ನವದೆಹಲಿ : ತಂತ್ರಜ್ಞಾನ ಬೆಳೆದಂತೆ ಅದರ ಅಪಾಯ ಕೂಡಾ ಅಷ್ಟೇ ವೇಗದಲ್ಲಿ ಬೆಳೆಯುತ್ತಿದೆ. ಇದೀಗ Android ಫೋನ್ ಹೊಂದಿರುವ ಮಂದಿಯಂತು ಮಡಿಲಲ್ಲಿ ಕೆಂಡ ಕಟ್ಟಿಕೊಂಡು ಓಡಾಡಿದಂತೆಯೇ ಸರಿ.
ಇದೀಗ Android ಫೋನ್ ಬಳಕೆದಾರರಿಗೆ ಕೇಂದ್ರ ಸರ್ಕಾರದ ಸೈಬರ್ ಭದ್ರತಾ ಪಡೆ ಎಚ್ಚರಿಕೆಯೊಂದನ್ನು ನೀಡಿದ್ದು, Android ಫೋನ್ ಗಳಲ್ಲಿ ಬ್ಯಾಂಕ್ ವಿವರಗಳನ್ನು ಕದಿಯಬಲ್ಲ ಅಪಾಯಕಾರಿ ಡ್ರೈನಿಕ್ ವೈರಸ್ ಕಾಣಿಸಿಕೊಂಡಿದೆ ಅಂದಿದೆ.
ಆದಾಯ ತೆರಿಗೆ ಹಿಂದಿರುಗಿಸುವ ನೆಪದಲ್ಲಿ ದೇಶದ ಪ್ರಮುಖ ವಾಣಿಜ್ಯ ಬ್ಯಾಂಕುಗಳು ಸೇರಿ ಒಟ್ಟು 27 ಗ್ರಾಹಕರ ಖಾತೆಗೆ ಕನ್ನ ಬೀಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಡ್ರೈನಿಕ್ Android ಫೋನ್ ಅನ್ನು ಟಾರ್ಗೇಟ್ ಮಾಡಿ ಹ್ಯಾಕರ್ ಗಳು ಸೃಷ್ಟಿಸಿರುವ ವೈರಸ್ ಆಗಿದ್ದು, ಮಾಲ್ ವೇರ್ ತಂತ್ರಾಂಶದ ಮೂಲಕ ಹ್ಯಾಕರ್ ಗಳು ಖಾತೆಗಳಿಂದ ಹಣ ಕದಿಯುವ ಸಾಧ್ಯತೆಗಳಿದೆಯಂತೆ. ಹೀಗಾಗಿ ಫೋನ್ ಬಳಕೆದಾರರು ಎಚ್ಚರಿಕೆಯಿಂದ ಇರುವಂತೆ CERTN ಎಚ್ಚರಿಕೆ ನೀಡಿದೆ.
Discussion about this post