Sunday, April 18, 2021

ಮದರಂಗಿ ಮಾಸುವ ಮುನ್ನವೇ ಮಸಣ ಸೇರಿದ ಮಧುಮಗಳು…ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಪುತ್ತೂರಿನ ಹುಡುಗಿ ಬಲಿ

Must read

- Advertisement -
- Advertisement -

ಬೆಂಗಳೂರು : ಕೋಳಿಗಳನ್ನು ಸಾಗಿಸುವ ಲಾರಿ ಹಾಗೂ ವ್ಯಾಗನರ್ ನಡುವೆ ಡಿಕ್ಕಿ ಸಂಭವಿಸಿ ಪುತ್ತೂರಿನ ನವವಿವಾಹಿತ ಯುವತಿಯೊಬ್ಬಳು ಮೃತಪಟ್ಟ ದಾರುಣ ಘಟನೆ ನೆಲಮಂಗಲದಲ್ಲಿ ನಡೆದಿದೆ.

ಇಂದು ಮುಂಜಾನೆ ಈ ದುರ್ಘಟನೆ ಸಂಭವಿಸಿದ್ದು ಘಟನೆಯಲ್ಲಿ ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ನಿವಾಸಿ ಗೋಪಿಕ್ ಎಂಬವರ ಪತ್ನಿ ಧನುಷಾ (23) ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇತರ ಮೂವರಿಗೂ ಗಂಭೀರ ಗಾಯಗಳಾಗಿದೆ.

ನವ ದಂಪತಿ ತಮ್ಮ ಸಂಬಂಧಿಕರಾದ ಶುಭ ಲಕ್ಷ್ಮಿ ಮತ್ತು ರೂಪಾ ವೇಣುಗೋಪಾಲ್ ಎಂಬವರ ಜೊತೆ ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ಹೊರಟ್ಟಿದ್ದರು.

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಧನುಷಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೋಪಿಕ್ ಮತ್ತು ಧನುಷ್ ವಿವಾಹ ಫೆ 21 ರಂದು ಗುರುವಾಯನಕೆರೆಯ ಬಂಟರ ಭವನದಲ್ಲಿ ನೆರವೇರಿತ್ತು.

ಗೋಪಿಕ್ ದಾರಂದಕುಕ್ಕು ನಿವಾಸಿ ಸವಿತಾ ಉದಯ ಕುಮಾರ್ ನಾಯ್ಕ್ ಅವರ ಪುತ್ರನಾಗಿದ್ದು,  ಧನುಷಾ ಬೆಳ್ತಂಗಡಿ ಗೇರುಕಟ್ಟೆ ಕುಂಟಿನಿ ನಿವಾಸಿ ರೂಪಾ ಮತ್ತು ಪದ್ಮನಾಭ ಶೆಟ್ಟಿಯವರ ಪುತ್ರಿ ಎಂದು ಗೊತ್ತಾಗಿದೆ.

- Advertisement -
- Advertisement -
- Advertisement -

Latest article