ಬೆಂಗಳೂರು : ತಬ್ಲೀಗ್ ಜಮಾತ್ ಸಂಘಟನೆಯು ದೆಹಲಿಯ ನಿಜಾಮುದ್ದೀನ್ ಕೇಂದ್ರದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮ ಇದೀಗ ಇಡೀ ದೇಶವನ್ನು ಸುಡುವ ಲಕ್ಷಣಗಳು ಗೋಚರಿಸುತ್ತಿದೆ.
ಕಾರ್ಯಕ್ರಮದ ಆಯೋಜಕರು ಮಾಡಿಕೊಂಡ ಎಡವಟ್ಟು ( ಉದ್ದೇಶಪೂರ್ವಕವೋ ಅಥವಾ ಗೊತ್ತಿಲ್ಲದೆ ಆಗಿರುವುದೇ ಅನ್ನುವುದು ತನಿಖೆಯಿಂದ ಗೊತ್ತಾಗಬೇಕು ) ಕೊರೋನಾ ಅಪಾಯದಿಂದ ಇನ್ನೇನು ಪಾರಾದೆವು ಅನ್ನುವಷ್ಟರಲ್ಲಿ ಅಣು ಬಾಂಬ್ ತಂದು ಸುರಿದಿದೆ.
ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಂದಿ ಇದೀಗ ದೇಶದ ವಿವಿಧ ರಾಜ್ಯಗಳಿದೆ ತೆರಳಿದ್ದು ಅಲ್ಲಿ ಕೊರೋನಾ ಎಂಬ ಸಾಂಕ್ರಾಮಿಕ ರೋಗವನ್ನು ಹರಡಿರುವ ಭೀತಿ ವ್ಯಕ್ತವಾಗುತ್ತಿದೆ.
ಹೀಗಾಗಿಯೇ ಕಾರ್ಯಕ್ರಮ ಆಯೋಜಕರ ಮೇಲೆ ಇದೀಗ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿದೆ ( ಆದರೆ ಕಲ ಕ್ರಿಮಿಗಳು ಧರ್ಮವನ್ನು ಗುರಿ ಮಾಡುತ್ತಿದ್ದಾರೆ ಎಂದು ವಾದಿಸುತ್ತಿದ್ದಾರೆ.) ಆದರೆ ಯಾರೊಬ್ಬರೂ ಧರ್ಮವನ್ನು ಗುರಿಯಾಗಿರಿಸಿಲ್ಲ.
ಹೀಗೆ ತಬ್ಲೀಗ್ ಜಮಾತ್ ಮಾಡಿಕೊಂಡ ಎಡವಟ್ಟಿಗೆ ಟೀಕೆ ಕೇಳಿ ಬರುತ್ತಿದ್ದಂತೆ ಹಿಂದಿಯ ನ್ಯೂಸ್ 24 ವಾಹಿನಿಯ Anchor ಸಂದೀಪ್ ಚೌಧರಿ, ತಬ್ಲೀಗ್ ಜಮಾತ್ ಮಾಡಿರುವುದರಲ್ಲಿ ತಪ್ಪೇ ಇಲ್ಲ ಅನ್ನುವಂತೆ ವಾದಿಸಿದ್ದರು. ಸಂಬಂಧವಿಲ್ಲದಿದ್ದರೂ ಶಿರಡಿ ಸೇರಿದಂತೆ ದೇಶದ ದೇವಸ್ಥಾನಗಳನ್ನು ಎಳೆದು ತಂದು ಧರ್ಮದ ಬಣ್ಣ ಹಚ್ಚಿದ್ದರು.
ಇದಕ್ಕೆ ಕನ್ನಡ ಹೆಣ್ಣು ಮಗಳೊಬ್ಬಳು ದಿಟ್ಟವಾಗಿ ಉತ್ತರಿಸಿದ್ದಾಳೆ. ಜಮಾತ್ ನಲ್ಲಿ ಆಗಿರುವ ಎಡವಟ್ಟುಗಳೇನು, ದೇಶಕ್ಕೆ ಅದರಿಂದ ಆಗುತ್ತಿರುವ ಹಾಗೂ ಆಗಬಹುದಾದ ಅಪಾಯವೇನು ಅನ್ನುವುದನ್ನು ವಿವರಿಸಿದ್ದಾರೆ.
ಬಿಟಿವಿಯ ರಾಧಾ ಹೀರೇಗೌಡರು ಹೇಳಿರುವ ಒಂದೊಂದು ಮಾತು ಕೇಳುತ್ತಿದ್ರೆ ರಕ್ತ ಕುದಿಯುತ್ತದೆ. ಧರ್ಮ ಆಮೇಲೆ ದೇಶ ಮೊದಲು ಅನ್ನುವ ಮನಸ್ಸುಗಳಿಗೆ ನಾಟುವಂತಿದೆ ರಾಧಾ ಅವರ ಮಾತು.
Discussion about this post