ಬೆಂಗಳೂರು : ಕೊರೋನಾ ಸೋಂಕಿನ ಎರಡನೆ ಅಲೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಟಿಕೆಟ್ ಮಾರಾಟ ಮಾಡಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿತ್ತು. ಹೀಗೆ ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರ ತೆರೆದ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ನಿನ್ನ ಸನಿಹಕೆ.
ಡಾ. ರಾಜ್ ಕುಮಾರ್ ಮೊಮ್ಮಗಳು, ರಾಮ್ ಕುಮಾರ್ ಪುತ್ರಿ ಧನ್ಯಾ ರಾಮ್ ಕುಮಾರ್ ಅಭಿನಯದ ಈ ಚಿತ್ರಕ್ಕೆ ಯಶಸ್ಸು ತಂದುಕೊಟ್ಟುವ ನಿಟ್ಟಿನಲ್ಲಿ ಇಡೀ ದೊಡ್ಮನೆ ನಿಂತಿದ್ದು, ನಿನ್ನೆಯಷ್ಟೇ ನಡೆದ ಪ್ರೀಮಿಯರ್ ಶೋ ನಲ್ಲಿ ದೊಡ್ಮನೆಯೇ ಹಾಜರಿತ್ತು.

ಈ ನಡುವೆ ಇಂದು ಮಲ್ಪಿಪ್ಲೆಕ್ಸ್ ಸೇರಿದಂತೆ ವಿವಿಧ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ ಕನ್ನಡ ಚಿತ್ರಗಳ ಭವಿಷ್ಯ ನಿರ್ಧರಿಸುವ ಕೆಜಿ ರಸ್ತೆಯ ಸಂತೋಷ್ ಥಿಯೇಟರ್ ನಲ್ಲಿ ನಿನ್ನ ಸನಿಹಕೆ ಚಿತ್ರಕ್ಕೆ ಮೊದಲ ದಿನವೇ ಕಂಟಕ ಎದುರಾಗಿದೆ. ಚಿತ್ರಮಂದಿರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಚಿತ್ರಪ್ರದರ್ಶನ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಬಹುತೇಕ ಪ್ರೇಕ್ಷಕರು ನವರಂಗ್ ಥಿಯೇಟರ್ ಕಡೆ ಮುಖ ಮಾಡಿದ್ದಾರೆ.
Discussion about this post