ಬೆಂಗಳೂರು : ರಾಮನವಮಿಯಂದು ರಾಬರ್ಟ್ ಟೀಂ ಕೊಟ್ಟಿರುವ ಉಡುಗೊರೆಯನ್ನು ಜನ ಸಂಭ್ರಮದಿಂದ ಸ್ವೀಕರಿಸಿದ್ದಾರೆ.
ದರ್ಶನ್ ಅಭಿನಯದ 53ನೇ ಸಿನಿಮಾ ರಾಬರ್ಟ್. ಲಾಕ್ಡೌನ್ ಕಾರಣಕ್ಕೆ ಮನೆಯೊಳಗಡೆ ಕೂತಿರುವ ಸಿನಿ ಪ್ರಿಯರಿಗಾಗಿಯೇ ರಾಮನವಮಿಯಂದು ಈ ಹಾಡನ್ನು ಬಿಡುಗಡೆ ಮಾಡಲಾಗಿತ್ತು.
ಹಾಡು ಬಿಡುಗಡೆಯಾದ 8 ಗಂಟೆಗಳಲ್ಲಿ 4 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿದೆ. ಹಾಡು ಓಡುವ ವೇಗ ನೋಡಿದರೆ ಗುರುವಾರ ಮುಗಿಯುವಷ್ಟು ಹೊತ್ತಿಗೆ 5 ಲಕ್ಷ ಗ್ಯಾರಂಟಿ.
ಅರ್ಜುನ್ ಜನ್ಯ ಸಂಗೀತದಲ್ಲಿ ಶಂಕರ್ ಮಹಾದೇವನ್ ಹಾಡಿರುವ ಹಾಡು ಹೇಗಿದೆ ಎಂದು ನೀವು ಕೂಡಾ ಕಮೆಂಟ್ ಮೂಲಕ ತಿಳಿಸಿ
Discussion about this post