Thursday, March 4, 2021

ನಾಳೆಯಿಂದ ಕೇರಳದಿಂದ ಕರ್ನಾಟಕ ಪ್ರವೇಶಿಸಲು ನಾಲ್ಕು ಗಡಿಯಲ್ಲಿ ಮಾತ್ರ ಅವಕಾಶ

Must read

- Advertisement -
- Advertisement -

ಮಂಗಳೂರು : ಕೇರಳದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಕೇರಳದಿಂದ ಕರ್ನಾಟಕ ಪ್ರವೇಶಿಸುವ ಮುನ್ನ ಕೊರೋನಾ ನೆಗೆಟಿವ್ ಸರ್ಟಿಫೀಕೆಟ್ ಕಡ್ಡಾಯ ಮಾಡಲಾಗಿದೆ.

ಕೇರಳದಿಂದ ಕರ್ನಾಟಕ ಪ್ರವೇಶಿಸಲು ನೂರಾರು ದಾರಿಗಳಿರುವ ಹಿನ್ನಲೆಯಲ್ಲಿ ಇದೀಗ ನಾಲ್ಕು ಗಡಿ ಮೂಲಕ ಪ್ರವೇಶಿಸಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಹೊಸ ಆದೇಶ ಪ್ರಕಾರ ತಲಪಾಡಿ, ಸಾರಡ್ಕ, ಮೇನಾಲ ಹಾಗೂ ಜಾಲ್ಸೂರು ಮೂಲಕ ಮಾತ್ರ ಕರ್ನಾಟಕ ಪ್ರವೇಶಿಸಬಹುದಾಗಿದೆ.

ಈ ನಾಲ್ಕು ಗಡಿಗಳಲ್ಲಿ ವಿಶೇಷ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಕೊರೋನಾ ನೆಗೆಟಿವ್ ಪರೀಕ್ಷಾ ವರದಿ ಪರಿಶೀಲನೆ ಸಲುವಾಗಿ  ಆರೋಗ್ಯ ಇಲಾಖೆಯಿಂದ ಒಂದು ತಂಡವನ್ನ ನೇಮಿಸಲಾಗಿದೆ. ಯಾವುದೇ ಕಾರಣಕ್ಕೂ RAT ಪರೀಕ್ಷಾ ವರದಿ ತಂದರೆ ಪ್ರವೇಶ ನೀಡದಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ತಾಲೂಕುವಾರು ಚೆಕ್ ಪೋಸ್ಟ್ ಗಳ ಉಸ್ತುವಾರಿ ಆಯಾ ತಹಶೀಲ್ದಾರ್ ಅವರಿಗೆ ವಹಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತದ ಆದೇಶಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾಸರಗೋಡು ಪ್ರದೇಶಗಳಲ್ಲಿ ಕೊರೋನಾ ನಿಯಂತ್ರಣದಲ್ಲಿದೆ.

ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕ ಕಡಿತಗೊಂಡರೆ ಆಗಬಹುದಾದ ಸಮಸ್ಯೆ ಬಗ್ಗೆ ಜಿಲ್ಲಾಡಳಿತಕ್ಕೆ ಅರಿವಿಲ್ಲ.

ಗ್ರಾಮೀಣ ಭಾಗಗಳಲ್ಲಿ ಅನೇಕ ರಸ್ತೆಗಳು ಕಾಸರಗೋಡು ಮತ್ತು ದಕ್ಷಿಣ ಕನ್ನಡವನ್ನು ಸಂಪರ್ಕಿಸುತ್ತದೆ. ಹಾಗಿದ್ದ ಮೇಲೆ ಕೇವಲ ನಾಲ್ಕು ಮುಖ್ಯ ರಸ್ತೆಗಳಲ್ಲಿ ಹೋಗಿ ಅಂದ್ರೆ ಹೇಗೆ ಅನ್ನೋದು ಜನರ ಪ್ರಶ್ನೆ.

- Advertisement -
- Advertisement -
- Advertisement -

Latest article