ಬೆಂಗಳೂರು : ಕೊರೋನಾ ಸೋಂಕಿನ ಮೂರನೇ ಅಲೆ ಮುನ್ನುಡಿ ಬರೆದಿರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ, ಅನ್ ಲಾಕ್ ನಿಯಮಗಳು ಜಾರಿಯಾದ ಬೆನ್ನಲ್ಲೇ ಜನ ನಿಯಮಗಳನ್ನು ಮರೆತು ಓಡಾಡುತ್ತಿದ್ದಾರೆ.ಹೊಟ್ಟೆಪಾಡು ಸಲುವಾಗಿ ಓಡಾಡದೆ ವಿಧಿಯಿಲ್ಲ, ಹಾಗಂತ ಸಾಧ್ಯವಾದಷ್ಟು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ತಾನೇ.
ಈ ನಡುವೆ ಮೂರನೇ ಅಲೆಗೆ ಡೆಲ್ಟಾ ಕಾರಣವಾಗಬಹುದು ಎನ್ನಲಾಗಿದ್ದು, ಡೆಲ್ಟಾ ತೀರಾ ಅಪಾಯಕಾರಿ ವೈರಸ್ ಆಗಿರುವುದರಿಂದ, ಎರಡನೇ ಅಲೆಗಿಂತೂ ಮೂರನೇ ಅಲೆ ಭೀಕರವಾಗಿರಬಹುದು ಅನ್ನಲಾಗಿದೆ. ಅಷ್ಟೇ ಅಲ್ಲದೆ ಮೂರನೇ ಅಲೆ ಮಕ್ಕಳಲ್ಲಿ ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಪೂರಕ ಅನ್ನುವಂತೆ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗತೊಡಗಿದೆ.
ಇನ್ನು ಕೊರೋನಾ ಸೋಂಕಿನ ಮೂರನೇ ಅಲೆಯಲ್ಲಿ ಸೋಂಕಿನ ಜೊತೆಗೆ ಬಹು ಅಂಗಾಂಗ ಉರಿಯೂತ ಸಮಸ್ಯೆ ಕೂಡ ಮಕ್ಕಳನ್ನು ಕಾಡುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಎರಡನೆ ಅಲೆಯಲ್ಲಿ ಚೇತರಿಸಿಕೊಂಡ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಈಗಾಗಲೇ 600ಕ್ಕೂ ಅಧಿಕ ಹಾಗೂ ಬೆಂಗಳೂರಿನಲ್ಲಿ 400 ಅಧಿಕ ಪ್ರಕರಣಗಳು ವರದಿಯಾಗಿಯಂತೆ. ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಅಪಾಯವಾಗಿರುವುದರಿಂದ ಬಹು ಅಂಗಾಂಗ ಉರಿಯೂತ ಸಮಸ್ಯೆ ಉಲ್ಭಣವಾಗಬಹುದು ಅನ್ನುವುದು ವೈದ್ಯರ ಆತಂಕ.
ಕಣ್ಣಿನ ಸುತ್ತ ಕೆಂಪಾಗುವುದು, ದೇಹದಲ್ಲಿ ಊತ, ಮೈ ತುರಿಕೆ, ಜ್ವರ, ಹೊಟ್ಟೆನೋವು, ವಾಂತಿ ಈ ಸಮಸ್ಯೆಯ ಪ್ರಮುಖ ಲಕ್ಷಣಗಳಾಗಿವೆ. ಒಟ್ಟಿನಲ್ಲಿ ಲಸಿಕೆಯಾಗಿದೆ ಎಂದು ಪೋಷಕರು ಮೈ ಮರೆತು ಓಡಾಡುವ ಮುನ್ನ ಸಾವಿರ ಸಲ ಯೋಚಿಸುವುದು ಒಳಿತು. ಅಷ್ಟೇ ಅಲ್ಲದೆ ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋಗುವಾಗ ಸಾಕಷ್ಟು ಎಚ್ಚರಿಕೆ ವಹಿಸಿದೆ. ಅದರಲ್ಲೂ ಜನನಿಬಿಡ ಪ್ರದೇಶಗಳಿಗೆ ಮಕ್ಕಳನ್ನು ಕಳುಹಿಸದೇ ಇರುವುದೇ ಉತ್ತಮ.
Discussion about this post