- Advertisement -
- Advertisement -
ನೀರ್ ದೋಸೆ ಸಿನಿಮಾ ಚಿತ್ರೀಕರಣದ ವೇಳೆ ನಟಿ ರಮ್ಯ ಅವರ ಆಕ್ಷೇಪಾರ್ಹ ಚಿತ್ರ ಕ್ಲಿಕ್ಕಿಸಿದ ಆರೋಪದಿಂದ ಸಿನಿಮಾ ಛಾಯಾಗ್ರಾಹಕ ಕೆ.ಎನ್.ನಾಗೇಶ್ ಕುಮಾರ್ ಮುಕ್ತರಾಗಿದ್ದಾರೆ.
ನಾಗೇಶ್ ಕುಮಾರ್ ನನ್ನ ಅನುಮತಿ ಇಲ್ಲದೆ ಫೋಟೋ ತೆಗೆದಿದ್ದಾರೆ ಎಂದು ರಮ್ಯ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ಒಂದನೆಯ ACMM ನ್ಯಾಯಾಲಯ, ನಾಗೇಶ್ ಕುಮಾರ್ ಅವರನ್ನು ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದೆ.
ಮಾತ್ರವಲ್ಲದೆ ಇನ್ನಿಬ್ಬರು ಆರೋಪಿಗಳಾದ ಛಾಯಾಗ್ರಾಹಕ ಮನೋಹರ್ ಮತ್ತು ಪತ್ರಕರ್ತ ಎಸ್. ಶ್ಯಾಮ್ ಪ್ರಸಾದ್ ಕೂಡಾ ನ್ಯಾಯಾಲಯದಲ್ಲಿ ದೋಷ ಮುಕ್ತರಾಗಿದ್ದಾರೆ.
ಚಿತ್ರ ನಿರ್ದೇಶಕ ವಿಜಯ ಪ್ರಸಾದ್ ಅವರಿಗೆ ಮಾಹಿತಿ ನೀಡಿ ಚಿತ್ರೀಕರಣ ಸ್ಥಳದಲ್ಲಿ ರಮ್ಯ ಪೋಟೋ ತೆಗೆದಿರುವುದಾಗಿ ನಾಗೇಶ್ ಕುಮಾರ್ ಹೇಳಿಕೆ ಕೊಟ್ಟಿದ್ದರು.
ಇದೇ ಚಿತ್ರದಿಂದ ರಮ್ಯ ಹೊರ ನಡೆದಿದ್ದರು. ಬಳಿಕ ಈ ಪಾತ್ರ ಹರಿಪ್ರಿಯಾ ಪಾಲಾಯ್ತು.
[youtube https://www.youtube.com/watch?v=d0y3dn7qx8o&w=697&h=392]
- Advertisement -