Advertisements

ರಶ್ಮಿಕಾ – ರಕ್ಷಿತ್ ಬೇರೆಯಾಗಲು ಕಾರಣವೇನು :ಟ್ರೋಲ್ ಪೇಜ್ ಗಳ ಸಂಶೋಧನಾ ವರದಿ

ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಕ್ಷಿತ್ ಹಾಗೂ ರಶ್ಮಿಕಾ ಬೇರೆ ಬೇರೆಯಾಗುತ್ತಿದ್ದಾರೆ ಅನ್ನುವುದು ಹಳೆಯ ಸುದ್ದಿ. ಮಳೆ ನಿಂತರೂ ಹನಿ ನಿಂತಿಲ್ಲ ಅನ್ನುವಂತೆ ಅವರಿಬ್ಬರ ಸುತ್ತ ಸುದ್ದಿಗಳು ಸುತ್ತುತ್ತಿವೆ.

ಅದರಲ್ಲೂ ಟ್ರೋಲ್ ಪೇಜ್ ಗಳು ಹಬ್ಬ ಮಾಡಿವೆ. ಕೆಲವೊಂದು ಟ್ರೋಲ್ ಪೇಜ್ ಗಳು ಜೋಡಿಯ ಬ್ರೇಕ್ ಅಪ್ ಗೆ ಸಂಭಾವ್ಯ ಕಾರಣಗಳನ್ನು ಕೊಟ್ಟಿದೆ. ದಯವಿಟ್ಟು ಗಂಭೀರವಾಗಿ ತೆಗೆದುಕೊಳ್ಳಬೇಡಿ

  1. ಕಿರಿಕ್ ಪಾರ್ಟಿ ಚಿತ್ರದ ಬಳಿಕ ರಶ್ಮಿಕಾ ಮಂದಣ್ಣ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಅಂಜನಿಪುತ್ರ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಪುನೀತ್ ಜೊತೆ ಬೈಕ್ ಸೀನ್ ನಲ್ಲಿ ರಶ್ಮಿಕಾ ಅಪ್ಪುವನ್ನು ಬಿಗಿಯಾಗಿ ತಬ್ಬಿಕೊಂಡು ಹೋಗಿದ್ದರು. ಇದು ರಕ್ಷಿತ್ ಕೋಪಕ್ಕೆ ಕಾರಣವಾಗಿತ್ತಂತೆ.
  2. ಬಳಿಕ ರಶ್ಮಿಕಾ ಗಣೇಶ್ ಜೊತೆ ಚಮಕ್ ಮಾಡಿದ್ದರು. ಈ ಚಿತ್ರದಲ್ಲಿ ಮದ್ಯ ಕುಡಿದ ರೀತಿಯಲ್ಲಿ ಮಾಡಿದ ಓವರ್ ಆಕ್ಟಿಂಗ್ ರಕ್ಷಿತ್ ಗೆ ಬೇಸರ ತರಿಸಿತ್ತಂತೆ.
  3. ತೆಲುಗಿನ ಗೀತಾ ಗೋವಿಂದಂ ಚಿತ್ರದಲ್ಲಿ ರಶ್ಮಿಕಾ ಬೋಲ್ಡ್ ಆಗಿ ನಟಿಸಿದ್ದರು. ಕಿಸ್ಸಿಂಗ್ ಸೀನ್ ಕಂಡು ಕಸಿವಿಸಿಗೊಂಡಿದ್ದ ರಕ್ಷಿತ್ ಅದರ ಪ್ರಿಮಿಯರ್ ಶೋದಿಂದ ಎದ್ದು ಹೊರನಡೆದಿದ್ದರಂತೆ.
  4. ಮಾತ್ರವಲ್ಲದೆ ಚಿತ್ರದಲ್ಲಿನ ವಿಜಯ್ ದೇವರಕೊಂಡ ಜತೆಗಿನ ಕೆಲ ದೃಶ್ಯಗಳ ಬಗ್ಗೆ ರಕ್ಷಿತ್ ಅಸಮಾಧಾನ ಉಂಟಾಗಿತ್ತಂತೆ.
  5.  ಗೀತಾ ಗೋವಿಂದಂ ಬ್ಲಾಕ್ ಬಸ್ಟರ್ ಹಿಟ್ ನಿಂದಾಗಿ ರಕ್ಷಿತ್ ಇಮೇಜ್ ಗಿಂತ ರಶ್ಮಿಕಾ ಇಮೇಜ್ ದೊಡ್ಡದಾಗಿ ಬೆಳೆಯಿತು ಎಂಬ ಕೀಳರಿಮೆ?
  6.  ಇನ್ನು ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ನಡುವಿನ ವಯಸ್ಸಿನ ಅಂತರ ಹೆಚ್ಚಿದೆ. 35ರ ಹರೆಯದ ರಕ್ಷಿತ್ 22ರ ಹರೆಯದ ರಶ್ಮಿಕಾರನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವರಿಬ್ಬರ ನಡುವೆ 13 ವರ್ಷದ ಅಂತರವಿದ್ದು ಇದು ಬ್ರೇಕ್ ಅಪ್ ಗೆ ಕಾರಣವಿರಬಹುದೇ ಎಂದು ಟ್ರೋಲ್ ಪೇಜ್ ಗಳು ಪ್ರಶ್ನೆಗಳನ್ನು ಹಾಕಿದೆ.
Advertisements

ಬೆನ್ನನ್ನೇ ಮೆಟ್ಟಿಲಾಗಿಸಿದವನಿಗೆ ಸಿಕ್ತು ಬಂಪರ್ ಬಹುಮಾನ

ಕೇರಳ ಭೀಕರ ಪ್ರವಾಹದ ವೇಳೆ ಕಾಣಿಸಿಕೊಂಡ ರಿಯಲ್ ಹಿರೋಗಳಿಗೆ ಲೆಕ್ಕವಿಲ್ಲ. ಇದರಲ್ಲಿ ಬೆಸ್ಟ್ ಹಿರೋ ಯಾರು ಎಂದು ಹೇಳುವಂತಿಲ್ಲ.ಯಾಕೆಂದರೆ ಎಲ್ಲರೂ ಮಾಡಿದ್ದು ಅದ್ಭುತ ಕಾರ್ಯಗಳನ್ನು.

ಅದರಲ್ಲಿ ಒಂದಿಷ್ಟು ಹೆಚ್ಚು ಸುದ್ದಿಯಾಗಿದ್ದು, ಜೈಸಲ್ ಎಂಬ ಮೀನುಗಾರ.

ಭೀಕರ ಪ್ರವಾಹದ ರಕ್ಷಣಾ ಕಾರ್ಯಾಚರಣೆ ವೇಳೆ ತನ್ನ ಬೆನ್ನನ್ನೇ ಮೆಟ್ಟಿಲಾಗಿಸಿ ಮಹಿಳೆಯರ ಬೋಟ್ ಹತ್ತಿಸಿಕೊಂಡಿದ್ದ ಜೈಸಲ್ ದಿನ ಬೆಳಗಾಗುವ ಹೊತ್ತಿಗೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ.

ಜೈಸೆಲ್ ಎಂಬ ಮೀನುಗಾರ ಅಪಾಯದಲ್ಲಿದ್ದ ಮಹಿಳೆಯರನ್ನು ರಕ್ಷಿಸುವ ಸಲುವಾಗಿ ತನ್ನ ಬೋಟ್ ಚಲಾಯಿಸಿದ್ದ. ಅಲ್ಲದೆ ಮಹಿಳೆಯರು ಬೋಟ್ ಹತ್ತಲು ಕಷ್ಟವಾದಾಗ ತನ್ನ ಬೆನ್ನನ್ನೇ ಮೆಟ್ಟಿಲಾಗಿಸಿ ಮಹಿಳೆಯರಿಗೆ ನೆರವಾಗಿದ್ದ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿತ್ತು. ಅಲ್ಲದೆ ಕೇರಳ ಪ್ರವಾಹ ಸಂಬಂಧ ವಿಶ್ವದ ಗಮನ ಸೆಳೆಯಲು ಈ ವಿಡಿಯೋ ಕೂಡ ನೆರವಾಗಿತ್ತು.

ಇದೀಗ ಜೈಸೆಲ್ ಅಪರೂಪದ ಕಾರ್ಯಕ್ಕೆ ಮಹಿಂದ್ರಾ ಸಂಸ್ಥೆ ಫಿದಾ ಆಗಿದ್ದು, ಜೈಸೆಲ್ ಕಾರ್ಯವನ್ನು ಮೆಚ್ಚಿ ಅವರಿಗೆ ಮಹಿಂದ್ರಾ ಸಂಸ್ಥೆ ಹೊಚ್ಚ ಹೊಸ ಮಹೀಂದ್ರಾ ಮರಾಝೊ ಎಂಬ ಐಶಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದೆ.

ಇನ್ನು ತನಗೆ ಸಿಕ್ಕಿರುವ ಉಡುಗೊರೆ ಬಗ್ಗೆ ಮಾತನಾಡಿರುವ ಜೈಸೆಲ್ ಇದನ್ನು ನಾನು ನನ್ನ ಜನರ ಅನುಕೂಲಕ್ಕೆ ತಕ್ಕಂತೆ ಬಳಸುತ್ತೇನೆ. ಅವರ ಸೇವೆಗಾಗಿ ಉಪಯೋಗಿಸುತ್ತೇನೆ ಅಂದಿದ್ದಾರೆ .ಇದಪ್ಪ ಮಾತು ಅಂದರೆ.

 

 ಸಾರಾ ಮಹೇಶ್ ಹೇಳಿದ ಜೋಕ್ –  ಬಿಜೆಪಿ ಶಾಸಕರಿಗೆ ಜೆಡಿಎಸ್ ಅಪರೇಷನ್ ಮಾಡುತ್ತದೆಯಂತೆ

 ಬಿಜೆಪಿ ನಮ್ಮ ಓರ್ವ ಶಾಸಕರನನ್ನು ಸೆಳೆದು ನೋಡಲಿ, ನಾವು ಕೌಂಟರ್ ಕೊಡುತ್ತೇವೆ. ಅದಕ್ಕೆ ನಾವು ಸಿದ್ದರಾಗಿದ್ದೇವೆ ಎಂದು ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.

ಮಹೇಶ್ ಹೇಳಿಕೆ ನೋಡಿ ನಗುವುದೋ ಅಳುವುದೋ ಎಂದು ಗೊತ್ತಾಗುತ್ತಿಲ್ಲ. ಪ್ರಸ್ತುತ ರಾಜಕೀಯದಲ್ಲಿ ಜೆಡಿಎಸ್ ಗೆ ತನ್ನ ಶಾಸಕರನ್ನು ಉಳಿಸಿಕೊಂಡರೆ ಸಾಕಾಗಿದೆ.ಈಗಾಗಲೇ ಹಲವಾರು ವರ್ಷಗಳಿಂದ ಅಧಿಕಾರವಿಲ್ಲದೆ ಕೂತಿರುವ ಜೆಡಿಎಸ್ ಶಾಸಕರು ಮತ್ತೆ ಎಲ್ಲಿ ನಾವು ಅಧಿಕಾರಿ ಕಳೆದುಕೊಳ್ಳುತ್ತೇವೋ ಅನ್ನುವ ಭೀತಿಯಲ್ಲಿದ್ದಾರೆ.

ಜೊತೆಗೆ ಕೆಲ ಶಾಸಕರಿಗೆ ಈ ಸರ್ಕಾರವೂ ಬೇಕಾಗಿಲ್ಲ. ಕಾಂಗ್ರೆಸ್ ವಿರುದ್ಧ ಹೊಡೆದಾಡಿ ಗೆದ್ದ ಶಾಸಕರು ಮುಂದೆ ತಮ್ಮ ಸೀಟುಗಳಿಗೆ ಎಲ್ಲಿ ಕುತ್ತು ಬರುತ್ತದೋ ಅನ್ನುವ ಆತಂಕದಲ್ಲಿದ್ದಾರೆ ಅನ್ನುವುದು ಮಹೇಶ್ ಅವರಿಗೆ ಅರಿವು ಇದ್ದಂತಿಲ್ಲ.

ಬಿಜೆಪಿಯ 10 ಶಾಸಕರು ನನ್ನ ಸಂಪರ್ಕದಲ್ಲಿರೋ ವಿಷಯ ಜೆಡಿಎಸ್ ವರಿಷ್ಠರಿಗೆ ಗೊತ್ತಿದೆ. ನಾನು ಸಹ 20 ವರ್ಷ ಬಿಜೆಪಿಯಲ್ಲಿ ಇದ್ದವನು. ಹಲವು ಶಾಸಕರು ನನಗೆ ಆತ್ಮೀಯರು ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಮಹೇಶ್ ಎಚ್ಚರಿಕೆ ನೀಡಿದ್ದಾರೆ. ಆದರೆ ಇದು ಸದ್ದು ಮಾಡಿ ಹಾವು ಓಡಿಸುವ ಪ್ರಯತ್ನ. ಬಿಜೆಪಿಯಿಂದ ಅದ್ಯಾವ ಶಾಸಕನೂ ಹೊರಗೆ ಕಾಲಿಡಲು ಸಿದ್ದರಿಲ್ಲ. ಜೊತೆಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಅನ್ನುವ ವಿಶ್ವಾಸ ಅವರಲ್ಲಿದೆ.

ಜೆಡಿಎಸ್ ಅಥವಾ ಕಾಂಗ್ರೆಸ್ ಬಿಜೆಪಿ ಶಾಸಕರನ್ನು ಸೆಳೆಯುವುದಿದ್ದರೆ ಯಾವತ್ತೋ ಆ ಕೆಲಸ ಮಾಡಬೇಕಾಗಿತ್ತು. ಜೊತೆಗೆ ಬಿಜೆಪಿಗೆ ಶಾಸಕರು ರಾಜೀನಾಮೆ ಕೊಡ್ತಾರೆ ಅಂದಿಟ್ಟುಕೊಂಡರೂ, ಉಪ ಚುನಾವಣೆಯಲ್ಲಿ ಗೆಲ್ಲಿಸುವ ತಾಕತ್ತು ಯಾರಿಗಿದೆ. ಅದಕ್ಕೆ ಬೇಕಾದ ಸಂಪನ್ಮೂಲ ಯಾರು ಕೊಡ್ತಾರೆ.

ಹೋಗ್ಲಿ ಹೇಗೋ ಬಿಜೆಪಿಗೆ ರಾಜೀನಾಮೆ ಕೊಟ್ಟ ಶಾಸಕರು ಗೆದ್ದು ಬರ್ತಾರೆ ಅಂದುಕೊಳ್ಳೋಣ, ಅವರಿಗೆ ಸಚಿವ ಸ್ಥಾನ ಕೊಡದಿರಲು ಸಾಧ್ಯವೇ. ಸಚಿವ ಸ್ಥಾನ ಕೊಡಲು ಎಲ್ಲಿ ಜಾಗ ಖಾಲಿ ಇದೆ.

ಹೊಸ ತಿರುವಿನತ್ತ ಬ್ರೇಕಪ್ ಸುದ್ದಿ – FBಯಲ್ಲಿ breakup ಸುದ್ದಿಗೆ Break ಹಾಕಿದ ಶೆಟ್ಟಿ

ಕಿರಿಕ್‌ ಪಾರ್ಟಿಯ ಕರ್ಣ ಮತ್ತು ಸಾನ್ವಿ ತಮ್ಮದೇ ಆದ ಕಾರಣದಿಂದಾಗಿ ದೂರವಾಗಲು ನಿರ್ಧಾರ ಮಾಡಿದ್ದಾರೆ ಅನ್ನುವುದು ಮಾಧ್ಯಮಗಳಲ್ಲಿ ಮಹತ್ವ ಸುದ್ದಿಯಂತೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ರಕ್ಷಿತ್ ಶೆಟ್ಟಿ ಫೇಸ್‍ಬುಕ್‌ನಲ್ಲಿ ಪ್ರತ್ಯಕ್ಷವಾಗಿದ್ದಾರೆ.

ಕೆಲ ವಾರಗಳ ಹಿಂದಷ್ಟೇ ಏಕಾಏಕಿ ಸಾಮಾಜಿಕ ಜಾಲತಾಣಗಳಿಂದ ನಾಪತ್ತೆಯಾಗಿದ್ದ ಅವರು ಫೇಸ್ ಬುಕ್ ನಲ್ಲಿ ಸ್ಪಷ್ಟೀಕರಣ ನೀಡಿದ್ದು. ಎಲ್ಲವೂ ಕಪೋಲಕಲ್ಪಿತ ಅಂದಿದ್ದಾರೆ.

“ಬೇರೆ ಕೆಲವು ವಿಷಯಗಳ ಬಗ್ಗೆ ಗಮನಹರಿಸಬೇಕಾಗಿದ್ದರಿಂದ ಸಾಮಾಜಿಕ ಮಾಧ್ಯಮಗಳಿಂದ ತಾನು ದೂರ ಸರಿಯುತ್ತಿರುವುದಾಗಿ ಹೇಳಿದ್ದೆ. ಆದರೆ ಕೆಲವು ದಿನಗಳಿಂದ ಪ್ರೀತಿಪಾತ್ರರ ಬಗ್ಗೆ ಹರಿದಾಡುತ್ತಿರುವ ಕೆಲವು ಸಂಗತಿಗಳನ್ನು ಸ್ಪಷ್ಟಪಡಿಸಲು ಮತ್ತೆ ಬರಬೇಕಾಯಿತು”

“ರಶ್ಮಿಕಾ ಬಗ್ಗೆ ನಿಮಗೆಲ್ಲಾ ಒಂದು ಅಭಿಪ್ರಾಯ ರೂಪುಗೊಂಡಿದೆ. ಆದರೆ ನಾನು ಯಾರನ್ನೂ ದೂರುವುದಿಲ್ಲ. ಯಾಕೆಂದರೆ ಆ ರೀತಿ ಬಿಂಬಿಸಲಾಯಿತು. ಏನು ಹೇಳುತ್ತೀವೋ ಏನು ನೋಡುತ್ತೇವೋ ಅದೆಲ್ಲಾ ಸತ್ಯ ಎಂದು ಎಲ್ಲರೂ ನಂಬುತ್ತಾರೆ. ಆದರೆ ಅದೆಲ್ಲಾ ಸತ್ಯ ಆಗಿರಲ್ಲ. ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡು ಎನ್ನುತ್ತಾರಲ್ಲಾ ಹಾಗೆ. 

ರಶ್ಮಿಕಾ ನನಗೆ ಎರಡು ವರ್ಷಗಳಿಗೂ ಹೆಚ್ಚು ಸಮಯದಿಂದ ಗೊತ್ತು ಮತ್ತು ನಿಮ್ಮೆಲ್ಲರಿಗಿಂತ ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಇಲ್ಲಿ ಕೆಲವೊಂದು ಅಂಶಗಳು ಕೆಲಸ ಮಾಡುತ್ತಿವೆ. ದಯವಿಟ್ಟು ಜಡ್ಜ್ ಮಾಡುವುದನ್ನು ನಿಲ್ಲಿಸಿ.ರಶ್ಮಿಕಾ ನೆಮ್ಮದಿಯಾಗಿ ಇರುವಂತೆ ಬಿಡಿ.

ಶೀಘ್ರದಲ್ಲೇ ಎಲ್ಲವೂ ಬಗೆಹರಿಯುತ್ತದೆ ಎಂದು ನಾನು ಭಾವಿಸುತ್ತೇನೆ. ನಿಮ್ಮೆಲ್ಲರಿಗೂ ಸತ್ಯ ಏನು ಎಂದು ಗೊತ್ತಾಗುತ್ತದೆ. ದಯವಿಟ್ಟು ಯಾವುದೇ ಮಾಧ್ಯಮದ ಸುದ್ದಿಗಳನ್ನು ನಂಬಬೇಡಿ. ಅದ್ಯಾವುದೂ ನನ್ನ ಅಥವಾ ರಶ್ಮಿಕಾ ಬಗೆಗಿನ ಫಸ್ಟ್ ಹ್ಯಾಂಡ್ ಮಾಹಿತಿ ಅಲ್ಲ. ಬಹಳಷ್ಟು ಮಂದಿ ಅವರ ಅಗತ್ಯಕ್ಕೆ ತಕ್ಕಂತೆ ಸ್ವಂತ ಸುದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ. ಅವೆಲ್ಲವೂ ಕಪೋಲ ಕಲ್ಪಿತ. ಕಲ್ಪನೆಗಳೆಲ್ಲಾ ಸತ್ಯ ಅಲ್ಲ. 

ಸ್ವಲ್ಪ ದಿನಗಳ ಮಟ್ಟಿಗೆ ಈ ಪೇಜನ್ನು ಲೈವ್‌ ಆಗಿ ಇಡುವ ಮೂಲಕ ಈ ಸುದ್ದಿ ಎಲ್ಲರಿಗೂ ತಲುಪುವಂತಾಗಲಿ. ನಿಜವಾಗಿ ಅಗತ್ಯ ಅನ್ನಿಸಿದಾಗ ಮತ್ತೆ ನಾನು ಬರುತ್ತೇನೆ. ಸಾಮಾಜಿಕ ಮಾಧ್ಯಮದಿಂದ ದೂರ ಸರಿಯಲು ಇದ್ಯಾವುದೂ ಕಾರಣವಲ್ಲ. ಸಾಮಾಜಿಕ ಮಾಧ್ಯಮಕ್ಕೆ ಅಡಿಕ್ಟ್ ಆದಕಾರಣ ಕೆಲಸದ ಮೇಲೆ ಗಮನಹರಿಸಲು ಆಗುತ್ತಿರಲಿಲ್ಲ. ಆದ್ದರಿಂದ ದೂರ ಉಳಿಯಬೇಕಾಯಿತು” ಎಂದಿದ್ದಾರೆ.

ರಕ್ಷಿತ್ ಶೆಟ್ಟಿಯ ಈ ಬರವಣಿಗೆ ಇದೀಗ ಬ್ರೇಕಪ್ ಸುದ್ದಿಗೆ ಹೊಸ ತಿರುವು ಕೊಟ್ಟಿದೆ.
https://www.facebook.com/plugins/post.php?href=https%3A%2F%2Fwww.facebook.com%2Ftherakshitshetty%2Fposts%2F1902072589828470&width=500

 

rakshithFB

ಬ್ರೇಕಪ್ ಗೆ ತೇಪೆ ಹಾಕುವ ಕೆಲಸ ಸಾಗಿದೆಯಂತೆ….?

ಕಿರಿಕ್ ಪಾರ್ಟಿಯ ಜೋಡಿ ನಿಜ ಜೀವನದಲ್ಲಿ ಕಿರಿಕ್ ಮಾಡಿಕೊಂಡು, ಇದೀಗ ಸುದ್ದಿಯಾಗಿದೆ. ಆದರೆ ಇಲ್ಲಿ ರಶ್ಮಿಕಾ ಮತ್ತು ರಕ್ಷಿತಾ ನಡುವೆ ಕಿರಿಕ್ ಆಗಿಲ್ಲ ಅನ್ನುವ ಸುದ್ದಿಯೊಂದು ಬಂದಿದೆ.

ಅವರಿಬ್ಬರೂ ಚೆನ್ನಾಗಿಯೇ ಇದ್ದರು. ಆದರೆ ಯಾವಾಗ ಗೀತಾ ಗೋವಿಂದಂ ಚಿತ್ರದ ಕಿಸ್ಸಿಂಗ್ ಸೀನ್ ಲೀಕ್ ಆಯ್ತೋ, ರಕ್ಷಿತ್ ಶೆಟ್ಟಿಯ ಕುಟುಂಬಸ್ಥರು ಕಿರಿಕಿರಿಗೆ ಒಳಗಾದ್ರಂತೆ. ಸಂಬಂಧಿಕರು, ಅವರು ಇವರು ಕೇಳುವ ಪ್ರಶ್ನೆಗಳು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

ಮದುವೆ ನಿಶ್ಚಿತಾರ್ಥ ನಡೆದ ನಂತರವೂ ಬೇರೆಯವರ ಜೊತೆ ಕಿಸ್ ಮಾಡುವುದೆಂದರೆ ಹೇಗೆ ಅನ್ನುವ ಪ್ರಶ್ನೆಗಳಿಗೆ ಅವರ ಬಳಿ ಉತ್ತರವಿರಲಿಲ್ಲ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ನೋಡಿ ಅವರು ಕೂಡಾ ಕಸಿವಿಸಿಗೆ ಒಳಗಾದರು.

ಹೀಗಾಗಿ ರಕ್ಷಿತ್ ಬಳಿಯೂ ಸಮಸ್ಯೆ ಹೇಳಿಕೊಂಡಿದ್ದಾರೆ. ಅವೆಲ್ಲ ಸಿನಿಮಾ, ಸಿನಿಮಾ ಜಗತ್ತಿನಲ್ಲಿ ಅವೆಲ್ಲಾ ಮಾಮೂಲಿ ಎಂದು ರಕ್ಷಿತ್ ಸಂಬಂಧಿಕರನ್ನು ಸಮಾಧಾನ ಮಾಡಿದ್ದಾರೆ. ಆದರೆ ಅವರಿಗೆ ಸಿನಿಮಾ ಜಗತ್ತು ಅರ್ಥವಾಗಲಿಲ್ಲ. ಹೀಗಾಗಿ ವಿಷಯ, ರಶ್ಮಿಕಾ ಕುಟುಂಬಸ್ಥರನ್ನು ತಲುಪಿತು.

ರಕ್ಷಿತ್ ಗೆ ಗೀತಾ ಗೋವಿಂದಂ ಕಥೆ ಗೊತ್ತಿತ್ತು. ಅದರಲ್ಲಿ ಕಿಸ್ಸಿಂಗ್ ದೃಶ್ಯವಿರುವುದು ಗೊತ್ತಿತ್ತು. ಅಂದ ಮೇಲೆ ಇದ್ಯಾವ ಹೊಸ ರಗಳೆ ಎಂದು ರಶ್ಮಿಕಾ ಕುಟುಂಬಸ್ಥರು ನೊಂದುಕೊಂಡಿದ್ದಾರೆ.

ಈ ಪ್ರಶ್ನೆಗಳಿಂದ ಅವರಿಗೂ ಕಿರಿಕಿರಿಯಾಯ್ತು. ಮದುವೆಗೆ ಮುಂಚೆಯೇ ಹೀಗಾದ್ರೆ ಇನ್ನೂ ಮದುವೆಯಾದ ನಂತ್ರ ಹೇಗೋ ಅನ್ನುವ ಪ್ರಶ್ನೆ ಅವರಿಗೆ ಕಾಡಿತು. ಈಗಷ್ಟೇ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿರುವ ಮಗಳು ಸದ್ದು ಮಾಡುತ್ತಿದ್ದಾಳೆ. ಇನ್ನೊಂದಿಷ್ಟು ವರ್ಷದಲ್ಲಿ ಆಕೆ ತೆಲುಗು ಚಿತ್ರರಂಗದಲ್ಲಿ ಮಿಂಚುವುದು ಗ್ಯಾರಂಟಿ. ಅವಕಾಶಗಳು ಸಿಕ್ಕಾಗ ಬಳಸಿಕೊಂಡರೆ ಬಂತು, ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿ ಹೋಗುತ್ತದೆ. ಹೀಗಾಗಿ ಈಗ ಎದ್ದಿರುವ ಪ್ರಶ್ನೆಗಳನ್ನು ಗಂಭೀರವಾಗಿ ತೆಗೆದುಕೊಂಡರೆ ಮಗಳ ಕೆರಿಯರ್ ಹಾಳಾಗುತ್ತದೆ ಎಂದು ಹಿಂಸೆ ಪಟ್ಟುಕೊಂಡೇ ಅವರ ಗಟ್ಟಿ ನಿರ್ಧಾರಕ್ಕೆ ಬಂದರು ಎನ್ನಲಾಗಿದೆ.

ಆದರೆ ಇದೀಗ ಬಂದಿರುವ ಸುದ್ದಿಯ ಪ್ರಕಾರ ಎರಡೂ ಕುಟುಂಬಗಳಿಗೆ ಸಿನಿಮಾ ಜಗತ್ತನ್ನು ಪರಿಚಯಿಸುವ ಕೆಲಸವನ್ನು ರಶ್ಮಿಕಾ, ರಕ್ಷಿತ್ ಮಾಡುತ್ತಿದ್ದಾರಂತೆ. ಒಡೆದ ಮನಸ್ಸುಗಳಿಗೆ ಮುಲಾಮು ಹಚ್ಚುವ ಕೆಲಸವೂ ಸಾಗಿದೆಯಂತೆ. ಹಾಗಂತ ಇದು ಇಂದು ನಿನ್ನೆಯ ಪ್ರಯತ್ನವಲ್ಲ, ಒಡೆದ ಮನಸ್ಸುಗಳನ್ನು ಒಂದು ಮಾಡುವ ಕೆಲಸ ತಿಂಗಳಿನಿಂದ ನಡೆಯುತ್ತಿದೆ. ಆ ಕಾರಣದಿಂದಲೇ ಹಿಂದೊಮ್ಮೆ ಬ್ರೇಕಪ್ ಅಂದಾಗ ಇವೆಲ್ಲಾ ಸುಳ್ಳು ಎಂದು ಇಬ್ಬರೂ ನಕ್ಕು ಸುಮ್ಮನಾಗಿದ್ದು.

ಆದರೆ ದಿಢೀರ್ ಎಂದು ನಿನ್ನೆ ಬ್ರೇಕ್ ಅಪ್ ಸುದ್ದಿ ವೈರಲ್ ಆಗಿರುವುದು ಎರಡೂ ಮನೆಯವರನ್ನು ಒಂದು ಮಾಡುವ ಕೆಲಸಕ್ಕೆ ಒಂದಿಷ್ಟು ಹಿನ್ನಡೆಯಾಗಿದೆ ಎಂದು ಹೇಳಲಾಗಿದೆ.

ಮುಂದೇನು ಅನ್ನುವುದು ಯಾರಿಗೂ ಗೊತ್ತಿಲ್ಲ. ಮಾಹಿತಿಗಳ ಪ್ರಕಾರ ರಕ್ಷಿತ್ ಹಾಗೂ ರಶ್ಮಿಕಾ ಅವರಿಗೂ ಗೊತ್ತಿಲ್ಲವಂತೆ. ಹೀಗಾಗಿ ಶ್ರೀಮನ್ನಾರಾಯಣ ಚಿತ್ರ ಮಾಡುತ್ತಿರುವ ರಕ್ಷಿತ್ ನಿಜ ಜೀವನದಲ್ಲೂ ಶ್ರೀಮನ್ನಾರಾಯಣ ಆಗ್ತಾರ ಕಾದು ನೋಡಬೇಕಾಗಿದೆ.

Shocking Video – LIVE ಕಾರ್ಯಕ್ರಮದಲ್ಲಿ ಸಾವು ಕೂಡಾ LIVE ಆಯ್ತು

ಜಮ್ಮು ಕಾಶ್ಮೀರದ ಹೆಸರಾಂತ ವಿದ್ವಾಂಸರಾದ ಹಾಗೂ ಸಾಮಾಜಿಕ ಕಾರ್ಯಕರ್ತೆಯಾದ ರೀತಾ ಜೆತಿಂದರ್‌ ಟಿ.ವಿ. ಕಾರ್ಯಕ್ರಮದ ಸಂದರ್ಶದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ರೀತಾ ಜೆತಿಂದರ್ ಸಾಮಾಜಿಕ ಕಾರ್ಯಕರ್ತೆ ಹಾಗೂ ಡೋಗ್ರಿ ಭಾಷಾ ತಜ್ಞೆಯಾಗಿ ಸಾಕಷ್ಟು ಹೆಸರು ಮಾಡಿದ್ದಾರೆ.

ಸರಕಾರಿ ಸ್ವಾಮ್ಯದ ದೂರದರ್ಶನ ನೇರಪ್ರಸಾರ ಕಾರ್ಯಕ್ರಮ ನಡೆಯುವಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ರೀತಾ ಅವರು ಸಂದರ್ಶಕರ ಜೊತೆ ಮಾತಾನಾಡುವಾಗಲೇ ರೀತಾ ಕುಸಿದಿದ್ದಾರೆ.

ಈ ಸಂದರ್ಭದಲ್ಲಿ ಸಂದರ್ಶಕರು ರೀತಾ ಅವರ ಜೀವನ ಮತ್ತು ಸಾಧನೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ತಮ್ಮ ಅನಿಸಿಕೆಗಳನ್ನು ಹೇಳುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಏದುಸಿರು ಬಿಟ್ಟು, ಹಾಗೆಯೇ ಕುರ್ಚಿಗೆ ಒರಗಿದ್ದಾರೆ. ಒಂದೇ ಕ್ಷಣದಲ್ಲಿ ಏನಾಗುತ್ತಿದೆ ಎಂಬುದನ್ನು ಅಲ್ಲಿದ್ದವರು ಆಲೋಚಿಸುವುದರೊಳಗೆ ಅವರ ಪ್ರಾಣಪಕ್ಷಿ ಹಾರಿಹೋಗಿದೆ.

ಅವರ ಸಾವಿಗೆ ಹೃದಯ ಸ್ತಂಭನ ಕಾರಣ ಎಂದು ತಿಳಿದುಬಂದಿದೆ.

ಜಮ್ಮು ಮತ್ತು ಕಾಶ್ಮೀರದ ಕಲೆ, ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಕಾರ್ಯದರ್ಶಿಯಾಗಿ ಅವರು ಕೆಲಸ ಮಾಡಿದ್ದರು.
ಶ್ರೀನಗರದ ದೂರದರ್ಶನ ಕೇಂದ್ರದಲ್ಲಿ ಇಂದು ಬೆಳಗ್ಗೆ 8.30ಕ್ಕೆ ನಡೆಯುತ್ತಿದ್ದ ‘ಗುಡ್ ಮಾರ್ನಿಂಗ್ ಜೆಕೆ’ ಕಾರ್ಯಕ್ರಮದಲ್ಲಿ ಲೇಖಕಿ, ಶಿಕ್ಷಣ ತಜ್ಞೆ ಪ್ರೊ.ರೀತಾ ಜೆತಿಂದರ್ ಅವರು ಅತಿಥಿಯಾಗಿ ಭಾಗವಹಿಸಿದ್ದರು.

ಏನಾಯ್ತು ದೀಪಿಕಾ… ಮದುವೆ ಬಗ್ಗೆ ಕೇಳಿದರೆ ಕೆನ್ನೆ ಕೆಂಪಾಗಲಿಲ್ಲ – ಮೂತಿ ಸುಡು ಕೆಂಡವಾಗಿತ್ತು..

ದರ ಏರಿಕೆ, ನೆರೆ, ಬರ ಹೀಗೆ ಜನರ ಸಂಕಷ್ಟದ ಸುದ್ದಿಗಳು ರಾರಾಜಿಸಬೇಕಾದ ಜಾಗದಲ್ಲಿ ಮದುವೆ,ಡೈವೋರ್ಸ್ ಗಳೇ ರಾರಾಜಿಸುತ್ತಿದೆ. ಯಾರನ್ನು ದೂರುವುದು ಗೊತ್ತಾಗುತ್ತಿಲ್ಲ.

ಇದೀಗ ಕಿರಿಕ್ ಜೋಡಿ ನಿಶ್ಚಿತಾರ್ಥದ ಕಿರಿಕ್ ನಡುವೆ ಗೃಹಸ್ಥಾಶ್ರಮ ಸ್ವೀಕರಿಸಲು ಸಿದ್ದವಾಗಿರುವ ದೀಪಿಕಾ ಪಡುಕೋಣೆ ಕಿರಿಕ್ ಮಾಡಿಕೊಂಡಿದ್ದಾಳೆ.

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆ ಕುರಿತಂತೆ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿ ಹರಿದಾಡುತ್ತಿದೆ. ಮದುವೆಗೆ ಕರೆಯೋದಿಲ್ಲ ಅನ್ನುವುದು ಗೊತ್ತಿದ್ದರೂ ಜನ ಮಾತ್ರ ಅವರದ್ದು ಮದುವೆ ಯಾವಾಗ ಎಂದು ಇಣುಕುತ್ತಿದ್ದಾರೆ.

ಸಂಬಂಧವಿಲ್ಲದ ಸುದ್ದಿ ಬಗ್ಗೆ ನಮಗೆ ಇನ್ನಿಲ್ಲದ ಕಾತರವೇ ಅದಕ್ಕೆ ಕಾರಣ.

ಮಾಹಿತಿ ಪ್ರಕಾರ, ಈ ವರ್ಷ ನವೆಂಬರ್ 10 ರಂದು ಇಟಲಿಯ ಲೇಕ್ ಕೊಮೊದಲ್ಲಿ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನಡೆಯಲಿದೆ ಎನ್ನಲಾಗಿದ್ದು ಕೇವಲ 30 ಗಣ್ಯ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ.

ಆದರೆ ಮದುವೆ ಬಗ್ಗೆ ಪ್ರಶ್ನೆ ಕೇಳಿದರೆ ಕೆನ್ನೆ ಕೆಂಪು ಮಾಡಬೇಕಾದ ದೀಪಿಕಾ ಕೆನ್ನೆಯನ್ನು ಕೆಂಡ ಮಾಡಿ ಉತ್ತರಿಸಿದ್ದಾರೆ.
ಇತ್ತೀಚೆಗೆ ಮಹಿಳೆಯ ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ನಟಿಯನ್ನು ಪತ್ರಕರ್ತನೊಬ್ಬ ಮದುವೆ ಬಗ್ಗೆ ಆಕೆಯನ್ನೇ ಪ್ರಶ್ನಿಸಿದ್ದಾನೆ.

ಇದರಿಂದ ಗರಂ ಆದ ದೀಪಿಕಾ ಇದ್ದಕ್ಕಿದ್ದಂತೆ ಮೈ ಮೇಲೆ ಅದ್ಯಾವ ಶಕ್ತಿ ಆವರಿಸಿದಂತೆ ಆಡಿದ್ದಾರೆ. ವರದಿಗಾರ ಮೇಲೆಯೇ ಹರಿಹಾಯ್ದಿದ್ದಾರೆ.

“ನನ್ನ ಮದುವೆ ಕುರಿತು ನೀವು ಕೇಳುವ ಪ್ರಶ್ನೆಗೆ ನಾನು ಉತ್ತರಿಸುವುದಿಲ್ಲ, ಅದು ನನ್ನ ವೈಯುಕ್ತಿಕ ವಿಚಾರ. ಕಾರ್ಯಕ್ರಮದಲ್ಲಿ ಏನು ಪ್ರಶ್ನೆ ಕೇಳಬೇಕೋ ಅದನ್ನು ಕೇಳಿ ಎಂದು ದೀಪಿಕಾ ಗಟ್ಟಿಯಾಗಿ ಉತ್ತರಿಸಿದ್ದಾರೆ.

ಮುಂದಿನ ಭಾನುವಾರದಿಂದ ಬಸ್ ಪ್ರಯಾಣ ದುಬಾರಿ

ಈಗಾಗಲೇ ಹಲವು ವಸ್ತುಗಳ ದರ ಏರಿಕೆಯಿಂದ ತತ್ತರಿಸಿರುವ ಜನರಿಗೆ ರಾಜ್ಯ ಸರ್ಕಾರ ಗಣೇಶ ಚತುರ್ಥಿ ಕೊಡುಗೆ ನೀಡಿದೆ. ಹೀಗಾಗಿ ರಾಜ್ಯದ ಜನ ಮತ್ತೊಂದು ಹೊರೆ ಹೊರಲು ಸಿದ್ದರಾಗಬೇಕಾಗಿದೆ.

ಪೆಟ್ರೋಲ್ ಕೈ ಸುಡುತ್ತಿರುವ ಬೆನ್ನಲ್ಲೇ KSRTC ಬಸ್ ಪ್ರಯಾಣ ದರ ಜೇಬು ಸುಡಲಿದೆ.

ಬರುವ ಸಂಬಳದಲ್ಲಿ ತೆರಿಗೆ ಅದು ಇದು ಎಂದು ಕತ್ತರಿ. ಹೋಗ್ಲಿ ಪೆಟ್ರೋಲ್ ದರ ಏರಿಕೆಯಾಯ್ತು ಅಂತಾ ಸಂಬಳ ಏರಿಕೆಯಾಗುತ್ತಾ ಇಲ್ಲ.

ಬರೋ ಸಂಬಳದಲ್ಲಿ ಜೀವನ ಸಾಗಿಸಬೇಕು ಅನ್ನುವುದಾದರೆ ಕೆಂಪು ಬಸ್ ನಲ್ಲೇ ಊರಿಗೆ ಹೋಗಿ ಬರುವುದು ಬೆಟರ್, ಇನ್ನು ರೈಲ್ವೆ ಅವಕಾಶವಿದ್ದರೆ ಅದನ್ನೇ ನೆಚ್ಚಿಕೊಳ್ಳಬೇಕು. ಯಾಕಪ್ಪ ಬಸ್ ಗೆ ಅಷ್ಟೊಂದು ದುಡ್ಡು ಇನ್ನೊಂದು ಐನೂರು ಸೇರಿಸಿದರೆ ವಿಮಾನವನ್ನೇ ಹತ್ತಬಹುದು.

( Image : ಪಬ್ಲಿಕ್ ಟಿವಿ ಕೃಪೆ – ಟಿವಿ ಸ್ಕ್ರೀನ್ ನಿಂದ ಪಡೆಯಲಾಗಿದೆ)

courtesy public tv
courtesy public tv
courtesy public tv
courtesy public tv

9876

courtesy public tv
courtesy public tv
4
courtesy public tv
3
courtesy public tv
courtesy public tv
courtesy public tv
courtesy public tv
courtesy public tv

ನೀರು ಹಾಕಿ ಬಸ್ ಓಡಿಸೋಕೆ ಆಗುತ್ತಾ….ದೇವೇಗೌಡರ ಪ್ರಶ್ನೆ

ಗಣೇಶ ಚತುರ್ಥಿಯ ಒಳಗಾಗಿ ಸಾರಿಗೆ ಸಂಸ್ಥೆಗಳ ಪ್ರಯಾಣಿಕ ದರ ಏರಿಕೆಯ ಅನಿವಾರ್ಯತೆಗೆ ಸರ್ಕಾರ ಸಿಲುಕಿದೆ. ಪ್ರಯಾಣಿಕರ ದರ ಏರಿಸದಿದ್ದರೆ ಕೋಟಿ ಕೋಟಿ ನಷ್ಟ ಗ್ಯಾರಂಟಿ.

ಆದರೆ ಜನತೆಯ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೋ ಅನ್ನುವ ಆತಂಕವೂ ಕಾಡುತ್ತಿದೆ.

ಈ ನಡುವೆ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಪ್ರಧಾನಿ ದೇವೇಗೌಡರು ಸಾರಿಗೆ ಸಂಸ್ಥೆಯ ಬಸ್ ದರ ಏರಿಕೆ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಇಂಧನ ದರ ಹೀಗೆ ಏರಿಕೆಯಾಗುತ್ತಿದ್ದರೆ ಬಸ್ ಅನ್ನು ನೀರು ಹಾಕಿ ಓಡಿಸಲು ಆಗುತ್ತಾ..? ಎಂದು ಪ್ರಶ್ನಿಸಿದ್ದಾರೆ.

ಬಸ್ ಪ್ರಯಾಣವನ್ನು ಸುಮ್ಮನೆ ಏರಿಕೆ ಮಾಡುತ್ತಿಲ್ಲ. ಕಾರಣ ಕೊಟ್ಟು ದರ ಏರಿಕೆ ಮಾಡುತ್ತಿದ್ದಾರೆ. ಪರಿಸ್ಥಿತಿ ನೋಡಿದರೆ ಇಂಧನ ದರ ಇಳಿಯುವ ಲಕ್ಷಣ ಕಾಣಿಸುತ್ತಿಲ್ಲ. ಹೀಗಾಗಿ ಪ್ರಯಾಣ ದರ ಏರಿಕೆ ಮಾಡುವುದರಲ್ಲಿ ತಪ್ಪಿಲ್ಲ ಎಂದು ಎಂದು ಅವರು ಸರ್ಕಾರದ ಪರ ಬ್ಯಾಟಿಂಗ್ ಮಾಡಿದ್ದಾರೆ.

ಸಂಬಂಧ ಉಳಿಸಲು ಕುಟುಂಬಸ್ಥರು ಸಾಕಷ್ಟು ಶ್ರಮಿಸಿದ್ದರು..?

ಕಿರಿಕ್ ಪಾರ್ಟಿ ಖ್ಯಾತಿಯ ಜೋಡಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಯಾವಾಗ ಸುದ್ದಿಯಲ್ಲಿ ಇರಲಿಲ್ಲ ಹೇಳಿ. ಚಿತ್ರ ಬಂದ ದಿನದಿಂದ ಇವರಿಬ್ಬರು ಸದಾ ಸುದ್ದಿಯಲ್ಲಿದ್ದರು.

ಮೊದಲಿಗೆ ಚಿತ್ರದ ವಿಷಯ,ನಂತರ ಇವರಿಬ್ಬರೂ ಪ್ರೀತಿಸುತ್ತಿದ್ದಾರೆ ಅನ್ನುವ ಗಾಸಿಪ್, ಬಳಿಕ ಇವರಿಬ್ಬರ ಪ್ರೀತಿ. ನಂತರ ನಿಶ್ಚಿತಾರ್ಥ, ಬಳಿಕ ತೆಲುಗಿಗೆ ಸವಾರಿ, ಗೋವಿಂದಂ ಚಿತ್ರದಲ್ಲಿ ಕಿಸ್ಸಿಂಗ್ ಹೀಗೆ ಪುರಾಣ ಮುಂದುವರಿಯುತ್ತದೆ.

ಇದೀಗ ನಿಶ್ಚಿತಾರ್ಥ ಮುರಿದು ಬಿದ್ದಿರುವುದಾಗಿ ಆಪ್ತ ಮೂಲಗಳು ಹೇಳಿವೆ.

ಗೀತ ಗೋವಿಂದಂ ಸಿನಿಮಾದಲ್ಲಿ ರಶ್ಮಿಕಾ ಮತ್ತು ವಿಜಯ್ ಲಿಪ್ ಲಾಕ್ ಮಾಡಿಕೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂದರ್ಭದಲ್ಲಿ ರಕ್ಷಿತ್, ರಶ್ಮಿಕಾ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಲಾರಂಭಿಸಿತ್ತು ಎಂಬ ಗುಸುಗುಸು ಹಬ್ಬಿತ್ತು. ಆದರೆ ಇದು ಸುಳ್ಳು ಎಂದು ಇಬ್ಬರೂ ಹೇಳಿಕೊಂಡಿದ್ದರು.

ರಶ್ಮಿಕಾ, ರಕ್ಷಿತ್ ನಿಶ್ಚಿತಾರ್ಥ ಮುರಿದು ಬಿದ್ದ ಬಗ್ಗೆ ಸುದ್ದಿಯಾದ ವೇಳೆ ಇಬ್ಬರೂ ತಳ್ಳಿಹಾಕಿದ್ದರು. ಆದರೆ ಇದೀಗ ಇಬ್ಬರೂ ದೂರವಾಗುತ್ತಿರುವುದು ನಿಜ ಎಂದು ಆಪ್ತ ವಲಯ ಹೇಳಿದೆ.

ಮಾಹಿತಿ ಪ್ರಕಾರ ಇಬ್ಬರಿಗೂ ಹೊಂದಾಣಿಕೆಯ ಸಮಸ್ಯೆ ಉಂಟಾಗಿದೆಯಂತೆ. ಇಬ್ಬರ ನಡುವೆ ಹಲವು ವಿಷಯಗಳಲ್ಲಿನ ಅಭಿಪ್ರಾಯ ವ್ಯತ್ಯಾಸವೇ ಇದಕ್ಕೆ ಮೂಲ ಕಾರಣ ಎನ್ನಲಾಗಿದೆ.

ಆದರೂ ಇವರಿಬ್ಬರ ನಡುವೆ ಹೊಂದಾಣಿಕೆ ಸಮಸ್ಯೆ ಬಗೆಹರಿಸಿ ಸಂಬಂಧ ಮುಂದುವರಿಸಲು ಉಭಯ ಕುಟುಂಬಗಳ ಸದಸ್ಯರು ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ಅದ್ಯಾಕೋ ಸರಿ ಹೊಂದಿ ಬರಲಿಲ್ಲ. ಕೆಲವೊಂದು ಕಡೆ ಇಗೋ ಕೂಡಾ ಪುಟ್ಟ ಸಮಸ್ಯೆಯನ್ನು ಬೆಟ್ಟದಂತೆ ಮಾಡಿದೆ ಎನ್ನಲಾಗಿದೆ.

ಈ ಎಲ್ಲಾ ಬೆಳವಣಿಗೆಯ ನಡುವೆಯೇ ರಕ್ಷಿತ್ ಶೆಟ್ಟಿ ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗ್ರಾಮ್ ದಿಢೀರ್ ಹೊರನಡೆದಿದ್ದಾರೆ. ಈ ನಿರ್ಧಾರ ಯಾಕೆ ಕೈಗೊಂಡರೂ ಎಂಬುದು ತಿಳಿದು ಬಂದಿಲ್ಲ.