ಈಗ್ಲೂ ಕಿರುತೆರೆಯಲ್ಲಿ ಸದ್ದು ಮಾಡುತ್ತಿರುವ ಗಟ್ಟಿಮೇಳ ಧಾರವಾಹಿಗೆ ಭದ್ರ ಬುನಾದಿ ಹಾಕಿಕೊಟ್ಟ ಹಿರಿಮೆ ನಿರ್ದೇಶಕ ಕೋರಮಂಗಲ ಅನಿಲ್ ಅವರಿಗೆ ಸಲ್ಲಬೇಕು. ಧಾರವಾಹಿ ಪ್ರಾರಂಭದಲ್ಲಿ ಗಟ್ಟಿಮೇಳ ಧಾರವಾಹಿಗೆ ನಿರ್ದೇಶಕರಾಗಿದ್ದ ಅನಿಲ್ ಜುಲೈ 2021ರಂದು ಧಾರವಾಹಿ ಟೀಂ ತೊರೆದಿದ್ದರು.
ಇದಾದ ಬಳಿಕ ರವಿಬೆಳಗರೆಯವರ ಕಾದಂಬರಿ ಆಧಾರಿತ ಹೇಳಿ ಹೋಗು ಕಾರಣ ಅನ್ನುವ ಪ್ರಾಜೆಕ್ಟ್ ಅನ್ನು ಸುವರ್ಣ ವಾಹಿನಿಗೆ ನಿರ್ಮಿಸಲು ಅನಿಲ್ ಮುಂದಾಗಿದ್ದರು. ಈ ಬಗ್ಗೆ ಪ್ರೋಮೋ ಕೂಡಾ ಬಿಡುಗಡೆಯಾಗಿತ್ತು. ಧಾರವಾಹಿ ನಿರ್ಮಾಣದ ಕೆಲಸಗಳೂ ಶುರುವಾಗಿತ್ತು. ಆದರೆ ಕೆಲವೊಂದು ಕಾರಣಗಳಿಂದ ಪ್ರಾಜೆಕ್ಟ್ ಟೇಕಾಫ್ ಆಗಲಿಲ್ಲ.
ಇದೀಗ ಗಟ್ಟಿಮೇಳದ ನಿರ್ದೇಶಕರು ಮತ್ತೊಂದು ಗಟ್ಟಿ ಪ್ರಾಜೆಕ್ಚ್ ಅನ್ನು ಕೈಗೆತ್ತಿಕೊಂಡಿದ್ದಾರೆ. ಮತ್ತೆ ಸುವರ್ಣ ವಾಹಿನಿಗಾಗಿ ಹೊಸ ಕಥೆಯೊಂದಿಗೆ ಬಂದಿದ್ದಾರೆ. ಅದೇ ಜೇನುಗೂಡು. ಹಳೆಯ ಫಿಲ್ಮಂ ಟೈಟಲ್ ನೊಂದಿಗೆ ಬಂದಿರುವ ಅನಿಲ್ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಈಗಾಗಲೇ ಜೇನುಗೂಡು ಧಾರವಾಹಿಗಾಗಿ ಕಲಾವಿದರ ಆಯ್ಕೆಯೂ ನಡೆದಿದ್ದು, ನಾಯಕನಾಗಿ ಆರವ್ ಸೂರ್ಯ ನಟಿಸಲಿದ್ದಾರೆ. ನಾಯಕಿಯಾಗಿ ಹೊಸ ಮುಖದ ಪರಿಚಯವಾಗಲಿದೆ. ಇನ್ನುಳಿದಂತೆ ಅಗ್ನಿಸಾಕ್ಷಿಯ ಐಶ್ವರ್ಯಾ, ವೀಣಾ ಸುಂದರ್, ರಮೇಶ್ ಪಂಡಿತ್ ಕಾಣಿಸಿಕೊಳ್ಳಲಿದ್ದಾರೆ.
ಜೇನುಗೂಡು ಟೈಟಲ್ ಹೇಳುವಂತೆ ಇದೊಂದು ಜಾಯಿಂಟ್ ಫ್ಯಾಮಿಲಿ ಕಥೆಯಾಗಿದೆ. ಇನ್ನುಳಿದಂತೆ ವಿವರಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.
Discussion about this post