Monday, March 8, 2021

ಕೊರೋನಾ ಸೋಂಕಿನ ಮೂಲ ಚೀನಾವಲ್ಲ…ಅದು ಹುಟ್ಟಿದ್ದು ಆಸ್ಟ್ರೇಲಿಯದಲ್ಲಂತೆ…!

Must read

- Advertisement -
- Advertisement -

ಚೈನಾ ವೈರಸ್ ಎಂದೇ ಕರೆಯಲ್ಪಟ್ಟ ಕೊರೋನಾ ಇಡೀ ವಿಶ್ವವನ್ನು ತಲ್ಲಣಗೊಳಿಸಿದೆ. ಜಗತ್ತಿನ ಆರ್ಥಿಕತೆ ನೆಲ ಕಚ್ಚಿದ್ದು, ಜನ ಮುಂದೇನು ಅನ್ನುವ ಚಿಂತೆಯಲ್ಲಿದ್ದಾರೆ.

ಕೊರೋನಾ ಸೋಂಕಿನ ಅಬ್ಬರ ಕಡಿಮೆಯಾಗಿದೆ ನಿಜ, ಆದರೆ ಅದರ ಆಫ್ಟರ್ ಎಫೆಕ್ಟ್ ಗಳು ಇನ್ನೂ ಹಲವು ವರ್ಷಗಳ ಕಾಲ ಇರಲಿದೆ.

ಈ ನಡುವೆ ಕೊರೋನಾ ಸೋಂಕಿನ ಮೂಲ ಹುಡುಕಲು ಹೊರಟ ಅಧಿಕಾರಿಗಳು ಚೀನಾಗೆ ಬೆದರಿದಂತೆ ಕಾಣಿಸುತ್ತಿದೆ.

ಕೊರೋನಾ ವೈರಸ್ ಹುಟ್ಟಿದ್ದು ಚೀನಾದಲ್ಲೇ ಅನ್ನುವುದಕ್ಕೆ ಈಗಾಗಲೇ ಲೆಕ್ಕವಿಲ್ಲದಷ್ಟು ಸಾಕ್ಷಿಗಳಿವೆ.

ಆದರೆ ಚೀನಾದ ರಕ್ಷಣೆ ಧಾವಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ವೈರಸ್ ಮೂಲ ಚೀನಾ ಅಲ್ಲ ಎಂದು ಷರಾ ಬರೆಯಲು ಹೊರಟಿದೆ.

ಒಂದು ತಿಂಗಳ ಕಾಲ ವುಹಾನ್ ನಲ್ಲಿ ತನಿಖೆ ನಡೆಸಿರುವ ವಿಶ್ವ ಆರೋಗ್ಯ ಸಂಸ್ಥೆ ತಜ್ಞರು ಪುಹಾನ್ ಲ್ಯಾಬ್ ನಿಂದ ವೈರಸ್ ಸೋರಿಕೆಯಾಗಿಲ್ಲ ಅಂದಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪೀಟರ್ ಎಂಬರೆಕ್ ಈ ಮಾಹಿತಿಯನ್ನು ಕೊಟ್ಟಿದ್ದು, ಕೊರೋನಾ ಸೋಂಕು ಗೋಮಾಂಸದ ಮೂಲಕ ಹರಡಿರುವ ಸಾಧ್ಯತೆಗಳಿದೆ. ಹಸಿ ಗೋಮಾಂಸಕ್ಕೆ ಆಸ್ಚ್ರೇಲಿಯಾ ತುಂಬಾ ಪ್ರಸಿದ್ಧಿ. ಹೀಗಾಗಿ ಆಸ್ಟ್ರೇಲಿಯಾದಿಂದ ಕೊರೋನಾ ಹರಡಿರಬಹುದು ಅಂದಿದೆ ವರದಿ.

ಇದೇ ತಜ್ಞರ ತಂಡ ವುಹಾನ್ ಗೆ ಭೇಟಿ ಕೊಟ್ಟ ವೇಳೆ ಚೀನಾ ಹೇಗೆ ನಡೆದುಕೊಂಡಿತ್ತು, ತನಿಖೆ ಹೇಗೆ ಅಸಹಕಾರ ತೋರಿತ್ತು ಅನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.

- Advertisement -
- Advertisement -
- Advertisement -

Latest article