ನಾಡಿನಾದ್ಯಂತ ಇಂದು ವರಮಹಾಲಕ್ಣ್ಮೀ ಹಬ್ಬವನ್ನು ಆಚರಿಸಲಾಗುತ್ತಿದೆ. ಮಹಿಳೆಯರು ಶ್ರದ್ಧೆ ಮತ್ತು ಪ್ರೀತಿಯಿಂದ ಆಚರಿಸುವ ಈ ಹಬ್ಬದ ಕರ್ನಾಟಕದ ಜನಪ್ರಿಯ ಹಬ್ಬಗಳಲ್ಲಿ ಒಂದು. ಹೆಣ್ಣು ಮಕ್ಕಳು ಬೆಳಗ್ಗೆಯೇ ಎದ್ದು ಮನೆಯನ್ನೆಲ್ಲಾ ಸ್ವಚ್ಛಗೊಳಿಸಿ, ಮನೆ ಮುಂಗೆ ರಂಗೋಲಿ, ತೋರಣ ಹಾಕಿ ಹೊಸ ಬಟ್ಟೆ, ಆಭರಣ ತೊಟ್ಟು ದೇವಿಯ ಪೂಜೆ ಮುಗಿಸಿದ್ದಾರೆ.
ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೂ-ಹಣ್ಣುಗಳ ಮಾರಾಟ, ಖರೀದಿ ಭರಾಟೆ ಜೋರಾಗಿಯೇ ನಡೆದಿದೆ. ಮಾರುಕಟ್ಟೆ ಪರಿಸ್ಥಿತಿ ನೋಡಿದರೆ ಲಕ್ಷ್ಮಿಯ ಜೊತೆಗೆ ಕೊರೋನಾ ಮೂರನೇ ಅಲೆಯೂ ಮನೆ ಪ್ರವೇಶಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನು ಕೊರೋನಾ ಹಿನ್ನೆಲೆಯಲ್ಲಿ ಬಹುತೇಕ ದೇವಸ್ಥಾನಗಳು ತೆರೆದಿಲ್ಲ. ಹೀಗಾಗಿ ಜನ ಮನೆಗಳಲ್ಲಿಯೇ ತಮ್ಮ ತಮ್ಮ ಇಷ್ಟಾನುಸಾರ ದೇವಿಯ ಪೂಜೆ, ವ್ರತ, ಭಜನೆ ಮಾಡಿದ್ದಾರೆ.
ಈ ನಡುವೆ ಕನ್ನಡ ಚಿತ್ರರಂಗದ ಯುವರಾಜ ಖ್ಯಾತಿಯ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಜೊತೆಗೆ ಹಬ್ಬ ಆಚರಿಸಿದ್ದಾರೆ. ತಂದೆ,ತಾಯಿಯಾಗುವ ಖುಷಿಯಲ್ಲಿರುವ ದಂಪತಿ ಸರಳವಾಗಿಯೇ ಪೂಜೆ ಮುಗಿಸಿದ್ದಾರೆ. ಈ ಬಾರಿ ನಿಖಿಲ್ ದಂಪತಿಗೆ ವರಮಹಾಲಕ್ಷ್ಮಿ ತುಂಬಾ ವಿಶೇಷವಾಗಿದ್ದು, ಪೂಜೆಯ ಬಳಿಕ ಪೋಟೋಗಳನ್ನು ನಿಖಿಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ.
Discussion about this post