Advertisements

ಸೋನಾಲಿ ಬೇಂದ್ರೆಯನ್ನು ಸಾಯಿಸಿದ ಬಿಜೆಪಿ ಶಾಸಕ…?

ನಿಮ್ಮನ್ನು ಒಲ್ಲೆ ಎಂದ ಯುವತಿಯನ್ನು ತೋರಿಸಿ ನಾನು ಕಿಡ್ನಾಪ್ ಮಾಡಿ ತಂದು ನಿಮ್ಮ ಜೊತೆ ಸೇರಿಸುತ್ತೇನೆ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದ ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.

ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ಎಡವಟ್ಟು ಮಾಡಿಕೊಂಡಿದ್ದ ಶಾಸಕನ ವರ್ತನೆ ಇದೀಗ ಅವರ ಯೋಗ್ಯತೆ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡಿದೆ.

ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಮಧ್ಯೆ ಸೋನಾಲಿ ಬೇಂದ್ರೆ ಇನ್ನಿಲ್ಲ ಎಂದು ಇದೇ ಶಾಸಕ ರಾಮ್ ಕದಮ್ ಟ್ವೀಟ್ ಮಾಡಿ ಛೀ..ಥೂ ಅನ್ನಿಸಿಕೊಂಡಿದ್ದಾರೆ.

Ram

ಸಾಮಾಜಿಕ ಮಾಧ್ಯಮಗಳಲ್ಲಿ ಸೋನಾಲಿ ಬೇಂದ್ರೆ ಇನ್ನಿಲ್ಲ ಎಂಬ ಸುಳ್ಳು ಸುದ್ದಿ ನಂದಬಿ ಶಾಸಕ ರಾಮ್ ಕದಮ್ ಕೂಡಾ ಹಿಂದೆ ಮುಂದೆ ನೋಡಲಿಲ್ಲ. ಸುದ್ದಿ ಸತ್ಯವೋ ಎಂದು ಪರೀಕ್ಷೆ ಮಾಡಲಿಲ್ಲ. ಬದಲಿಗೆ ಟಿವಿಗಿಂತ ನಾನೇ ಮೊದಲು ಬ್ರೇಕಿಂಗ್ ಸುದ್ದಿ ಕೊಡಬೇಕು ಎಂದು ಸೋನಾಲಿ ಬೇಂದ್ರೆ ಇನ್ನಿಲ್ಲ ಎಂದು ಟ್ವೀಟ್ ಮಾಡಿ ಅಪಹಾಸ್ಯಕ್ಕೀಡಾಗಿದ್ದಾರೆ.

ಕ್ಯಾನ್ಸರ್  ಟ್ರೀಟ್ಮೆಂಟ್ ನಡುವೆ ಮಗನಿಗೆ ಪತ್ರ ಬರೆದ ಸೋನಾಲಿ ಬೇಂದ್ರೆ

ಮರಾಠಿ ಭಾಷೆಯಲ್ಲಿ ರಾಮ್ ಕದಮ್ ಟ್ವೀಟ್ ಮಾಡಿದ್ದು. ಟ್ವೀಟ್ ನಲ್ಲಿ ಅಮೋಘ ಅಭಿನಯದ ಮೂಲಕ ಅಭಿಮಾನಿಗಳನ್ನು ರಂಜಿಸಿದ ಬಾಲಿವುಡ್ ಮತ್ತು ಮರಾಠಿ ದಿವಾ ಸೋನಾಲಿ ಬೇಂದ್ರೆ ಇನ್ನಿಲ್ಲ. ಅಮೆರಿಕದಲ್ಲಿ ಅವರು ನಿಧನರಾಗಿದ್ದಾರೆ ಎಂದು ಟ್ವೀಟಿಸಿದ್ದಾರೆ.

ಸತ್ಯ ಗೊತ್ತಾಗುತ್ತಿದ್ದಂತೆ ರಾಮ್ ಕದಮ್ ಮತ್ತೊಂದು ಟ್ವೀಟ್ ಮಾಡಿ ಕ್ಷಮೆಯಾಚಿಸಿದ್ದಾರೆ. ಕಳೆದ ಎರಡು ದಿನಗಳಿಂದ ಸೋನಾಲಿ ಬೇಂದ್ರೆ ಬಗ್ಗೆ ವದಂತಿಗಳು ಹರಿದಾಡುತ್ತಿವೆ. ಸೋನಾಲಿ ಆದಷ್ಟು ಬೇಗ ಗುಣಮುಖರಾಗಲಿ ಎಂದು ಟ್ವೀಟ್ ನಲ್ಲಿ ಹಾರೈಸಿದ್ದಾರೆ.

 

Advertisements

ಬಿಜೆಪಿಯೊಂದಿಗೆ ರಜನಿ ಹೆಜ್ಜೆ – ಸೂಪರ್ ಸ್ಟಾರ್ ಪಕ್ಷ ಕಮಲದೊಂದಿಗೆ ವಿಲೀನ..?

2017 ಡಿಸೆಂಬರ್ 31 ರಂದು ರಾಜಕೀಯ ಪ್ರವೇಶ ಕುರಿತು ಘೋಷಣೆ ಮಾಡಿದ್ದ ರಜನಿ 2021ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸುವುದಾಗಿ ತಿಳಿಸಿದ್ದರು. ಮಾತ್ರವಲ್ಲದೆ ತಮಿಳುನಾಡು ರಾಜಕೀಯದಲ್ಲಿ ನಡೆದಿರುವ ಕೆಲ ಘಟನೆಗಳು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ. ಉಳಿದ ರಾಜ್ಯಗಳು ನಮ್ಮತ್ತ ನೋಡಿ ನಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ಬಳಿಕ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ರಜನಿಕಾಂತ್ ರಜಿನಿ ಮಕ್ಕಳ್ ಮಂದ್ರಂ ಪಕ್ಷ ಸ್ಥಾಪಿಸಿದರು. ಮಾತ್ರವಲ್ಲದೆ ಯಾವುದೇ ರಾಷ್ಟ್ರೀಯ ಪಕ್ಷಗಳೊಂದಿಗೆ ಕೈ ಜೋಡಿಸುವುದಿಲ್ಲ ಎಂದು ಘೋಷಿಸಿದ್ದರು.

modi-rajani

ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ.ದೆಹಲಿಯಲ್ಲಿ ಬೀಡು ಬಿಟ್ಟಿರುವ ರಜನಿಕಾಂತ್ ಬಿಜೆಪಿ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಕೆಲ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಮೂಲಕ ತಮಿಳುನಾಡು ರಾಜಕೀಯದಲ್ಲಿ ಭಾರೀ ಬೆಳವಣಿಗೆ ಕಾಣಿಸಿಕೊಂಡಿದ್ದು, ಸೂಪರ್ ಸ್ಟಾರ್ ರಜನಿಕಾಂತ್ ನಡೆಯೇನು ಎಂದು ದೇಶ ಕಾಯುತ್ತಿದೆ.

ವರದಿಗಳ ಪ್ರಕಾರ ರಜನಿಕಾಂತ್ ಮಕ್ಕಳ್ ಮಂದ್ರಂ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆದಿದ್ದು, 5 ದಿನಗಳಲ್ಲಿ 7 ಸಭೆಗಳು ಬಿಜೆಪಿ ನಾಯಕರೊಂದಿಗೆ ನಡೆದಿದೆಯಂತೆ. ಬಿಜೆಪಿಯ ಎರಡು ಹಿರಿಯ ನಾಯಕರೊಂದಿಗೆ ಅವರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

BJP-Rajani

ಗಮನಿಸಬೇಕಾದ ಅಂಶ ಅಂದರೆ ರಜನಿಕಾಂತ್ ತಾವು ಪಕ್ಷ ಸ್ಥಾಪಿಸುವ ಮುನ್ನ ಪ್ರಧಾನಿ ಮೋದಿ ಅವರನ್ನು ಹಲವು ಬಾರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಇದೀಗ ತಮಿಳುನಾಡು ರಾಜಕೀಯ ಮಗ್ಗುಲು ಬದಲಾಯಿಸಿದೆ. ತಮಿಳು ರಾಜಕೀಯದಿಂದ ಜಯಲಲಿತಾ ಹಾಗೂ ಕರುಣಾನಿಧಿ ಮರೆಯಾಗಿದ್ದಾರೆ. ಒಂದೇ ಒಡೆಯರಿದ್ದ ಪಕ್ಷಗಳಲ್ಲಿ ಅನೇಕರು ಹುಟ್ಟಿಕೊಂಡಿದ್ದಾರೆ. ಕಚ್ಚಾಡುತ್ತಿದ್ದಾರೆ. ಇದರ ಲಾಭವನ್ನು ಪಡೆದು ತಮಿಳುನಾಡು ರಾಜಕೀಯದಲ್ಲಿ ತನ್ನ ಪ್ರಭಾವ ಬೀರಲು ಬಿಜೆಪಿ ಮುಂದಾಗಿದೆ.

ಈ ನಡುವೆ ರಜನಿಕಾಂತ್ ಪಕ್ಷ ಬಿಜೆಪಿಯೊಂದಿಗೆ ವಿಲೀನಗೊಂಡರೆ, ಕೇರಳಕ್ಕೂ ಬಿಜೆಪಿ ಕಾಲಿಡಲಿದ್ದು, ಇದಕ್ಕಾಗಿ ಮೋಹನ್ ಲಾಲ್ ಅವರ ಬೆಂಬಲ ಪಡೆಯುವ ಸಾಧ್ಯತೆಗಳಿದೆ.

ಸಕ್ಕರೆ ನಾಡಿನಲ್ಲಿ ಮೈಸೂರು ಮಹಾರಾಜರೇ ಬಿಜೆಪಿ ಅಭ್ಯರ್ಥಿ….?

ಕಳೆದ ಮಾರ್ಚ್ ತಿಂಗಳಲ್ಲಿ ಕರ್ನಾಟಕ ಪ್ರವಾಸದಲ್ಲಿದ್ದ ಅಮಿತ್ ಶಾ ಮೈಸೂರು ಅರಮನೆಗೆ ಭೇಟಿ ಕೊಟ್ಟು ರಾಜವಂಶಸ್ಥರನ್ನು ಭೇಟಿ ಮಾಡಿದ್ದರು.

ರಾಜ್ಯ ಬಿಜೆಪಿ ನಾಯಕರೊಂದಿಗೆ ತೆರಳಿದ್ದ ಅವರು ಯಧುವೀರ್ ಹಾಗೂ ಪ್ರಮೋದಾ ದೇವಿ ಜೊತೆ ಮಾತುಕತೆ ಕೂಡಾ ಮಾಡಿ ಬಂದಿದ್ದರು. ಅಗ್ಲೇ ಯದುವೀರ್ ರಾಜಕೀಯಕ್ಕೆ ಬರುತ್ತಾರೆ ಅನ್ನುವ ಸುದ್ದಿ ಹಬ್ಬಿತ್ತು. ಆದರೆ ಬಳಿಕ ಎಲ್ಲವೂ ತಣ್ಣಗಾಯ್ತು.

ಇದೀಗ ಮತ್ತೆ ಮೈಸೂರು ಮಹಾರಾಜ ಯಧುವೀರ್ ಒಡೆಯರ್ ರಾಜಕೀಯಕ್ಕೆ ಬರುತ್ತಾರೆ ಅನ್ನುವ ಸುದ್ದಿ ತೇಲಿ ಬಂದಿದೆ.

ಯದುವೀರ್ ಅವರನ್ನು ಬಿಜೆಪಿಗೆ ಕರೆ ತಂದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಮಂಡ್ಯ ಭಾಗದಲ್ಲಿ ಕಮಲ ಅರಳಿಸಲು ಬಿಜೆಪಿ ತಂತ್ರ ರೂಪಿಸುತ್ತಿದೆಯಂತೆ.

ಅಂದುಕೊಂಡಂತೆ ನಡೆದರೆ ಮೈಸೂರು ಮಹಾರಾಜರು ಮಂಡ್ಯದಲ್ಲಿ ಚುನಾವಣಾ ಕಣಕ್ಕೆ ಇಳಿಯಲಿದ್ದು, ಜೆಡಿಎಸ್ ಪ್ರಾಬಲ್ಯವಿರುವ ಜಿಲ್ಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಜೊತೆ ಸೆಣಸಲಿದ್ದಾರೆ.

ಈಗಾಗಲೇ ಬಿಜೆಪಿಯು ಯಧುವೀರ್ ಜೊತೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದು, ಸಕ್ಕರೆ ನಾಡಿನ ಜನರು ನಿಮ್ಮ ಕೈ ಹಿಡಿಯುತ್ತಾರೆ ಅನ್ನುವ ಭರವಸೆ ಕೊಟ್ಟಿದೆ.

ಆದರೆ ಮೈಸೂರು ಮಹಾರಾಜರು ಇನ್ನೂ ಈ ಬಗ್ಗೆ ಏನೂ ಹೇಳಿಲ್ಲ.

ರಾಧಿಕಾ ಧರಿಸಿದ ಮೊದಲ ಚಿನ್ನದೊಡವೆ ಕೊಟ್ಟವರಾರು..?

ಜ್ಯುವೆಲ್ಸ್ ಆಫ್ ಇಂಡಿಯಾ ಪ್ರಸಿದ್ಧ ಆಭರಣ ಮೇಳದ ಈ ವರ್ಷದ ರಾಯಭಾರಿಯಾಗಿ ರಾಧಿಕಾ ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ. ಇದಕ್ಕಾಗಿ ಫೋಟೋಶೂಟ್ ಕೂಡಾ ಮಾಡಿಸಿಕೊಂಡಿರುವ ಅವರು ಚೆಂದದ ಸೀರೆ, ಚಿನ್ನ, ಅಮೂಲ್ಯ ಹರಳುಗಳ ಹಾಗೂ ಡೈಮಂಡ್ ಆಭರಣಗಳನ್ನು ತೊಟ್ಟು ಕಂಗೊಳಿಸಿದ್ದಾರೆ.

ಇನ್ನು ರಾಯಭಾರಿಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ರಾಧಿಕಾ ಜ್ಯುವೆಲ್ಸ್ ಆಫ್ ಇಂಡಿಯಾದ ಪ್ರತಿ ವರ್ಷದ ಆಭರಣ ಮೇಳದ ಹೋರ್ಡಿಂಗ್ಸ್ ನೋಡಿ ತಾನೂ ಒಂದು ಆಭರಣ ಮಳಿಗೆಗೆ ರಾಯಭಾರಿಯಾಗಬೇಕು ಅಂದುಕೊಳ್ಳುತ್ತಿದ್ದೆ. ಆದರೆ ಈಗ ಆಭರಣ ಮಳಿಗೆಯ ಬದಲು ಜ್ಯುವೆಲ್ಸ್ ಆಫ್ ಇಂಡಿಯಾದ ರಾಯಭಾರಿಯಾಗುವ ಅವಕಾಶ ಬಂದಿರುವುದು ಖುಷಿ ತಂದಿದೆ ಎಂದಿದ್ದಾರೆ.

ಮೊದಲು ಜ್ಯುವೆಲ್ಸ್ ಆಫ್ ಇಂಡಿಯಾದವರು ಕರೆ ಮಾಡಿ ರಾಯಭಾರಿಯಾಗಬೇಕು ಅಂದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ. ಬಳಿಕ ಅವರೇ ಬಂದು ವಿಷಯ ತಿಳಿಸಿದಾಗ ಖುಷಿಯಾಯ್ತು, ದೀಪಿಕಾ ಪಡುಕೋಣೆ, ಪ್ರಿಯಾಮಣಿ,ರಚಿತಾ ರಾಮ್ ಇವರೆಲ್ಲರೂ ಈಗಾಗಲೇ ರಾಯಭಾರಿಯಾಗಿದ್ದಾರೆ, ಈಗ ನನ್ನ ಸರದಿ ಎಂದು ಸರ ಸರಿ ಮಾಡಿಕೊಂಡು ಹರ್ಷ ವ್ಯಕ್ತಪಡಿಸಿದರು ರಾಧಿಕಾ.

ಇದೇ ವೇಳೆ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ರಾಧಿಕಾ, ನಾನು ಚಿಕ್ಕವಳಿದ್ದಾಗ, ಅಜ್ಜಿ ಪುಟ್ಟ ಕಿವಿಯೋಲೆ ಉಡುಗೊರೆಯಾಗಿ ಕೊಟ್ಟಿದ್ದರು. ಅದುವೇ ನಾನು ಧರಿಸಿದ ಮೊದಲ ಚಿನ್ನದೊಡವೆ, ಈಗ್ಲೂ ಅದನ್ನು ನಾನು ಜೋಪಾನವಾಗಿಟ್ಟುಕೊಂಡಿದ್ದೇನೆ, ಕೆಲವೊಮ್ಮೆ ಅದನ್ನು ಧರಿಸಿ ಸಂಭ್ರಮಿಸುತ್ತೇನೆ ಎಂದರು.

This slideshow requires JavaScript.

ಪ್ರತಿಷ್ಠೆಗಾಗಿ ಬಲಿ….? ಸೆಲ್ಫ್ ಸೂಸೈಡ್ ನತ್ತ ತುಳು ಚಿತ್ರರಂಗ

ಒಂದು ಕಾಲದಲ್ಲಿ ಸದ್ದು ಮಾಡಿದ ತುಳು ಚಿತ್ರರಂಗ ತನ್ನದೇ ತಪ್ಪುಗಳಿಂದ ನೇಪಥ್ಯಗೆ ಸರಿದು ಹೋಯ್ತು. ಕಲಾವಿದರು ನಾಟಕ ರಂಗದಲ್ಲೇ ನೆಲೆ ನಿಂತು, ನಿಂತ ನೀರಾದರು.

ಆದರೆ ಅದ್ಯಾವ ಅದೃಷ್ಟದ ಬಾಗಿಲು ತೆರೆಯಿತೋ ಗೊತ್ತಿಲ್ಲ, ತುಳು ಚಿತ್ರರಂಗ ಸಣ್ಣದಾಗಿ ಸದ್ದು ಮಾಡಲಾರಂಭಿಸಿತು. ಫೈಟ್ ಗಳಿಲ್ಲದ, ಹಾಸ್ಯಮಯ ಚಿತ್ರಗಳತ್ತ ಜನ ಒಲವು ತೋರಿದರು.

ಕೆಲ ಚಿತ್ರಗಳು ಸೂಪರ್ ಹಿಟ್ ಕೂಡಾ ಆಯ್ತು. ಆದರೆ ಯಾವಾಗ ಕಾಂಚಾಣದ ಸದ್ದು ಕೇಳಿ ಬಂತೋ, ಕೋಸ್ಟಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ನಿರ್ಮಾಪಕರ, ನಿರ್ದೇಶಕರು ಹುಟ್ಟಿಕೊಂಡರು. ಆದರೆ ಜನ ಕೇಳಬೇಕಲ್ವ, ಗುಣಮಟ್ಟ ಇಲ್ಲದ ಚಿತ್ರಗಳನ್ನು ಅರಬ್ಬಿ ಸಮುದ್ರಕ್ಕೆ ಎಸೆದರು.

ಆದರೆ ಇದೀಗ ತುಳು ಚಿತ್ರರಂಗದಲ್ಲಿ ಅನಾರೋಗ್ಯಕರ ಸ್ಪರ್ಧೆ ಕಾಣಿಸುತ್ತಿದ್ದು, ಸ್ವಯಂ ಪ್ರತಿಷ್ಟೆಗಾಗಿ ಇಡೀ ಕೋಸ್ಟಲ್ ವುಡ್ ಬಲಿಯಾಗುವ ಲಕ್ಷಣ ಗೋಚರಿಸುತ್ತಿದೆ.

ಚಿತ್ರ ಬಿಡುಗಡೆಗಾಗಿ ನಿರ್ಮಾಪಕರ ನಡುವೆ ಸಮರ ಶುರುವಾಗಿದ್ದು, ಬೆಳೆದಷ್ಟೇ ವೇಗದಲ್ಲಿ ಕೋಸ್ಟಲ್‌ವುಡ್‌ ಕುಸಿದರೂ ಅಚ್ಚರಿ ಇಲ್ಲ.

ಸಾಲು ಸಾಲು ಚಿತ್ರಗಳು ತುಳುವಿನಲ್ಲಿ ಸಿದ್ದವಾಗುತ್ತಿರುವುದುದು ಖುಷಿಯ ವಿಚಾರ. ಆದರೆ ಅನಾರೋಗ್ಯಕರ ಸ್ಪರ್ಧೆಗೆ ಇಳಿದಿರುವುದು ವಿಷಾದ. ಎಲ್ಲರೂ ಬೆಳೆಯಬೇಕು ಅನ್ನುವ ಮನೋಭಾವನೆಯ ಕೊರತೆಯೇ ಇದಕ್ಕೆ ಪ್ರಮುಖ ಕಾರಣ.

ಅದೆಷ್ಟು ಚಿತ್ರಗಳು ತಯಾರಾದರೂ ಒಂದೇ ವಾರ ಎರಡು ಚಿತ್ರಗಳನ್ನು ಗೆಲ್ಲಿಸುವ ತಾಕತ್ತು ಕರಾವಳಿಯಲ್ಲಿ ಇಲ್ಲ. ಹೀಗಾಗಿ ವಾರಕ್ಕೆ ಒಂದು ಚಿತ್ರ ತೆರೆಗೆ ತಂದರೂ ಗೆಲ್ಲಿಸುವುದು ಕಷ್ಟವಿರುವಾಗ ಒಂದೇ ದಿನ ಎರಡು ಸಿನಿಮಾ ಬಿಡುಗಡೆಯಾದರೆ ಹೇಗಾಗಬಹುದು.

2018 ಮಾರ್ಚ್‌ ತಿಂಗಳಿನಲ್ಲಿ ಒಂದೇ ದಿನ ಅಪ್ಪೆ ಟೀಚರ್‌ ಮತ್ತು ತೊಟ್ಟಿಲು ಬಿಡುಗಡೆಗೊಂಡಿತ್ತು. ಕಿಶೋರ್‌ ಮೂಡುಬಿದಿರೆಯವರ ಅಪ್ಪೆ ಟೀಚರ್‌ ಸಕ್ಸಸ್ ಆದರೆ ತೊಟ್ಟಿಲು ಮಕಾಡೆ ಮಲಗಿತ್ತು.

ಇದೀಗ ಅದೇ ಪರಿಸ್ಥಿತಿ ಮತ್ತೆ ಮರುಕಳಿಸುವ ಲಕ್ಷಣವಿದೆ. ಸೆಪ್ಟಂಬರ್ 21ರಂದು ದೇವದಾಸ್‌ ಕಾಪಿಕಾಡ್‌ ಅವರ ‘ಏರಾ ಉಲ್ಲೆರ್‌’ ಮತ್ತು ಮಯೂರ್‌ ಆರ್‌. ಶೆಟ್ಟಿ ನಿರ್ದೇಶನದ ‘ಮೈ ನೇಮ್‌ ಈಸ್‌ ಅಣ್ಣಪ್ಪ’ ಒಂದೇ ದಿನ ಬಿಡುಗಡೆಯಾಗಲಿದೆ.

ಎರಡೂ ಕೂಡ ಬಹುನಿರೀಕ್ಷಿತ ಚಿತ್ರಗಳು, ಹೀಗಾಗಿ ಸ್ವಯಂ ಪ್ರತಿಷ್ಟೆ ಪೈಪೋಟಿಯಲ್ಲಿ ಒಬ್ಬರು ಸೋಲುವುದು ಗ್ಯಾರಂಟಿ.

ಚಿತ್ರ ಬಿಡುಗಡೆಗಾಗಿ ಪೈಪೋಟಿ ತಪ್ಪಿಸಲು ಹಾಗೂ ತುಳು ಚಿತ್ರ ಕ್ರಮ ಬದ್ಧವಾಗಿ ಬಿಡುಗಡೆಯಾಗಲು ನಿರ್ಮಾಪಕರ ಸ್ಕ್ರೀನಿಂಗ್‌ ಕಮಿಟಿಯೊಂದು ಅಸ್ತಿತ್ವದಲ್ಲಿದೆ. ಆದರೆ ಸ್ಕ್ರೀನಿಂಗ್‌ ಕಮಿಟಿಯನ್ನು ಲೆಕ್ಕಕ್ಕೆ ಇಟ್ಟುಕೊಳ್ಳುವ ನೈತಿಕತೆ ಯಾರಿಗಿದೆ.

 ಯಾವ ಚಿತ್ರ ಸೆನ್ಸಾರ್‌ ಮೊದಲಾಗುತ್ತದೆಯೋ ಆ ಚಿತ್ರ ಬಿಡುಗಡೆ ಮಾಡುವ ರೂಢಿಯನ್ನು ಕೋಸ್ಟಲ್‌ವುಡ್‌ ಅನುಸರಿಸುತ್ತಿದೆ. ಆದರೆ ಇದೀಗ ಏರಾ ಉಲ್ಲೆರ್ ಮತ್ತು ಮೈ ನೇಮ್ ಇಸ್ ಅಣ್ಣಪ್ಪ ಒಂದೇ ದಿನ  ಸೆನ್ಸಾರ್ ಸರ್ಟಿಫಿಕೆಟ್ ಪಡೆದುಕೊಂಡಿದೆ. ಅದೇ ಈಗ ಸಮಸ್ಯೆಯಾಗಿದೆ.

ಒಬ್ಬರು ನಮ್ಮ ಕೈಗೆ ಮೊದಲು ಸೆನ್ಸಾರ್‌ ಮಂಡಳಿಯ ಸರ್ಟಿಫಿಕೆಟ್‌ ಸಿಕ್ಕಿದೆ ಅಂದಿದ್ದಾರೆ. ಮತ್ತೊಬ್ಬರು ಸೆನ್ಸಾರ್‌ ಮಂಡಳಿ ನಮ್ಮ ಸಿನಿಮಾ ಮೊದಲು ವೀಕ್ಷಿಸಿದೆ. ಸೆನ್ಸಾರ್‌ ಮಂಡಳಿ ನೀಡುವ ಸರ್ಟಿಫಿಕೆಟ್‌ನ ಮೊದಲ ಸೀರಿಯಲ್‌ ನಂಬರ್‌ ನಮ್ಮದು. ಅದರ ಪ್ರಕಾರ ನಮಗೆ ಮೊದಲು ಬಿಡುಗಡೆಗೆ ಅವಕಾಶ ಇದೆ ಅನ್ನುತ್ತಾರೆ.

ಎಲ್ಲವೂ ಗೊಂದಲ. ಒಟ್ಟಿನಲ್ಲಿ 48 ವರ್ಷ ಇತಿಹಾಸ ಹೊಂದಿರುವ ಚಿತ್ರರಂಗಕ್ಕೆ ಶತ್ರುಗಳು ಯಾರು ಅಂದರೆ ಉತ್ತರ ಓದುಗರಾದ ನಿಮ್ಮ ಬಳಿಯೇ ಇದೆ.

 


ಜಯಮಾಲ ಮಗಳಿಗಾಗಿ ಕೃಷ್ಣ ದೇವಾಲಯದಲ್ಲಿ ಕುಮಾರಸ್ವಾಮಿ ಪ್ರಾರ್ಥನೆ…!

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಸರ್ಕಾರಿ ಕಾರ್ಯಕ್ರಮ ನಿಮಿತ್ತ ಪೊಡವಿಗೊಡೆಯನ ನಾಡಿಗೆ ಬಂದಿರುವ ಅವರು ಇದೇ ಸಂದರ್ಭದಲ್ಲಿ ಕೃಷ್ಣ ಮಠಕ್ಕೆ ತೆರಳಿ ಶ್ರೀಕೃಷ್ಣ ದೇವರ ದರ್ಶನ ಹಾಗೂ ಕ ಪರ್ಯಾಯ ಮಠಾಧೀಶರ ಆಶೀರ್ವಾದ ಪಡೆದ

ದೇವಸ್ಥಾನಕ್ಕೆ ಮುಖ್ಯಮಂತ್ರಿಗಳು ಬರುತ್ತಿದ್ದಂತೆ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಮುಖ್ಯಮಂತ್ರಿಗಳಿಗೆ ಕಡೆಗೋಲು, ಪಾಶಧಾರಿ ಬಾಲ ಗೋಪಾಲ, ಮುಖ್ಯಪ್ರಾಣನ ದರ್ಶನ ಮಾಡಿಸಿದರು.

41356978_1836090616439394_7483374721027801088_n

ನಂತರ ಪರ್ಯಾಯ ಶ್ರೀಪಾದರು ಮುಖ್ಯಮಂತ್ರಿಗೆ ರೇಷ್ಮೆ ಶಾಲು, ಮುತ್ತಿನ ಹಾರ, ಸ್ವರ್ಣ ಗೋಪುರದ ಸ್ಮರಣಿಕೆ ಸಹಿತ ಪ್ರಸಾದವನ್ನು ನೀಡಿ ಅಶೀರ್ವದಿಸಿದರು.

ಬಳಿಕ ಸಚಿವೆ ಡಾ. ಜಯಮಾಲಾ ಅವರು ಶ್ರೀಪಾದರ ಆಶೀರ್ವಾದ ಪಡೆಯಲು ಮುಂದಾದಾಗ,’ ಮೇಡಂ ಮಗಳು ಸೆಟ್ಲ್ ಆಗುವಂತೆ ಆಶೀರ್ವಾದ ಮಾಡಿ ಗುರುಗಗಳೇ,’ ಎಂದು ಸಿಎಂ ಹೇಳಿದರು. ಇದಕ್ಕೆ ಶ್ರೀಗಳು ನಗುವಿನಲ್ಲೇ ಉತ್ತರಿಸಿದರೆ, ಇವರು ಬಹಳ ಒಳ್ಳೆಯ ಸಿಎಂ ಸ್ವಾಮಿಗಳೇ ಎಂದು ಡಾ. ಜಯಮಾಲಾ ಪರ್ಯಾಯ ಶ್ರೀಗಳಿಗೆ ಹೇಳಿದರು.

ES-image

ನಂತರ  ವಿಧಾನಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ ಶ್ರೀಪಾದರಿಂದ ಮಂತ್ರಾಕ್ಷತೆ, ಪ್ರಸಾದ ಸ್ವೀಕರಿಸಲು ಮುಂದಾದಾಗ ಸರಿ ದಾರಿಯಲ್ಲಿ ಹೋಗುವಂತೆ ಚೆನ್ನಾಗಿ ಆಶೀರ್ವಾದ ಮಾಡಿ ಗುರುಗಳೇ ಎಂದು ಸಿಎಂ ಚಟಾಕಿ ಹಾರಿಸಿದರು.

ನೋ ಅನುಷ್ಕಾ – ಕುಡ್ಲದ ಮತ್ತೊಬ್ಬ ಹುಡುಗಿ ಜೊತೆ ಪ್ರಭಾಸ್ ರೊಮ್ಯಾನ್ಸ್

ತೆಲುಗು ಚಿತ್ರರಂಗ ಕನ್ನಡದ ನಟಿಯರ ಪ್ರತಿಭೆಗೆ ಮಾರು ಹೋಗುತ್ತಿದೆ. ಕನ್ನಡದ ಬೆಡಗಿಯರು ಇದೀಗ ತೆಲುಗಿನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಅನುಷ್ಕಾ ಶೆಟ್ಟಿ ಬಳಿಕ ರಶ್ಮಿಕಾ ಮಂದಣ್ಣ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದ್ದಾರೆ.

ಈ ನಡುವೆ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಲವ್ ಸ್ಟೋರಿಯೂ ಬಂದು ಹೋಯ್ತು.

ಹೀಗಾಗಿಯೇ ಪ್ರಭಾಸ್ ಮುಂದಿನ ಚಿತ್ರದಲ್ಲಿ ಯಾರು ನಟಿಸುತ್ತಾರೆ ಅನ್ನುವ ಪ್ರಶ್ನೆ ಎದ್ದಿತ್ತು. ಅನುಷ್ಕಾ ಪ್ರಭಾಸ್ ಜೋಡಿ ಭಾರೀ ಜನ ಮೆಚ್ಚುಗೆ ಪಡೆದ ಕಾರಣ ಮತ್ತೊಮ್ಮೆ ಅನುಷ್ಕಾ ಶೆಟ್ಟಿ ಪ್ರಭಾಸ್ ಜೊತೆ ತೆರೆ ಹಂಚಿಕೊಳ್ಳುತ್ತಾರೆ. ಅವರಿಬ್ಬರ ಕೆಮಿಸ್ಟ್ರಿ ಸಖತ್ ಆಗಿದೆಯಲ್ಲ ಅನ್ನಲಾಗಿತ್ತು.

ಆದರೆ ಇದೀಗ ಅನುಷ್ಕಾ ಬದಲಾಗಿ ಪೂಜಾ ಹೆಗ್ಡೆ ಪ್ರಭಾಸ್ ಜೊತೆ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. ಇದನ್ನು ಪ್ರಭಾಸ್ ಅವರೇ ಸ್ಪಷ್ಟ ಪಡಿಸಿದ್ದು, ನನ್ನ ಮುಂದಿನ ಫಿಲ್ಮ್ ಕೆಲವೇ ದಿನಗಳಲ್ಲಿ ಲಾಂಚ್ ಆಗಲಿದೆ. ಚಿತ್ರವನ್ನು ಕೆಕೆ ರಾಧಾಕೃಷ್ಣ ನಿರ್ದೇಶನ ಮಾಡಲಿದ್ದು, ಗೋಪಿ ಕೃಷ್ಣ ಕಾಸು ಹಾಕಿದ್ದಾರೆ. ನನ್ನ ಜೊತೆ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ ಎಂದು ಫೇಸ್‍ಬುಕ್‍ನಲ್ಲಿ ಪ್ರಭಾಸ್ ಬರೆದುಕೊಂಡಿದ್ದಾರೆ.ಅಂದ ಹಾಗೇ ಸಿನಿಮಾ ಟೈಟಲ್ ಫೈನಲ್ ಆಗಿಲ್ಲ.

Prabhas-FB

2016ರಲ್ಲಿ ತೆರೆಕಂಡ ಬಾಲಿವುಡ್‍ನ ಹೃತಿಕ್ ರೋಷನ್ ನಟನೆಯ ‘ಮೊಹೆಂಜೋದಾರೋ’ ಚಿತ್ರದ ಮೂಲಕ ಪೂಜಾ ಹೆಗ್ಡೆ ಸಿನಿ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದರು.

ರಾಷ್ಟ್ರ ಕಂಡ ಬಹುದೊಡ್ಡ ಬಫೂನ್ ರಾಹುಲ್ ಗಾಂಧಿ – ಕೆಸಿಆರ್ ವಾಗ್ದಾಳಿ

ರಾಜಕೀಯದಲ್ಲಿ ಕ್ಷಣ ಮಾತ್ರದಲ್ಲಿ ಏನು ಬೇಕಾದರೂ ಸಂಭವಿಸಬಹುದು ಅನ್ನುವುದಕ್ಕೆ ಇತಿಹಾಸ ಪುಟಗಳಲ್ಲಿ ರಾಶಿಗಟ್ಟಲೆ ಸಾಕ್ಷಿಗಳಿವೆ.

ಇದೀಗ ತೆಲಂಗಾಣದಲ್ಲೂ ಹಾಗೇ ಆಗಿದೆ. ರಾಜಕೀಯದಲ್ಲಿ ಯಾರು ಮಿತ್ರರು, ಯಾರು ಶತ್ರುಗಳು ಎಂದು ಅರಿಯುವ ಪ್ರಯತ್ನದಲ್ಲಿರುವಾಗಲೇ ಮಿತ್ರರು ಶತ್ರುಗಳಾಗಿರುತ್ತಾರೆ, ಶತ್ರುಗಳು ಮಿತ್ರರಾಗಿರುತ್ತಾರೆ.

2019ರ ಚುನಾವಣೆಯಲ್ಲಿ ಮೋದಿಯನ್ನು ಏಕಾಂಗಿಯಾಗಿ ಎದುರಿಸಬಲ್ಲ ನಾಯಕನ ಕೊರೆತೆ ಎದುರಿಸುತ್ತಿರುವ ಪ್ರತಿಪಕ್ಷಗಳು ಸಂಘಟಿತ ಹೋರಾಟಕ್ಕೆ ಮುಂದಾಗಿವೆ.

ಕುಮಾರಸ್ವಾಮಿ ಪ್ರಮಾಣ ವಚನಕ್ಕೂ ಮುನ್ನ ಪ್ರಾರಂಭವಾದ ಮಹಾಘಟಬಂಧನ್ ರಚನೆ ಪ್ರಕ್ರಿಯೆ, ಕುಮಾರಸ್ವಾಮಿ ಸಿಎಂ ಆಗುತ್ತಿದ್ದಂತೆ ಮತ್ತಷ್ಟು ಚುರುಕು ಪಡೆಯಿತು.

ಅದ್ರಲ್ಲೂ ಈ ಮಹಾಘಟಬಂಧನದ ಮತ್ತೊಂದು ಮಹಾಶಕ್ತಿಯಾಗಿ ತೆಲಂಗಾಣ ಸಿಎಂ ಕೆಚ. ಮಹಾಘಟಬಂಧನ್ ನಲ್ಲಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಕೂಡ ದೊಡ್ಡ ನಾಯಕರಾಗಿರುತ್ತಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದರು.

ಮಾತ್ರವಲ್ಲದೆ ಮಹಾಘಟಬಂಧನ್ ನೊಳಗಿನ ನಾಯಕರು ಕೂಡಾ ಚಂದ್ರಶೇಖರ ರಾವ್ ಮೇಲೆ ಸಿಕ್ಕಾಪಟ್ಟೆ ನಂಬಿಕೆ ಇಟ್ಟಿದ್ದರು.
ಆದರೆ ಇದೀಗ ರಾಜಕೀಯ ಪಂಡಿತರು ಲೆಕ್ಕಚಾರ ಉಲ್ಟಾ ಆಗಿದೆ.

ಇಂದು ಹೈದರಾಬಾದ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆ. ಚಂದ್ರಶೇಖರ್ ರಾವ್, ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸಿಕ್ಕಾಪಟ್ಟೆ ಟೀಕಾ ಪ್ರಹಾರ ನಡೆಸಿದ್ದಾರೆ.

ರಾಹುಲ್ ಗಾಂಧಿ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರು ದೇಶದ ಬಹುದೊಡ್ಡ ಬಫೂನ್. ಹೇಗೆ ಮೋದಿಯವರನ್ನು ತಬ್ಬಿಕೊಂಡರು,ಸಂಸತ್ತಿನಲ್ಲಿ ಹೇಗೆ ಕಣ್ಣು ಮಿಟಿಕಿಸಿದ್ರು ಅನ್ನೋದನ್ನು ಜನ ನೋಡಿದ್ದಾರೆ. ಇದೀಗ ಅವರು ನಮಗೆ ದೊಡ್ಡ ಆಸ್ತಿಯಾಗಿದ್ದು, ಅವರು ನಮ್ಮ ವಿರುದ್ಧ ಪ್ರಚಾರಕ್ಕೆ ಬಂದರೆ ನಮಗೆ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯ ಎಂದು ಹೇಳಿದ್ದಾರೆ.
ಅಲ್ಲಿಗೆ ರಾಹುಲ್ ಗಾಂಧಿ ಆಟ ತೆಲಂಗಾಣದಲ್ಲಿ ನಡೆಯೋದಿಲ್ಲ ಅನ್ನೋದು ಪಕ್ಕಾ ಆಗಿದೆ.

ಈ ದೇಶಗಳಲ್ಲಿ ಸಲಿಂಗಕಾಮ ಅಪರಾಧವಲ್ಲ

ಸಲಿಂಗಕಾಮ ಅಪರಾಧ ಅನ್ನುವ ಐಪಿಸಿ ಸೆಕ್ಷನ್ 377 ಅನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

1861ರಲ್ಲೇ ಪ್ರಕೃತಿಯ ವಿರುದ್ಧದ ಲೈಂಗಿಕತೆಯನ್ನು ಕಾನೂನು ಪ್ರಕಾರ ಅಪರಾಧ ಎನ್ನುವ ನಿಯಮ ಜಾರಿಯಲ್ಲಿತ್ತು. ಆದರೆ ನಿಯಮವನ್ನು ಕಿತ್ತು ಹಾಕುವ ಮೂಲಕ ಜಾಗತಿಕವಾಗಿ ಸಲಿಂಗ ಕಾಮವನ್ನು ಒಪ್ಪಿಕೊಂಡಿರುವ 25 ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಗಿದೆ.

ಹಾಗಾದರೆ ಈಗಾಗಲೇ ಸಲಿಂಗ ಕಾಮವನ್ನು ಕಾನೂನುಬದ್ದಗೊಳಿಸಿದ ದೇಶಗಳಾವುವು

ನೆದರ್ಲ್ಯಾಂಡ್ಸ್: ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ಮೊದಲ ದೇಶ ನೆದರ್ಲ್ಯಾಂಡ್ಸ್ ಇಲ್ಲಿ ಏಪ್ರಿಲ್ 1, 2001ರಿಂದ ಸಲಿಂಗ ಕಾಮ ಕಾನೂನುಬದ್ದವೆನ್ನುವ ನೀತಿ ಜಾರಿಗೆ ಬಂದಿದೆ.

ಬೆಲ್ಜಿಯಂ: ಜೂನ್ 1, 2003 ರಂದು ಸಲಿಂಗ ಮದುವೆಗೆ ಬೆಲ್ಜಿಯಂ ರಾಷ್ಟ್ರ ಕಾನೂನಿನ ಮಾನ್ಯತೆ ನೀಡಿದೆ.

ಮೆಕ್ಸಿಕೋ: ಮೆಕ್ಸಿಕೋರಲ್ಲಿ ಸಲಿಂಗಕಾಮವನ್ನು ರಾಷ್ಟ್ರ ಕೆಲವು ವ್ಯಾಪ್ತಿಯಲ್ಲಿ ಕಾನೂನುಬದ್ದಗೊಳಿಸಿ 2009ಕ್ಕೆ ಕಾನೂನು ಜಾರಿಗೊಳಿಸಲಾಗಿದೆ.

ಇನ್ನು ಪಟ್ಟಿಯಲ್ಲಿರುವ ಇತರೆ ರಾಷ್ಟ್ರಗಳು ಹಾಗೂ ಸಲಿಂಗ ಕಾಮ ಕಾನೂನುಬದ್ದಗೊಳಿಸಿದ್ದ ವರ್ಷಗಳ ವಿವರ ಹೀಗಿದೆ-
ಐಸ್ಲ್ಯಾಂಡ್ (2010)
ಅರ್ಜೆಂಟೀನಾ (2010)
ನ್ಯೂಜಿಲೆಂಡ್ (2013)
ಫಿನ್ಲ್ಯಾಂಡ್ (2015)
ಯುನೈಟೆಡ್ ಸ್ಟೇಟ್ಸ್ (2015)
ಕೆನಡಾ (2005)
ಸ್ಪೇನ್ (2005)
ದಕ್ಷಿಣ ಆಫ್ರಿಕಾ (2006)
ನಾರ್ವೆ (2008)
ಪೋರ್ಚುಗಲ್ (2010)
ಸ್ವೀಡನ್ (2009)
ಡೆನ್ಮಾರ್ಕ್ (2011)
ಉರುಗ್ವೆ (2013)
ಫ್ರಾನ್ಸ್ (2013)
ಬ್ರೆಜಿಲ್ (2013)
ಯುನೈಟೆಡ್ ಕಿಂಗ್ಡಮ್ (2013)
ಲಕ್ಸೆಂಬರ್ಗ್ (2014)
ಐರ್ಲೆಂಡ್ (2015)
ಕೊಲಂಬಿಯಾ (2016)
ಜರ್ಮನಿ (2017)
ಮಾಲ್ಟಾ (2017)
ಆಸ್ಟ್ರೇಲಿಯಾ (2017)

ಇದರಲ್ಲಿ ಡೆನ್ಮಾರ್ಕ್ ತನ್ನ ಸ್ವಾಯತ್ತ ಪ್ರದೇಶ ಗ್ರೀನ್ ಲ್ಯಾಂಡ್ ನಲ್ಲಿ ಕಾನೂನಿನ ಮಾನ್ಯತೆ ನಿಡಲಾಗಿದೆ. ಇಷ್ಟಲ್ಲದೆ ಇಂಗ್ಲೆಂಡ್ ಮತ್ತು ವೇಲ್ಸ್ 2013ರಲ್ಲಿ, ಸ್ಕಾಟ್ಲೆಂಡ್ ನಲ್ಲಿ 2014ರಲ್ಲಿ ಸಲಿಂಗ ವಿವಾಹಕ್ಕೆ ಕಾನೂನಿನ ಒಪ್ಪಿಗೆ ಸೂಚಿಸಲಾಗಿದೆ.

ಕುಮಾರಸ್ವಾಮಿ ಶ್ರೀರಾಮಚಂದ್ರ..ಅನಿತಾ ಸೀತಾ ದೇವಿ…. ರೇವಣ್ಣ ಅಂಜನೇಯ… ಲಕ್ಷ್ಮಣ ಯಾರು..?

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶ್ರೀರಾಮನಿದ್ದಂತೆ.ಅನಿತಾ ಕುಮಾರಸ್ವಾಮಿ ಸೀತಾ ಮಾತೆ,ಇನ್ನು ಲೋಕೋಪಯೋಗಿ ಸಚಿವ ರೇವಣ್ಣ ಆಂಜನೇಯನಿದ್ದಂತೆ.

ಇದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ವ್ಯಾಖ್ಯಾನ. ರಾಮನಗರದಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕು ಸ್ಥಾಪನೆಗೂ ಮುನ್ನ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಜಿಟಿಡಿ ಕುಮಾರಸ್ವಾಮಿಯವರನ್ನು ರಾಮನಿಗೆ ಹೋಲಿಸಿದರು. ಬಳಿಕ ರೇವಣ್ಣ ಅವರನ್ನು ಹನುಮಂತನಿಗೆ ಹೋಲಿಸಿ, ಅಂದು ರಾಮಾಯಣದಲ್ಲಿ ಹನುಮಂತ ಸಂಜೀವಿನಿ ಪರ್ವತ ಹೊತ್ತು. ಈಗ ರೇವಣ್ಣ ಹಲವು ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೊಗಳಿದರು.

GTD
ಕುಮಾರಸ್ವಾಮಿ ಅವರಿಗೆ ಮತ್ತಷ್ಟು ಬಲ ಬರಲು ಸೀತಾ ದೇವಿಯನ್ನು ಕರೆ ತರಬೇಕಾಗಿದೆ ಅನ್ನುವ ಮೂಲಕ ಮುಂಬರುವ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಕುಮಾರಸ್ವಾಮಿ ಹೊಗಳಿಕೆಗೆ ಅರ್ಹರಾದ ವ್ಯಕ್ತಿ ಅನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಂತ ಮರ್ಯಾದ ಪುರುಷೋತ್ತಮ ಎಂದು ಕರೆಸಿಕೊಂಡ ಶ್ರೀರಾಮನಿಗೆ ಹೋಲಿಕೆ ಮಾಡುವ ಉನ್ನತ ಶಿಕ್ಷಣ ಸಚಿವರಿಗೆ ಏನು ಹೇಳೋಣ. ಅದೇ 8ನೇ ತರಗತಿ ಕಲಿತವರು ಉನ್ನತ ಶಿಕ್ಷಣ ಸಚಿವರಾದರೆ ಹೀಗಾಗುತ್ತದೆ.

HDD-Family