ಮುಂಬೈ ನಲ್ಲಿ ಒಟ್ಟು 10 ಶಾಸಕರಿದ್ದು, ಸೋಮವಾರ ಇನ್ನು ಮೂವರು ಶಾಸಕರು ನಮ್ಮನ್ನು ಸೇರಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಬಂಡಾಯ ಶಾಸಕ ಎಸ್‌ಟಿ ಸೋಮಶೇಖರ್ ಅವರು ಭಾನುವಾರ ಹೇಳಿದ್ದಾರೆ.
ರಾತ್ರಿ ಮುಂಬೈನ ಸೋಫಿಟೆಲ್ ಹೋಟೆಲ್‌ನಲ್ಲಿ ರಾಜೀನಾಮೆ ನೀಡಿದ ಅತೃಪ್ತ ಶಾಸಕರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಸೋಮಶೇಖರ್, ನಾವು ಇಲ್ಲಿ 10 ಶಾಸಕರಿದ್ದು, ರಾಮಲಿಂಗಾರೆಡ್ಡಿ, ಆನಂದ್ ಸಿಂಗ್ ಹಾಗೂ ಮುನಿರತ್ನ ಅವರು ಸೋಮವಾರ ಆಗಮಿಸಲಿದ್ದಾರೆ. ಒಟ್ಟು 13 ಶಾಸಕರು ಒಟ್ಟಾಗಿ ಇದ್ದೇವೆ. ರಾಜೀನಾಮೆ ಹಿಂದಕ್ಕೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾರಣ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವ ಪ್ರಶ್ನೆಯೇ ಬರೋದಿಲ್ಲ.
ಇದೇ ವೇಳೆ ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸೋಮಶೇಖರ್ ಅವರು, ಸಿಎಂ ಬದಲಾವಣೆ ಬಗ್ಗೆ ನಾವು ಬೇಡಿಕೆ ಮುಂದಿಟ್ಟಿಲ್ಲ. ಇಂಥವರನ್ನು ಸಿಎಂ ಮಾಡಿ ಎಂಬ ಬೇಡಿಕೆಯೂ ಇಟ್ಟಿಲ್ಲ ಎಂದರು.
https://www.youtube.com/watch?v=z2EDgQujlUQ
ಅಲ್ಲಿಗೆ ಮೈತ್ರಿ ಸರ್ಕಾರದ ಭವಿಷ್ಯ ಮುಗಿದಂತೆ ಅನ್ನುವುದು ಸ್ಪಷ್ಟ.
Discussion about this post