ನವದೆಹಲಿ : ಈಗಾಗಲೇ ಚೈನಾ ಮಾಲ್ ಅಂದ್ರೆ ಹೇಗಿರುತ್ತದೆ ಅನ್ನುವುದು ನಮಗೆಲ್ಲರಿಗೂ ಗೊತ್ತಿದೆ. ಅದರಲ್ಲೂ ಮಕ್ಕಳ ಆಟಿಕೆ ವಿಚಾರದಲ್ಲಿ ಅಸಲಿಯ ತಲೆ ಮೇಲೆ ಹೊಡೆದಂತೆ ನಕಲಿ ಸೃಷ್ಟಿಸುವಲ್ಲಿ ಚೀನಾದವರದ್ದು ಎತ್ತಿದ ಕೈ.
ಇದೀಗ ಅಸಲಿ ವೈರಸ್ ಗೆ ನಕಲಿ ಲಸಿಕೆಯನ್ನು ಚೀನಾ ಪೂರೈಸಿದೆ ಅನ್ನುವ ಆಘಾತಕಾರಿ ವಿಷಯ ಬಹಿರಂಗಗೊಂಡಿದೆ. ಇಡೀ ವಿಶ್ವಕ್ಕೆ ಕೊರೋನಾ ಹರಡಿದ ಚೀನಾ ಲಸಿಕೆಯನ್ನು ಕೂಡಾ ಅದೇ ವೇಗದಲ್ಲಿ ಕಂಡು ಹಿಡಿದಿತ್ತು.
ಅಷ್ಟೇ ಅಲ್ಲದೆ ವಿಶ್ವದ ಅನೇಕ ರಾಷ್ಟ್ರಗಳಿಗೆ ತನ್ನ ದೇಶದಲ್ಲಿ ತಯಾರಿಸಲಾದ ಸಿನೋ ಫಾರ್ಮ ಹಾಗೂ ಸಿನೋ ವ್ಯಾಕ್ ಅನ್ನುವ ಲಸಿಕೆಯನ್ನು ರಫ್ತು ಮಾಡಿತ್ತು. ಮಿತ್ರ ರಾಷ್ಟ್ರದಿಂದ ಬಂದ ಲಸಿಕೆಯನ್ನು ರತ್ನಗಂಬಳಿ ಹಾಸಿ ಸ್ವಾಗತಿಸಿದ್ದ ಸೀಶೆಲ್ಸ್, ಚಿಲಿ, ಬಹ್ರೈನ್ ಹಾಗೂ ಮಂಗೋಲಿಯಾ ಕಂಗಲಾಗಿದೆ.
ಯಾಕಂದ್ರೆ ಚೀನಾ ಕಳುಹಿಸಿದ ಲಸಿಕೆ ಕಳಪೆ ಗುಣಮಟ್ಟದಿಂದ ಕೂಡಿದೆ. ಈ ಎಲ್ಲಾ ದೇಶಗಳು ಶೇ 68 ಜನರಿಗೆ ಎರಡು ಡೋಸ್ ಲಸಿಕೆಯನ್ನು ನೀಡಿದೆ. ಆದರೆ ಸೋಂಕಿನ ಪ್ರಮಾಣ ತಗ್ಗಿಯೇ ಇಲ್ಲ. ಅಷ್ಟೇ ಅಲ್ಲದೆ ರೂಪಾಂತರಿ ವೈರಸ್ ವಿರುದ್ಧ ಹೋರಾಡುವ ತಾಕತ್ತನ್ನು ಈ ಲಸಿಕೆಗಳು ಹೊಂದಿಲ್ಲ ಅನ್ನುವುದು ಇದೀಗ ಬಹಿರಂಗವಾಗಿದೆ.
Discussion about this post