ನಾನು ಪ್ರೆಷರ್ ಕುಕ್ಕರ್ ಇದ್ದಂತೆ – ಶೃತಿ ಹರಿಹರನ್

ನಾನು ಪ್ರೆಷರ್ ಕುಕ್ಕರ್ ಇದ್ದಂತೆ. ಈಗಷ್ಟೇ ಬಿಸಿಯಾಗಲು ಪ್ರಾರಂಭವಾಗಿದೆ. ಇನ್ನೂ ಜಾಸ್ತಿ ಆದಾಗ ಇನ್ನಷ್ಟು ಹೆಸರು ಹೊರಗೆ ಬರುತ್ತೆ ಎಂದು ನಟಿ ಶ್ರುತಿ ಹರಿಹರನ್ ಹೊಸ ಬಾಂಬ್ ಸಿಡಿಸಿದ್ದಾರೆ.

ಬುಧವಾರ ಮಹಿಳಾ ಆಯೋಗದ ಮುಂದೆ ಹಾಜರಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರೆಷರ್ ಕುಕ್ಕರ್ ಇದ್ದಂತೆ. ಪ್ರೆಷರ್ ಕುಕ್ಕರ್ ಬಿಸಿ ಆದ ನಂತರ ವಿಶಿಲ್ ಬೀಳುತ್ತೆ. ಇನ್ನಷ್ಟು ಬಿಸಿ ಆದಾಗ ಬ್ಲಾಸ್ಟ್ ಆಗುತ್ತೆ. ಅದೇ ರೀತಿ ಈಗಷ್ಟೇ ಒಂದು ಹೆಸರು ಹೊರಬಂದಿದೆ. ಇನ್ನಷ್ಟು ಹೆಸರುಗಳು ಹೊರ ಬರಲಿವೆ ಎಂದರು.

ಮೀಟೂ ಅಭಿಯಾನ ಎಂಬುದು ಸಾಮಾಜಿಕ ಜಾಲತಾಣದಲ್ಲಿ ನೋವು ಹಂಚಿಕೊಳ್ಳಲು ಇರುವ ವೇದಿಕೆ. ಈ ಹಿನ್ನೆಲೆಯಲ್ಲಿ ನಾನು ನೋವು ಹಂಚಿಕೊಂಡಿದ್ದೇನೆ. ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದ್ದು, ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಶ್ರುತಿ ಹರಿಹರನ್ ಹೇಳಿದರು.

ನನ್ನ ವಿರುದ್ಧ ಅರ್ಜುನ್ ಸರ್ಜಾ ಸಾಕ್ಷ್ಯಗಳಿವೆ ಎಂದು ಹೇಳಿರಬಹುದು. ನನ್ನ ಬಳಿಯೂ ಸಾಕಷ್ಟು ಸಾಕ್ಷ್ಯಗಳಿವೆ. ಅವುಗಳನ್ನು ನ್ಯಾಯಾಲಯದ ಮುಂದೆ ಕೊಟ್ಟಿದ್ದೇನೆ. ಮಹಿಳಾ ಆಯೋಗದ ಮುಂದೆ ಅರ್ಜುನ್ ಸರ್ಜಾ ಕುಟುಂಬ ಹಾಗೂ ಅಭಿಮಾನಿಗಳಿಂದ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಹೇಳಿದ್ದೇನೆ ಎಂದು ಶ್ರುತಿ ವಿವರಿಸಿದರು.

ಪ್ರಾಮಾಣಿಕ ಅಧಿಕಾರಿಗಳು ಗಡಿ ಕಾಯಲು ಹೋಗಬೇಕಂತೆ

ಅಂಬಿಡೆಂಟ್ ಪ್ರಕರಣದಲ್ಲಿ ಜೈಲು ವಾಸ ಮುಗಿಸಿ ಹೊರ ಬಂದಿರುವ ಜನಾರ್ಧನ ರೆಡ್ಡಿ ತನ್ನ ವಿರುದ್ಧ ನಡೆದ ರಾಜಕೀಯ ಷಡ್ಯಂತ್ರ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಸಿಸಿಬಿ ಅಧಿಕಾರಿಗಳನ್ನು ರಾಜ್ಯ ಸರ್ಕಾರ ದುರುಪಯೋಗ ಪಡಿಸಿಕೊಂಡಿದೆ ಎಂದು ದೂರಿದ ಜನಾರ್ಧನ ರೆಡ್ಡಿ ಸಿಸಿಬಿ ಹಿರಿಯ ಅಧಿಕಾರಿಗಳಾದ ಅಲೋಕ್ ಕುಮಾರ್ ಮತ್ತು ಡಿಸಿಪಿ ಗಿರೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ತನ್ನದೇ ಶೈಲಿಯಲ್ಲಿ ಅಧಿಕಾರಿಗಳ ಎಡವಟ್ಟುಗಳಿಗೆ ಚಾಟಿ ಬೀಸಿದ ಜನಾರ್ಧನ ರೆಡ್ಡಿ, “ ಅಲೋಕ್ ಕುಮಾರ್ ಪ್ರಾಮಾಣಿಕತೆಯಲ್ಲಿ ನಂಬರ್ 1 ಅಧಿಕಾರಿ, ಮತ್ತೊಬ್ಬ ಅಧಿಕಾರಿ ಗಿರೀಶ್ ಕೂಡಾ ಪ್ರಾಮಾಣಿಕರು.ಇಂತಹ ಪ್ರಾಮಾಣಿಕ ಅಧಿಕಾರಿಗಳು ಸಿಸಿಬಿಯಲ್ಲಿ ಇರಬಾರದು. ಇಂತಹ ಅಧಿಕಾರಿಗಳು ಗಡಿ ಕಾಯಲು ಬೇಕಾಗಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಪ್ರಮಾದ ನಡೆಯುತ್ತಿದೆ. ಇಂತಹ ಸ್ಥಳದಲ್ಲಿ ಪ್ರಾಮಾಣಿಕ ಅಧಿಕಾರಿಗಳ ಅಗತ್ಯವಿದೆ. ಇಂತಹ ಅಧಿಕಾರಿಗಳನ್ನು ಅಂತಹ ಸ್ಥಳದಲ್ಲಿ ನಿಯೋಜಿಸಿದರೆ ರಾಷ್ಟ್ರ ಕಂಡ ಪ್ರಾಮಾಣಿಕ ಮುಖ್ಯಮಂತಿ ಕುಮಾರಸ್ವಾಮಿಯನ್ನು ರಾಷ್ಟ್ರವೇ ಕೊಂಡಾಡುತ್ತದೆ ” ಎಂದರು.

ಇದೇ ವೇಳೆ ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡ ರೆಡ್ಡಿ, 2006ರಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ 150 ಕೋಟಿ ರೂ. ಲಂಚದ ಆರೋಪ ಮಾಡಿದ್ದೆ, ಆ ನಂತರ ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದರು. ರೆಡ್ಡಿಯನ್ನು ಬಂಧನ ಮಾಡಬೇಕು ಎಂಬುದು ಕುಮಾರಸ್ವಾಮಿ ಅವರ ಆಸೆಯಾಗಿತ್ತು. ಈಗ 12 ವರ್ಷಗಳ ನಂತರ ಅವರು ನನ್ನನ್ನು ಬಂಧಿಸುವ ಮೂಲಕ ತಮ್ಮ ಆಸೆಯನ್ನು ಪೂರೈಸಿಕೊಂಡಿದ್ದಾರೆ ಎಂದು ರೆಡ್ಡಿ ಆರೋಪಿಸಿದರು.

ನಾನು ಪ್ರಾಮಾಣಿಕವಾಗಿದ್ದೇನೆ, ಸತ್ಯ ನನ್ನ ಪರವಾಗಿದೆ. ಯಾವುದೇ ತಪ್ಪು ಮಾಡದಿದ್ದರೂ ನನ್ನನ್ನು ಜೈಲಿಗೆ ಕಳುಹಿಸಲಾಗಿದೆ. ತನಿಖೆಯ ದಿಕ್ಕು ತಪ್ಪಿಸಲು ಷಡ್ಯಂತ್ರ ನಡೆಯುತ್ತಿದೆ ಯಾರು ಏನೇ ಎಂದರೂ ನೋಡೋಕೆ ಭಗವಂತ ಇದ್ದಾನೆ ಎಂದು ತಿಳಿಸಿದರು.
ಅಂಬಿಡೆಂಟ್ ಸಂಸ್ಥೆಯಲ್ಲಿ ಅಲಿಖಾನ್ ಲಕ್ಷಾಂತರ ಕೋಟಿ ಹೂಡಿಕೆ ಮಾಡಿದ್ದಾರೆ. ಇದು ಹೇಗೆ ಡೀಲ್ ಮಾಡಲು ಸಾಧ್ಯ.

ಅಂಬಿಡೆಂಟ್ ವಿರುದ್ಧ ದೂರು ಕೊಟ್ಟ ವೇಳೆ ಆಗಿನ ಸಿಎಂ, ಪೊಲೀಸ್ ಆಧಿಕಾರಿಗಳು ಏಕೆ ಕ್ರಮಕೈಗೊಳ್ಳಲಿಲ್ಲ. ಆ ವೇಳೆ ಅಂಬಿಡೆಂಟ್ ಕಂಪನಿ ಜೊತೆ ಅಲಿಖಾನ್ ಜಗಳ ಮಾಡಿಕೊಂಡಿದ್ದರು. ಬಳಿಕವಷ್ಟೇ ಫರೀದ್ ನನ್ನ ಭೇಟಿ ಮಾಡಿದ್ದು ಅಷ್ಟೇ. ಆ ವೇಳೆ ಗೃಹ ಸಚಿವರು ರಾಮಲಿಂಗ ರೆಡ್ಡಿ ಆಗಿದ್ದರು. ಅವರಿಗೆ ಮಾಹಿತಿ ನೀಡಿದ ಬಳಿಕವೇ ಘಟನೆ ನಡೆದಿದೆ. ಅದ್ದರಿಂದ ಅವರನ್ನು ಬಂಧನ ಮಾಡಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದರು.

ಸುದೀಪ್ ಈ ಪರಿ ವೀಕ್ ಆಗಿದ್ದು ಯಾಕೆ ಗೊತ್ತಾ…?

ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯ ವೇದಿಕೆ ಹತ್ತಿದ ವೇಳೆ ಇದೇನಪ್ಪ ಅಭಿನಯ ಚಕ್ರವರ್ತಿ ಇಷ್ಟೊಂದು ವೀಕ್ ಆಗಿದ್ದಾರೆ ಎಂದು ಅಭಿಮಾನಿಗಳು ಬೇಸರಗೊಂಡಿದ್ದರು.

ಅಭಿಮಾನಿಗಳ ಬೇಸರ ಕಿಚ್ಚನಿಗೂ ಅರ್ಥವಾಗಿತ್ತು. ಇದೀಗ ನಾನ್ಯಾಕೆ ಹೀಗಾದೆ ಅನ್ನುವುದನ್ನು ಸುದೀಪ್ ರಿವೀಲ್ ಮಾಡಿದ್ದಾರೆ.

ಪೈಲ್ವಾನ್​​ ಚಿತ್ರಕ್ಕಾಗಿ ಕಿಚ್ಚ ಸುದೀಪ್​​ ಭರ್ಜರಿ ವರ್ಕೌಟ್​ ಮಾಡಿದ ಪರಿಣಾಮ ಇದಂತೆ ಈ ಚಿತ್ರಕ್ಕಾಗಿ ಜಿಮ್‌ನಲ್ಲಿ ಬೆವರಿಳಿಸುವ ಮೂಲಕ ಸುದೀಪ್ ಬರೋಬ್ಬರಿ 16 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಇದನ್ನು ಅವರೇ ತಮ್ಮ ​ ಟ್ವೀಟರ್ ನಲ್ಲಿ ಪ್ರಕಟಿಸಿದ್ದಾರೆ.

ಪೈಲ್ವಾನ್‌ ಚಿತ್ರಕ್ಕಾಗಿ ವರ್ಕೌಟ್ ಮಾಡುವ ಮೊದಲು ಸುದೀಪ್​​ 89 ಕೆ.ಜಿ ತೂಕ ಹೊಂದಿದ್ದರಂತೆ. ಸೊಂಟದ ಸುತ್ತಳತೆ 36 ಇದ್ದು, ಈಗ ವರ್ಕೌಟ್​ ನಂತರ 31.5 ಹಾಗೂ 73 ಕೆ.ಜಿ ತೂಕ ಇದ್ದೇನೆ ಎಂದು ಹೇಳಿದ್ದಾರೆ.

ಹೈದರಾಬಾದ್​ನ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ಹಾಕಿರುವ ಅದ್ದೂರಿ ಸೆಟ್​ಗಳಲ್ಲಿ ಪೈಲ್ವಾನ್ ಶೂಟಿಂಗ್ ನಡೆಯುತ್ತಿದೆ.

ಶಿವಣ್ಣ ಜೊತೆ ದರ್ಶನ್ ತೆರೆ ಹಂಚಿಕೊಳ್ತಾರ…?

ಚಂದನವನದಲ್ಲಿ ಒಂದು ಕಾಲದಲ್ಲಿ ಬಹುತಾರಾಗಣದ ಚಿತ್ರ ಸದ್ದು ಮಾಡಿತ್ತು. ಆದರೆ ಅದ್ಯಾಕೋ ದಿನ ಕಳೆದಂತೆ ಮಲ್ಟಿ ಸ್ಟಾರ್ ಸಿನಿಮಾಗಳ ನಿರ್ಮಾಣದಿಂದ ನಿರ್ಮಾಪಕರು ಹಿಂದೆ ಸರಿದರು.

ಇದೀಗ ಮತ್ತೆ ಮಲ್ಟಿ ಸ್ಟಾರ್ ಗಳ ಸಿನಿಮಾ ಚಂದನವನದಲ್ಲಿ ಸದ್ದು ಮಾಡುತ್ತಿದೆ.

ಅದರಲ್ಲೂ ಇತ್ತೀಚೆಗೆ  ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಾಗಿ ತೆರೆ ಹಂಚಿಕೊಂಡಿರುವ ವಿಲನ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಹಾಗಂತ ಮತ್ತೆ ಮಲ್ಟಿ ಸ್ಟಾರ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಸುದೀಪ್ ಮನಸ್ಸು ಮಾಡುತ್ತಿಲ್ಲ. ಅದೇನಿದ್ದರೂ ಅಪರೂಪಕ್ಕೆ ಒಮ್ಮೆ ಅನ್ನುವುದು ಅವರ ನಿಲುವು

ಇದರ ಬೆನ್ನಲ್ಲೇ ಶಿವಣ್ಣ ಹಾಗೂ ದರ್ಶನ್ ಒಂದೇ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಿದೆ.

ವಿಧಾನಸಭಾ ಚುನಾವಣೆಯೇ ಅನಂತ ಕುಮಾರ್ ಪ್ರಾಣಕ್ಕೆ ಮುಳುವಾಯಿತೇ..?

ಇತ್ತೀಚೆಗೆ ಮುಕ್ತಾಯಗೊಂಡ ರಾಜ್ಯ ವಿಧಾನಸಭಾ ಚುನಾವಣೆಯೇ ಕೇಂದ್ರ ಸಚಿವ ಅನಂತ್ ಕುಮಾರ್ ಜೀವಕ್ಕೆ ಮುಳುವಾಯಿತಾ ಅನ್ನುವ ಪ್ರಶ್ನೆ ಉದ್ಭವಿಸಿದೆ.

ಇದಕ್ಕೆ ಪೂರಕ ಅನ್ನುವಂತ ಮಾತುಗಳು ಅವರ ಆತ್ಮೀಯ ವೈದ್ಯರು ಮತ್ತು ಗೆಳೆಯರ ವಲಯದಿಂದ ಕೇಳಿ ಬರುತ್ತಿದೆ.
ಪಕ್ಷಕ್ಕಾಗಿ, ಚುನಾವಣಾ ಕಾರಣಕ್ಕೆ ಚಿಕಿತ್ಸೆಯನ್ನು ಮುಂದೂಡಿದ್ದ ಅನಂತ್ ಕುಮಾರ್ ,ಇದೀಗ ತಮ್ಮ ಜೀವವನ್ನೇ ತೆರಬೇಕಾಯಿತು ಎಂದು ಹೇಳಲಾಗಿದೆ.

ಮೇ ತಿಂಗಳಿನಲ್ಲಿ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿಯೇ ಅನಂತ್ ಕುಮಾರ್ ಕೆಮ್ಮಿನಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯುವ ಬದಲು ಚುನಾವಣಾ ಪ್ರಚಾರದಲ್ಲಿ ಭಾಗಿಯಾದರು ಎಂದು ಅನಂತ್ ಕುಮಾರ್ ಅವರ ಸ್ನೇಹಿತ ಹಾಗೂ ಫ್ಯಾಮಿಲಿ ಡಾಕ್ಟರ್ ಬಿ.ಎಸ್. ಶ್ರೀನಾಥ್ ಹೇಳಿದ್ದಾರೆ.

modi3

ನಂತರ ಜಯನಗರ ಬಿಜೆಪಿ ಅಭ್ಯರ್ಥಿ ನಿಧನದಿಂದ ಮತದಾನ ಮುಂದೂಡಿಕೆಯಾದಂತೆ ಅನಂತ್ ಕುಮಾರ್ ಚಿಕಿತ್ಸೆಯೂ ಮುಂದೂಡಿಕೆಯಾಯಿತು. ಚುನಾವಣೆ ಬಳಿಕವೇ ಚಿಕಿತ್ಸೆಗೆ ತೆರಳಲು ನಿರ್ಧರಿಸಿದರು. ಅಷ್ಟರಲ್ಲಾಗಲೇ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿತ್ತು, ಆದರೆ ಅನಂತ್ ಕುಮಾರ್ ಅವರಿಗೆ ಇದರ ಬಗ್ಗೆ ಅರಿವಿರಿಲಿಲ್ಲ.

ಡಯಾಬಿಟಿಸ್ ಹೊರತು ಪಡಸಿದರೇ ಅವರಿಗೆ ಯಾವುದೇ ರೀತಿಯ ಕಾಯಿಲೆಗಳಿರಲಿಲ್ಲ. ಮಾತ್ರವಲ್ಲದೆ ಅನಂತ ಕುಮಾರ್ ಅವರಿಗೆ ಕೆಟ್ಟ ಚಟಗಳು ಕೂಡಾ ಇರಲಿಲ್ಲ. ಹೀಗಿದ್ದರೂ ಅನಂತ್ ಕುಮಾರ್ ಅವರಿಗೆ ಶ್ವಾಸಕೋಶದಲ್ಲಿ ಕ್ಯಾನ್ಸರ್ ಆಗಿತ್ತು.

Modi2

ಅನಂತ್ ಕುಮಾರ್ ಅವರ ಕುಟುಂಬಸ್ಥರು ಅವರನ್ನ ಚಿಕಿತ್ಸೆಗಾಗಿ ನ್ಯೂಯಾರ್ಕ್ ಗೆ ತೆರಳಿದರು, ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ, ಹೀಗಾಗಿ ಕುಟುಂಬಸ್ಥರು ವಾಪಸ್ ಬೆಂಗಳೂರಿಗೆ ಕರೆ ತಂದರು. ನಂತರ ನಗರದ ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

15 ದಿನಗಳ ಕಾಲ ಚಿಕಿತ್ಸೆ ಪಡೆಯುವಂತೆ ವೈದ್ಯರು ನೀಡಿದ ಸಲಹೆಯಂತೆ ಅಲ್ಲಿಯೇ ದಾಖಲಿಸಿ‌ ಚಿಕಿತ್ಸೆ ಕೊಡಿಸಲಾಗಿತ್ತು. ನವೆಂಬರ್ 1 ರಂದು ಅನಂತ್ ಕುಮಾರ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಬೇಕಿತ್ತು. ಆದರೆ ಆರೋಗ್ಯದಲ್ಲಿ ಇನ್ನೂ‌ ಸುಧಾರಣೆ ಆಗಬೇಕಾದ ಕಾರಣ ಶಂಕರ ಆಸ್ಪತ್ರೆ ವೈದ್ಯರು ಮತ್ತೆ 10 ದಿನ ಚಿಕಿತ್ಸೆ ಮುಂದುವರೆಸಲು ನಿರ್ಧರಿಸಿದ್ದರು. ಅಷ್ಟು ಹೊತ್ತಿಗೆ ವಿಧಿಯಾಟ ತೋರಿಸಿತ್ತು.

Modi1

ಮದುವೆ ಫೋಟೋಗೆ 18,12,00,000 ರೂಪಾಯಿ

ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ವಿವಾಹ ಡಿಸೆಂಬರ್ 2 ರಂದು ಜೋಧ್ ಪುರದಲ್ಲಿ ನಡೆಯಲಿದ್ದು, ಬಾಲಿವುಡ್ -ಹಾಲಿವುಡ್ ತಾರೆಯರ ಅದ್ಧೂರಿ ವಿವಾಹದ ಫೋಟೊಗಳಿಗೆ ಅತಿ ಹೆಚ್ಚು ಬೇಡಿಕೆ ಬಂದಿದೆ.

ಫಿಲ್ಮ್ ಫೇರ್ ವರದಿಯ ಪ್ರಕಾರ ಪ್ರಿಯಾಂಕ ಹಾಗೂ ನಿಕ್ ವಿವಾಹದ ಫೋಟೊಗಳನ್ನು ಪ್ರಕಟಿಸುವು ಸಲುವಾಗಿ ಅಂತಾರಾಷ್ಟ್ರೀಯ ನಿಯತಕಾಲಿಕ ಬರೊಬ್ಬರಿ 2.5 ಮಿಲಿಯನ್ ಡಾಲರ್ ರೂಪಾಯಿ ಪಾವತಿಸಿ ಹಕ್ಕುಗಳನ್ನು ಪಡೆದಿಕೊಂಡಿದೆಯಂತೆ. ಅಂದರೆ 18,12,00,000.00 ರೂಪಾಯಿಗಳು.

ಕೋಟಿ ಕೋಟಿ ಸುರಿದು ಫೋಟೋ ಖರೀದಿಸುತ್ತಾರೆ ಅಂದ್ರೆ ಪತ್ರಿಕೆ ಅದೆಷ್ಟು ಸಂಪಾದಿಸಬಹುದು. ಒಟ್ಟಿನಲ್ಲಿ ಮದುವೆ ಖರ್ಚು ಬರೀ ಫೋಟೋ ಮಾರಿ ಬಂದ ಹಾಗಾಯ್ತು.

ರೆಡ್ಡಿ ಜೈಲು ಪಾಲಾಗಿರುವುದಕ್ಕೆ ಸಿದ್ದರಾಮಯ್ಯ ಹೇಳಿದ್ದೇನು..?

57 ಕೆಜಿ ಚಿನ್ನದ ಗಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಭಾನುವಾರ ಮತ್ತೆ ಜೈಲು ಸೇರಿದ್ದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಉಪ್ಪು ತಿಂದವರು ನೀರು ಕುಡಿಯಲೇಬೇಕು’ ಎಂದಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ, ಉಪ್ಪು ತಿಂದವರು ನೀರು ಕುಡಿಯಲೇಬೇಕು. ಕಾನೂನು ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳುತ್ತಾರೆ. ಕಾನೂನು ಎಲ್ಲರಿಗೂ ಒಂದೇ. ಯಾರೇ ಆದರೂ ತಪ್ಪು ಮಾಡಿದರೆ ಶಿಕ್ಷೆ ಆಗಲೇಬೇಕು. ನ್ಯಾಯಾಲಯ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತದೆ ಎಂದರು.

ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಸಿಎಂ, ಯಡಿಯೂರಪ್ಪ ಸಿಎಂ ಆಗುತ್ತೇನೆ ಎಂದು ಹಗಲುಗನಸು ಕಾಣುತ್ತಿದ್ದಾರೆ. ಬಿಎಸ್ ವೈ ಗೆ ಕಣ್ಣಮುಚ್ಚಿದರೆ ಸಾಕು ವಿಧಾನಸೌಧದ ಮೂರನೇ ಮಹಡಿ ಕಾಣಿಸುತ್ತದೆ. ವಾಮ ಮಾರ್ಗದಲ್ಲಿ ಸಿಎಂ ಆಗಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

33 ವರ್ಷದ ಹಿಂದಿನ ನೆನಪು ಮಾಡಿಕೊಂಡು ಮುಗುಳು ನಕ್ಕ ಪವರ್ ಸ್ಟಾರ್

1985ರಲ್ಲಿ ಬಿಡುಗಡೆಯಾದ ಬೆಟ್ಟದ ಹೂವು ಚಿತ್ರದ ಅಭಿನಯಕ್ಕೆ ಪುನೀತ್ ರಾಜ್ ಕುಮಾರ್ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದರು.  ಚಿತ್ರ ಬಿಡುಗಡೆಯಾಗಿ 33 ವರ್ಷ ಕಳೆದಿದ್ಗದರೂ ಪುನೀತ್ ರಾಜ್‍ಕುಮಾರ್  ಬೆಟ್ಟದ ಹೂವು ಗುಂಗಿನಿಂದ ಹೊರ ಬಂದಿಲ್ಲ.

ಇತ್ತೀಚೆಗೆ ಪುನೀತ್ ‘ನಟಸಾರ್ವಭೌಮ’ ಚಿತ್ರದ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಬೆಟ್ಟದ ಹೂವು ಚಿತ್ರದ ಚಿತ್ರೀಕರಣ ಸ್ಥಳದ ನೆನಪಾಗಿ ಕೂಡಲೇ ಕಾರನ್ನು ಅತ್ತಿಗುಂಡಿ ಕಡೆಗೆ ತಿರುಗಿಸಿದ್ದಾರೆ.

ಅತ್ತಿಗುಂಡಿಯ ಗ್ರಾಮಸ್ಥರನ್ನು ಮಾತನಾಡಿಸಿ ಚಿತ್ರೀಕರಣದ ಸ್ಥಳ ಹಾಗೂ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದಾರೆ.

ಶೂದ್ರರು ಅಂದ್ರೆ ಸೂಳೆ ಮಕ್ಕಳು : ಇದು ಮನುಸ್ಮತಿಯಲ್ಲಿದೆ – ಕೆಎಸ್ ಭಗವಾನ್

ಹಿಂದೂ ಧರ್ಮ ಉಳಿಯಬೇಕು ಅನ್ನುವುದಾದರೆ ಮನುಸ್ಮೃತಿಯಿಂದ ಮೊದಲು ಶೂದ್ರ ಎಂಬ ಪದವನ್ನು ತೆಗೆದು ಹಾಕಬೇಕು ಎಂದು ವಿದ್ವಾಂಸ ಕ ಎಸ್ ಭಗವಾನ್ ಹೇಳಿದ್ದಾರೆ.

ಮಂಡ್ಯದ ಆದಿಚುಂಚನಗಿರಿ ಮಠಕ್ಕೆ ಶ್ರೀಗಳ ಭೇಟಿಗೆ ಆಗಮಿಸಿದ ಅವರು ಶ್ರೀಗಳ ಭೇಟಿಯ ಬಳಿಕ ಮಾತನಾಡಿ, ಶೂದ್ರ ಅಂದ್ರೆ ಬರೀ ಗುಲಾಮ ಎಂದು ಅರ್ಥವಲ್ಲ. ಮನು ಸ್ಮೃತಿಯ ಪ್ರಕಾರ ಶೂದ್ರ ಅಂದರೆ ಸೂಳೆಮಕ್ಕಳು ಎಂಬ ಅರ್ಥವಿದೆ.ಇಂತಹ ಅಸಭ್ಯ ಪದ ನಮಗೆ ಬೇಕಾ, ನಮಗೆ ಗೌರವ ತರುತ್ತಿದೆಯಾ ಈ ಶಬ್ಧ? ಎಂದು ಭಗವಾನ್ ಪ್ರಶ್ನಿಸಿದ್ದಾರೆ.

ಮನುಸ್ಮೃತಿಯ 8ನೇ ಅಧ್ಯಾಯ 415ನೇ ಶ್ಲೋಕದಲ್ಲಿ ಈ ವಿಚಾರವಿದ್ದು, ದೇಶದಲ್ಲಿ ಶೇ.95 ರಷ್ಟು ಶೂದ್ರರಿದ್ದಾರೆ. ಅವರನ್ನೆಲ್ಲಾ ಗುಲಾಮರು, ಸೂಳೆಮಕ್ಕಳು ಅಂದರೆ ಒಪ್ಪಿಕೊಳ್ಳಲು ಸಾಧ್ಯವೇ. ನನಗೆ ಗುಂಡಿಕ್ಕಿದರೂ ಪರವಾಗಿಲ್ಲ ಇದನ್ನೆಲ್ಲ ಹೇಳಿಯೇ ಸಿದ್ದ. ಜನರು ಇದನ್ನೆಲ್ಲ ತಿಳಿಯಬೇಕು ಎಂದು ಹೇಳುತ್ತಿದ್ದೇನೆ. ನಾನು ಹೇಳುವುದು ವಿವಾದವಾದರು ಪರವಾಗಿಲ್ಲ ಎಂದು ತಮ್ಮ ಮಾತುಗಳನ್ನು ಭಗವಾನ್ ಸಮರ್ಥಿಸಿಕೊಂಡಿದ್ದಾರೆ.

ಮನುಸ್ಮತಿಯ ಓದಿದ ಯಾರಾದರೂ ಕಮೆಂಟ್ ಮಾಡಿದರೆ ಚೆನ್ನಾಗಿತ್ತು.