ ಗಾಯಗಳಿಗೆ ತುತ್ತಾಗಿದ್ದ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಕಾಂಚಿಪುರಂನ ಉರಪ್ಪಕ್ಕಂನ ಈ ವಿದ್ಯಾರ್ಥಿ ಹತ್ತನೇ ತರಗತಿ ಕಲಿಯುತ್ತಿದ್ದ. ಮೃತ ಬಾಲಕ ಸಾಹಸ ಮನೋಭಾವವುಳ್ಳವನಾಗಿದ್ದ. ಆತನಿಗೆ ಬಾಯಿಯಿಂದ ಬೆಂಕಿ ಹೊತ್ತಿಸುವ ತಂತ್ರ ಕಲಿಯುವ ಇಂಗಿತವಿತ್ತು ಎಂದು ಘಟನೆಯ ಬಗ್ಗೆ ಗುಡುವಂಚೆರಿ ಪೊಲೀಸ್​ ಠಾಣೆಯ ಇಸ್​ಸ್ಪೆಕ್ಟರ್​ ಶರವಣನ್ ತಿಳಿಸಿದ್ದಾರೆ.

ರಾಮ..ರಾಮಾ..ಲೇಡಿ ರೌಡಿ ಶೀಟರ್ ಗೆ ಶ್ರೀರಾಮಸೇನೆ ಮಹಿಳಾ ಅಧ್ಯಕ್ಷೆ ಪಟ್ಟ

ಶ್ರೀರಾಮಸೇನೆ ಸಂಘಟನೆಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಯಶಸ್ವಿನಿ ಗೌಡ ಅವರನ್ನು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇಮಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ನಡೆದ ಸಮಾರಂಭದಲ್ಲಿ ಯಶಸ್ವಿನಿ ಗೌಡ ಅವರನ್ನು ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು.

ಯಶಸ್ವಿನಿ ಗೌಡ ರೌಡಿ ಶೀಟರ್ ಆಗಿದ್ದು ಅವರನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಯಶಸ್ವಿನಿ ಗೌಡ ವಿರುದ್ಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣವಿದ್ದು, ಇಂಥ ರೌಡಿ ಶೀಟರ್ಗೆ ಅಧಿಕಾರ ಕೊಟ್ಟಿದ್ದು ಎಷ್ಟು ಸರಿ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಯಶಸ್ವಿನಿ ಪತಿ ಮಹೇಶ್ ಕೂಡ ರೌಡಿ ಶೀಟರ್. ಮಹೇಶ್ ಯಶಸ್ವಿನಿ ಅವರ ಎರಡನೇ ಪತಿಯಾಗಿದ್ದು ಪುಟ್ಟೇನಹಳ್ಳಿ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾರೆ. ತಮ್ಮ ಮೊದಲ ಪತಿಯ ಕೊಲೆಯಲ್ಲಿ ಯಶಸ್ವಿನಿ ಗೌಡ ವಿರುದ್ಧ ಆರೋಪ ಕೂಡ ಕೇಳಿಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಮೋದ್ ಮುತಾಲಿಕ್, ಸೇನೆಯ ಪದ್ಧತಿ ಪ್ರಕಾರ ಅವರನ್ನು ಆಯ್ಕೆ ಮಾಡಲಾಗಿದೆ. ರೌಡಿಶೀಟರ್ ಅನ್ನೋದು ಇವತ್ತು ಒಂದು ಫ್ಯಾಷನ್ ಆಗಿದೆ. ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಕೂಡ ರೌಡಿಶೀಟ್ ಓಪನ್ ಮಾಡಲಾಗಿದೆ ಎಂದಿದ್ದಾರೆ. ನ್ಯಾಯಾಲಯದಲ್ಲಿ ಆರೋಪಿಯೆಂದು ಸಾಬೀತಾದರೆ ನಾವು ಅವರನ್ನು ಹುದ್ದೆಯಿಂದ ಕೆಳಗೆ ಇಳಿಸುತ್ತೇವೆ ಎಂದು ಹೇಳಿದ್ದಾರೆ.

ಶ್ರೀರಾಮ ಸೇನೆ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿಕೊಂಡ ಮೇಲೆ ಮಾತನಾಡಿದ ಯಶಸ್ವಿನಿ ಗೌಡ, ಆರ್.ಟಿ.ನಗರದ ಅಂದಿನ ಇನ್ಸ್ ಪೆಕ್ಟರ್ ಕಾರಣದಿಂದ ರೌಡಿ ಶೀಟ್ ಓಪನ್ ಆಗಿದೆ. ಪ್ರಕರಣವೊಂದರಲ್ಲಿ ನಾನೇ ದೂರು ಕೊಟ್ಟು ಅವರನ್ನು ಅಮಾನತ್ತು ಮಾಡಿಸಿದ್ದೆ. ಇದರಿಂದಲೇ ಅವರು ನನ್ನ ವಿರುದ್ಧ ರೌಡಿಶೀಟ್ ಓಪನ್ ಮಾಡಿಸಿದರು ಎಂದಿದ್ದಾರೆ. ನಾನು ಯಾವ ಮಹಿಳೆಗೂ ಹೊಡೆದಿಲ್ಲ. ದೂರು ನೀಡಿದ್ದವರು ಕೋರ್ಟ್ನಲ್ಲಿ ರಾಜಿಯಾಗಿದ್ದಾರೆ. ಇವತ್ತಿನವರೆಗೂ ಯಾವುದೇ ಠಾಣೆಯಿಂದ ನೋಟಿಸ್ ಬಂದಿಲ್ಲ. ರೌಡಿಗಳೇನಾದರೂ ಸಮಾಜಸೇವೆ ಮಾಡಬಾರದು ಎಂದಿದೆಯಾ ಎಂದು ಪ್ರಶ್ನಿಸಿದ್ದಾರೆ.

ರೌಡಿ ಶೀಟರ್ ಪಟ್ಟ ಹೊಂದಿರುವವರಿಗೆ ಹಿಂದೂ ಸಂಘಟನೆಯ ಜವಾಬ್ದಾರಿ ಕೊಟ್ಟರೆ ಹೇಗೆ ಅನ್ನುವುದು ನಮ್ಮ ಪ್ರಶ್ನೆ. ಪ್ರಮೋದ್ ಮುತಾಲಿಕ್ ಮೇಲೆ ಸಾಕಷ್ಟು ಗೌರವ ಇತ್ತು. ಹಿಂದೂ ಸಂಘಟನೆಯ ಮುಖಂಡನಾಗಿ ಮಾಡಿದ ಕೆಲಸದ ಬಗ್ಗೆ ಪ್ರೀತಿ ಇತ್ತು. ಆದರೆ ಈಗ ರೌಡಿ ಶೀಟರ್ ಗಳು ಸಂಘಟನೆ ಒಳಗೆ ಬಂದರೆ ಸಮಾಜಕ್ಕೆ ಅದ್ಯಾವ ಪಾಠ ಹೇಳಲು ಸಾಧ್ಯ.

ಹೆತ್ತವರಾಗುವ ಸಂಭ್ರಮದಲ್ಲಿ ವಿದೇಶದಲ್ಲಿ ಫೋಟೋಶೂಟ್​

ಕಳೆದೆರಡು ವರ್ಷಗಳಿಂದ ಕೆಜಿಎಫ್’ ಸಿನಿಮಾದಲ್ಲಿ ಮುಳುಗಿ ಹೋಗಿದ್ದ ಯಶ್​ ಈಗ ಗರ್ಭಿಣಿ ಪತ್ನಿಗಾಗಿ ಸಮಯ ಮೀಸಲಾಗಿಟ್ಟಿದ್ದಾರೆ.

ರಾಧಿಕಾ ಜೊತೆ ವಿದೇಶಿ ಪ್ರವಾಸ ಕೈಗೊಂಡಿರುವ ಅವರು ಮಾಲ್ಡೀವ್ಸ್​ನಲ್ಲಿ ಫೋಟೋ ಶೂಟ್​ ಮಾಡಿಸಿದ್ದಾರೆ.

ಈಗ ಫೋಟೋ ಶೂಟ್​ನ ಒಂದೊಂದು ಫೋಟೋಗಳನ್ನು ರಾಧಿಕಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ ರಾಧಿಕಾ.