ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ಆತಂಕ ಹುಟ್ಟಿಸಿದ್ದ ಡೆಲ್ಟಾ ಪ್ಲಸ್ ವೈರಸ್ ಸೋಂಕಿತ ಇದೀಗ ಗುಣಮುಖನಾಗಿ ಮನೆಗೆ ಮರಳಿದ್ದಾನೆ ಅನ್ನುವ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಸ್ಪಷ್ಟನೆಯನ್ನು ಕೊಟ್ಟಿದ್ದು, ಜೂನ್ 2 ರಂದು ಯುವಕನಿಗೆ ಡೆಲ್ಟಾ ವೈರಸ್ ಸೋಂಕು ಅಂಟಿರುವುದು ಗೊತ್ತಾಗಿತ್ತು. ಇದಾದ ಬಳಿಕ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿತ್ತು. ಯುವಕನ ಸಂಪರ್ಕಕ್ಕೆ ಬಂದ ಎಲ್ಲಾರನ್ನೂ ಪರೀಕ್ಷೆ ಒಳಪಡಿಸಲಾಗಿತ್ತು. ಪ್ರಾಥಮಿಕ ಸಂಪರ್ಕ, ದ್ವೀತಿಯ ಸಂಪರ್ಕಿತರನ್ನು ಕಟ್ಟು ನಿಟ್ಟಾಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದೃಷ್ಟ ಅನ್ನುವಂತೆ ಯಾರಲ್ಲೂ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ.
ಇದನ್ನೂ ಓದಿ : ರಾಜ್ಯದಲ್ಲಿ ಡೆಲ್ಟಾ + ( Delta plus) ಕೇಸ್ ಪತ್ತೆ : 40 ಜನರ ವರದಿಗೆ ಕಾಯುತ್ತಿರುವ ಮೈಸೂರು ಜಿಲ್ಲಾಡಳಿತ
ಇನ್ನು ಬೆಂಗಳೂರಿನಲ್ಲಿ ಡೆಲ್ಟಾ ಪ್ಲಸ್ ಪತ್ತೆಯಾಗಿರುವ ವರದಿಯನ್ನು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ನಿರಾಕರಿಸಿದ್ದು, ಹಾಗಂತ ನಾವು ನಿರ್ಲಕ್ಷ್ಯ ಮಾಡೋದಿಲ್ಲ, ಈ ಕುರಿತಂತೆ ತೀವ್ರ ನಿಗಾ ಇಡುತ್ತೇವೆ ಅಂದಿದ್ದಾರೆ.
ಇದನ್ನೂ ಓದಿ : ರಶ್ಮಿಕಾ ನೋಡಲು ತೆಲಂಗಾಣದಿಂದ ಬಂದು ಪೊಲೀಸರ ಅತಿಥಿಯಾದ ಅಭಿಮಾನಿ
Discussion about this post