ಮುಂಬೈ : ಸಮುದ್ರದ ಮಧ್ಯೆ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಶ್ರೀಮಂತರ ಮಕ್ಕಳ ಹೆಡೆಮುರಿ ಕಟ್ಟಿರುವ NCB ನಟ ಶಾರೂಖ್ ಖಾನ್ ಪುತ್ರ ಸೇರಿದಂತೆ 8 ಮಂದಿಯನ್ನು ಬಂಧಿಸಿದೆ. ಬಂಧಿತರೆಲ್ಲಾ ದೊಡ್ಡ ದೊಡ್ಡ ಕುಳಗಳಾಗಿದ್ದು, ಬಂಧಿತರಿಂದ 13 ಗ್ರಾಂ ಕೊಕೇನ್, 5 ಗ್ರಾಂ ಎಂಡಿ, 21 ಗ್ರಾಂ ಚರಸ್, 22 ಎಕ್ಸ್ಟಿಸಿ ಮಾತ್ರೆ ಹಾಗೂ 1.33 ಲಕ್ಷ ರೂಪಾಯಿ ಹಣ ವಶಪಡಿಸಿಕೊಳ್ಳಲಾಗಿದೆ.
ಹಾಗಂತ ಇದೇನು ಅಚ್ಚರಿಯ, ಅಘಾತಕಾರಿ ಅನ್ನುವ ಸುದ್ದಿಯಾಗಿಲ್ಲ. ಕಾರಣ ದೊಡ್ಡವರ ಮಕ್ಕಳು ಡ್ರಗ್ಸ್ ದಾಸರಾಗಿದ್ದಾರೆ ಅನ್ನುವ ರೂಮರ್ ಸಾಕಷ್ಟು ವರ್ಷಗಳಿಂದ ಓಡಾಡುತ್ತಿದೆ. ಮಾತ್ರವಲ್ಲದೆ ವಿಷಯ ಗೊತ್ತಿದ್ದರೂ ಪೊಲೀಸರು ಕಣ್ಣು ಮುಚ್ಚಿ ಕುಳಿತಿದ್ದಾರೆ ಅನ್ನುವ ಆರೋಪ ಕೇಳಿ ಬಂದಿತ್ತು. ಹೀಗಾಗಿ ಈ ದಾಳಿ ಅಚ್ಚರಿ ತಂದಿಲ್ಲ.
ಈ ನಡುವೆ ಶಾರೂಖ್ ಪುತ್ರ ಮಾತ್ರವಲ್ಲ, ಶಾರೂಖ್ ಪತ್ನಿ ಗೌರಿ ಖಾನ್ ಕೂಡಾ ಡ್ರಗ್ಸ್ ಪ್ರಿಯೆ ಅನ್ನುವ ಮಾಹಿತಿಗಳು ಓಡಾಡುತ್ತಿದೆ. ಇಂಗ್ಲೀಷ್ ವೆಬ್ ಸೈಟ್ ವರದಿಗಳ ಪ್ರಕಾರ, ಸಾಕಷ್ಟು ವರ್ಷಗಳ ಹಿಂದೆ ಗೌರಿ ಖಾನ್ ಕೂಡಾ ಡ್ರಗ್ಸ್ ಜೊತೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರಂತೆ.
ಬರ್ಲಿನಿ ವಿಮಾನ ನಿಲ್ದಾಣದಲ್ಲಿ ತಪಾಸಮೆ ಮಾಡುತ್ತಿದ್ದ ವೇಳೆ ಗೌರಿ ಖಾನ್ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಆದರೆ ಅಕೆ ಹೊಂದಿದ್ದ ಮಾದಕ ವಸ್ತುವಿನ ಪ್ರಮಾಣ ಕಡಿಮೆ ಇದ್ದ ಕಾರಣ ಬಿಟ್ಟು ಕಳುಹಿಸಲಾಗಿತ್ತು, ಕೇಸು ದಾಖಲಾಗಿರಲಿಲ್ಲ. ಇದೀಗ ಮಗನ ಬಂಧನದೊಂದಿಗೆ ತಾಯಿಯ ಹಳೆ ವಿಚಾರ ವೈರಲ್ ಆಗುತ್ತಿದೆ.
Discussion about this post