ಅಫ್ಘಾನಿಸ್ತಾನದಲ್ಲಿ CNN ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದ ಕ್ಲಾರಿಸಾ ವಾರ್ಡ್ ಅವರನ್ನು ಅಮೆರಿಕಾ ವಾಯುಪಡೆ ಏರ್ ಲಿಫ್ಟ್ ಮಾಡಿದೆ. ಅಫ್ಘನ್ ನ 300 ಜನರ ಜೊತೆ ಕ್ಲಾರಿಸಾ ಅವರನ್ನು ಕೂಡಾ ಏರ್ ಲಿಫ್ಟ್ ಮಾಡಲಾಗಿದ್ದು, ಪ್ರಸ್ತುತ ಅವರ ವಿಮಾನ ಕತಾರ್ ನ ದೋಹಾದಲ್ಲಿ ಲ್ಯಾಂಡ್ ಆಗಿದೆ.
ಕ್ಲಾರಿಸಾ ವಾರ್ಡ್. ಅಫ್ಘನ್ ನಲ್ಲಿ ಮಾಡರ್ನ್ ಡ್ರೆಸ್ ಮೂಲಕವೇ ವರದಿ ಮಾಡುತ್ತಿದ್ದರು. ಆದರೆ ಯಾವಾಗ ತಾಲಿಬಾನ್ ಎಂಟ್ರಿ ಆಯ್ತೋ ಹಿಜಬ್ ಧರಿಸಿ ವರದಿಗಾರಿಕೆ ಪ್ರಾರಂಭಿಸಿದ್ದರು. ಅದರಲ್ಲೂ ಉಗ್ರ ರ ಜೊತೆಗೆ ನಿಂತು ಅವರು ಮಾಡಿದ ವರದಿಗಳು ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು. ಜೊತೆಗೆ ಇವರ ಧೈರ್ಯಕ್ಕೆ ವಿಶ್ವದ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿತ್ತು.
ಜೊತೆಗೆ ಇವರು ಹಿಜಬ್ ಧರಿಸಿ ವರದಿ ಮಾಡುತ್ತಿದ್ದ ಕ್ರಮಕ್ಕೂ ಟೀಕೆಗಳು ಕೂಡಾ ವ್ಯಕ್ತವಾಗಿತ್ತು. ತಾಲಿಬಾನಿಗಳ ಮನಸ್ಥಿತಿ ಎಂತಹುದು ಅನ್ನುವುದನ್ನು ಅರ್ಥ ಮಾಡಿಕೊಳ್ಳಲು ಕ್ಲಾರಿಸಾ ವಾರ್ಡ್ ಅವರ ಬದಲಾವಣೆಯೇ ಸಾಕ್ಷಿ ಎಂದು ಸೂಚ್ಯವಾಗಿ ಹೇಳಿದ್ದರು.
Discussion about this post