ನವದೆಹಲಿ : ನಾಲ್ಕು ಮೆಟ್ರೋ ನಗರಗಳಲ್ಲಿ ಜುಲೈ 1 ರಿಂದ ಜಾರಿಗೆ ಬರುವಂತೆ ಸಬ್ಸಿಡಿ ರಹಿತ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಬೆಲೆಯನ್ನು ರೂ. 25.50 ಹೆಚ್ಚಿಸಲಾಗಿದೆ.
ದಿಲ್ಲಿ, ಮುಂಬೈ, ಕೋಲ್ಕತ್ತಾ ಹಾಗೂ ಪಾಟ್ಲಾದಲ್ಲಿ ಸಬ್ಸಿಡಿ ರಹಿತ ಎಲ್ಪಿಜಿಯ ಬೆಲೆ ಪ್ರತಿ ಸಿಲಿಂಡರ್ಗೆ ರೂ. 834.50 ಆಗಿರುತ್ತದೆ. (14.2 ಕಿಲೋಗ್ರಾಂ) ಎಂದು ಭಾರತೀಯ ತೈಲ ನಿಗಮದ ವೆಬ್ಸೈಟ್ – iocl.com ತಿಳಿಸಿದೆ.
ಕೊರೊನಾ, ಲಾಕ್ಡೌನ್ನಿಂದ ತತ್ತರಿಸಿರುವ ಜನರಿಗೆ ಎಲ್ಪಿಜಿ ಸಿಲಿಂಡರ್ ದರ ಏರಿಕೆ ಶಾಕ್ಗ್ ಸುದಿಯಾಗಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ ಮಾಡಿರುವುದು ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಅಡುಗೆ ಅನಿಲ ಬೆಲೆಯನ್ನು ಏರಿಕೆ ಮಾಡಲಾಗಿತ್ತು. ಏಪ್ರಿಲ್ನಲ್ಲಿ 10ರೂ ಬೆಲೆ ಇಳಿಕೆ ಮಾಡಲಾಗಿತ್ತು. ಮೇ ತಿಂಗಳಿನಲ್ಲಿ ಯಾವುದೇ ಪರಿಷ್ಕರಣೆ ಮಾಡಿರಲಿಲ್ಲ. ಇದೀಗ ಜುಲೈ ತಿಂಗಳಿನಲ್ಲಿ 25.50 ರೂ ಬೆಲೆ ಏರಿಕೆ ಮಾಡಲಾಗಿದೆ.
* ಬೆಂಗಳೂರಿನಲ್ಲಿ ಸಿಲಿಂಡರ್ ಬೆಲೆ 812 ರಿಂದ 836.50 ರೂಗೆ ಹೆಚ್ಚಳ
* ನವದೆಹಲಿಯಲ್ಲಿ 809 ರೂ.ನಿಂದ 834.50 ರೂಪಾಯಿಗೆ ಏರಿಕೆ
* ಕೋಲ್ಕತಾದಲ್ಲಿ 835.50 ರೂ.ನಿಂದ 861 ರೂಪಾಯಿಗೆ ಏರಿಕೆ
* ಮುಂಬೈನಲ್ಲಿ 809 ರೂ.ನಿಂದ 834.50 ರೂಪಾಯಿಗೆ ಹೆಚ್ಚಳ
* ಚೆನ್ನೈನಲ್ಲಿ 850.5ಕ್ಕೆ ಹೆಚ್ಚಳ
Discussion about this post