ಹಾಡು ಟ್ರೈಲರ್ ನಿಂದ ನಿರೀಕ್ಷೆ ಹುಟ್ಟಿಸಿರೋ, ಭರವಸೆ ಹೆಚ್ಚಿಸಿರೋ ಚಿತ್ರ ನಿನ್ನ ಸನಿಹಕೆ. ಸೂರಜ್ ಗೌಡ ನಿರ್ದೇಶನದೊಂದಿಗೆ ನಾಯಕನಾಗಿ ನಟಿಸಿರೋ ಈ ಚಿತ್ರದಲ್ಲಿ ದೊಡ್ಮನೆ ಮೊಮ್ಮಗಳು ಧನ್ಯ ರಾಮ್ ಕುಮಾರ್ ಚೊಚ್ಚಲ ಬಾರಿಗೆ ನಾಯಕಿಯಾಗಿ ನಟಿಸಿರೋದು ವಿಶೇಷ.

ರಘು ದೀಕ್ಷಿತ್ ಸಂಗೀತ ಸಂಯೋಜನೆ ಇರೋ, ನಿನ್ನ ಸನಿಹಕೆ ಎಲ್ಲಾ ಆಂಗಲ್ ನಿಂದ್ಲೂ ಪ್ರಾಮಿಸಿಂಗ್ ಆಗಿ ಕಾಣ್ತಿದೆ. ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿದ್ದಾರೆ.
ಸಾಕಷ್ಟು ವಿಶೇಷ ವಿಚಾರಗಳಿಂದ ಸದ್ದು ಸುದ್ದಿ ಮಾಡ್ತಿರೋ ಈ ಚಿತ್ರ ಕೆ.ಆರ್.ಜಿ ಸ್ಟುಡಿಯೋಸ್ ವಿತರಣೆಯಲ್ಲಿ ಅಕ್ಟೋಬರ್ 8ನೇ ತಾರೀಖು ರಾಜ್ಯದಾದ್ಯಂತ ಗ್ಯಾಂಡ್ ಆಗಿ ರಿಲೀಸ್ ಆಗ್ತಿದೆ.
ಈ ಮೂಲಕ 100% ಥಿಯೇಟರ್ ಓಪನ್ ಆದ್ಮೇಲೆ ರಿಲೀಸ್ ಆಗ್ತಿರೋ ಮೊದಲ ಕನ್ನಡ ಸಿನಿಮಾ ಅನ್ನೋ ಶ್ರೇಯಕ್ಕೆ ನಿನ್ನ ಸನಿಹಕೆ ಚಿತ್ರ ಪಾತ್ರವಾಗ್ತಿದೆ.
Discussion about this post