ಸೀಮಂತ ಸಂಭ್ರಮ :ರಾಧಿಕಾ ಪಂಡಿತ್ ಗೆ ಜನಾರ್ಧನ ರೆಡ್ಡಿಯಿಂದ ಗಿಫ್ಟ್

ಅಯ್ಯಪ್ಪನ ದರ್ಶನಕ್ಕೆ ಪಟ್ಟು ಹಿಡಿದ ಮಹಿಳಾ ಹೋರಾಟಗಾರರಿಗೆ ಚಾಟಿ ಬೀಸಿದ ತಸ್ಲೀಮಾ ನಸ್ರಿನ್

ಅಯ್ಯಪ್ಪನ ಭಕ್ತರ ಭಾವನೆಗಳನ್ನು ಕಾಲ ಕಸ ಮಾಡಿ ಶಬರಿಮಲೆ ಭೇಟಿ ಮಾಡಲು ಮಹಿಳಾ ಹೋರಾಟಗಾರರು ಉತ್ಸಾಹ ತೋರುತ್ತಿದ್ದಾರೆ. ಭಕ್ತಿಯಿಂದ ಅದ್ಯಾವ ವಯಸ್ಸಿನ ಮಹಿಳೆಯರು ಬಂದರೆ ಅದನ್ನು ತಡೆಯುವ ಅಧಿಕಾರ ಯಾರಿಗೂ ಇಲ್ಲ. ಆದರೆ ಈಗ ಬರುತ್ತಿರುವ ಹೋರಾಟಗಾರರ ತಲೆಯಲ್ಲಿ ಇರುಮುಡಿಯೇ ಇಲ್ಲ ಅಂದ ಮೇಲೆ ಅವರನ್ನು ಭಕ್ತರೆಂದು ಪರಿಗಣಿಸಲು ಸಾಧ್ಯವೇ.

ಈ ನಡುವೆ ಮಹಿಳಾ ಕಾರ್ಯಕರ್ತೆಯರು ಶಬರಿಮಲೆಗೆ ತೆರಳಲು ಯಾಕಿಷ್ಟು ಉತ್ಸುಕತೆ ತೋರಿದ್ದಾರೆ ನನಗೆ ತಿಳಿಯುತ್ತಿಲ್ಲ, ಆದರೆ ದೇಶದಲ್ಲಿ ಮಹಿಳೆಯರು ಅದಕ್ಕಿಂತಲೂ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ನೆರವಾಗಲಿ ಎಂದು ಖ್ಯಾತ ಲೇಖಕಿ ಮತ್ತು ಮಹಿಳಾ ಪರ ಚಿಂತಕಿ ತಸ್ಲೀಮಾ ನಸ್ರಿನ್ ಹೇಳಿದ್ದಾರೆ.

ಈ ಸಂಬಂಧ ಟ್ವಿಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರುಮಹಿಳಾ ಕಾರ್ಯಕರ್ತೆಯರು ಶಬರಿಮಲೆಗೆ ತೆರಳಲು ಯಾಕಿಷ್ಟು ಉತ್ಸುಕತೆ ತೋರುತ್ತಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ಶಬರಿಮಲೆಗಿಂತ ಮಿಗಿಲಾಗಿ ಮಹಿಳೆಯರು ತೀರಾ ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗೃಹ ಹಿಂಸೆ, ಲೈಂಗಿಕ ದೌರ್ಜನ್ಯ, ಧ್ವೇಷದಂತಹ ಸಮಸ್ಯೆಗಳಲ್ಲಿ ಬೇಯುತ್ತಿದ್ದಾರೆ. ಶಿಕ್ಷಣ, ಆರೋಗ್ಯದಿಂದ ವಂಚಿತರಾಗುತ್ತಿದ್ದು, ಸ್ವತಂತ್ರವಾಗಿ ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ಪುರುಷರಿಗೆ ಸರಿಸಮಾನ ವೇತನ ಸಿಗುತ್ತಿಲ್ಲ. ಇಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರ ಪರ ಹೋರಾಟಗಾರ್ತಿಯರು ತಮ್ಮ ಹೋರಾಟ ಮಾಡಲಿ, ಸಾಧ್ಯವಾದರೆ ಹಳ್ಳಿಗಳಿಗೆ ತೆರಳಿ ಅಲ್ಲಿನ ಮಹಿಳೆಯ ಸಮಸ್ಯೆ ಆಲಿಸಲಿ ಎಂದಿದ್ದಾರೆ.

ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸಿದರೆ ಸಮಾನತೆ ಸಿಗುತ್ತದೆಯೇ ಅನ್ನುವುದು ಹಲವರ ಪ್ರಶ್ನೆ.

ಹೆಂಡತಿಯ ಸವಾಲ್ : ತಾಕತ್ತಿದ್ರೆ 24 ಗಂಟೆಯೊಳಗೆ ನನ್ನ ಸೆಕ್ಸ್ ವಿಡಿಯೋ ಬಹಿರಂಗ ಮಾಡಿ

ನಿರಂತರವಾಗಿ ಕಿರುಕುಳ ಹಾಗೂ ತನ್ನ ಚಾರಿತ್ರ್ಯವಧೆ ಮಾಡಿದ್ದ ಪತಿಯ ವಿರುದ್ಧ ತಿರುಗಿ ಬಿದ್ದಿರುವ ಚಿತ್ರದುರ್ಗದ ಮಹಿಳೆಯೊಬ್ಬರು ನಿಮಗೆ ತಾಕತ್ತಿದ್ರೆ 24 ಗಂಟೆಯೊಳಗೆ ನನ್ನ ಸೆಕ್ಸ್ ವಿಡಿಯೋ ಬಹಿರಂಗ ಮಾಡಿ ಎಂದು ಪತಿಗೆ ಸವಾಲು ಹಾಕಿದ್ದಾರೆ.

ತನ್ನ ಗಂಡ ವಕೀಲ ರಾಘವೇಂದ್ರ ಕಳೆದ ಆರು ತಿಂಗಳಿನಿಂದ ನಿರಂತರ ಕಿರುಕುಳ ನೀಡುತ್ತಿದ್ದಾನೆ. ಮಧ್ಯ ರಾತ್ರಿ ಮುದ್ದೆ ಕೋಲಿನಿಂದ ಹಲ್ಲೆ ಮಾಡಿದ್ದಾನೆ. ನನ್ನ ಹೆಸರಿನಲ್ಲಿದ್ದ ಸುಮಾರು 6 ಕೋಟಿ ಬೆಲೆಯ ಆಸ್ತಿಯನ್ನು ತಾಯಿಯ ಹೆಸರಿಗೆ ಬರೆದುಕೊಟ್ಟಿದ್ದಕ್ಕೆ ಕಿರುಕುಳ ನೀಡುತ್ತಿದ್ದಾನೆ ಎಂದು ಗೃಹಿಣಿ ಆರೋಪಿಸಿದ್ದಾರೆ.

ನನಗೆ ನನ್ನ ಸೋದರ ಮಾವನ ಜೊತೆ ನನಗೆ ಅನೈತಿಕ ಸಂಬಂಧ ಇದೆ ಎಂದು ಅಪಪ್ರಚಾರ ಮಾಡಿದ್ದಾನೆ. ನನ್ನ ಬಳಿ ನಿನ್ನ ರಾಸಲೀಲೆ ವಿಡಿಯೋ ಇದೆ. ಅದನ್ನು ಬಿಡುಗಡೆ ಮಾಡುವುದಾಗಿ ಬೆದರಿಸಿದ್ದಾನೆ. ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಗೃಹಿಣಿ ಪೊಲೀಸರಿಗೆ ದೂರು ನೀಡಿದ್ದಾರೆ.

ನನ್ನ ಅನೈತಿಕ ಸಂಬಂಧ ವಿಡಿಯೋವನ್ನು ಬಿಡುಗಡೆ ಮಾಡುವುದಾಗಿ ಹೇಳುವ ಆತನಿಗೆ ತಾಕತ್ತಿದ್ರೆ ಇನ್ನು 24 ಗಂಟೆಯೊಳಗೆ ವಿಡಿಯೋ ಬಿಡುಗಡೆ ಮಾಡಲಿ ಎಂದು ಗೃಹಣಿ ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ರಾಘವೇಂದ್ರ ತಲೆಮರೆಸಿಕೊಂಡಿದ್ದಾನೆ.


ಡಿವೋರ್ಸ್ ಕೊಡಿಸಿದ ವಕೀಲನ ಜೊತೆ ಮದುವೆ


ಕಳೆದ 8 ವರ್ಷಗಳ ಹಿಂದೆ ಶೋಭಾ ಎಂಬವರು ತನ್ನ ಮೊದಲ ಪತಿ ಸರಿಯಿಲ್ಲ ಎಂದು ವಿಚ್ಛೇದನ ಪಡೆದಿದ್ದರು. ಇದೇ ರಾಘವೇಂದ್ರನೇ ವಿಚ್ಛೇದನ ಕೊಡಿಸಿದ್ದ ವಕೀಲ.

ಬಳಿಕ ಶೋಭಾ ಮತ್ತು ರಾಘವೇಂದ್ರ ನಡುವೆ ಪ್ರೇಮಾಂಕುರವಾಗಿತ್ತು. ಕುಟುಂಬದ ವಿರೋಧದ ನಡುವೆ ಇಬ್ಬರು ಮದುವೆಯಾಗಿದ್ದರು.

ರಾಘವೇಂದ್ರನಿಗೂ ಈ ಹಿಂದೆ ಮದುವೆಯಾಗಿತ್ತು. ಮೊದಲ ಹೆಂಡತಿಗೆ ವಿಚ್ಚೇದನ ಕೊಟ್ಟಿದ್ದನ್ನು ತಿಳಿದ ಶೋಭಾ ರಾಘವೇಂದ್ರನನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕವೂ ಇವರ ಸಂಸಾರದಲ್ಲಿ ಅನ್ಯೋನ್ಯತೆ ಇತ್ತು.. ಇವರಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳು ಕೂಡಾ ಇದ್ದಾರೆ.

ಆದರೆ ಇದೀಗ ಆಸ್ತಿ ವಿವಾದವೇ ಈ ಕಿತ್ತಾಟಕ್ಕೆ ಕಾರಣ ಎನ್ನಲಾಗಿದೆ.

ದೀಪಿಕಾ-ರಣ್‍ವೀರ್ ಮದುವೆಗೆ ಶುಭ ಕೋರಿದ ಕಾಂಡೋಮ್ ಕಂಪೆನಿ

 

ಬಾಲಿವುಡ್’ನ ಸೂಪರ್ ಜೋಡಿಗಳಲ್ಲಿ ಒಂದಾದ ರಣ್’ವೀರ್ ಹಾಗೂ ಹಾಗೂ ದೀಪಿಕಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಂತೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.

ಈ ನಡುವೆ ಪ್ರತಿಷ್ಠಿತ ಕಾಂಡೋಮ್ ಕಂಪೆನಿ ಕೂಡಾ ದೀಪ್-ವೀರ್ ಮದುವೆಗೆ ವಿನೂತನವಾಗಿ ಶುಭಾಶಯ ಕೋರಿದೆ..

ಡ್ಯೂರೆಕ್ಸ್ ಎಂಬ ಕಾಂಡೋಮ್ ಕಂಪೆನಿ ದೀಪಿಕಾ ಹಾಗೂ ರಣ್’ವೀರ್ ಮದುವೆಗೆ ಟ್ವಿಟ್ಟರ್ ಮೂಲಕ ಶುಭಾಶಯ ಹೇಳಿದ್ದು.

“ದೀಪಿಕಾ ಹಾಗೂ ರಣ್’ವೀರ್ಅಧಿಕೃತವಾಗಿ ಅದರ ಮೇಲೆ ರಿಂಗ್ ಹಾಕಿಕೊಳ್ಳುವುದಕ್ಕೆ ಶುಭಾಶಯಗಳು” ಎಂದು ಟ್ವೀಟ್ ಮಾಡಿದೆ. ಜೊತಗೆ ನಾವು ನಿಮ್ಮನ್ನು ಸುತ್ತುವರಿದಿದ್ದೇವೆ ಅಂದಿದೆ.

ಈ ಹಿಂದೆ 2017ರಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮದುವೆಯಾಗಿದ್ದಾಗಇದೇ ಡ್ಯೂರೆಕ್ಸ್ ಕಂಪೆನಿ “ವಿರಾಟ್ ಹಾಗೂ ಅನುಷ್ಕಾ ನಿಮಗೆ ಮದುವೆಯ ಶುಭಾಶಯಗಳು. ನಿಮ್ಮನಡುವೆ ಡ್ಯೂರೆಕ್ಸ್ ಬಿಟ್ಟು ಏನೂ ಬಾರದೇ ಇರಲಿ” ಎಂದು ಟ್ವೀಟ್ ಮಾಡಿತ್ತು.

ಇನ್ನು ಅಮುಲ್ ಸಂಸ್ಥೆಯೂ ವಿಭಿನ್ನವಾಗಿ ಶುಭಾಶಯ ಕೋರಿದೆ.

ಧ್ರುವ ಸರ್ಜಾ ಮದ್ವೆಯಾಗುತ್ತಿರುವ ಪ್ರೇರಣಾ ಶಂಕರ್ ಯಾರು ಗೊತ್ತಾ..?

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತನ್ನ ಬಹು ಕಾಲದ ಗೆಳತಿ ಜೊತೆ ಸಪ್ತಪದಿ ತುಳಿಯಲು ಸಿದ್ದವಾಗುತ್ತಿದ್ದಾರೆ.

ಪ್ರೇರಣಾಶಂಕರ್ ಜೊತೆ ಮದುವೆಯಾಗಲು ಸಿದ್ಧರಾಗಿರುವ ಧ್ರುವ ಸರ್ಜಾ ಹಿಂದೂ ಸಂಪ್ರದಾಯದಂತೆ ಡಿಸೆಂಬರ್ ಮೊದಲ ವಾರದಲ್ಲಿ ಅಂದರೆ ಡಿಸೆಂಬರ್ 9ಕ್ಕೆ  ರಿಂಗ್ ಬದಲಾಯಿಸಿಕೊಳ್ಳುವ ಮೂಲಕ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ.

ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿಯ ಅಂಜನೇಯ ದೇವಸ್ಥಾನದಲ್ಲಿ ಎಂಗೇಜ್ಮೆಂಟ್ ನಡೆಯಲಿದೆ.

ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ ಸಚಿವ ಸ್ಥಾನ ನಿಭಾಯಿಸಲು ಸಿದ್ದವಂತೆ….!

ಭಗವಂತ ಮತ್ತು ಸತ್ಯನಿಷ್ಠೆ ಹೆಸರಿನಲ್ಲಿ ರಾಮನಗರದಿಂದ ಆಯ್ಕೆಯಾಗಿರುವ ನೂತನ ಶಾಸಕಿ, ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಶಾಸಕಿಯಾಗಿ ಗುರುವಾರ ಪ್ರತಿಜ್ಞಾವಿಧಿ ಸ್ವೀಕರಿಸಿದರು

ಗುರುವಾರ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆಮಾತನಾಡಿದ ಅವರು ”ಪತಿ ಕುಮಾರಸ್ವಾಮಿ ಸಿಎಂ ಆಗಿರುವ ಕಾರಣ ಸಚಿವ ಸ್ಥಾನದ ನಿರೀಕ್ಷೆಯಲ್ಲಿಲ್ಲ ಮತ್ತು ಬೇಡಿಕೆ ಸಲ್ಲಿಸುವುದಿಲ್ಲ. ಆದರೆ, 2ನೇ ಬಾರಿಗೆ ಶಾಸಕಿಯಾಗಿರುವ ನನಗೆ ಮಹಿಳಾ ಕೋಟಾದಲ್ಲಿ ಅವಕಾಶ ಕಲ್ಪಿಸಿದರೆ ಸಮರ್ಥವಾಗಿ ನಿರ್ವಹಿಸುತ್ತೇನೆ.

ಇದನ್ನೂ ಓದಿ  : ವಿಧಾನಸಭಾ ಚುನಾವಣೆಯೇ ಅನಂತ ಕುಮಾರ್ ಪ್ರಾಣಕ್ಕೆ ಮುಳುವಾಯಿತೇ..?

ಮೈತ್ರಿ ಸರಕಾರದಲ್ಲಿ ಸಚಿವ ಸ್ಥಾನ ನೀಡಿದರೆಯಶಸ್ವಿಯಾಗಿ ನಿಭಾಯಿಸಲು ಸಿದ್ಧಳಿದ್ದೇನೆ ಎಂದು ಹೇಳುವಮೂಲಕ ಸಚಿವ ಸ್ಥಾನ ಸಿಕ್ಕರೆ ಬಿಡುವುದುಂಟೇ ಎಂದು ಪರೋಕ್ಷವಾಗಿ ಹೇಳಿದರು.

ಈ ನಡುವೆ ಅನಿತಾ ಕುಮಾರಸ್ವಾಮಿಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾಸಕರ ಸುರೇಶ್ ಕುಮಾರ್ ‘ಭಲೇ’ ಅನ್ನುವ ಪದ ಬಳಸಿ ಕುಟುಂಬ ರಾಜಕಾರಣಕ್ಕೆ ಕನ್ನಡಿ ಹಿಡಿದಿದ್ದಾರೆ.

ಬದುಕಲು ಕಲಿಸಿದ ಸಂತ ಇನ್ನಿಲ್ಲ


ಬದುಕಲು ಕಲಿಯಿರಿ ಕೃತಿ ಮೂಲಕ ಮನೆಮಾತಾಗಿದ್ದ ಶ್ರೀ ಜಗದಾತ್ಮಾನಂದ ಸ್ವಾಮೀಜಿ (89) ಗುರುವಾರ ರಾತ್ರಿ 7.30ಕ್ಕೆ ವಿಧಿವಶರಾಗಿದ್ದಾರೆ.

ಮೈಸೂರಿನ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಹಿರಿಯ ಸ್ವಾಮೀಜಿಯಾಗಿದ್ದ ಜಗದಾತ್ಮನಂದ ಜೀ ಅವರಿಗೆ 90 ವರ್ಷ ವಯಸ್ಸಾಗಿತ್ತು.. 

ಜಗದಾತ್ಮಾನಂದ ಕೊಡಗಿನಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಸಂಸ್ಥಾಪಕರಾಗಿದ್ದಾರೆ

ಕಳೆದೊಂದು ತಿಂಗಳಿಂದ ನ್ಯುಮೋನಿಯಾದಿಂದ ಬಳಸುತ್ತಿದ್ದ ಇವರು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ರಾಮಕೃಷ್ಣ ಶಾರದಾಶ್ರಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಶ್ರೀಗಳ “ಬದುಕಲು ಕಲಿಯಿರಿ” ಸರಣಿಯ ಪುಸ್ತಕಗಳು 9 ಭಾಷೆಗೆ ಅನುವಾದಗೊಂದು ದಾಖಲೆ ಮೆರೆದಿವೆ.


ಜಗದಾತ್ಮಾನಂದ ಜೀ ಬರೆದಿದ್ದ ‘ಬದುಕಲು ಕಲಿಯಿರಿ’ ಕೃತಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿತ್ತು. ಹುಟ್ಟಿದ ಮೇಲೆ ಜೀವನದಲ್ಲಿ ಒಮ್ಮೆಯಾದರೂ ಜೋಗದ ಗುಂಡಿ ನೋಡು ಅನ್ನುವಂತೆ, ಜೀವನದಲ್ಲಿ ಒಮ್ಮೆ ಬದುಕಲು ಕಲಿಯಿರಿ ಪುಸ್ತಕ ಓದಿ ಅನ್ನುವ ಮಾತು ಪ್ರಚಲಿತದಲ್ಲಿತ್ತು.

ಜಗದಾತ್ಮಾನಂದ ಜೀ  ಬರೆದ ‘ಬದುಕಲು ಕಲಿಯಿರಿ ಎಂಬ ಪುಸ್ತಕ ಕನ್ನಡ ಪ್ರಕಾಶನ ಲೋಕದಲ್ಲಿ ದಾಖಲೆಯನ್ನು ನಿರ್ಮಿಸಿದೆ. ಕನ್ನಡ ಭಾಷೆಯ ಪುಸ್ತಕ 9 ಬಾಷೆಗಳಿಗೆ ಭಾಷಾಂತರ ಹೊಂದಿತ್ತು. ಬದುಕಲು ಕಲಿಯಿರಿ ಮೊದಲನೆಯ ಭಾಗ 1981ರಲ್ಲಿ ಪ್ರಕಟವಾದರೆ, ಎರಡನೇ ಭಾಗ 1986ರಲ್ಲಿ ಪ್ರಕಟಗೊಂಡಿತ್ತು. ಮೊದಲನೆಯ ಭಾಗ 2003ರ ಹೊತ್ತಿಗೆ ಹದಿಮೂರು ಮುದ್ರಣ ಕಂಡಿತ್ತು. ಎರಡನೆಯ ಭಾಗ 2002 ರಲ್ಲಿ ಒಂಭತ್ತನೆಯ ಮುದ್ರಣ ಕಂಡಿತ್ತು.

ಜನರಿಂದ ಮತ್ತೆ ಮತ್ತೆ ಬೇಡಿಕೆ ಬಂದ ಹಿನ್ನಲೆಯಲ್ಲಿ ಎರಡು ಭಾಗಗಳನ್ನು ಸೇರಿಸಿ ಸಂಯುಕ್ತವಾಗಿ ಬದುಕಲು ಕಲಿಯಿರಿ ಪುಸ್ತಕವನ್ನು ಪ್ರಕಟಿಸಲಾಗಿದೆ.

ಸಂಯುಕ್ತವಾಗಿ ಪ್ರಕಟವಾಗಿರುವ ಪುಸ್ತಕದಲ್ಲಿ ಈಗಾಗಲೇ 30 ಸಾವಿರ ಪ್ರತಿಗಳಷ್ಟು ಮಾರಾಟವಾಗಿದೆ. 1981 ರಿಂದ ಈ ವರೆಗೆ ಬದುಕಲು ಕಲಿಯಿರಿ ಪುಸ್ತಕದ 3 ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿದೆ ಅನ್ನುವುದು ಅಂದಾಜು.