23.2 C
Bengaluru
Saturday, January 16, 2021

ಅನುಷ್ಕಾಗೆ ಕ್ಲಾಸ್ .. ಟೀಂ ಇಂಡಿಯಾ ಆಟಗಾರರ ಜೊತೆ ನಿಲ್ಲುವಷ್ಟು ದೊಡ್ಡವರಾದ್ರ..?

Must read

ಅದ್ಯಾಕೋ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ಜೊತೆ ಸಂಬಂಧ ಬೆಳೆಸಿದ್ದಾರೆ ಅನ್ನುವುದು ಗೊತ್ತಾದ ಮೇಲೆ ಸಾಮಾಜಿಕ ಜಾಲ ತಾಣ ಸಿಕ್ಕಾಪಟ್ಟೆ ಡಿಸ್ಟರ್ಬ್ ಆಗಿದೆ.

ಅನುಷ್ಕಾ ನಿಂತರೂ ತಪ್ಪು, ಕುಂತರೂ ತಪ್ಪು ಅನ್ನುವಂತೆ ಆಡುತ್ತಿದೆ. ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅದರಲ್ಲೂ ವಿರಾಟ್ ಅಭಿಮಾನಿಗಳ ಪಾಲಿಗೆ ಅನುಷ್ಕಾ ಅತ್ತಿಗೆಯಾಗಲೇ ಇಲ್ಲ.

ಪಂದ್ಯ ಸೋತರೆ ಸಾಕು ಟ್ರೋಲ್ ಪೇಜ್ ಗಳು ಅನುಷ್ಕಾ ಕಡೆ ಮುಖ ಮಾಡುತ್ತದೆ.

ಇದೀಗ ಲಾರ್ಡ್ಯ್ ನಲ್ಲಿ ಗುರುವಾರ ಎರಡನೇ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಇದಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ಲಂಡನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅನುಷ್ಕಾ ಶರ್ಮಾ ತಂಡದೊಂದಿಗೆ ತೆರಳಿದ್ದರು. ಅಷ್ಟೇ ಅಲ್ಲದೆ, ರಾಯಭಾರ ಕಚೇರಿ ಹೊರಭಾಗದಲ್ಲಿ ತಂಡದ ಆಟಗಾರರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದೆ.

bcci-twitter

ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಆಟಗಾರರಿಗೆ ಪತ್ನಿ-ಗೆಳತಿಯರಿಂದ  ದೂರ ಇರುವಂತೆ ಟೀಮ್ ಮ್ಯಾನೇಜ್​ಮೆಂಟ್​ ಸೂಚನೆ ನೀಡಿದ್ದರೂ ನಾಯಕ ವಿರಾಟ್​ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಟೀಂ ಇಂಡಿಯಾದ ಆಟಗಾರರು ಮತ್ತು ಸಿಬ್ಬಂದಿಯೊಂದಿಗೆ ಫೋಟೋಗೆ ಫೋಸ್​ನೀಡಿದ್ದಾರೆ. ಅನುಷ್ಕಾ ಅವರ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

bcci-twitter-01

ಟೀಂ ಇಂಡಿಯಾದ ಜತೆ ಅನುಷ್ಕಾ ಇರುವ ಫೋಟೋ ಬಿಸಿಸಿಐ ಖಾತೆಯಲ್ಲಿ ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಪ್ರಾರಂಭವಾಗಿದೆ. ನೆಟ್ಟಿಗರು ಅನುಷ್ಕಾ ಮತ್ತು ಬಿಸಿಸಿಐ ವಿರುದ್ಧ ಕಿಡಿ ಕಾರುತ್ತಿದ್ದಾರೆ. ನೀವು ಹೇಳುವುದೊಂದು ಮಾಡುವುದೊಂದು ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article