ಈ ಜಗತ್ತಿನಲ್ಲಿ ಕೆಲವೊಮ್ಮೆ ಎಂಥಾ ವಿಚಿತ್ರ ಸುದ್ದಿಗಳು ಸಿಗುತ್ತವೆ ಅನ್ನೋದನ್ನ ಊಹಿಸಲು ಸಾಧ್ಯವಿಲ್ಲ. ಹೀಗೆ ಬೆಂಗಳೂರಿನ ಆಸ್ಪತ್ರೆಯೊಂದರ ನರ್ಸ್ ತನ್ನ ಪ್ರಿಯಕರನ ಸಲುವಾಗಿ ತನ್ನ ಸಹೋದ್ಯೋಗಿಗಳ ಬೆತ್ತಲೆ ವಿಡಿಯೋ ಸೆರೆ ಹಿಡಿಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ವೈಟ್ ಫೀಲ್ಡ್ ನಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಶ್ವಿನಿಯನ್ನು ಬಂಧಿಸಿರುವ ಪೊಲೀಸರು ಆಕೆಯ ಪ್ರಿಯತಮನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇನ್ನು ಈ ಕೃತ್ಯದ ಹಿಂದೆ ಸಾಕಷ್ಟು ಕೈಗಳ ಶಂಕೆ ವ್ಯಕ್ತವಾಗಿದ್ದು, ಹೀಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನೆಯ ವಿವರ
ಆಶ್ವಿನಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಆಸ್ಪತ್ರೆ ಆಡಳಿತ ಮಂಡಳಿ ತುರ್ತು ನಿಗಾ ಘಟಕದಲ್ಲಿ ಕಾರ್ಯ ನಿರ್ವಹಿಸುವ ನರ್ಸ್ ಗಳಿಗೆ ವಸತಿ ಗೃಹದ ಸೌಲಭ್ಯ ಒದಗಿಸಿತ್ತು.
ಡಿಸೆಂಬರ್ 5ರಂದು ಸಂಜೆ ನರ್ಸ್ ಒಬ್ಬರು ಶೌಚಾಲಯಕ್ಕೆ ಹೋಗಿದ್ದ ವೇಳೆ ಮೊಬೈಲ್ ಬಚ್ಚಿಟ್ಟಿರುವುದು ಕಾಣಿಸಿದೆ., ಗಾಬರಿಗೊಂಡ ಅವರು ಬಟ್ಟೆ ಧರಿಸಿಕೊಂಡು ಮೊಬೈಲ್ ಪರಿಶೀಲನೆ ನಡೆಸಿದ್ದಾರೆ, ಆಗ ಅದು ವಿಡಿಯೋ ರೆಕಾರ್ಡ್ ಕಾರ್ಯ ನಿರ್ವಹಿಸುತ್ತಿತ್ತು.
ಈ ವೇಳೆ ಅನುಮಾನಗೊಂಡು ಮತ್ತೆ ಮೊಬೈಲ್ ಫೋಟೋ ಗ್ಯಾಲರಿ ಪರಿಶೀಲನೆ ನಡೆಸಿದ್ರೆ ಗ್ಯಾಲರಿಯಲ್ಲಿ ವಸತಿ ಗೃಹದಲ್ಲಿದ್ದ ಅನೇಕ ಮಹಿಳಾ ಸಿಬ್ಬಂದಿಯ ಸ್ನಾನದ ದೃಶ್ಯಗಳು, ಶೌಚಾಲಯದ ದೃಶ್ಯಗಳು ಪತ್ತೆಯಾಗಿದೆ.
ತಕ್ಷಣ ಮೊಬೈಲ್ ಅನ್ನು ವಸತಿ ಗೃಹದ ಮೇಲ್ವಿಚಾರಕಿಗೆ ಮೊಬೈಲ್ ಒಪ್ಪಿಸಿ ದೂರು ನೀಡಿದ್ದಾರೆ, ಆಗ ಮೊಬೈಲ್ ಯಾರದ್ದು ಎಂದು ಪತ್ತೆ ಹಚ್ಚಲು ಹೊರಟರೆ ಅದು ಅಶ್ವಿನಿಯದ್ದು ಎಂದು ಗೊತ್ತಾಗಿದೆ.
ಬಳಿಕ ಪ್ರಕರಣವನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.