“Wall of Kindness” ಬಸವೇಶ್ವರ ನಗರದ ರೋಟರಿ ಕ್ಲಬ್ ಜಾರಿ ತಂದಿರುವ ಹೊಸ ಯೋಜನೆ. ಬಡ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಕರುಣಿಯ ಗೋಡೆ ಹೆಸರಿನ ಈ ಯೋಜನೆ ನಿಧಾನವಾಗಿ ಜನಪ್ರಿಯವಾಗತೊಡಗಿದೆ.
ರಾಜಾಜಿನಗರ ಬಸವೇಶ್ವರ ನಗರ ಸುತ್ತ ಮುತ್ತಲಿನ ದಾನಿಗಳಿಗೆ ಅನುಕೂಲವಾಗಲಿ ಎಂದು ಪ್ರಾರಂಭಿಸಿರುವ “Wall of Kindness” ನಲ್ಲಿ ತಮಗೆ ನಿರುಪಯುಕ್ತ ಉಳಿದವರಿಗೆ ಉಪಯುಕ್ತ ಅನ್ನುವ ವಸ್ತುಗಳನ್ನು ಕರುಣಿಯ ಗೋಡೆಗೆ ದಾನ ಮಾಡಬಹುದಾಗಿದೆ. ಅಡುಗೆ ಮನೆ ಸಾಮಾಗ್ರಿ, ಸ್ಟೇಷನರಿ, ಚಪ್ಪಲಿ, ಬಟ್ಟೆ ಹೀಗೆ ಬಡ ಜನರಿಗೆ ಸಹಾಯವಾಗುವ ವಸ್ತುಗಳನ್ನು ಇಲ್ಲಿಗೆ ನೀಡಬಹುದಾಗಿದೆ.
ಓಡಲು ಬಯಸುತ್ತೀರಾ…ಈ ಶೂ ಧರಿಸಿ ಓಡಿ ಹೋಗಿ….!
ಹಾಗಂತ ಮನೆಯ ನಿರುಪಯುಕ್ತ ವಸ್ತುಗಳನ್ನು ಮನೆಯಿಂದ ಹೊರಗೆ ಸಾಗ ಹಾಕಿದರೆ ಸಾಕಪ್ಪ ಎಂದು ಇಲ್ಲಿಗೆ ತಂದು ಸುರಿಯಬೇಡಿ. ನಿಜಕ್ಕೂ ನಿಮಗೆ ದಾನ ಮಾಡುವ ಮನಸ್ಸಿದ್ದರೆ ಮಾತ್ರ ತಂದು ಹಾಕಿ. ಇನ್ನು ಹರಿದ ಬಟ್ಟೆ, ತೂತಾದ ಪಾತ್ರೆಗಳನ್ನು ತಂದು ನೀಡಬೇಡಿ. ಒಗೆದು ಐರನ್ ಹಾಕಿದ ಬಟ್ಟೆಗಳು, ಮತ್ತೊಬ್ಬರು ಅದನ್ನು ಬಳಸಲು ಅನುಕೂಲವಾಗುವಂತ ವಸ್ತುಗಳನ್ನು ಮಾತ್ರ ತಂದು ಬಿಡಿ.
ಚಿನ್ನ ದುಬಾರಿಯಾದರೇನು..ಚಿನ್ನವನ್ನು ನಾಚಿಸುವ ಆಭರಣ ನಿಮ್ಮ ಕೈಗೆಟಕುವ ದರದಲ್ಲಿ…
ಈಗಾಗಲೇ ಕರುಣಿಯ ಗೋಡೆ ಮೈಸೂರಿನಲ್ಲಿ ಸಾಕಷ್ಟು ಫೇಮಸ್ ಆಗಿದೆ. ಜೊತೆಗೆ ಆಂಧ್ರ ಸೇರಿದಂತೆ ಇವ್ವಿತರ ರಾಜ್ಯಗಳಲ್ಲೂ “Wall of Kindness” ನಿಂದ ಸಾಕಷ್ಟು ಜನ ಸಹಾಯ ಪಡೆದಿದ್ದಾರೆ.
ವಿದೇಶಗಳಲ್ಲಿ “Wall of Kindness” ಅನ್ನುವ ಯೋಜನೆ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ವಿದೇಶಿಯರ ಮಾದರಿಯಲ್ಲಿ ನಾವು ಕೂಡಾ ಇದನ್ನು ನಿಭಾಯಿಸಿ, ನಿರ್ವಹಿಸಿಕೊಂಡು ಬಂದರೆ ಖಂಡಿತಾ ಭಗವಂತ ಮೆಚ್ಚುತ್ತಾನೆ.
ಇನ್ನು ಬಟ್ಟೆಗಳನ್ನು ನೀವು ದಾನ ಮಾಡಲು ಬಯಸುವಿರಾದರೆ RI3190<space> Name/Email <space> Wall of Kindness ಎಂದು ಟೈಪ್ ಮಾಡಿ 99020 80011 ನಂಬರ್ ಗೆ ಕಳುಹಿಸಿಕೊಡಿ.
[googlemaps https://www.google.com/maps/embed?pb=!1m18!1m12!1m3!1d6863.2250910800185!2d77.555271!3d12.9847132!2m3!1f0!2f0!3f0!3m2!1i1024!2i768!4f13.1!3m3!1m2!1s0x0%3A0x7e15aaabf6ee6ad2!2sTapasana+Diagnostic+Center!5e1!3m2!1sen!2sin!4v1564238006835!5m2!1sen!2sin&w=600&h=450]
Discussion about this post